ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ವರ್ಷಾಂತ್ಯದ ಪರಾಮರ್ಶೆ 2025: ಪಂಚಾಯತ್ ರಾಜ್ ಸಚಿವಾಲಯ


2.75 ಕೋಟಿಗೂ ಹೆಚ್ಚು ಗ್ರಾಮೀಣ ಆಸ್ತಿ ಕಾರ್ಡ್‌ಗಳ ಸೃಜನೆಯೊಂದಿಗೆ ಸ್ವಾಮಿತ್ವ ಯಜನೆ ಪ್ರಮುಖ ಮೈಲಿಗಲ್ಲು ಸಾಧಿಸಿದೆ

ವಿಶ್ವಬ್ಯಾಂಕ್‌ನಿಂದ ಜಿಯೋಸ್ಮಾರ್ಟ್ ಇಂಡಿಯಾವರೆಗೆ: ಭೂ ಆಡಳಿತ ಮತ್ತು ಪಂಚಾಯತ್ ಮಟ್ಟದ ಜಿಯೋಸ್ಪೇಷಿಯಲ್ ಯೋಜನೆಯಲ್ಲಿ ಭಾರತವು ನಾಯಕತ್ವ ಪ್ರದರ್ಶಿಸಿದೆ

ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿಗಳು-2025; ಉತ್ತಮ ಶೈಲಿಯ(ಸ್ಮಾರ್ಟ್) ಹವಾಮಾನ ಮತ್ತು ಆರ್ಥಿಕವಾಗಿ ಸಬಲೀಕರಣಗೊಂಡ ಪಂಚಾಯಿತಿಗಳಿಗೆ ಪ್ರೋತ್ಸಾಹ

ಗ್ರಾಮಸಭೆಯ ದಾಖಲೆಗಳ ನಿರ್ವಹಣೆ ಸುಲಭಗೊಳಿಸಲು ಎಐ-ಸಕ್ರಿಯಗೊಳಿಸಿದ ತಂತ್ರಜ್ಞಾನ ಸಾಧನ ಸಭಾಸಾರ್ ಅನಾವರಣ

‘ಫುಲೇರಾ ಕಾ ಪಂಚಾಯತ್ ರಾಜ್’: ಒಟಿಟಿ ಸಂಪರ್ಕವು(ಔಟ್ರೀಚ್) ಬದಲಿ(ಪ್ರಾಕ್ಸಿ) ಪ್ರಾತಿನಿಧ್ಯವನ್ನು ಗುರಿಯಾಗಿಸುತ್ತದೆ, ಡಿಜಿಟಲ್ ಆಡಳಿತ ಮತ್ತು ಪಂಚಾಯಿತಿ ಹಣಕಾಸುಗಳನ್ನು ಹೆಚ್ಚಿಸುತ್ತದೆ

ಸ್ಥಳೀಯ ಆಡಳಿತದಲ್ಲಿ ಯುವಜನರ ಭಾಗವಹಿಸುವಿಕೆ ಪ್ರೋತ್ಸಾಹಿಸಲು ರಾಷ್ಟ್ರೀಯ ಮಾದರಿ ಯುವ ಗ್ರಾಮಸಭಾ ಉಪಕ್ರಮ ಆರಂಭ

ಅನುಸೂಚಿತ ಅಥವಾ ಬುಡಕಟ್ಟು ಪ್ರದೇಶಗಳಿಗೆ ಪಂಚಾಯಿತಿ ಕಾಯ್ದೆ ವಿಸ್ತರಣೆ ಮಾಡುವ ಉದ್ದೇಶ ಹೊಂದಿರುವ “ಪೆಸಾ ಮಹೋತ್ಸವ” ಒಂದು ವಾರ್ಷಿಕ ಕಾರ್ಯಕ್ರಮ; ಮುಂದಿನ ಆವೃತ್ತಿಯ ಆತಿಥ್ಯವನ್ನು ಛತ್ತೀಸ್‌ಗಢ ಆಯೋಜಿಸಲಿದೆ.

ಮೇರಿ ಪಂಚಾಯತ್‌ನ ಎಂ-ಆಡಳಿತ ವೇದಿಕೆಯು “ಡಬ್ಲ್ಯುಎಸ್ಐಎಸ್ ಚಾಂಪಿಯನ್ ಪ್ರಶಸ್ತಿ 2025” ಪಡೆಯುವುದರೊಂದಿಗೆ ಜಾಗತಿಕ ಮನ್ನಣೆ ಗಳಿಸಿದೆ

ಪಂಚಾಯಿತಿಗಳ ಸಾಮರ್ಥ್ಯ ಹೆಚ್ಚಿಸಲು, ಮಹಿಳಾ ಸ್ನೇಹಿ ಆಡಳಿತ ಮುನ್ನಡೆಸಲು, ಆರ್ಥಿಕ ಸ್ವಾವಲಂಬನೆ ಉತ್ತೇಜಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ

ಪ್ರಕಟಣಾ ದಿನಾಂಕ: 29 DEC 2025 6:41PM by PIB Bengaluru

ಗ್ರಾಮೀಣ ಭಾರತದಾದ್ಯಂತ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸಲು ಮತ್ತು ತಳಮಟ್ಟದ ಗ್ರಾಮೀಣ ಆಡಳಿತವನ್ನು ಹೆಚ್ಚಿಸಲು ಪಂಚಾಯತ್ ರಾಜ್ ಸಚಿವಾಲಯ ಕೈಗೊಂಡ ನಿರಂತರ ಪ್ರಯತ್ನಗಳು 2025ನೇ ವರ್ಷದ ಮಹತ್ವದ ಮೈಲಿಗಲ್ಲುಗಳಾಗಿವೆ. ಈ ವರ್ಷದಲ್ಲಿ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮರ್ಥ್ಯ ವೃದ್ಧಿ, ತರಬೇತಿ, ಡಿಜಿಟಲ್ ಆಡಳಿತ, ಸಾಂಸ್ಥಿಕ ಬಲವರ್ಧನೆ ಮತ್ತು ಸಮುದಾಯ ಭಾಗವಹಿಸುವಿಕೆಯ ಮೇಲೆ ಗಮನ ಕೇಂದ್ರೀಕರಿಸಿ, ವ್ಯಾಪಕ ಶ್ರೇಣಿಯ ಉಪಕ್ರಮಗಳನ್ನು ಜಾರಿಗೆ ತಂದಿತು. ಪಂಚಾಯಿತಿ ಮಟ್ಟದ ಯೋಜನೆ ಮತ್ತು ಸೇವಾ ವಿತರಣೆ ಸುಧಾರಿಸುವುದು, ಚುನಾಯಿತ ಪ್ರತಿನಿಧಿಗಳನ್ನು ಸಬಲೀಕರಣಗೊಳಿಸುವುದು, ಮಹಿಳೆಯರ ಭಾಗವಹಿಸುವಿಕೆ ಉತ್ತೇಜಿಸುವುದು ಮತ್ತು ಹೆಚ್ಚಿನ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಉಪಕ್ರಮಗಳು ಸುಸ್ಥಿರ ಗ್ರಾಮೀಣ ಅಭಿವೃದ್ಧಿಯಲ್ಲಿ ಪಂಚಾಯಿತಿಗಳ ನಿರ್ಣಾಯಕ ಪಾತ್ರವನ್ನು ಬಲಪಡಿಸಿದವು. ವರ್ಷದಲ್ಲಿ ಕೈಗೊಂಡ ಪ್ರಮುಖ ಚಟುವಟಿಕೆಗಳು ಮತ್ತು ಸಾಧಿಸಿದ ಪ್ರಗತಿಯ ವಿವರಗಳನ್ನು ಕೆಳಗೆ ನೀಡಲಾಗಿದೆ.

1. ಸ್ವಾಮಿತ್ವ ಆಸ್ತಿ ಕಾರ್ಡ್ ವಿತರಣೆ: 2.75+ ಕೋಟಿ ಆಸ್ತಿ ಕಾರ್ಡ್‌ಗಳ ಸೃಜನೆಯ ಮೈಲಿಗಲ್ಲು ದಾಟಿದೆ

2025 ಜನವರಿ 18ರಂದು ಸ್ವಾಮಿತ್ವ ಯೋಜನೆಯಡಿ ಆಸ್ತಿ ಕಾರ್ಡ್‌ಗಳ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ವಹಿಸಿದ್ದರು, ಒಂದೇ ದಿನದಲ್ಲಿ 65 ಲಕ್ಷ ಗ್ರಾಮೀಣ ನಾಗರಿಕರಿಗೆ ಕಾನೂನುಬದ್ಧ ಮಾಲೀಕತ್ವದ ದಾಖಲೆಗಳನ್ನು ಒದಗಿಸಲಾಯಿತು. 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 50,000ಕ್ಕೂ ಹೆಚ್ಚು ಹಳ್ಳಿಗಳ ನಾಗರಿಕರಿಗೆ ಸ್ವಾಮಿತ್ವ ಕಾರ್ಡ್ ವಿತರಿಸಲಾಗಿದ್ದು, ಈ ಯೋಜನೆ ಅಡಿ ವಿತರಿಸಲಾದ ಒಟ್ಟು ಆಸ್ತಿ ಕಾರ್ಡ್‌ಗಳ ಸಂಖ್ಯೆ 2.25 ಕೋಟಿಗೆ ತಲುಪಿದೆ. ಸಮಾರಂಭದಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು 237 ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸ್ವಾಮಿತ್ವ ಯೋಜನೆ: ತಂತ್ರಜ್ಞಾನದ ಮೂಲಕ ಗ್ರಾಮೀಣ ಭಾರತದ ಸಬಲೀಕರಣ

ಸ್ವಾಮಿತ್ವ(ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ನಕ್ಷೆ ರಚನೆ) ಯೋಜನೆಯಡಿ 2025 ಡಿಸೆಂಬರ್ 16ರ ಹೊತ್ತಿಗೆ, 3.28 ಲಕ್ಷ ಹಳ್ಳಿಗಳಲ್ಲಿ ಡ್ರೋನ್ ಹಾರಾಟ ಪೂರ್ಣಗೊಂಡಿದ್ದು, 1.82 ಲಕ್ಷ ಹಳ್ಳಿಗಳಿಗೆ ಸುಮಾರು 2.76 ಕೋಟಿ ಆಸ್ತಿ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ, ದೆಹಲಿ, ಅರುಣಾಚಲ ಪ್ರದೇಶ, ಲಡಾಖ್ ಮತ್ತು ಅಸ್ಸಾಂನಲ್ಲಿ ಡ್ರೋನ್ ಸಮೀಕ್ಷೆಗಳು ಪೂರ್ಣಗೊಂಡಿವೆ. ಈ ಯೋಜನೆಯು ಹರಿಯಾಣ, ಉತ್ತರಾಖಂಡ, ಪುದುಚೇರಿ, ದಾದ್ರಾ ಮತ್ತು ನಗರ್ ಹವೇಲಿ , ದಮನ್ ಮತ್ತು ಡಿಯು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಂಪೂರ್ಣ ಪರಿಪೂರ್ಣತೆ ಸಾಧಿಸಿದೆ.

1.2. ಅಂತಾರಾಷ್ಟ್ರೀಯ ಮನ್ನಣೆ ಮತ್ತು ಜ್ಞಾನ ಹಂಚಿಕೆ

ವಿಶ್ವಬ್ಯಾಂಕ್ ಭೂ ಸಮ್ಮೇಳನ(2025 ಮೇ 5– 8): ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ವಿಶ್ವಬ್ಯಾಂಕ್ ಭೂ ಸಮ್ಮೇಳನ-2025ರಲ್ಲಿ ಭಾರತವು ಕಂಟ್ರಿ ಚಾಂಪಿಯನ್ ಆಗಿ ಭಾಗವಹಿಸಿತ್ತು. ಸಮಗ್ರ ಭೂ ಆಡಳಿತ ಮತ್ತು ತಳಮಟ್ಟದ ಸಬಲೀಕರಣದಲ್ಲಿ ತನ್ನ ನಾಯಕತ್ವ ಪ್ರದರ್ಶಿಸಿತು. ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅವರು "ಭೂ ಹಿಡುವಳಿ ಮತ್ತು ಆಡಳಿತ ಸುಧಾರಣೆಯಲ್ಲಿ ಉತ್ತಮ ಅಭ್ಯಾಸಗಳು ಮತ್ತು ಸವಾಲುಗಳು" ಕುರಿತು ಉನ್ನತ ಮಟ್ಟದ ಸಮಗ್ರ ಸಭೆಯಲ್ಲಿ ಭಾಷಣ ಮಾಡಿದರು, ಇದು ಸ್ವಾಮಿತ್ವ ಯೋಜನೆಯ ಪರಿಣಾಮವನ್ನು ಎತ್ತಿ ತೋರಿಸಿತು. ಸಚಿವಾಲಯವು ಭಾರತದ ಜಿಐಎಸ್-ಆಧಾರಿತ ಪ್ರಾದೇಶಿಕ ಯೋಜನಾ ವೇದಿಕೆಯಾದ ಗ್ರಾಮ ಮಂಚಿತ್ರವನ್ನು ಪ್ರದರ್ಶಿಸಿತು, ಸುಸ್ಥಿರ ಗ್ರಾಮ ಅಭಿವೃದ್ಧಿಗಾಗಿ ಪಂಚಾಯಿತಿ ಮಟ್ಟದ ನಿರ್ಧಾರ ತೆಗೆದುಕೊಳ್ಳುವುದನ್ನು ಬಲಪಡಿಸುವ ತನ್ನ ಪಾತ್ರವನ್ನು ಪ್ರದರ್ಶಿಸಿತು.

Pic2.jpeg

1.3 ಭೂ ಆಡಳಿತದ ಅಂತಾರಾಷ್ಟ್ರೀಯ ಕಾರ್ಯಾಗಾರ(2025 ಮಾರ್ಚ್ 24 – 29)

ಐಟಿಇಸಿ ಕಾರ್ಯಕ್ರಮದಡಿ ವಿದೇಶಾಂಗ ಸಚಿವಾಲಯದ ಬೆಂಬಲದೊಂದಿಗೆ ಗುರುಗ್ರಾಮ್‌ನ ಹರಿಯಾಣ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ(ಎಚ್‌ಐಪಿಎ) ಪಂಚಾಯತ್ ರಾಜ್ ಸಚಿವಾಲಯವು ಭೂ ಆಡಳಿತ ಕುರಿತ 6 ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಿತ್ತು. ಈ ಕಾರ್ಯಾಗಾರದಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಆಗ್ನೇಯ ಏಷ್ಯಾದ್ಯಂತ 22 ದೇಶಗಳ ಹಿರಿಯ ಅಧಿಕಾರಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು, ಭೂ ಆಡಳಿತ ಕುರಿತ ಸಂವಾದಾತ್ಮಕ ಕಲಾಪಗಳು ಮತ್ತು ಪ್ರಾಯೋಗಿಕ ಪ್ರದರ್ಶನಗಳು ಜರುಗಿದವು. ಈ ಕಾರ್ಯಾಗಾರವು ಜ್ಞಾನ ವಿನಿಮಯಕ್ಕೆ ಜಾಗತಿಕ ವೇದಿಕೆಯಾಗಿ ಕಾರ್ಯ ನಿರ್ವಹಿಸಿತು, ಭಾರತವು ಸ್ವಾಮಿತ್ವ ಯೋಜನೆಯಡಿ ಡ್ರೋನ್ ಆಧಾರಿತ ಭೂ ಸಮೀಕ್ಷೆಗಳು ಮತ್ತು ಡಿಜಿಟಲ್ ಆಸ್ತಿ ದಾಖಲೆಗಳಂತಹ ನಾವೀನ್ಯತೆಗಳನ್ನು ಪ್ರದರ್ಶಿಸಿತು.

2. ಸ್ಪೇಶಿಯಲ್(ಪ್ರದೇಶ, ಸ್ಥಳ) ಯೋಜನೆ ಮತ್ತು ಜಿಯೋಸ್ಪೇಷಿಯಲ್(ಭೌಗೋಳಿಕ) ತಂತ್ರಜ್ಞಾನ ಏಕೀಕರಣ

2.1 ಸುಧಾರಿತ ಜಿಪಿಎಸ್‌ಡಿಪಿ ಕುರಿತ “ನವೀನ್‌ಗ್ರಾಮ್” ರಾಷ್ಟ್ರೀಯ ಕಾರ್ಯಾಗಾರ

ಸುಧಾರಿತ ಗ್ರಾಮ ಪಂಚಾಯತ್ ಪ್ರಾದೇಶಿಕ ಅಭಿವೃದ್ಧಿ ಯೋಜನೆ(ಜಿಪಿಎಸ್‌ಡಿಪಿ)ಗಳ ಕುರಿತಾದ 2 ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು 2025 ಜುಲೈ 17–18ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ, ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯಿತಿ ಕಾರ್ಯನಿರ್ವಾಹಕರು, ಯೋಜನಾ ಸಂಸ್ಥೆಗಳು ಮತ್ತು ವಿವಿಧ ರಾಜ್ಯಗಳ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸುಮಾರು 165 ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಐಐಟಿಗಳು, ಸಿಇಪಿಟಿ, ಎಸ್‌ಪಿಎಗಳು ಮತ್ತು ಎನ್‌ಐಟಿಗಳು ಸೇರಿದಂತೆ ರಾಷ್ಟ್ರೀಯ ಖ್ಯಾತಿಯ 19 ಪಾಲುದಾರ ಸಂಸ್ಥೆಗಳ ಸಹಾಯದಿಂದ ಭಾರತದಾದ್ಯಂತ 14 ರಾಜ್ಯಗಳ 36 ಗ್ರಾಮ ಪಂಚಾಯಿತಿಗಳಲ್ಲಿ ಸುಧಾರಿತ ಜಿಪಿಎಸ್‌ಡಿಪಿ ಅನ್ನು ಸಿದ್ಧಪಡಿಸಲಾಗಿದೆ.

2.2 ಜಿಯೋಸ್ಮಾರ್ಟ್ ಇಂಡಿಯಾ 2025

ಜಿಯೋಸ್ಪೇಷಿಯಲ್ ವರ್ಲ್ಡ್ ಸಹಯೋಗದೊಂದಿಗೆ ಸಚಿವಾಲಯವು ಜಿಯೋಸ್ಮಾರ್ಟ್ ಇಂಡಿಯಾ-2025(2025 ಡಿಸೆಂಬರ್ 1–4) ಅನ್ನು ಆಯೋಜಿಸಿತ್ತು. ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ "ಒಂದು ರಾಷ್ಟ್ರ ಒಂದು ನಕ್ಷೆ" ಕುರಿತು ಸಮಗ್ರ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಸಚಿವಾಲಯವು "ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ನಕ್ಷೆಗಳು" ಎಂಬ ವಿಶೇಷ ಮಂಟಪವನ್ನು ಪ್ರದರ್ಶಿಸಿತು, ಇದು ಸ್ವಾಮಿತ್ವ, ಟಿವಿಎ, ಇಗ್ರಾಮ್ ಸ್ವರಾಜ್, ಮೇರಿ ಪಂಚಾಯತ್, ಸಭಾಸಾರ್, ಪಂಚಾಯತ್ ನಿರ್ಣಯ್,  ಗ್ರಾಮ ಮಂಚಿತ್ರ ಮತ್ತು ಜಿಪಿಎಸ್‌ಡಿಪಿಯಂತಹ ಪ್ರಮುಖ ಡಿಜಿಟಲ್ ಉಪಕ್ರಮಗಳು ಕಲಿಕೆಯ ಮನಸ್ಥಿತಿ ಹೊಂದಿದ್ದ ಪ್ರತಿನಿಧಿಗಳ ಸ್ಥಿರವಾದ ಗಮನ ಸೆಳೆಯಿತು.

3. ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಗಳು

2025 ಏಪ್ರಿಲ್ 24ರಂದು, ಬಿಹಾರದ ಮಧುಬನಿ ಜಿಲ್ಲೆಯ ಲೋಹ್ನಾ ಉತ್ತರ ಗ್ರಾಮ ಪಂಚಾಯಿತಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಹವಾಮಾನ ಕ್ರಮ ಮತ್ತು ಸ್ವಂತ ಆದಾಯದ ಮೂಲಗಳ ಕ್ರೋಢೀಕರಣ ಕುರಿತ ಅನುಕರಣೀಯ ಕೆಲಸಗಳಿಗಾಗಿ 6 ಗ್ರಾಮ ಪಂಚಾಯಿತಿಗಳಿಗೆ ವಿಶೇಷ ವಿಭಾಗಗಳ ಅಡಿ, ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು-2025 ನೀಡಲಾಯಿತು. ಅಲ್ಲದೆ, ಪಂಚಾಯತ್ ಪ್ರತಿನಿಧಿಗಳು ಮತ್ತು ಆಡಳಿತ ಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ನೀಡಿದ ಕೊಡುಗೆಗಾಗಿ 3 ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ವಸತಿ, ಗ್ರಾಮೀಣಾಭಿವೃದ್ಧಿ, ವಿದ್ಯುತ್, ಸಾರಿಗೆ ಮತ್ತು ಸಂಪರ್ಕ ವಲಯಗಳನ್ನು ಒಳಗೊಂಡ 13,480 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು.

4. ಸಾಮೂಹಿಕ ಜಾಗೃತಿಗಾಗಿ ಒಟಿಟಿ ವೇದಿಕೆಯ ಮೂಲಕ ಡಿಜಿಟಲ್ ಸಂಪರ್ಕ

ಪಂಚಾಯಿತ್ ರಾಜ್‌ಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಜನಜಾಗೃತಿಗಾಗಿ ಜನಪ್ರಿಯ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಲು ಸಚಿವಾಲಯವು ಒಂದು ಉಪಕ್ರಮ ಕೈಗೊಂಡಿದೆ. ಜನಪ್ರಿಯ ಕಾರ್ಯಕ್ರಮ/ವೆಬ್-ಸರಣಿ "ಪಂಚಾಯತ್"ನ ಹಿಂದಿ ವೆಬ್ ಸರಣಿ ವಿಸ್ತರಣೆಯಾದ "ಫುಲೇರಾ ಕಾ ಪಂಚಾಯತ್ ರಾಜ್" ಅನ್ನು ಆಕರ್ಷಕ ಮನರಂಜನಾ ಸ್ವರೂಪದ ಮೂಲಕ ಪ್ರಮುಖ ಆಡಳಿತ ಸಂದೇಶಗಳನ್ನು ಸಂವಹನ ಮಾಡುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ಸರಣಿಯು ಯೂಟ್ಯೂಬ್‌ನಲ್ಲಿ 40 ದಶಲಕ್ಷಕ್ಕಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿದೆ, ಸಚಿವಾಲಯದ ಯೂಟ್ಯೂಬ್ ಚಾನೆಲ್‌ನಲ್ಲಿ ಹೆಚ್ಚುವರಿಯಾಗಿ 7.9 ದಶಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ವ್ಯಾಪಕ ಪ್ರವೇಶಕ್ಕಾಗಿ ಎಲ್ಲಾ ಸಂಚಿಕೆಗಳನ್ನು ಹಿಂದಿಯಲ್ಲಿ ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ನಿರ್ಮಿಸಲಾಗಿದೆ. 2025ರಲ್ಲಿ 3 ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು, ಇದು ಪ್ರತಿಯೊಂದೂ ಪಂಚಾಯತ್ ರಾಜ್‌ನ ನಿರ್ಣಾಯಕ ಅಂಶಗಳನ್ನು ತಿಳಿಸುತ್ತದೆ, ಅವುಗಳೆಂದರೆ:

  • "ಅಸ್ಲಿ ಪ್ರಧಾನ್ ಕೌನ್?" – 2025 ಮಾರ್ಚ್ 4ರಂದು ಬಿಡುಗಡೆಯಾದ ಈ ಸಂಚಿಕೆಯು ಪಂಚಾಯತ್‌ಗಳ ಚುನಾಯಿತ ಮಹಿಳಾ ಪ್ರತಿನಿಧಿಗಳ ನಿಜವಾದ ನಾಯಕತ್ವವನ್ನು ಉತ್ತೇಜಿಸುತ್ತದೆ, ಜತೆಗೆ ಬದಲಿ(ಪ್ರಾಕ್ಸಿ) ಪ್ರಾತಿನಿಧ್ಯದಲ್ಲಿ ಇರುವ ನೈಜ ಸಮಸ್ಯೆಯನ್ನು ಉಲ್ಲೇಖಿಸುತ್ತದೆ.

  • “ಫುಲೇರಾ ಮೇ ಚೋರಿ” – 2025 ಮಾರ್ಚ್ 12ರಂದು ಬಿಡುಗಡೆಯಾಯಿತು, ಮೇರಿ ಪಂಚಾಯತ್ ಅಪ್ಲಿಕೇಶನ್ ಮತ್ತು ಸ್ವಾಮಿತ್ವದಂತಹ ಡಿಜಿಟಲ್ ಸೇವೆಗಳು ಪಾರದರ್ಶಕ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಆಡಳಿತವನ್ನು ಹೇಗೆ ಸಕ್ರಿಯಗೊಳಿಸುತ್ತವೆ ಎಂಬುದನ್ನು ಪ್ರದರ್ಶಿಸುತ್ತದೆ.

  • “ಅಲ್ಹುವಾ ವಿಕಾಸ್” – 2025 ಏಪ್ರಿಲ್ 24ರಂದು ಬಿಡುಗಡೆಯಾಯಿತು, ನಾಗರಿಕರ ಭಾಗವಹಿಸುವಿಕೆಯ ಮೂಲಕ ಸ್ವಂತ ಆದಾಯದ ಮೂಲ(ಒಎಸ್ಆರ್)ಗಳನ್ನು ಹೆಚ್ಚಿಸುವ ಮೂಲಕ ಪಂಚಾಯತ್‌ಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಂದೇಶವನ್ನು ರವಾನಿಸುತ್ತದೆ.

ಆಡಳಿತ ಜಾಗೃತಿಗಾಗಿ ಮನರಂಜನಾ ಮಾಹಿತಿ(ಇನ್ಫೋಟೈನ್‌ಮೆಂಟ್) ಮಾಧ್ಯಮವನ್ನು ಬಳಸುವ ಈ ನವೀನ ವಿಧಾನವು ಲಕ್ಷಾಂತರ ನಾಗರಿಕರನ್ನು, ವಿಶೇಷವಾಗಿ ಯುವ ಜನರನ್ನು, ಪ್ರಾತಿನಿಧಿಕ ಆಡಳಿತ ಮತ್ತು ಡಿಜಿಟಲ್ ಆಡಳಿತದ ಬಗ್ಗೆ ಪ್ರಮುಖ ಸಂದೇಶಗಳನ್ನು ತಳಮಟ್ಟದಲ್ಲಿ ತಲುಪಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ.

5. ಸಭಾಸಾರ್: ಎಐ-ಚಾಲಿತ ಸಭೆಯ ದಾಖಲೆ

ಸಚಿವಾಲಯವು ಸಭಾಸಾರ್ ಪ್ರಾರಂಭಿಸಿದೆ, ಇದು ಗ್ರಾಮ ಸಭೆಗಳ ವೀಡಿಯೊ ಅಥವಾ ಆಡಿಯೊ ರೆಕಾರ್ಡಿಂಗ್‌ಗಳಿಂದ ಸ್ವಯಂಚಾಲಿತವಾಗಿ ರಚನಾತ್ಮಕ ನಡಾವಳಿಗಳನ್ನು ಉತ್ಪಾದಿಸುವ ಎಐ ತಂತ್ರಜ್ಞಾನ ಚಾಲಿತ ಸಭೆಯ ಸಾರಾಂಶ ಸಾಧನವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ನೈಸರ್ಗಿಕ ಭಾಷಾ ಸಂಸ್ಕರಣೆಯನ್ನು ಬಳಸಿಕೊಳ್ಳುವ ಈ ಉಪಕರಣವು ಸರ್ಕಾರದ ರಾಷ್ಟ್ರೀಯ ಭಾಷಾ ಅನುವಾದ ವೇದಿಕೆಯಾದ ಭಾಷಿಣಿಯೊಂದಿಗೆ ಸಂಯೋಜಿಸಲ್ಪಟ್ಟ ಎಐ-ಚಾಲಿತ ಅನುವಾದ ಎಂಜಿನ್‌ಗಳ ಮೂಲಕ 13 ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ. 2025 ಡಿಸೆಂಬರ್ 10ರ ಹೊತ್ತಿಗೆ, 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ 92,869 ಗ್ರಾಮ ಪಂಚಾಯಿತಿಗಳು 1,43,124 ಸಭೆಗಳನ್ನು ನಡೆಸಿದ್ದು, ಸಭಾಸಾರ್ ಸಾಧನ ಬಳಸಿಕೊಂಡು ಸ್ವಯಂಚಾಲಿತ ನಡಾವಳಿಗಳನ್ನು ರಚಿಸಿವೆ, ಇದು ಸ್ಥಳೀಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವ ಜತೆಗೆ, ದಾಖಲಾತಿ ಕೆಲಸದ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

6. ಇಗ್ರಾಮ್ ಸ್ವರಾಜ್: ಹಣಕಾಸು ನಿರ್ವಹಣೆಯನ್ನು ಬಲಪಡಿಸುತ್ತದೆ

22 ಭಾರತೀಯ ಭಾಷೆಗಳಲ್ಲಿ ಈಗ ಲಭ್ಯವಿರುವ ಕೆಲಸ ಆಧಾರಿತ ಲೆಕ್ಕಪತ್ರ ಅಪ್ಲಿಕೇಶನ್ ಇಗ್ರಾಮ್ ಸ್ವರಾಜ್ ಅಪ್ಲಿಕೇಷನ್ ಪಂಚಾಯತ್ ಹಣಕಾಸು ನಿರ್ವಹಣೆ ಹೆಚ್ಚಿಸುವುದನ್ನು ಮುಂದುವರೆಸಿದೆ:

  • 2.52 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಮತ್ತು 5,400 ಬ್ಲಾಕ್ ಪಂಚಾಯಿತಿಗಳು ತಮ್ಮ ಅಭಿವೃದ್ಧಿ ಯೋಜನೆ(ಜಿಪಿಡಿಪಿ ಮತ್ತು ಬಿಪಿಡಿಪಿ)ಗಳನ್ನು ಅಪ್‌ಲೋಡ್ ಮಾಡಿವೆ
  • 2025-26ಕ್ಕೆ ಇಗ್ರಾಮ್ ಸ್ವರಾಜ್- ಪಿಎಫ್‌ಎಂಎಸ್ ಸಂಯೋಜನೆ ಅಥವಾ ಏಕೀಕರಣವನ್ನು 2.52 ಲಕ್ಷ ಗ್ರಾಮ ಪಂಚಾಯಿತಿಗಳು ಅಳವಡಿಸಿಕೊಂಡಿವೆ.
  • 2.25 ಲಕ್ಷ ಗ್ರಾಮ ಪಂಚಾಯಿತಿಗಳು 2025-26ರಲ್ಲಿ ಆನ್‌ಲೈನ್ ಪಾವತಿಗಳನ್ನು ಪ್ರಾರಂಭಿಸಿವೆ, ಫಲಾನುಭವಿಗಳು ಮತ್ತು ಮಾರಾಟಗಾರರಿಗೆ ಸುಮಾರು 34,573 ಕೋಟಿ ರೂ.ಗಳನ್ನು ವರ್ಗಾಯಿಸಿವೆ
  • 93% ಗ್ರಾಮ ಪಂಚಾಯಿತಿಗಳು 2024-25ಕ್ಕೆ ತಮ್ಮ ವಾರ್ಷಿಕ ಪುಸ್ತಕಗಳ ಲೆಕ್ಕಪತ್ರ ಮುಗಿಸಿವೆ.
  • 87% ಗ್ರಾಮ ಪಂಚಾಯಿತಿಗಳು 2025-26ರ ಮಾಸಿಕ ಪುಸ್ತಕಗಳ ವಿಲೇವಾರಿ ಮಾಡಿವೆ.
  • ಕೇಂದ್ರ ಹಣಕಾಸು ಆಯೋಗದ ಅನುದಾನಗಳನ್ನು ಪಡೆಯುವ ರಾಜ್ಯಗಳಲ್ಲಿ 100% ಗ್ರಾಮ ಪಂಚಾಯಿತಿಗಳು ಎಲ್‌ಜಿಡಿ ಅನುಸರಣೆ ಹೊಂದಿವೆ

7. ಆಡಿಟ್ ಆನ್‌ಲೈನ್: ಹಣಕಾಸಿನ ಹೊಣೆಗಾರಿಕೆ ಖಚಿತಪಡಿಸುವುದು

ಆಡಿಟ್ ಆನ್‌ಲೈನ್ ಅಪ್ಲಿಕೇಶನ್ ಪಂಚಾಯತ್ ಖಾತೆಗಳ ಪಾರದರ್ಶಕ ಆನ್‌ಲೈನ್ ಲೆಕ್ಕಪರಿಶೋಧನೆಯನ್ನು ಸುಗಮಗೊಳಿಸುತ್ತದೆ. 2024-25ರ ಪ್ರಮುಖ ಅಂಕಿಅಂಶಗಳು:

ಚಟುವಟಿಕೆ

ಸಂಖ್ಯೆಗಳು

ಲೆಕ್ಕಪರಿಶೋಧಕರ ಸೇರ್ಪಡೆ

12,136

ಲೆಕ್ಕಪರಿಶೋಧಕರ ಸೇರ್ಪಡೆ

2,62,329

ಸಿದ್ಧಪಡಿಸಿದ ಲೆಕ್ಕ ಪರಿಶೋಧನೆ ಯೋಜನೆಗಳು

1,67,218 ಗ್ರಾಮ ಪಂಚಾಯಿತಿಗಳು

ಸೃಜಿಸಲಾದ ಲೆಕ್ಕ ಪರಿಶೋಧನನೆ ವರದಿಗಳು

55,318

8. ಅಂತಾರಾಷ್ಟ್ರೀಯ ಮನ್ನಣೆ

“ಮೇರಿ ಪಂಚಾಯತ್ - ಭಾರತದ ಪಂಚಾಯಿತಿಗಳಿಗೆ ಎಂ-ಗವರ್ನನ್ಸ್ ಅಂದರೆ ಮೊಬೈಲ್ ಆಡಳಿತ ವೇದಿಕೆಯಾಗಿದೆ”. ಗ್ರಾಮೀಣ ವಿದ್ಯುನ್ಮಾನ-ಆಡಳಿತದಲ್ಲಿ ಭಾರತದ ನಾವೀನ್ಯತೆಯನ್ನು ಗುರುತಿಸಿ ಜಿನೀವಾದಲ್ಲಿ (2025 ಜುಲೈ7–11) ನಡೆದ ಡಬ್ಲ್ಯುಎಸ್ಐಎಸ್ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ 2025ರ ಪ್ರತಿಷ್ಠಿತ ಡಬ್ಲ್ಯುಎಸ್ಐಎಸ್ ಚಾಂಪಿಯನ್ ಪ್ರಶಸ್ತಿ ನೀಡಲಾಯಿತು. ಈ ಉಪಕ್ರಮಗಳು ಸರ್ಕಾರದ ಡಿಜಿಟಲ್ ಇಂಡಿಯಾ, ಉತ್ತಮ ಆಡಳಿತ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ, ಪ್ರಾತಿನಿಧಿಕ ಅಥವಾ ಭಾಗವಹಿಸುವ ಆಡಳಿತ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಡಿಜಿಟಲ್ ಪರಿಕರಗಳೊಂದಿಗೆ ಗ್ರಾಮೀಣ ಸಂಸ್ಥೆಗಳನ್ನು ಬೆಂಬಲಿಸುತ್ತವೆ.

9. ಸಾಮರ್ಥ್ಯ ವೃದ್ಧಿ ಮತ್ತು ಸಾಂಸ್ಥಿಕ ಬಲವರ್ಧನೆ

ಪಂಚಾಯತ್ ಮೂಲಸೌಕರ್ಯ ಬಲವರ್ಧನೆ

ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಪಂಚಾಯಿತಿ ಮೂಲಸೌಕರ್ಯ ಬಲಪಡಿಸುವುದು ಮತ್ತು ಸೇವಾ ವಿತರಣಾ ಕಾರ್ಯವಿಧಾನಗಳನ್ನು ಹೆಚ್ಚಿಸುವತ್ತ ಸಚಿವಾಲಯ ಒತ್ತು ನೀಡಿದೆ. ಮೂಲಸೌಕರ್ಯ ಕೊರತೆ ಪರಿಹರಿಸಲು ಪರಿಪೂರ್ಣತೆ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ದೇಶದ 1,638 ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ಭವನಗಳ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದೆ, 3,000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎಲ್ಲಾ ಗ್ರಾಮ ಪಂಚಾಯಿತಿಗಳು ಸಮರ್ಪಿತ ಕಚೇರಿ ಆವರಣ ಹೊಂದಿರುತ್ತವೆ ಎಂಬುದನ್ನು ಖಚಿತಪಡಿಸುತ್ತದೆ.

ಸರಣಿ ಸಂಖ್ಯೆ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

ಪಂಚಾಯತ್ ಭವನಕ್ಕೆ ಅನುಮೋದನೆ

1

ಒಡಿಶಾ

500

2

ಪಂಜಾಬ್

500

3

ಉತ್ತರಾಖಂಡ

200

4

ಉತ್ತರ ಪ್ರದೇಶ

200

5

ಛತ್ತೀಸ್ ಗಢ

70

6

ಪಶ್ಚಿಮ ಬಂಗಾಳ

87

7

ತ್ರಿಪುರ

61

8

ಹಿಮಾಚಲ ಪ್ರದೇಶ

18

9

ಅಂಡಮಾನ & ನಿಕೋಬರ್ ದ್ವೀಪ ಪ್ರದೇಶಗಳು

2

ಒಟ್ಟು

1,638

ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಸಚಿವಾಲಯವು, ಸ್ಥಾಪಿತ ಕಚೇರಿ ಕಟ್ಟಡಗಳನ್ನು ಹೊಂದಿರುವ ಗ್ರಾಮ ಪಂಚಾಯಿತಿಗಳಿಗೆ 19,472 ಕಂಪ್ಯೂಟರ್‌ಗಳನ್ನು ಮಂಜೂರು ಮಾಡುವ ಮೂಲಕ ಡಿಜಿಟಲ್ ಸಬಲೀಕರಣಕ್ಕೆ ಆದ್ಯತೆ ನೀಡಿದೆ.

ಸರಣಿ ಸಂಖ್ಯೆ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

ಕಂಪ್ಯೂಟರ್ ಗಳಿಗೆ ಅನುಮೋದನೆ

1

ಛತ್ತೀಸ್ ಗಢ

4,585

2

ಪಂಜಾಬ್

4,000

3

ಉತ್ತರಾಖಂಡ

3,000

4

ಬಿಹಾರ

2,000

5

Tತೆಲಂಗಾಣ

1,834

6

ಪಶ್ಚಿಮ ಬಂಗಾಳ

1,600

7

ಮಹಾರಾಷ್ಟ್ರ

680

8

ಕೇರಳ

200

9

ಒಡಿಶಾ

200

10

ಅಸ್ಸಾಂ

868

11

ನಾಗಾಲ್ಯಾಂಡ್

344

12

ಹಿಮಾಚಲ ಪ್ರದೇಶ

75

13

ಗುಜರಾತ್

43

14

ಗೋವಾ

25

15

ತ್ರಿಪುರ

18

ಒಟ್ಟು

19,472

10. ಮಹಿಳಾ ನೇತೃತ್ವದ ಅಭಿವೃದ್ಧಿಯ ಉಪಕ್ರಮಗಳು

10.1 ‘ಸಶಕ್ತ ಪಂಚಾಯತ್ ನೇತ್ರಿ ಅಭಿಯಾನ’ಕ್ಕೆ ಚಾಲನೆ

ಮಹಿಳಾ ಚುನಾಯಿತ ಪ್ರತಿನಿಧಿಗಳ ರಾಷ್ಟ್ರೀಯ ಕಾರ್ಯಾಗಾರ(ಮಾರ್ಚ್ 4-5, ನವದೆಹಲಿ): ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 1,200ಕ್ಕೂ ಹೆಚ್ಚು ಮಹಿಳಾ ಪಂಚಾಯತ್ ನಾಯಕಿಯರ ಸಭೆಯಲ್ಲಿ ನಾಯಕತ್ವ, ಸಂವಹನ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳನ್ನು ಬಲಪಡಿಸುವ ಗುರಿ ಹೊಂದಿರುವ ವಿಶೇಷ ತರಬೇತಿ ಮಾಡ್ಯೂಲ್ ಪ್ರಾರಂಭಿಸಲಾಯಿತು. ಭಾರತದಾದ್ಯಂತದ ಅಸಾಧಾರಣ ಮಹಿಳಾ ನಾಯಕಿಯರು ತಳಮಟ್ಟದ ಆಡಳಿತದಲ್ಲಿ ನೀಡಿದ ಗಣನೀಯ ಕೊಡುಗೆಗಳನ್ನು ಪರಿಗಣಿಸಿ, ಅವರನ್ನು ಸನ್ಮಾನಿಸಲಾಯಿತು.

ABH_2018.JPG  ABH_2040.JPG

ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್‌ಗಳ ರಾಷ್ಟ್ರೀಯ ಸಮಾವೇಶ (ಮಾರ್ಚ್ 5): ಪ್ರತಿ ಜಿಲ್ಲೆಯಲ್ಲಿ ಒಂದು ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಸ್ಥಾಪಿಸುವ ದೂರದೃಷ್ಟಿಯೊಂದಿಗೆ, ಸಮಾವೇಶವು 300 ಪ್ರತಿನಿಧಿಗಳನ್ನು ಒಟ್ಟುಗೂಡಿಸಿತು. 1,200 ತುರ್ತು ವೈದ್ಯರು ಮತ್ತು ಅಧಿಕಾರಿಗಳಿಗೆ 2 ದಿನಗಳ ತರಬೇತಿ ನೀಡಲಾಯಿತು.

ಅಂತಾರಾಷ್ಟ್ರೀಯ ಮಹಿಳಾ ದಿನದ ಚಟುವಟಿಕೆಗಳು(ಮಾರ್ಚ್ 8): ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ (ಎಂಡಬ್ಲ್ಯುಎಫ್‌ಜಿಪಿ) ಉಪಕ್ರಮದ ಅಡಿ ಗುರುತಿಸಲಾದ ಗ್ರಾಮ ಪಂಚಾಯಿತಿಗಳಲ್ಲಿ ತರಬೇತಿ ಮತ್ತು ಓರಿಯಂಟೇಷನ್(ಅಭಿಶಿಕ್ಷಣ)  ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಗ್ರಾಮ ಸಭಾ ಪ್ರಕ್ರಿಯೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಲಪಡಿಸಲು ದೇಶಾದ್ಯಂತ ಮಹಿಳಾ ಸಭೆಗಳನ್ನು ನಡೆಸಲಾಯಿತು.

10.2 ಪಂಚಾಯಿತಿಗಳ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿ

ಸಶಕ್ತ ಪಂಚಾಯತ್ ನೇತ್ರಿ ಅಭಿಯಾನ ಪ್ರಾರಂಭಿಸಿದ ನಂತರ, ಟ್ರಾನ್ಸ್‌ಫಾರ್ಮಿಂಗ್ ರೂರಲ್ ಇಂಡಿಯಾ(ಟಿಆರ್‌ಐ) ಫೌಂಡೇಶನ್‌ನ ಸಹಯೋಗದೊಂದಿಗೆ "ಚಾಂಪಿಯನಿಂಗ್ ಚೇಂಜ್: ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕಿಯರ ಸಬಲೀಕರಣ" ಕುರಿತು ತರಬೇತುದಾರರಿಗೆ ತರಬೇತಿ  ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. 2025-26ರ ಅವಧಿಯಲ್ಲಿ, ಸಚಿವಾಲಯವು ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಐಐಪಿಎ ನವದೆಹಲಿ (5 ತಂಡಗಳು) ಮತ್ತು ಲಕ್ನೋ, ಗುವಾಹಟಿ ಮತ್ತು ತಮಿಳುನಾಡಿನಲ್ಲಿ ಎಸ್‌ಐಆರ್‌ಡಿಗಳು ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ 8 ಸಾಮರ್ಥ್ಯ ವೃದ್ಧಿ ತಂಡಗಳನ್ನು ಯಶಸ್ವಿಯಾಗಿ ನಡೆಸಿತು. ಒಟ್ಟು 252 ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರರು ಸುಧಾರಿತ ನಾಯಕತ್ವ, ಆಡಳಿತ ಮತ್ತು ಭಾಗವಹಿಸುವ ಯೋಜನಾ ಸಾಮರ್ಥ್ಯಗಳೊಂದಿಗೆ ಸಜ್ಜುಗೊಂಡಿದ್ದರು. ಈ 252 ತರಬೇತುದಾರರು 8,408 ಜಿಲ್ಲಾ/ಬ್ಲಾಕ್ ಮಟ್ಟದ ಮಾಸ್ಟರ್ ತರಬೇತುದಾರರಿಗೆ (ಡಿಎಲ್‌ಎಂಟಿಗಳು/ಬಿಎಲ್‌ಎಂಟಿಗಳು) ಒಂದರ ನಂತರ ಒಂದರಂತೆ ಮತ್ತಷ್ಟು ತರಬೇತಿ ನೀಡಿದರು, ನಂತರ ಅವರು 2025 ನವೆಂಬರ್ 30 ರ ಹೊತ್ತಿಗೆ 44,421 ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ನೀಡಿದರು, ಇದು ತಳಮಟ್ಟದ ಆಡಳಿತವನ್ನು ಬಲಪಡಿಸುವ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸಮಗ್ರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಚಿವಾಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

11. ಪಂಚಾಯತ್‌ಗಳನ್ನು ಆರ್ಥಿಕವಾಗಿ ಆತ್ಮನಿರ್ಭರಗೊಳಿಸುವುದು - ಸ್ವಂತ ಮೂಲ ಆದಾಯ ಉತ್ಪಾದನೆ ಕುರಿತು ತರಬೇತಿ ಮಾಡ್ಯೂಲ್

ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ  ಸಚಿವಾಲಯವು, ಚುನಾಯಿತ ಪ್ರತಿನಿಧಿಗಳು ಮತ್ತು ಪಂಚಾಯತ್ ಅಧಿಕಾರಿಗಳಿಗೆ ತೀವ್ರ ತರಬೇತಿಯ ಮೂಲಕ ಸ್ವಂತ ಮೂಲ ಆದಾಯ ಹೆಚ್ಚಿಸಲು "ಸಕ್ಷಮ್" ಪಂಚಾಯತ್‌ಗಳ ಉಪಕ್ರಮ ಉತ್ತೇಜಿಸಿತು. ಗ್ರಾಮ ಪಂಚಾಯಿತಿಗಳಿಂದ ಸ್ವಂತ ಮೂಲ ಆದಾಯ(ಒಎಸ್ಆರ್) ಉತ್ಪಾದಿಸಲು ಸಮಗ್ರ ಮಾಡ್ಯೂಲ್ ಅನ್ನು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಭಿವೃದ್ಧಿಪಡಿಸಿದೆ. ಒಎಸ್ಆರ್ ತರಬೇತಿಯು ಒಎಸ್ಆರ್ ಮತ್ತು ಅದರ ಕಾನೂನು ಚೌಕಟ್ಟನ್ನು ಅರ್ಥ ಮಾಡಿಕೊಳ್ಳುವುದು, ಒಎಸ್ಆರ್ ಹೆಚ್ಚಿಸುವ  ಕಾರ್ಯತಂತ್ರ ವಿಧಾನಗಳು, ಆದಾಯ ಸಂಗ್ರಹಣೆಗಾಗಿ ವರ್ತನೆಯ ವಿಜ್ಞಾನ, ಎಲ್‌ಎಸ್‌ಡಿಜಿ-ಸಂಬಂಧಿತ ಅಭಿವೃದ್ಧಿಗಾಗಿ ಒಎಸ್ಆರ್ ಬಳಕೆ, ನವೀನ ಹಣಕಾಸು ಮತ್ತು ಯೋಜನಾ ನಿರ್ವಹಣೆ ಮತ್ತು ಪ್ರಾಯೋಗಿಕ ಪರಿಕರಗಳು ಮತ್ತು ಪ್ರಕರಣ ಅಧ್ಯಯನಗಳನ್ನು ಒಳಗೊಂಡಿದೆ. ಕೇಂದ್ರ ಮಟ್ಟದಲ್ಲಿ, ಒಎಸ್ಆರ್ ಮಾಡ್ಯೂಲ್‌ನಲ್ಲಿ 3 ತರಬೇತುದಾರರಿಗೆ ತರಬೇತಿ 2025 ಜೂನ್ ನಿಂದ ಆಗಸ್ಟ್ ವರೆಗೆ ಐಐಪಿಎ ನವದೆಹಲಿಯಲ್ಲಿ(2 ಬ್ಯಾಚ್‌ಗಳು) ಮತ್ತು ಎನ್‌ಐಆರ್‌ಡಿಪಿಆರ್(1 ಬ್ಯಾಚ್)ನಲ್ಲಿ ನಡೆಸಲಾಯಿತು, 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 170 ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರರಿಗೆ ತರಬೇತಿ ನೀಡಲಾಯಿತು. ಈ ತರಬೇತುದಾರರು 4,879 ಜಿಲ್ಲಾ/ಬ್ಲಾಕ್ ಮಟ್ಟದ ಮಾಸ್ಟರ್ ತರಬೇತುದಾರರಿಗೆ ಸತತ ತರಬೇತಿ ನೀಡಿದರು, ನಂತರ ಅವರು 1,10,524 ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪಂಚಾಯತ್ ಕಾರ್ಯಕರ್ತರಿಗೆ ತರಬೇತಿ ನೀಡಿದರು, ದೇಶಾದ್ಯಂತ ಪಂಚಾಯತ್‌ಗಳ ಆರ್ಥಿಕ ಸ್ವಾವಲಂಬನೆ ಸಾಮರ್ಥ್ಯವನ್ನು ಗಮನಾರ್ಹವಾಗಿ ಬಲಪಡಿಸಿದರು.

12. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (ಆರ್‌ಜಿಎಸ್‌ಎ) ಅನುಷ್ಠಾನ

ಸಚಿವಾಲಯವು ಕೇಂದ್ರ ಪ್ರಾಯೋಜಿತ ಯೋಜನೆಯನ್ನು ನವೀಕರಿಸಿದ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (ಆರ್‌ಜಿಎಸ್‌ಎ) ಅನ್ನು ಜಾರಿಗೆ ತಂದಿತು, ಇದರ ಅಡಿ 2025-26ರ ಅವಧಿಯಲ್ಲಿ 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಅನುಮೋದಿಸಲಾಯಿತು.

ಆರ್‌ಜಿಎಸ್‌ಎ ಅಡಿ ಪ್ರಮುಖ ಸಾಧನೆಗಳು ಸೇರಿವೆ:

  • ಸಾಮರ್ಥ್ಯ ವೃದ್ಧಿ ಮತ್ತು ತರಬೇತಿ, ಸಾಂಸ್ಥಿಕ ಬಲವರ್ಧನೆ, ಗ್ರಾಮ ಪಂಚಾಯತ್ ಭವನಗಳು ಮತ್ತು ಕಂಪ್ಯೂಟರ್‌ಗಳು ಸೇರಿದಂತೆ ಸ್ವೀಕಾರಾರ್ಹ ಚಟುವಟಿಕೆಗಳಿಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2025  ಜನವರಿ 1ರಿಂದ ನವೆಂಬರ್ 30ರ ವರೆಗೆ 911.52 ಕೋಟಿ ರೂ. ಬಿಡುಗಡೆ ಮಾಡಲಾಗಿದೆ
  • 2025 ನವೆಂಬರ್ 30ರ ವರೆಗೆ ಅನ್ವಯವಾಗುವಂತೆ, ಕೇಂದ್ರ ಮತ್ತು ರಾಜ್ಯದ ಪಾಲು ಸೇರಿದಂತೆ ಯೋಜನೆಯ ಒಟ್ಟು ವೆಚ್ಚ 1,31,6.27 ಕೋಟಿ ರೂ. ಆಗಿದೆ.
  • ಚುನಾಯಿತ ಪ್ರತಿನಿಧಿಗಳು, ಕಾರ್ಯನಿರ್ವಾಹಕರು ಮತ್ತು ಪಂಚಾಯತ್‌ಗಳ ಇತರ ಪಾಲುದಾರರ ಸಾಮರ್ಥ್ಯ ವೃದ್ಧಿಗಾಗಿ 2025 ಜನವರಿ 1ರಿಂದ ನವೆಂಬರ್ 30ರ ವರೆಗೆ ಸುಮಾರು 33.25 ಲಕ್ಷ ಪ್ರತಿನಿಧಿಗಳುಗೆ ತರಬೇತಿ ನೀಡಲಾಯಿತು.
  • 2025-26ರಲ್ಲಿ ಆರ್‌ಜಿಎಸ್‌ಎ ಅಡಿ 1,638 ಗ್ರಾಮ ಪಂಚಾಯತ್ ಭವನಗಳು ಮತ್ತು 19,472 ಕಂಪ್ಯೂಟರ್‌ಗಳಿಗೆ ಅನುಮೋದನೆ ನೀಡಲಾಗಿದೆ.

12.2 ಶ್ರೇಷ್ಠತಾ ಸಂಸ್ಥೆಗಳ ಮೂಲಕ ನಾಯಕತ್ವ/ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮ

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಮತ್ತು ನಾಯಕತ್ವ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿ ಹೊಂದಿರುವ ಸಚಿವಾಲಯವು ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮ (ಎಂಡಿಪಿ) ತರಬೇತಿಗಳನ್ನು ಆಯೋಜಿಸಿತ್ತು. 2025-26ರ ಹಣಕಾಸು ವರ್ಷದಲ್ಲಿ, ಐಐಎಂ ರೋಹ್ಟಕ್, ಐಐಟಿ ಧನ್ಬಾದ್, ಐಆರ್ ಎಂಎ ಆನಂದ್, ಐಐಎಂ ಜಮ್ಮು ಮತ್ತು ಐಐಎಂ ಬೋಧಗಯಾ ಸೇರಿದಂತೆ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳಲ್ಲಿ ಏಪ್ರಿಲ್ ನಿಂದ ನವೆಂಬರ್ 2025ರ ವರೆಗೆ 5 ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ತರಬೇತಿಗಳಲ್ಲಿ ಒಟ್ಟಾಗಿ 160 ಪ್ರತಿನಿಧಿಗಳು ಭಾಗವಹಿಸಿದ್ದರು. ಪಂಚಾಯತ್ ರಾಜ್ ರಚನೆಗಳಲ್ಲಿ ನಿರ್ವಹಣಾ ಸಾಮರ್ಥ್ಯಗಳು ಮತ್ತು ಸಾಂಸ್ಥಿಕ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಇದು ಗಮನಾರ್ಹ ಕೊಡುಗೆ ನೀಡಿತು, ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳನ್ನು ತಳಮಟ್ಟದಲ್ಲಿ ಸಾಮರ್ಥ್ಯ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತಿರುವ ಸಚಿವಾಲಯದ ಗಮನವನ್ನು ಪ್ರದರ್ಶಿಸಿತು.

12.3 ಮಾದರಿ ಯುವ ಗ್ರಾಮಸಭೆಗೆ ರಾಷ್ಟ್ರ ಮಟ್ಟದಲ್ಲಿ  ಉದ್ಘಾಟನೆ

ಭಾರತದ ಅತಿದೊಡ್ಡ ಯುವ ಜನಸಂಖ್ಯೆಯನ್ನು ತಳಮಟ್ಟದ ಆಡಳಿತದಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಗುರುತಿಸಿ, ಸಚಿವಾಲಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಡಿಒಎಸ್ಇಎಲ್) ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ (ಎಂಒಟಿಎ) ಸಹಯೋಗದೊಂದಿಗೆ ಮಾದರಿ ಯುವ ಗ್ರಾಮ ಸಭೆ(ಎಂವೈಜಿಎಸ್)ಯನ್ನು ಪ್ರಾರಂಭಿಸಿತು. ಈ ಉಪಕ್ರಮವು ಜವಾಹರ್ ನವೋದಯ ವಿದ್ಯಾಲಯಗಳು (ಜೆಎನ್‌ವಿಗಳು) ಮತ್ತು ಏಕಲವ್ಯ ಮಾದರಿ ವಸತಿ ಶಾಲೆಗಳ(ಇಎಂಆರ್ ಎಸ್) 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಒಳಗೊಂಡ ಮಾದರಿ ಗ್ರಾಮ ಸಭೆ/ಗ್ರಾಮ ಪಂಚಾಯಿತಿ ಸಭೆಗಳನ್ನು ನಡೆಸುತ್ತದೆ. ಮಾದರಿ ಯುವ ಗ್ರಾಮ ಸಭೆ(ಎಂವೈಜಿಎಸ್) ಉಪಕ್ರಮದ ರಾಷ್ಟ್ರೀಯ ಉದ್ಘಾಟನೆಗಾಗಿ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಒಂದು ದಿನದ ಕಾರ್ಯಕ್ರಮವನ್ನು 2025 ಅಕ್ಟೋಬರ್ 30ರಂದು ಆಯೋಜಿಸಲಾಗಿತ್ತು. ಜೆಎನ್‌ವಿ ಮತ್ತು ಇಎಂಆರ್ ಎಸ್ ವಿದ್ಯಾರ್ಥಿಗಳು, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಚುನಾಯಿತ ಪ್ರತಿನಿಧಿಗಳು ಮತ್ತು ಪಂಚಾಯತ್ ಅಧಿಕಾರಿಗಳು ಸೇರಿದಂತೆ ಸುಮಾರು 800 ಪ್ರತಿನಿಧಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಉಪಕ್ರಮಗಳು ಸರ್ಕಾರದ ಡಿಜಿಟಲ್ ಇಂಡಿಯಾ, ಉತ್ತಮ ಆಡಳಿತ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತವೆ. ಪ್ರಾತಿನಿಧಿಕ ಅಥವಾ ಭಾಗವಹಿಸುವ ಪ್ರಜಾಪ್ರಭುತ್ವ ಅಥವಾ ಆಡಳಿತ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಡಿಜಿಟಲ್ ಪರಿಕರಗಳೊಂದಿಗೆ ಗ್ರಾಮೀಣ ಸಂಸ್ಥೆಗಳನ್ನು ಬೆಂಬಲಿಸುತ್ತವೆ. ಆರ್‌ಜಿಎಸ್‌ಎ ಅಡಿ ಸಚಿವಾಲಯದ ಪ್ರಯತ್ನಗಳು ಪರಿಣಾಮಕಾರಿ, ಜವಾಬ್ದಾರಿಯುತ ಮತ್ತು ಭಾಗವಹಿಸುವ ಸ್ಥಳೀಯ ಆಡಳಿತವನ್ನು ಉತ್ತೇಜಿಸುವುದನ್ನು ಮುಂದುವರೆಸುತ್ತವೆ. ಸಬಲೀಕರಣಗೊಂಡ, ಸ್ವಾವಲಂಬಿ ಮತ್ತು ಅಭಿವೃದ್ಧಿ-ಆಧಾರಿತ ಪಂಚಾಯತ್‌ಗಳ ಮೂಲಕ ಭಾರತವನ್ನು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಹತ್ತಿರ ತರುತ್ತವೆ.

13. ಅನುಸೂಚಿತ ಅಥವಾ ಬುಡಕಟ್ಟು ಪ್ರದೇಶಗಳಿಗೆ ಪಂಚಾಯಿತಿ ಕಾಯ್ದೆ ವಿಸ್ತರಣೆ ಮಾಡುವ ಉದ್ದೇಶ ಹೊಂದಿರುವ ಪೆಸಾ-PESA” ಅನುಷ್ಠಾನದ ಮೂಲಕ ಬುಡಕಟ್ಟು ಸಮುದಾಯಗಳ ಸಬಲೀಕರಣ

13.1 ಪೆಸಾ ಶ್ರೇಷ್ಠತಾ ಕೇಂದ್ರ

 

ಪೆಸಾ ಅನುಷ್ಠಾನವನ್ನು ಸಾಂಸ್ಥಿಕಗೊಳಿಸಲು, ಅಮರಕಂಟಕ್‌ನ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ(ಐಜಿಎನ್‌ಟಿಯು)ದಲ್ಲಿ ಪೆಸಾ ಶ್ರೇಷ್ಠತಾ ಕೇಂದ್ರ (ಸಿಒಇ-ಪೆಸಾ) ಸ್ಥಾಪಿಸಲಾಗಿದೆ, ಇದನ್ನು ಎಂಒಪಿಆರ್, ಮಧ್ಯಪ್ರದೇಶ ಸರ್ಕಾರ ಮತ್ತು ಐಜಿಎನ್‌ಟಿಯು ನಡುವೆ 2025 ಜುಲೈ 24ರಂದು ಸಹಿ ಮಾಡಿದ ಒಪ್ಪಂದದ ಮೂಲಕ ಸ್ಥಾಪಿಸಲಾಗಿದೆ. ಕಾರ್ಯಕ್ರಮ ಸಲಹಾ ಮಂಡಳಿಯು 2025-26ರ ಕ್ರಿಯಾಯೋಜನೆ ಅನುಮೋದಿಸಿದೆ. ಇದು ಸಾಂಪ್ರದಾಯಿಕ ಪದ್ಧತಿಗಳ ದಾಖಲೀಕರಣ, ಮಾದರಿ ಪೆಸಾ ಗ್ರಾಮ ಸಭೆಗಳ ಅಭಿವೃದ್ಧಿ, ಬುಡಕಟ್ಟು ಭಾಷೆಗಳಲ್ಲಿ ಐಇಸಿ ಮತ್ತು ತರಬೇತಿ ಸಾಮಗ್ರಿಗಳ ತಯಾರಿಕೆ ಮತ್ತು ಉತ್ತಮ ಪದ್ಧತಿಗಳ ದಾಖಲೀಕರಣದ ಮೇಲೆ ಗಮನ ಕೇಂದ್ರೀಕರಿಸಿದೆ.

ಪಂಚಾಯತ್‌ಗಳ ನಿಬಂಧನೆಗಳು(ಅನುಸೂಚಿತ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ-1996 (ಪೆಸಾ ಕಾಯ್ದೆ) ಸಂವಿಧಾನದ ಭಾಗ-9ರ ನಿಬಂಧನೆಗಳನ್ನು 10 ರಾಜ್ಯಗಳಾದ್ಯಂತ ಬುಡಕಟ್ಟು ಪ್ರದೇಶಗಳಿಗೆ ವಿಸ್ತರಿಸಿದೆ, ಇದರಲ್ಲಿ 77,564 ಹಳ್ಳಿಗಳು, 22,040 ಪಂಚಾಯತ್‌ಗಳು ಮತ್ತು 45 ಸಂಪೂರ್ಣವಾಗಿ ಒಳಗೊಂಡಿರುವ ಮತ್ತು 63 ಭಾಗಶಃ ಒಳಗೊಂಡಿರುವ ಜಿಲ್ಲೆಗಳಲ್ಲಿ 664 ಬ್ಲಾಕ್‌ಗಳು ಸೇರಿವೆ. ಪೆಸಾ ಅನುಷ್ಠಾನವನ್ನು ಬಲಪಡಿಸಲು ಮತ್ತು ವ್ಯವಸ್ಥಿತ ಸಾಮರ್ಥ್ಯ ವೃದ್ಧಿ, ಸಾಂಸ್ಥಿಕ ಬೆಂಬಲ ಮತ್ತು ಜ್ಞಾನ ಸಂರಕ್ಷಣೆಯ ಮೂಲಕ ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಲು ಸಚಿವಾಲಯವು 2025ರಲ್ಲಿ ಗಮನಾರ್ಹ ಪ್ರಗತಿ ಸಾಧಿಸಿತು. ಪೆಸಾದ ಪರಿಣಾಮಕಾರಿ ಅನುಷ್ಠಾನಕ್ಕೆ ಸಿಒಇ-ಪೆಸಾ ಪರಿಣಾಮಕಾರಿ ವೇದಿಕೆಯನ್ನು ಸಾಬೀತುಪಡಿಸಲಿದೆ.

13.2 ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ ಅಡಿ ಸಚಿವಾಲಯವು ಎಲ್ಲಾ 10 ಪೆಸಾ ರಾಜ್ಯಗಳು ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪೆಸಾ ಅನುಷ್ಠಾನಕ್ಕಾಗಿ ಮೀಸಲಾದ ಸಿಬ್ಬಂದಿಯನ್ನು ನೇಮಿಸಲು ಬೆಂಬಲ ನೀಡುತ್ತಿದೆ. ಪೆಸಾವನ್ನು ನೆಲಮಟ್ಟದಲ್ಲಿ ಕಾರ್ಯಗತಗೊಳಿಸಲು ರಾಜ್ಯಗಳಾದ್ಯಂತ 16,000ಕ್ಕೂ ಹೆಚ್ಚು ಸಮರ್ಪಿತ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

13.3 ಸಚಿವಾಲಯವು 2025 ಮೇ 13-14ರಂದು ಮಹಾರಾಷ್ಟ್ರದ ಪುಣೆಯ ಯಶದಾದಲ್ಲಿ 2 ದಿನಗಳ ಕಾರ್ಯಾಗಾರ ಆಯೋಜಿಸಿತ್ತು. ಇದರಲ್ಲಿ ಎಲ್ಲಾ ಪೆಸಾ ರಾಜ್ಯಗಳಾದ್ಯಂತ ತಜ್ಞರು, ಪೆಸಾ ಅಧಿಕಾರಿಗಳು ಮತ್ತು ಪ್ರತಿನಿಧಿಗಳಿ ಭಾಗವಹಿಸಿದ್ದರು. "ಪೆಸಾ ಇನ್ ಆಕ್ಷನ್: ಸ್ಟೋರೀಸ್ ಆಫ್ ಸ್ಟ್ರೆಂತ್ ಅಂಡ್ ಸೆಲ್ಫ್-ಗವರ್ನನ್ಸ್" ಎಂಬ ಶೀರ್ಷಿಕೆಯಡಿ ಎಲ್ಲಾ 10 ಪೆಸಾ ರಾಜ್ಯಗಳಿಂದ 40 ಅತ್ಯುತ್ತಮ ಅಭ್ಯಾಸಗಳ ಸಂಕಲನವನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟಿಸಲಾಯಿತು, ಅದವ್ವು 2025 ಜುಲೈ 24ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಯಶೋಗಾಥೆಗಳು ಪೆಸಾ ಪ್ರದೇಶಗಳಲ್ಲಿನ ಗ್ರಾಮ ಸಭೆಗಳು ರಾಜ್ಯ ಪೆಸಾ ನಿಯಮಗಳಿಂದ ಅವರಿಗೆ ನೀಡಲಾದ ಅಧಿಕಾರ ಚಲಾಯಿಸುತ್ತಿವೆ ಎಂಬುದನ್ನು ಪ್ರದರ್ಶಿಸುತ್ತವೆ. ಈ ಯಶೋಗಾಥೆಗಳನ್ನು ಆಧರಿಸಿದ 6 ಕಿರುಚಿತ್ರಗಳು / ವೀಡಿಯೊಗಳನ್ನು ನಿರ್ಮಿಸಿ ವ್ಯಾಪಕ ಜಾಗೃತಿಗಾಗಿ ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡಲಾಯಿತು.

13.4 ಪೆಸಾ ಅಡಿ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಗಳು

2025ರ ಅವಧಿಯಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಮುದಾಯದ ಪಾಲುದಾರರ ಸಾಮರ್ಥ್ಯ ವೃದ್ಧಿಯು ಪ್ರಮುಖ ಗಮನ ಕ್ಷೇತ್ರವಾಗಿ ಉಳಿದಿದೆ. ಪಂಚಾಯತ್ ರಾಜ್ ಸಚಿವಾಲಯದ ತರಬೇತಿ ನಿರ್ವಹಣಾ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2025-26ರ ಹಣಕಾಸು ವರ್ಷದಲ್ಲಿ (2025 ನವೆಂಬರ್ 30ರ ವರೆಗೆ) ಪೆಸಾ ಕುರಿತು ನಡೆಸಲಾದ ತರಬೇತಿ ವಿವರಗಳು ಈ ಕೆಳಗಿನಂತಿವೆ:

  • ಪೆಸಾ ರಾಜ್ಯಗಳಲ್ಲಿ 594 ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
  • ಒಟ್ಟು 32,892 ಪ್ರತಿನಿಧಿಗಳಿಗೆ ತರಬೇತಿ ನೀಡಲಾಯಿತು.
  • ಇದರಲ್ಲಿ ರಾಜ್ಯ ಮಟ್ಟದಲ್ಲಿ 401 ಪ್ರತಿನಿಧಿಗಲು, ಜಿಲ್ಲಾ ಮಟ್ಟದಲ್ಲಿ 2,863 ಮತ್ತು ಬ್ಲಾಕ್ ಮಟ್ಟದಲ್ಲಿ 29,628 ಪ್ರತಿನಿಧಿಗಳು ಸೇರಿದ್ದಾರೆ.
  • ಜಾರ್ಖಂಡ್ ಮಾತ್ರ 31,434 ಪ್ರತಿನಿಧಿಗಳಿಗೆ ತರಬೇತಿ ನೀಡಿದೆ, ಇದು ಅನುಚೂಚಿತ ಅಥವಾ ಬುಡಕಟ್ಟು ಪ್ರದೇಶಗಳಲ್ಲಿ ವ್ಯಾಪಕವಾದ ನೆಲದ ಸಾಮರ್ಥ್ಯ ವೃದ್ಧಿ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ಇದರ ಜೊತೆಗೆ ಗ್ರಾಮ ಸಭೆಯ ಬಲವರ್ಧನೆ, ಸಣ್ಣ ಅರಣ್ಯ ಉತ್ಪನ್ನಗಳು, ಸಣ್ಣ ಖನಿಜಗಳು, ಭೂ ಪರಭಕ್ಷಕಗಳ ತಡೆಗಟ್ಟುವಿಕೆ, ಸಾಲ ನೀಡಿಕೆ ಮೇಲಿನ ನಿಯಂತ್ರಣ, ಮಾದಕ ವಸ್ತುಗಳ ನಿಯಂತ್ರಣ ಮತ್ತು ಸಾಂಪ್ರದಾಯಿಕ ವಿವಾದ ಪರಿಹಾರದಂತಹ ಪ್ರಮುಖ ಪೆಸಾ ವಿಷಯಗಳ ಕುರಿತು 2ನೇ ಸುತ್ತಿನ ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರ ಕಾರ್ಯಕ್ರಮಗಳನ್ನು 2025 ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಪ್ರಭಾವಿತ ರಾಜ್ಯಗಳಲ್ಲಿ ನಡೆಸಲಾಯಿತು.

13.5 ತರಬೇತಿ ಕೈಪಿಡಿಗಳ ಅನುವಾದ

ಸಚಿವಾಲಯವು ಪೆಸಾ ಕುರಿತ ತರಬೇತಿ ಕೈಪಿಡಿಗಳನ್ನು ಸ್ಥಳೀಯ ಮತ್ತು ಬುಡಕಟ್ಟು ಭಾಷೆಗಳಿಗೆ ಅನುವಾದಿಸುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣವು ಎಲ್ಲಾ 7 ಕೈಪಿಡಿಗಳ ತೆಲುಗು ಅನುವಾದವನ್ನು ಪೂರ್ಣಗೊಳಿಸಿದರೆ, ಮಹಾರಾಷ್ಟ್ರವು ಮರಾಠಿಯಲ್ಲಿ 4 ಕೈಪಿಡಿಗಳ ಅನುವಾದ ಪೂರ್ಣಗೊಳಿಸಿತು. ಸಚಿವಾಲಯವು ಗುಜರಾತಿ, ಮರಾಠಿ, ಒಡಿಯಾ ಮತ್ತು ಸಂಥಾಲಿ ಭಾಷೆಗಳಲ್ಲಿ ಅನುವಾದಗಳಿಗಾಗಿ ಭಾಷಿಣಿಯೊಂದಿಗೆ ಮತ್ತು ಸಂಥಾಲಿ, ಮುಂಡಾರಿ, ಗೊಂಡಿ ಮತ್ತು ಭಿಲಿ ಸೇರಿದಂತೆ ಬುಡಕಟ್ಟು ಭಾಷೆಗಳಲ್ಲಿ ಅನುವಾದಗಳಿಗಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದೊಂದಿಗೆ ಆದಿ ವಾಣಿ ಪೋರ್ಟಲ್ ಮೂಲಕ ಸಹಕರಿಸಿತು. ಗೊಂಡಿ, ಭಿಲಿ ಮತ್ತು ಮುಂಡಾರಿ ಭಾಷೆಗಳಲ್ಲಿ ಅನುವಾದಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಕರಡು ತಿದ್ದುಪಡಿಗಾಗಿ ರಾಜ್ಯಗಳಿಗೆ ಕಳುಹಿಸಲಾಗಿದೆ.

13.6 ರಾಷ್ಟ್ರೀಯ ಮಟ್ಟದ ಸಂಪರ್ಕ ಮತ್ತು ಸಾಂಸ್ಕೃತಿಕ ಏಕೀಕರಣ

2025ರಲ್ಲಿ, ಪಂಚಾಯತ್ ರಾಜ್ ಸಚಿವಾಲಯವು ಗ್ರಾಮ ಸಭೆಗಳನ್ನು ಸಬಲೀಕರಣಗೊಳಿಸುವುದು ಮತ್ತು ಬುಡಕಟ್ಟು ಸ್ವ-ಆಡಳಿತ ವ್ಯವಸ್ಥೆಗಳನ್ನು ಸಂರಕ್ಷಿಸುವ ಮೇಲೆ ಒತ್ತು ನೀಡುವ ಮೂಲಕ, 1996ರ ಪಂಚಾಯತ್ (ಅನುಸೂಚಿತ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ(ಪೆಸಾ-PESA) ಅನುಷ್ಠಾನವನ್ನು ಬಲಪಡಿಸಲು ಕೇಂದ್ರೀಕೃತ ಉಪಕ್ರಮಗಳನ್ನು ಕೈಗೊಂಡಿದೆ.

ಪಂಚಾಯತ್ ರಾಜ್ ಸಚಿವಾಲಯದಿಂದ ಕಲ್ಪಿಸಲ್ಪಟ್ಟ ಮತ್ತು ಬೆಂಬಲಿತವಾದ "ಹಮಾರಿ ಪರಂಪರಾ, ಹಮಾರಿ ವಿರಾಸತ್" ಅಭಿಯಾನವನ್ನು ಜಾರ್ಖಂಡ್ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯು 2025 ಜನವರಿ 26ರಂದು ಪ್ರಾರಂಭಿಸಿತು. ಸಾಂಪ್ರದಾಯಿಕ ಸ್ವ-ಆಡಳಿತ ವ್ಯವಸ್ಥೆಗಳು, ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಸಂರಕ್ಷಿಸುವ ಬದ್ಧತೆಯನ್ನು 3,000ಕ್ಕೂ ಹೆಚ್ಚು ಹಳ್ಳಿಗಳು ಸಂಕಲ್ಪ ಮಾಡಿರುವುದನ್ನು ಕಂಡಿದೆ. ಈ ಉಪಕ್ರಮವು ಪೆಸಾ ಕಾಯ್ದೆಯ ಉದ್ದೇಶಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ, ಇದು ಬುಡಕಟ್ಟು ಪದ್ಧತಿಗಳು, ಸಂಪ್ರದಾಯಗಳು ಮತ್ತು ಸಮುದಾಯ ಸಂಸ್ಥೆಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಗ್ರಾಮ ಸಭೆಗಳಿಗೆ ವಹಿಸುತ್ತದೆ.

"ಹಮಾರಿ ಪರಂಪರೆ, ಹಮಾರಿ ವಿರಾಸತ್" ಕಾರ್ಯಕ್ರಮದ ಅಡಿ ರಾಷ್ಟ್ರೀಯ ಮಟ್ಟದ ವಿಶೇಷ ಕಾರ್ಯಕ್ರಮವನ್ನು ನವದೆಹಲಿಯಲ್ಲಿ 2025 ಏಪ್ರಿಲ್ 4ರಂದು ಆಯೋಜಿಸಲಾಗಿತ್ತು. ಭಗವಾನ್ ಬಿರ್ಸಾ ಮುಂಡಾ(ಜನಜಾತಿಯ ಗೌರವ್ ವರ್ಷ) ಅವರ 150ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಾರ್ಖಂಡ್ ಸರ್ಕಾರದ ಸಹಯೋಗದೊಂದಿಗೆ ಸಚಿವಾಲಯ ಆಯೋಜಿಸಿತ್ತು, ಜಾರ್ಖಂಡ್‌ನ 560ಕ್ಕೂ ಹೆಚ್ಚು ಬುಡಕಟ್ಟು ಪ್ರತಿನಿಧಿಗಳ ಸಮ್ಮುಖದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬುಡಕಟ್ಟು ಪರಂಪರೆಯನ್ನು ಆಚರಿಸಲಾಯಿತು.

13.7 ಪೆಸಾ ಮಹೋತ್ಸವ 2025

ಪಂಚಾಯತ್ ರಾಜ್ ಸಚಿವಾಲಯವು 2025 ಡಿಸೆಂಬರ್ 23–24ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 2 ದಿನಗಳ ಪೆಸಾ ಮಹೋತ್ಸವವನ್ನು ಆಯೋಜಿಸಿತ್ತು. ಇದರಲ್ಲಿ 10 ಪೆಸಾ ರಾಜ್ಯಗಳು ಭಾಗವಹಿಸಿದ್ದವು. ಮಹೋತ್ಸವವು ಪಂಚಾಯತ್ ಪ್ರತಿನಿಧಿಗಳು, ಬುಡಕಟ್ಟು ಸಮುದಾಯಗಳು, ಯುವಕರು, ಕುಶಲಕರ್ಮಿಗಳು ಮತ್ತು ಸಾಂಸ್ಕೃತಿಕ ಗುಂಪುಗಳನ್ನು ಒಟ್ಟುಗೂಡಿಸಿ, ಬುಡಕಟ್ಟು ಕ್ರೀಡೆ, ಸಂಸ್ಕೃತಿ, ಆಹಾರ, ಕರಕುಶಲ ವಸ್ತುಗಳು ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಪ್ರದರ್ಶಿಸುವ ರಾಷ್ಟ್ರೀಯ ವೇದಿಕೆ ಒದಗಿಸಿತು. ಪೆಸಾ ದಿನ(ಡಿಸೆಂಬರ್ 24)ದೊಂದಿಗೆ ಈ ಕಾರ್ಯಕ್ರಮವು ಪೆಸಾ  ಪೋರ್ಟಲ್ ಅನುಷ್ಠಾನದ ಪ್ರಗತಿ ಕುರಿತು ರಾಜ್ಯಗಳನ್ನು ನಿರ್ಣಯಿಸಲು ಪೆಸಾ ಸೂಚಕಗಳು, ಬುಡಕಟ್ಟು ಭಾಷೆಗಳಲ್ಲಿ ಪೆಸಾ ಕುರಿತ ತರಬೇತಿ ಮಾಡ್ಯೂಲ್‌ಗಳು ಮತ್ತು ಬುಡಕಟ್ಟು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ದಾಖಲಿಸುವ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಇ-ಪುಸ್ತಕ ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಿತು. ಮಹೋತ್ಸವ ಸಮಯದಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳು, ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗ್ರಾಮಸಭೆಯ ಚಟುವಟಿಕೆಗಳು ಬುಡಕಟ್ಟು ಪ್ರದೇಶಗಳಲ್ಲಿ ಜನರ ಭಾಗವಹಿಸುವಿಕೆ ಮತ್ತು ತಳಮಟ್ಟದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತವೆ.

ಪೆಸಾ ಮಹೋತ್ಸವವು ಬುಡಕಟ್ಟು ಪ್ರತಿಭೆಯನ್ನು ಎತ್ತಿ ತೋರಿಸುವ ಮತ್ತು ತಳಮಟ್ಟದಲ್ಲಿ ಪೆಸಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಗಮನವನ್ನು ಬಲಪಡಿಸುವ ಕೇಂದ್ರೀಕೃತ ರಾಷ್ಟ್ರೀಯ ಉಪಕ್ರಮವಾಗಿ ಮುಕ್ತಾಯವಾಯಿತು. ಪೆಸಾ ಮಹೋತ್ಸವವನ್ನು ವಾರ್ಷಿಕವಾಗಿ ಆಯೋಜಿಸುವ ಘೋಷಣೆ ಮಾಡಲಾಯಿತು. ಮುಂದಿನ ಆವೃತ್ತಿಯ ಪೆಸಾ ಮಹೋತ್ಸವ ಆಚರಣೆಯ ಆತಿಥೇಯ ರಾಜ್ಯವಾಗಿ ಛತ್ತೀಸ್‌ಗಢಕ್ಕೆ ಔಪಚಾರಿಕವಾಗಿ ದಂಡ ಹಸ್ತಾಂತರಿಸಲಾಯಿತು.

13.8 ಛತ್ತೀಸ್‌ಗಢದಲ್ಲಿ ಸಾಂಸ್ಕೃತಿಕ ದಾಖಲಾತಿ ಯೋಜನೆ

ರಾಜ್ಯದ ಎಲ್ಲಾ 42 ಬುಡಕಟ್ಟು ಸಮುದಾಯಗಳ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ದಾಖಲಿಸಲು, ಡಿಜಿಟಲೀಕರಣಗೊಳಿಸಲು ಮತ್ತು ಸಂರಕ್ಷಿಸಲು ಸಚಿವಾಲಯವು "ಮೇರಿ ಪರಂಪರೆ, ಮೇರಿ ವಿರಾಸತ್" ಎಂಬ ವಿಶಿಷ್ಟ ಯೋಜನೆಯನ್ನು ಛತ್ತೀಸ್‌ಗಢ ಸರ್ಕಾರಕ್ಕೆ ನೀಡಿತು. ವಿವರವಾದ ವೀಡಿಯೊ ಸಾಕ್ಷ್ಯಚಿತ್ರಗಳನ್ನು ರಚಿಸಲು, ಅಳಿವಿನಂಚಿನಲ್ಲಿರುವ ಸಂಪ್ರದಾಯಗಳನ್ನು ರಕ್ಷಿಸಲು, ಸ್ಥಳೀಯ ಧ್ವನಿಗಳನ್ನು ಸಬಲೀಕರಣಗೊಳಿಸಲು, ಅಂತರ-ಪೀಳಿಗೆಯ ಜ್ಞಾನ ಪ್ರಸರಣ ಬಲಪಡಿಸಲು, ಸಮುದಾಯಗಳು, ಸಂಶೋಧಕರು, ನೀತಿ ನಿರೂಪಕರು ಮತ್ತು ಸಾರ್ವಜನಿಕರು ಪ್ರವೇಶಿಸಬಹುದಾದ ದ್ವಿಭಾಷಾ(ಹಿಂದಿ-ಇಂಗ್ಲಿಷ್) ಡಿಜಿಟಲ್ ಭಂಡಾರ ರಚಿಸಲು ಈ ಯೋಜನೆಯು ಸಮುದಾಯ ಮತ್ತು ಗ್ರಾಮ ಸಭೆಯ ನೇತೃತ್ವದಲ್ಲಿ ಭಾಗವಹಿಸುವಿಕೆಯ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ.

 

*****


(ಪ್ರಕಟಣೆ ಐ.ಡಿ.: 2209833) ವಿಸಿಟರ್ ಕೌಂಟರ್ : 40
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Khasi , English , Urdu , हिन्दी , Odia