ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
“ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ" ಎಂಬ ಧೇಯದೊಂದಿಗೆ ರಾಷ್ಟ್ರೀಯ ಗ್ರಾಹಕ ದಿನ 2025 ಆಚರಣೆ
ಪ್ರಮುಖ ಡಿಜಿಟಲ್, ನಿಯಂತ್ರಣ ಮತ್ತು ಜಾಗೃತಿ ಉಪಕ್ರಮಗಳಿಗೆ ಚಾಲನೆ ನೀಡಿದ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಡಿಜಿಟಲ್ ನ್ಯಾಯವು ವೇಗ ಪಡೆಯುತ್ತಿದ್ದಂತೆ 2025ರಲ್ಲಿ 1.4 ಲಕ್ಷಕ್ಕೂ ಅಧಿಕ ಗ್ರಾಹಕ ಪ್ರಕರಣಗಳ ವಿಲೇವಾರಿ
ದೇಶಾದ್ಯಂತ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 90ಸಾವಿರಕ್ಕೂ ಅಧಿಕ ವರ್ಚುವಲ್ ವಿಚಾರಣೆ ಮತ್ತು 30 ವಲಯಗಳಲ್ಲಿ 42.6 ಕೋಟಿ ರೂ.ಮರುಪಾವತಿ: 2025ರಲ್ಲಿ ಗ್ರಾಹಕರಿಗೆ ಡಿಜಿಟಲ್ ನ್ಯಾಯ ವಿತರಣೆ
प्रविष्टि तिथि:
24 DEC 2025 5:42PM by PIB Bengaluru
ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ನವದೆಹಲಿಯ ಭಾರತ ಮಂಟಪದಲ್ಲಿಂದು 2025ರ ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಿತು. ಅದರಲ್ಲಿ ಡಿಜಿಟಲ್ ಸುಧಾರಣೆಗಳು, ದತ್ತಾಂಶ ಆಧಾರಿತ ಕುಂದುಕೊರತೆ ಪರಿಹಾರ ಮತ್ತು ಬಲವರ್ಥಿತ ನಿಯಂತ್ರಣ ಕ್ರಮ ಜಾರಿ ಮೂಲಕ ಗ್ರಾಹಕ ನ್ಯಾಯ ವಿತರಣೆಯನ್ನು ವೇಗಗೊಳಿಸುವತ್ತ ಗಮನ ಹರಿಸಲಾಗಿದೆ. 2025ರ ರಾಷ್ಟ್ರೀಯ ಗ್ರಾಹಕ ದಿನದ ವಿಷಯ - "ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ" ಎಂಬುದಾಗಿದ್ದು - ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಪ್ರಕಾರ ಬಾಕಿ ಇರುವ ಪ್ರಕರಣಗಳನ್ನು ತಗ್ಗಿಸಲು ಪಾರದರ್ಶಕತೆಯನ್ನು ವೃದ್ಧಿಸಲು ಮತ್ತು ನ್ಯಾಯದ ಲಭ್ಯತೆಯನ್ನು ಸುಧಾರಿಸಲು ಇಲಾಖೆಯ ನಿರಂತರ ಪ್ರಯತ್ನಗಳನ್ನು ಬಲವಾಗಿ ಪ್ರತಿಪಾದಿಸುತ್ತದೆ.

ಈ ವೇಳೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಹೆಚ್ಚಿನ ಪರಿಣಾಮ ಬೀರುವ ಗ್ರಾಹಕ-ಕೇಂದ್ರಿತ ಡಿಜಿಟಲ್, ನಿಯಂತ್ರಣ ಮತ್ತು ಜಾಗೃತಿ ಉಪಕ್ರಮಗಳ ಸರಣಿಗೆ ಚಾಲನೆ ನೀಡಿದರು. ಇದು ಪಾರದರ್ಶಕ, ತಂತ್ರಜ್ಞಾನ-ಸಕ್ರಿಯಗೊಳಿಸಿದ ಮತ್ತು ಸ್ಪಂದಿಸುವ ಗ್ರಾಹಕ ರಕ್ಷಣಾ ಪೂರಕ ವ್ಯವಸ್ಥೆಗೆ ಸರ್ಕಾರದ ಬದ್ಧತೆಯನ್ನು ಬಲವರ್ಧನೆಗೊಳಿಸುತ್ತದೆ.
ತಮ್ಮ ಉದ್ಘಾಟನಾ ಭಾಷಣದಲ್ಲಿ ಶ್ರೀ ಪ್ರಲ್ಹಾದ್ ಜೋಶಿ ಅವರು ”ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ' ಎಂಬ ವಿಷಯವು ಗ್ರಾಹಕ ನ್ಯಾಯವು ಸಕಾಲಿಕ, ಲಭ್ಯತೆ ಮತ್ತು ಸ್ಪಂದಿಸುವಂತೆ ನೋಡಿಕೊಳ್ಳುವ ನಮ್ಮ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ’’ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. 2025ರ ಡಿಸೆಂಬರ್ ವೇಳೆಗೆ ವರ್ಷದಲ್ಲಿ 1.4 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ, 90ಸಾವಿರಕ್ಕೂ ಅಧಿಕ ವಿಚಾರಣೆಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗಿದೆ, ಇದು ತಂತ್ರಜ್ಞಾನ ಆಧರಿಸಿದ ಗ್ರಾಹಕ ನ್ಯಾಯದ ಹೆಚ್ಚುತ್ತಿರುವ ಪ್ರಭಾವವನ್ನು ಪ್ರದರ್ಶಿಸುತ್ತದೆ.
”ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ಸದೃಢ ವ್ಯಾಜ್ಯ ಪೂರ್ವ ಕುಂದುಕೊರತೆ ಪರಿಹಾರ ಕಾರ್ಯವಿಧಾನವಾಗಿ ಹೊರಹೊಮ್ಮಿದ್ದು, 2025ರ ಏಪ್ರಿಲ್ ಮತ್ತು ಡಿಸೆಂಬರ್ ರ ನಡುವೆ 63,800ಕ್ಕೂ ಅಧಿಕ ಮರುಪಾವತಿ ಸಂಬಂಧಿತ ಕುಂದುಕೊರತೆಗಳನ್ನು ಪರಿಹರಿಸುವ ಮೂಲಕ 30 ವಲಯಗಳಲ್ಲಿ ₹42.6 ಕೋಟಿ ರೂ. ಮರುಪಾವತಿಗೆ ಅನುಕೂಲ ಮಾಡಿಕೊಟ್ಟಿದೆ. ಅನ್ಯಾಯದ ವ್ಯಾಪಾರ ಪದ್ಧತಿಗಳ ವಿರುದ್ಧ ಗ್ರಾಹಕರನ್ನು ರಕ್ಷಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು 450ಕ್ಕೂ ಕ್ರಮಗಳನ್ನು ಕೈಗೊಳ್ಳುವ ನೋಟಿಸ್ ಗಳನ್ನು ನೀಡಿದೆ ಮತ್ತು ಡಿಜಿಟಲ್ ಮಾರುಕಟ್ಟೆಗಳಲ್ಲಿ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಕರಾಳ ಮಾದರಿಗಳ ವಿರುದ್ಧ ಕ್ರಮ ಸೇರಿದಂತೆ ₹2.13 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದಂಡವನ್ನು ವಿಧಿಸಿದೆ’’ ಎಂದು ಅವರು ಹೇಳಿದರು. ’ಗ್ರಾಹಕ ದೇವೋ ಭವ' ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ಗ್ರಾಹಕ ರಕ್ಷಣೆಯು ನಮ್ಮ ಆಡಳಿತ ನೀತಿಯ ಕೇಂದ್ರವಾಗಿದೆ, ಪ್ರತಿಯೊಬ್ಬ ಗ್ರಾಹಕರಿಗೆ ನ್ಯಾಯಯುತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಮಾರುಕಟ್ಟೆಗಳನ್ನು ಖಾತ್ರಿಪಡಿಸುತ್ತದೆ.


ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಖಾತೆಯ ರಾಜ್ಯ ಸಚಿವರಾದ ಗೌರವಾನ್ವಿತ ಶ್ರೀ ಬಿ.ಎಲ್. ವರ್ಮಾ ಅವರು, ”ಗ್ರಾಹಕರು ಇಂದು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಭಾರತವನ್ನು ಬಲವರ್ಧನೆಗೊಳಿಸುವಲ್ಲಿ ಪ್ರಬಲ ಶಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಪ್ರಮುಖ ಉಪಕ್ರಮಗಳು ಗ್ರಾಹಕರನ್ನು ಮಾಹಿತಿಯುಕ್ತ, ಅರಿವುಳ್ಳ ಮತ್ತು ಹಕ್ಕುಗಳನ್ನು ಸಕ್ರಿಯಗೊಳಿಸುವ ಮೂಲಕ ಸಬಲೀಕರಣಗೊಳಿಸಿವೆ. ”ಸಣ್ಣ ಮಾರಾಟಗಾರರಿಂದ ಹಿಡಿದು ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳುವ ಸ್ಥಳೀಯ ಮಾರುಕಟ್ಟೆಗಳವರೆಗೆ, ಭಾರತವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ರಾಷ್ಟ್ರ ಎಂದು ಪ್ರದರ್ಶಿಸಿದೆ. ಇದು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ. 'ಜಾಗೋ ಗ್ರಾಹಕ ಜಾಗೋ' ಅಭಿಯಾನದಂತಹ ನಿರಂತರ ಸಂಪರ್ಕದ ಮೂಲಕ ಎಲ್ಲಾ ವರ್ಗಗಳ ನಾಗರಿಕರು ಈಗ ಎಲ್ಲಿ ಪರಿಹಾರ ಪಡೆದುಕೊಳ್ಳಬೇಕೆಂಬುದನ್ನು ಅರಿತಿದ್ದಾರೆ’’ ಎಂದು ಅವರು ಹೇಳಿದರು.
ಕಾರ್ಯಕ್ರಮದ ವೇಳೆ ಕೈಗೊಂಡ ಪ್ರಮುಖ ಸಾಂಸ್ಥಿಕ ಸಹಯೋಗಗಳು, ಘೋಷಣೆಗಳು ಮತ್ತು ಚಾಲನೆ ನೀಡಿದ ಉಪಕ್ರಮಗಳು


ಎ. ಸಹಕಾರ ಮತ್ತು ಜನ ಸಂಪರ್ಕ ವಿಸ್ತರಣೆಗೆ ಕಾರ್ಯತಂತ್ರದ ಒಪ್ಪಂದಗಳಿಗೆ ಸಹಿ
• ಪರೀಕ್ಷೆ, ಸಂಶೋಧನೆ ಮತ್ತು ಗುಣಮಟ್ಟದ ಭರವಸೆಯಲ್ಲಿ ಸಹಕಾರ ವೃದ್ಧಿಸುವ ರಾಷ್ಟ್ರೀಯ ಪರೀಕ್ಷಾ ಭವನ (ಎನ್.ಟಿ.ಹೆಚ್) ಮತ್ತು ರಕ್ಷಣಾ ಸಾಮಗ್ರಿಗಳು ಮತ್ತು ಅಂಗಡಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (DMSRDE), DRDO ನಡುವೆ ಒಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು.
• ರಾಷ್ಟ್ರೀಯ ಪರೀಕ್ಷಾ ಭವನ (NTH) ಮತ್ತು ಭಾರತ ಅಂಚೆ ನಡುವೆ ಸಂಪರ್ಕ, ಸರಕು ಸಾಗಾಣೆ, ಬೆಂಬಲ ಮತ್ತು ಸೇವಾ ವಿತರಣೆ ವಿಸ್ತರಿಸುವ ಗುರಿ ಹೊಂದಿರುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಸಹಕಾರಿ ಚಿಲ್ಲರೆ ಕಾರ್ಯಾಚರಣೆಗಳು ಮತ್ತು ಗ್ರಾಹಕ ಲಭ್ಯತೆ ಬಲವರ್ಧನೆಗೆ ಕೇಂದ್ರೀಯ ಭಂಡಾರ್ ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್.ಸಿ.ಸಿ.ಎಫ್ ) ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಬಿ. ಡಿಜಿಟಲ್ ಉಪಕ್ರಮಗಳು
● AI-ಆಧರಿಸಿದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್.ಸಿ.ಹೆಚ್) ಡ್ಯಾಶ್‌ಬೋರ್ಡ್ – ದತ್ತಾಂಶ ಆಧರಿತ ಕುಂದುಕೊರತೆ ಪರಿಹಾರ ಮತ್ತು ಪೂರ್ವಭಾವಿ ಗ್ರಾಹಕ ರಕ್ಷಣೆಯನ್ನು ಬಲಪಡಿಸಲು ಐಐಟಿ ಕಾನ್ಪುರದ ಸಹಯೋಗದೊಂದಿಗೆ ಆರಂಭಿಸಲಾಗಿದೆ.
● ದುರಸ್ತಿ ಸೂಚ್ಯಂಕ ಲೋಗೋ - ಗೌರವಾನ್ವಿತ ಸಚಿವರು ಅನಾವರಣಗೊಳಿಸಿದರು, MyGov ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ದೆಹಲಿಯ ಗ್ರಾಹಕ ಕಾನೂನಿನ ಅಧ್ಯಕ್ಷರೊಂದಿಗೆ ರಾಷ್ಟ್ರವ್ಯಾಪಿ ಸ್ಪರ್ಧೆಯ ಮೂಲಕ ಸುಸ್ಥಿರ ಬಳಕೆ ಮತ್ತು ದುರಸ್ತಿ ಹಕ್ಕನ್ನು ಉತ್ತೇಜಿಸುವ ಪರಿಕಲ್ಪನೆ ಹೊಂದಿದ್ದಾರೆ.
● ಗ್ರಾಹಕ ಜಾಗೃತಿ ಕುರಿತ ರಾಷ್ಟ್ರೀಯ ರಸಪ್ರಶ್ನೆ - ಗ್ರಾಹಕರ ಹಕ್ಕುಗಳು ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳೊಂದಿಗೆ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು MyGov ವೇದಿಕೆಯಲ್ಲಿ ಆರಂಭಿಸಲಾಗಿದ್ದು, 2026ರ ಮಾರ್ಚ್ 15 ರವರೆಗೆ ಭಾಗವಹಿಸಲು ಮುಕ್ತವಾಗಿದೆ.
● ಗುವಾಹಟಿಯ ರಾಷ್ಟ್ರೀಯ ಪರೀಕ್ಷಾ ಭವನ (NER) ನಲ್ಲಿ ಪ್ರಯೋಗಾಲಯ ದತ್ತಾಂಶ ಸ್ವಾಧೀನ ವ್ಯವಸ್ಥೆ (LDAS) - ಪರೀಕ್ಷಾ ಮೂಲಸೌಕರ್ಯವನ್ನು ಡಿಜಿಟಲ್ ರೂಪದಲ್ಲಿ ಆಧುನೀಕರಿಸಿ ಉದ್ಘಾಟಿಸಲಾಗಿದೆ.

ಸಿ. ಕಾನೂನು ಮಾಪನಶಾಸ್ತ್ರ ಚೌಕಟ್ಟಿನಡಿಯಲ್ಲಿ ನಿಯಂತ್ರಣ ಸುಧಾರಣಾ ಕ್ರಮಗಳು
● ಜಿಎಟಿಸಿ ನಿಯಮಗಳ ಸುಧಾರಣೆಗಳು - ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರದ ನಿಯಮಗಳಲ್ಲಿ ಪ್ರಮುಖ ಸುಧಾರಣೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.
● ಮೊದಲ ಜಿಎಟಿಸಿ ಪರಿಶೀಲನಾ ಪ್ರಮಾಣಪತ್ರ - ಕೋಲ್ಕತ್ತಾದ ರಾಷ್ಟ್ರೀಯ ಪರೀಕ್ಷಾ ಭವನ(ಪೂರ್ವ ವಿಭಾಗದ)ದಿಂದ ನೀಡಲಾಗಿದೆ.
● Evidential Breath Analysers ಹೊಸ ನಿಯಮಗಳು - ನಿಯಂತ್ರಕ ಅನುಸರಣೆಯನ್ನು ಬಲಪಡಿಸಲು ಸೂಚಿಸಲಾಗುತ್ತದೆ.
● ಹೆಚ್ಚಿನ ನಿಖರತೆಯ ತೂಕದ ಉಪಕ್ರಮಗಳು - ಗ್ರಾಹಕರನ್ನು ರಕ್ಷಿಸಲು ಚಿನ್ನ ಮತ್ತು ಅಮೂಲ್ಯ ಲೋಹಗಳ ನಿಖರವಾದ ಅಳತೆಯನ್ನು ಖಚಿತಪಡಿಸಿಕೊಳ್ಳುವುದು.
ನಿಯಂತ್ರಕ ಸುಧಾರಣೆಗಳ ಕ್ಷೇತ್ರದಲ್ಲಿ, ತೂಕ ಮತ್ತು ಅಳತೆಗಳ ಪರಿಶೀಲನೆಗಾಗಿ ಖಾಸಗಿ ಸಂಸ್ಥೆಗಳ ಅಧಿಕಾರ ಸೇರಿ ಕಾನೂನು ಮಾಪನಶಾಸ್ತ್ರ (ಸರ್ಕಾರ ಅನುಮೋದಿತ ಪರೀಕ್ಷಾ ಕೇಂದ್ರ - ಜಿಎಟಿಸಿ) ನಿಯಮ 2013ರ ಅಡಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ವ್ಯವಹಾರ ಸುಗಮಗೊಳಿಸಲು 11 ಘಟಕಗಳಿಗೆ ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ ಸ್ಥಾನಮಾನ ನೀಡಲಾಯಿತು. ಖಾಸಗಿ ಘಟಕಗಳಿಗೆ ಜಿಎಟಿಸಿ ಸ್ಥಾನಮಾನ ನೀಡುತ್ತಿರುವುದು ಇದೇ ಮೊದಲು. ಸುಧಾರಣೆಯು ಉಸಿರಾಟದ ವಿಶ್ಲೇಷಕಗಳು, ತೂಕದ ಮಾಪಕಗಳು, ನೀರಿನ ಮೀಟರ್‌ಗಳು ಮತ್ತು ಇತರ ಉಪಕರಣಗಳನ್ನು ಒಳಗೊಂಡಂತೆ ಪರಿಶೀಲನೆಗೆ ಒಳಪಡುವ ಸಾಧನಗಳ ವ್ಯಾಪ್ತಿಯನ್ನು ವಿಸ್ತರಿಸಿದೆ.


ಡಿ. ಮಾನದಂಡಗಳು ಮತ್ತು ಗುಣಮಟ್ಟ ಭರವಸೆ
● ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ರಾಷ್ಟ್ರೀಯ ಮಟ್ಟದ ಆನ್‌ಲೈನ್ ರಸಪ್ರಶ್ನೆ - ಎಂಒಯು ಪಾಲುದಾರ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾಗಿದೆ.
● ಪ್ರಮುಖ ಗ್ರಾಹಕ-ಸ್ನೇಹಿ ವಲಯಗಳನ್ನು ಒಳಗೊಂಡ ಐದು ಹೊಸ ಭಾರತೀಯ ಮಾನದಂಡಗಳನ್ನು ಬಿಡುಗಡೆ ಮಾಡಲಾಗಿದೆ.
ಇ. ಗ್ರಾಹಕ ಜಾಗೃತಿ ಮತ್ತು ಶಿಕ್ಷಣ
● ’ಸಬಲೀಕರಣಗೊಂಡ ಗ್ರಾಹಕರು' ಅಭಿಯಾನ - ಜಾಗೋ ಗ್ರಾಹಕ ಜಾಗೋ ಕಾರ್ಯಕ್ರಮದ ಅಡಿಯಲ್ಲಿ ಮೆಟಾ ಸಹಯೋಗದೊಂದಿಗೆ ಆರಂಭಿಸಲಾಗಿದೆ.
● 'ಸ್ಮಾರ್ಟ್ ಗ್ರಾಹಕ ಸವಾಲು' - ಜಾಗೋ ಗ್ರಾಹಕ ಸವಾಲು ಕಾರ್ಯಕ್ರಮದ ಅಡಿಯಲ್ಲಿ ಗ್ಯಾಮಿಫೈಡ್ ಕಲಿಕೆ ಉಪಕ್ರಮ.
● ಗ್ರಾಹಕ ಜಾಗೃತಿ ಭಾರತ ಪ್ರವಾಸ (ಉಪ್ಭೋಕ್ತ ಜಾಗೃಕ್ತ ಭಾರತ ಯಾತ್ರೆ) - ಗ್ರಾಹಕ ಜಾಗೃತಿ ಮತ್ತು ನ್ಯಾಯಯುತ ಮಾರುಕಟ್ಟೆ ಪದ್ಧತಿಗಳನ್ನು ಉತ್ತೇಜಿಸಲು ಭಾರತದ ಗ್ರಾಹಕ ಒಕ್ಕೂಟದ ನೇತೃತ್ವದಲ್ಲಿ ದೇಶಾದ್ಯಂತ ವರ್ಚುವಲ್ ಆಗಿ ಆರಂಭಿಸಲಾಗಿದೆ.


ಎಫ್. ಪ್ರಕಟಣೆಗಳು ಮತ್ತು ಜ್ಞಾನ ಸಂಪನ್ಮೂಲಗಳನ್ನು ಬಿಡುಗಡೆ
● ಇ-ಪುಸ್ತಕ: ”ತರಬೇತಿ ಮತ್ತು ಗ್ರಾಹಕ ಹಕ್ಕುಗಳು”- ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದ (NUSRL) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ, ಇದು ತರಬೇತಿ ಸಂಸ್ಥೆಗಳ ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ ಮತ್ತು ವಲಯದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ತೆಗೆದುಕೊಂಡ ಸಾಕ್ಷ್ಯಾಧಾರಿತ ಕ್ರಮಗಳನ್ನು ದಾಖಲಿಸುತ್ತದೆ.
● ಇ-ಪುಸ್ತಕ: “ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ: ಭಾರತದಲ್ಲಿ ಗ್ರಾಹಕ ಹಕ್ಕುಗಳ ದೃಶ್ಯ ಕ್ರಾನಿಕಲ್ (ಜುಲೈ 2020 - ಆಗಸ್ಟ್ 2025)” - ಐದು ವರ್ಷಗಳಲ್ಲಿ ಪ್ರಮುಖ ಜಾರಿ ಕ್ರಮಗಳು ಮತ್ತು ನೀತಿ ಮಧ್ಯಸ್ಥಿಕೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಅಂಶಗಳು ಬೆಂಗಳೂರಿನ NLSIU ನೊಂದಿಗೆ ಬಿಡುಗಡೆ ಮಾಡಲಾಗಿದೆ.
● ತೀರ್ಪುಗಳ ಇ-ಡೈಜೆಸ್ಟ್ - ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು NCDRC ನಿರ್ಧಾರಗಳ ಏಕೀಕೃತ ಉಲ್ಲೇಖವನ್ನು ಒದಗಿಸಲು NLU ದೆಹಲಿ ಅಭಿವೃದ್ಧಿಪಡಿಸಿದೆ.
● NLU ದೆಹಲಿ ನೇತೃತ್ವದಲ್ಲಿ ಸುದ್ದಿಪತ್ರ - ಗ್ರಾಹಕರು, ನಿಯಂತ್ರಕರು, ನೀತಿ ನಿರೂಪಕರು ಮತ್ತು ವ್ಯವಹಾರಗಳಿಗೆ ಸಂಕ್ಷಿಪ್ತ ಸಾರಾಂಶಗಳೊಂದಿಗೆ 2024ರ ಪ್ರಮುಖ CCPA ನಿರ್ಧಾರಗಳನ್ನು ಸಂಗ್ರಹಿಸುತ್ತದೆ. ಈ ಪ್ರಕಟಣೆಗಳನ್ನು ಸಚಿವಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅವರ ಉದ್ಘಾಟನಾ ಭಾಷಣದೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಅವರು “ಈ ಡಿಜಿಟಲ್ ಯುಗದಲ್ಲಿ, ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದೇವೆ, ಏಕೆಂದರೆ ಅದು ನಾವು ಸಂಪರ್ಕಿಸುವ, ಕಾರ್ಯನಿರ್ವಹಿಸುವ ಮತ್ತು ಈಗ ನ್ಯಾಯವನ್ನು ಹುಡುಕುವ ವಿಧಾನವನ್ನು ಪರಿವರ್ತಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯನ್ನು ಓಮ್ನಿಚಾನಲ್ ಮಾದರಿಯಲ್ಲಿ ಕಾರ್ಯನಿರ್ವಹಿಸಲು ವಿಸ್ತರಿಸಲಾಗಿದೆ ಮತ್ತು ವರ್ಚುವಲ್ ವಿಚಾರಣೆಗಳಲ್ಲಿ ಕ್ರಾಂತಿಯನ್ನುಂಟುಮಾಡಲು ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರಾಹಕರು ಎಲ್ಲಿಂದ ಬೇಕಾದರೂ ಭಾಗವಹಿಸಬಹುದು ಮತ್ತು ಆರಾಮ ಹಾಗೂ ಸುಲಭವಾಗಿ ದೂರುಗಳನ್ನು ಸಲ್ಲಿಸಬಹುದು. ಇದೇ ವೇಳೆ ಯಾವುದೇ ಗ್ರಾಹಕರು ಹಿಂದೆ ಉಳಿಯುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾವು ಮಾನವ ಸ್ಪರ್ಶವನ್ನು ಸಂರಕ್ಷಿಸುತ್ತಿದ್ದೇವೆ. ಒಟ್ಟಾರೆ ನಾವು ನ್ಯಾಯಯುತ, ಸಮಾನ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ’’ ಎಂದರು.

ಈ ಕಾರ್ಯಕ್ರಮದಲ್ಲಿ ಎನ್ ಸಿಡಿಆರ್ ಸಿ ಸದಸ್ಯರು ಮತ್ತು ರಾಜ್ಯ ಮತ್ತು ಜಿಲ್ಲಾ ಗ್ರಾಹಕ ಆಯೋಗಗಳ ಅಧ್ಯಕ್ಷರು/ಸದಸ್ಯರು, ಬಿ.ಐ.ಎಸ್, ಎನ್.ಟಿ.ಹೆಚ್, ಕಾನೂನು ಮಾಪನಶಾಸ್ತ್ರ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಮತ್ತು ರಾಜ್ಯಗಳು, ಶೈಕ್ಷಣಿಕ, ಗ್ರಾಹಕ ಸಂಸ್ಥೆಗಳು, ಕಾನೂನು ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು ಮತ್ತು ಇ-ವಾಣಿಜ್ಯ ವೇದಿಕೆಗಳ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಉದ್ಘಾಟನಾ ಅಧಿವೇಶನದ ನಂತರ ಮೂರು ತಾಂತ್ರಿಕ ಗೋಷ್ಠಿಗಳನ್ನು ಈ ಕೆಳಗಿನವುಗಳಲ್ಲಿ ನಡೆಸಲಾಗುತ್ತದೆ:
1. ವ್ಯಾಜ್ಯ ಪೂರ್ವ (ಎನ್.ಸಿ.ಹೆಚ್) ಮೂಲಕ ಗ್ರಾಹಕರ ಕುಂದುಕೊರತೆ ಪರಿಹಾರ ಬಲವರ್ಧನೆಗೊಳಿಸುವುದು
2. ಇ-ಜಾಗೃತಿ: ಗ್ರಾಹಕ ನ್ಯಾಯ ವಿತರಣೆ ಪರಿವರ್ತನೆ
3. ಡಿಜಿಟಲ್ ಮಾರುಕಟ್ಟೆಗಳಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿಗಳು ಮತ್ತು ಕರಾಳ ಮಾದರಿಗಳನ್ನು ಎದುರಿಸುವುದು

ಭಾರತದ ಗ್ರಾಹಕ ರಕ್ಷಣಾ ಚೌಕಟ್ಟಿಗೆ ಅಡಿಪಾಯ ಹಾಕಿದ ಗ್ರಾಹಕ ರಕ್ಷಣಾ ಕಾಯ್ದೆ 1986ರ ಜಾರಿಗೆ ಬಂದ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ. ಕಾನೂನು, ನಿಯಂತ್ರಕ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳನ್ನು ನಿರಂತರವಾಗಿ ಬಲಪಡಿಸುವ ಮೂಲಕ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಭಾರತ ಸರ್ಕಾರದ ಬದ್ಧತೆಯನ್ನು ಈ ಆಚರಣೆ ಪುನರುಚ್ಚರಿಸುತ್ತದೆ. ಗ್ರಾಹಕ ರಕ್ಷಣಾ ಕಾಯ್ದೆ 2019 ತಂತ್ರಜ್ಞಾನ ಆಧರಿತ ಕುಂದುಕೊರತೆ ಪರಿಹಾರ, ಆಧುನಿಕ ಜಾರಿ ಸಾಧನಗಳು ಮತ್ತು ವರ್ಧಿತ ನಿಯಂತ್ರಕ ಮೇಲ್ವಿಚಾರಣೆ ಪರಿಚಯಿಸುವ ಮೂಲಕ ಈ ಚೌಕಟ್ಟನ್ನು ಮತ್ತಷ್ಟು ಬಲಪಡಿಸಿದೆ.
ಇಲಾಖೆಯು 2025ರ ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸುತ್ತಿರುವುದರಿಂದ ಗ್ರಾಹಕ ಹಕ್ಕುಗಳ ಪರಿಣಾಮಕಾರಿ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಲು ಸಾಂಸ್ಥಿಕ ಸುಧಾರಣೆಗಳು, ಡಿಜಿಟಲ್ ನಾವೀನ್ಯತೆ ಮತ್ತು ಪಾಲುದಾರರ ಸಹಯೋಗಕ್ಕೆ ತನ್ನ ಬದ್ಧತೆ ಪುನರುಚ್ಚರಿಸುತ್ತದೆ.
*****
(रिलीज़ आईडी: 2208275)
आगंतुक पटल : 15