ಸಹಕಾರ ಸಚಿವಾಲಯ
azadi ka amrit mahotsav

ಪಂಚಕುಲದಲ್ಲಿ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಬ್ಕೊ) ಆಯೋಜಿಸುತ್ತಿರುವ ರಾಷ್ಟ್ರೀಯ ಸಹಕಾರಿ ಸಮ್ಮೇಳನವನ್ನು ಉದ್ದೇಶಿಸಿ ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾಷಣ ಮಾಡಲಿದ್ದಾರೆ


“ಸಹಕಾರದ ಮೂಲಕ ಸಮೃದ್ಧಿ - ಸುಸ್ಥಿರ ಕೃಷಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ” ಕುರಿತು ರಾಷ್ಟ್ರೀಯ ಚರ್ಚೆಗಳು ನಡೆಯಲಿದೆ

ಸುಸ್ಥಿರ ಕೃಷಿ, ಪಿ.ಎ.ಸಿ.ಎಸ್ ಪಾತ್ರದ ವಿಸ್ತರಣೆ, ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಸ್ಥಿರತೆ ಮತ್ತು ಸಹಕಾರಿ ಆಧಾರಿತ ಕೃಷಿ ಮಾದರಿಗಳಿಗೆ ಹವಾಮಾನ ಬದಲಾವಣೆಯ ಸವಾಲುಗಳ ಕುರಿತು ಚರ್ಚೆಗಳು ನಡೆಯಲಿದೆ

ಜಾಟುಸಾನ (ರೇವರಿ) ದಲ್ಲಿ ಸಲೇಂಪುರ (ಭಿವಾನಿ) ಸ್ಥಾವರದ ಹಾಲು ತಂಪಾಗಿಸುವ ಕೇಂದ್ರ ಮತ್ತು ಹಫೀಡ್  ಹಿಟ್ಟು (ಅಟ್ಟಾ) ಗಿರಣಿಯ ಇ-ಉದ್ಘಾಟನೆ ಕಾರ್ಯ ನಡೆಯಲಿದೆ

प्रविष्टि तिथि: 23 DEC 2025 5:07PM by PIB Bengaluru

ಹರಿಯಾಣದ ಪಂಚಕುಲದ ಇಂದ್ರಧನುಷ್ ಸಭಾಂಗಣದಲ್ಲಿ ಡಿಸೆಂಬರ್ 24, 2025 ರಂದು "ಸಹಕಾರದ ಮೂಲಕ ಸಮೃದ್ಧಿ - ಸುಸ್ಥಿರ ಕೃಷಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ" ಎಂಬ ಶೀರ್ಷಿಕೆಯಲ್ಲಿ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಬ್ಕೊ) ಸಂಸ್ಥೆಯು ರಾಷ್ಟ್ರೀಯ ಸಹಕಾರಿ ಸಮ್ಮೇಳನವನ್ನು ಆಯೋಜಿಸುತ್ತಿದೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ನೀತಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಚರ್ಚಿಸಲು, ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್) ಪಾತ್ರವನ್ನು ವಿಸ್ತರಿಸುವುದು, ಸಣ್ಣ ರೈತರ ಮತ್ತು ಅತಿಸಣ್ಣ ರೈತರುಗಳ ಆದಾಯದ ಸ್ಥಿರತೆಯನ್ನು ಖಚಿತಪಡಿಸುವುದು, ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳಿಗೆ ಅನುಗುಣವಾಗಿ ಸಹಕಾರಿ ಆಧಾರಿತ ಕೃಷಿ ಮಾದರಿಗಳನ್ನು ಬಲಪಡಿಸುವುದು. ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಈ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಹಕಾರದ ಮೂಲಕ ಸಮೃದ್ಧಿ" ಎಂಬ ದೂರದೃಷ್ಟಿಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತ್ತು ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ, ರೈತರ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ತಳಮಟ್ಟದಲ್ಲಿ ಸಹಕಾರಿ ಮಾದರಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಮ್ಮೇಳನವು ಮಹತ್ವದ ಉದ್ದೇಶ ಹಾಗೂ ಉಪಕ್ರಮವಾಗಿದೆ.

ಹರಿಯಾಣದ ಮುಖ್ಯಮಂತ್ರಿ ಶ್ರೀ ನಾಯಬ್ ಸಿಂಗ್ ಸೈನಿ ಅವರು ಸಮ್ಮೇಳನದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ, ಕೇಂದ್ರ ಸಹಕಾರ ಸಚಿವಾಲಯದ ರಾಜ್ಯ ಖಾತೆಯ ಸಚಿವರುಗಳಾದ ಶ್ರೀ ಕೃಶನ್ ಪಾಲ್ ಗುರ್ಜರ್ ಮತ್ತು ಶ್ರೀ ಮುರಳೀಧರ್ ಮೊಹೋಲ್, ಹರಿಯಾಣ ಸಹಕಾರ ಸಚಿವ ಡಾ. ಅರವಿಂದ್ ಕುಮಾರ್ ಶರ್ಮಾ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶ್ಯಾಮ್ ಸಿಂಗ್ ರಾಣಾ ಅವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ, ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸಲೆಂಪುರ (ಭಿವಾನಿ) ಸ್ಥಾವರದ ಹಾಲು ಶೀತಲೀಕರಿಸುವ(ತಂಪಾಗಿಸುವ) ಕೇಂದ್ರ ಮತ್ತು ಜಾಟುಸಾನ (ರೇವಾರಿ) ನಲ್ಲಿರುವ ಹಫೀಡ್ ಹಿಟ್ಟು(ಅಟ್ಟಾ) ಗಿರಣಿಯನ್ನು ಇ-ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರು ಹರಿಯಾಣ ರಾಜ್ಯದ ಸಹಕಾರಿ ಬ್ಯಾಂಕುಗಳ ಫಲಾನುಭವಿಗಳಿಗೆ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ಗಳನ್ನು ವಿತರಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ, ಹರಿಯಾಣದಲ್ಲಿ ಕ್ರಿಬ್ಕೊ ಸ್ಥಾಪಿಸಿದ ಎಂ-ಪಾಕ್ಸ್ ಗಳ ಅಧ್ಯಕ್ಷರುಗಳಿಗೆ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ, ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವರು ಅಂತರರಾಷ್ಟ್ರೀಯ ಸಹಕಾರಿ ವರ್ಷದಲ್ಲಿ (ಐವೈಸಿ) ಕೈಗೊಳ್ಳಲಾಗುತ್ತಿರುವ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸುವ ಪೋರ್ಟಲ್ ಅನ್ನು ಸಹ ಕೇಂದ್ರ ಸಚಿವರು ಉದ್ಘಾಟಿಸಲಿದ್ದಾರೆ.

ಸಮ್ಮೇಳನವು ಸುಧಾರಿತ ಕೃಷಿ ಜ್ಞಾನದ ವಿನಿಮಯ, ಕೈಗೆಟುಕುವ ಸಾಲದ ಲಭ್ಯತೆ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಮತ್ತು ಸಹಕಾರಿ ಚೌಕಟ್ಟಿನ ಮೂಲಕ ರೈತರಿಗೆ ಸಾವಯವ ಮತ್ತು ಹವಾಮಾನ-ನಿರೋಧಕ ಕೃಷಿ ಪದ್ಧತಿಗಳನ್ನು ತಲುಪಿಸುವುದರ ಮೇಲೆ ವಿಶೇಷ ಒತ್ತು ನೀಡಲಿದೆ. ಸಹಕಾರ ಸಚಿವಾಲಯದ ಇತ್ತೀಚಿನ ನೀತಿ ಉಪಕ್ರಮಗಳು, ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್)  ಬಲವರ್ಧನೆ ಮತ್ತು ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಬ್ಕೊ) ನಂತಹ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ಪಾತ್ರವನ್ನು ಸಹ ಈ ಸಮ್ಮೇಳನದಲ್ಲಿ ವಿವರವಾಗಿ ಚರ್ಚಿಸಲಾಗುವುದು.

ಕೇಂದ್ರ ಸಹಕಾರ ಸಚಿವಾಲಯ, ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಬ್ಕೊ) ಮತ್ತು ಹರಿಯಾಣ ಸರ್ಕಾರದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಗಳು, ಪ್ರಾಥಮಿಕ ಕೃಷಿ ಸಾಲ ಸಂಘಗಳು(ಪಾಕ್ಸ್), ರೈತ ಸಂಘಟನೆಗಳು ಮತ್ತು ಇತರ ಪ್ರಮುಖ ಪಾಲುದಾರರ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಬ್ಕೊ), ಹಲವಾರು ವರ್ಷಗಳಿಂದ, ರಸಗೊಬ್ಬರ ಪೂರೈಕೆ, ಕೃಷಿ ಸಲಹಾ ಸೇವೆಗಳು ಮತ್ತು ರೈತ ಕೇಂದ್ರಿತ ಉಪಕ್ರಮಗಳ ಮೂಲಕ ದೇಶಾದ್ಯಂತ ಲಕ್ಷಾಂತರ ರೈತರಿಗೆ ಪ್ರಯೋಜನವನ್ನು ನೀಡುತ್ತಾ ಬಂದಿದೆ. ಪಂಚಕುಲದಲ್ಲಿ ಆಯೋಜಿಸಲಾಗುತ್ತಿರುವ ರಾಷ್ಟ್ರೀಯ ಸಮ್ಮೇಳನವು ಅಂತರರಾಷ್ಟ್ರೀಯ ಸಹಕಾರಿ ವರ್ಷ - 2025ರ ಅಡಿಯಲ್ಲಿ ಸಹಕಾರಿ ಚಳುವಳಿಗೆ ಹೊಸ ದಿಕ್ಕನ್ನು ಒದಗಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

 

*****


(रिलीज़ आईडी: 2207925) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Punjabi , Gujarati