ರೈಲ್ವೇ ಸಚಿವಾಲಯ
ಡಿಸೆಂಬರ್ 8ರಿಂದ 14ರವರೆಗೆ ಭಾರತೀಯ ರೈಲ್ವೆ ಒಟ್ಟಾರೆ ಶೇ.80 ರಷ್ಟು ಸಮಯಪ್ರಜ್ಞೆ ಸಾಧಿಸಿದೆ 22 ವಿಭಾಗಗಳು ಶೇ.90 ಮೀರಿವೆ
ರತ್ಲಂ, ತಿರುಚಿರಾಪಳ್ಳಿ ಮತ್ತು ಮಧುರೈ ವಿಭಾಗಗಳು ಶೇ.96ಕ್ಕಿಂತ ಹೆಚ್ಚು ಸಮಯಪ್ರಜ್ಞೆಯೊಂದಿಗೆ ಮುನ್ನಡೆ ಸಾಧಿಸಿವೆ
प्रविष्टि तिथि:
18 DEC 2025 4:09PM by PIB Bengaluru
ಭಾರತೀಯ ರೈಲ್ವೆಯು ಕಾರ್ಯಾಚರಣೆಯ ದಕ್ಷ ತೆಯನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರಿಗೆ ಸಮಯೋಚಿತ ಸೇವೆಗಳನ್ನು ಖಾತ್ರಿಪಡಿಸುವತ್ತ ಗಮನ ಹರಿಸುವುದನ್ನು ಮುಂದುವರಿಸಿದೆ. ಡಿಸೆಂಬರ್ 8-14 ರವರೆಗೆ, ದೇಶಾದ್ಯಂತ ರೈಲುಗಳ ಒಟ್ಟಾರೆ ಸಮಯಪ್ರಜ್ಞೆ ಶೇಕಡ 80ರಷ್ಟಿದೆ. ಇದು ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಲು ರೈಲ್ವೆ ವಿಭಾಗಗಳ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಎಲ್ಲಾ ವಿಭಾಗಗಳಲ್ಲಿ, 37 ವಿಭಾಗಗಳು ಶೇ.80ಕ್ಕಿಂತ ಹೆಚ್ಚಿನ ಸಮಯಪ್ರಜ್ಞೆಯನ್ನು ಸಾಧಿಸಿದ್ದರೆ, 22 ವಿಭಾಗಗಳು ಶೇ.90ಕ್ಕಿಂತ ಹೆಚ್ಚಿನ ಸಮಯಪ್ರಜ್ಞೆಯನ್ನು ದಾಖಲಿಸಿವೆ ಮತ್ತು 10 ವಿಭಾಗಗಳು ಶೇ.95ರಷ್ಟು ಗಡಿಯನ್ನು ಮೀರಿವೆ.
ಅತ್ಯುತ್ತಮ ಪ್ರದರ್ಶನ ನೀಡಿದ ವಿಭಾಗಗಳಲ್ಲಿ, ರತ್ಲಂ (ಪಶ್ಚಿಮ ರೈಲ್ವೆ) ಗಮನಾರ್ಹವಾಗಿ ಶೇ.98.5ರಷ್ಟು ಸಮಯಪ್ರಜ್ಞೆಯನ್ನು ದಾಖಲಿಸಿದೆ. ತಿರುಚಿರಾಪಳ್ಳಿ (ದಕ್ಷಿಣ ರೈಲ್ವೆ)ಶೇ. 97.5ರಷ್ಟು ಮತ್ತು ಮಧುರೈ (ದಕ್ಷಿಣ ರೈಲ್ವೆ) ಶೇ.96.7ರಷ್ಟುಅನ್ನು ದಾಖಲಿಸಿದೆ.
ವರ್ಧಿತ ದಕ್ಷ ತೆಯು ರೈಲು ಕಾರ್ಯಾಚರಣೆಯನ್ನು ಸುಗಮಗೊಳಿಸಲು ಕಾರಣವಾಗಿದ್ದು, ಪ್ರಯಾಣಿಕರು ಮತ್ತು ಸರಕು ಸೇವೆಗಳಿಗೆ ಪ್ರಯೋಜನವನ್ನು ನೀಡುತ್ತದೆ.
*****
(रिलीज़ आईडी: 2206273)
आगंतुक पटल : 9