ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಒಟ್ಟಾರೆಯಾಗಿ ಕಾರ್ಮಿಕ ಬಲ ಭಾಗವಹಿಸುವಿಕೆಯ ದರ (ಎಲ್.ಎಫ್.ಪಿ.ಆರ್) ಮತ್ತು ಕಾರ್ಮಿಕರ ಜನಸಂಖ್ಯಾ ಅನುಪಾತ (ಡಬ್ಲ್ಯುಪಿಆರ್) ಏರುಗತಿಯಲ್ಲಿವೆ
ಏಪ್ರಿಲ್ 2025 ರಿಂದ ನಿರುದ್ಯೋಗ ದರವು ಹೊಸ ಕನಿಷ್ಠ ಮಟ್ಟಕ್ಕೆ ಇಳಿದಿದೆ
प्रविष्टि तिथि:
15 DEC 2025 4:00PM by PIB Bengaluru
|
ಕಿರುನೋಟ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಒಟ್ಟಾರೆ ಕಾರ್ಮಿಕ ಬಲ ಭಾಗವಹಿಸುವಿಕೆಯ ದರ (ಎಲ್.ಎಫ್.ಪಿ.ಆರ್) ನವೆಂಬರ್ 2025ರಲ್ಲಿ ಶೇ.55.8 ಕ್ಕೆ ಏರಿತು, ಇದು ಏಳು ತಿಂಗಳಲ್ಲಿ ಅತ್ಯಧಿಕವಾಗಿದೆ.
ಗ್ರಾಮೀಣ ಮಹಿಳಾ ಎಲ್.ಎಫ್.ಪಿ.ಆರ್ ಜೂನ್ 2025ರಲ್ಲಿ ಶೇ.35.2 ರಿಂದ ನವೆಂಬರ್ 2025ರಲ್ಲಿ ಶೇ.39.7 ಕ್ಕೆ ಸ್ಥಿರವಾಗಿ ಏರಿತು, ಹಾಗೆಯೇ ನಗರ ಮಹಿಳಾ ಎಲ್.ಎಫ್.ಪಿ.ಆರ್ ಸುಮಾರು ಶೇ.25.5 ರಲ್ಲಿ ಸ್ಥಿರವಾಗಿತ್ತು.
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಒಟ್ಟಾರೆ ಕಾರ್ಮಿಕರ ಜನಸಂಖ್ಯಾ ಅನುಪಾತ (ಡಬ್ಲ್ಯುಪಿಆರ್) ಅಕ್ಟೋಬರ್ ನಲ್ಲಿದ್ದ ಶೇ.52.5 ರಿಂದ ನವೆಂಬರ್ 2025ರಲ್ಲಿ ಶೇ.53.2 ಕ್ಕೆ ಏರಿತು.
ಗ್ರಾಮೀಣ ಮಹಿಳಾ ಡಬ್ಲ್ಯುಪಿಆರ್ ಅಕ್ಟೋಬರ್ 2025 ರಲ್ಲಿದ್ದ ಶೇ.36.9 ರಿಂದ ನವೆಂಬರ್ 2025ರಲ್ಲಿ ಶೇ.38.4 ಕ್ಕೆ ಉತ್ತಮ ಏರಿಕೆ ಕಂಡಿದ್ದು, ಅದೇ ಅವಧಿಯಲ್ಲಿ ಒಟ್ಟಾರೆ ಮಹಿಳಾ ಡಬ್ಲ್ಯುಪಿಆರ್ ಶೇ.32.4 ರಿಂದ ಶೇ.33.4 ಕ್ಕೆ ಏರಿಕೆಯಾಗಿದೆ.
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ನಿರುದ್ಯೋಗ ದರ (ಯುಆರ್) ನವೆಂಬರ್ 2025ರಲ್ಲಿ ಶೇ.4.7 ಕ್ಕೆ ಇಳಿದಿದೆ, ಇದು ಹಿಂದಿನ ತಿಂಗಳಲ್ಲಿ ಶೇ.5.2 ರಷ್ಟಿತ್ತು.
ಒಟ್ಟಾರೆಯಾಗಿ, ಗ್ರಾಮೀಣ ಉದ್ಯೋಗದಲ್ಲಿನ ಲಾಭಗಳು, ಹೆಚ್ಚುತ್ತಿರುವ ಮಹಿಳಾ ಭಾಗವಹಿಸುವಿಕೆ ಮತ್ತು ನಗರ ಕಾರ್ಮಿಕ ಬೇಡಿಕೆಯಲ್ಲಿ ಕ್ರಮೇಣ ಚೇತರಿಕೆಯಿಂದ ಬೆಂಬಲಿತವಾದ ಕಾರ್ಮಿಕ ಮಾರುಕಟ್ಟೆಯ ಪರಿಸ್ಥಿತಿಗಳು ಬಲಗೊಳ್ಳುತ್ತಿರುವುದನ್ನು ಪ್ರವೃತ್ತಿಗಳು ಸೂಚಿಸುತ್ತಿವೆ.
|
ಎ. ಪರಿಚಯ
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI)ದ ಎನ್ ಎಸ್ ಒ, ನಡೆಸುವ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿ.ಎಲ್.ಎಫ್.ಎಸ್) ಜನಸಂಖ್ಯಾ ಚಟುವಟಿಕೆ ಭಾಗವಹಿಸುವಿಕೆ ಮತ್ತು ಉದ್ಯೋಗ-ನಿರುದ್ಯೋಗ ಸ್ಥಿತಿಯ ದತ್ತಾಂಶದ ಮುಖ್ಯ ಮೂಲವಾಗಿದೆ. ದೇಶಕ್ಕೆ ಕಾರ್ಮಿಕ ಬಲ ಸೂಚಕಗಳ ಮಾಸಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಒದಗಿಸಲು ಪಿ ಎಲ್ ಎಫ್ ಎಸ್ ಸಮೀಕ್ಷೆಯ ವಿಧಾನವನ್ನು ಜನವರಿ 2025 ರಿಂದ ಪರಿಷ್ಕರಿಸಲಾಗಿದೆ.
ಪಿ.ಎಲ್.ಎಫ್.ಎಸ್ ನ ಮಾಸಿಕ ಫಲಿತಾಂಶಗಳನ್ನು ಮಾಸಿಕ ಬುಲೆಟಿನ್ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ಪ್ರಸ್ತುತ ಸಾಪ್ತಾಹಿಕ ಸ್ಥಿತಿ (ಸಿಡಬ್ಲ್ಯುಎಸ್) ವಿಧಾನವನ್ನು ಬಳಸಿಕೊಂಡು ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕ ಬಲ ಭಾಗವಹಿಸುವಿಕೆ ದರ (ಎಲ್.ಎಫ್.ಪಿ.ಆರ್), ಕಾರ್ಮಿಕರ ಜನಸಂಖ್ಯಾ ಅನುಪಾತ (ಡಬ್ಲ್ಯುಪಿಆರ್) ಮತ್ತು ನಿರುದ್ಯೋಗ ದರ (ಯು.ಆರ್) ನಂತಹ ಪ್ರಮುಖ ಕಾರ್ಮಿಕ ಮಾರುಕಟ್ಟೆ ಸೂಚಕಗಳ ಅಂದಾಜುಗಳನ್ನು ಒಳಗೊಂಡಿದೆ.
ಏಪ್ರಿಲ್ 2025 ರಿಂದ ಅಕ್ಟೋಬರ್ 2025 ರವರೆಗಿನ ಮಾಸಿಕ ಬುಲೆಟಿನ್ ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ನವೆಂಬರ್ 2025ರ ಮಾಸಿಕ ಬುಲೆಟಿನ್ ಈ ಸರಣಿಯಲ್ಲಿ ಎಂಟನೆಯದು.
ಸಿಡಬ್ಲ್ಯುಎಸ್ ನಂತರ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಕುರಿತ ಪ್ರಮುಖ ಫಲಿತಾಂಶಗಳು:
ಕಾರ್ಮಿಕ ಬಲ ಭಾಗವಹಿಸುವಿಕೆ ದರ (ಎಲ್.ಎಫ್.ಪಿ.ಆರ್) ಏರಿಕೆಯ ಹಾದಿಯಲ್ಲಿದೆ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ಒಟ್ಟಾರೆ ಎಲ್.ಎಫ್.ಪಿ.ಆರ್ ನವೆಂಬರ್ 2025ರಲ್ಲಿ ಶೇ.55.8 ಕ್ಕೆ ಏರಿತು, ಇದು ಏಪ್ರಿಲ್ 2025ರ ನಂತರ ದಾಖಲಾದ ಅತ್ಯಧಿಕ ಮಟ್ಟವಾಗಿದೆ. ಎಲ್.ಎಫ್.ಪಿ.ಆರ್ ಹೆಚ್ಚಳವು ಪ್ರಾಥಮಿಕವಾಗಿ ಗ್ರಾಮೀಣ ಪ್ರದೇಶಗಳಿಂದ ನಡೆಸಲ್ಪಟ್ಟಿದೆ, ಅಲ್ಲಿ ಎಲ್.ಎಫ್.ಪಿ.ಆರ್ ಏಪ್ರಿಲ್ 2025 ರಲ್ಲಿದ್ದ ಶೇ.58.0 ರಿಂದ ನವೆಂಬರ್ 2025ರಲ್ಲಿ ಶೇ.58.6 ಕ್ಕೆ ಏರಿತು. ಹಿಂದಿನ ತಿಂಗಳಿಗೆ ಹೋಲಿಸಿದರೆ, ಗ್ರಾಮೀಣ ಎಲ್.ಎಫ್.ಪಿ.ಆರ್ ಶೇ.57.8 ರಿಂದ ಹೆಚ್ಚಾಗಿದೆ, ನಗರ ಎಲ್.ಎಫ್.ಪಿ.ಆರ್ ಶೇ.50.5 ರಿಂದ ಶೇ.50.4 ಕ್ಕೆ ಸ್ವಲ್ಪ ಕಡಿಮೆಯಾಗಿದೆ.
| ಒಟ್ಟಾರೆ ಎಲ್.ಎಫ್.ಪಿ.ಆರ್ ನವೆಂಬರ್ 2025ರಲ್ಲಿ ಶೇ.55.8 ಕ್ಕೆ ಏರಿತು, ಇದು ಏಪ್ರಿಲ್ 2025ರ ನಂತರ ದಾಖಲಾದ ಅತ್ಯಧಿಕ ಮಟ್ಟವಾಗಿದೆ. |

ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯು ಏರುಗತಿಯಲ್ಲಿ ಮುಂದುವರೆದಿದೆ:
ಒಟ್ಟಾರೆ ಮಹಿಳಾ ಎಲ್.ಎಫ್.ಪಿ.ಆರ್ ಜೂನ್ 2025 ರಿಂದ ನವೆಂಬರ್ 2025 ರವರೆಗೆ ಸ್ಥಿರವಾದ ಏರಿಕೆಯನ್ನು ತೋರಿಸಿದೆ. ಈ ಅವಧಿಯಲ್ಲಿ ಇದು ಶೇ.32.0 ರಿಂದ ಶೇ.35.1 ಕ್ಕೆ ಏರಿತು, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಮಿಕ ಬಲದ ಭಾಗವಹಿಸುವಿಕೆಯಿಂದ ಇದು ಪ್ರೇರಿತವಾಗಿದೆ, ನಗರ ಮಹಿಳಾ ಎಲ್.ಎಫ್.ಪಿ.ಆರ್ ತುಲನಾತ್ಮಕವಾಗಿ ಸ್ಥಿರವಾಗಿದೆ.
| ಗ್ರಾಮೀಣ ಮಹಿಳಾ ಎಲ್.ಎಫ್.ಪಿ.ಆರ್ ಸ್ಥಿರವಾದ ಮೇಲ್ಮುಖ ಚಲನೆಯನ್ನು ದಾಖಲಿಸಿದ್ದು, ಜೂನ್ 2025 ರಲ್ಲಿದ್ದ ಶೇ.35.2 ರಿಂದ ನವೆಂಬರ್ 2025ರಲ್ಲಿ ಶೇ.39.7 ಕ್ಕೆ ಏರಿದೆ. |

ವಿವಿಧ ಕ್ಷೇತ್ರಗಳಲ್ಲಿ ಕಾರ್ಯಪಡೆ ಬಲಗೊಳ್ಳುತ್ತಿದೆ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಕಾರ್ಮಿಕರ ಜನಸಂಖ್ಯಾ ಅನುಪಾತ (ಡಬ್ಲ್ಯುಪಿಆರ್) ನವೆಂಬರ್ 2025ರಲ್ಲಿ ವ್ಯಾಪಕವಾಗಿ ಸುಧಾರಿಸುವ ಪ್ರವೃತ್ತಿಯನ್ನು ತೋರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಏಪ್ರಿಲ್ 2025 ರಲ್ಲಿದ್ದ ಶೇ.55.4 ರಿಂದ ನವೆಂಬರ್ 2025ರಲ್ಲಿ ಶೇ.56.3 ಕ್ಕೆ ಏರಿತು, ಒಟ್ಟಾರೆ ಡಬ್ಲ್ಯುಪಿಆರ್ ಅದೇ ಅವಧಿಯಲ್ಲಿ ಶೇ.52.8 ರಿಂದ ಶೇ.53.2 ಕ್ಕೆ ಏರಿತು. ನಗರ ಡಬ್ಲ್ಯುಪಿಆರ್ ಬಹುತೇಕ ಸ್ಥಿರವಾಗಿತ್ತು. ಗಮನಾರ್ಹವಾಗಿ, ಗ್ರಾಮೀಣ ಮಹಿಳಾ ಡಬ್ಲ್ಯುಪಿಆರ್ ಏಪ್ರಿಲ್ 2025 ರಲ್ಲಿದ್ದ ಶೇ.36.8 ರಿಂದ ನವೆಂಬರ್ 2025ರಲ್ಲಿ ಶೇ.38.4 ಕ್ಕೆ ಸುಧಾರಿಸಿತು, ಈ ಅವಧಿಯಲ್ಲಿ ಒಟ್ಟಾರೆ ಮಹಿಳಾ ಡಬ್ಲ್ಯುಪಿಆರ್ ನಲ್ಲಿ ಶೇ.32.5 ರಿಂದ ಶೇ.33.4 ಕ್ಕೆ ಏರಿಕೆಯಾಗಿದೆ.
| ಒಟ್ಟಾರೆ ಕಾರ್ಯಪಡೆಯು ಏರಿಕೆಯ ಪ್ರವೃತ್ತಿಯನ್ನು ತೋರಿಸಿದ್ದು, ಜೂನ್ 2025 ರಲ್ಲಿದ್ದ ಶೇ.51.2 ರಿಂದ ನವೆಂಬರ್ 2025ರಲ್ಲಿ ಶೇ.53.2 ಕ್ಕೆ ಏರಿದೆ. |



ಒಟ್ಟಾರೆ ನಿರುದ್ಯೋಗ ದರ (ಯು.ಆರ್) ಇಳಿಕೆ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ನಿರುದ್ಯೋಗ ದರ ನವೆಂಬರ್ 2025ರಲ್ಲಿ ಶೇ.4.7 ಕ್ಕೆ ಇಳಿದಿದೆ, ಇದು ಏಪ್ರಿಲ್ 2025ರ ನಂತರದ ಅತ್ಯಂತ ಕಡಿಮೆ ಮಟ್ಟವಾಗಿದೆ. ನವೆಂಬರ್ 2025ರಲ್ಲಿ, ಗ್ರಾಮೀಣ ನಿರುದ್ಯೋಗ ದರ ಶೇ.3.9 ರ ಹೊಸ ಕನಿಷ್ಠ ಮಟ್ಟಕ್ಕೆ ಇಳಿದರೆ, ನಗರ ನಿರುದ್ಯೋಗ ದರ ಶೇ.6.5 ಕ್ಕೆ ಇಳಿದಿದೆ, ಇದು ಏಪ್ರಿಲ್ 2025ರಲ್ಲಿ ದಾಖಲಾದ ಹಿಂದಿನ ಕನಿಷ್ಠ ಮಟ್ಟಕ್ಕೆ ಸಮನಾಗಿದೆ.
ನವೆಂಬರ್ 2025ರಲ್ಲಿ ಒಟ್ಟಾರೆ ನಿರುದ್ಯೋಗ ದರ ಶೇ.4.7 ಕ್ಕೆ ಇಳಿದಿದೆ, ಇದು ಏಪ್ರಿಲ್ 2025ರ ನಂತರದ ಕನಿಷ್ಠ ಮಟ್ಟವಾಗಿದೆ.

ಲಿಂಗ ಮತ್ತು ವಲಯದಾದ್ಯಂತ ನಿರುದ್ಯೋಗ ದರಗಳಲ್ಲಿ ಕುಸಿತ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮತ್ತು ಮಹಿಳೆಯರಿಬ್ಬರ ನಿರುದ್ಯೋಗ ದರಗಳು ನವೆಂಬರ್ 2025ರಲ್ಲಿ ಗಮನಾರ್ಹ ಇಳಿಕೆಯನ್ನು ತೋರಿಸಿವೆ. ಮಹಿಳೆಯರಲ್ಲಿ, ನಿರುದ್ಯೋಗ ದರ ನವೆಂಬರ್ 2025ರಲ್ಲಿ ಶೇ.4.8 ಕ್ಕೆ ಇಳಿದಿದೆ, ಇದು ಅಕ್ಟೋಬರ್ 2025 ರಲ್ಲಿದ್ದ ಶೇ.5.4 ರಿಂದ ಕಡಿಮೆಯಾಗಿದೆ. ಗ್ರಾಮೀಣ ಮತ್ತು ನಗರ ಮಹಿಳಾ ನಿರುದ್ಯೋಗ ದರಗಳಲ್ಲಿನ ಇಳಿಕೆಯಿಂದಾಗಿ ಈ ಕುಸಿತ ಸಂಭವಿಸಿದೆ, ಇದು ಕ್ರಮವಾಗಿ ಶೇ.4.0 ರಿಂದ ಶೇ.3.4 ಮತ್ತು 9.7% ರಿಂದ ಶೇ.9.3 ಕ್ಕೆ ಇಳಿದಿದೆ.
ಇದಲ್ಲದೆ, ಒಟ್ಟಾರೆ ಪುರುಷ ನಿರುದ್ಯೋಗ ದರಗಳು ನವೆಂಬರ್ 2025ರಲ್ಲಿ ಶೇ.4.6 ಕ್ಕೆ ಇಳಿದಿವೆ, ಅಕ್ಟೋಬರ್ 2025ರಲ್ಲಿ ಇದು ಶೇ.5.1 ರಷ್ಟಿತ್ತು. ವಲಯದ ಆಧಾರದ ಮೇಲೆ, ಗ್ರಾಮೀಣ ಮತ್ತು ನಗರ ಪುರುಷ ನಿರುದ್ಯೋಗ ದರಗಳು ನವೆಂಬರ್ 2025ರಲ್ಲಿ ಶೇ.4.1 ಮತ್ತು ಶೇ.5.6 ರಷ್ಟಿದ್ದವು, ಹಿಂದಿನ ತಿಂಗಳಲ್ಲಿ ಇದು ಶೇ.4.6 ಮತ್ತು ಶೇ.6.1 ರಷ್ಟಿತ್ತು.


ಏಪ್ರಿಲ್-ನವೆಂಬರ್ 2025ರ ಅವಧಿಯಲ್ಲಿ, ಪುರುಷರು, ಮಹಿಳೆಯರು ಮತ್ತು ಒಟ್ಟಾರೆ ಜನಸಂಖ್ಯೆಯ ನಿರುದ್ಯೋಗ ದರಗಳು ಸ್ಥಿರವಾಗಿ ಮತ್ತು ವ್ಯಾಪಕವಾಗಿ ಕಡಿಮೆಯಾದವು. ಈ ಕುಸಿತವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದ್ದು, ನವೆಂಬರ್ ನಲ್ಲಿ ಪುರುಷ ಮತ್ತು ಮಹಿಳಾ ನಿರುದ್ಯೋಗವು ಅತ್ಯಂತ ಕಡಿಮೆ ಮಟ್ಟವನ್ನು ತಲುಪಿತ್ತು. ನಗರ ನಿರುದ್ಯೋಗವು ಹೆಚ್ಚಾಗಿತ್ತು, ಆದರೆ ಅವಧಿಯ ಅಂತ್ಯದ ವೇಳೆಗೆ ಸುಧಾರಿಸಿತು. ಒಟ್ಟಾರೆಯಾಗಿ, ಈ ಪ್ರವೃತ್ತಿಗಳು ಕಾರ್ಮಿಕ ಮಾರುಕಟ್ಟೆಯ ಪರಿಸ್ಥಿತಿಗಳನ್ನು ಬಲಪಡಿಸುವುದನ್ನು ಸೂಚಿಸುತ್ತವೆ, ಇದು ಹೆಚ್ಚುತ್ತಿರುವ ಗ್ರಾಮೀಣ ಉದ್ಯೋಗ, ಹೆಚ್ಚುತ್ತಿರುವ ಮಹಿಳಾ ಭಾಗವಹಿಸುವಿಕೆ ಮತ್ತು ನಗರ ಕಾರ್ಮಿಕ ಬೇಡಿಕೆಯಲ್ಲಿ ಕ್ರಮೇಣ ಚೇತರಿಕೆಯಿಂದ ಬೆಂಬಲಿತವಾಗಿದೆ.
| ಪ್ಯಾನ್-ಇಂಡಿಯಾ ಮಟ್ಟದಲ್ಲಿ, ಮಾಸಿಕ ಅಂದಾಜುಗಳು ಸಮೀಕ್ಷೆಗೆ ಒಳಗಾದ ಒಟ್ಟು 3,73,229 ಜನರಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿವೆ. |
|
ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾದ ವ್ಯಕ್ತಿಗಳು
2,13,337
|
ನಗರ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾದ ವ್ಯಕ್ತಿಗಳು
1,59,892
|
****
(रिलीज़ आईडी: 2204369)
आगंतुक पटल : 30