ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿ ಅವರಿಂದ ಡಿಸೆಂಬರ್ 16 ರಿಂದ 22 ರವರೆಗೆ ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣಕ್ಕೆ ಭೇಟಿ
प्रविष्टि तिथि:
15 DEC 2025 5:09PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2025ರ ಡಿಸೆಂಬರ್ 16 ರಿಂದ 22 ರವರೆಗೆ ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.
ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿ ಅವರ 1066ನೇ ಜಯಂತ್ಯುತ್ಸವಕ್ಕೆ ಡಿಸೆಂಬರ್ 16 ರಂದು ರಾಷ್ಟ್ರಪತಿ ಚಾಲನೆ ನೀಡಲಿದ್ದಾರೆ.
ಡಿಸೆಂಬರ್ 17 ರಂದು, ರಾಷ್ಟ್ರಪತಿ ಅವರು ತಮಿಳುನಾಡು ರಾಜ್ಯದ ವೆಲ್ಲೂರಿನ ಸುವರ್ಣ ದೇಗುಲ (ಗೋಲ್ಡನ್ ಟೆಂಪಲ್) ದರ್ಶನ ಪಡೆದು ಆರತಿ ಮಾಡಲಿದ್ದಾರೆ. ನಂತರ, ಅವರು ಚಳಿಗಾಲದ ವಾಸ್ತವ್ಯವಾದ ಸಿಕಂದರಾಬಾದ್ ನ ಬೊಲಾರಂನಲ್ಲಿರುವ ರಾಷ್ಟ್ರಪತಿ ನಿಲಯಕ್ಕೆ ತೆರಳಲಿದ್ದಾರೆ.
ರಾಷ್ಟ್ರಪತಿ ಅವರು ಮರುದಿನ ಡಿಸೆಂಬರ್ 19 ರಂದು, ತೆಲಂಗಾಣ ಲೋಕಸೇವಾ ಆಯೋಗವು ಹೈದರಾಬಾದ್ ನಲ್ಲಿ ಆಯೋಜಿಸಿರುವ ಲೋಕಸೇವಾ ಆಯೋಗಗಳ ಅಧ್ಯಕ್ಷರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಹೈದರಾಬಾದ್ ನಲ್ಲಿ ಡಿಸೆಂಬರ್ 20 ರಂದು ಬ್ರಹ್ಮಕುಮಾರಿಯರ ಶಾಂತಿ ಸರೋವರ ತನ್ನ 21ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ 'ಭಾರತದ ಕಾಲಾತೀತ ವಿವೇಕ; ಶಾಂತಿ ಮತ್ತು ಪ್ರಗತಿಯ ಹಾದಿಗಳು' ಎಂಬ ವಿಷಯ ಕುರಿತಾದ ಸಮ್ಮೇಳನ ಉದ್ದೇಶಿಸಿ ರಾಷ್ಟ್ರಪತಿ ಅವರು ಮಾತನಾಡಲಿದ್ದಾರೆ.
*****
(रिलीज़ आईडी: 2204292)
आगंतुक पटल : 22