ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಶ್ರವಣ ಮತ್ತು ದೃಷ್ಟಿ ದೋಷವುಳ್ಳವರಿಗಾಗಿ ಒಟಿಟಿ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಸರ್ಕಾರ
ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿನ ಕಂಟೆಂಟ್ ಗಳ ಸುಲಭ ಲಭ್ಯತೆಗಾಗಿ 'ಎರಡು ಹಂತದ ಅನುಷ್ಠಾನ'ಕ್ಕೆ ಕೇಂದ್ರದ ಪ್ರಸ್ತಾಪ
प्रविष्टि तिथि:
12 DEC 2025 4:30PM by PIB Bengaluru
ಶ್ರವಣ ಮತ್ತು ದೃಷ್ಟಿ ದೋಷವುಳ್ಳ ವ್ಯಕ್ತಿಗಳಿಗೆ 'ಆನ್ ಲೈನ್ ಕ್ಯುರೇಟೆಡ್ ಕಂಟೆಂಟ್ ಪ್ಲಾಟ್ ಫಾರ್ಮ್ ಗಳಲ್ಲಿ (ಒಟಿಟಿ ಪ್ಲಾಟ್ ಫಾರ್ಮ್ ಗಳು) ಕಂಟೆಂಟ್ ಸುಲಭವಾಗಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ದಿನಾಂಕ 07.10.2025 ರಂದು ಕರಡು ಮಾರ್ಗಸೂಚಿಗಳನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಿದೆ.
ಸಂವಿಧಾನದ 14ನೇ ವಿಧಿಯಡಿಯಲ್ಲಿ ಖಾತರಿಪಡಿಸಲಾದ ಸಾಂವಿಧಾನಿಕ ಭರವಸೆಗಳು, ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಮೇಲಿನ ವಿಶ್ವಸಂಸ್ಥೆಯ ಸಮಾವೇಶದಡಿಯಲ್ಲಿ (UNCRPD) ಭಾರತದ ಜವಾಬ್ದಾರಿ, ವಿಕಲಚೇತನರ ಹಕ್ಕುಗಳ ಕಾಯ್ದೆ (RPwD), 2016, ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (IT Rules, 2021) ರ ಅಡಿಯಲ್ಲಿ ದಿನಾಂಕ 25.02.2021 ರಂದು ಹೊರಡಿಸಲಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ರ ನೀತಿ ಸಂಹಿತೆಯನ್ನು ಗಮನದಲ್ಲಿಟ್ಟುಕೊಂಡು ಈ ಕರಡು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಈ ಕರಡು ಮಾರ್ಗಸೂಚಿಗಳು, OTT ವೇದಿಕೆಗಳಲ್ಲಿನ ಆಡಿಯೋ-ವಿಶುವಲ್ (ಶ್ರವಣ-ದೃಶ್ಯ) ವಿಷಯಗಳು ಶ್ರವಣ ಮತ್ತು ದೃಷ್ಟಿ ದೋಷವುಳ್ಳ ವ್ಯಕ್ತಿಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಇರುವುದನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ. ಜೊತೆಗೆ, ಇದು ಎರಡು ಹಂತಗಳ ಅನುಷ್ಠಾನ ವೇಳಾಪಟ್ಟಿಯನ್ನೂ ಒದಗಿಸುತ್ತದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಗಾಗಲೇ ದಿನಾಂಕ 11.09.2019 ರಂದು, ಶ್ರವಣದೋಷವುಳ್ಳವರಿಗಾಗಿ ದೂರದರ್ಶನ ಕಾರ್ಯಕ್ರಮಗಳಲ್ಲಿ ವಿಕಲಚೇತನರಿಗೆ ಪ್ರವೇಶ ಕಲ್ಪಿಸುವ ಮಾನದಂಡಗಳನ್ನು ಹೊರಡಿಸಿದೆ.
ಉಲ್ಲೇಖಿಸಲಾದ ಪ್ರವೇಶ ಮಾನದಂಡಗಳ ಭಾಗ 12ರ ಪ್ರಕಾರ, ಪ್ರವೇಶ ಸೇವೆಯ ಅನುಷ್ಠಾನವು ಹಂತಹಂತವಾಗಿ ಇರಬೇಕು ಎಂದು ಸೂಚಿಸಲಾಗಿದೆ. ಇದನ್ನು ಮೊದಲು ಸಾರ್ವಜನಿಕ ಪ್ರಸಾರಕರು (ಅಂದರೆ ಪ್ರಸಾರ ಭಾರತಿ) ಅನುಷ್ಠಾನಗೊಳಿಸಬೇಕು. ನಂತರ ಖಾಸಗಿ ಪ್ರಸಾರಕರು ಮತ್ತು ಖಾಸಗಿ ಸುದ್ದಿ ಪ್ರಸಾರಕರು ಇದನ್ನು ಅನುಸರಿಸಬೇಕು.
ಶ್ರೀಮತಿ ಸಂಗೀತಾ ಯಾದವ್, ಡಾ. ಮೇಧಾ ವಿಶ್ರಾಮ್ ಕುಲಕರ್ಣಿ ಮತ್ತು ಶ್ರೀ ದೀಪಕ್ ಪ್ರಕಾಶ್ ಅವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ, ಇಂದು ರಾಜ್ಯಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.
*****
(रिलीज़ आईडी: 2203112)
आगंतुक पटल : 7