ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಡಾ. ಮನ್ಸುಖ್ ಮಾಂಡವಿಯಾ ಅವರು ನವದೆಹಲಿಯಲ್ಲಿ ಜರುಗಿದ ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) 197ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು
ಈ ಸಭೆಯಲ್ಲಿ ಇಎಸ್‌ಐಸಿ ಯ 2024-25ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳು, CAG ವರದಿ ಮತ್ತು ವಾರ್ಷಿಕ ವರದಿಯನ್ನು ಅನುಮೋದಿಸಿದೆ
ನಿಗಮವು 2025-26ರ ಪರಿಷ್ಕೃತ ಆಯವ್ಯಯ ಮತ್ತು 2026-27ರ ಬಜೆಟ್ ಅಂದಾಜುಗಳನ್ನು ಆಯವ್ಯಯವನ್ನು ಅನುಮೋದಿಸಿದೆ
ಭಾರತದಾದ್ಯಂತ ಹತ್ತು ರಾಜ್ಯಗಳಲ್ಲಿ ಹೊಸ ಇಎಸ್ಐಸಿ ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗಾಗಿ ಭೂಸ್ವಾಧೀನಕ್ಕೆ ಅನುಮೋದನೆ ನೀಡಲಾಯಿತು
ಸೇವಾ ಕಾರ್ಯಕ್ಷಮತೆಯನ್ನು ಬಲಪಡಿಸಲು ನಿಗಮವು 2026-27ರ ಕಾರ್ಯಕ್ಷಮತೆ ಬಜೆಟ್ ಅನ್ನು ಅನುಮೋದಿಸಿತು
प्रविष्टि तिथि:
11 DEC 2025 5:09PM by PIB Bengaluru
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯ ಅವರು ಇಂದು ನವದೆಹಲಿಯಲ್ಲಿ ನಡೆದ 197ನೇ ಕಾರ್ಮಿಕರ ರಾಜ್ಯ ವಿಮಾ (ಇಎಸ್‌ಐಸಿ) ನಿಗಮದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಇಎಸ್‌ಐಸಿ ಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ಮೂಲಸೌಕರ್ಯವನ್ನು ನವೀಕರಿಸಲು ಮತ್ತು ಸೇವೆ ಒದಗಿಸುವುದನ್ನು ಸುಧಾರಿಸಲು ಉದ್ದೇಶಿಸಿರುವ ಹಲವಾರು ಮಹತ್ವದ ಪ್ರಸ್ತಾಪಗಳನ್ನು ನಿಗಮವು ಈ ಸಭೆಯಲ್ಲಿ ಅನುಮೋದಿಸಿತು. ಅನುಮೋದನೆಯಾದ ಪ್ರಸ್ತಾವನೆಗಳು ಈ ಕೆಳಗಿನಂತಿವೆ
- 2024-25 ನೇ ಸಾಲಿನ ನಿಗಮದ ವಾರ್ಷಿಕ ಲೆಕ್ಕಪತ್ರಗಳು, ನಿಯಂತ್ರಕರು ಮತ್ತು ಮಹಾಲೇಖಕರ (ಸಿಎಜಿ) ವರದಿ ಮತ್ತು 2024-25 ನೇ ಸಾಲಿನ ಇಎಸ್ಐ ನಿಗಮದ ವಾರ್ಷಿಕ ವರದಿ ಮತ್ತು ಅದರ ವಿವರಗಳನ್ನು ನಿಗಮವು ಅನುಮೋದಿಸಿ ಅಂಗೀಕರಿಸಿತು.
- ಇಎಸ್ಐ ಕಾರ್ಪೊರೇಷನ್ 2025-26ನೇ ಹಣಕಾಸು ವರ್ಷದ ಪರಿಷ್ಕೃತ ಅಂದಾಜುಪಟ್ಟಿ, 2026-2027ನೇ ಹಣಕಾಸು ವರ್ಷದ ಬಜೆಟ್ ಅಂದಾಜುಗಳು ಹಾಗೂ 2026-2027ನೇ ಸಾಲಿನ ಕಾರ್ಯಕ್ಷಮತೆಯ ಬಜೆಟ್ ಅನ್ನು ಅನುಮೋದಿಸಿದೆ. ಈ ಹಣಕಾಸು ಯೋಜನೆಗಳು ನಿಗಮದ ಯೋಜಿತ ವೆಚ್ಚ, ನಿಧಿಗಳ ಹಂಚಿಕೆ ಮತ್ತು ಮುಂಬರುವ ಅವಧಿಗಳ ಕಾರ್ಯಕ್ಷಮತೆಯ ಗುರಿಗಳನ್ನು ವಿವರಿಸುತ್ತದೆ. ನಿಗಮದ ಗುರಿಗಳು ಮತ್ತು ಕಾರ್ಯಾಚರಣೆಯ ಅಗತ್ಯಗಳಿಗೆ ಸರಿಯಾದ ಸಂಪನ್ಮೂಲ ನಿರ್ವಹಣೆ ಮತ್ತು ಜೋಡಣೆಯನ್ನು ಖಚಿತಪಡಿಸಿಕೊಳ್ಳಲು ನಿಗಮವು ನವೀಕರಿಸಿದ ಹಣಕಾಸು ಪ್ರಸ್ತಾವನೆಗಳು ಮತ್ತು ಬಜೆಟ್ ಹಂಚಿಕೆಗಳನ್ನು ಪರಿಶೀಲಿಸಿ ಒಪ್ಪಿಕೊಂಡಿದೆ ಎಂದು ಈ ಅನುಮೋದನೆಯು ಸೂಚಿಸುತ್ತದೆ. ಸದರಿ ಸಭೆಯಲ್ಲಿ ಈ ಮುಂದೆ ತಿಳಿಸಿದಂತೆ ಭೂಸ್ವಾಧೀನಕ್ಕಾಗಿ ಅನುಮೋದನೆ ನೀಡಲಾಯಿತು.
- ಇಎಸ್‌ಐ ಕಾರ್ಪೊರೇಷನ್, ಬಿಹಾರದ ವೈಶಾಲಿಯ ಹಾಜಿಪುರದಲ್ಲಿ ಡಿಸಿಬಿಒಗಾಗಿ 0.50 ಎಕರೆ; ಅಸ್ಸಾಂನ ಧೇಮಾಜಿಯಲ್ಲಿ ಇಬ್ಬರು ವೈದ್ಯರ ಇಎಸ್‌ಐ ಔಷಧಾಲಯಕ್ಕೆ 0.66 ಎಕರೆ; ಉತ್ತರ ಪ್ರದೇಶದ ಮಹೋಬಾದಲ್ಲಿ ಡಿಸಿಬಿಒಗಾಗಿ 1 ಎಕರೆ; ಶಿಲ್ಲಾಂಗ್ (ಮೇಘಾಲಯ)ದಲ್ಲಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಗೆ 5 ಎಕರೆ; ಮಹಾರಾಷ್ಟ್ರದ ಔರಂಗಾಬಾದ್‌ನ ವಾಲುಜ್‌ನಲ್ಲಿ 200 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಗೆ ಸುಮಾರು 15 ಎಕರೆ; ಮತ್ತು ಅಸ್ಸಾಂನ ಮೋರಿಗಾಂವ್‌ನಲ್ಲಿ ಇಎಸ್‌ಐ ಔಷಧಾಲಯ ಮತ್ತು ಶಾಖಾ ಕಚೇರಿಗೆ 0.495 ಎಕರೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಿದೆ.
- ಮುಂಬರುವ ಹಲವಾರು ಇಎಸ್‌ಐಸಿ ಆಸ್ಪತ್ರೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿಗಮವು ಈ ಮುಂದಿನಂತೆ ಅನುಮೋದನೆ ನೀಡಿದೆ, ರಾಜಸ್ಥಾನದ ನೀಮ್ರಾಣದಲ್ಲಿ 150 ಹಾಸಿಗೆಗಳ ಆಸ್ಪತ್ರೆಗೆ 5.75 ಎಕರೆ; ಕನ್ಯಾಕುಮಾರಿ (ತಮಿಳುನಾಡು) ನ ನಾಗರ್‌ಕೋಯಿಲ್‌ನಲ್ಲಿ 100 ಹಾಸಿಗೆಗಳ ಆಸ್ಪತ್ರೆಗೆ 3.16 ಎಕರೆ; ಹಿಸಾರ್ (ಹರಿಯಾಣ) ನಲ್ಲಿ 100 ಹಾಸಿಗೆಗಳ ಆಸ್ಪತ್ರೆಗೆ 5.02 ಎಕರೆ; ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ) ನಲ್ಲಿ 350 ಹಾಸಿಗೆಗಳ ಆಸ್ಪತ್ರೆಗೆ 7.24 ಎಕರೆ; ಸೋನೆಪತ್ (ಹರಿಯಾಣ) ನಲ್ಲಿ 150 ಹಾಸಿಗೆಗಳ ಆಸ್ಪತ್ರೆಗೆ 6.35 ಎಕರೆ; ಬರ್ಹಾಂಪುರ (ಒಡಿಶಾ) ನಲ್ಲಿ 100 ಹಾಸಿಗೆಗಳ ಆಸ್ಪತ್ರೆಗೆ 5 ಎಕರೆ; ಕರ್ನಾಲ್ (ಹರಿಯಾಣ) ನಲ್ಲಿ 30 ಹಾಸಿಗೆಗಳ (100 ಹಾಸಿಗೆಗಳಿಗೆ ನವೀಕರಿಸಬಹುದಾದ) ಆಸ್ಪತ್ರೆಗೆ 5 ಎಕರೆ; ಬಾಲಸೋರ್ (ಒಡಿಶಾ) ನಲ್ಲಿ 100 ಹಾಸಿಗೆಗಳ (150 ಹಾಸಿಗೆಗಳಿಗೆ ನವೀಕರಿಸಬಹುದಾದ) ಆಸ್ಪತ್ರೆಗೆ 5 ಎಕರೆ ಸೇರಿವೆ. ತೆಲಂಗಾಣದ ರಂಗಾರೆಡ್ಡಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆಗೆ 5.375 ಎಕರೆ; ಮತ್ತು ಪಂಜಾಬ್‌ನ ಲಾಲ್ರುವಿನಲ್ಲಿ 100 ಹಾಸಿಗೆಗಳ ಆಸ್ಪತ್ರೆಗೆ 4 ಎಕರೆ ಭೂಮಿಯ ಸ್ವಾಧೀನಕ್ಕಾಗಿ ಅನುಮೋದನೆ ನೀಡಿದೆ.

ಸಭೆಯಲ್ಲಿ ಇಎಸ್‌ಐ ನಿಗಮಕ್ಕೆ ಸಂಬಂಧಿಸಿದ ಈ ಕೆಳಗಿನ ಅಂಶಗಳನ್ನು ವರದಿಗಾಗಿ ಮಂಡಿಸಲಾಯಿತು:
1. ವ್ಯಾಪ್ತಿ ನೀತಿ: ESIC, ಕೇಂದ್ರ/ರಾಜ್ಯ ಸರ್ಕಾರಿ ಸಂಸ್ಥೆಗಳು, ಸರ್ಕಾರಿ ಉದ್ಯಮಗಳು, PSUಗಳು ಮತ್ತು ಸ್ವಾಯತ್ತ ಸಂಸ್ಥೆಗಳು (AIIMS, ಟಾಟಾ ಮೆಮೋರಿಯಲ್ ಸೆಂಟರ್, ILBS, ಇತ್ಯಾದಿ) ಔಪಚಾರಿಕ ಒಪ್ಪಂದದ ಮೂಲಕ ESIC ಫಲಾನುಭವಿಗಳಿಗೆ ನಗದುರಹಿತ ಚಿಕಿತ್ಸೆಯನ್ನು ಒದಗಿಸಲು ನಿಯಮಾವಳಿಯನ್ನು ರೂಪಿಸಿದೆ.
2. ಭೂಸ್ವಾಧೀನ ನವೀಕರಣಗಳು: ಪಂಜಾಬ್‌ನ ಮಲೇರ್‌ಕೋಟ್ಲಾದಲ್ಲಿ 150 ಹಾಸಿಗೆಗಳ ಇಎಸ್‌ಐಸಿ ಆಸ್ಪತ್ರೆ ನಿರ್ಮಾಣಕ್ಕಾಗಿ 7.81 ಎಕರೆ ಭೂಮಿಯನ್ನು ಮತ್ತು ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಹಲೋಲ್‌ನಲ್ಲಿ 100 ಹಾಸಿಗೆಗಳ ಇಎಸ್‌ಐಸಿ ಆಸ್ಪತ್ರೆಗಾಗಿ 5 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ನವೀಕರಣವನ್ನು ಒದಗಿಸಲಾಗಿದೆ.
3. ಇಎಸ್‌ಐ ಯೋಜನೆಯ ಅನುಷ್ಠಾನ ಸ್ಥಿತಿ (2025-2026): 19.11.2025 ರ ಹೊತ್ತಿಗೆ, ಭಾರತದಾದ್ಯಂತ 779 ಜಿಲ್ಲೆಗಳಲ್ಲಿ ಒಟ್ಟು 713 ಜಿಲ್ಲೆಗಳನ್ನು ಇಎಸ್‌ಐ ಯೋಜನೆಯಡಿಯಲ್ಲಿ ವ್ಯಾಪ್ತಿಗೆ ತರಲಾಗಿದೆ.
4. ನವೀಕರಿಸಿದ ESIC ವ್ಯಾಪ್ತಿ ಅಂಕಿಅಂಶಗಳು (31.03.2025 ರಂತೆ):
- ಉದ್ಯೋಗಿಗಳ ಸಂಖ್ಯೆ: 3.24 ಕೋಟಿ
- ವಿಮಾದಾರರ ಸಂಖ್ಯೆ: 3.84 ಕೋಟಿ
- ವಿಮಾದಾರಿಣಿ ಸಂಖ್ಯೆ: 83,11,341
- ಫಲಾನುಭವಿಗಳ ಸಂಖ್ಯೆ: 14.91 ಕೋಟಿ
5. ಶೂನ್ಯ ಬಳಕೆದಾರ ಶುಲ್ಕಗಳ ಮುಂದುವರಿಕೆ: ಅಸಮರ್ಪಕ IP ಸಂಖ್ಯೆಗಳು ಮತ್ತು NMC ಮಾನದಂಡಗಳ ಪ್ರಕಾರ ಕಡ್ಡಾಯ ಕ್ಲಿನಿಕಲ್ ಸಾಮಗ್ರಿ ಅವಶ್ಯಕತೆಗಳನ್ನು ಪೂರೈಸಲು IP ಅಲ್ಲದವರ ಮೇಲೆ ನಿರಂತರ ಅವಲಂಬನೆ ಇರುವುದರಿಂದ, ಅಲ್ವಾರ್, ಬಿಹ್ತಾ, ರಾಂಚಿ ಮತ್ತು ವಾರಣಾಸಿಯಲ್ಲಿರುವ ESIC ವೈದ್ಯಕೀಯ ಕಾಲೇಜುಗಳಲ್ಲಿ ಶೂನ್ಯ ಬಳಕೆದಾರ ಶುಲ್ಕಗಳನ್ನು 31.03.2027 ರವರೆಗೆ ಮುಂದುವರಿಸಲು ನಿಗಮವು ಅನುಮೋದನೆ ನೀಡುವಂತೆ ಕೋರಲಾಯಿತು.

ಇಎಸ್‌ಐ ನಿಗಮದ 197ನೇ ಸಭೆಯಲ್ಲಿ ರಾಜ್ಯಸಭೆಯ ಸಂಸದೆ ಶ್ರೀಮತಿ ಡೋಲಾ ಸೇನ್, ಶ್ರೀಮತಿ ವಂದನಾ ಗುರ್ನಾನಿ, ಕಾರ್ಯದರ್ಶಿ (ಕಾರ್ಮಿಕ & ಉದ್ಯೋಗ ಸಚಿವಾಲಯ) ಮತ್ತು ಇಎಸ್‌ಐಸಿ ಮಹಾನಿರ್ದೇಶಕ ಶ್ರೀ ಅಶೋಕ್ ಕುಮಾರ್ ಸಿಂಗ್, ರಾಜ್ಯ ಸರ್ಕಾರಗಳ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು ಮತ್ತು ಉದ್ಯೋಗದಾತರು ಮತ್ತು ಉದ್ಯೋಗಿಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
*****
(रिलीज़ आईडी: 2203017)
आगंतुक पटल : 15