ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ವಾಣಿಜ್ಯ ಇಲಾಖೆಯ 2025ರ ವರ್ಷಾಂತ್ಯದ ಪ್ರಗತಿ ಪರಾಮರ್ಶೆ


ಭಾರತವು 2025–26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅತ್ಯುತ್ತಮ  ರಫ್ತು ಕಾರ್ಯಕ್ಷಮತೆಯನ್ನು ದಾಖಲಿಸಿದೆ

ಭಾರತದ ರಫ್ತು ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲು ₹25,060-ಕೋಟಿ ಮಿಷನ್ ಅನಾವರಣಗೊಂಡಿದೆ

ಯುಕೆ ಜೊತೆಗಿನ ಸಿ.ಇ.ಟಿ.ಎ ಭಾರತೀಯ ಸರಕು ಮತ್ತು ಸೇವೆಗಳಿಗೆ ಪ್ರಮುಖ ಮಾರುಕಟ್ಟೆ ಪ್ರವೇಶವನ್ನು ತೆರೆದಿದೆ

ವಾಣಿಜ್ಯ ಸಚಿವಾಲಯದ ಡಿಜಿಟಲ್ ಸಮಗ್ರ ನವೀಕರಣ ವ್ಯವಸ್ಥೆಯು ವ್ಯಾಪಾರ ಅನುಸರಣೆ ಮತ್ತು ನಿಗಾವನ್ನು ಸುಗಮಗೊಳಿಸುತ್ತದೆ

₹16.41 ಲಕ್ಷ ಕೋಟಿ ಜಿ.ಎಂ.ವಿ. ಯೊಂದಿಗೆ ಭಾರತದ ಅತಿದೊಡ್ಡ ಖರೀದಿ ವೇದಿಕೆಯಾಗಿ ಜಿ.ಇ.ಎಂ. ಹೊರಹೊಮ್ಮಿದೆ

ಯು.ಎಸ್, ಇ.ಯು., ಜಿ.ಸಿ.ಸಿ. ಮತ್ತು ಏಷ್ಯಾ-ಪೆಸಿಫಿಕ್‌ನಲ್ಲಿ ಭಾರತವು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತಿದ್ದಂತೆ ಎಫ್.ಟಿ.ಎ.ಗಳು ವೇಗವನ್ನು ಪಡೆದುಕೊಳ್ಳುತ್ತಿವೆ

ವರ್ಲ್ಡ್ ಎಕ್ಸ್‌ಪೋ ಒಸಾಕಾ 2025ರಲ್ಲಿ  ವರ್ಲ್ಡ್  ಪ್ರಮುಖ ಮನ್ನಣೆಯೊಂದಿಗೆ ಭಾರತದ ಪೆವಿಲಿಯನ್ ಜಾಗತಿಕ ಗಮನ ಸೆಳೆಯಿತು

प्रविष्टि तिथि: 10 DEC 2025 11:05AM by PIB Bengaluru

ವ್ಯಾಪಾರ ಸಾಧನೆ

ಭಾರತವು ಬಾಹ್ಯ ವ್ಯಾಪಾರದಲ್ಲಿ ಒಂದು ಹೆಗ್ಗುರುತು ಸಾಧನೆಯನ್ನು ದಾಖಲಿಸಿದೆ. 2024–25ರಲ್ಲಿ ಒಟ್ಟು ರಫ್ತುಗಳು (ಸರಕು ಮತ್ತು ಸೇವೆಗಳು) ಸಾರ್ವಕಾಲಿಕ ಗರಿಷ್ಠ  825.25 ಶತಕೋಟಿ ಅಮೆರಿಕನ್ ಡಾಲರ್ ತಲುಪಿದ್ದು, ಇದು ದೃಢವಾದ 6.05% ವಾರ್ಷಿಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಈ ಬಲವಾದ ಚಲನೆಯ ವೇಗವು ಹೊಸ ಹಣಕಾಸು ವರ್ಷದಲ್ಲಿಯೂ ಮುಂದುವರೆಯಿತು, ಏಪ್ರಿಲ್-ಸೆಪ್ಟೆಂಬರ್ 2025ರ ಅವಧಿಯಲ್ಲಿ ರಫ್ತುಗಳು 418.91 ಶತಕೋಟಿ ಅಮೆರಿಕನ್ ಡಾಲರ್ ಗೆ ಏರಿತು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.86% ಹೆಚ್ಚಳವಾಗಿದೆ - ಇದು ಭಾರತದ ನಿರಂತರ, ಸುಸ್ಥಿರ ಮೇಲ್ಮುಖ ರಫ್ತು ಪಥವನ್ನು ಬಲಪಡಿಸಿತು. 2025-26ರ ಹಣಕಾಸು ವರ್ಷದ (ಏಪ್ರಿಲ್-ಸೆಪ್ಟೆಂಬರ್ 2025) ಮೊದಲಾರ್ಧದಲ್ಲಿ (ಹೆಚ್ 1) ಭಾರತದ ವ್ಯಾಪಾರ ಕಾರ್ಯಕ್ಷಮತೆಯು ಇದುವರೆಗಿನ ಮೊದಲಾರ್ಧದಲ್ಲಿ (ಹೆಚ್ 1) ದಾಖಲೆಯ ಗರಿಷ್ಠ, ರಫ್ತು.  ಇದಲ್ಲದೆ, ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ, ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್ 2025) ಮತ್ತು ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್ 2025) ಎರಡೂ ಆಯಾ ತ್ರೈಮಾಸಿಕಗಳಲ್ಲಿ ಇದುವರೆಗೆ ಅತ್ಯಧಿಕವನ್ನು ದಾಖಲಿಸಿವೆ.

ಭಾರತದ ಸೇವಾ ವಲಯವು ಭಾರತದ ಒಟ್ಟಾರೆ ರಫ್ತು ವೇಗವನ್ನು ಮುಂದುವರೆಸಿದೆ, 2024–25ರಲ್ಲಿ ದಾಖಲೆಯ 387.54 ಶತಕೋಟಿ ಅಮೆರಿಕನ್ ಡಾಲರ್ ಗಳಿಸಿದೆ, ಇದು 13.63% ಬೆಳವಣಿಗೆಯಾಗಿದೆ. ಈ ಮೇಲ್ಮುಖ ಪಥವು ಪ್ರಸಕ್ತ ಹಣಕಾಸು ವರ್ಷದಲ್ಲಿ ದೃಢವಾಗಿ ಉಳಿದುಕೊಂಡಿದೆ, ಏಪ್ರಿಲ್–ಸೆಪ್ಟೆಂಬರ್ 2025ರಲ್ಲಿ ಸೇವಾ ರಫ್ತು 199.03 ಶತಕೋಟಿ ಅಮೆರಿಕನ್ ಡಾಲರಿಗೆ ಏರಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 9.34% ಹೆಚ್ಚಳವನ್ನು ದಾಖಲಿಸಿದೆ.

2024–25ರಲ್ಲಿ ಭಾರತದ ಸರಕು ರಫ್ತು 437.70 ಶತಕೋಟಿ ಅಮೆರಿಕನ್ ಡಾಲರ್ ಗಳಲ್ಲಿ ಸ್ಥಿರವಾಗಿದೆ, ಆದರೆ ಪೆಟ್ರೋಲಿಯಂ ಅಲ್ಲದ ರಫ್ತುಗಳು ಐತಿಹಾಸಿಕ 374.32 ಶತಕೋಟಿ ಅಮೆರಿಕನ್ ಡಾಲರ್ ಗೆ ಏರಿ, 6.07% ಬೆಳವಣಿಗೆಯನ್ನು ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಕಾರಾತ್ಮಕ ಪ್ರವೃತ್ತಿ ಮುಂದುವರೆದಿದೆ, ಏಪ್ರಿಲ್–ಸೆಪ್ಟೆಂಬರ್ 2025 ರಲ್ಲಿ ಸರಕು ರಫ್ತು 219.88 ಶತಕೋಟಿ ಅಮೆರಿಕನ್ ಡಾಲರಿಗೆ ಏರಿದೆ, ಇದು  ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2.90% ಹೆಚ್ಚಳವಾಗಿದೆ.

2025ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಪ್ರಮುಖ ರಫ್ತು ವ್ಯವಹಾರದಲ್ಲಿ ಎಲೆಕ್ಟ್ರಾನಿಕ್ ಸರಕುಗಳು (41.94%), ಎಂಜಿನಿಯರಿಂಗ್ ಸರಕುಗಳು (5.35%), ಔಷಧಗಳು (6.46%), ಸಾಗರ ಉತ್ಪನ್ನಗಳು (17.40%) ಮತ್ತು ಅಕ್ಕಿ (10.02%) ಸೇರಿವೆ, ಇವು ಒಟ್ಟಾರೆಯಾಗಿ ಭಾರತದ ಬಲವಾದ ರಫ್ತು ವೇಗವನ್ನು ಹೆಚ್ಚಿಸಿದವು.

ಭಾರತದ ರಫ್ತು ಕಾರ್ಯಕ್ಷಮತೆಗೆ ಅಮೆರಿಕ (13.34%), ಯುನೈಟೆಡ್ ಅರಬ್ ಎಮಿರೇಟ್ಸ್ (9.34%), ಚೀನಾ (21.85%), ಸ್ಪೇನ್ (40.30%), ಮತ್ತು ಹಾಂಗ್ ಕಾಂಗ್ (23.53%) ಸೇರಿದಂತೆ ರಫ್ತು ತಾಣಗಳು ಬಲವಾಗಿ ಬೆಂಬಲ ನೀಡಿವೆ. ಈ ದೇಶಗಳು 2025 ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಲವಾದ ಬೆಳವಣಿಗೆಯನ್ನು ದಾಖಲಿಸಿವೆ.

ರಫ್ತು ಪ್ರಚಾರ ಮಿಷನ್ (ಇ.ಪಿ.ಎಂ)

ರಫ್ತು ಪ್ರಚಾರ ಮಿಷನ್ (ಇ.ಪಿ.ಎಂ) ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಒಂದು ಹೆಗ್ಗುರುತು ಉಪಕ್ರಮವಾಗಿದೆ. ಈ ಮಿಷನ್ ವಾಣಿಜ್ಯ ಇಲಾಖೆ, ಎಂ.ಎಸ್‌.ಎಂ.ಇ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ಹಣಕಾಸು ಸಂಸ್ಥೆಗಳು, ರಫ್ತು ಪ್ರಚಾರ ಮಂಡಳಿಗಳು, ಸರಕು ಮಂಡಳಿಗಳು, ಕೈಗಾರಿಕಾ ಸಂಘಗಳು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಪ್ರಮುಖ ಪಾಲುದಾರರನ್ನು ಒಳಗೊಂಡ ಸಹಯೋಗದ ಚೌಕಟ್ಟಿನಲ್ಲಿ ನೆಲೆಗೊಂಡಿದೆ. ಇದು ವಿಕ್ಷಿತ್ ಭಾರತ @2047 ರಾಷ್ಟ್ರೀಯ ಚಿಂತನೆಗೆ ಅನುಗುಣವಾಗಿ ಭಾರತದ ಜಾಗತಿಕ ವ್ಯಾಪಾರ ಚೌಕಟ್ಟನ್ನು ಬಲಪಡಿಸುವ ಮತ್ತು ದೇಶವನ್ನು ಆಧುನಿಕ, ತಂತ್ರಜ್ಞಾನ-ಚಾಲಿತ ಹಾಗು ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆಯಾಗಿರಿಸುವ ಭವಿಷ್ಯದ ಸುಧಾರಣೆಯನ್ನು ಪ್ರತಿನಿಧಿಸುತ್ತದೆ.

ಈ ಮಿಷನ್ ರಫ್ತು ಉತ್ತೇಜನಕ್ಕಾಗಿ ಸಮಗ್ರ, ಹೊಂದಿಕೊಳ್ಳುವ ಮತ್ತು ಡಿಜಿಟಲ್ ಚಾಲಿತ ಚೌಕಟ್ಟನ್ನು ಒದಗಿಸುತ್ತದೆ, ಇದರ ಒಟ್ಟು ವೆಚ್ಚ 2025–26 ಹಣಕಾಸು ವರ್ಷದಿಂದ 2030–31 ಹಣಕಾಸು ವರ್ಷಕ್ಕೆ ರೂ. 25,060 ಕೋಟಿಗಳಷ್ಟಿರುತ್ತದೆ. ಇ.ಪಿ.ಎಂ. ಬಹು ವಿಘಟಿತ ಯೋಜನೆಗಳಿಂದ ಜಾಗತಿಕ ವ್ಯಾಪಾರ ಸವಾಲುಗಳು ಮತ್ತು ವಿಕಸನಗೊಳ್ಳುತ್ತಿರುವ ರಫ್ತುದಾರರ ಅಗತ್ಯಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಏಕ, ಫಲಿತಾಂಶ ಆಧಾರಿತ ಮತ್ತು ಹೊಂದಾಣಿಕೆಯ ಕಾರ್ಯವಿಧಾನಕ್ಕೆ ಕಾರ್ಯತಂತ್ರದ ಬದಲಾವಣೆಯನ್ನು ಸೂಚಿಸುತ್ತದೆ.

ಮಿಷನ್ ಎರಡು ಸಂಯೋಜಿತ ಉಪ-ಯೋಜನೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ:

ಎ. ನಿರ್ಯಾತ್ ಪ್ರೋತ್ಸಾಹನ್ - ಬಡ್ಡಿ ಸಬ್ಸಿಡಿ, ರಫ್ತು ಅಪವರ್ತನ  (ಕೂಡಲೇ ನಗದು ಪಡೆಯಲು ಮಾಡಲಾಗುವ ಡಿಸ್ಕೌಂಟ್ ವ್ಯವಸ್ಥೆ), ಮೇಲಾಧಾರ ಖಾತರಿಗಳು, ಇ-ಕಾಮರ್ಸ್ ರಫ್ತುದಾರರಿಗೆ ಕ್ರೆಡಿಟ್ ಕಾರ್ಡ್‌ಗಳು ಮತ್ತು ಹೊಸ ಮಾರುಕಟ್ಟೆಗಳ ವೈವಿಧ್ಯೀಕರಣಕ್ಕಾಗಿ ಕ್ರೆಡಿಟ್ ವರ್ಧನೆಯ ಬೆಂಬಲದಂತಹ ವಿವಿಧ ಸಾಧನಗಳ ಮೂಲಕ ಎಂ.ಎಸ್.ಎಂ.ಇ. ಗಳಿಗೆ ಕೈಗೆಟುಕುವ ದರದಲ್ಲಿ ವ್ಯಾಪಾರ ಹಣಕಾಸಿನ ಪ್ರವೇಶವನ್ನು ಸುಧಾರಿಸುವತ್ತ ಗಮನಹರಿಸುತ್ತದೆ.

ಬಿ. ನಿರ್ಯಾತ್ ದಿಶಾ - ರಫ್ತು ಗುಣಮಟ್ಟ ಮತ್ತು ಅನುಸರಣೆ ಬೆಂಬಲ, ಅಂತರರಾಷ್ಟ್ರೀಯ ಬ್ರ್ಯಾಂಡಿಂಗ್, ಪ್ಯಾಕೇಜಿಂಗ್‌ಗೆ ಸಹಾಯ ಮತ್ತು ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವಿಕೆ, ರಫ್ತು ಗೋದಾಮು ಮತ್ತು ಲಾಜಿಸ್ಟಿಕ್ಸ್, ಒಳನಾಡಿನ ಸಾರಿಗೆ ಮರುಪಾವತಿಗಳು ಮತ್ತು ವ್ಯಾಪಾರ ನಿಗಾ ಮತ್ತು ಸಾಮರ್ಥ್ಯ-ನಿರ್ಮಾಣ ಉಪಕ್ರಮಗಳು ಸೇರಿದಂತೆ ಮಾರುಕಟ್ಟೆ ಸಿದ್ಧತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಹಣಕಾಸೇತರ ಅವಶ್ಯಕತೆಗಳ  ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಇ.ಪಿ.ಎಂ, ಬಡ್ಡಿ ಸಮೀಕರಣ ಯೋಜನೆ (ಐ.ಇ.ಎಸ್.) ಮತ್ತು ಮಾರುಕಟ್ಟೆ ಪ್ರವೇಶ ಉಪಕ್ರಮ (ಎಂ.ಎ.ಐ.) ನಂತಹ ಪ್ರಮುಖ ರಫ್ತು ಬೆಂಬಲ ಯೋಜನೆಗಳನ್ನು ಒಟ್ಟುಗೂಡಿಸುತ್ತದೆ, ಅವುಗಳನ್ನು ಸಮಕಾಲೀನ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ಜೋಡಿಸುತ್ತದೆ.

ಡಿಜಿಟಲ್ ಪರಿವರ್ತನೆ

ಡೇಟಾ-ಚಾಲಿತ ಪರಿಹಾರಗಳ ಮೂಲಕ ವ್ಯಾಪಾರ ಸೌಲಭ್ಯ ಮತ್ತು ನಿಗಾವನ್ನು ಬಲಪಡಿಸಲು ವಾಣಿಜ್ಯ ಇಲಾಖೆಯು ತನ್ನ ಡಿಜಿಟಲ್ ರೂಪಾಂತರ ಕಾರ್ಯಸೂಚಿಯನ್ನು ಮುಂದಿಟ್ಟಿದೆ. ಟ್ರೇಡ್ ಇ-ಕನೆಕ್ಟ್ ಮತ್ತು ಟ್ರೇಡ್ ಇಂಟೆಲಿಜೆನ್ಸ್ & ಅನಾಲಿಟಿಕ್ಸ್ (ಟಿ.ಐ.ಎ.) ಪೋರ್ಟಲ್‌ನಂತಹ ಉಪಕ್ರಮಗಳು ಎಲ್ಲಾ ಪಾಲುದಾರರಲ್ಲಿ ವಿವಿಧ ಹಂತಗಳಲ್ಲಿ ಪುರಾವೆ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಗೆ ಬಲವಾದ ಅಡಿಪಾಯವನ್ನು ಹಾಕುತ್ತವೆ. ಟ್ರೇಡ್ ಇ-ಕನೆಕ್ಟ್ ರಫ್ತುದಾರರಿಗೆ ಏಕ ಹಂತದ  ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಆದರೆ (ಟಿ.ಐ.ಎ.) ಪೋರ್ಟಲ್ ಬಹುತೇಕ ನೈಜ-ಸಮಯದ ಮಾರುಕಟ್ಟೆ ಒಳನೋಟಗಳು ಮತ್ತು ಸ್ವಯಂಚಾಲಿತ ವರದಿಯನ್ನು ನೀಡುತ್ತದೆ. 24x7 ಇ-ಐ.ಇ.ಸಿ. ಉತ್ಪಾದನೆ, ಇ.ಸಿ.ಒ.ಒ.2.0 (eCoO 2.0)ಗೆ ಸ್ಥಳಾಂತರ ಮತ್ತು ಅನುಬಂಧ 4ಹೆಚ್. ಪ್ರಮಾಣಪತ್ರಗಳ ಡಿಜಿಟಲೀಕರಣದಂತಹ ಪ್ರಮುಖ ಕ್ರಮಗಳು ಅನುಸರಣೆ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಿವೆ ಮತ್ತು ವ್ಯವಹಾರ ಮಾಡುವ ಅನುಕೂಲತೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿವೆ.

ಇನ್ಸೆಂಟ್ ಲ್ಯಾಬ್ ಗ್ರೋನ್ ಡೈಮಂಡ್ (ಎಲ್‌.ಜಿ.ಡಿ) ಯೋಜನೆ (ಪ್ರಯೋಗಶಾಲೆಯಲ್ಲಿ ವಜ್ರ ಬೆಳೆವ ಯೋಜನೆ) 

ಎಲ್‌.ಜಿ.ಡಿ ಬೀಜಗಳು ಮತ್ತು ಯಂತ್ರಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಐದು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿ ಅನುದಾನವನ್ನು ಐಐಟಿ ಮದ್ರಾಸ್‌ಗೆ ಮಾರ್ಚ್ 2023 ರಂದು ನೀಡಿ ಕಾರ್ಯಾರಂಭ ಮಾಡಲಾಗಿದೆ ಮತ್ತು 242.96 ಕೋಟಿ ರೂ.ಗಳ ಅನುದಾನವನ್ನು ನಿಗದಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಗಮನಾರ್ಹ ಸಾಧನೆ ಮಾಡಲಾಗಿದೆ:

ಎ. ಮೂರು ಸ್ಥಳಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎಲ್‌.ಜಿ.ಡಿಯಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ.

ಬಿ.  ಐದು ವಾಣಿಜ್ಯ ಸಿ.ವಿ.ಡಿ ಯಂತ್ರಗಳ ಸ್ಥಾಪನೆ ಮತ್ತು ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೆಳವಣಿಗೆಯ ಹಾದಿಗಳು ನಡೆಯುತ್ತಿವೆ.

ಸಿ. ಎರಡು ವಾಣಿಜ್ಯ ಹೆಚ್ಪಿಹೆಚ್ಟಿ ಯಂತ್ರಗಳ ಸ್ಥಾಪನೆ ಮತ್ತು ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಯಂತ್ರಗಳಲ್ಲಿ ಆರಂಭಿಕ ಬೆಳವಣಿಗೆಯ ಪ್ರಯೋಗಗಳು ನಡೆಯುತ್ತಿವೆ.

ಡಿ. ಸ್ಥಳೀಯ ಹೆಚ್ಪಿಹೆಚ್ಟಿ ಯಂತ್ರಗಳ ಅಭಿವೃದ್ಧಿ (ಪೂರ್ಣ ಪ್ರಮಾಣದ ಮಾದರಿಗಾಗಿ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ) ನಡೆಯುತ್ತಿದೆ.

ಇ.  ಸಿವಿಡಿ ಯಂತ್ರದ ಪ್ರಮುಖ ಅಂಶವಾದ ಘನ-ಸ್ಥಿತಿಯ ಮೈಕ್ರೋವೇವ್ ಜನರೇಟರ್ (ಎಸ್‌ಎಸ್‌ಎಂಜಿ) ನ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆ ಮತ್ತು ಪ್ರದರ್ಶನ ಪರೀಕ್ಷೆ ನಡೆಯುತ್ತಿದೆ.

ಮುಕ್ತ ವ್ಯಾಪಾರ ಒಪ್ಪಂದಗಳ (ಎಫ್.ಟಿ.ಎ.) ಮಾತುಕತೆಗಳು

ಭಾರತದ ಜಾಗತಿಕ ಆರ್ಥಿಕ ಪಾಲುದಾರಿಕೆಗಳು ಇತ್ತೀಚಿನ ವ್ಯಾಪಾರ ಒಪ್ಪಂದಗಳ ಸರಣಿಯ ಮೂಲಕ ಗಮನಾರ್ಹ ವೇಗವನ್ನು ಪಡೆದುಕೊಂಡಿವೆ, ಇದು ಅದರ ರಫ್ತು ಭೂದೃಶ್ಯವನ್ನು ಮರುರೂಪಿಸುತ್ತಿದೆ. ಹೆಗ್ಗುರುತು ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (ಸಿ.ಇ.ಟಿ.ಎ.) ಭಾರತದ ರಫ್ತಿನ 99% ಗೆ ಸುಂಕ-ಮುಕ್ತ ಪ್ರವೇಶವನ್ನು ನೀಡುತ್ತದೆ, ಇದು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವು 100 ಬಿಲಿಯನ್ ಅಮೆರಿಕನ್ ಡಾಲರ್ ತಲುಪಲು ವೇದಿಕೆಯನ್ನು ಸಿದ್ಧಪಡಿಸುತ್ತದೆ. ಯು.ಕೆ. ಯ ಆಚೆಗೆ, ಯು.ಎ.ಇ.-ಭಾರತ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ( ಸಿ.ಇ.ಪಿ.ಎ.), ಆಸ್ಟ್ರೇಲಿಯಾ-ಭಾರತ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇ.ಸಿ.ಟಿ.ಎ.) ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಸಂಘಟನೆ (ಇ.ಎಫ್.ಟಿ.ಎ.) ದೊಂದಿಗಿನ ಒಪ್ಪಂದದಂತಹ ಕಾರ್ಯತಂತ್ರದ ಒಪ್ಪಂದಗಳೊಂದಿಗೆ ಭಾರತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಇದಲ್ಲದೆ, ಭಾರತವು ಪ್ರಸ್ತುತ ಹಲವಾರು ಪ್ರಮುಖ ದೇಶಗಳು ಮತ್ತು ಪ್ರದೇಶಗಳೊಂದಿಗೆ ಎಫ್.ಟಿ.ಎ. ಕುರಿತು ಮಾತುಕತೆ ನಡೆಸುತ್ತಿದೆ. ಈ ಪಾಲುದಾರಿಕೆಗಳು ವೈವಿಧ್ಯಮಯ ವಲಯಗಳಲ್ಲಿ ಹೊಸ ಅವಕಾಶಗಳನ್ನು ಅನ್ಲಾಕ್ ಮಾಡುತ್ತಿವೆ (ತೆರೆಯುತ್ತಿವೆ)  ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಸಮಗ್ರತೆ/ಏಕೀಕರಣವನ್ನು  ಬಲಪಡಿಸುತ್ತಿವೆ.

ಪ್ರಸ್ತುತ ನಡೆಯುತ್ತಿರುವ ಎಫ್.ಟಿ.ಎ. ಮಾತುಕತೆಗಳಲ್ಲಿ  ಈ ಕೆಳಗಿನವುಗಳು ಸೇರಿವೆ:

ಎ. ಭಾರತ-ಯುರೋಪಿಯನ್ ಒಕ್ಕೂಟ (ಇ.ಯು.) ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ.)
ಬಿ.  ಭಾರತ-ಯುಎಸ್ಎ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿ.ಟಿ.ಎ.)
ಸಿ. ಭಾರತ ಆಸ್ಟ್ರೇಲಿಯಾ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿ.ಇ.ಸಿ.ಎ.)
ಡಿ. ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ)
ಇ. ಭಾರತ-ಚಿಲಿ ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ)
ಎಫ್. ಭಾರತ - ಕೊರಿಯಾ ಸಿ.ಇ.ಪಿ.ಎ. (ಅಪ್‌ಗ್ರೇಡ್ ಮಾತುಕತೆ-ಮೇಲ್ದರ್ಜೆಗೆ ಏರಿಸುವ ಮಾತುಕತೆ)
ಜಿ. ಭಾರತ-ಪೆರು ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ.)
ಹೆಚ್.. ಭಾರತ-ಶ್ರೀಲಂಕಾ ಆರ್ಥಿಕ ಮತ್ತು ತಂತ್ರಜ್ಞಾನ ಸಹಕಾರ ಒಪ್ಪಂದ (ಇ.ಟಿ.ಸಿ.ಎ.)
ಐ. ಭಾರತ-ಇ.ಎ.ಇ.ಯು ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ.)
ಜೆ. ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ.)
ಕೆ. ಅಸಿಯಾನ್ -ಭಾರತ ಸರಕುಗಳಲ್ಲಿ ವ್ಯಾಪಾರ ಒಪ್ಪಂದ (ಎ.ಐ.ಟಿ.ಐ.ಜಿ.ಎ.-AITIGA)

ದ್ವಿಪಕ್ಷೀಯ ಸಹಕಾರ

ಎ. ಉತ್ತರ ಅಮೆರಿಕಾ

i. ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಮೆರಿಕದ ಗೌರವಾನ್ವಿತ ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 13, 2025 ರಂದು 'ಮಿಷನ್ 500' ನ್ನು ಘೋಷಿಸಿದ್ದಾರೆ - 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 500 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಅದರಂತೆ, ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ತ್ವರಿತ ತೀರ್ಮಾನಕ್ಕಾಗಿ ಭಾರತ ಮತ್ತು ಅಮೆರಿಕ ವ್ಯಾಪಾರ ತಂಡಗಳ ನಡುವೆ ಚರ್ಚೆಗಳು ನಡೆಯುತ್ತಿವೆ.
ii. ವ್ಯಾಪಾರ ಮತ್ತು ಹೂಡಿಕೆಯ ಕುರಿತು 7 ನೇ ಭಾರತ-ಕೆನಡಾ ಸಚಿವರ ಸಂವಾದವು ನವೆಂಬರ್ 13, 2025 ರಂದು ಹೊಸದಿಲ್ಲಿಯಲ್ಲಿ ನಡೆಯಿತು. ಭಾರತದ ಗೌರವಾನ್ವಿತ ವ್ಯಾಪಾರ ಮತ್ತು ವಾಣಿಜ್ಯ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಕೆನಡಾದ ಅಂತರರಾಷ್ಟ್ರೀಯ ವ್ಯಾಪಾರ ಸಚಿವ ಶ್ರೀ ಮಣೀಂದರ್ ಸಿದ್ಧು ಅವರು ಇದರ ಸಹ-ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಸಹಕಾರಕ್ಕಾಗಿ ಭವಿಷ್ಯದ ಕಾರ್ಯಸೂಚಿಯನ್ನು ನಿಗದಿಪಡಿಸುವ ಗುರಿಯನ್ನು ಹೊಂದಿರುವ ಪರಸ್ಪರ ತೊಡಗಿಕೊಳ್ಳುವುದಕ್ಕೆ ಸಂಬಂಧಿಸಿ ನವೀಕೃತ ಹಂತವನ್ನು ಗುರುತಿಸಿತು. ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಆದ್ಯತೆಯ ಕ್ಷೇತ್ರಗಳಲ್ಲಿ ವಲಯ ಸಹಯೋಗವನ್ನು ಮುನ್ನಡೆಸುವ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು. ಸರಕು ಮತ್ತು ಸೇವೆಗಳ ವ್ಯಾಪಾರವನ್ನು ಒಳಗೊಂಡ ಇತ್ತೀಚಿನ ವ್ಯಾಪಾರ ನೀತಿ ಬೆಳವಣಿಗೆಗಳನ್ನು ಸಚಿವರು ಪರಿಶೀಲಿಸಿದರು ಮತ್ತು ಪರಸ್ಪರ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು.
iii ಗೌರವಾನ್ವಿತ ವ್ಯಾಪಾರ ಮತ್ತು ವಾಣಿಜ್ಯ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 10, 2025 ರಂದು ಮೆಕ್ಸಿಕೋದ ವ್ಯಾಪಾರ ಸಮನ್ವಯ ಮಂಡಳಿಯ (ಕಾನ್ಸೆಜೊ ಕೋಆರ್ಡಿನೇಡರ್ ಎಂಪ್ರೆಸರಿಯಲ್- ಸಿ.ಸಿ.ಇ.) ಅಧ್ಯಕ್ಷರಾದ ಶ್ರೀ ಫ್ರಾನ್ಸಿಸ್ಕೊ ಸೆರ್ವಾಂಟೆಸ್ ಅವರನ್ನು ಭೇಟಿಯಾದರು. ಈ ಸಭೆಯು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಬಲಪಡಿಸುವತ್ತ ಕೇಂದ್ರೀಕೃತವಾಗಿತ್ತು, ವ್ಯಾಪಾರ, ಹೂಡಿಕೆ, ಆರ್ಥಿಕ ಸಹಕಾರವನ್ನು ವಿಸ್ತರಿಸುವುದು, ವ್ಯಾಪಾರ ಸಹಯೋಗಗಳನ್ನು ಬೆಳೆಸುವುದು ಮತ್ತು ವೈವಿಧ್ಯಮಯ ವಲಯಗಳಲ್ಲಿ ಅವಕಾಶಗಳನ್ನು ಅನ್ವೇಷಿಸುವ ಬಗ್ಗೆ ಚರ್ಚೆಗಳು ನಡೆದವು.

ಬಿ. ಯುರೋಪ್

i. ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (ಸಿ.ಇ.ಟಿ.ಎ.-CETA)ಕ್ಕೆ ಜುಲೈ 2025 ರಲ್ಲಿ ಸಹಿ ಹಾಕಲಾಯಿತು. ಈ ಒಪ್ಪಂದವು ಜವಳಿ, ಚರ್ಮ ಮತ್ತು ಮುತ್ತು ರತ್ನಗಳಂತಹ ಪ್ರಮುಖ ಭಾರತೀಯ ಕಾರ್ಮಿಕ-ಕೇಂದ್ರಿತ ವಲಯಗಳಿಗೆ ತಕ್ಷಣದ ಸುಂಕ-ಮುಕ್ತ ಪ್ರವೇಶವನ್ನು ಒದಗಿಸುತ್ತದೆ, ಯು.ಕೆ.ಯು  ಕೋಟಾಗಳ ಅಡಿಯಲ್ಲಿ ವಿಸ್ಕಿ ಮತ್ತು ಆಟೋಮೊಬೈಲ್‌ಗಳಂತಹ ಉನ್ನತ-ಮಟ್ಟದ ಸರಕುಗಳ ಮೇಲೆ ಹಂತಹಂತವಾಗಿ ಸುಂಕ ಕಡಿತವನ್ನು ಪಡೆಯುತ್ತದೆ. ಸೇವೆಗಳು ಮತ್ತು ಚಲನಶೀಲತೆಯನ್ನು ಹೆಚ್ಚಿಸುವ ಪ್ರಮುಖ ಅಂಶಗಳೊಂದಿಗೆ ಹಲವಾರು ವಲಯಗಳಲ್ಲಿ ಮಾರುಕಟ್ಟೆ ಪ್ರವೇಶ, ಅಲ್ಪಾವಧಿಯ ಯು.ಕೆ. ನಿಯೋಜನೆಗಳಲ್ಲಿ ಭಾರತೀಯ ವೃತ್ತಿಪರರಿಗೆ ವೆಚ್ಚವನ್ನು ಉಳಿಸುವ ನಿರ್ದಿಷ್ಟ ಡಬಲ್ ಕೊಡುಗೆ ಸಮಾವೇಶ ಮತ್ತು ವ್ಯಾಪಾರ ಸಂದರ್ಶಕರು, ಬಾಣಸಿಗರು ಮತ್ತು ಸಂಗೀತಗಾರರಿಗೆ ಸುವ್ಯವಸ್ಥಿತ ಪ್ರವೇಶ ಸೇರಿವೆ, ಇವೆಲ್ಲವೂ ವಿಶಾಲವಾದ "ವಿಷನ್ 2035" ಕಾರ್ಯತಂತ್ರದ ಮಾರ್ಗಸೂಚಿಯಿಂದ ಬೆಂಬಲಿತವಾಗಿದೆ.
ii. ಭಾರತ-ಯುಕೆ ಎಫ್‌ಟಿಎ ಮಾತುಕತೆಗಳ 14 ಸುತ್ತುಗಳು ಪೂರ್ಣಗೊಂಡಿವೆ. ತಾಂತ್ರಿಕ ಚರ್ಚೆಗಳು 2025 ರ ನವೆಂಬರ್ 3-7 ರ ಅವಧಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದವು ಮತ್ತು ಮುಂಬರುವ ಚರ್ಚೆಯು 2025 ರ ಡಿಸೆಂಬರ್ 3-9 ರವರೆಗೆ ಹೊಸದಿಲ್ಲಿಯಲ್ಲಿ ನಿಗದಿಯಾಗಿದೆ. ಇದಲ್ಲದೆ, ವರ್ಷದಲ್ಲಿ ಹೆಚ್.ಸಿ.ಐ.ಎಂ. ಮತ್ತು ಇ.ಯು. ಆಯುಕ್ತರ ನಡುವೆ ಹಲವಾರು ಉನ್ನತ ಸಂವಾದಗಳನ್ನು ಸಹ ನಡೆಸಲಾಯಿತು.
iii. ಜಂಟಿ ವ್ಯಾಪಾರ ಮತ್ತು ಹೂಡಿಕೆ ಸಮಿತಿಯ ಸ್ಥಾಪನೆಯ ಕುರಿತಾದ ತಿಳುವಳಿಕಾ ಒಡಂಬಡಿಕೆಗೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಮತ್ತು ನೆದರ್ಲ್ಯಾಂಡ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಡುವೆ ಮೇ 13, 2025 ರಂದು ಸಹಿ ಹಾಕಲಾಯಿತು.
iv. ಭಾರತ - ಪೋರ್ಚುಗಲ್ ಜಂಟಿ ಆರ್ಥಿಕ ಆಯೋಗದ 6 ನೇ ಅಧಿವೇಶನವು ಜನವರಿ 23, 2025 ರಂದು ವರ್ಚುವಲ್ ಆಗಿ ನಡೆಯಿತು.
v. ಸ್ಲೋವಾಕ್-ಭಾರತೀಯ ಜಂಟಿ ಆರ್ಥಿಕ ಸಮಿತಿಯ 12 ನೇ ಅಧಿವೇಶನವು ಫೆಬ್ರವರಿ 19, 2025 ರಂದು ಹೊಸದಿಲ್ಲಿಯಲ್ಲಿ ನಡೆಯಿತು.
vi. ಭಾರತ-ಬೆಲ್ಜಿಯಂ ಲಕ್ಸೆಂಬರ್ಗ್ ಆರ್ಥಿಕ ಒಕ್ಕೂಟ (ಬಿ.ಎಲ್.ಇ.ಯು.-BLEU) ಜಂಟಿ ಆರ್ಥಿಕ ಆಯೋಗದ (ಜೆ.ಇ.ಸಿ.-JEC) 18 ನೇ ಅಧಿವೇಶನವು ಏಪ್ರಿಲ್ 9, 2024 ರಂದು ಹೊಸದಿಲ್ಲಿಯಲ್ಲಿ ನಡೆಯಿತು.
vii. ಆರ್ಥಿಕ ಸಹಕಾರಕ್ಕಾಗಿ ಇರುವ ಭಾರತ-ಇಟಲಿ ಜಂಟಿ ಸಮಿತಿಯ 22 ನೇ ಅಧಿವೇಶನವು ಜೂನ್ 5, 2025 ರಂದು ಇಟಲಿಯ ಬ್ರೆಸಿಯಾದಲ್ಲಿ ನಡೆಯಿತು.
viii. ಭಾರತ-ಫಿನ್ಲ್ಯಾಂಡ್ ಜಂಟಿ ಆಯೋಗದ 21 ನೇ ಅಧಿವೇಶನವು ಅಕ್ಟೋಬರ್ 17, 2024 ರಂದು ಹೊಸದಿಲ್ಲಿಯಲ್ಲಿ ನಡೆಯಿತು.
ix. ಭಾರತ-ರೊಮೇನಿಯಾದ 19 ನೇ ಅಧಿವೇಶನದ ಜೆ.ಇ.ಸಿ.  ಸಭೆಯು ನವೆಂಬರ್ 5, 2025 ರಂದು ಬುಖಾರೆಸ್ಟ್‌ನಲ್ಲಿ ನಡೆಯಿತು.
x. ಭಾರತ-ಸ್ಲೊವೇನಿಯಾ ಜಂಟಿ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಸಮಿತಿಯ (ಜೆ.ಸಿ.ಟಿ.ಇ.ಸಿ-JCTEC) 10 ನೇ ಅಧಿವೇಶನವು ನವೆಂಬರ್ 25, 2025 ರಂದು ಹೊಸದಿಲ್ಲಿಯಲ್ಲಿ ನಡೆಯಿತು.
xi. ಇ.ಎಫ್.ಟಿ.ಎ.(EFTA): ಭಾರತ-ಇ.ಎಫ್.ಟಿ.ಎ. ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿ.ಇ.ಪಿ.ಎ.-TEPA) ಅಧಿಕೃತವಾಗಿ ಜಾರಿಗೆ ಬಂದಿರುವುದನ್ನು ಗುರುತಿಸಲು ಅಕ್ಟೋಬರ್ 1, 2025 ರಂದು ಹೊಸದಿಲ್ಲಿಯಲ್ಲಿ "ಸಮೃದ್ಧಿ ಶೃಂಗಸಭೆ 2025" ಎಂಬ ಉನ್ನತ ಮಟ್ಟದ ಕಾರ್ಯಕ್ರಮವನ್ನು ನಡೆಸಲಾಯಿತು. ಇ.ಎಫ್.ಟಿ.ಎ. ಅನ್ನು ಆರ್ಥಿಕ ವ್ಯವಹಾರಗಳ ಸರಕಾರಿ ಸಚಿವಾಲಯದಲ್ಲಿ ಸ್ವಿಸ್ ಸರಕಾರದ ಕಾರ್ಯದರ್ಶಿಯಾಗಿರುವ ಶ್ರೀಮತಿ ಹೆಲೀನ್ ಬಡ್ಲಿಗರ್ ಆರ್ಟಿಡಾ; ಐಸ್ಲ್ಯಾಂಡಿಕ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಬಾಹ್ಯ ವ್ಯಾಪಾರ ಮತ್ತು ಆರ್ಥಿಕ ವ್ಯವಹಾರಗಳ ಮಹಾನಿರ್ದೇಶಕಿ ಶ್ರೀ ರಾಗ್ನರ್ ಕ್ರಿಸ್ಟ್ಜಾನ್ಸನ್; ಲಿಚ್ಟೆನ್‌ಸ್ಟೈನ್‌ನ ವಿದೇಶಾಂಗ ವ್ಯವಹಾರಗಳ ಕಚೇರಿಯ ಉಪ ನಿರ್ದೇಶಕಿ ಶ್ರೀಮತಿ ಕ್ರಿಸ್ಟೀನ್ ಲಿಂಗ್; ಭಾರತಕ್ಕೆ ನಾರ್ವೆಯ ರಾಯಭಾರಿ ಶ್ರೀಮತಿ ಮೇ-ಎಲಿನ್ ಸ್ಟೆನರ್ ಮತ್ತು ಇ.ಎಫ್.ಟಿ.ಎ. ಯ ಉಪ ಪ್ರಧಾನ ಕಾರ್ಯದರ್ಶಿ ಶ್ರೀ ಮಾರ್ಕಸ್ ಸ್ಕ್ಲಾಗೆನ್‌ಹಾಫ್ ಪ್ರತಿನಿಧಿಸಿದರು. ಮುಂದಿನ ಹದಿನೈದು ವರ್ಷಗಳಲ್ಲಿ ಭಾರತದಲ್ಲಿ 100 ಶತಕೋಟಿ ಯುಎಸ್ ಡಾಲರ್ ಹೂಡಿಕೆಗಳನ್ನು ಒಟ್ಟುಗೂಡಿಸುವ ಮತ್ತು ಒಂದು ಮಿಲಿಯನ್ ನೇರ ಉದ್ಯೋಗಗಳ ಸೃಷ್ಟಿಗೆ ಬೆಂಬಲ ನೀಡುವ ಹಂಚಿಕೆಯ ಉದ್ದೇಶಗಳನ್ನು ಗಣ್ಯರು ಸ್ವಾಗತಿಸಿದರು, ಜೊತೆಗೆ ಅನುಷ್ಠಾನ ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಹೂಡಿಕೆ ಸೌಲಭ್ಯ ಕಾರ್ಯವಿಧಾನವನ್ನು ಸಹ ಒದಗಿಸಿದರು. ಈ ಕಾರ್ಯಕ್ರಮವು ಎಲ್ಲಾ ಪಕ್ಷಗಳಿಂದ ಹಲವಾರು ವ್ಯಾಪಾರ ಪ್ರತಿನಿಧಿಗಳನ್ನು ಒಟ್ಟುಗೂಡಿಸಿತು, ಹೊಸ ಸಂಬಂಧಗಳನ್ನು ಸ್ಥಾಪಿಸಲು ಮತ್ತು ಅಸ್ತಿತ್ವದಲ್ಲಿರುವ ಪಾಲುದಾರಿಕೆಗಳನ್ನು ಬಲಪಡಿಸಲು ಅವಕಾಶವನ್ನು ಒದಗಿಸಿತು. ಸಮೃದ್ಧಿ ಶೃಂಗಸಭೆಯು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಇ.ಎಫ್.ಟಿ.ಎ. ದೇಶಗಳ ಕಂಪನಿಗಳಿಂದ ವಿವಿಧ ಪ್ರಮುಖ ವಲಯಗಳಲ್ಲಿ ಅಂದರೆ ಸಮುದ್ರ, ನವೀಕರಿಸಬಹುದಾದ ಇಂಧನ, ಜೀವರಾಸಾಯನಿಕ ಮತ್ತು ಉತ್ಪಾದನಾ ಯಾಂತ್ರೀಕರಣದಲ್ಲಿ ಹಲವಾರು ಹೂಡಿಕೆ ಘೋಷಣೆಗಳನ್ನು ದಾಖಲಿಸಿತು.  

ಸಿ. ದಕ್ಷಿಣ ಏಷ್ಯಾ

i. ಭಾರತ ಮತ್ತು ನೇಪಾಳ ನಡುವಿನ ಅನಧಿಕೃತ ವ್ಯಾಪಾರವನ್ನು ನಿಯಂತ್ರಿಸಲು ವ್ಯಾಪಾರ, ಸಾಗಣೆ ಮತ್ತು ಸಹಕಾರದ ಕುರಿತು ಅಂತರ-ಸರ್ಕಾರಿ ಸಮಿತಿ (ಎಲ್‌ಜಿಸಿ) ಸಭೆಯು ಜನವರಿ 10 - 11, 2025 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯಿತು. ಇದರ ಜೊತೆಗೆ ನೇಪಥ್ಯದಲ್ಲಿ, ಎರಡನೇ ಜಂಟಿ ವ್ಯಾಪಾರ ವೇದಿಕೆ ಸಭೆಯು ಜನವರಿ 11, 2025 ರಂದು ಕಠ್ಮಂಡುವಿನ ಚಂದ್ರಗಿರಿಯಲ್ಲಿ ನಡೆಯಿತು.
ii. ಭಾರತ ಮತ್ತು ನೇಪಾಳ ನಡುವಿನ ಸಾರಿಗೆ ಒಪ್ಪಂದಕ್ಕೆ ಶಿಷ್ಟಾಚಾರವನ್ನು ತಿದ್ದುಪಡಿ ಮಾಡುವ ಮೂಲಕ ವಿಸ್ತೃತ ವ್ಯಾಖ್ಯಾನದ ಅಡಿಯಲ್ಲಿ ಬೃಹತ್ ಸರಕು ಸೇರಿದಂತೆ ಜೋಗ್ಬಾನಿ (ಭಾರತ) ಮತ್ತು ಬಿರಾಟ್‌ನಗರ (ನೇಪಾಳ) ನಡುವೆ ರೈಲು ಆಧಾರಿತ ಸರಕು ಸಾಗಣೆಯನ್ನು ಸುಗಮಗೊಳಿಸಲು ವಿನಿಮಯ ಪತ್ರ (ಎಲ್‌ಒಇ) ಕ್ಕೆ ಸಹಿ ಹಾಕಲಾಯಿತು. ವಿಸ್ತೃತ ವ್ಯಾಖ್ಯಾನದ ಅಡಿಯಲ್ಲಿ ಬೃಹತ್ ಸರಕು ಸೇರಿದಂತೆ ಜೋಗ್ಬಾನಿ (ಭಾರತ) ಮತ್ತು ಬಿರಾಟ್‌ನಗರ (ನೇಪಾಳ) ನಡುವೆ ರೈಲು ಆಧಾರಿತ ಸರಕು ಸಾಗಣೆಯನ್ನು ಸುಗಮಗೊಳಿಸಲು ಎರಡೂ ದೇಶಗಳು ನವೆಂಬರ್ 13, 2025 ರಂದು ವಿನಿಮಯ ಪತ್ರ (ಎಲ್‌ಒಇ) ವನ್ನು ಪರಸ್ಪರ ವಿನಿಮಯ ಮಾಡಿಕೊಂಡವು. ಈ ಉದಾರೀಕರಣವು ಪ್ರಮುಖ ಸಾರಿಗೆ ಕಾರಿಡಾರ್‌ಗಳಾದ ಕೋಲ್ಕತ್ತಾ-ಜೋಗ್ಬಾನಿ, ಕೋಲ್ಕತ್ತಾ-ನೌತನ್ವಾ (ಸುನೌಲಿ), ಮತ್ತು ವಿಶಾಖಪಟ್ಟಣಂ-ನೌತನ್ವಾ (ಸುನೌಲಿ) ಗಳಿಗೆ ವಿಸ್ತರಿಸುತ್ತದೆ, ಇದರಿಂದಾಗಿ ಎರಡೂ ದೇಶಗಳ ನಡುವಿನ ಬಹುಮಾದರಿ ವ್ಯಾಪಾರ ಸಂಪರ್ಕ ಮತ್ತು ಮೂರನೇ ದೇಶಗಳೊಂದಿಗೆ ನೇಪಾಳದ ವ್ಯಾಪಾರವನ್ನು ಬಲಪಡಿಸುತ್ತದೆ.
iii. ಭಾರತ-ಮಾಲ್ಡೀವ್ಸ್ ಎಫ್.ಟಿ.ಎ. -ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಎಫ್.ಟಿ.ಎ.  ಗೆ ಉಲ್ಲೇಖದ ನಿಯಮ-ನಿಬಂಧನೆಗಳಿಗೆ (ಟಿ.ಒ.ಆರ್.-ToR) ಜುಲೈ 3, 2025 ರಂದು ಮಾಲ್ಡೀವ್ಸ್‌ನ ಮಾಲೆಯಲ್ಲಿ ಸಹಿ ಹಾಕಲಾಯಿತು. ಮುಂಬರುವ ಎಫ್.ಟಿ.ಎ.  ಮಾತುಕತೆಗಳಿಗೆ ಚೌಕಟ್ಟು ಮತ್ತು ವ್ಯಾಪ್ತಿಯನ್ನು ಟಿ.ಒ.ಆರ್. ಹೊಂದಿಸುತ್ತದೆ. ಜುಲೈ 25-26, 2025 ರಂದು ಪ್ರಧಾನ ಮಂತ್ರಿಗಳು ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದದ (IMFTA) ಉಲ್ಲೇಖದ ನಿಯಮ ನಿಬಂಧನೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು ಮತ್ತು ಮಾತುಕತೆಗಳನ್ನು ಪ್ರಾರಂಭಿಸಲಾಗಿದೆ.

ಡಿ. ಈಶಾನ್ಯ ಏಷ್ಯಾ (ಎನ್.ಇ.ಎ.-NEA)

ಭಾರತ-ತೈವಾನ್ ವರ್ಕಿಂಗ್ ಗ್ರೂಪ್ ಆನ್ ಟ್ರೇಡ್ (ಡಬ್ಲ್ಯು.ಜಿ.ಟಿ-WGT) ನ 10 ನೇ ಸಭೆಯನ್ನು 8.10.2025 ರಂದು ವರ್ಚುವಲ್ ಮೋಡ್‌ನಲ್ಲಿ ನಡೆಸಲಾಯಿತು. ಪೂರೈಕೆ ಸರಪಳಿ ವೈವಿಧ್ಯೀಕರಣ, ಮಾರುಕಟ್ಟೆ ಪ್ರವೇಶ, ಸುಂಕ ರಹಿತ ವ್ಯವಸ್ಥೆಯಲ್ಲಿನ ಅಡೆತಡೆಗಳು ಮತ್ತು ಸಹಿ ಹಾಕುವ ಹಂತದಲ್ಲಿರುವ/ಅನುಷ್ಠಾನದಲ್ಲಿರುವ ಒಪ್ಪಂದಗಳು ಸೇರಿದಂತೆ ಹಲವಾರು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. 2021 ರಲ್ಲಿ ಸಹಿ ಮಾಡಲಾದ ಮತ್ತು ಜುಲೈ 2024 ರಲ್ಲಿ ಜಾರಿಗೆ ತರಲಾದ ಒಪ್ಪಂದಗಳಲ್ಲಿ ಒಂದಾದ ಸಾವಯವ ಸಮಾನತೆಯ ತಿಳುವಳಿಕಾ ಒಡಂಬಡಿಕೆಯು ಸೆಪ್ಟೆಂಬರ್ 2025 ರಲ್ಲಿ ಭಾರತದಿಂದ ತೈವಾನ್‌ಗೆ ಸಾವಯವ ಚಹಾದ ಮೊದಲ ರಫ್ತಿಗೆ ಅವಕಾಶ ಒದಗಿಸಿದೆ.

ಇ. ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ (ಡಬ್ಲ್ಯು.ಎ.ಎನ್.ಎ.-WANA)

i. ಭಾರತ-ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ.-FTA): ಭಾರತ ಮತ್ತು ಇಸ್ರೇಲ್ 2010 ರಿಂದ ಎಫ್.ಟಿ.ಎ. ಕುರಿತು ಮಾತುಕತೆ ನಡೆಸುತ್ತಿವೆ, 280 ಸುಂಕ ಮಾರ್ಗಗಳನ್ನು ಒಳಗೊಂಡ ಹತ್ತು ಸುತ್ತುಗಳನ್ನು ಪೂರ್ಣಗೊಳಿಸಿವೆ. ಎರಡೂ ಕಡೆಯವರು ಅಕ್ಟೋಬರ್ 2021ರಲ್ಲಿ ಮಾತುಕತೆಗಳನ್ನು ಪುನರಾರಂಭಿಸಲು ಒಪ್ಪಿಕೊಂಡರೂ, ಭಾರತವು ಬಯಸಿದ ಅರ್ಥಪೂರ್ಣ ಸೇವೆಗಳ ಮಾರುಕಟ್ಟೆ ಪ್ರವೇಶವನ್ನು ಒದಗಿಸಲು ಇಸ್ರೇಲ್ ಹಿಂಜರಿಯುತ್ತಿರುವ ಕಾರಣ ಪ್ರಗತಿ ಸ್ಥಗಿತಗೊಂಡಿತು, ವಿಶೇಷವಾಗಿ ಐಟಿ ವೃತ್ತಿಪರರು ಮತ್ತು ಹೆಚ್ಚು ನುರಿತ ಕೆಲಸಗಾರರ ತಾತ್ಕಾಲಿಕ ಚಲನೆಗೆ ಸಂಬಂಧಿಸಿದಂತೆ, ಏಪ್ರಿಲ್ 2023 ರಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಸಿ.ಐ.ಎಂ. ಕಳವಳ ಪುನರುಚ್ಛರಿಸಿತ್ತು. ಅಂದಿನಿಂದ ಮಾತುಕತೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಮತ್ತು ನವೆಂಬರ್ 2025ರಲ್ಲಿ, ಭಾರತ ಮತ್ತು ಇಸ್ರೇಲ್ ಪ್ರಸ್ತಾವಿತ ಎಫ್.ಟಿ.ಎ.ಗಾಗಿ ಉಲ್ಲೇಖಿತ ನಿಯಮ ನಿಬಂಧನೆಗಳಿಗೆ ಸಹಿ ಹಾಕಿದವು, ಇದು ಚರ್ಚೆಗಳ/ಮಾತುಕತೆಗಳ  ಔಪಚಾರಿಕ ಪುನರಾರಂಭಕ್ಕೆ ದಾರಿ ಮಾಡಿಕೊಟ್ಟಿತು.
ii. ಭಾರತ್ ಮಾರ್ಟ್, ದುಬೈ: ಭಾರತ್ ಮಾರ್ಟ್ ದುಬೈನ ಜೆ.ಎ.ಎಫ್.ಝಡ್.ಎ.(JAFZA) ಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಒಂದು ಹೆಗ್ಗುರುತು ಭೌತಿಕ ವ್ಯಾಪಾರ ಕೇಂದ್ರವಾಗಿದ್ದು, ಭಾರತೀಯ ರಫ್ತುದಾರರಿಗೆ ಯುಎಇ, ಮಧ್ಯಪ್ರಾಚ್ಯ, ಆಫ್ರಿಕಾ, ಮಧ್ಯ ಏಷ್ಯಾ ಮತ್ತು ಯುರೋಪ್‌ಗೆ ಸೇವೆ ಸಲ್ಲಿಸುವ ಅದಕ್ಕೆಂದೇ ಮೀಸಲಾದ ಸಗಟು ಮತ್ತು ಚಿಲ್ಲರೆ ವೇದಿಕೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. 2024 ರ ಫೆಬ್ರವರಿಯಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಇದಕ್ಕೆ ಅಡಿಪಾಯ ಹಾಕಿದರು. 2024 ರ ಮೊದಲಾರ್ಧದಲ್ಲಿ ಆರು ರೋಡ್ ಶೋಗಳು ಮತ್ತು ಹದಿನೆಂಟು ಹೂಡಿಕೆದಾರರ ಸಭೆಗಳನ್ನು ಒಳಗೊಂಡಂತೆ ವ್ಯಾಪಕ ಸಂಪರ್ಕವನ್ನು ನಡೆಸಲಾಯಿತು. ಈ ಸೌಲಭ್ಯವು 2025 ರ ಅಂತ್ಯದ ವೇಳೆಗೆ ನಿರ್ಮಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ, 2027 ರ ವೇಳೆಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ ಮತ್ತು 2027 ರ ಮೂರನೇ ತ್ರೈಮಾಸಿಕದ ವೇಳೆಗೆ ಪೂರ್ಣ ಕಾರ್ಯಾಚರಣೆಯನ್ನು ಆರಂಭಿಸುತ್ತದೆ. 
iii. ಭಾರತ-ಯುಎಇ ಸಿಇಪಿಎ: 3 ನೇ ಜಂಟಿ ಸಮಿತಿ ಸಭೆ: ಭಾರತ-ಯುಎಇ ಸಿಇಪಿಎ ಅಡಿಯಲ್ಲಿ 3 ನೇ ಜಂಟಿ ಸಮಿತಿ ಸಭೆಯು ನವೆಂಬರ್ 26, 2025 ರಂದು ಹೊಸದಿಲ್ಲಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಜಯ್ ಬದೂ ಮತ್ತು ಗೌರವಾನ್ವಿತ ಜುಮಾ ಅಲ್ ಕೈಟ್ ಅವರ ಸಹ-ಅಧ್ಯಕ್ಷತೆಯಲ್ಲಿ ನಡೆಯಿತು. 2024-25 ರ ಹಣಕಾಸು ವರ್ಷದಲ್ಲಿ ದ್ವಿಪಕ್ಷೀಯ ವ್ಯಾಪಾರವು 100.06 ಶತಕೋಟಿ ಅಮೆರಿನನ್ ಡಾಲರಿಗೆ ಏರಿಕೆಯಾಗಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು, ಇದು 19.6% ಹೆಚ್ಚಳವನ್ನು ಸೂಚಿಸುತ್ತದೆ. ಮಾರುಕಟ್ಟೆ ಪ್ರವೇಶ, ಡೇಟಾ ಹಂಚಿಕೆ, ಚಿನ್ನದ ಟಿ.ಆರ್.ಕ್ಯೂ. ಹಂಚಿಕೆ, ಡಂಪಿಂಗ್ ವಿರೋಧಿ ಪ್ರಕರಣಗಳು, ಮೂಲದ ನಿಯಮಗಳು, ಸೇವೆಗಳು ಮತ್ತು ಬಿ.ಐ.ಎಸ್. ಸಮನ್ವಯವನ್ನು ಒಳಗೊಂಡ ಸಿ.ಇ.ಪಿ.ಎ. ಅನುಷ್ಠಾನದ ಸಮಗ್ರ ವಿಮರ್ಶೆಯನ್ನು ಸಭೆ ನಡೆಸಿತು. ಔಷಧಗಳಲ್ಲಿ ನಿಯಂತ್ರಕ ಸಹಕಾರ, ಮೂಲ ಪ್ರಮಾಣಪತ್ರದ ಸಮಸ್ಯೆಗಳ ಪರಿಹಾರ ಮತ್ತು ಆಹಾರ ಸುರಕ್ಷತೆ ಮತ್ತು ತಾಂತ್ರಿಕ ಅವಶ್ಯಕತೆಗಳ ಕುರಿತು ಎ.ಪಿ.ಇ.ಡಿ.ಎ-ಎಂ.ಸಿ.ಸಿ.ಎ.ಇ. (APEDA–MoCCAE) ಒಪ್ಪಂದಕ್ಕೆ ಶೀಘ್ರ ಸಹಿ ಹಾಕುವುದನ್ನು ಚರ್ಚೆಗಳು ಒತ್ತಿಹೇಳಿದವು. ವ್ಯಾಪಾರ ಸೌಲಭ್ಯ, ನಿಯಂತ್ರಕ ಸಹಯೋಗ ಮತ್ತು ದತ್ತಾಂಶ ಹಂಚಿಕೆ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ಸೇವೆಗಳ ಉಪಸಮಿತಿ ಸಭೆಯನ್ನು ಆದಷ್ಟು ಬೇಗ ಕರೆಯಲು ಎರಡೂ ಕಡೆಯವರು ಒಪ್ಪಿಕೊಂಡರು.
iv ಭಾರತ-ಸೌದಿ ಅರೇಬಿಯಾ ವ್ಯಾಪಾರ ಕಾರ್ಯ ಗುಂಪು (ಟಿ.ಡಬ್ಲ್ಯು.ಜಿ.-TWG): ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಸಚಿವ ಮಟ್ಟದ ಆರ್ಥಿಕತೆ ಮತ್ತು ಹೂಡಿಕೆ ಸಮಿತಿಯ ಅಡಿಯಲ್ಲಿ ವ್ಯಾಪಾರ, ಆರ್ಥಿಕತೆ ಮತ್ತು ಹಣಕಾಸು ಕುರಿತು ಜಂಟಿ ಕಾರ್ಯ ಗುಂಪನ್ನು ಸ್ಥಾಪಿಸಲು ಭಾರತ ಮತ್ತು ಸೌದಿ ಅರೇಬಿಯಾ 2025 ರಲ್ಲಿ ತಾತ್ವಿಕವಾಗಿ ಒಪ್ಪಿಕೊಂಡಿವೆ. ಹೆಚ್ಚುವರಿ ಕಾರ್ಯದರ್ಶಿ ಮಟ್ಟದಲ್ಲಿ ಸಹ-ಅಧ್ಯಕ್ಷತೆಯನ್ನು ಪ್ರಸ್ತಾಪಿಸುವ ಟಿ.ಒ.ಆರ್. (ToR)  ಅನ್ನು ಭಾರತ ಹಂಚಿಕೊಂಡಿದೆ. ಕಾರ್ಯವಿಧಾನವನ್ನು ಸಕ್ರಿಯಗೊಳಿಸಲು ಮೊದಲ ಟಿ.ಡಬ್ಲ್ಯು.ಜಿ. ಸಭೆಯನ್ನು ಕರೆಯುವುದು ಎರಡೂ ಕಡೆಯವರ ಪರಿಗಣನೆಯಲ್ಲಿದೆ.
v. ವ್ಯಾಪಾರ ಮತ್ತು ಹೂಡಿಕೆ ಕುರಿತು ಭಾರತ-ಬಹ್ರೇನ್ ಜೆ.ಡಬ್ಯು.ಜಿ. (JWG) : ವ್ಯಾಪಾರ ಮತ್ತು ಹೂಡಿಕೆ ಕುರಿತು ಭಾರತ-ಬಹ್ರೇನ್ ಜಂಟಿ ಕಾರ್ಯಕಾರಿ ಗುಂಪಿನ ಸ್ಥಾಪನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಭಾರತವು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ತನ್ನ ಜೆ.ಡಬ್ಯು.ಜಿ.  ಸಂಯೋಜನೆಯನ್ನು ಹಂಚಿಕೊಂಡಿದೆ ಮತ್ತು ಕರಡು ಟಿ.ಒ.ಆರ್. ಅನ್ನು ಒದಗಿಸಿದೆ, ಅದಕ್ಕೆ ಬಹ್ರೇನ್ ಕಾಮೆಂಟ್‌ಗಳನ್ನು (ಪ್ರತಿಕ್ರಿಯೆಗಳನ್ನು) ಸಲ್ಲಿಸಿದೆ. ಪರಿಷ್ಕೃತ ಟಿ.ಒ.ಆರ್.  ಅನ್ನು ಪ್ರಸ್ತುತ ವಾಣಿಜ್ಯ ಇಲಾಖೆ ಪರಿಶೀಲಿಸುತ್ತಿದೆ. ಸಿ.ಇ.ಪಿ.ಎ. ಮಾತುಕತೆಗಳನ್ನು ಪ್ರಾರಂಭಿಸಲು ಎರಡೂ ಕಡೆಯವರು ಕರಡು ಟಿ.ಒ.ಆರ್.   ಅನ್ನು ವಿನಿಮಯ ಮಾಡಿಕೊಂಡಿದ್ದಾರೆ.
vi. ಭಾರತ-ಕತಾರ್ ಜಂಟಿ ಆಯೋಗದ ಸಭೆ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ಮಟ್ಟದಲ್ಲಿ ಕತಾರ್‌ನಲ್ಲಿ 6–7 ಅಕ್ಟೋಬರ್ 2025 ರಂದು ನಡೆದ ನವೀಕರಿಸಿದ ಭಾರತ-ಕತಾರ್ ಜಂಟಿ ಆಯೋಗದ ಸಭೆಯು 14 ಬಿಲಿಯನ್ ಅಮೆರಿಕನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಪರಿಶೀಲಿಸಿತು ಮತ್ತು 2030 ರ ವೇಳೆಗೆ ವ್ಯಾಪಾರವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿತು. ಭಾರತ-ಕತಾರ್ ಸಿ.ಇ.ಪಿ.ಎ. ಗಾಗಿ ಟಿ.ಒ.ಆರ್.ಅನ್ನು ಅಂತಿಮಗೊಳಿಸುವುದನ್ನು ತ್ವರಿತಗೊಳಿಸಲು ಮತ್ತು ಡಿಜಿಟಲ್ ಆರ್ಥಿಕತೆ, ಆರೋಗ್ಯ ರಕ್ಷಣೆ, ಕೃಷಿ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಪರಿಸರ ಸುಸ್ಥಿರತೆಯಾದ್ಯಂತ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ನೇಪಥ್ಯದಲ್ಲಿ ಎಫ್.ಐ.ಸಿ.ಸಿ.ಐ., ಸಿ.ಐ.ಐ., ಅಸೋಚಾಮ್  ಮತ್ತು ಕತಾರ್ ಚೇಂಬರ್ ಸಹ-ಆಯೋಜಿಸಿದ್ದ ಮೊದಲ ಜಂಟಿ ವ್ಯಾಪಾರ ಮಂಡಳಿ ಸಭೆಯನ್ನು ಖಾಸಗಿ ವಲಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವ ಸಲುವಾಗಿ ಕರೆಯಲಾಗಿತ್ತು.
vii. ಭಾರತ-ಕತಾರ್ ಮುಕ್ತ ವ್ಯಾಪಾರ ಒಪ್ಪಂದ: ಡಿಸೆಂಬರ್ 7, 2024 ರಂದು ಭಾರತದ ವಿದೇಶಾಂಗ ಸಚಿವರೊಂದಿಗಿನ ಸಭೆಯ ಸಂದರ್ಭದಲ್ಲಿ, ಯುಎಇ ಮತ್ತು ಒಮಾನ್‌ನೊಂದಿಗೆ ಭಾರತದ ಸಿ.ಇ.ಪಿ.ಎ. ಗಳಂತೆಯೇ ಎಫ್.ಟಿ.ಎ. ಕುರಿತು ಮಾತುಕತೆ ನಡೆಸಲು ಕತಾರ್ ಆಸಕ್ತಿ ವ್ಯಕ್ತಪಡಿಸಿತು. ಕತಾರ್‌ನ ಹಿಂದಿನ ಆವೃತ್ತಿಯ ಕುರಿತು ಕಾಮೆಂಟ್‌ಗಳನ್ನು ಒಳಗೊಂಡ ಕರಡು ಟಿ.ಒ.ಆರ್. ಅನ್ನು ಭಾರತ ಹಂಚಿಕೊಂಡಿದೆ. ಟಿ.ಒ.ಆರ್.  ಅನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಮತ್ತು ಎರಡೂ ಕಡೆಯವರು ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
viii. ಭಾರತ-ಒಮಾನ್ ಸಿ.ಇ.ಪಿ.ಎ.: ಭಾರತ ಮತ್ತು ಒಮಾನ್ ನವೆಂಬರ್ 2023 ರಲ್ಲಿ ಸಿ.ಇ.ಪಿ.ಎ. ಮಾತುಕತೆಗಳನ್ನು ಪ್ರಾರಂಭಿಸಿದವು. ಮೂರು ಸುತ್ತಿನ ವ್ಯಾಪಕ ಮಾತುಕತೆಗಳ ನಂತರ (ನವೆಂಬರ್ 2023–ಮಾರ್ಚ್ 2024), ಪಠ್ಯ ಮತ್ತು ಮಾರುಕಟ್ಟೆ ಪ್ರವೇಶ ಕೊಡುಗೆಗಳನ್ನು ಒಳಗೊಂಡಂತೆ ಎಲ್ಲಾ ಸಿ.ಇ.ಪಿ.ಎ. ಘಟಕಗಳ ಕುರಿತು ಎರಡೂ ಕಡೆಯವರು ಒಪ್ಪಂದಕ್ಕೆ ಬಂದರು. ಮಾರ್ಚ್ 2024 ರಲ್ಲಿ ಸಲ್ಲಿಸಲಾದ ಕ್ಯಾಬಿನೆಟ್ ಪ್ರಸ್ತಾವನೆಯನ್ನು ಮುಂದೂಡಲಾಯಿತು, ಇದು ಮತ್ತಷ್ಟು ಮರು ಮಾತುಕತೆಗಳಿಗೆ ಕಾರಣವಾಯಿತು. 4ನೇ ಸುತ್ತಿನ (ಸೆಪ್ಟೆಂಬರ್ 2024) ಮತ್ತು 5ನೇ ಸುತ್ತಿನ (13–14 ಜನವರಿ 2025) ಪರಿಷ್ಕೃತ ಕೊಡುಗೆಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಸಕ್ಷಮ ಪ್ರಾಧಿಕಾರದ ಅನುಮೋದನೆಯ ನಂತರ, ಸಹಿ ಮತ್ತು ಅನುಮೋದನೆಗಾಗಿ ಕರಡು ಕ್ಯಾಬಿನೆಟ್ ಟಿಪ್ಪಣಿಯನ್ನು ಸಂಬಂಧಿತ ಸಚಿವಾಲಯಗಳಿಗೆ ರವಾನಿಸಲಾಯಿತು. ಎರಡೂ ಕಡೆಯವರು ಈಗ ಆಂತರಿಕ ಅನುಮೋದನೆಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ.
ix. ಭಾರತ-ಓಮನ್ ಜಂಟಿ ಆಯೋಗದ ಸಭೆ: 11 ನೇ ಜಂಟಿ ಆಯೋಗದ ಸಭೆಯು ಜನವರಿ 27-28, 2025 ರಂದು ಓಮನ್‌ನಲ್ಲಿ ಗೌರವಾನ್ವಿತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ನೇತೃತ್ವದಲ್ಲಿ ನಡೆಯಿತು. ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಆಹಾರ ಭದ್ರತೆ, ನವೀಕರಿಸಬಹುದಾದ ಇಂಧನ ಮತ್ತು ಇತರ ಪ್ರಮುಖ ವಲಯಗಳನ್ನು ಒಳಗೊಂಡ ಚರ್ಚೆಗಳು ನಡೆದವು. ಸಚಿವರು ಎಫ್.ಐ.ಸಿ.ಸಿ.ಐ. ಬೆಂಬಲದೊಂದಿಗೆ ಭಾರತ-ಓಮನ್ ಜಂಟಿ ವ್ಯಾಪಾರ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಪ್ರಮುಖ ಓಮನ್ ಸಿಇಒಗಳೊಂದಿಗೆ ವ್ಯಾಪಾರ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದರು. 12 ನೇ ಜೆ.ಸಿ.ಎಂ. 2026 ಕ್ಕೆ ನಿಗದಿಯಾಗಿದೆ.
x. ವ್ಯಾಪಾರ ಮತ್ತು ವಾಣಿಜ್ಯದ ಕುರಿತು ಭಾರತ-ಕುವೈತ್ ಜೆ.ಡಬ್ಲ್ಯು.ಜಿ.: ಹೊಸದಾಗಿ ಸ್ಥಾಪಿಸಲಾದ ಭಾರತ-ಕುವೈತ್ ಜೆ.ಡಬ್ಲ್ಯು.ಜಿ.  ತನ್ನ ಮೊದಲ ಸಭೆಯನ್ನು ಅಕ್ಟೋಬರ್ 23, 2025 ರಂದು ವರ್ಚುವಲ್ ಮೋಡ್‌ನಲ್ಲಿ ನಡೆಸಿತು. ಚರ್ಚೆಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ಕಾರ್ಯಕ್ಷಮತೆಯ ವಿಮರ್ಶೆ, ವ್ಯಾಪಾರ ಬುಟ್ಟಿಯ ವೈವಿಧ್ಯೀಕರಣ ಮತ್ತು ಸುಂಕ ರಹಿತ ಅಡೆತಡೆಗಳ ಕಡಿತ ಸೇರಿವೆ. ಎರಡೂ ಕಡೆಯವರು ಯಂತ್ರೋಪಕರಣಗಳು, ಆಟೋಮೊಬೈಲ್‌ಗಳು, ಜವಳಿ, ಔಷಧಗಳು, ನಿರ್ಮಾಣ ಸಾಮಗ್ರಿಗಳು ಮತ್ತು ವಿದ್ಯುತ್ ಉಪಕರಣಗಳಲ್ಲಿ ಭಾರತಕ್ಕೆ ಹೊಸ ರಫ್ತು ಅವಕಾಶಗಳನ್ನು ಪರಿಗಣಿಸಿದರು. ಪ್ರಮುಖ ವಲಯಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸುವ ನಿರೀಕ್ಷೆಗಳು ಮತ್ತು ವ್ಯಾಪಾರ ಸಹಕಾರವನ್ನು ಹೆಚ್ಚಿಸಲು ಸಂಭಾವ್ಯ ಒಪ್ಪಂದಗಳನ್ನು ಸಹ ಅವರು ಅನ್ವೇಷಿಸಿದರು.
xi. ಭಾರತ-ಜಿಸಿಸಿ ಮುಕ್ತ ವ್ಯಾಪಾರ ಒಪ್ಪಂದ: ಭಾರತ ಮತ್ತು ಜಿಸಿಸಿ ನಡುವಿನ ಎಫ್‌ಟಿಎ ಮಾತುಕತೆಗಳು 2004 ರಲ್ಲಿ ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಪ್ರಾರಂಭವಾದವು, ನಂತರ 2006 ಮತ್ತು 2008 ರಲ್ಲಿ ಎರಡು ಸುತ್ತುಗಳು ನಡೆದವು. ಜಿಸಿಸಿ 2011 ರಲ್ಲಿ ಜಾಗತಿಕವಾಗಿ ಮಾತುಕತೆಗಳನ್ನು ಸ್ಥಗಿತಗೊಳಿಸಿತು. ನವೆಂಬರ್ 2022 ರಲ್ಲಿ ಜಿಸಿಸಿ ಪ್ರಧಾನ ಕಾರ್ಯದರ್ಶಿ ಭಾರತಕ್ಕೆ ಭೇಟಿ ನೀಡಿದ ನಂತರ ಮಾತುಕತೆಗಳು ಪುನರಾರಂಭಗೊಂಡವು. ಅಕ್ಟೋಬರ್ 2023 ರಲ್ಲಿ ಜಿಸಿಸಿ ಪರಿಷ್ಕೃತ ಟಿಒಆರ್ ಅನ್ನು ಹಂಚಿಕೊಂಡಿತು ಮತ್ತು ಎರಡೂ ಕಡೆಯವರು ನವೀಕರಿಸಿದ ಆವೃತ್ತಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಟಿಒಆರ್ ಅನ್ನು ಅಂತಿಮಗೊಳಿಸುವ ಚರ್ಚೆಗಳು ನಡೆಯುತ್ತಿವೆ.

ಎಫ್. ಆಫ್ರಿಕಾ:

i.    ಭಾರತ-ಉಗಾಂಡ ಜಂಟಿ ವ್ಯಾಪಾರ ಸಮಿತಿಯ ಮೂರನೇ ಅಧಿವೇಶನವು ಮಾರ್ಚ್ 25 - 26, 2025 ರ ನಡುವೆ ಹೊಸದಿಲ್ಲಿಯಲ್ಲಿ ನಡೆಯಿತು. ಸಾರ್ವಜನಿಕ ಕಾಮಗಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ, ಕೃಷಿ ಮತ್ತು ಮಿತ್ರ ವಲಯಗಳು, ಸಾಂಪ್ರದಾಯಿಕ ಔಷಧ, ಟೆಲಿ-ಔಷಧಿಗಳು, ಪ್ರಮಾಣೀಕರಣದಲ್ಲಿ ಸಹಯೋಗವನ್ನು ಬಲಪಡಿಸುವುದು ಇತ್ಯಾದಿಗಳಲ್ಲಿ ಭಾರತೀಯ ಔಷಧಶಾಸ್ತ್ರವನ್ನು ಗುರುತಿಸಲು ಮತ್ತು ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆಗಳನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಜೆ.ಟಿ.ಸಿ. ಯ ನೇಪಥ್ಯದಲ್ಲಿ, ಭಾರತದ ಕೈಗಾರಿಕಾ ಮತ್ತು ರಫ್ತು ಪರಿಸರ ವ್ಯವಸ್ಥೆಯ ಬಗ್ಗೆ ಉಗಾಂಡಾದ ನಿಯೋಗಕ್ಕೆ ಒಳನೋಟಗಳನ್ನು ಒದಗಿಸಲು ನೋಯ್ಡಾ ಎಸ್.ಇ.ಝಡ್. ಗೆ ಭೇಟಿಯನ್ನು ಏರ್ಪಡಿಸಲಾಯಿತು.

ii. ದಕ್ಷಿಣ ಆಫ್ರಿಕಾದೊಂದಿಗೆ ವ್ಯಾಪಾರ ಮತ್ತು ಹೂಡಿಕೆಯ ಜಂಟಿ ಕಾರ್ಯಕಾರಿ ಗುಂಪಿನ ಎರಡನೇ ಅಧಿವೇಶನವು ಏಪ್ರಿಲ್ 22 - 23, 2025 ರಂದು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆಯಿತು. ಎರಡೂ ಕಡೆಯವರು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ವಿವರವಾದ ವಿಮರ್ಶೆಯನ್ನು ಕೈಗೊಂಡರು ಹಾಗು  ಮತ್ತಷ್ಟು ವಿಸ್ತರಣೆಗೆ ಇನ್ನೂ ಬಳಕೆಯಾಗಿರದ ಸಾಮರ್ಥ್ಯವನ್ನು ಗುರುತಿಸಿಕೊಂಡರು. ದ್ವಿಪಕ್ಷೀಯ ವ್ಯಾಪಾರ ಮತ್ತು ಪರಸ್ಪರ ಪ್ರಯೋಜನಕಾರಿ ಹೂಡಿಕೆಗಳನ್ನು ಹೆಚ್ಚಿಸಲು ಎರಡೂ ಕಡೆಯವರು ಹಲವಾರು ಗಮನ ಹರಿಸಬೇಕಾದ ಕ್ಷೇತ್ರಗಳನ್ನು ಗುರುತಿಸಿದರು.
iii. ಭಾರತ - ಜಾಂಬಿಯಾ ಜಂಟಿ ವ್ಯಾಪಾರ ಸಮಿತಿ ಸಭೆಯ ಮೂರನೇ ಅಧಿವೇಶನವು ಜೂನ್ 16, 2025 ರಂದು ಹೊಸದಿಲ್ಲಿಯ ವಾಣಿಜ್ಯ ಭವನದಲ್ಲಿ ಹೈಬ್ರಿಡ್ ಮೋಡ್‌ನಲ್ಲಿ ನಡೆಯಿತು. ಎರಡೂ ಕಡೆಯವರು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ವಿವರವಾದ ವಿಮರ್ಶೆಯನ್ನು ಕೈಗೊಂಡರು ಮತ್ತು ಇನ್ನಷ್ಟು ವಿಸ್ತರಣೆಗೆ ಇನ್ನೂ ಬಳಸಿಕೊಳ್ಳದ ವಿಶಾಲ ಸಾಮರ್ಥ್ಯವನ್ನು ಗುರುತಿಸಿದರು. ಈ ನಿಟ್ಟಿನಲ್ಲಿ, ಎರಡೂ ಕಡೆಯವರು ದ್ವಿಪಕ್ಷೀಯ ವ್ಯಾಪಾರ ಮತ್ತು ಪರಸ್ಪರ ಪ್ರಯೋಜನಕಾರಿ ಹೂಡಿಕೆಗಳನ್ನು ಹೆಚ್ಚಿಸಲು ಹಲವಾರು ಗಮನ ಹರಿಸಬೇಕಾದ ಕ್ಷೇತ್ರಗಳನ್ನು ಗುರುತಿಸಿದರು ಮತ್ತು ಗಣಿಗಾರಿಕೆ, ಹಣಕಾಸು, ಕೃಷಿ, ಆಹಾರ ಸಂಸ್ಕರಣೆ, ಎಂ.ಎಸ್.ಎಂ.ಇ., ಔಷಧಗಳು, ಆರೋಗ್ಯ, ಸಾಮರ್ಥ್ಯ ವೃದ್ಧಿ, ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನದಂತಹ ಸಹಯೋಗದ ಸಂಭಾವ್ಯ ಕ್ಷೇತ್ರಗಳನ್ನು ಅನ್ವೇಷಿಸಿದರು.
iv. ಸಿಐಐ ಇಂಡಿಯಾ ಆಫ್ರಿಕಾ ವ್ಯವಹಾರ ಸಮಾವೇಶದ 20 ನೇ ಆವೃತ್ತಿಯು ಆಗಸ್ಟ್ 27 ರಿಂದ 29, 2025 ರವರೆಗೆ ಹೊಸದಿಲ್ಲಿಯ ತಾಜ್ ಪ್ಯಾಲೇಸ್‌ನಲ್ಲಿ ನಡೆಯಿತು. ಆಫ್ರಿಕಾದ 20 ಹಿರಿಯ ಮಂತ್ರಿಗಳು ಮತ್ತು 40 ಕ್ಕೂ ಹೆಚ್ಚು ಹಿರಿಯ ಸರ್ಕಾರಿ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶವು ಆಫ್ರಿಕಾದ 1,100 ಪ್ರತಿನಿಧಿಗಳು ಮತ್ತು ಭಾರತದ 700 ಪ್ರತಿನಿಧಿಗಳು ಸೇರಿದಂತೆ 65 ದೇಶಗಳ 1,800 ಕ್ಕೂ ಹೆಚ್ಚು ಉದ್ಯಮ ನಾಯಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಸಮಾವೇಶದ ಸಮಯದಲ್ಲಿ 2,000 ಕ್ಕೂ ಹೆಚ್ಚು ಬಿ2ಬಿ (ವ್ಯಾಪಾರದಿಂದ ವ್ಯಾಪಾರಕ್ಕೆ)  ಸಭೆಗಳನ್ನು ಅಂತಿಮಗೊಳಿಸಲಾಯಿತು. ಸ್ಥಳೀಯ ಮೌಲ್ಯವರ್ಧನೆ, ಕೈಗಾರಿಕೆಗಳ ಹೆಚ್ಚಿನ ಸ್ಥಳೀಕರಣ ಮತ್ತು ಭವಿಷ್ಯದ ಬೆಳವಣಿಗೆಗೆ ನಿರ್ಣಾಯಕ ಮಾರ್ಗಗಳಾಗಿ ವ್ಯವಹಾರ ಮಾದರಿಗಳಲ್ಲಿ ಸುಸ್ಥಿರತೆಯನ್ನು ಸಂಯೋಜಿಸುವ ಪ್ರಾಮುಖ್ಯತೆಯನ್ನು ಸಮಾವೇಶವು ಎತ್ತಿ ತೋರಿಸಿತು.
v. ಸಮಾವೇಶದ ಹೊರತಾಗಿ, ಅದರ ನೇಪಥ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ನ ಸಹವರ್ತಿಗಳೊಂದಿಗೆ ಗೌರವಾನ್ವಿತ ಹೆಚ್.ಸಿ.ಐ.ಎಂ. ದ್ವಿಪಕ್ಷೀಯ ಸಭೆ ಮತ್ತು ಚಾಡ್ ಮತ್ತು ಗ್ಯಾಂಬಿಯಾದ ವ್ಯಾಪಾರ/ವಾಣಿಜ್ಯ ಸಚಿವರೊಂದಿಗೆ ಸಭೆ ನಡೆಯಿತು.  

ಡಿ.ಜಿ.ಎಫ್.ಟಿ.

i. 2025 ರಲ್ಲಿ, ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ (ಡಿ.ಜಿ.ಎಫ್.ಟಿ.) ಭಾರತದ ವ್ಯಾಪಾರ ಸೌಲಭ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದನ್ನು ಮುಂದುವರೆಸಿತು, ಅಧಿಕೃತ ಮನ್ನಣೆಗಳ ಸಕಾಲಿಕ ವಿತರಣೆ, ನೀತಿ ಕ್ರಮಗಳ ತರ್ಕಬದ್ಧಗೊಳಿಸುವಿಕೆ ಮತ್ತು ವಿದೇಶಿ ವ್ಯಾಪಾರ ನೀತಿ (ಎಫ್.ಟಿ.ಪಿ.) 2023 ಅನ್ನು ವಿಕಸನಗೊಳ್ಳುತ್ತಿರುವ ವ್ಯಾಪಾರ ಮತ್ತು ದೇಶೀಯ ಅವಶ್ಯಕತೆಗಳೊಂದಿಗೆ ಜೋಡಿಸುವ ಮೂಲಕ ಅದು ಕ್ರಮಗಳನ್ನು ಕೈಗೊಂಡಿತು. ಪ್ರಾದೇಶಿಕ ಅಧಿಕಾರಿಗಳು ರಫ್ತುದಾರರಿಗೆ ನಿರ್ಣಾಯಕ ಒಳಹರಿವುಗಳಿಗೆ ಪ್ರವೇಶವನ್ನು ಬೆಂಬಲಿಸಲು ಮತ್ತು ವಿದೇಶಿ ವ್ಯಾಪಾರ ಕಾರ್ಯಾಚರಣೆಗಳ ಸುಗಮ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಗಣನೀಯ ಪ್ರಮಾಣದ ಮುಂಗಡ ಅಧಿಕೃತ ಮನ್ನಣೆಗಳು, ಇ.ಪಿ.ಸಿ.ಜಿ. ಪರವಾನಗಿಗಳು ಮತ್ತು ಐ.ಇ.ಸಿ. ಗಳನ್ನು ಪ್ರಕ್ರಿಯೆಗೊಳಪಡಿಸಿದರು.
ii. ವರ್ಷದಲ್ಲಿ, ಡಿ.ಜಿ.ಎಫ್.ಟಿ. ಹಲವಾರು ಮಹತ್ವದ ನೀತಿ ನವೀಕರಣಗಳನ್ನು ಪರಿಚಯಿಸಿತು, ಇದರಲ್ಲಿ ರತ್ನ ಮತ್ತು ಆಭರಣ ವಲಯವನ್ನು ಬೆಂಬಲಿಸಲು ಡೈಮಂಡ್ ಇಂಪ್ರೆಸ್ಟ್ ಅಧಿಕೃತ ಮನ್ನಣೆಯನ್ನು ಪ್ರಾರಂಭಿಸುವುದು, ದೇಶೀಯ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಪ್ರಮುಖ ದ್ವಿದಳ ಧಾನ್ಯಗಳಿಗೆ "ಉಚಿತ" ಆಮದು ನೀತಿಯ ವಿಸ್ತರಣೆ ಮತ್ತು ಸಂಶ್ಲೇಷಿತ ಹೆಣೆದ ಬಟ್ಟೆಗಳು, ಯೂರಿಯಾ, ಪ್ಲಾಟಿನಂ, ಅಡಿಕೆ, ಕೃಷಿ ಉತ್ಪನ್ನಗಳು ಮತ್ತು ಸೂಕ್ಷ್ಮ ಆಹಾರ ಸರಕುಗಳಿಗೆ ಸಂಬಂಧಿಸಿದ ಆಮದು ಮತ್ತು ರಫ್ತು ನೀತಿಗಳಲ್ಲಿ ನಿಯಂತ್ರಕ ಹೊಂದಾಣಿಕೆಗಳು ಸೇರಿವೆ. ನೇಪಾಳಕ್ಕೆ ಗೋಧಿ ಮತ್ತು ಸೆನೆಗಲ್‌ಗೆ ಅಕ್ಕಿಗೆ ರಫ್ತು ಅನುಮತಿಗಳನ್ನು ನೀಡಲಾಯಿತು, ಜೊತೆಗೆ ಮಾಲ್ಡೀವ್ಸ್‌ಗೆ ಅಗತ್ಯ ಪೂರೈಕೆಗಳನ್ನು ಭಾರತದ ನೆರೆಹೊರೆಯ ಬದ್ಧತೆಗಳ ಅಡಿಯಲ್ಲಿ ಸುಗಮಗೊಳಿಸಲಾಯಿತು.
iii. ಭವಿಷ್ಯದ ನೀತಿ ಬದಲಾವಣೆಗಳಿಗಾಗಿ ಔಪಚಾರಿಕ ಸಮಾಲೋಚನೆಗಳನ್ನು ಸಾಂಸ್ಥಿಕಗೊಳಿಸಲು, ಪ್ಯಾರಾಗಳು 1.07ಎ ಮತ್ತು 1.07ಬಿ ಯನ್ನು ಅಳವಡಿಸಲು ಎಫ್.ಟಿ.ಪಿಯನ್ನು  ತಿದ್ದುಪಡಿ ಮಾಡುವ ಮೂಲಕ ಡಿ.ಜಿ.ಎಫ್.ಟಿ. ನೀತಿ ಪಾರದರ್ಶಕತೆ ಮತ್ತು ಪಾಲುದಾರರ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಿತು. ಹಲವಾರು ಅಧಿಸೂಚನೆಗಳು ಭಾರತದ ಆಮದು ಮತ್ತು ರಫ್ತು ನೀತಿ ವೇಳಾಪಟ್ಟಿಗಳನ್ನು 2024 ಮತ್ತು 2025 ರ ಕಸ್ಟಮ್ಸ್ ಸುಂಕ ಮತ್ತು ಹಣಕಾಸು ಕಾಯಿದೆಗಳಿಗೆ ನವೀಕರಣಗಳೊಂದಿಗೆ ಜೋಡಿಸಿ, ನಿಯಂತ್ರಕ ಸುಸಂಬದ್ಧತೆಯನ್ನು ಖಚಿತಪಡಿಸುತ್ತವೆ.
iv. ಮುಂಗಡ ಅಧಿಕಾರ ಮನ್ನಣೆ ಹೊಂದಿರುವವರು, ಎಸ್.ಇ.ಝಡ್. ಗಳು ಮತ್ತು ಇ.ಒ.ಯು. ಗಳು ಸೇರಿದಂತೆ ಆರ್.ಒ.ಡಿ.ಟಿ.ಇ.ಪಿ. (RoDTEP) ಪ್ರಯೋಜನಗಳ ಪುನಃಸ್ಥಾಪನೆ ಮತ್ತು ಜೋಡಣೆಯು ಪ್ರಮುಖ ಸುಗಮ ಕ್ರಮವಾಗಿತ್ತು. ಎ.ಎ./ಇ.ಒ.ಯು/ ಎಸ್.ಇ.ಝಡ್. ಘಟಕಗಳು ವ್ಯಾಖ್ಯಾನಿಸಲಾದ ಪರಿಸ್ಥಿತಿಗಳಲ್ಲಿ ಕಡ್ಡಾಯ-ಗುಣಮಟ್ಟ-ನಿಯಂತ್ರಿತ ಇನ್‌ಪುಟ್‌ಗಳನ್ನು ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಕ್ಯು.ಸಿ.ಒ.-ನಿಯಂತ್ರಿತ ಆಮದುಗಳಿಗೆ ದಿ.ಜಿ.ಎಫ್.ಟಿ. ನಿಬಂಧನೆಗಳನ್ನು ಸುವ್ಯವಸ್ಥಿತಗೊಳಿಸಿತು. 
v. ಎಸ್.ಸಿ.ಒ.ಎಂ.ಇ.ಟಿ ಪಟ್ಟಿಗೆ ನವೀಕರಣಗಳು, ಬಂದರು ನಿರ್ಬಂಧಗಳ ತರ್ಕಬದ್ಧಗೊಳಿಸುವಿಕೆ ಮತ್ತು ಐ.ಟಿ.ಸಿ (ಹೆಚ್.ಎಸ್.) ನ ಅಧ್ಯಾಯಗಳು 28, 29, 38, 70–85, ಮತ್ತು 71 ರ ಅಡಿಯಲ್ಲಿ ಐಟಂಗಳಿಗೆ ನಿಗದಿ ಮಾಡಲಾಗಿದ್ದ ಆಮದು ಷರತ್ತುಗಳಿಗೆ ತಿದ್ದುಪಡಿಗಳನ್ನು ಒಳಗೊಂಡಂತೆ ಕಾರ್ಯತಂತ್ರದ ಮತ್ತು ಪೂರೈಕೆ-ಸರಪಳಿ ಭದ್ರತೆಯನ್ನು ಕಾಪಾಡಿಕೊಳ್ಳಲು ಈ ವರ್ಷದಲ್ಲಿ  ನಿರಂತರ ಕ್ರಮಗಳನ್ನು ಕೈಗೊಳ್ಳಲಾಯಿತು. 

ಬಿ. ಜಿಎಸ್ಟಿ ಅನುಸರಣೆಯನ್ನು ಸರಾಗಗೊಳಿಸಲು, ಗಡಿಯಾಚೆಗಿನ ಇ-ಕಾಮರ್ಸ್‌ನಲ್ಲಿ ತೊಡಗಿರುವ ಎಂಎಸ್‌ಎಂಇಗಳು ಮತ್ತು ಸಣ್ಣ ರಫ್ತುದಾರರಿಗೆ ಮರುಪಾವತಿ ಸೌಲಭ್ಯವನ್ನು ಸುಧಾರಿಸುವುದು. [ಈ ವಿಷಯಗಳನ್ನು ಡಿಜಿಎಫ್‌ಟಿ ಮೇ 8, 2025 ರಂದು ಡಿಒಆರ್‌ಗೆ ರವಾನಿಸಿದೆ]
ಸಿ. ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ಹೊಸ ಡಿಜಿಟಲ್ ಸೌಲಭ್ಯವನ್ನು ಪರಿಚಯಿಸಿದೆ, ಇದು ರಫ್ತುದಾರರಿಗೆ ಬಳಕೆಯಾಗದ ಮತ್ತು ವರ್ಗಾಯಿಸದ ಸುಂಕ-ಮುಕ್ತ ಆಮದು ಅಧಿಕಾರ ಮನ್ನಣೆ ಪತ್ರಗಳನ್ನು (ಡಿಎಫ್‌ಐಎಗಳು) ದಿನಾಂಕ 09/09/2025 ರ ಸಾರ್ವಜನಿಕ ಸೂಚನೆ 22.ರನ್ವಯ ಆನ್‌ಲೈನ್‌ನಲ್ಲಿ ಸರಿಪಡಿಸಲು ಅನುವು ಮಾಡಿಕೊಡುತ್ತದೆ. 
ಡಿ. ಡೈಮಂಡ್ ಇಂಪ್ರೆಸ್ಟ್ ಅಧಿಕಾರ ಮನ್ನಣೆ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ರಫ್ತುದಾರರು  ತಮ್ಮ ಇತ್ತೀಚಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಇನ್ನೂ ಅಂತಿಮವಾಗಿರದಿದ್ದರೆ, ಅರ್ಜಿ ವರ್ಷದ ಡಿಸೆಂಬರ್ 31 ರೊಳಗೆ ಐಟಿಆರ್ ಪುರಾವೆಯನ್ನು ಸಲ್ಲಿಸುವುದಾದರೆ, ದಿನಾಂಕ 19/08/2025 ರ ಅಧಿಸೂಚನೆಯನ್ವಯ ಈಗ ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣಪತ್ರವನ್ನು ಸಲ್ಲಿಸಬಹುದು, 
ಇ. ಗುಣಮಟ್ಟ ನಿಯಂತ್ರಣ ಆದೇಶಗಳ (ಕ್ಯೂಸಿಒ) ಅಡಿಯಲ್ಲಿ ಒಳಗೊಳ್ಳುವ ಇನ್‌ಪುಟ್‌ಗಳನ್ನು ಹೊಂದಿರುವ ಮುಂಗಡ ಅಧಿಕಾರ ಮನ್ನಣೆಗಳಿಗಾಗಿ ರಫ್ತು ಬಾಧ್ಯತೆ (ಇಒ) ಅವಧಿಯನ್ನು ನಿಯಮಿತ ಮುಂಗಡ ಮನ್ನಣೆ ಅಧಿಕಾರ ಪತ್ರಗಳಿಗೆ ಸಮನಾಗಿಸಲಾಗಿದೆ.
ಎಫ್. ಕ್ಯೂ.ಸಿ.ಒ. ಇನ್‌ಪುಟ್‌ಗಳೊಂದಿಗೆ ಎ.ಎ.ಯ ಹಿಂದಿನ ರಫ್ತು ಬಾಧ್ಯತೆಯ ಅವಧಿಯನ್ನು 180 ದಿನಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ಅಂತಹ ಇನ್‌ಪುಟ್‌ಗಳಿಲ್ಲದ ಎ.ಎ. ಗಳ ಇ.ಒ. 18 ತಿಂಗಳುಗಳವರೆಗೆ ಇರುತ್ತದೆ.
ಜಿ. ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ (ಡಿ.ಜಿ.ಎಫ್.ಟಿ.) ಭಾರತದ ಎಸ್.ಸಿ.ಒ.ಎಂ.ಇ.ಟಿ. (SCOMET)  (ವಿಶೇಷ ರಾಸಾಯನಿಕಗಳು, ಜೀವಿಗಳು, ವಸ್ತುಗಳು, ಉಪಕರಣಗಳು ಮತ್ತು ತಂತ್ರಜ್ಞಾನಗಳು) ಪಟ್ಟಿಯನ್ನು ನವೀಕರಿಸುವ ಮೂಲಕ ಸುಧಾರಣೆಯನ್ನು ಪರಿಚಯಿಸಿದೆ, ಇದು ಅಂತರರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳು ಮತ್ತು ಭವಿಷ್ಯ-ಆಧಾರಿತ ನಿಯಂತ್ರಣಗಳನ್ನು ಪ್ರತಿಬಿಂಬಿಸುತ್ತದೆ. ನವೀಕರಣವು ವಾಸ್ಸೆನಾರ್ ಅರೇಂಜ್‌ಮೆಂಟ್ (ಡಬ್ಲ್ಯು.ಎ.-WA) ನಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ 18 ಪ್ರಸ್ತಾಪಗಳನ್ನು ಆಧರಿಸಿದೆ, ಇದಕ್ಕೆ ಭಾರತ ತನ್ನ ಬೆಂಬಲವನ್ನು ನೀಡಿದೆ.
ಹೆಚ್. ಅಧಿಸೂಚಿತ ಸರಕುಗಳ ರಫ್ತಿನಲ್ಲಿ ತೊಡಗಿರುವ ಇ.ಐ.ಸಿ. ಅನುಮೋದಿತ ಸಂಸ್ಥೆಗಳಲ್ಲಿ ತಂತ್ರಜ್ಞರ ಮಾನ್ಯತೆಯ ಅವಧಿಯನ್ನು ಎರಡರಿಂದ ಮೂರು ವರ್ಷಗಳವರೆಗೆ ವಿಸ್ತರಿಸಲು ರಫ್ತು ಪರಿಶೀಲನಾ ಮಂಡಳಿ (ಇ.ಐ.ಸಿ.) ಅನುಮೋದನೆ ನೀಡಿದೆ. ರಫ್ತಿಗೆ ಉದ್ದೇಶಿಸಲಾದ ಸರಕುಗಳ ನಿಗದಿತ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಈ ಸಂಸ್ಥೆಗಳು ಅಧಿಕಾರಿಗಳಿಂದ ಅನುಮೋದಿಸಲ್ಪಟ್ಟ ಅರ್ಹ ತಂತ್ರಜ್ಞರನ್ನು ಹೊಂದಿರಬೇಕು.

vi. ಇ-ಆಡಳಿತ ಕ್ಷೇತ್ರದಲ್ಲಿ, ಡಿಜಿಎಫ್‌ಟಿ, ಇ-ಆಡಳಿತ ಮತ್ತು ವ್ಯಾಪಾರ ಸೌಲಭ್ಯ ವಿಭಾಗದ ಮೂಲಕ 6 ವರ್ಷಗಳ ಹಿಂದೆ ಪ್ರಾರಂಭವಾದ ತನ್ನ ಪ್ರವರ್ತಕ ಕೆಲಸವನ್ನು ಮುಂದುವರೆಸಿದೆ.

ಎ. ಟ್ರೇಡ್ ಕನೆಕ್ಟ್ ಇ-ಪ್ಲಾಟ್‌ಫಾರ್ಮ್‌ನಲ್ಲಿ ಭಾರತ ಮೂಲ (ಎಸ್.ಎಫ್.ಐ.) ಅಡಿಯಲ್ಲಿ ವ್ಯಾಪ್ತಿಯನ್ನು ವಿಸ್ತರಿಸುವ ವ್ಯಾಪಾರ ಸೂಚನೆಯನ್ನು ಡಿ.ಜಿ.ಎಫ್.ಟಿ. ಅಕ್ಟೋಬರ್ 29, 2025 ರಂದು ಬಿಡುಗಡೆ ಮಾಡಿತು. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಕನಿಷ್ಠ 100,000 ಅಮೆರಿಕನ್ ಡಾಲರ್ ರಫ್ತು ವಹಿವಾಟು ಹೊಂದಿರುವ ರಫ್ತುದಾರರನ್ನು ಈಗ ಪರಿಶೀಲಿಸಲಾದ ಎಸ್.ಎಫ್.ಐ. ಡೈರೆಕ್ಟರಿಯಲ್ಲಿ ಸೇರಿಸಲಾಗುತ್ತದೆ. ಪರಿಷ್ಕೃತ ಚೌಕಟ್ಟು ಪ್ರೊಫೈಲ್ ಸಂಪೂರ್ಣತೆ, ಪ್ರಮಾಣೀಕೃತ ಡೇಟಾ ಕ್ಷೇತ್ರಗಳು, ಉತ್ಪನ್ನ-ಮಟ್ಟದ ವರ್ಗೀಕರಣ ಮತ್ತು ಇ.ಪಿ.ಸಿ. ಗಳು ಮತ್ತು ಭಾರತೀಯ ಮಿಷನ್‌ಗಳೊಂದಿಗೆ ಡಿಜಿಟಲ್ ಪರಿಶೀಲನೆ ಕಾರ್ಯಗಳನ್ನು ಹೆಚ್ಚಿಸುತ್ತದೆ. ವಿಶ್ವಾಸಾರ್ಹ ಭಾರತೀಯ ಪೂರೈಕೆದಾರರ, ವಿಶೇಷವಾಗಿ ಎಂ.ಎಸ್.ಎಂ.ಇ. ಗಳ ಜಾಗತಿಕ ಅನ್ವೇಷಣೆಯನ್ನು ಬಲಪಡಿಸುವ ಗುರಿಯನ್ನು ಈ ಹಂತ ಹೊಂದಿದೆ.
ಬಿ. ರಫ್ತು ಮತ್ತು ಆಮದು ಸರಕುಗಳಿಗೆ ಸುವ್ಯವಸ್ಥಿತ, ಕಾಗದರಹಿತ ಪ್ರಮಾಣೀಕರಣವನ್ನು ಒದಗಿಸಲು ದೇಶಾದ್ಯಂತ ಮಾನ್ಯತೆ ಪಡೆದ ಪರೀಕ್ಷೆ ಮತ್ತು ತಪಾಸಣೆ ಏಜೆನ್ಸಿಗಳನ್ನು ಸಂಯೋಜಿಸುವ ಏಕೀಕೃತ ಡಿಜಿಟಲ್ ವೇದಿಕೆಯಾದ ಭಾರತ್ ಆಯತ್ ನಿರ್ಯತ್ ಲ್ಯಾಬ್ ಸೇತುವಿನ ಪೈಲಟ್ ಹಂತವನ್ನು ಡಿ.ಜಿ.ಎಫ್.ಟಿ. ಪ್ರಾರಂಭಿಸಿತು. ಟ್ರೇಡ್ ಕನೆಕ್ಟ್ ಇ-ಪ್ಲಾಟ್‌ಫಾರ್ಮ್ ಮೂಲಕ ಪ್ರವೇಶಿಸಬಹುದಾದ ಒಂದೇ ಆನ್‌ಲೈನ್ ಇಂಟರ್ಫೇಸ್ ಮೂಲಕ ರಫ್ತುದಾರರು/ಆಮದುದಾರರು ಡಿಜಿಟಲ್ ಸಹಿ ಮಾಡಿದ ಪರೀಕ್ಷಾ ವರದಿಗಳನ್ನು ಹುಡುಕಲು, ಆಯ್ಕೆ ಮಾಡಲು, ಅರ್ಜಿ ಸಲ್ಲಿಸಲು, ಟ್ರ್ಯಾಕ್ ಮಾಡಲು ಮತ್ತು ಸ್ವೀಕರಿಸಲು ವೇದಿಕೆಯು ಅನುವು ಮಾಡಿಕೊಡುತ್ತದೆ. ಪ್ರಯೋಗಾಲಯಗಳ ಆನ್‌ಬೋರ್ಡಿಂಗ್ ನವೆಂಬರ್ 4, 2025 ರಿಂದ ಪ್ರಾರಂಭವಾಗುತ್ತದೆ ಮತ್ತು ಪರೀಕ್ಷೆಗಾಗಿ ಅರ್ಜಿಗಳು ನವೆಂಬರ್ 15, 2025 ರಿಂದ ನೇರ ಪ್ರಸಾರವಾಗುತ್ತವೆ. ಈ ಪೈಲಟ್ ಯೋಜನೆ ಆರಂಭದಲ್ಲಿ ಟೀ ಬೋರ್ಡ್, ಕಾಫಿ ಬೋರ್ಡ್ ಮತ್ತು ರಬ್ಬರ್ ಬೋರ್ಡ್ ಅಡಿಯಲ್ಲಿ ಲ್ಯಾಬ್‌ಗಳನ್ನು ಒಳಗೊಳ್ಳುತ್ತದೆ, ಕಮಾಡಿಟಿ ಬೋರ್ಡ್‌ಗಳು, ಇಪಿಸಿ-ಎಂಪನೆಲ್ಡ್ ಮತ್ತು ಖಾಸಗಿ ಪ್ರಯೋಗಾಲಯಗಳನ್ನು ಹಂತಹಂತವಾಗಿ ಇದರಲ್ಲಿ ಸೇರಿಸಲಾಗುತ್ತದೆ (ಆನ್‌ಬೋರ್ಡಿಂಗ್ ಮಾಡಲಾಗುತ್ತದೆ) . ಈ ವೇದಿಕೆಯು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತದೆ:

i. ಪ್ರಯೋಗಾಲಯ ಕಾರ್ಯಾಚರಣೆಗಳ ನೈಜ-ಸಮಯದ ಗೋಚರತೆಯ ಮೂಲಕ ಸುಧಾರಿತ ಪಾರದರ್ಶಕತೆ ಮತ್ತು ಹೊಣೆಗಾರಿಕೆ.
ii. ಪರೀಕ್ಷೆ ಮತ್ತು ಕ್ಲಿಯರೆನ್ಸ್ ಕಾರ್ಯವಿಧಾನಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ತಂಗುವ/ಸ್ಥಾಗಿತ್ಯದ  ಸಮಯವನ್ನು ಕಡಿಮೆ ಮಾಡಲಾಗಿದೆ
iii. ನಿಯಂತ್ರಕ ಅನುಸರಣೆ ಮತ್ತು ಪರಸ್ಪರ ಕಾರ್ಯಾಚರಣಾ ಸಾಧ್ಯತೆಯನ್ನು ಬೆಂಬಲಿಸಲು ಜಾಗತಿಕ ದತ್ತಾಂಶ ಪ್ರಮಾಣೀಕರಣವನ್ನು ಸಕ್ರಿಯಗೊಳಿಸಲಾಗಿದೆ
iv. ರಫ್ತುದಾರರಿಗೆ ಪ್ರಯೋಗಾಲಯ ಸೇವೆಗಳಿಗೆ ಕೇಂದ್ರೀಕೃತ ಪ್ರವೇಶ.
v.    ಗಡಿಯಾಚೆಗಿನ ವ್ಯಾಪಾರ ಪರಿಸರ ವ್ಯವಸ್ಥೆಯೊಳಗೆ ಸಮನ್ವಯವನ್ನು ಬಲಪಡಿಸಲಾಗಿದೆ.

ಸಿ.  ಕಳೆದ ಆರು ವರ್ಷಗಳಲ್ಲಿ, ವಿದೇಶಿ ವ್ಯಾಪಾರ ವಲಯದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ (ಡಿ.ಜಿ.ಎಫ್.ಟಿ.-DGFT) ಡಿಜಿಟಲ್ ಮತ್ತು ಪ್ರಕ್ರಿಯೆ ಆಧಾರಿತ ಸುಧಾರಣೆಗಳ ಸರಣಿಯನ್ನು ಕೈಗೊಂಡಿದೆ. ಜುಲೈ 13, 2020 ರಂದು ನಡೆದ ಡಿ.ಜಿ.ಎಫ್.ಟಿ. ಐಟಿ ವ್ಯವಸ್ಥೆಯ ಪರಿಷ್ಕರಣೆಯ ಅನುಷ್ಠಾನವು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸಿತು, ಇದು ಡಿ.ಜಿ.ಎಫ್.ಟಿ -ಸಂಬಂಧಿತ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಕಾಗದರಹಿತ, ಬಳಕೆದಾರ ಸ್ನೇಹಿ ಮತ್ತು ನ್ಯಾವಿಗೇಟ್ ಮಾಡಲು ಸುಲಭವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಡಿ.ಜಿ.ಎಫ್.ಟಿ. ದಾಖಲೆಗಳ ವಿತರಣೆಗೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು, ಪಾಲುದಾರ ಇಲಾಖೆಗಳೊಂದಿಗೆ ನೈಜ-ಸಮಯದ ಡೇಟಾ ವಿನಿಮಯವನ್ನು ಸಕ್ರಿಯಗೊಳಿಸುವುದು, ನೈಜ-ಸಮಯದ ಸ್ಥಿತಿ-ಗತಿ  ಟ್ರ್ಯಾಕಿಂಗ್ ಮೂಲಕ ಹೆಚ್ಚಿನ ಪಾರದರ್ಶಕತೆಯನ್ನು ಖಚಿತಪಡಿಸುವುದು ಮತ್ತು ಕಾಗದರಹಿತ ಹಾಗು ಮಾನವ ಸಂಪರ್ಕರಹಿತ ಅಪ್ಲಿಕೇಶನ್ ಪ್ರಕ್ರಿಯೆಗೆ ಉತ್ತೇಜನ ನೀಡುವುದು ಈ ಪರಿಷ್ಕರಣೆಯ ಉದ್ದೇಶಗಳಲ್ಲಿ ಸೇರಿವೆ.
ಡಿ. ಈ ಸುಧಾರಣೆಗಳು ಕೊನೆಯ ಹಂತದವರೆಗೆ ಸ್ವಯಂಚಾಲಿತ ಯಾಂತ್ರೀಕೃತಗೊಳಿಸುವಿಕೆ, ಸುಧಾರಿತ ಸೇವಾ ವಿತರಣೆ ಮತ್ತು ಪಾಲುದಾರರ ಸಂವಹನವನ್ನು ಸುಗಮಗೊಳಿಸಿವೆ. ಆದ್ಯತೆ ಮತ್ತು ಆದ್ಯತೆಯೇತರ ವಿಭಾಗಗಳಿಗೆ ಇ-ಪ್ರಮಾಣಪತ್ರದ ಮೂಲ ವೇದಿಕೆಯ ಪರಿಚಯಿಸುವಿಕೆಯು ಕೇಂದ್ರೀಕೃತ ವಿತರಣೆ, ಆನ್‌ಲೈನ್ ಪರಿಶೀಲನೆಯನ್ನು ಸಕ್ರಿಯಗೊಳಿಸಿದೆ ಮತ್ತು ಭೌತಿಕ ದಾಖಲಾತಿಯ ಅಗತ್ಯವನ್ನು ತೆಗೆದುಹಾಕಿದೆ. ವೀಡಿಯೊ ಕಾನ್ಫರೆನ್ಸಿಂಗ್ ಆಧಾರಿತ ಇಂಟರ್ಫೇಸ್ ಆದ ಜಾನ್-ಸನ್‌ವೈ, ರಫ್ತುದಾರರು ಮತ್ತು ಆಮದುದಾರರಿಗೆ ವ್ಯಾಪಾರ-ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಗೊತ್ತುಪಡಿಸಿದ ಅಧಿಕಾರಿಗಳಿಗೆ ನೇರ ಪ್ರವೇಶವನ್ನು ಒದಗಿಸಿದೆ. ಟ್ರೇಡ್ ಕನೆಕ್ಟ್ ಇ-ಪ್ಲಾಟ್‌ಫಾರ್ಮ್ ಉದ್ಯಮಿಗಳು ಮತ್ತು ರಫ್ತುದಾರರನ್ನು ಇ.ಪಿ.ಸಿ ಗಳು, ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು ಮತ್ತು ಡಿ.ಜಿ.ಎಫ್.ಟಿ. ಕಚೇರಿಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಸಂಪರ್ಕಿಸಲು ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಇ. ಅಪೆಂಡಿಕ್ಸ್ 4ಹೆಚ್. ಪ್ರಮಾಣೀಕರಣದ ಡಿಜಿಟಲೀಕರಣ, ಮುಂಗಡ ಅಧಿಕಾರ ಮನ್ನಣೆ ಪತ್ರ, ಇಪಿಸಿಜಿ ಮತ್ತು ಸಂಬಂಧಿತ ಎಫ್‌ಟಿಪಿ ಪ್ರಕ್ರಿಯೆಗಳ ಯಾಂತ್ರೀಕರಣದೊಂದಿಗೆ, ಸಂಸ್ಕರಣಾ ಸಮಯ ಕಡಿಮೆಯಾಗಿದೆ, ಸುಧಾರಿತ ಪರಿಶೀಲನೆ ಮತ್ತು ಉತ್ತಮ ಅನುಸರಣೆಗೆ ಕಾರಣವಾಗಿದೆ. ಆನ್‌ಲೈನ್ ಇಪಿಸಿಜಿ ರಿಡೆಂಪ್ಶನ್ ಸೌಲಭ್ಯವು ಮುಚ್ಚುವಿಕೆ/ಅಂತಿಮಗೊಳಿಸುವಿಕೆ  ಮತ್ತು ಮೇಲ್ವಿಚಾರಣಾ ಕಾರ್ಯಗಳನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಿದೆ.
ಎಫ್. ಸ್ವಯಂ-ಪ್ರಮಾಣೀಕೃತ ಇಬಿಆರ್‌ಸಿಗಳು, ಆರ್‌ಸಿಎಂಸಿ ಏಕೀಕರಣ ಮತ್ತು ಸ್ಥಿತಿ ಹೋಲ್ಡರ್ ಪ್ರಮಾಣಪತ್ರ ವಿತರಣೆಯಂತಹ ಮಾಡ್ಯೂಲ್‌ಗಳು ಮಾನವ ಚಾಲಿತ ನಿರ್ವಹಣೆಯನ್ನು ಕಡಿಮೆ ಮಾಡಿವೆ ಮತ್ತು ಕಾರ್ಯವಿಧಾನದ ಪಾರದರ್ಶಕತೆಯನ್ನು ಸುಧಾರಿಸಿವೆ. ಕ್ಯೂಆರ್ ಕೋಡ್ ಮತ್ತು ವಿಶಿಷ್ಟ ದಾಖಲೆ ಗುರುತಿನ ಸಂಖ್ಯೆ ಮೌಲ್ಯೀಕರಣದಂತಹ ದಾಖಲೆ ಪರಿಶೀಲನಾ ಕಾರ್ಯವಿಧಾನಗಳು ಅಧಿಕೃತ ದಾಖಲೆಗಳಿಗೆ ಸುಲಭ ಮತ್ತು ಹೆಚ್ಚು ಸುರಕ್ಷಿತ ಪ್ರವೇಶವನ್ನು ಸಕ್ರಿಯಗೊಳಿಸಿವೆ.
ಜಿ. ಇ-ಕಾಮರ್ಸ್ ರಫ್ತು ಕೇಂದ್ರಗಳ (ಇ.ಸಿ.ಇ.ಹೆಚ್. ECEH) ಸ್ಥಾಪನೆಯು ಗಡಿಯಾಚೆಗಿನ ಇ-ಕಾಮರ್ಸ್ ಚಟುವಟಿಕೆಗಳಿಗೆ ಗೋದಾಮು, ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಲಾಜಿಸ್ಟಿಕ್ಸ್ ಅನ್ನು ಬೆಂಬಲಿಸಿದೆ. ಡಿ.ಜಿ.ಎಫ್.ಟಿ. ವ್ಯಾಪಾರ ಸೌಲಭ್ಯ ಅಪ್ಲಿಕೇಶನ್, ಇ-ಮೀಟಿಂಗ್ ನಿರ್ವಹಣಾ ವ್ಯವಸ್ಥೆಗಳು ಮತ್ತು ವರ್ಚುವಲ್ ಸಹಾಯವಾಣಿಯಂತಹ ಹೆಚ್ಚುವರಿ ಡಿಜಿಟಲ್ ಪರಿಕರಗಳು ಮಾಹಿತಿ ಪ್ರಸರಣ ಮತ್ತು ಅಪ್ಲಿಕೇಶನ್ ಟ್ರ್ಯಾಕಿಂಗ್ ಅನ್ನು ಬೆಂಬಲಿಸಿವೆ.
ಹೆಚ್. ವಿದೇಶಿ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು, COVID-19 ಮತ್ತು ರಷ್ಯಾ-ಉಕ್ರೇನ್ ಸಂಘರ್ಷಕ್ಕಾಗಿ ಮೀಸಲಾದ ಸಹಾಯವಾಣಿಗಳನ್ನು ಸ್ಥಾಪಿಸಲಾಯಿತು. ಬಡ್ಡಿ ಸಮೀಕರಣ ಯೋಜನೆ, ಮರುಪಾವತಿ ಅರ್ಜಿ ಮಾಡ್ಯೂಲ್ ಮತ್ತು ರೂಪಾಯಿ ಆಧಾರಿತ ಅಂತರರಾಷ್ಟ್ರೀಯ ವ್ಯಾಪಾರ ಇತ್ಯರ್ಥಗಳ ಸುಗಮಗೊಳಿಸುವಿಕೆಗಾಗಿ ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಸಹ ಜಾರಿಗೆ ತರಲಾಗಿದೆ.
ಈ ಉಪಕ್ರಮಗಳು ಸುಧಾರಿತ ಸೇವಾ ದಕ್ಷತೆ, ದಾಖಲೆಗಳ ಅವಿಶ್ವಾಸ ಮತ್ತು ಸರಳೀಕೃತ ವ್ಯಾಪಾರ ಪ್ರಕ್ರಿಯೆಗಳಿಗೆ ಕೊಡುಗೆ ನೀಡಿವೆ.

ಎಸ್.ಇ.ಝಡ್

2025 ರಲ್ಲಿ, ವಿಶೇಷ ಆರ್ಥಿಕ ವಲಯಗಳು ಸ್ಥಿರವಾದ ಹೂಡಿಕೆಯನ್ನು ಆಕರ್ಷಿಸುವುದನ್ನು ಮುಂದುವರೆಸಿದವು ಮತ್ತು ಪ್ರಮುಖ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಿದವು. ವರ್ಷದಲ್ಲಿ, ವಿಶೇಷ ಆರ್ಥಿಕ ವಲಯ ನಿಯಮಗಳು, 2006 ಅನ್ನು ಜೂನ್ 3, 2025 ರ ಅಧಿಸೂಚನೆ ಜಿ.ಎಸ್.ಆರ್. 364(ಇ) ಮೂಲಕ ತಿದ್ದುಪಡಿ ಮಾಡಲಾಗಿದೆ, ಇದು ಅರೆವಾಹಕಗಳು ಮತ್ತು ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ವಲಯದಲ್ಲಿ ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಲು ಅಕ್ಕಪಕ್ಕದ ಗಡಿಯವರೆಗೆ ಇರಬೇಕಾದ  ಭೂಪ್ರದೇಶದ ಅಗತ್ಯವನ್ನು 10 ಹೆಕ್ಟೇರ್‌ಗಳಿಗೆ ಇಳಿಸುತ್ತವೆ. ಇದಲ್ಲದೆ, ಎಸ್.ಇ.ಝಡ್. ಗಳು ಡಿ.ಟಿ.ಎ. ಗೆ ಒದಗಿಸುವ ಸೇವೆಗಳಿಗೆ ಸಾಫ್ಟೆಕ್ಸ್  ಸಲ್ಲಿಸುವ ಅಗತ್ಯವನ್ನು ತೆಗೆದುಹಾಕಲು ವಿವಿಧ ಸುಲಭ ವ್ಯವಹಾರ ಕ್ರಮಗಳನ್ನು ಸಹ ಕೈಗೊಳ್ಳಲಾಯಿತು ಮತ್ತು ಸಂಸ್ಕರಣಾ ಪ್ರದೇಶದಿಂದ ಸಂಸ್ಕರಣಾರಹಿತ  ಪ್ರದೇಶಕ್ಕೆ ಗಡಿರೇಖೆ ಮಾಡಲು ಅಭಿವೃದ್ಧಿ ಆಯುಕ್ತರಿಗೆ ಅಧಿಕಾರವನ್ನು ವಹಿಸಲಾಯಿತು. ಇದರ ಜೊತೆಗೆ, ಸೆಮಿಕಂಡಕ್ಟರ್‌ಗಳು/ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆಗಾಗಿ ಗುಜರಾತ್‌ನ ಸನಂದ್‌ನಲ್ಲಿ ಮೂರು ಎಸ್.ಇ.ಝಡ್. ಗಳು ಮತ್ತು ಕರ್ನಾಟಕದ ಧಾರವಾಡದಲ್ಲಿ ಒಂದು ಎಸ್.ಇ.ಝಡ್. ಗಳನ್ನು ಕ್ರಮವಾಗಿ 23.06.2025, 23.09.2025 ಮತ್ತು 26.09.2025 ರಂದು ಅಧಿಸೂಚಿಸಲಾಯಿತು. ಜೊತೆಗೆ, ನವ ರಾಯ್‌ಪುರದಲ್ಲಿ ಡೇಟಾ ಸೆಂಟರ್ ಸ್ಥಾಪಿಸಲು ಒಂದು ಐಟಿ/ಐಟಿಇಎಸ್ ಎಸ್‌ಇಝಡ್ ಮತ್ತು ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ನ ಬಾಲಿನಾಂಗ್‌ನಲ್ಲಿ ಒಂದು ಬಹು ವಲಯ ಎಸ್‌ಇಝಡ್‌ಗೆ ಕ್ರಮವಾಗಿ 09.07.2025 ಮತ್ತು 30.07.2025 ರಂದು ಅಧಿಸೂಚನೆ ಹೊರಡಿಸಲಾಯಿತು.

ಸರ್ಕಾರಿ ಇ ಮಾರುಕಟ್ಟೆ (ಜೆಮ್-GeM):

i. ಸರ್ಕಾರಿ ಇ ಮಾರುಕಟ್ಟೆ ಸ್ಥಳವು ವಿವಿಧ ಕೇಂದ್ರ/ರಾಜ್ಯ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು (PSUಗಳು) ಪಂಚಾಯತ್‌ಗಳು ಮತ್ತು ಸಹಕಾರಿ ಸಂಸ್ಥೆಗಳಿಂದ ಸರಕು ಮತ್ತು ಸೇವೆಗಳ ಸಂಪೂರ್ಣ ಖರೀದಿಯನ್ನು ಸುಗಮಗೊಳಿಸುವ ಆನ್‌ಲೈನ್ ವೇದಿಕೆಯಾಗಿದೆ. 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಸಾಧಿಸಲು ಡಿಜಿಟಲ್ ವೇದಿಕೆಗಳ ಶಕ್ತಿಯನ್ನು ಬಳಸಿಕೊಳ್ಳಲು ಸರ್ಕಾರದ ಸಂಘಟಿತ ಪ್ರಯತ್ನಗಳು 2016 ರಲ್ಲಿ ಜಿ.ಇ.ಎಂ. ನ ಹುಟ್ಟಿಗೆ ಕಾರಣವಾಯಿತು. ಅಸಮರ್ಥತೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಕೂಡಿದ ಹಳೆಯ ಮಾನವ ಚಾಲಿತ ಸಾರ್ವಜನಿಕ ಖರೀದಿ ಪ್ರಕ್ರಿಯೆಗಳನ್ನು ತೊಡೆದುಹಾಕುವ ಸ್ಪಷ್ಟ ಉದ್ದೇಶದಿಂದ ಆನ್‌ಲೈನ್ ಪೋರ್ಟಲ್ ಅನ್ನು ಸ್ಥಾಪಿಸಲಾಯಿತು. ಸರ್ಕಾರಿ ಖರೀದಿದಾರರು ಆನ್‌ಲೈನ್ ವೇದಿಕೆಯ ಮೂಲಕ ಪ್ಯಾನ್-ಇಂಡಿಯಾ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರಿಂದ ಉತ್ಪನ್ನಗಳು ಮತ್ತು ಸೇವೆಗಳನ್ನು ನೇರವಾಗಿ ಖರೀದಿಸಲು ಜಿ.ಇ.ಎಂ. ಕಾಗದರಹಿತ, ನಗದುರಹಿತ ಮತ್ತು ಮಾನವ ಸಂಪರ್ಕರಹಿತ ಪರಿಸರ ವ್ಯವಸ್ಥೆಯಾಗಿದೆ. ಸಾರ್ವಜನಿಕ ಖರೀದಿ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಎಲ್ಲಾ ಪಾಲುದಾರರಿಗೆ ಉತ್ತಮ ಶಾಶ್ವತ ಬದಲಾವಣೆಯನ್ನು ತರಲು ಡಿಜಿಟಲ್ ವೇದಿಕೆಯೊಂದಿಗೆ ಬರುವ ಚುರುಕುತನ ಮತ್ತು ವೇಗವನ್ನು ಬಳಸಿಕೊಳ್ಳಲು ಜಿ.ಇ.ಎಂ. ಅನ್ನು ಕಲ್ಪಿಸಲಾಗಿದೆ. ಮಾರಾಟಗಾರರ ನೋಂದಣಿ ಮತ್ತು ಖರೀದಿದಾರರಿಂದ ಐಟಂ ಆಯ್ಕೆಯಿಂದ ಹಿಡಿದು ಸರಕುಗಳ ಸ್ವೀಕೃತಿ ಮತ್ತು ಸಕಾಲಿಕ ಪಾವತಿಗಳನ್ನು ಸುಗಮಗೊಳಿಸುವವರೆಗೆ ಖರೀದಿ ಪ್ರಕ್ರಿಯೆಯ ಸಂಪೂರ್ಣ ವ್ಯಾಪ್ತಿಯನ್ನು ಜಿ.ಇ.ಎಂ. ಒಳಗೊಂಡಿದೆ.
ii. ಜಿಇಎಂನಲ್ಲಿ ಮಾಡಲಾದ ಒಟ್ಟು ಆರ್ಡರ್‌ಗಳ ಸಂಖ್ಯೆ 3.27 ಕೋಟಿಗೆ ಹತ್ತಿರದಲ್ಲಿದೆ, ಪ್ರಾರಂಭದಿಂದ ₹16.41 ಲಕ್ಷ ಕೋಟಿಗಿಂತ ಹೆಚ್ಚಿನ ಸಂಚಿತ ಜಿಎಂವಿಯೊಂದಿಗೆ  ಮತ್ತು ಸೇವೆಗಳ ಜಿಎಂವಿ ₹7.94 ಲಕ್ಷ ಕೋಟಿ ತಲುಪಿದೆ, ಉತ್ಪನ್ನಗಳ ಜಿಎಂವಿ ಪ್ರಾರಂಭವಾದಾಗಿನಿಂದ ನವೆಂಬರ್ 30, 2025 ರ ಹೊತ್ತಿಗೆ ₹8.47 ಲಕ್ಷ ಕೋಟಿ ತಲುಪಿದೆ.
iii. ಪೋರ್ಟಲ್ 10,894 ಕ್ಕೂ ಹೆಚ್ಚು ಉತ್ಪನ್ನ ವಿಭಾಗಗಳು ಮತ್ತು 348 ಕ್ಕೂ ಹೆಚ್ಚು ಸೇವಾ ವಿಭಾಗಗಳನ್ನು ಹೊಂದಿದೆ ಮತ್ತು ಇದು 1.67 ಲಕ್ಷಕ್ಕೂ ಹೆಚ್ಚು ಖರೀದಿದಾರ ಸಂಸ್ಥೆಗಳಿಗೆ ನೆಲೆಯಾಗಿದೆ. ಹೆಚ್ಚುವರಿಯಾಗಿ, 24 ಲಕ್ಷಕ್ಕೂ ಹೆಚ್ಚು ಪ್ರೊಫೈಲ್ ಪೂರ್ಣಗೊಂಡ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ಜಿಇಎಂನಲ್ಲಿ ನೋಂದಾಯಿಸಿಕೊಂಡಿದ್ದಾರೆ.
iv. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು (ಎಂಎಸ್‌ಇಗಳು) ಜಿಇಎಂ ಮೇಲೆ ಗಣನೀಯ ಪರಿಣಾಮ ಬೀರಿವೆ, ಸಂಚಿತ ಆರ್ಡರ್ ಮೌಲ್ಯದ 44.8% ರಷ್ಟು ಕೊಡುಗೆ ನೀಡಿವೆ, 11 ಲಕ್ಷಕ್ಕೂ ಹೆಚ್ಚು ಎಂಎಸ್‌ಇಗಳು ವೇದಿಕೆಯಲ್ಲಿ ನೋಂದಾಯಿಸಲ್ಪಟ್ಟಿವೆ. ಈ ಉದ್ಯಮಗಳು ನವೆಂಬರ್ 30, 2025 ರ ವೇಳೆಗೆ ಒಟ್ಟಾರೆಯಾಗಿ 7.35 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಆರ್ಡರ್‌ಗಳನ್ನು ಪಡೆದಿವೆ.
v. 2025-26ನೇ ಹಣಕಾಸು ವರ್ಷದಲ್ಲಿ ಪ್ರಮುಖ ಸಾಧನೆಗಳು ಮತ್ತು ಹೊಸ ಕಾರ್ಯಚಟುವಟಿಕೆಗಳು

•     ಮೈಲಿಗಲ್ಲು ಸಾಧನೆ - ₹15 ಲಕ್ಷ ಕೋಟಿ ಜಿ.ಎಂ.ವಿ: ಆರಂಭದಿಂದಲೂ ಜಿ.ಇ.ಎಂ. ನ ಸಂಚಿತ ಜಿ.ಎಂ.ವಿ ₹15 ಲಕ್ಷ ಕೋಟಿ ಗಡಿಯನ್ನು ದಾಟಿ 30ನೇ ನವೆಂಬರ್ 2025 ರ ಹೊತ್ತಿಗೆ ₹16.41 ಲಕ್ಷ ಕೋಟಿ ತಲುಪಿದೆ. ಈ ಸಾಧನೆಯು ಸರ್ಕಾರದ ಎಲ್ಲಾ ಹಂತಗಳಲ್ಲಿ ಜಿ.ಇ.ಎಂ. ನ ಬೆಳೆಯುತ್ತಿರುವ ಅಳವಡಿಕೆ ಮತ್ತು ರಾಷ್ಟ್ರೀಯ ಖರೀದಿ ಪರಿಸರ ವ್ಯವಸ್ಥೆಗೆ ಅದರ ಹೆಚ್ಚುತ್ತಿರುವ ಕೊಡುಗೆಯನ್ನು ಎತ್ತಿ ತೋರಿಸುತ್ತದೆ.
•     ಜಿ.ಇ.ಎಂ. ನಲ್ಲಿನ ಎಂ.ಎಸ್.ಇ.ಗಳು 11 ಲಕ್ಷ ದಾಟಿವೆ: ಜಿ.ಇ.ಎಂ.  11 ಲಕ್ಷ ನೋಂದಾಯಿತ ಎಂ.ಎಸ್.ಇ.ಗಳನ್ನು ದಾಟಿದೆ, 2025-26 ರ ಹಣಕಾಸು ವರ್ಷದಲ್ಲಿ ಜಿ.ಎಂ.ವಿ.ಯಲ್ಲಿ ಅವುಗಳ ಪಾಲು 44.8% ರಷ್ಟಿದ್ದು, ಕಡ್ಡಾಯ 25% ಖರೀದಿ ಗುರಿಯನ್ನು ಮೀರಿದೆ. ಇದು ಸಾರ್ವಜನಿಕ ಖರೀದಿಯಲ್ಲಿ ಎಂ.ಎಸ್.ಇ. ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವಲ್ಲಿ ಜಿ.ಇ.ಎಂ. ನ ಪ್ರಮುಖ ಪಾತ್ರವನ್ನು ಬಲಪಡಿಸುತ್ತದೆ.
•     ಭದ್ರತಾ ಹಣ/ಠೇವಣಿಗೆ  ವಿನಾಯಿತಿ: ವ್ಯವಹಾರವನ್ನು ಸುಲಭಗೊಳಿಸುವ ಬಗ್ಗೆ ಇತ್ತೀಚಿನ ನೀತಿ ನಿರ್ಧಾರಕ್ಕೆ ಅನುಗುಣವಾಗಿ, ಎಲ್ಲಾ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರಿಗೆ ಜಿ.ಇ.ಎಂ. ನಲ್ಲಿ ಭದ್ರತಾ ಹಣ ಠೇವಣಿಯ ಅಗತ್ಯವನ್ನು ತೆಗೆದುಹಾಕಲಾಗಿದೆ. ಈಗಾಗಲೇ ಮೊತ್ತವನ್ನು ಠೇವಣಿ ಮಾಡಿದ ಮಾರಾಟಗಾರರು ಜಿ.ಇ.ಎಂ. ಪೋರ್ಟಲ್‌ನಲ್ಲಿ ಲಭ್ಯವಿರುವ ಭದ್ರತಾ ಹಣವನ್ನು ಡ್ಯಾಶ್‌ಬೋರ್ಡ್ ಮೂಲಕ ಹಿಂಪಡೆಯಬಹುದು. ಈ ಕ್ರಮವು ಆನ್‌ಬೋರ್ಡ್ ಮಾರಾಟಗಾರರ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
•     ದರ ಒಪ್ಪಂದದ ಕಾರ್ಯನಿರ್ವಹಣೆಯ ಪರಿಚಯ: ಸರ್ಕಾರಿ ಖರೀದಿದಾರರ ಸಣ್ಣ ಪುನರಾವರ್ತಿತ ಖರೀದಿಗಳ ಬೇಡಿಕೆಯನ್ನು ಪೂರೈಸಲು ಜಿ.ಇ.ಎಂ. ದರ ಒಪ್ಪಂದದ/ಗುತ್ತಿಗೆಯ ಕಾರ್ಯವನ್ನು ಪರಿಚಯಿಸಿದೆ. ಇದು ಪುನರಾವರ್ತಿತ ಟೆಂಡರ್ ಇಲ್ಲದೆ ದಕ್ಷತೆ ಮತ್ತು ತ್ವರಿತವಾಗಿ ಪೂರೈಕೆ ಮಾಡುವ  ಆದೇಶವನ್ನು ಮಂಡಿಸಲು ಅನುಕೂಲ ಮಾಡಿಕೊಡುತ್ತದೆ. 

vi. ಪ್ರಮುಖ ತಿಳುವಳಿಕಾ ಒಡಂಬಡಿಕೆಗಳು: 

•     ಇನ್-ಸ್ಪೇಸ್  ಜೊತೆಗಿನ ತಿಳುವಳಿಕಾ ಒಡಂಬಡಿಕೆ: ಏಪ್ರಿಲ್ 16, 2025 ರಂದು, ಜಿ.ಇ.ಎಂ. ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ  ಮತ್ತು ಮಾನ್ಯತೆ ಅಧಿಕಾರ ಕೇಂದ್ರ (IN-SPACE) ಜೊತೆಗಿನ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು. ಸರ್ಕಾರಿ ಇಲಾಖೆಗಳಲ್ಲಿ ಸ್ಥಳೀಯ ಬಾಹ್ಯಾಕಾಶ ತಂತ್ರಜ್ಞಾನ ಉತ್ಪನ್ನಗಳು ಮತ್ತು ಸೇವೆಗಳ ಗೋಚರತೆ, ಪ್ರವೇಶ ಮತ್ತು ಅಳವಡಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಈ ಸಹಯೋಗ ಹೊಂದಿದೆ.
•    ಡಿ.ಎಫ್.ವೈ ಜೊತೆಗಿನ ತಿಳುವಳಿಕಾ ಒಡಂಬಡಿಕೆ: ಏಪ್ರಿಲ್ 21, 2025 ರಂದು, ದೇಶಾದ್ಯಂತ 200 ಕ್ಕೂ ಹೆಚ್ಚು ಡ್ರೋನ್ ಒ.ಇ.ಎಂ. ಗಳನ್ನು ಪ್ರತಿನಿಧಿಸುವ ಪ್ರಮುಖ ಉದ್ಯಮ-ನೇತೃತ್ವದ, ಲಾಭರಹಿತ ಸಂಸ್ಥೆಯಾದ ಡ್ರೋನ್ ಫೆಡರೇಶನ್ ಇಂಡಿಯಾ (ಡಿ.ಎಫ್.ಐ.) ಜೊತೆಗಿನ ಒಪ್ಪಂದಕ್ಕೆ ಜಿ.ಇ.ಎಂ. ಸಹಿ ಹಾಕಿತು. ಈ ಕಾರ್ಯತಂತ್ರದ ಪಾಲುದಾರಿಕೆಯು ಸಾರ್ವಜನಿಕ ಖರೀದಿಯಲ್ಲಿ ಡ್ರೋನ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.
•     ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ತಿಳುವಳಿಕಾ ಒಡಂಬಡಿಕೆ: #GeMSahay ಉಪಕ್ರಮದ ಅಡಿಯಲ್ಲಿ ಜಿ.ಇ.ಎಂ.-ನೋಂದಾಯಿತ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರಿಗೆ ಮೇಲಾಧಾರ/ಜಾಮೀನು ರಹಿತ -ಮುಕ್ತ, ಅಲ್ಪಾವಧಿಯ, ಕೈಗೆಟುಕುವ ಸಾಲಗಳನ್ನು ಸರಾಗವಾಗಿ ಸುಗಮಗೊಳಿಸುವ ಪ್ರಯತ್ನದಲ್ಲಿ, ಜಿ.ಇ.ಎಂ. ಮೇ 6, 2025 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು.
•     ಎ.ಜೆ.ಎನ್.ಐ.ಎಫ್.ಎಂ.(AJNIFM) ಜೊತೆ ತಿಳುವಳಿಕಾ ಒಡಂಬಡಿಕೆ: ಸೆಪ್ಟೆಂಬರ್ 24, 2025 ರಂದು, ಜಿ.ಇ.ಎಂ. ಹೊಸದಿಲ್ಲಿಯಲ್ಲಿ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಪ್ರಮುಖ ಸಂಸ್ಥೆಯಾದ ಅರುಣ್ ಜೇಟ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ (AJNIFM) ಜೊತೆ ಒಪ್ಪಂದಕ್ಕೆ ಸಹಿ ಹಾಕಿತು.
•    ಕೇರ್‌ಎಡ್ಜ್ ರೇಟಿಂಗ್ಸ್ ಲಿಮಿಟೆಡ್ ಜೊತೆ ತಿಳುವಳಿಕಾ ಒಡಂಬಡಿಕೆ: ಅಕ್ಟೋಬರ್ 8, 2025 ರಂದು, ಜಿಇಎಂ, ಕೇರ್‌ಎಡ್ಜ್ ರೇಟಿಂಗ್ಸ್ ಲಿಮಿಟೆಡ್ ಜೊತೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು, ಸಾಮರ್ಥ್ಯ ವೃದ್ಧಿ, ವಲಯವಾರು ಸಂಶೋಧನೆ, ಜ್ಞಾನ ವಿನಿಮಯ ಮತ್ತು ಜಂಟಿ ಪ್ರಕಟಣೆಗಳಲ್ಲಿ ಸಹಕರಿಸಲು ಮತ್ತು ಜ್ಞಾನ ಪಾಲುದಾರರಾಗಿ ಜಿಇಎಂ ಕಾರ್ಯಕ್ರಮಗಳನ್ನು ಬೆಂಬಲಿಸಲು ಇದು ಸಹಕಾರಿ.
•     ಎನ್‌ಸಿಜಿಜಿ ಜೊತೆ ತಿಳುವಳಿಕಾ ಒಡಂಬಡಿಕೆ: ಅಕ್ಟೋಬರ್ 08, 2025 ರಂದು, ಶೈಕ್ಷಣಿಕ ಮತ್ತು ನೀತಿ ಸಂಶೋಧನೆ, ಪಾರದರ್ಶಕ ಖರೀದಿ ಮತ್ತು ಜಂಟಿ ಪ್ರಕಟಣೆಗಳಲ್ಲಿ ಸಹಯೋಗವನ್ನು ಬಲಪಡಿಸಲು ಜಿಇಎಂ, ರಾಷ್ಟ್ರೀಯ ಸರಕು ಆಡಳಿತ ಕೇಂದ್ರ (ಎನ್‌ಸಿಜಿಜಿ) ಜೊತೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು
•     ಹೊಸದಿಲ್ಲಿಯ ಐಐಪಿಎ ಜೊತೆ ತಿಳುವಳಿಕಾ ಒಡಂಬಡಿಕೆ: ಅಕ್ಟೋಬರ್ 31, 2025 ರಂದು, ಭವಿಷ್ಯಕ್ಕೆ ಸಿದ್ಧವಾದ, ಜ್ಞಾನ-ನೇತೃತ್ವದ ಸಾರ್ವಜನಿಕ ಖರೀದಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಜಿಇಎಂ, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ಜೊತೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು.
•    ಇ.ಪಿ.ಎಫ್.ಒ. ಜೊತೆ ತಿಳುವಳಿಕಾ ಒಡಂಬಡಿಕೆ: ನವೆಂಬರ್ 1, 2025 ರಂದು, ಭಾರತ್ ಮಂಟಪದಲ್ಲಿ ನಡೆದ ಇ.ಪಿ.ಎಫ್.ಒ. ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ, ಗೌರವಾನ್ವಿತ ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರ ಸಮ್ಮುಖದಲ್ಲಿ; ಮಾನವಶಕ್ತಿ ಹೊರಗುತ್ತಿಗೆ ಸೇವೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಕಾಯಿದೆಗಳ ಅನುಸರಣೆಯನ್ನು ಬಲಪಡಿಸಲು ಜಿ.ಇ.ಎಂ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇ.ಪಿ.ಎಫ್.ಒ.) ಜೊತೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು. ಈ ಪಾಲುದಾರಿಕೆಯ ಮೂಲಕ, ಸೇವಾ ಪೂರೈಕೆದಾರರಿಂದ ಭವಿಷ್ಯ ನಿಧಿ ಕೊಡುಗೆಗಳ ಮಾಸಿಕ ಪರಿಶೀಲನೆಯನ್ನು ಸುಗಮಗೊಳಿಸುವ ಸಿಸ್ಟಮ್-ಮಟ್ಟದ ಏಕೀಕರಣವನ್ನು ಸಕ್ರಿಯಗೊಳಿಸಲು ಜಿ.ಇ.ಎಂ. ಮತ್ತು ಇ.ಪಿ.ಎಫ್.ಒ. ಒಟ್ಟಾಗಿ ಕೆಲಸ ಮಾಡುತ್ತವೆ, ಇದರಿಂದಾಗಿ ಕಾಯಿದೆಗಳ ಅನುಸರಣೆಯನ್ನು ಖಚಿತಪಡಿಸುತ್ತದೆ.
•    ಯು.ಎನ್. ಮಹಿಳೆಯರ ಜೊತೆ ತಿಳುವಳಿಕಾ ಒಡಂಬಡಿಕೆ: ನವೆಂಬರ್ 20, 2025 ರಂದು ಹೊಸದಿಲ್ಲಿಯಲ್ಲಿ, ಜಿ.ಇ.ಎಂ.,  ಯುಎನ್ ಮಹಿಳೆಯರ ಜೊತೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು, ವಿಶೇಷವಾಗಿ ಅನೌಪಚಾರಿಕ ವಲಯದಿಂದ ಭಾರತದ ಸಾರ್ವಜನಿಕ ಖರೀದಿ ಪರಿಸರ ವ್ಯವಸ್ಥೆಯೊಂದಿಗೆ ಮಹಿಳಾ ಉದ್ಯಮಿಗಳ ಸಬಲೀಕರಣ ಮತ್ತು ಏಕೀಕರಣವನ್ನು ಬಲಪಡಿಸಲು. ಸಹಯೋಗವು ಲಿಂಗ-ಸ್ಪಂದನಾಶೀಲ ಖರೀದಿಯನ್ನು ಉತ್ತೇಜಿಸುವುದು, #Womaniya ಉಪಕ್ರಮದ ಅಡಿಯಲ್ಲಿ ಮಹಿಳಾ ನೇತೃತ್ವದ ವ್ಯವಹಾರಗಳಿಗೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವುದು ಮತ್ತು ಜಂಟಿಯಾಗಿ ಪ್ರಚಾರ, ಸಂಪರ್ಕ, ಜಾಗೃತಿ ಮತ್ತು ಸಾಮರ್ಥ್ಯ-ನಿರ್ಮಾಣ ಪ್ರಯತ್ನಗಳನ್ನು ಕೈಗೊಳ್ಳುವ ಗುರಿಯನ್ನು ಇದು ಹೊಂದಿದೆ. ಇದು ಸಾರ್ವಜನಿಕ ಸಂಗ್ರಹಣೆಯಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದನ್ನು ಬೆಂಬಲಿಸುತ್ತದೆ ಮತ್ತು ಲಿಂಗ ಸಮಾನತೆಯ ಕುರಿತು ಯುಎನ್ ಸುಸ್ಥಿರ ಅಭಿವೃದ್ಧಿ ಗುರಿ 5 ಅನ್ನು ಮುನ್ನಡೆಸುತ್ತದೆ.

vii. ಖರೀದಿ ಉಳಿತಾಯ | ಅಧ್ಯಯನ ಪ್ರಕರಣಗಳ ಆಯ್ಕೆ

•    ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂ.ಒ.ಇ.ಎಫ್.ಸಿ.-MoEFC) ವಿಸ್ತೃತ ಉತ್ಪಾದಕರ ಹೊಣೆಗಾರಿಕೆ ಪೋರ್ಟಲ್ ಅನ್ನು ಏಕೀಕೃತ ಪೋರ್ಟಲ್ ಆಗಿ ಪರಿವರ್ತಿಸಲು ಅಂದಾಜು ~₹13.7 ಕೋಟಿ ಮೌಲ್ಯದ ಬಿಡ್‌ನಲ್ಲಿ 18% ಉಳಿತಾಯವನ್ನು ಸಾಧಿಸಿದೆ.
•     ಮಲ್ಟಿ-ಪ್ರೋಟೋಕಾಲ್ ಲೇಬಲ್ ಸ್ವಿಚಿಂಗ್ (ಎಂ.ಪಿ.ಎಲ್.ಎಸ್.) ಸೇವೆಗಳಿಗಾಗಿ ಅಂದಾಜು ~₹22.8 ಕೋಟಿ ಮೌಲ್ಯದ ಬಿಡ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ~₹19% ಉಳಿತಾಯವನ್ನು ಗಳಿಸಿದೆ.
•     ಸೌತ್-ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಎಸ್.ಇ.ಸಿ.ಎಲ್.) ₹1,702 ಕೋಟಿ ಮೌಲ್ಯದ ಸಂಯೋಜಿತ ಗಣಿಗಾರಿಕೆ ಸೇವೆಗಳಲ್ಲಿ 19% ಉಳಿತಾಯವನ್ನು ಸಾಧಿಸಿದೆ.

viii. ವಿಶಿಷ್ಟ ಒಪ್ಪಂದ/ಗುತ್ತಿಗೆಗಳು  | ಆಯ್ದ ಅಧ್ಯಯನ ಪ್ರಕರಣಗಳು

• ಭಾರತೀಯ ನೌಕಾಪಡೆ- 4 ಎ.ಆರ್. ಆಧಾರಿತ ವೆಲ್ಡಿಂಗ್ ಸಿಮ್ಯುಲೇಟರ್ ಸ್ಥಾಪನೆ (~₹86 ಲಕ್ಷ).
• ಅರಣ್ಯ ಇಲಾಖೆ, ಗುಜರಾತ್ ಜಿ.ಐ.ಎಸ್. ಸಮೀಕ್ಷೆ ಮತ್ತು 20,000 ಹೆಕ್ಟೇರ್ ಅರಣ್ಯ ಭೂಮಿಯ ಗಡಿ ಗುರುತಿಸುವಿಕೆ (₹64 ಲಕ್ಷ).
• ಇಂಧನ ಇಲಾಖೆ, ಒಡಿಶಾ -10 ವರ್ಷಗಳ ಕಾಲ ಸೌರ ವಿದ್ಯುತ್ ಸ್ಥಾವರದ ಪೂರೈಕೆ, ಸ್ಥಾಪನೆ ಮತ್ತು ನಿರ್ವಹಣೆ (₹41 ಕೋಟಿ).
• ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯು.ಐ.ಡಿ.ಎ.ಐ.) ಜಿಲ್ಲಾ ಮಟ್ಟದ ಆಧಾರ್ ಸೇವಾ ಕೇಂದ್ರವನ್ನು ಸ್ಥಾಪಿಸುವುದು ಮತ್ತು ನಡೆಸುವುದು (₹3,427 ಕೋಟಿ).

ಸಾರ್ವಜನಿಕ ಖರೀದಿಯಲ್ಲಿ ಪರಿವರ್ತನಾ ವೇದಿಕೆಯಾಗಿ ಜಿ.ಇ.ಎಂ. ತನ್ನ ಸ್ಥಾನವನ್ನು ಬಲಪಡಿಸುವುದನ್ನು ಮುಂದುವರೆಸಿದೆ, ಆಡಳಿತದ ಎಲ್ಲಾ ಹಂತಗಳಲ್ಲಿ ಪಾರದರ್ಶಕತೆ, ದಕ್ಷತೆ, ಒಳಗೊಳ್ಳುವಿಕೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತಿದೆ. ನಿರಂತರ ನಾವೀನ್ಯತೆ/ಅನ್ವೇಷಣೆ, ಪ್ರಕ್ರಿಯೆ ಸುಧಾರಣೆಗಳು ಮತ್ತು ಪಾಲುದಾರರ ತೊಡಗಿಸಿಕೊಳ್ಳುವಿಕೆಯ ಮೂಲಕ, ಜಿ.ಇ.ಎಂ. ಡಿಜಿಟಲ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಚಿಂತನಾ ದೃಷ್ಟಿಕೋನವನ್ನು ಮುನ್ನಡೆಸಲು ಬದ್ಧವಾಗಿದೆ.

ಪ್ಲಾಂಟೇಶನ್ ಬೋರ್ಡ್‌ಗಳು (ಕಾಫಿ ಬೋರ್ಡ್, ರಬ್ಬರ್ ಬೋರ್ಡ್, ಟೀ ಬೋರ್ಡ್ ಮತ್ತು ಸ್ಪೈಸಸ್ ಬೋರ್ಡ್)

•     2025-26 ರ ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ಹಣಕಾಸು ವರ್ಷದಲ್ಲಿ ಕಾಫಿ ರಫ್ತು 1176.31 ಮಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು 12% ಹೆಚ್ಚಾಗಿದೆ. 2025-26 ರ ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ಚಹಾ ರಫ್ತು 605.90 ಮಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 526.14 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು, ಇದು 15.16% ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
•     2021-2022 ರಲ್ಲಿ ಪ್ರಾರಂಭಿಸಲಾದ ಮತ್ತು ಈಶಾನ್ಯ ಪ್ರದೇಶದಲ್ಲಿ 200,000 ಹೆಕ್ಟೇರ್ ಪ್ರದೇಶವನ್ನು ರಬ್ಬರ್ ಕೃಷಿಗೆ ಒಳಪಡಿಸಲು ಯೋಜಿಸಲಾದ ಇನ್ ರೋಡ್ (INROAD)  ಯೋಜನೆಯಡಿಯಲ್ಲಿ, 1,79,376 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನೆಡುವಿಕೆಯನ್ನು ಪೂರ್ಣಗೊಳಿಸಲಾಗಿದೆ (ಅಕ್ಟೋಬರ್ 2025 ರ ಹೊತ್ತಿಗೆ)
•    • ರಾಷ್ಟ್ರೀಯ ಅರಿಶಿನ ಮಂಡಳಿಯ (NTB) ಪ್ರಧಾನ ಕಚೇರಿಯನ್ನು ತೆಲಂಗಾಣದ ನಿಜಾಮಾಬಾದ್‌ನಲ್ಲಿ ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಜೂನ್ 29, 2025 ರಂದು ಉದ್ಘಾಟಿಸಿದರು.
•     ಅಂತರರಾಷ್ಟ್ರೀಯ ಕರಿಮೆಣಸು/ಮೆಣಸು ಸಮುದಾಯದ (ಐ.ಪಿ.ಸಿ.-IPC) 53 ನೇ ವಾರ್ಷಿಕ ಅಧಿವೇಶನಗಳು ಮತ್ತು ಸಭೆಗಳನ್ನು (ಎ.ಎಸ್.ಎಂ.-ASM) ಅಂತರರಾಷ್ಟ್ರೀಯ ಮಸಾಲೆ ಪ್ರದರ್ಶನದೊಂದಿಗೆ, ಭಾರತೀಯ ಸಾಂಭಾರು ಪದಾರ್ಥಗಳ ಮಂಡಳಿ ಮತ್ತು ಅಂತರರಾಷ್ಟ್ರೀಯ ಮೆಣಸು ಸಮುದಾಯವು ಜಂಟಿಯಾಗಿ ಕೊಚ್ಚಿಯ ಲೆ ಮೆರಿಡಿಯನ್‌ನಲ್ಲಿ ಅಕ್ಟೋಬರ್ 28 ರಿಂದ 30, 2025 ರವರೆಗೆ ಆಯೋಜಿಸಿತ್ತು.
•     ಸಿ.ಸಿ.ಎಸ್.ಸಿ.ಹೆಚ್. (ಮಸಾಲೆಗಳು ಮತ್ತು ಪಾಕಶಾಲೆಯ ಗಿಡಮೂಲಿಕೆಗಳ ಮೇಲಿನ ಕೋಡೆಕ್ಸ್ ಸಮಿತಿ) ನ 8 ನೇ ಅಧಿವೇಶನವನ್ನು ಸಾಂಭಾರು ಪದಾರ್ಥಗಳ ಮಂಡಳಿಯು ಅಕ್ಟೋಬರ್ 13–17, 2025 ರಿಂದ ಗುವಾಹಟಿಯಲ್ಲಿ ಆಯೋಜಿಸಿತ್ತು. ಸಿ.ಸಿ.ಎಸ್.ಸಿ.ಹೆಚ್. 8ರ ಸಮಯದಲ್ಲಿ, ಮೂರು ಹೊಸ ಅಂತರರಾಷ್ಟ್ರೀಯ ಮಾನದಂಡಗಳು - ದೊಡ್ಡ ಏಲಕ್ಕಿ, ವೆನಿಲ್ಲಾ ಮತ್ತು ಕೊತ್ತಂಬರಿ - ಅಂತಿಮಗೊಳಿಸಲಾಯಿತು ಮತ್ತು ಕೋಡೆಕ್ಸ್ ಅಲಿಮೆಂಟೇರಿಯಸ್ ಆಯೋಗಕ್ಕೆ ಅದನ್ನು ಅಳವಡಿಸಿಕೊಳ್ಳಲು ಶಿಫಾರಸು ಮಾಡಿತು.

ಮಸಾಲೆಗಳು/ಸಾಂಭಾರು ಪದಾರ್ಥಗಳ ಮತ್ತು ಪಾಕಶಾಲೆಯ ಗಿಡಮೂಲಿಕೆಗಳ ಕುರಿತಾದ ಕೋಡೆಕ್ಸ್ ಸಮಿತಿಯ ಎಂಟನೇ ಅಧಿವೇಶನ (ಸಿ.ಸಿ.ಎಸ್.ಸಿ.ಹೆಚ್.8-CCSCH8):

•    ಎ. ರೋಮ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೋಡೆಕ್ಸ್ ಅಲಿಮೆಂಟೇರಿಯಸ್ ಆಯೋಗ (ಸಿ.ಎ.ಸಿ..-CAC), 194 ಸದಸ್ಯ ರಾಷ್ಟ್ರಗಳ ಅಂತರ ಸರ್ಕಾರಿ ಸಂಸ್ಥೆಯಾಗಿದ್ದು, ಇದು ಅಂತರರಾಷ್ಟ್ರೀಯವಾಗಿ ಸಾಮರಸ್ಯದ ಆಹಾರ ಮಾನದಂಡಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಆಹಾರ-ಸುರಕ್ಷತೆ-ಸಂಬಂಧಿತ ವ್ಯಾಪಾರ ವಿವಾದಗಳನ್ನು ಪರಿಹರಿಸುವ ಉಲ್ಲೇಖವಾಗಿ ಡಬ್ಯು.ಟಿ.ಒ. (WTO) ನಿಂದ ಮಾನ್ಯತೆ ಪಡೆದಿದೆ. ಮಸಾಲೆಗಳು ಮತ್ತು ಪಾಕಶಾಲೆಯ ಗಿಡಮೂಲಿಕೆಗಳಿಗೆ ಸಾಮರಸ್ಯದ ಮಾನದಂಡಗಳ ಅನುಪಸ್ಥಿತಿಯನ್ನು ಗುರುತಿಸಿದ ಭಾರತ, ಮಸಾಲೆ ಮಂಡಳಿಯ ಮೂಲಕ, 2012 ರಲ್ಲಿ ಅದಕ್ಕೆಂದೇ ಮೀಸಲಾದ ಕೋಡೆಕ್ಸ್ ಸಮಿತಿಯನ್ನು ಸ್ಥಾಪಿಸಲು ಪ್ರಸ್ತಾಪಿಸಿತು. ಜುಲೈ 2013 ರಲ್ಲಿ ಸಿ.ಎ.ಸಿ..ಯ 36 ನೇ ಅಧಿವೇಶನದಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲಾಯಿತು, ಇದು ಭಾರತವನ್ನು ಆತಿಥೇಯ ರಾಷ್ಟ್ರವಾಗಿ ಮತ್ತು ಮಸಾಲೆ ಮಂಡಳಿಯನ್ನು ಆತಿಥೇಯ ಸಂಸ್ಥೆಯಾಗಿ ಹೊಂದಿರುವ ಸಿ.ಸಿ.ಎಸ್.ಸಿ.ಹೆಚ್. ಅನ್ನು ರಚಿಸಲು ಕಾರಣವಾಯಿತು. ಸಮಿತಿಯ ಅಧ್ಯಕ್ಷತೆಯನ್ನು ಭಾರತವೂ ವಹಿಸಿದೆ. ಅದರ ಆರಂಭದಿಂದಲೂ, ಮಸಾಲೆ ಮಂಡಳಿಯು ಸಿ.ಸಿ.ಎಸ್.ಸಿ.ಹೆಚ್. ಸಮಿತಿಯ ಎಂಟು ಅಧಿವೇಶನಗಳನ್ನು ಆಯೋಜಿಸಿದೆ.
•    ಬಿ. ಮಸಾಲೆಗಳು ಮತ್ತು ಪಾಕಶಾಲೆಯ ಗಿಡಮೂಲಿಕೆಗಳ ಕುರಿತಾದ ಕೋಡೆಕ್ಸ್ ಸಮಿತಿಯ (ಸಿ.ಸಿ.ಎಸ್.ಸಿ.ಹೆಚ್ 8) ಎಂಟನೇ ಅಧಿವೇಶನವನ್ನು ಅಸ್ಸಾಂನ ಗುವಾಹಟಿಯಲ್ಲಿ ಅಕ್ಟೋಬರ್ 13–17, 2025 ರಂದು ಕರೆಯಲಾಯಿತು. 27 ಸದಸ್ಯ ರಾಷ್ಟ್ರಗಳು, ಒಂದು ಸದಸ್ಯ ಸಂಸ್ಥೆ (ಇ.ಯು.) ಮತ್ತು ಒಂದು ವೀಕ್ಷಕ ಸಂಸ್ಥೆ (ಐ.ಎಸ್.ಒ.-ISO) ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಅಧಿವೇಶನವು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಿ.ಸಿ.ಎಸ್.ಸಿ.ಹೆಚ್ 8 ಸಮಯದಲ್ಲಿ, ಮೂರು ಹೊಸ ಅಂತರರಾಷ್ಟ್ರೀಯ ಮಾನದಂಡಗಳು - ದೊಡ್ಡ ಏಲಕ್ಕಿ, ವೆನಿಲ್ಲಾ ಮತ್ತು ಕೊತ್ತಂಬರಿ - ಕೋಡೆಕ್ಸ್ ಅಲಿಮೆಂಟೇರಿಯಸ್ ಆಯೋಗದಿಂದ ಅಂತಿಮಗೊಳಿಸಲ್ಪಟ್ಟವು ಮತ್ತು ಅಳವಡಿಸಿಕೊಳ್ಳಲು ಶಿಫಾರಸು ಮಾಡಲ್ಪಟ್ಟವು. ಸುವಾಸನೆ ರಸಾಯನಶಾಸ್ತ್ರದ ಸಂಕೀರ್ಣತೆ ಮತ್ತು ಸಂಸ್ಕರಣಾ ವಿಧಾನಗಳ ವೈವಿಧ್ಯತೆಯಿಂದಾಗಿ ವೆನಿಲ್ಲಾ ಮಾನದಂಡದ ಅಭಿವೃದ್ಧಿಗೆ ವ್ಯಾಪಕವಾದ ಚರ್ಚೆಗಳು ಬೇಕಾಗಿದ್ದವು. ಇದರ ಪೂರ್ಣಗೊಳಿಸುವಿಕೆಯು ವೈಜ್ಞಾನಿಕವಾಗಿ ಉತ್ತಮ ಮತ್ತು ಅಂತರರಾಷ್ಟ್ರೀಯವಾಗಿ ಸ್ವೀಕಾರಾರ್ಹ ಮಾನದಂಡಗಳನ್ನು ಒದಗಿಸಲು ಬಲವಾದ ಜಾಗತಿಕ ಸಹಯೋಗವನ್ನು ಪ್ರತಿಬಿಂಬಿಸುತ್ತದೆ. ದೊಡ್ಡ ಏಲಕ್ಕಿ, ವೆನಿಲ್ಲಾ ಮತ್ತು ಕೊತ್ತಂಬರಿಗಳಿಗೆ ಸಾಮರಸ್ಯದ ಮಾನದಂಡಗಳ ಅಳವಡಿಕೆಯು ಸ್ಪಷ್ಟ ಮತ್ತು ಏಕರೂಪದ ಗುಣಮಟ್ಟದ ಅವಶ್ಯಕತೆಗಳನ್ನು ಒದಗಿಸುವ ಮೂಲಕ ಜಾಗತಿಕ ವ್ಯಾಪಾರವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ದೊಡ್ಡ ಏಲಕ್ಕಿ ಮತ್ತು ಕೊತ್ತಂಬರಿಯ ಪ್ರಮುಖ ರಫ್ತುದಾರ ಭಾರತಕ್ಕೆ ಈ ಬೆಳವಣಿಗೆಗಳು ನಿರ್ದಿಷ್ಟ ಮಹತ್ವವನ್ನು ಹೊಂದಿವೆ. ವೆನಿಲ್ಲಾಗೆ ಏಕರೂಪದ ಅಂತರರಾಷ್ಟ್ರೀಯ ಮಾನದಂಡಗಳು ಜಾಗತಿಕ ವ್ಯಾಪಾರದಲ್ಲಿ ಸ್ಥಿರತೆ ಮತ್ತು ನಂಬಿಕೆಯನ್ನು ಸಹ ಬೆಂಬಲಿಸುತ್ತವೆ, ಆದರೂ ಭಾರತವು ಪ್ರಧಾನವಾಗಿ ಈ ಸರಕುಗಳ ಆಮದುದಾರ.
•    ಸಿ. 8 ನೇ ಅಧಿವೇಶನದ ಕೊನೆಯಲ್ಲಿ, ಸಮಿತಿಯು ಇಲ್ಲಿಯವರೆಗೆ 19 ಮಸಾಲೆಗಳನ್ನು ಒಳಗೊಂಡ 17 ಪೂರ್ಣ ಪ್ರಮಾಣದ ಅಂತರರಾಷ್ಟ್ರೀಯ ಕೋಡೆಕ್ಸ್ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಈ ಕೆಳಗಿನವುಗಳ ಮಾನದಂಡಗಳು ಸೇರಿವೆ: (1) ಕಪ್ಪು/ಬಿಳಿ/ಹಸಿರು ಮೆಣಸು, (2) ಜೀರಿಗೆ, (3) ಥೈಮ್, (4) ತುಳಸಿ, (5) ಓರೆಗಾನೊ, (6) ಶುಂಠಿ, (7) ಬೆಳ್ಳುಳ್ಳಿ, (8) ಲವಂಗ, (9) ಮೆಣಸಿನಕಾಯಿ ಮತ್ತು ಕೆಂಪುಮೆಣಸು, (10) ಜಾಯಿಕಾಯಿ, (11) ಕೇಸರಿ, (12) ಅರಿಶಿನ, (13) ಸಣ್ಣ ಏಲಕ್ಕಿ, (14) ಮಸಾಲೆ, ಜುನಿಪರ್ ಹಣ್ಣುಗಳು ಮತ್ತು ಸ್ಟಾರ್ ಸೋಂಪುಗಳಿಗೆ ಗುಂಪು ಮಾನದಂಡ (15) ವೆನಿಲ್ಲಾ, (16) ಕೊತ್ತಂಬರಿ ಮತ್ತು (17) ದೊಡ್ಡ ಏಲಕ್ಕಿಗಾಗಿ ಮಾನದಂಡ.

•    ಡಿ. ಸಿ.ಸಿ.ಎಸ್.ಸಿ.ಹೆಚ್.. (CCSCH) ಸಚಿವಾಲಯದಂತೆ, ಮಸಾಲೆ ಮಂಡಳಿಯು ಅಧಿವೇಶನದ ಸಂಘಟನೆಯನ್ನು ವ್ಯವಸ್ಥೆ ಮಾಡಿತು, ಸದಸ್ಯರ ಭಾಗವಹಿಸುವಿಕೆಯನ್ನು ಸುಗಮಗೊಳಿಸಿತು, ಅಧಿವೇಶನ ದಾಖಲೆಗಳನ್ನು ಸಿದ್ಧಪಡಿಸಿತು ಮತ್ತು ಕೋಡೆಕ್ಸ್ ಕಾರ್ಯವಿಧಾನಗಳ ಅನುಸರಣೆಯನ್ನು ಖಚಿತಪಡಿಸಿತು. ಈ ಪ್ರಯತ್ನಗಳು ಜಾಗತಿಕ ಮಸಾಲೆ ಮಾನದಂಡಗಳ ಅಭಿವೃದ್ಧಿಯಲ್ಲಿ ಭಾರತದ ನಾಯಕತ್ವವನ್ನು ಮತ್ತು ಮಸಾಲೆಗಳಲ್ಲಿ ನ್ಯಾಯಯುತ, ಸುರಕ್ಷಿತ ಮತ್ತು ಪಾರದರ್ಶಕ ಅಂತರರಾಷ್ಟ್ರೀಯ ವ್ಯಾಪಾರವನ್ನು ಉತ್ತೇಜಿಸುವ ಬದ್ಧತೆಯನ್ನು ಬಲಪಡಿಸುತ್ತವೆ.

ಇಸಿಜಿಸಿ

•     ಡಬ್ಲ್ಯು.ಟಿ.-ಇ.ಸಿ.ಐ.ಬಿ. (WT-ECIB) ಅಡಿಯಲ್ಲಿ ಮೇಲಾಧಾರ-ಮುಕ್ತ ಕವರ್: ಯಾವುದೇ ಮೇಲಾಧಾರ ಅಥವಾ ಮೂರನೇ ವ್ಯಕ್ತಿಯ ಖಾತರಿಯನ್ನು ನೀಡುವ ಸ್ಥಿತಿಯಲ್ಲಿಲ್ಲದ ಎಂ.ಎಸ್.ಇ. ರಫ್ತುದಾರರಿಗೆ ರಫ್ತು ಸಾಲವನ್ನು ಉತ್ತೇಜಿಸಲು, ಇ.ಸಿ.ಜಿ.ಸಿ. ಜುಲೈ 1, 2025 ರಿಂದ 'ಮೇಲಾಧಾರ-ಮುಕ್ತ ಕವರ್' ನೀಡುವ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಡಬ್ಲ್ಯು.ಟಿ.-ಇ.ಸಿ.ಐ.ಬಿ. ಅಡಿಯಲ್ಲಿ ಬ್ಯಾಂಕುಗಳು ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ₹10 ಕೋಟಿವರೆಗಿನ ರಫ್ತು ಕ್ರೆಡಿಟ್ ಕಾರ್ಯನಿರತ ಬಂಡವಾಳ ಮಿತಿಗಳಿಗೆ ಮೇಲಾಧಾರ-ಮುಕ್ತ ರಫ್ತು ಕ್ರೆಡಿಟ್ ಸಾಲವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದು ಬ್ಯಾಂಕುಗಳು ಎಂ.ಎಸ್.ಇ.ಗಳಿಗೆ ಉದಾರ ಸಾಲವನ್ನು ನೀಡಲು ಅನುವು ಮಾಡಿಕೊಡುತ್ತದೆ.
•    ಡಬ್ಲ್ಯು.ಟಿ.-ಇ.ಸಿ.ಐ.ಬಿ. ಅಡಿಯಲ್ಲಿ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ವರ್ಧಿತ ಕವರ್: ವಿಮಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು, ಕಂಪನಿಯು ಅರ್ಹ ಬ್ಯಾಂಕುಗಳು ಮತ್ತು ಖಾತೆಗಳಿಗೆ ₹50 ಕೋಟಿವರೆಗಿನ ಅವರ ರಫ್ತು ಕ್ರೆಡಿಟ್ ಸಾಲಗಳಿಗೆ 90% ವರ್ಧಿತ ಕವರ್ ಅನ್ನು ನೀಡುತ್ತಿದೆ, ಇದು ಹಿಂದಿನ ಮಿತಿ ₹20 ಕೋಟಿವರೆಗಿನ ಯಾವುದೇ ಹೆಚ್ಚಳ ವೆಚ್ಚವಿಲ್ಲದೆ ಅಕ್ಟೋಬರ್ 1, 2025 ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ.
•     ದೇಶಗಳ ಕಾರ್ಯತಂತ್ರದ ವಿಮರ್ಶೆ: ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಯು.ಎಸ್. ಸುಂಕ ಹೆಚ್ಚಳದಿಂದ ಉಂಟಾಗುವ ವ್ಯಾಪಾರ ಅಡಚಣೆಯ ನಡುವೆ, ಇ.ಸಿ.ಜಿ.ಸಿ. ಅಂಡರ್‌ರೈಟಿಂಗ್ ಅನ್ನು ಉದಾರಗೊಳಿಸಲು ಮತ್ತು ಮಾರುಕಟ್ಟೆ ವೈವಿಧ್ಯೀಕರಣವನ್ನು ಉತ್ತೇಜಿಸಲು ದೇಶದ ರೇಟಿಂಗ್‌ಗಳ ಕಾರ್ಯತಂತ್ರದ ಪರಿಶೀಲನೆಯನ್ನು ಕೈಗೊಂಡಿದೆ. ಅಮೆರಿಕಾ ಸುಂಕದ ಅಡೆತಡೆಗಳನ್ನು ನಿವಾರಿಸಲು, ಸೆಪ್ಟೆಂಬರ್ 19, 2025 ರಿಂದ 24 ದೇಶಗಳ ದೇಶದ ರೇಟಿಂಗ್‌ಗಳನ್ನು ನವೀಕರಿಸಲಾಗಿದೆ, ಇದರಿಂದಾಗಿ ಈ ದೇಶಗಳಿಗೆ ವಿಮಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದು ರಫ್ತುದಾರರು, ವಿಶೇಷವಾಗಿ ಎಂ.ಎಸ್.ಇ.ಗಳು, ತಮ್ಮ ವ್ಯವಹಾರವನ್ನು ಅಪಾಯದಿಂದ ಮುಕ್ತಗೊಳಿಸಲು ಮತ್ತು ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ, ಆಫ್ರಿಕಾ, ಪೂರ್ವ ಏಷ್ಯಾ ಮತ್ತು ಇತರ ಉದಯೋನ್ಮುಖ ಮಾರುಕಟ್ಟೆಗಳಂತಹ ಹೊಸ ರಫ್ತು ತಾಣಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಸುಂಕಗಳು, ರಕ್ಷಣಾ ನೀತಿಗಳು ಅಥವಾ ನಿರ್ಬಂಧಿತ ಮಾರುಕಟ್ಟೆ ಪ್ರವೇಶದಿಂದ ಪ್ರಭಾವಿತವಾದ ಮಾರುಕಟ್ಟೆಗಳಿಗೆ ಅತಿಯಾದ ಮಾನ್ಯತೆಯನ್ನು ಕಡಿಮೆ ಮಾಡುತ್ತದೆ.
•    ಕ್ಲೈಮ್‌ಗಳ ಇತ್ಯರ್ಥಕ್ಕೆ ಸರಳೀಕೃತ ವಿಧಾನ: ಉತ್ತಮ ಸೇವೆಯನ್ನು ಒದಗಿಸಲು ಮತ್ತು ಅಲ್ಪಾವಧಿ (ಎಸ್.ಟಿ.)- ಇ.ಸಿ.ಐ.ಬಿ. ಅಡಿಯಲ್ಲಿ ಕ್ಲೈಮ್‌ಗಳ ಇತ್ಯರ್ಥಕ್ಕೆ ಟರ್ನ್‌ಅರೌಂಡ್ ಸಮಯವನ್ನು ಸುಧಾರಿಸಲು, ಕಂಪನಿಯು ಮಾರ್ಚ್ 1, 2024 ರಿಂದ ಅನ್ವಯವಾಗುವಂತೆ, ₹5 ಕೋಟಿ ವರೆಗಿನ ಮಿತಿಗಳಿಗೆ ಇ.ಸಿ.ಐ.ಬಿ.  ಕ್ಲೈಮ್‌ಗಳ ಇತ್ಯರ್ಥದ ವಿಧಾನವನ್ನು ಸರಳಗೊಳಿಸಿದೆ, ದಾಖಲೆಗಳ ಅವಶ್ಯಕತೆಯನ್ನು ಕಡಿಮೆ ಮಾಡಿದೆ. ರಫ್ತು ಕ್ರೆಡಿಟ್ ಮಿತಿಗಳನ್ನು ಲೆಕ್ಕಿಸದೆ, ರಫ್ತುದಾರ/ಗುಂಪಿಗೆ ₹10 ಕೋಟಿ ವರೆಗಿನ ನಿವ್ವಳ ಮೂಲ ಬಾಕಿ ಇರುವ ಕ್ಲೈಮ್‌ಗಳನ್ನು ಪರಿಗಣಿಸಲು,  ಫೆಬ್ರವರಿ 1, 2025 ರಿಂದ ಯೋಜನೆಯ ವ್ಯಾಪ್ತಿಯನ್ನು ಮತ್ತಷ್ಟು ಪರಿಷ್ಕರಿಸಲಾಯಿತು.
•     ಫ್ಯಾಕಲ್ಟೇಟಿವ್ ಮರುವಿಮೆ: ವೆಚ್ಚ-ಪರಿಣಾಮಕಾರಿ ಮತ್ತು ಸ್ಥಿರವಾದ ಮರುವಿಮಾ ಬೆಂಬಲವನ್ನು ಹೊಂದುವ ಉದ್ದೇಶದಿಂದ, ಕಂಪನಿಯು  ಫ್ಯಾಕಲ್ಟೇಟಿವ್  ಮರುವಿಮಾ ವ್ಯವಸ್ಥೆಗಳಿಗಾಗಿ ರಫ್ತು  ಕ್ರೆಡಿಟ್ ಏಜೆನ್ಸಿಗಳೊಂದಿಗೆ (ಇ.ಸಿ.ಎ.ಗಳು-ECAs) ಪಾಲುದಾರಿಕೆಯನ್ನು ಪ್ರಾರಂಭಿಸಿದೆ . ಮಾರುಕಟ್ಟೆಯ ಏರಿಳಿತದ ಅವಧಿಯಲ್ಲಿ, ಖಾಸಗಿ ಮರುವಿಮೆದಾರರು  ತಮ್ಮ  ಸಾಮರ್ಥ್ಯವನ್ನು  ಕಡಿಮೆ ಮಾಡಬಹುದು  ಅಥವ ಕೆಲವು ದೇಶಗಳಿಗಳಿಗೆ  ಬೆಂಬಲ ನೀಡದೇ ಇರಬಹುದು, ಇ.ಸಿ.ಎ. ಆಧಾರಿತ  ಮರುವಿಮೆ ವ್ಯಾಪ್ತಿಯು ರಫ್ತುದಾರರಿಗೆ ನಿರಂತರತೆಯನ್ನು ಖಚಿತಪಡಿಸುತ್ತದೆ, ವಾಣಿಜ್ಯ ಮಾರುಕಟ್ಟೆಗಳು  ಹಿಮ್ಮೆಟ್ಟಿದಾಗಲೂ ಸ್ಥಿರತೆಯನ್ನು  ಒದಗಿಸುತ್ತದೆ.
•     ಫ್ಯಾಕಲ್ಟೇಟಿವ್ ಇನ್‌ವರ್ಡ್ ಮರುವಿಮೆ: ಕಂಪನಿಯು ತನ್ನ ವ್ಯವಹಾರ ವಿಸ್ತರಣೆ ಮತ್ತು ವೈವಿಧ್ಯೀಕರಣ ತಂತ್ರದ ಭಾಗವಾಗಿ ಮೇ 29, 2025 ರಿಂದ ಜಾರಿಗೆ ಬರುವಂತೆ ಫ್ಯಾಕಲ್ಟೇಟಿವ್ ಇನ್‌ವರ್ಡ್ ಮರುವಿಮೆಯನ್ನು ಪರಿಚಯಿಸಿದೆ. ಕೆಲವು ಭಾರತೀಯ ಘಟಕಗಳು/ಸೇವೆಗಳನ್ನು ಒಳಗೊಂಡಿರುವ ಎಂ.ಎಲ್.ಟಿ. ಯೋಜನೆಗಳಿಗೆ ಇನ್‌ವರ್ಡ್ ಮರುವಿಮೆಯನ್ನು ನೀಡಲಾಗುತ್ತದೆ. ಕಂಪನಿಯ ಗಿಫ್ಟ್ ಸಿಟಿ ಐ.ಎಫ್.ಎಸ್.ಸಿವಿಮಾ ಕಚೇರಿ (ಐ.ಐ.ಒ.-IIO) ನಿಂದ ಅಮೆರಿಕನ್  ಡಾಲರ್ (USD) ನಲ್ಲಿ ವಿಮಾ ಕವರ್  ಒದಗಿಸಲಾಗುತ್ತದೆ.

ಐ.ಟಿ.ಪಿ.ಒ

•     38ನೇ ಆವೃತ್ತಿಯ ಭಾರತ ಅಂತರರಾಷ್ಟ್ರೀಯ ಚರ್ಮ ಮೇಳವನ್ನು (ಐ.ಐ.ಎಲ್.ಎಫ್.-IILF) ಐ.ಟಿ.ಪಿ.ಒ. ಚೆನ್ನೈನಲ್ಲಿ ಫೆಬ್ರವರಿ 1 ರಿಂದ 3, 2025 ರವರೆಗೆ ಆಯೋಜಿಸಿತ್ತು. ಚರ್ಮ ರಫ್ತು ಮಂಡಳಿ (ಸಿ.ಎಲ್.ಇ-CLE), ಕೇಂದ್ರ ಚರ್ಮ ಸಂಶೋಧನಾ ಸಂಸ್ಥೆ (ಸಿ.ಎಲ್.ಆರ್.ಐ.-CLRI), ಭಾರತೀಯ ಶೂ ಫೆಡರೇಶನ್ (ಐ.ಎಸ್.ಎಫ್.-ISF), ಚರ್ಮದಿಂದ ಸಿದ್ಧಪಡಿಸಿದ ಭಾರತೀಯ ಸರಕುಗಳ ತಯಾರಕರು ಮತ್ತು ರಫ್ತುದಾರರ ಸಂಘ (IFLMEA), ಭಾರತೀಯ ಪಾದರಕ್ಷೆ ಘಟಕಗಳ ತಯಾರಕರ ಸಂಘ (IFCOMA), ಮತ್ತು ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ಧಿ ಸಂಸ್ಥೆ (FDDI) ಸೇರಿದಂತೆ ಪ್ರಮುಖ ಕೈಗಾರಿಕಾ ಸಂಸ್ಥೆಗಳ ನಿಕಟ ಸಹಯೋಗದೊಂದಿಗೆ ಈ ಮೇಳವನ್ನು ನಡೆಸಲಾಯಿತು. 330 ಭಾರತೀಯ ಮತ್ತು 61 ವಿದೇಶಿ ಭಾಗವಹಿಸುವವರನ್ನು ಒಳಗೊಂಡ ಒಟ್ಟು 491 ಕಂಪನಿಗಳು ಐ.ಐ.ಎಲ್.ಎಫ್. 2025 ರಲ್ಲಿ ಭಾಗವಹಿಸಿದ್ದು, ಒಟ್ಟಾರೆಯಾಗಿ 11,022 ಚದರ ಮೀಟರ್ ವಿಸ್ತೀರ್ಣದಷ್ಟು ವ್ಯಾಪ್ತಿಯಲ್ಲಿ  ಪ್ರದರ್ಶನವನ್ನು ಏರ್ಪಡಿಸಿದ್ದವು.  ಸುಮಾರು 17,245 ವ್ಯಾಪಾರ ಸಂದರ್ಶಕರು ಮೇಳದಲ್ಲಿ ಭಾಗವಹಿಸಿದ್ದರು, ಇದರಲ್ಲಿ 49 ದೇಶಗಳಿಂದ 248 ವಿದೇಶಿ ಸಂದರ್ಶಕರು ಮತ್ತು 16,997 ಭಾರತೀಯ ಸಂದರ್ಶಕರು ಸೇರಿದ್ದಾರೆ.
•    ಜನವರಿ 23–29, 2025 ರಂದು ಗುವಾಹಟಿಯ ಚಾಂದ್‌ಮರಿ ಫೀಲ್ಡ್‌ನಲ್ಲಿ ಅಸ್ಸಾಂ ಸರ್ಕಾರದ ಎಂ.ಎಸ್.ಎಂ.ಇ. ಸಚಿವಾಲಯದ ಸಹಯೋಗದೊಂದಿಗೆ ನಡೆದ 14 ನೇ ಪೂರ್ವ ಹಿಮಾಲಯನ್ ವ್ಯಾಪಾರ ಮೇಳ ಮತ್ತು 1 ನೇ ಪೂರ್ವ ಹಿಮಾಲಯನ್ ಕೃಷಿ ಪ್ರದರ್ಶನ 2025, ಈಶಾನ್ಯದ ರೋಮಾಂಚಕ ವ್ಯಾಪಾರ ಮತ್ತು ಕೃಷಿ ಸಾಮರ್ಥ್ಯವನ್ನು ಪ್ರದರ್ಶಿಸಿತು.
•    ಹೊಸದಿಲ್ಲಿ ವಿಶ್ವ ಪುಸ್ತಕ ಮೇಳ (NDWBF) 2025 ಫೆಬ್ರವರಿ 1 ರಿಂದ 9, 2025 ರವರೆಗೆ ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯಿತು. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ (NBT), ಭಾರತ ಆಯೋಜಿಸಿದ ಮತ್ತು ಭಾರತ ವ್ಯಾಪಾರ ಉತ್ತೇಜನ ಸಂಘಟನೆ (ITPO) ಸಹ-ಆಯೋಜಿಸಿದ ಈ ವಾರ್ಷಿಕ ಕಾರ್ಯಕ್ರಮವು "ರಿಪಬ್ಲಿಕ್@75" ಎಂಬ ಶೀರ್ಷಿಕೆ ಅಡಿಯಲ್ಲಿ ಸಂಘಟನೆಯಾಗಿತ್ತು. ಇದು ಭಾರತವು ಗಣರಾಜ್ಯವಾಗಿ ಅದರ 75 ವರ್ಷಗಳ ಆಚರಣೆಯನ್ನು ಗುರುತಿಸುತ್ತದೆ.
•    ಭಾರತ ವ್ಯಾಪಾರ ಉತ್ತೇಜನ ಸಂಸ್ಥೆ (ITPO) ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ದೊಂದಿಗೆ ಜಂಟಿಯಾಗಿ ಮಾರ್ಚ್ 4 ರಿಂದ 8, 2025 ರವರೆಗೆ ಭಾರತ್ ಮಂಟಪದಲ್ಲಿ 39 ನೇ ಆವೃತ್ತಿಯ ಆಹಾರ್ - ಅಂತರರಾಷ್ಟ್ರೀಯ ಆಹಾರ ಮತ್ತು ಆತಿಥ್ಯ ಮೇಳವನ್ನು ಆಯೋಜಿಸಿತು. 1,10,000 ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ವ್ಯಾಪಿಸಿದ್ದ ಆಹಾರ್ 2025 ನೆಟ್‌ವರ್ಕಿಂಗ್ ವ್ಯವಸ್ಥೆಗೆ, ಆನ್‌ಲೈನ್ ಪಂದ್ಯ ರೂಪಿಸುವಿಕೆಗೆ, ಪೂರ್ವ-ನಿಗದಿತ ಸಭೆಗಳು ಮತ್ತು ಹೊಸ ಉತ್ಪನ್ನಗಳ ಬಿಡುಗಡೆಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸಿತು. ದೇಶೀಯ ಆನ್‌ಲೈನ್ ಪ್ರತಿನಿಧಿಗಳು, 22 ದೇಶಗಳು ಮತ್ತು 13 ಸಂಘಗಳಿಂದ ಸಾಗರೋತ್ತರ ಪ್ರತಿನಿಧಿಗಳು ಸೇರಿದಂತೆ 1700 ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದವು. ಇಟಲಿ ಮತ್ತು ಟರ್ಕಿಗಳು ಸಾಗರೋತ್ತರ ರಾಷ್ಟ್ರೀಯ ಪೆವಿಲಿಯನ್  ಸ್ಥಾಪಿಸಿದ್ದವು. ವಿದೇಶಿ ಸಂದರ್ಶಕರು ಮತ್ತು ಭಾರತೀಯ ಸಂದರ್ಶಕರು ಸೇರಿದಂತೆ ಸುಮಾರು 65,000 ವ್ಯಾಪಾರ ಸಂದರ್ಶಕರು ಮೇಳಕ್ಕೆ ಭೇಟಿ ನೀಡಿದ್ದರು.
•     ವರ್ಲ್ಡ್ ಎಕ್ಸ್‌ಪೋ, ಒಸಾಕಾ (ಜಪಾನ್) 2025: ಪ್ರತಿ ಐದು ವರ್ಷಗಳಿಗೊಮ್ಮೆ ವರ್ಲ್ಡ್ ಎಕ್ಸ್‌ಪೋ ಆ 
ವಾಣಿಜ್ಯ ಇಲಾಖೆಯ 2025ರ ವರ್ಷಾಂತ್ಯದ ಪ್ರಗತಿ ಪರಾಮರ್ಶೆ ಭಾರತವು 2025–26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅತ್ಯುತ್ತಮ  ರಫ್ತು ಕಾರ್ಯಕ್ಷಮತೆಯನ್ನು ದಾಖಲಿಸಿದೆ ಭಾರತದ ರಫ್ತು ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲು ₹25,060-ಕೋಟಿ ಮಿಷನ್ ಅನಾವರಣಗೊಂಡಿದೆ ಯುಕೆ ಜೊತೆಗಿನ ಸಿ.ಇ.ಟಿ.ಎ ಭಾರತೀಯ ಸರಕು ಮತ್ತು ಸೇವೆಗಳಿಗೆ ಪ್ರಮುಖ ಮಾರುಕಟ್ಟೆ ಪ್ರವೇಶವನ್ನು ತೆರೆದಿದೆ ವಾಣಿಜ್ಯ ಸಚಿವಾಲಯದ ಡಿಜಿಟಲ್ ಸಮಗ್ರ ನವೀಕರಣ ವ್ಯವಸ್ಥೆಯು ವ್ಯಾಪಾರ ಅನುಸರಣೆ ಮತ್ತು ನಿಗಾವನ್ನು ಸುಗಮಗೊಳಿಸುತ್ತದೆ ₹16.41 ಲಕ್ಷ ಕೋಟಿ ಜಿ.ಎಂ.ವಿ. ಯೊಂದಿಗೆ ಭಾರತದ ಅತಿದೊಡ್ಡ ಖರೀದಿ ವೇದಿಕೆಯಾಗಿ ಜಿ.ಇ.ಎಂ. ಹೊರಹೊಮ್ಮಿದೆ ಯು.ಎಸ್, ಇ.ಯು., ಜಿ.ಸಿ.ಸಿ. ಮತ್ತು ಏಷ್ಯಾ-ಪೆಸಿಫಿಕ್‌ನಲ್ಲಿ ಭಾರತವು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತಿದ್ದಂತೆ ಎಫ್.ಟಿ.ಎ.ಗಳು ವೇಗವನ್ನು ಪಡೆದುಕೊಳ್ಳುತ್ತಿವೆ. ವರ್ಲ್ಡ್ ಎಕ್ಸ್‌ಪೋ ಒಸಾಕಾ 2025ರಲ್ಲಿ ವರ್ಲ್ಡ್ ಪ್ರಮುಖ ಮನ್ನಣೆಯೊಂದಿಗೆ ಭಾರತದ ಪೆವಿಲಿಯನ್ ಜಾಗತಿಕ ಗಮನ ಸೆಳೆಯಿತು.

ವಿಶ್ವ ವ್ಯಾಪಾರ ಸಂಸ್ಥೆ/ಸಂಘಟನೆ ( ಡಬ್ಯು.ಟಿ.ಒ.-WTO)

•    ಕೃಷಿ ಸಮಿತಿ (ಸಿ.ಒ.ಎ.-CoA) ಕೃಷಿ ಒಪ್ಪಂದದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಕೃಷಿ ನೀತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಲು ಸದಸ್ಯರಿಗೆ ವೇದಿಕೆಯನ್ನು ಒದಗಿಸುತ್ತದೆ. ಡಬ್ಯು.ಟಿ.ಒ. ಸದಸ್ಯರು ತಮ್ಮ ಬದ್ಧತೆಗಳನ್ನು ಹೇಗೆ ಪಾಲಿಸುತ್ತಿದ್ದಾರೆ ಎಂಬುದನ್ನು ಮೇಲ್ವಿಚಾರಣೆ ಮಾಡುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ. ಸಿ.ಒ.ಎ ಸಾಮಾನ್ಯವಾಗಿ ವರ್ಷಕ್ಕೆ ನಾಲ್ಕು ಬಾರಿ ಸಭೆ ಸೇರುತ್ತದೆ. 2025 ರಲ್ಲಿ, ಜಿನೀವಾದಲ್ಲಿ 4 ಸಿ.ಒ.ಎ ಸಭೆಗಳು ನಡೆದಿವೆ, ಇದರಲ್ಲಿ ಭಾರತವು,  ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಯು.ಎಸ್.ಎ., ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಪರಾಗ್ವೆ, ಉರುಗ್ವೆ, ಥೈಲ್ಯಾಂಡ್, ಇ.ಯು.,  ಯು.ಕೆ, ಅರ್ಜೆಂಟೀನಾ, ಜಪಾನ್, ಸ್ವಿಟ್ಜರ್ಲೆಂಡ್ ಸೇರಿದಂತೆ ಕೈರ್ನ್ಸ್ ಗ್ರೂಪ್ ಸದಸ್ಯರ ಕೃಷಿ ನೀತಿಗಳ ಕುರಿತು ಒಟ್ಟು 143 ಪ್ರಶ್ನೆಗಳನ್ನು ಎತ್ತಿತ್ತು.
•    ಜಿನೀವಾದ ಡಬ್ಲ್ಯು.ಟಿ.ಒ. ನಲ್ಲಿ ವ್ಯವಸ್ಥೆಯ ಸ್ಥಿತಿಯ ಸಮಗ್ರ ಅವಲೋಕನದೊಂದಿಗೆ ಡಬ್ಲ್ಯು.ಟಿ.ಒ.  ಮಾತುಕತೆಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸಲು, ಡಬ್ಲ್ಯು.ಟಿ.ಒ.  ಗೆ ಭಾರತದ ಶಾಶ್ವತ ಮಿಷನ್ (ಪಿ.ಎಂ.ಐ.-PMI) ನ ರಿಟ್ರೀಟ್ ಅನ್ನು ಆಗಸ್ಟ್ 25 ರಿಂದ 29, 2025 ರವರೆಗೆ ಹೊಸದಿಲ್ಲಿಯ ವಾಣಿಜ್ಯ ಭವನದಲ್ಲಿ ಆಯೋಜಿಸಲಾಗಿತ್ತು. ರಿಟ್ರೀಟ್ ಸಮಯದಲ್ಲಿ, ಜಿನೀವಾದ ಪಿ.ಎಂ.ಐ. ಯ ಅಧಿಕಾರಿಗಳು ಮುಂಬರುವ ಎಂ.ಸಿ.14 ಗಾಗಿ ಪ್ರಸ್ತುತ ವ್ಯವಸ್ಥೆಯ ಸ್ಥಿತಿ ಮತ್ತು ಮಾತುಕತೆಗಳ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯ ಕುರಿತು ಪ್ರಸ್ತುತಿಗಳನ್ನು ನೀಡಿದರು. ಟಿ.ಎನ್.ಎಂ. ವಿಂಗ್, ಡಿ.ಜಿ.ಎಫ್.ಟಿ. ಅಧಿಕಾರಿಗಳು ಪಾಲುದಾರ ಸಚಿವಾಲಯಗಳು/ಇಲಾಖೆಗಳೊಂದಿಗೆ ಅಂದರೆ; ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ; ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಭಾರತದ ಆಹಾರ ನಿಗಮ ಸೇರಿದಂತೆ); ವಿದೇಶಾಂಗ ಸಚಿವಾಲಯ, ಮಾಜಿ ಕಾರ್ಯದರ್ಶಿಗಳು/ರಾಯಭಾರಿಗಳು, ತಜ್ಞರು, ಕೈಗಾರಿಕಾ ಸಂಘಗಳು/ರಫ್ತು ಪ್ರಚಾರ ಮಂಡಳಿಗಳು ಮತ್ತು ಸಿ.ಡಬ್ಲ್ಯು.ಟಿ.ಒ.ಎಸ್. (CWTOS) ಮತ್ತು ಸಿ.ಟಿ.ಐ.ಎಲ್. (CTIL) ಮುಖ್ಯಸ್ಥರು ಸೇರಿದಂತೆ ಇತರರು ಸಂಬಂಧಿತ ಅಧಿವೇಶನಗಳಲ್ಲಿ ಭಾಗವಹಿಸಿದ್ದರು.
•    ಡಬ್ಲ್ಯು.ಟಿ.ಒ.  ನಲ್ಲಿ ಈ ಕೆಳಗಿನ ಅಧಿಸೂಚನೆಗಳನ್ನು ಭಾರತವು ಸಲ್ಲಿಸಿದೆ:
Domestic Support (DS:1)  2023/2024ರ ಮಾರುಕಟ್ಟೆ ವರ್ಷದ ಅಧಿಸೂಚನೆ, 2025 ರ ಏಪ್ರಿಲ್ 25 ರಂದು ಸಲ್ಲಿಕೆ  (G/AG/N/IND/33)
Export Restriction (ER:1) ಅಧಿಸೂಚನೆಯನ್ನು10 ಜೂನ್  2025ರಂದು  ಗೋಧಿಗಾಗಿ (G/AG/N/IND/34), ಸಕ್ಕರೆ (G/AG/N/IND/35), ನೀರುಳ್ಳಿ (G/AG/N/IND/36), ಬಾಸುಮತಿಯೇತರ ಅಕ್ಕಿ (G/AG/N/IND/37) ಮತ್ತು ಅಕ್ಕಿ (G/AG/N/IND/38) ಗಾಗಿ ಸಲ್ಲಿಕೆ
•    Market Access (MA:2) ; ಮಾರುಕಟ್ಟೆ ಪ್ರವೇಶ/ಲಭ್ಯತೆ ಬದ್ದತೆಗಾಗಿರುವ  ಅಧಿಸೂಚನೆಯನ್ನು 18 ನವೆಂಬರ್  2025 (G/AG/N/IND/39)ರಂದು  ಸಲ್ಲಿಸಲಾಗಿದೆ. 

ಮಾಜಿ ರಾಯಭಾರಿಗಳು ಮತ್ತು ವ್ಯಾಪಾರ ತಜ್ಞರನ್ನು ಒಳಗೊಂಡಂತೆ ಇಲಾಖೆಯಿಂದ ಅಕ್ಟೋಬರ್ 16, 2025 ರಂದು ಡಬ್ಲ್ಯು.ಟಿ.ಒ. ಸುಧಾರಣೆಯ ಕುರಿತು ತಜ್ಞರ ಗುಂಪನ್ನು ರಚಿಸಲಾಯಿತು, ಇದು ನವೆಂಬರ್ 7, 2025 ರಂದು ವಾಣಿಜ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ತನ್ನ ಮೊದಲ ಸಭೆಯನ್ನು ನಡೆಸಿತು. ಆಡಳಿತ, ನ್ಯಾಯಸಮ್ಮತತೆ ಮತ್ತು ಭವಿಷ್ಯದ ಸಮಸ್ಯೆಗಳೆಂಬ ಮೂರು ಸ್ತಂಭಗಳ ಸುತ್ತ ರಚನೆಯಾದ ಎಂ.ಸಿ.-14 ಗಾಗಿ ಡಬ್ಲ್ಯು.ಟಿ.ಒ.  ಸುಧಾರಣೆಯನ್ನು ಪ್ರಮುಖ ಆದ್ಯತೆಯಾಗಿ ಕೈಗೊಳ್ಳಲಾಗುತ್ತಿರುವುದರಿಂದ, ಭಾರತವು ತನ್ನ ಸುಧಾರಣಾ ನಿರೂಪಣೆಯನ್ನು ತೀಕ್ಷ್ಣಗೊಳಿಸುವ, ಕೆಂಪು ರೇಖೆಗಳನ್ನು ಗುರುತಿಸುವ ಮತ್ತು ಸುಸಂಬದ್ಧ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವನ್ನು ಚರ್ಚೆಯು ಒತ್ತಿಹೇಳಿತು.

 

****
 

 


(रिलीज़ आईडी: 2202085) आगंतुक पटल : 7
इस विज्ञप्ति को इन भाषाओं में पढ़ें: English , हिन्दी , Gujarati , Tamil , Malayalam