ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಪರೀಕ್ಷಾರ್ಥ ಪ್ರಯೋಗದಡಿ ಡಿಜಿಟಲ್ ಸಮ್ಮತಿ ಸ್ವೀಕೃತಿ (ಡಿ.ಸಿ.ಎ) ಪೈಲಟ್ ಅಡಿಯಲ್ಲಿ ಆಯ್ದ ಗ್ರಾಹಕರಿಗೆ (ಸೀಮಿತ ಸಂಖ್ಯೆಯಲ್ಲಿ) ಎಸ್.ಎಂ.ಎಸ್ ಅಧಿಸೂಚನೆ

प्रविष्टि तिथि: 10 DEC 2025 5:23PM by PIB Bengaluru

ಜಾಹೀರಾತಾತ್ಮಕ ಪ್ರಚಾರ ಸಂದೇಶಗಳಿಗೆ ಸಮ್ಮತಿಯನ್ನು ಡಿಜಿಟಲೀಕರಣಗೊಳಿಸಲು ಮತ್ತು ಪ್ರಮಾಣೀಕರಿಸಲು ಟಿ.ಅರ್.‌ಎ.ಐ-ಅರ್.ಬಿ.ಐ ಡಿಜಿಟಲ್ ಸಮ್ಮತಿ ಸ್ವೀಕೃತಿ (ಡಿ.ಸಿ.ಎ) ಜಂಟಿ ಪರೀಕ್ಷಾರ್ಥ ಯೋಜನೆಯಡಿಯಲ್ಲಿ, ದೂರಸಂಪರ್ಕ ಸೇವಾ ಪೂರೈಕೆದಾರರು (ಟಿ.ಎಸ್.ಪಿ ಗಳು) ಆಯ್ದ ಗ್ರಾಹಕರಿಗೆ (ಸೀಮಿತ ಸಂಖ್ಯೆಯಲ್ಲಿ) ಎಸ್.ಎಂ.ಎಸ್ ಗಳನ್ನು ಶೀಘ್ರದಲ್ಲೇ ಕಳುಹಿಸಲಿದ್ದಾರೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿ.ಅರ್.‌ಎ.ಐ) ಇಂದು ಪ್ರಕಟಿಸಿದೆ. ಒಂಭತ್ತು ಟಿ ಎಸ್ ಪಿಗಳು ಮತ್ತು ಹನ್ನೊಂದು ಪ್ರಮುಖ ಬ್ಯಾಂಕ್ ಗಳಿಂದ ಪ್ರಾರಂಭವಾಗುವ ಈ ಪರೀಕ್ಷಾರ್ಥ ಪ್ರಯೋಗದಡಿ ಈ ಯೋಜನೆಯು, ಗ್ರಾಹಕರು ಜಾಹೀರಾತು/ಪ್ರಚಾರಾತ್ಮಕ ಸಂವಹನಗಳಿಗೆ ಈ ಹಿಂದೆ ನೀಡಿದ್ದ ಒಪ್ಪಿಗೆಗಳನ್ನು ಡಿಜಿಟಲ್ ಆಗಿ ಪರಿಶೀಲಿಸಲು, ನಿರ್ವಹಿಸಲು ಮತ್ತು ಹಿಂತೆಗೆದುಕೊಳ್ಳಲು ಅನುವು ಮಾಡಿಕೊಡಲಿದೆ. ಈ ಪ್ರಯೋಗಾರ್ಥ ಉಪಕ್ರಮವು ಪರಂಪರಾಗತ ಸಮ್ಮತಿ ಪದ್ಧತಿಗಳಲ್ಲಿನ ದೀರ್ಘಕಾಲದ ಅಂತರವನ್ನು ಪರಿಹರಿಸುವ ಮತ್ತು ರಾಷ್ಟ್ರವ್ಯಾಪಿ ಬಿಡುಗಡೆಗೆ ಮುನ್ನ ಏಕೀಕೃತ ಡಿಜಿಟಲ್ ಸಮ್ಮತಿ ವೇದಿಕೆಯ ಸನ್ನದ್ಧತೆಯನ್ನು ಪರೀಕ್ಷಿಸುವ ಗುರಿಯನ್ನು ಹೊಂದಿದೆ.

ಗ್ರಾಹಕರು ವಿವಿಧ ವಲಯಗಳಿಗೆ ಸೇರಿದ ಕರೆ ಮಾಡುವವರ ವರ್ಗಗಳ ಆಧಾರದ ಮೇಲೆ ಪ್ರಚಾರದ ಕರೆಗಳು ಮತ್ತು ಸಂದೇಶಗಳನ್ನು ನಿರ್ಬಂಧಿಸಲು ಅಸ್ತಿತ್ವದಲ್ಲಿರುವ ನಿಬಂಧನೆಗಳು (ಟೆಲಿಕಾಂ ವಾಣಿಜ್ಯ ಸಂವಹನಗಳ ಗ್ರಾಹಕ ಆದ್ಯತೆ ನಿಯಮಗಳು, 2018) ಅವಕಾಶ ನೀಡುತ್ತದೆ. ಜೊತೆಜೊತೆಗೆ ಈ ನಿಯಮಗಳು ಗ್ರಾಹಕರು ತಮ್ಮ ಆಯ್ಕೆಯ ಪ್ರಕಾರ ನಿರ್ದಿಷ್ಟ ವ್ಯವಹಾರಗಳು ಮತ್ತು ಘಟಕಗಳಿಂದ ಪ್ರಚಾರ ಸಂದೇಶ ಪಡೆಯುವ ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅದೇ ಸಮಯದಲ್ಲಿ, ಈ ನಿಯಮಗಳು ಗ್ರಾಹಕರ ಆಯ್ಕೆಯ ನಿರ್ದಿಷ್ಟ ವ್ಯವಹಾರಗಳು ಮತ್ತು ಘಟಕಗಳ ವಿವರಗಳ ದಾಖಲೀಕರಣಕ್ಕೆ ಡಿಜಿಟಲ್ ಕನ್ಸೆಂಟ್ ರಿಜಿಸ್ಟ್ರಿಯನ್ನು ನಿಗದಿ ಮಾಡಿದೆ.  ಆದಾಗ್ಯೂ, ಕಾಗದ ಆಧಾರಿತ ನಮೂನೆಗಳ ಮೂಲಕ ಅಥವಾ ಗ್ರಾಹಕ ಮಳಿಗೆಗಳಲ್ಲಿ ತಮ್ಮ ಡಿಜಿಟಲ್ ವ್ಯವಸ್ಥೆಗಳ ಮೂಲಕ ಈ ಹಿಂದೆ ತೆಗೆದುಕೊಂಡ ಸಮ್ಮತಿಗಳನ್ನು ಸೇರ್ಪಡೆ ಮಾಡುವ ಅಗತ್ಯವು ಈ ನಿಬಂಧನೆಗಳನ್ನು ಪರಿಣಾಮಕಾರಿ ಅಳವಡಿಕೆಗೆ ಅಡ್ಡಿಯಾಗಿ ಉಳಿದಿದೆ. ಇದು ವಿಘಟಿತ, ಅಪಾರದರ್ಶಕ ಮತ್ತು ಪ್ರಮಾಣೀಕೃತವಲ್ಲದ ಅಭ್ಯಾಸಗಳಿಗೆ ಕಾರಣವಾಗಿದೆ. ಇಲ್ಲಿಯವರೆಗೆ ಅಳವಡಿಸಿಕೊಂಡ ಕಾರ್ಯವಿಧಾನವು ವಿವಿಧ ವ್ಯಾಪಾರ ಘಟಕಗಳಿಗೆ ಗ್ರಾಹಕರು ನೀಡಿರುವ ಹಿಂದಿನ ಒಪ್ಪಿಗೆಗಳನ್ನು ನೋಡಲು ಅಥವಾ ಹಿಂಪಡೆಯಲು ಯಾವುದೇ ಮಾರ್ಗಗಳನ್ನು ಒದಗಿಸಿಲ್ಲ. ಆದ್ದರಿಂದ, ಬೃಹತ್ ಪ್ರಮಾಣದ ಹಿಂದಿನ ಸಮ್ಮತಿಗಳನ್ನು ಅಪ್ ಲೋಡ್ ಮಾಡುವ ಮತ್ತು ವ್ಯಾಲಿಡೇಟ್ ಮಾಡುವ ಸವಾಲಿನಿಂದಾಗಿ ಟಿ.ಸಿ.ಸಿ.ಸಿ.ಪಿ.ಅರ್ 2018ರ ಅಡಿಯಲ್ಲಿ ಕಲ್ಪಿಸಲಾದ ಸಮ್ಮತಿ ಚೌಕಟ್ಟಿನ ಹೊರತಾಗಿಯೂ ಸಂಪೂರ್ಣ ಅನುಷ್ಠಾನ ಸಾಧ್ಯವಾಗಿಲ್ಲ.

ಸಮ್ಮತಿ ಪದ್ಧತಿಗಳಲ್ಲಿ ಪಾರದರ್ಶಕತೆಯನ್ನು ಪರಿಚಯಿಸಲು ಮತ್ತು ಗ್ರಾಹಕರಿಗೆ ಅಂತಹ ಸಮ್ಮತಿಗಳನ್ನು ಪರಿಶೀಲಿಸುವ, ನಿರ್ವಹಿಸುವ ಅಥವಾ ಹಿಂತೆಗೆದುಕೊಳ್ಳುವ ಅವಕಾಶವನ್ನು ನೀಡಲು, ಭಾರತೀಯ ರಿಸರ್ವ್ ಬ್ಯಾಂಕ್ (ಅರ್.ಬಿ.ಐ) ಸಹಯೋಗದೊಂದಿಗೆ ಟಿ.ಅರ್.‌ಎ.ಐ ಈ ಡಿಜಿಟಲ್ ಸಮ್ಮತಿ ಪ್ರಕ್ರಿಯೆಯ ಪರೀಕ್ಷಾರ್ಥ ಉಪಕ್ರಮವನ್ನು ಆರಂಭಿಸಿದೆ. ಈ ಉಪಕ್ರಮವು ಗ್ರಾಹಕರ ಸಮ್ಮತಿಯ ನಿರ್ವಹಣೆಗಾಗಿ ಏಕೀಕೃತ ಡಿಜಿಟಲ್ ಇಂಟರ್ಫೇಸ್ ಅನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ಗ್ರಾಹಕರು ತಮ್ಮ ಒಪ್ಪಿಗೆಗಳನ್ನು ಹಿಂಪಡೆದಲ್ಲಿ ಜಾಹೀರಾತಾತ್ಮಕ / ಪ್ರಚಾರಾತ್ಮಕ ಸಂದೇಶ ರವಾನೆಯನ್ನು ನಿಲ್ಲಿಸುವುದನ್ನು ಖಚಿತಪಡಿಸುತ್ತದೆ.

ಒಟ್ಟು ಒಂಭತ್ತು ದೂರಸಂಪರ್ಕ ಸೇವಾ ಪೂರೈಕೆದಾರರು (ಟಿ.ಎಸ್.ಪಿ ಗಳು) ಮತ್ತು ಹನ್ನೊಂದು ಬ್ಯಾಂಕುಗಳು – ಎಸ್.ಬಿ.ಐ, ಪಿ.ಎನ್.ಬಿ, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಐ.ಸಿ.ಐ.ಸಿ.ಐ ಬ್ಯಾಂಕ್, ಹೆಚ್.ಡಿ.ಎಫ್.ಸಿ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹಾಗೂ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ – ಈ ಪ್ರಯೋಗಾರ್ಥ ಯೋಜನೆಯಲ್ಲಿ ಭಾಗವಹಿಸುತ್ತಿವೆ. ಈ ಪ್ರಯೋಗಾರ್ಥ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಟಿ.ಎಸ್.ಪಿ ಗಳು ಮತ್ತು ಬ್ಯಾಂಕುಗಳು ಕಳೆದ ಹಲವು ಗಳುಗಳಲ್ಲಿ ಅಗತ್ಯ ತಾಂತ್ರಿಕ ಅಭಿವೃದ್ಧಿ ಮತ್ತು ವ್ಯವಸ್ಥೆಯ ಏಕೀಕರಣವನ್ನು ಪೂರ್ಣಗೊಳಿಸಿವೆ. ಬ್ಯಾಂಕುಗಳು ಈಗ ಹಿಂದಿನ ಒಪ್ಪಿಗೆಗಳ ಮಾದರಿ ಸೆಟ್ ಗಳನ್ನು ಪ್ರಾಯೋಗಿಕ ಪರೀಕ್ಷೆಗಾಗಿ ತೆರೆದಿರುವ ಹಂಚಿತ ಡಿಜಿಟಲ್ ಪ್ಲಾಟ್ ಫಾರ್ಮ್ ಗೆ ಅಪ್ ಲೋಡ್ ಮಾಡಲು ಪ್ರಾರಂಭಿಸಿವೆ. ಇದಲ್ಲದೆ, ಭಾಗವಹಿಸುವ ಬ್ಯಾಂಕುಗಳು ಸ್ವೀಕರಿಸುವ ಹೊಸ ಒಪ್ಪಿಗೆಗಳನ್ನು ಡಿಜಿಟಲ್ ಪ್ಲಾಟ್ ಫಾರ್ಮ್ ಗೆ ಅಪ್ ಲೋಡ್ ಮಾಡಲಾಗುತ್ತದೆ.

ಮಾದರಿ ಆಧಾರದ ಮೇಲೆ ಪರೀಕ್ಷೆಯ ಭಾಗವಾಗಿ, ಹಳೆಯ ಸಮ್ಮತಿಗಳನ್ನು ಅಪ್ ಲೋಡ್ ಮಾಡಲಾದ ಗ್ರಾಹಕರಿಗೆ ಆಯಾ ದೂರಸಂಪರ್ಕ ಸೇವಾದಾತರಿಂದ ಕಿರು ಕೋಡ್ 127000 ರಿಂದ ಎಸ್.ಎಂ.ಎಸ್ ಸ್ವೀಕೃತವಾಗಬಹುದು. ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಬ್ಯಾಂಕ್ ಗಳು ಅಪ್ ಲೋಡ್ ಮಾಡುವ ಗ್ರಾಹಕರ ಸಮ್ಮತಿಯು ಸೀಮಿತ ಗ್ರಾಹಕರಿಗೆ ಎಸ್.ಎಂ.ಎಸ್ ರವಾನೆಯಾಗಲಿದೆ ಮತ್ತು ಟಿ ಎಸ್ ಪಿ ಗಳು, ಬ್ಯಾಂಕ್ ಗಳು ಮತ್ತು ಒಪ್ಪಿಗೆ ನೋಂದಣಿ (ಕನ್ಸೆಂಟ್ ರಿಜಿಸ್ಟ್ರಿ)ಯಲ್ಲಿ ಪ್ಲಾಟ್ ಫಾರ್ಮ್ ಸನ್ನದ್ಧತೆಯನ್ನು ನಿರ್ಣಯಿಸಲು ಉದ್ದೇಶಿಸಲಾಗಿದೆ. ಅಂತಹ ಸಂದೇಶವನ್ನು ಸ್ವೀಕರಿಸದ ಗ್ರಾಹಕರು ಚಿಂತಿಸಬೇಕಾಗಿಲ್ಲ, ಏಕೆಂದರೆ ಈ ಪ್ರಯೋಗಾರ್ಥ ಉಪಕ್ರಮದ ಪ್ರಸ್ತುತ ವ್ಯಾಪ್ತಿಯು ಸೀಮಿತವಾಗಿದ್ದು ನಂತರದ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿದೆ.

ಪ್ರತಿಯೊಂದು ಸಂದೇಶವೂ ಟಿ.ಎಸ್.ಪಿ ಯ ಅಧಿಕೃತ ಸಮ್ಮತಿ ನಿರ್ವಹಣಾ ಪುಟಕ್ಕೆ ನಿರ್ದೇಶಿಸುವ ಸುರಕ್ಷಿತ ಲಿಂಕ್ ಜೊತೆಗೆ ಪ್ರಮಾಣಿತ ಸಲಹಾ ಸಂದೇಶವನ್ನು ಹೊಂದಿರುತ್ತದೆ. ಈ ಪೋರ್ಟಲ್ ಮೂಲಕ, ಗ್ರಾಹಕರು ಈ 11 ಬ್ಯಾಂಕುಗಳು ತಮ್ಮ ಮೊಬೈಲ್ ಸಂಖ್ಯೆಗಳಿಗೆ ದಾಖಲಿಸಿರುವ ಸಮ್ಮತಿಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ ಮತ್ತು ಈ ಸಮ್ಮತಿಗಳಲ್ಲಿ ಯಾವುದನ್ನಾದರೂ ಮುಂದುವರಿಸಲು, ಮಾರ್ಪಡಿಸಲು ಅಥವಾ ಹಿಂತೆಗೆದುಕೊಳ್ಳಲು ಬಯಸಿದ್ದಲ್ಲಿ ಅದನ್ನು ನಮೂದಿಸಬಹುದಾಗಿದೆ. ಪೋರ್ಟಲ್ ನಲ್ಲಿ ತೋರಿಸುವ ಸಮ್ಮತಿಗಳು ಈ ಪ್ರಯೋಗಾರ್ಥ ಉಪಕ್ರಮದಲ್ಲಿ ಭಾಗವಹಿಸುವ ಬ್ಯಾಂಕುಗಳು ಅಪ್ ಲೋಡ್ ಮಾಡಿದ ಎಲ್ಲಾ ಹಳೆಯ ಸಮ್ಮತಿಗಳಾಗಿರಲಿವೆ. ಯಾವುದೇ ಹಂತದಲ್ಲಿ ಯಾವುದೇ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಕೇಳಲಾಗುವುದಿಲ್ಲ ಮತ್ತು ಗ್ರಾಹಕರು 127000 ಕಿರು ಕೋಡ್ನಿಂದ ಸ್ವೀಕೃತವಾಗುವ ಸಮ್ಮತಿಯನ್ನು ಮಾತ್ರ ಪರಿಗಣಿಸುವಂತೆ ಸೂಚಿಸಲಾಗಿದೆ. ಗ್ರಾಹಕರು ಈ ಎಸ್.ಎಂ.ಎಸ್ ಗಳಿಗೆ ಪ್ರತಿಕ್ರಿಯೆ ನೀಡುವುದು ಐಚ್ಛಿಕವಾಗಿದೆ. ಆದಾಗ್ಯೂ, ಪೋರ್ಟಲ್ ನಲ್ಲಿ ನಮೂದಾಗಿರುವ ಸಮ್ಮತಿಗಳಿಗೆ ಬದಲಾವಣೆ ಮಾಡಲು ಗ್ರಾಹಕರಿಗೆ ಅವಕಾಶವಿದೆ.

 

****


(रिलीज़ आईडी: 2201938) आगंतुक पटल : 10
इस विज्ञप्ति को इन भाषाओं में पढ़ें: English , Urdu , Urdu , Marathi , हिन्दी