ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯು ಸುರಕ್ಷತೆಗೆ ಆದ್ಯತೆ ನೀಡಿ, ರಸ್ತೆ ಮೇಲ್ಸೇತುವೆ/ರಸ್ತೆ ಕೆಳಸೇತುವೆ ನಿರ್ಮಾಣವನ್ನು ಮೂರು ಪಟ್ಟು ಹೆಚ್ಚಿಸಿದೆ, 2004 ಮತ್ತು 2014ರ ನಡುವೆ ನಿರ್ಮಾಣವಾದ 4,148 ಸೇತುವೆಗಳಿಗೆ ಹೋಲಿಸಿದರೆ 11 ವರ್ಷಗಳಲ್ಲಿ 13,600ಕ್ಕೂ ಹೆಚ್ಚು ಸೇತುವೆಗಳನ್ನು ನಿರ್ಮಿಸಿದೆ
ರಾಜ್ಯಗಳೊಂದಿಗೆ ಜಂಟಿ ಸಮೀಕ್ಷೆಗಳು, ಪ್ರಮಾಣೀಕೃತ ಸೇತುವೆ ವಿನ್ಯಾಸಗಳು, ಏಕ-ಘಟಕದ ಕಾರ್ಯಗತಗೊಳಿಸುವಿಕೆ ಮತ್ತು ನಿಯಮಿತ ಪರಿಶೀಲನಾ ಕಾರ್ಯವಿಧಾನಗಳು ಕೆಲಸವನ್ನು ವೇಗಗೊಳಿಸಲು ಸಹಾಯ ಮಾಡಿವೆ
प्रविष्टि तिथि:
10 DEC 2025 4:44PM by PIB Bengaluru
ಭಾರತೀಯ ರೈಲ್ವೆಯಲ್ಲಿ ರಸ್ತೆ ಮೇಲ್ಸೇತುವೆಗಳು/ರಸ್ತೆ ಕೆಳ ಸೇತುವೆಗಳ (ಆರ್.ಒ.ಬಿ/ಆರ್.ಯು.ಬಿ) ಕಾಮಗಾರಿಗಳ ಅನುಮೋದನೆ ಮತ್ತು ಕಾರ್ಯಗತಗೊಳಿಸುವಿಕೆಯು ನಿರಂತರ ಪ್ರಕ್ರಿಯೆಯಾಗಿದೆ. ರೈಲು ಕಾರ್ಯಾಚರಣೆಗಳ ಸುರಕ್ಷತೆ ಮತ್ತು ಸಂಚಾರದ ಮೇಲೆ ಮತ್ತು ರಸ್ತೆ ಬಳಕೆದಾರರ ಮೇಲೆ ಅವುಗಳ ಪ್ರಭಾವದ ಆಧಾರದ ಮೇಲೆ ಅಂತಹ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತದೆ ಮತ್ತು ಕೈಗೆತ್ತಿಕೊಳ್ಳಲಾಗುತ್ತದೆ.
2004-14 ಮತ್ತು 2014-25 (ಅಕ್ಟೋಬರ್ 25) ನಡುವಿನ ಅವಧಿಯಲ್ಲಿ ಭಾರತೀಯ ರೈಲ್ವೆಯಲ್ಲಿ ನಿರ್ಮಿಸಲಾದ ಆರ್.ಒ.ಬಿ/ಆರ್.ಯು.ಬಿ ಸಂಖ್ಯೆ ಈ ಕೆಳಗಿನಂತಿದೆ:
|
ಅವಧಿ
|
ನಿರ್ಮಿಸಿದ ಆರ್.ಒ.ಬಿ/ಆರ್.ಯು.ಬಿ
|
|
2004 - 14
|
4,148
|
|
2014 – 25
(ಅಕ್ಟೋಬರ್ 2025)
|
13,653
|
ಮಾಲ್ಡಾ ವಿಭಾಗದ ಅಜೀಮಗಂಜ್-ನ್ಯೂ ಫರಕ್ಕಾ ವಿಭಾಗದಲ್ಲಿ 239/9-10 ಕಿ.ಮೀ.ನಲ್ಲಿ ಎಲ್.ಸಿ ಸಂಖ್ಯೆ 43/ವಿಶೇಷ/ಇ ಬದಲಿಗೆ ಆರ್.ಒ.ಬಿ ನಿರ್ಮಾಣ ಕಾರ್ಯವನ್ನು ಮಂಜೂರು ಮಾಡಲಾಗಿದೆ. ಜನರಲ್ ಅರೇಂಜ್ಮೆಂಟ್ ಡ್ರಾಯಿಂಗ್ (ಜಿ.ಎ.ಡಿ) ಮತ್ತು ವಿವರವಾದ ಅಂದಾಜನ್ನು ಸಿದ್ಧಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಅನುಮೋದನೆ ಪಡೆದ 302 ಆರ್.ಒ.ಬಿ/ಆರ್.ಯು.ಬಿ ಯೋಜನೆಗಳಲ್ಲಿ, 99 ಆರ್.ಒ.ಬಿ/ಆರ್.ಯು.ಬಿ ಯೋಜನೆಗಳು ರಾಜ್ಯ ಸರ್ಕಾರದ ಸಮಸ್ಯೆಗಳಿಂದಾಗಿ ವಿಳಂಬವಾಗಿವೆ. ವಿವರಗಳು ಈ ಕೆಳಗಿನಂತಿವೆ:
|
ಕ್ರ.ಸಂ.
|
ಕಾರಣ
|
ಆರ್.ಒ.ಬಿ/ಆರ್.ಯು.ಬಿ ಕೆಲಸಗಳು (ಸಂಖ್ಯೆಗಳಲ್ಲಿ)
|
|
1
|
ಜೋಡಣೆಯನ್ನು ಅಂತಿಮಗೊಳಿಸುವುದು
|
41
|
|
2
|
ಜನರಲ್ ಅರೇಂಜ್ಮೆಂಟ್ ಡ್ರಾಯಿಂಗ್ ಹಂತ
|
14
|
|
3
|
ಲೆವೆಲ್ ಕ್ರಾಸಿಂಗ್ ಮುಚ್ಚುವಿಕೆಗೆ ಎನ್ ಒ ಸಿ
|
27
|
|
4
|
ಭೂಸ್ವಾಧೀನ
|
10
|
|
5
|
ಕಾನೂನು ಮತ್ತು ಸುವ್ಯವಸ್ಥೆ/ ಸಾರ್ವಜನಿಕ ಪ್ರತಿಭಟನೆ
|
7
|
|
|
ಪಶ್ಚಿಮ ಬಂಗಾಳ ಸರ್ಕಾರದಿಂದಾಗಿ ಬಾಕಿ ಉಳಿದಿರುವ ಒಟ್ಟು ಕಾಮಗಾರಿಗಳು
|
99
|
ತೆಲಂಗಾಣದಲ್ಲಿ ಮಂಜೂರಾದ 63 ಆರ್.ಒ.ಬಿ ಕಾಮಗಾರಿಗಳಲ್ಲಿ 17 ಆರ್.ಒ.ಬಿ ಕಾಮಗಾರಿಗಳು ರಾಜ್ಯ ಸರ್ಕಾರದ ಕಾರಣದಿಂದಾಗಿ ವಿಳಂಬವಾಗಿವೆ. ವಿವರಗಳು ಈ ಕೆಳಗಿನಂತಿವೆ:
|
ಕ್ರ.ಸಂ.
|
ಕಾರಣ
|
ಆರ್.ಒ.ಬಿ ಗಳು (ಸಂಖ್ಯೆಗಳಲ್ಲಿ)
|
|
1
|
ಭೂಸ್ವಾಧೀನ
|
16
|
|
2
|
ಜೋಡಣೆಯನ್ನು ಅಂತಿಮಗೊಳಿಸುವುದು
|
01
|
01.11.2025ರ ಹೊತ್ತಿಗೆ, ಭಾರತೀಯ ರೈಲ್ವೆಯಲ್ಲಿ ₹1,11,583 ಕೋಟಿ ವೆಚ್ಚದಲ್ಲಿ 4689 ಸಂಖ್ಯೆ ಆರ್.ಒ.ಬಿ/ಆರ್.ಯು.ಬಿ ಗಳನ್ನು ಮಂಜೂರು ಮಾಡಲಾಗಿದ್ದು, ಆಂಧ್ರಪ್ರದೇಶದಲ್ಲಿ ₹ 11,686 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಮೇಲ್ಸೇತುವೆ/ರಸ್ತೆ ಕೆಳ ಸೇತುವೆಗಳು ಯೋಜನೆ ಮತ್ತು ಅನುಷ್ಠಾನದ ವಿವಿಧ ಹಂತಗಳಲ್ಲಿವೆ.
2023-24 ರಿಂದ 2024-25ರ ಅವಧಿಯಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ 252 ಆರ್.ಒ.ಬಿ/ಆರ್.ಯು.ಬಿ ಕಾಮಗಾರಿಗಳು ಪೂರ್ಣಗೊಂಡಿವೆ.
01.11.2025ರ ಹೊತ್ತಿಗೆ, ಮಹಾರಾಷ್ಟ್ರ ರಾಜ್ಯದಲ್ಲಿ 5,506 ಕೋಟಿ ರೂ. ವೆಚ್ಚದಲ್ಲಿ 275 ಆರ್.ಒ.ಬಿ/ಆರ್.ಯು.ಬಿ ಗಳನ್ನು ಮಂಜೂರು ಮಾಡಲಾಗಿದ್ದು, ಇವು ಯೋಜನೆ ಮತ್ತು ಅನುಷ್ಠಾನದ ವಿವಿಧ ಹಂತಗಳಲ್ಲಿವೆ.
ಆರ್.ಒ.ಬಿ/ಆರ್.ಯು.ಬಿ ಕಾಮಗಾರಿಯ ಪೂರ್ಣಗೊಳಿಸುವಿಕೆ ಮತ್ತು ಕಾರ್ಯಾರಂಭವು ಲೆವೆಲ್ ಕ್ರಾಸಿಂಗ್ ಮುಚ್ಚಲು ರಾಜ್ಯ ಸರ್ಕಾರದ ಒಪ್ಪಿಗೆ, ಅಪ್ರೋಚ್ ಜೋಡಣೆಯನ್ನು ಅಂತಿಮಗೊಳಿಸುವುದು, ಜನರಲ್ ಅರೇಂಜ್ಮೆಂಟ್ ಡ್ರಾಯಿಂಗ್ (ಜಿ.ಎ.ಡಿ) ಅನುಮೋದನೆ, ಭೂಸ್ವಾಧೀನ, ಅತಿಕ್ರಮಣಗಳನ್ನು ತೆಗೆದುಹಾಕುವುದು, ಸೌಲಭ್ಯಗಳನ್ನು ಸ್ಥಳಾಂತರಿಸುವುದು, ವಿವಿಧ ಪ್ರಾದಧಿಕಾರಗಳಿಂದ ಅನುಮತಿಗಳು, ಯೋಜನೆ/ಕೆಲಸದ ಸ್ಥಳದ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ, ಹವಾಮಾನ ಪರಿಸ್ಥಿತಿಗಳಿಂದಾಗಿ ನಿರ್ದಿಷ್ಟ ಯೋಜನೆ/ಕೆಲಸದ ಸ್ಥಳದಲ್ಲಿ ವರ್ಷದಲ್ಲಿ ಎಷ್ಟು ತಿಂಗಳುಗಳ ಕೆಲಸ ನಡೆಯುತ್ತದೆ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ.
ಆರ್.ಒ.ಬಿ/ಆರ್.ಯು.ಬಿ ಕಾಮಗಾರಿಗಳ ಪ್ರಗತಿಯನ್ನು ತ್ವರಿತಗೊಳಿಸಲು ರೈಲ್ವೆಯು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದೆ:
- ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಜನರಲ್ ಅರೇಂಜ್ಮೆಂಟ್ ಡ್ರಾಯಿಂಗ್ (ಜಿ.ಎ.ಡಿ) ಅಂತಿಮಗೊಳಿಸುವ ಮೊದಲು ಸಂಬಂಧಪಟ್ಟ ರಾಜ್ಯ ಸರ್ಕಾರ/ರಸ್ತೆ ಮಾಲೀಕತ್ವ ಪ್ರಾಧಿಕಾರದೊಂದಿಗೆ ಜಂಟಿ ಸಮೀಕ್ಷೆಯನ್ನು ಮಾಡಲಾಗುತ್ತದೆ.
- ಆರ್.ಒ.ಬಿ/ಆರ್.ಯು.ಬಿ ಕಾಮಗಾರಿಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ರೈಲ್ವೆ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳ ಸಭೆಗಳನ್ನು ನಿಯತವಾಗಿ ನಡೆಸಲಾಗುತ್ತದೆ.
- ವಿನ್ಯಾಸ ಅನುಮೋದನೆಯ ಸಮಯದಲ್ಲಿ ವಿಳಂಬವನ್ನು ತಪ್ಪಿಸಲು ರೈಲ್ವೆ ಭಾಗದಲ್ಲಿ ರಸ್ತೆಯ ವಿಸ್ತಾರ, ಓರೆಗಳು ಮತ್ತು ಅಗಲದ ವಿವಿಧ ಸಂಯೋಜನೆಗಳಿಗಾಗಿ ಸೂಪರ್‌ಸ್ಟ್ರಕ್ಚರ್ ರೇಖಾಚಿತ್ರಗಳ ಪ್ರಮಾಣೀಕರಣವನ್ನು ಮಾಡಲಾಗಿದೆ. ವೇಗದ ಯೋಜನೆಗಾಗಿ ರೈಲ್ವೆ ಮಾರ್ಗಗಳ ಮೇಲಿನ ರಸ್ತೆ ಮೇಲ್ಸೇತುವೆಗಳಿಗೆ ನೇರವಾಗಿ ಅಳವಡಿಸಿಕೊಳ್ಳಬಹುದಾದ ಒಂದು ಸಂಕಲನವಾಗಿ ಇದನ್ನು ಬಿಡುಗಡೆ ಮಾಡಲಾಗಿದೆ.
- ರೈಲ್ವೆಯು ಸಾಧ್ಯವಾದಷ್ಟು ಮಟ್ಟಿಗೆ ಒಂದೇ ಘಟಕದ ಆಧಾರದ ಮೇಲೆ ಆರ್.ಒ.ಬಿ/ಆರ್.ಯು.ಬಿ ಯೋಜನೆಗಳನ್ನು ನಿರ್ವಹಿಸಲು ಯೋಜಿಸಿದೆ. ಯಾವುದೇ ರಸ್ತೆ-ಮಾಲೀಕತ್ವ ಪ್ರಾಧಿಕಾರ/ರಾಜ್ಯ ಸರ್ಕಾರ ಬಯಸಿದರೆ, ರೈಲ್ವೆಯು ಅವುಗಳನ್ನು ಒಂದೇ ಘಟಕದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅನುಮತಿಸಬಹುದು.
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ನೀಡಿರುವ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.
****
(रिलीज़ आईडी: 2201929)
आगंतुक पटल : 7