ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಸಾರ ಭಾರತಿ ಮೂಲಕ ವಿಪತ್ತು ಎಚ್ಚರಿಕೆಗಳು ಮತ್ತು ಕಲ್ಯಾಣ ಯೋಜನೆಗಳಿಗಾಗಿ ಕೊನೆಯ ಗಡಿ ಭಾಗಗಳ ಸಂಪರ್ಕವನ್ನು ಬಲಪಡಿಸಲು ಮುಂದಾಗಿರುವ ಸರ್ಕಾರ


ಈಗ ಮಲ್ಟಿಮೀಡಿಯಾ ವಿಧಾನವನ್ನು ಬಳಸಿಕೊಂಡು ನಾಗರಿಕರಿಗೆ ವಿಪತ್ತು ಎಚ್ಚರಿಕೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನೀಡಲಾಗುತ್ತದೆ.

ಓಟಿಟಿ, ದೂದರ್ಶನ ಫ್ರೀಡಿಶ್ ಮತ್ತು ಆಕಾಶವಾಣಿಗಳ ಮೂಲಕ ಗ್ರಾಮೀಣ ಮತ್ತು ಗಡಿ ಪ್ರದೇಶಗಳಲ್ಲಿ ಕಲ್ಯಾಣ ಯೋಜನೆಗಳ ಮಾಹಿತಿ ಹಂಚಿಕೆ

प्रविष्टि तिथि: 10 DEC 2025 4:03PM by PIB Bengaluru

ವಿಶೇಷವಾಗಿ ಗ್ರಾಮೀಣ, ದೂರದ ಮತ್ತು ಗಡಿ ಪ್ರದೇಶಗಳಲ್ಲಿ ಕಲ್ಯಾಣ ಯೋಜನೆಗಳು, ಸಾರ್ವಜನಿಕ ಸಲಹೆಗಳು ಮತ್ತು ವಿಪತ್ತು-ಸಂಬಂಧಿತ ಮಾಹಿತಿಯ ಪ್ರಸರಣದ ಮಹತ್ವವನ್ನು ಸರ್ಕಾರವು ಗುರುತಿಸುತ್ತದೆ.

ಸಾರ್ವಜನಿಕ ಸಂಸ್ಥೆಯಾದ ಪ್ರಸಾರ ಭಾರತಿ (ದೂರದರ್ಶನ ಮತ್ತು ಆಕಾಶವಾಣಿ) ಮೂಲಕ, ಸರ್ಕಾರವು ಎಫ್.ಎಂ/ಎಂ.ಡೆಬ್ಲೂ/ಎಸ್.‌ಡೆಬ್ಲೂ ರೇಡಿಯೋ ನೆಟ್‌ವರ್ಕ್‌ಗಳು, ಟಿವಿ ಟ್ರಾನ್ಸ್‌ಮಿಟರ್‌ಗಳು, ಡಿಡಿ ಫ್ರೀಡಿಶ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ವ್ಯಾಪಕ ಸಂಪರ್ಕವನ್ನು ಒದಗಿಸಲು ಸರ್ಕಾರ ಮುಂದಾಗಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ), ವಿಪತ್ತು ಎಚ್ಚರಿಕೆಗಳ ಭೌಗೋಳಿಕ-ಉದ್ದೇಶಿತ ಪ್ರಸರಣಕ್ಕಾಗಿ ಸಾಮಾನ್ಯ ಎಚ್ಚರಿಕೆ ಪ್ರೋಟೋಕಾಲ್ (ಸಿ.ಎ.ಪಿ) ಆಧಾರಿತ ಇಂಟಿಗ್ರೇಟೆಡ್ ಅಲರ್ಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಎಚ್ಚರಿಕೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಎಸ್.ಎಂ.ಎಸ್, ಮೊಬೈಲ್ ಅಪ್ಲಿಕೇಶನ್‌ಗಳು, ಸಾಶೆಟ್(SACHET) ಪೋರ್ಟಲ್, ಗಗನ್(GAGAN)/ನಾವಿಕ್(NaVIC) ಉಪಗ್ರಹ ಟರ್ಮಿನಲ್‌ಗಳು ಮತ್ತು‌ ಅರ್.ಎಸ್.ಎಸ್ ಫೀಡ್‌ಗಳ ಮೂಲಕ ನೀಡಲಾಗುತ್ತದೆ.

ಹೆಚ್ಚುವರಿಯಾಗಿ, ಎನ್.ಡಿ.ಎಂ.ಎ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮ, ಪ್ರಾದೇಶಿಕ ಭಾಷೆಯ ವಿಷಯ, ಔಟ್‌ರೀಚ್ ವ್ಯಾನ್‌ಗಳು ಮತ್ತು ಬೀದಿ ನಾಟಕಗಳನ್ನು ಬಳಸಿಕೊಂಡು ವ್ಯಾಪಕ ಜಾಗೃತಿ ಉಪಕ್ರಮಗಳ ಮೂಲಕ ಸಮುದಾಯ ಸನ್ನದ್ಧತೆಯನ್ನು ಬಲಪಡಿಸುತ್ತಿದೆ.

ಎಲ್ಲ ಹಂತಗಳಲ್ಲೂ ಮಾಹಿತಿ ಒದಗಿಸಲು, ಸರ್ಕಾರವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದೆ:

  • ಡಿ.ಡಿ. ಫ್ರೀಡಿಶ್ ಮೂಲಕ ವಿಸ್ತರಣೆ: ಗ್ರಾಮೀಣ ಮತ್ತು ಗಡಿ ಪ್ರದೇಶಗಳನ್ನು ಒಳಗೊಂಡಂತೆ ರಾಷ್ಟ್ರವ್ಯಾಪಿ ವ್ಯಾಪ್ತಿಯನ್ನು ಒದಗಿಸುವ ಡೈರೆಕ್ಟ್ ಟು ಹೋಮ್ (ಡಿ.ಟಿ.ಹೆಚ್) ವೇದಿಕೆ. ಇದು ಎಲ್ಲಾ ದೂರದರ್ಶನ ಚಾನೆಲ್‌ಗಳು, 48 ಆಕಾಶವಾಣಿ ಚಾನೆಲ್‌ಗಳು, ಆಯ್ದ ಖಾಸಗಿ ಚಾನೆಲ್‌ಗಳು ಮತ್ತು 260+ ಶೈಕ್ಷಣಿಕ ಚಾನೆಲ್‌ಗಳನ್ನು ಹೊಂದಿದೆ.
  • ಕೇಂದ್ರೀಕೃತ ಸಾರ್ವಜನಿಕ-ಮಾಹಿತಿ ಕಾರ್ಯಕ್ರಮಗಳು: ದೂರದರ್ಶನ ಮತ್ತು ಡಿ.ಡಿ. ನ್ಯೂಸ್ ದೈನಂದಿನ ಬುಲೆಟಿನ್‌ಗಳು ಮತ್ತು ಚರ್ಚಾ ಮೇ, ಆಪ್ದಾ ಕಾ ಸಾಮ್ನಾ, ಕ್ಯಾಬಿನೆಟ್ ಕೆ ಬಡೆ ಫೈಸಲ್ ಮತ್ತು ಸೈಬರ್ ಅಲರ್ಟ್‌ನಂತಹ ಕಾರ್ಯಕ್ರಮಗಳ ಮೂಲಕ ಮೀಸಲಾದ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಮತ್ತು ಸರ್ಕಾರಿ ಯೋಜನೆಗಳ ಕುರಿತು ವರದಿಗಳು ಮತ್ತು ವಿಪತ್ತು ಸಲಹಾಗಳನ್ನು ಪ್ರಸಾರ ಮಾಡುತ್ತದೆ.
  • ಡಿಜಿಟಲ್ ವೇದಿಕೆ ಬಲಪಡಿಸುವುದು: ಪ್ರಸಾರ ಭಾರತಿ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿಯನ್ನು ಪ್ರಸಾರ ಮಾಡಲು ಮುಂದಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ 'ನ್ಯೂಸ್ಆನ್ಏರ್' ಅಪ್ಲಿಕೇಶನ್‌ನಲ್ಲಿ 260 + ಆಕಾಶವಾಣಿ ಕೇಂದ್ರಗಳು ಲಭ್ಯವಿದೆ.
  • ವೇವ್ಸ್ ಒಟಿಟಿ ಪ್ಲಾಟ್‌ ಫಾರ್ಮ್: ಪ್ರಸಾರ ಭಾರತಿ ವೇವ್ಸ್ ಅನ್ನು ಪ್ರಾರಂಭಿಸಿದೆ, ಇದು ಆಯ್ದ ಖಾಸಗಿ ಸುದ್ದಿ ಮತ್ತು ಮನರಂಜನಾ ಚಾನೆಲ್‌ಗಳ ಜೊತೆಗೆ ದೂರದರ್ಶನ ಮತ್ತು ಆಕಾಶವಾಣಿ ಚಾನೆಲ್‌ಗಳ ನೇರ ಪ್ರಸಾರವನ್ನು ಒದಗಿಸುತ್ತದೆ, ಇದು ನಾಗರಿಕರಿಗೆ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ.

ಕೆಳಗಿನ ಐದು ಆಕಾಶವಾಣಿ ಎಫ್‌.ಎಂ. ಕೇಂದ್ರಗಳು ಪ್ರಸ್ತುತ ಕೋಸಿ ಮತ್ತು ಪೂರ್ಣಿಯಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ:

ಕ್ರ.ಸಂ.

ನಿಲ್ದಾಣದ ಸ್ಥಳಗಳು

ಜಿಲ್ಲೆ

ವಿಭಾಗ

1

ಬತ್ನಾಹಾ (10 KW)

ಅರಾರಿಯಾ

ಪೂರ್ನಿಯಾ

2

ಕತಿಹಾರ್ (100 W)

  ಕತಿಹಾರ್

ಪೂರ್ನಿಯಾ

3

ಕಿಶನ್‌ಗಂಜ್ (100 W)

ಕಿಶನ್‌ಗಂಜ್

ಪೂರ್ನಿಯಾ

4

ಪೂರ್ನಿಯಾ (10 KW)

ಪೂರ್ನಿಯಾ

ಪೂರ್ನಿಯಾ

5

ಸಹರ್ಸಾ (100 W)

ಸಹರ್ಸ

ಕೋಸಿ

ಶ್ರೀ ರಾಜೇಶ್ ರಂಜನ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಇಂದು ಲೋಕಸಭೆಯಲ್ಲಿ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿಯನ್ನು ಒದಗಿಸಿದ್ದಾರೆ.

 

****


(रिलीज़ आईडी: 2201804) आगंतुक पटल : 9
इस विज्ञप्ति को इन भाषाओं में पढ़ें: English , Urdu , हिन्दी , Assamese , Tamil , Telugu