ಗೃಹ ವ್ಯವಹಾರಗಳ ಸಚಿವಾಲಯ
ದೀಪಾವಳಿ ಹಬ್ಬವು ಯುನೆಸ್ಕೋದ ಭಾವನಾತ್ಮಕ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿರುವುದಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ದೀಪಾವಳಿಯು ಯುನೆಸ್ಕೋದ ಭಾವನಾತ್ಮಕ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ
ಇದು ಆಧುನಿಕ ಯುಗದಲ್ಲೂ ನಮ್ಮ ಪ್ರಾಚೀನ ಸಾಂಸ್ಕೃತಿಕ ಮೌಲ್ಯಗಳ ಮಹತ್ವವನ್ನು ಸಾರುತ್ತದೆ
ಬೆಳಕಿನ ಹಬ್ಬವಾದ ದೀಪಾವಳಿಯು ಅನಾದಿ ಕಾಲದಿಂದಲೂ ಒಳಿತು ಮತ್ತು ಧರ್ಮದ ಗೆಲುವಿನ ಮೇಲೆ ನಂಬಿಕೆ ಇಡುವಂತೆ ನಮಗೆ ಸ್ಫೂರ್ತಿ ನೀಡಿದೆ
ಇದೀಗ ಈ ಹಬ್ಬವು ಜಾಗತಿಕ ಒಳಿತನ್ನು ಪ್ರೋತ್ಸಾಹಿಸಲಿದೆ ಎಂಬುದು ಅತ್ಯಂತ ಹರ್ಷದಾಯಕ ವಿಷಯವಾಗಿದೆ
प्रविष्टि तिथि:
10 DEC 2025 3:24PM by PIB Bengaluru
ದೀಪಾವಳಿ ಹಬ್ಬವು ಯುನೆಸ್ಕೋದ 'ಭಾವನಾತ್ಮಕ ಸಾಂಸ್ಕೃತಿಕ ಪರಂಪರೆಯ' ಪಟ್ಟಿಗೆ ಸೇರ್ಪಡೆಯಾಗಿರುವುದಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಶ್ರೀ ಅಮಿತ್ ಶಾ ಅವರು "ದೀಪಾವಳಿಯು ಯುನೆಸ್ಕೋದ ಅಮೂರ್ತ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇದು ಆಧುನಿಕ ಯುಗದಲ್ಲೂ ನಮ್ಮ ಪ್ರಾಚೀನ ಸಾಂಸ್ಕೃತಿಕ ಮೌಲ್ಯಗಳ ಮಹತ್ವವನ್ನು ಸಾರುತ್ತದೆ. ಬೆಳಕಿನ ಹಬ್ಬವಾದ ದೀಪಾವಳಿಯು ಅನಾದಿ ಕಾಲದಿಂದಲೂ ಒಳಿತು ಮತ್ತು ಧರ್ಮದ ಗೆಲುವಿನ ಮೇಲೆ ನಂಬಿಕೆ ಇಡುವಂತೆ ನಮಗೆ ಸ್ಫೂರ್ತಿ ನೀಡಿದೆ. ಇದೀಗ ಈ ಹಬ್ಬವು ಜಾಗತಿಕ ಪ್ರೋತ್ಸಾಹಿಸಲಿದೆ ಎಂಬುದು ಅತ್ಯಂತ ಹರ್ಷದಾಯಕ ವಿಷಯವಾಗಿದೆ."
*****
(रिलीज़ आईडी: 2201653)
आगंतुक पटल : 2