ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು 18 ಸಾಂಪ್ರದಾಯಿಕ ವೃತ್ತಿಗಳ ಕುಶಲಕರ್ಮಿಗಳಿಗೆ ಸಮಗ್ರ ನೆರವು ಒದಗಿಸುತ್ತಿದೆ; 23.09 ಲಕ್ಷ ಫಲಾನುಭವಿಗಳಿಗೆ ತರಬೇತಿ


ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮತ್ತು ಫೋನ್‌ಪೇಯಂತಹ ಡಿಜಿಟಲ್ ಪಾವತಿ ವೇದಿಕೆಗಳೊಂದಿಗೆ ಎಂಒಯುಗಳಿಗೆ ಸಹಿ; 6.8 ಲಕ್ಷಕ್ಕೂ ಅಧಿಕ ಕುಶಲಕರ್ಮಿಗಳಿಗೆ 22 ಕೋಟಿ ರೂ.ಮೌಲ್ಯದ ಡಿಜಿಟಲ್ ಪ್ರೋತ್ಸಾಹಕಗಳ ಪಾವತಿ

30 ಸಾವಿರ ವಿಶ್ವಕರ್ಮ ಫಲಾನುಭವಿಗಳು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ನಲ್ಲಿ ಸೇರ್ಪಡೆ; ಸಾಂಸ್ಥಿಕ ಖರೀದಿದಾರರಿಗೆ ಲಭ್ಯತೆ ಹೆಚ್ಚಳ

ಎಂಎಸ್‌ಎಂಇಗಳ ಕುಂದುಕೊರತೆಗಳ ತ್ವರಿತ ಮತ್ತು ಪರಿಣಾಮಕಾರಿ ಪರಿಹಾರ ಖಾತ್ರಿಗೆ ಚಾಂಪಿಯನ್ಸ್ ಪೋರ್ಟಲ್

प्रविष्टि तिथि: 04 DEC 2025 3:22PM by PIB Bengaluru

ತಮ್ಮ ಕೈಗಳು ಮತ್ತು ಸಾಧನಗಳಿಂದ ಕೆಲಸ ಮಾಡುವ 18 ಬಗೆಯ ಸಾಂಪ್ರದಾಯಿಕ ವೃತ್ತಿಗಳ ಕುಶಲಕರ್ಮಿಗಳು ಮತ್ತು ಕಸುಬುದಾರರಿಗೆ ಸಮಗ್ರ ಬೆಂಬಲವನ್ನು ಒದಗಿಸಲು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು 2023ರ ಸೆ.17ರಂದು ಆರಂಭಿಸಲಾಯಿತು. 2025ರ ಡಿಸೆಂಬರ್ 1ರ ವೇಳೆಗೆ 30 ಲಕ್ಷ ಫಲಾನುಭವಿಗಳನ್ನು ನೋಂದಾಯಿಸಲಾಗಿದೆ, ಅದರಲ್ಲಿ 23.09 ಲಕ್ಷ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಫಲಾನುಭವಿಗಳು ಡಿಜಿಟಲ್ ಪಾವತಿ ಪ್ರೋತ್ಸಾಹಕಗಳನ್ನು ಪಡೆಯುವಂತೆ ಅನುವು ಮಾಡಿಕೊಡಲು QR ಕೋಡ್‌ಗಳನ್ನು ಸೃಷ್ಟಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಪೇಟಿಎಂ, ಪೇನಿಯರ್ ಬೈ, ಭಾರತ್‌ಪೇ ಮತ್ತು ಫೋನ್‌ಪೇ ಜೊತೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈವರೆಗೆ, 6.8 ಲಕ್ಷಕ್ಕೂ ಅಧಿಕ ಕುಶಲಕರ್ಮಿಗಳು/ಕಸುಬುದಾರರಿಗೆ 22 ಕೋಟಿ ರೂಪಾಯಿ ಮೊತ್ತದ ಪ್ರೋತ್ಸಾಹಕಗಳನ್ನು ಡಿಜಿಟಲ್ ಮೂಲಕ ಪಾವತಿಸಲಾಗಿದೆ. ಅಲ್ಲದೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ಒಎನ್ ಡಿಸಿ, ಫ್ಯಾಬ್ ಇಂಡಿಯಾ, ಮೀಶೋ ಮತ್ತಿರರ ವಿವಿಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಧಾನಮಂತ್ರಿ ವಿಶ್ವಕರ್ಮ ಫಲಾನುಭವಿಗಳಿಗೆ ಆನ್‌ಲೈನ್ ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸಲಾಗುತ್ತಿದೆ. ಹೆಚ್ಚುವರಿಯಾಗಿ, 30 ಸಾವಿರಕ್ಕೂ ಅಧಿಕ ವಿಶ್ವಕರ್ಮ ಫಲಾನುಭವಿಗಳನ್ನು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜೆಮ್) ನಲ್ಲಿ ಯಶಸ್ವಿಯಾಗಿ ಸೇರಿಸಲಾಗಿದ್ದು, ಇದರಿಂದ ಸಾಂಸ್ಥಿಕ ಖರೀದಿದಾರರಿಗೆ ಅವರ ಲಭ್ಯತೆಯನ್ನು ಹೆಚ್ಚಿಸಲಾಗಿದೆ.

ಚಾಂಪಿಯನ್ಸ್ ಪೋರ್ಟಲ್ ಪರಿಹಾರ, ಕುಂದು ಕೊರತೆ ನಿವಾರಣೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಒಂದು ವೇದಿಕೆಯಾಗಿದೆ. ಇದು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಈ ಕೆಳಗಿನವುಗಳಿಗಾಗಿ ಒದಗಿಸಿದ ಸೌಲಭ್ಯವಾಗಿದೆ:

  1. ಎಂಎಸ್ ಎಂಇಗಳ ಕುಂದುಕೊರತೆಗಳ ತ್ವರಿತ, ಅನುಕೂಲಕರ ಮತ್ತು ಪರಿಣಾಮಕಾರಿ ಪರಿಹಾರ ಖಾತ್ರಿಪಡಿಸಿಕೊಳ್ಳುವುದು.
  2. ವಿವಿಧ ಸರ್ಕಾರಿ ಯೋಜನೆಗಳು/ನೀತಿಗಳ ನಿರೂಪಣೆಯಲ್ಲಿ ಎಂಎಸ್ ಎಂಇಗಳನ್ನು ಕೈಹಿಡಿದು ಬೆಂಬಲ ನೀಡುವುದು.
  3. ಸಚಿವಾಲಯ, ರಾಜ್ಯ ಸರ್ಕಾರಗಳು, ಸಾಲ ನೀಡುವ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಪ್ರಮುಖ ಅಧಿಕಾರಿಗಳೊಂದಿಗೆ ಎಂಎಸ್ ಎಂಇಗಳನ್ನು ಸಂಪರ್ಕಿಸುವುದು.
  4. ಎಂಎಸ್ ಎಂಇ ಸಚಿವಾಲಯದ ಎಲ್ಲಾ ಯೋಜನೆಗಳ ಮಾಹಿತಿ ಮತ್ತು ವಿವರಗಳನ್ನು ಪ್ರಸಾರ ಮಾಡುವುದು.

ಈ ದಿನಾಂಕದವರೆಗೆ ದೇಶಾದ್ಯಂತ 69 ರಾಜ್ಯ ನಿಯಂತ್ರಣ ಕೊಠಡಿಗಳ ಸೌಲಭ್ಯವನ್ನು ಬಳಸಿಕೊಂಡು ಪೋರ್ಟಲ್ ಇಂಗ್ಲಿಷ್ ಮತ್ತು 22 ಸ್ಥಳೀಯ ಭಾಷೆಗಳು ಸೇರಿದಂತೆ 23 ಭಾಷೆಗಳಲ್ಲಿ ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ವಿವಿಧ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ರಾಜ್ಯ ಹಣಕಾಸು ನಿಗಮಗಳು, ರಾಜ್ಯ ಸಹಕಾರಿಗಳು, ಸಿ ಪಿ ಎಸ್ ಇ ಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿಗಳು ಪ್ರಶ್ನೆಗಳನ್ನು ಪರಿಹರಿಸಲು ಚಾಂಪಿಯನ್ಸ್ ಪೋರ್ಟಲ್‌ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿವೆ. 26.11.2025ರ ಹೊತ್ತಿಗೆ, ಪೋರ್ಟಲ್ 1,59,577 ಕುಂದುಕೊರತೆಗಳನ್ನು ಸ್ವೀಕರಿಸಿದೆ ಮತ್ತು ಶೇ.99.24ರಷ್ಟು (1,58,372) ಸಮಸ್ಯೆಗಳಿಗೆ ಉತ್ತರಿಸಲಾಗಿದೆ.

ಈ ಮಾಹಿತಿಯನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರಾದ (ಸುಶ್ರೀ ಶೋಭಾ ಕರಂದ್ಲಾಜೆ) ಅವರು ಇಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 

*****


(रिलीज़ आईडी: 2198742) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी