ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಸರ್ಕಾರದಿಂದ ಸಂಸ್ಕರಣಾ ಸಾಮರ್ಥ್ಯ ವಿಸ್ತರಣೆ; ಜೈವಿಕ ಇಂಧನ ಮತ್ತು ಹಸಿರು ಜಲಜನಕ ಮಿಷನ್ ಗೆ ಉತ್ತೇಜನ

प्रविष्टि तिथि: 01 DEC 2025 4:38PM by PIB Bengaluru

ದೇಶದ ಪ್ರಸ್ತುತ ಒಟ್ಟು ಸಂಸ್ಕರಣಾ ಸಾಮರ್ಥ್ಯವು ವಾರ್ಷಿಕ 258.1 ದಶಲಕ್ಷ ಮೆಟ್ರಿಕ್ ಟನ್ (MMTPA) ಆಗಿದ್ದು, ಇದು 2030ರ ವೇಳೆಗೆ 309.5 MMTPA ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರ ಜೊತೆಗೆ, ಪ್ರಗತಿಯಲ್ಲಿರುವ ಮತ್ತು ಯೋಜಿತ ಸಂಸ್ಕರಣಾ ಯೋಜನೆಗಳು ಪೂರ್ಣಗೊಂಡ ನಂತರ, ಸಾರ್ವಜನಿಕ ವಲಯದ ತೈಲ ಸಂಸ್ಕರಣಾಗಾರಗಳ ಒಟ್ಟಾರೆ 'ಪೆಟ್ರೋಕೆಮಿಕಲ್ ಇಂಟೆನ್ಸಿಟಿ ಇಂಡೆಕ್ಸ್' (PII) 4.1 ರಿಂದ ಸುಮಾರು 9.3 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಜೈವಿಕ ಇಂಧನಗಳು, ಹಸಿರು ಜಲಜನಕ ಮತ್ತು ದ್ರವೀಕೃತ ನೈಸರ್ಗಿಕ ಅನಿಲವನ್ನು (LNG) ಉತ್ತೇಜಿಸಲು ಸರ್ಕಾರವು ವಿವಿಧ ಉಪಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಎಥೆನಾಲ್ ಮಿಶ್ರಣ ಕಾರ್ಯಕ್ರಮದ (EBP) ಅಡಿಯಲ್ಲಿ 20% ಎಥೆನಾಲ್ ಮಿಶ್ರಣವನ್ನು ಸಾಧಿಸುವುದು ಮತ್ತು ಎಥೆನಾಲ್ ಲಭ್ಯತೆಯನ್ನು ಹೆಚ್ಚಿಸಲು ಕಚ್ಚಾ ವಸ್ತುಗಳ ವ್ಯಾಪ್ತಿಯನ್ನು ವಿಸ್ತರಿಸುವುದು ಸೇರಿದೆ. ಸುಸ್ಥಿರ ವಿಮಾನ ಇಂಧನ (SAF) ಸೇರಿದಂತೆ ಸುಧಾರಿತ ಜೈವಿಕ ಇಂಧನ ಯೋಜನೆಗಳನ್ನು ಸ್ಥಾಪಿಸಲು ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ 'ಪ್ರಧಾನ ಮಂತ್ರಿ ಜೈವಿಕ ಇಂಧನ-ವಾತಾವರಣ ಅನುಕೂಲ ಫಸಲ್ ಅವಶೇಷ ನಿವಾರಣ್' (PM JI-VAN) ಯೋಜನೆಯನ್ನು ಜಾರಿಗೆ ತರಲಾಗಿದೆ. ಸಂಕುಚಿತ ಜೈವಿಕ ಅನಿಲದ (CBG) ಪ್ರಚಾರಕ್ಕಾಗಿ 'ಸಸ್ಟೈನಬಲ್ ಆಲ್ಟರ್ನೇಟಿವ್ ಟುವರ್ಡ್ಸ್ ಅಫೋರ್ಡೆಬಲ್ ಟ್ರಾನ್ಸ್ಪೋರ್ಟೇಶನ್' (SATAT) ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅಲ್ಲದೆ, ಜೈವಿಕ ತ್ಯಾಜ್ಯ ಸಂಗ್ರಹಣೆಗೆ ಬೆಂಬಲ ನೀಡಲು ಮತ್ತು ಅಸ್ತಿತ್ವದಲ್ಲಿರುವ ಪೈಪ್ ಲೈನ್ ನೆಟ್ ವರ್ಕ್ ಗೆ ಸಿಬಿಜಿ (CBG) ಸ್ಥಾವರಗಳನ್ನು ಸಂಪರ್ಕಿಸಲು BAM (ಬಯೋಮಾಸ್ ಅಗ್ರಿಗೇಷನ್ ಮೆಷಿನರಿ) ಮತ್ತು DPI (ಡೈರೆಕ್ಟ್ ಪೈಪ್ಲೈನ್ ಇನ್ಫ್ರಾಸ್ಟ್ರಕ್ಚರ್) ನಂತಹ ಯೋಜನೆಗಳನ್ನು ಪರಿಚಯಿಸಲಾಗಿದೆ. 2030 ರ ವೇಳೆಗೆ ವಾರ್ಷಿಕ 5 MMTPA ಹಸಿರು ಜಲಜನಕ ಉತ್ಪಾದನೆಯ ಗುರಿಯೊಂದಿಗೆ 'ರಾಷ್ಟ್ರೀಯ ಹಸಿರು ಜಲಜನಕ ಮಿಷನ್' (NGHM) ಅನ್ನು ಪ್ರಾರಂಭಿಸಲಾಗಿದೆ. ವಿವಿಧ ವಲಯಗಳಿಗೆ ಎಲ್ ಎನ್ ಜಿ (LNG) ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ, ಇದರಲ್ಲಿ ಎಲ್ ಎನ್ ಜಿ ಟರ್ಮಿನಲ್ ಗಳು ಮತ್ತು ಎಲ್ ಎನ್ ಜಿ ಸ್ಟೇಷನ್ ಗಳು ಸೇರಿದಂತೆ ಎಲ್ ಎನ್ ಜಿ ಮೂಲಸೌಕರ್ಯಗಳ ಸ್ಥಾಪನೆಯೂ ಸೇರಿದೆ.

ಜೈವಿಕ ಇಂಧನಗಳು, ಹಸಿರು ಜಲಜನಕ ಮತ್ತು ಎಲ್ ಎನ್ ಜಿ ಯಂತಹ ಸ್ವಚ್ಛ ಇಂಧನಗಳು ಸಾರಿಗೆ ಹಾಗೂ ಸಿಮೆಂಟ್, ಕಬ್ವಿನ ಮತ್ತು ಉಕ್ಕಿನಂತಹ ಪ್ರಮುಖ ಹಾಗೂ ಹೊರಸೂಸುವಿಕೆ ನಿಯಂತ್ರಣ ಕಷ್ಟಕರವಾಗಿರುವ ಕೈಗಾರಿಕೆಗಳಲ್ಲಿ ಹೊರಸೂಸುವಿಕೆಯನ್ನು ತಡೆಗಟ್ಟಲು ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳ ಅಳವಡಿಕೆಯು ಒಟ್ಟಾರೆ ಹೊರಸೂಸುವಿಕೆಯ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ಕಡಿಮೆ ಇಂಗಾಲದ ಆರ್ಥಿಕತೆಗೆ ಪರಿವರ್ತನೆಗೊಳ್ಳಲು ಸಹಕಾರಿಯಾಗಿದೆ. ಈ ಮೂಲಕ ರಾಷ್ಟ್ರೀಯ ಹವಾಮಾನ ಗುರಿಗಳು ಮತ್ತು ಅಂತರರಾಷ್ಟ್ರೀಯ ಬದ್ಧತೆಗಳಿಗೆ ಅನುಗುಣವಾಗಿ ನಡೆಯಲು ಸಾಧ್ಯವಾಗುತ್ತದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾದ ಶ್ರೀ ಸುರೇಶ್ ಗೋಪಿ ಅವರು ಇಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

 

*****


(रिलीज़ आईडी: 2197335) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Gujarati