ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
2025ರ ವಿಶ್ವ ಏಡ್ಸ್ ದಿನದ ಅಂಗವಾಗಿ ವಿಜ್ಞಾನ ಭವನದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ನೇತೃತ್ವವನ್ನು ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ವಹಿಸಲಿದ್ದಾರೆ
ಏಡ್ಸ್ ಅನ್ನು ಕೊನೆಗೊಳಿಸುವತ್ತ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ: 2025ರ ವಿಶ್ವ ಏಡ್ಸ್ ದಿನದಂದು ಕೇಂದ್ರ ಆರೋಗ್ಯ ಸಚಿವರ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಯಕ್ರಮ
ಎನ್.ಎ.ಸಿ.ಪಿ-5 ಅಡಿಯಲ್ಲಿ ಉತ್ತಮ ಪ್ರಗತಿ: ಹೆಚ್.ಐ.ವಿ ಸೋಂಕುಗಳು ಶೇ.49 ರಷ್ಟು ಕಡಿಮೆಯಾಗಿವೆ, ಏಡ್ಸ್ ಸಾವುಗಳು ಶೇ.81 ರಷ್ಟು ಕಡಿಮೆಯಾಗಿವೆ
ಈ ವಿಶ್ವ ಏಡ್ಸ್ ದಿನದಂದು ಯುವಜನತೆ, ತಡೆಗಟ್ಟುವಿಕೆ ಮತ್ತು ಕಳಂಕ ಮುಕ್ತ ಭಾರತದ ಕುರಿತು ಕೇಂದ್ರ ಆರೋಗ್ಯ ಸಚಿವರು ಹೊಸ ಅಭಿಯಾನಗಳಿಗೆ ಚಾಲನೆ ನೀಡಲಿದ್ದಾರೆ
2025ರ ವಿಶ್ವ ಏಡ್ಸ್ ದಿನಕ್ಕೂ ಮುನ್ನ ಡಿಜಿಟಲ್ ನಾವೀನ್ಯತೆ ಮತ್ತು ಸಮುದಾಯದ ತೊಡಗಿಸುಕೊಳ್ಳುವಿಕೆಯು ಭಾರತದ ಹೆಚ್.ಐ.ವಿ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ
प्रविष्टि तिथि:
30 NOV 2025 11:49AM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಡಿಸೆಂಬರ್ 1, 2025 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ 2025ರ ರಾಷ್ಟ್ರೀಯ ಮಟ್ಟದ ವಿಶ್ವ ಏಡ್ಸ್ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ, ಎನ್.ಎ.ಸಿ.ಒ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರು ಮತ್ತು ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದು, ಹೆಚ್.ಐ.ವಿ ತಡೆಗಟ್ಟುವಿಕೆ, ಚಿಕಿತ್ಸೆ, ಆರೈಕೆ ಮತ್ತು ಕಳಂಕ ನಿರ್ಮೂಲನೆಗೆ ರಾಷ್ಟ್ರೀಯ ಪ್ರತಿಕ್ರಿಯೆಯನ್ನು ಮುನ್ನಡೆಸುವ ಭಾರತ ಸರ್ಕಾರದ ಬಲವಾದ ಬದ್ಧತೆಯನ್ನು ದೃಢಪಡಿಸಲಿದ್ದಾರೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್.ಎ.ಸಿ.ಒ) ಆಯೋಜಿಸಿರುವ ಈ ಕಾರ್ಯಕ್ರಮವು ಸರ್ಕಾರದ ನಾಯಕರು, ಅಭಿವೃದ್ಧಿ ಪಾಲುದಾರರು, ಯುವ ಪ್ರತಿನಿಧಿಗಳು ಹೆಚ್.ಐ.ವಿ (ಪಿ.ಎಲ್.ಹೆಚ್.ಐ.ವಿ) ಪೀಡಿತ ಜನರು ಮತ್ತು ಮುಂಚೂಣಿಯ ಆರೋಗ್ಯ ಕಾರ್ಯಕರ್ತರನ್ನು ಒಟ್ಟುಗೂಡಿಸುತ್ತದೆ, ಇದು ಸಾರ್ವಜನಿಕ ಆರೋಗ್ಯ ಬೆದರಿಕೆಯಾಗಿರುವ ಏಡ್ಸ್ ಅನ್ನು ನಿರ್ಮೂಲನೆ ಮಾಡುವ ಭಾರತದ ಪ್ರಯಾಣವನ್ನು ವೇಗಗೊಳಿಸಲು ಒಟ್ಟಾಗಿ ಕೆಲಸ ಮಾಡುವ ದೃಷ್ಟಿಕೋನಗಳನ್ನು ಪ್ರದರ್ಶಿಸುತ್ತದೆ.
ಯುವಕರ ನೇತೃತ್ವದ ಪ್ರದರ್ಶನವು ಜಾಗೃತಿ ಮತ್ತು ಜವಾಬ್ದಾರಿಯುತ ನಡವಳಿಕೆಯ ಮಹತ್ವವನ್ನು ಉಲ್ಲೇಖಿಸುತ್ತದೆ. ಇದರ ನಂತರ ರಾಷ್ಟ್ರೀಯ ಏಡ್ಸ್ ಮತ್ತು ಎಸ್.ಟಿ.ಡಿ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜಾರಿಗೆ ತರಲಾದ ಡಿಜಿಟಲ್ ನಾವೀನ್ಯತೆಗಳು, ಕಾರ್ಯಕ್ರಮದ ಸಾಧನೆಗಳು ಮತ್ತು ಸಮುದಾಯ ನೇತೃತ್ವದ ಮಾದರಿಗಳನ್ನು ಪ್ರದರ್ಶಿಸುವ ವಿಷಯಾಧಾರಿತ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಫಲಾನುಭವಿಗಳ ಅನುಭವ ಕಥೆಗಳು ಮತ್ತು ಧ್ವನಿ - ದೃಶ್ಯ ಪ್ರಸ್ತುತಿಯು ಎನ್.ಎ.ಸಿ.ಪಿ – 5 ಅಡಿಯಲ್ಲಿ ಭಾರತದ ಪ್ರಗತಿಯನ್ನು ಮತ್ತು ಮುಂಬರುವ ಆದ್ಯತೆಗಳನ್ನು ಪ್ರದರ್ಶಿಸುತ್ತದೆ.
ಈ ಆಚರಣೆಯ ಪ್ರಮುಖ ಅಂಶವೆಂದರೆ ಎನ್.ಎ.ಸಿ.ಒ ದ ರಾಷ್ಟ್ರೀಯ ಮಲ್ಟಿಮೀಡಿಯಾ ಉಪಕ್ರಮದ ಅಡಿಯಲ್ಲಿ ಹೊಸ ಅಭಿಯಾನದ ವೀಡಿಯೊ ಸರಣಿಯ ಬಿಡುಗಡೆ, ಇದು ಮೂರು ಪ್ರಮುಖ ವಿಷಯಗಳಾದ ಯುವಜನತೆ ಮತ್ತು ಅರಿವು, ಪ್ರಸರಣವನ್ನು ಕೊನೆಗೊಳಿಸುವುದು ಮತ್ತು ಕಳಂಕ ಮತ್ತು ತಾರತಮ್ಯದ ಮೇಲೆ ಕೇಂದ್ರೀಕರಿಸುತ್ತದೆ. ಹೆಚ್ಚುವರಿಯಾಗಿ, ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮ ಸಂಪನ್ಮೂಲಗಳನ್ನು ಬಿಡುಗಡೆ ಮಾಡಲಾಗುತ್ತದೆ, ಅವುಗಳೆಂದರೆ:
- ಸಂಕಲಕ್ ನ 7ನೇ ಆವೃತ್ತಿ
- ಭಾರತದ ಹೆಚ್.ಐ.ವಿ ಅಂದಾಜುಗಳು 2025
- ಸಂಶೋಧನಾ ಸಂಕಲನ
- ಐಟಿ-ಸಕ್ರಿಯ ವರ್ಚುವಲ್ ಇಂಟರ್‌ವೆನ್ಷನ್ ಲ್ಯಾಂಡಿಂಗ್ ಪೇಜ್
ಈ ಕಾರ್ಯಕ್ರಮವು ವಿಶೇಷ ನೇರ ಸಂಗೀತ ಪ್ರದರ್ಶನವನ್ನು ಸಹ ಒಳಗೊಂಡಿರುತ್ತದೆ, ಇದು ಆರಂಭಿಕ ಪರೀಕ್ಷೆ, ಚಿಕಿತ್ಸೆಯ ಅನುಸರಣೆ ಮತ್ತು ಆತ್ಮವಿಶ್ವಾಸದಿಂದ ಬದುಕುವುದು ಎಂಬ ವಿಷಯವನ್ನು ಒಳಗೊಂಡಿದೆ.
ಎನ್.ಎ.ಸಿ.ಪಿ – 5 ಅಡಿಯಲ್ಲಿ ಭಾರತದ ಪ್ರಗತಿ
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಪ್ರಸ್ತುತ ಹಂತದಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ:
- ಹೆಚ್.ಐ.ವಿ ಪರೀಕ್ಷೆಯು 41.3 ಮಿಲಿಯನ್ (2020–21) ನಿಂದ 66.2 ಮಿಲಿಯನ್ (2024–25) ಗೆ ಹೆಚ್ಚಾಗಿದೆ.
- ಇದೇ ಅವಧಿಯಲ್ಲಿ ಆಂಟಿರೆಟ್ರೋವೈರಲ್ ಚಿಕಿತ್ಸೆಯ ಪ್ರವೇಶವು 1.494 ಮಿಲಿಯನ್ ನಿಂದ 1.86 ಮಿಲಿಯನ್ ಪಿ.ಎಲ್.ಹೆಚ್.ಐ.ವಿ ಗೆ ಏರಿದೆ.
- ಇದೇ ಅವಧಿಯಲ್ಲಿ ವೈರಲ್ ಲೋಡ್ ಪರೀಕ್ಷೆಯು 89.0 ಮಿಲಿಯನ್ ನಿಂದ 1.598 ಮಿಲಿಯನ್ ಗೆ ದುಪ್ಪಟ್ಟಾಗಿದೆ.
2010 ಮತ್ತು 2024ರ ನಡುವೆ, ಭಾರತವು ಇವುಗಳನ್ನು ಸಾಧಿಸಿದೆ:
- ಪ್ರತಿ ವರ್ಷ ಹೊಸ ಹೆಚ್.ಐ.ವಿ ಸೋಂಕುಗಳಲ್ಲಿ ಶೇ.48.7 ರಷ್ಟು ಕಡಿತ
- ಏಡ್ಸ್ ಸಂಬಂಧಿತ ಸಾವುಗಳಲ್ಲಿ ಶೇ.81.4 ರಷ್ಟು ಕಡಿತ
- ತಾಯಿಯಿಂದ ಮಗುವಿಗೆ ಹೆಚ್.ಐ.ವಿ ಹರಡುವಿಕೆಯಲ್ಲಿ ಶೇ.74.6 ರಷ್ಟು ಕಡಿತ
ಈ ಫಲಿತಾಂಶಗಳು ಜಾಗತಿಕ ಸರಾಸರಿಗಿಂತ ಉತ್ತಮವಾಗಿವೆ ಮತ್ತು ಭಾರತದ ನಾಯಕತ್ವ, ಸ್ಥಿರವಾದ ದೇಶೀಯ ಹೂಡಿಕೆ, ಪುರಾವೆ ಆಧಾರಿತ ತಂತ್ರಗಳು ಮತ್ತು ಬಲವಾದ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತವೆ.
****
(रिलीज़ आईडी: 2196565)
आगंतुक पटल : 10