56ನೇ ಐಎಫ್‌ಎಫ್‌ಐನಲ್ಲಿ 'ಜೀವನದ ಪೂರ್ಣ ವೃತ್ತ'ವನ್ನು ಆಳವಾದ ಶಾಂತತೆಯಲ್ಲಿ ಪ್ರತಿಬಿಂಬಿಸಿದ 'ಬಿಂದುಸಾಗರ್'
‘ಬಿಂದುಸಾಗರ್’ ಚಲ್ತಾ ಫಿರ್ತಾ ಒಡಿಶಾ ಪ್ರವಾಸೋದ್ಯಮ ಅನುಭವ: ನಿರ್ದೇಶಕರು
“ಬಿಂದುಸಾಗರ್ ಕೇವಲ ಒಂದು ಹೆಸರಲ್ಲ; ಇದು ಲಕ್ಷಾಂತರ ಒಡಿಯಾ ಜನರು ಪಾಲಿಸುವ ಭಾವನೆಯಾಗಿದೆ. ಆ ಭಾವನೆಯೇ ಈ ಚಿತ್ರ ಅಸ್ತಿತ್ವದಲ್ಲಿರಲು ಕಾರಣ. ಪವಿತ್ರ ಸರೋವರ ಬಿಂದುಸಾಗರದ ಒಂದೆಡೆ ಅಂತ್ಯಕ್ರಿಯೆಗಳು ಮತ್ತು ಇನ್ನೊಂದು ಬದಿಯಲ್ಲಿ ನವಜಾತ ಶಿಶುಗಳ ಹೆಸರಿಸುವಿಕೆ ಸಹಬಾಳ್ವೆ ನಡೆಸುವುದು ನಡೆಯುತ್ತಿದ್ದು, ಇದು ಜೀವನದ ಶುದ್ಧ ವೃತ್ತವನ್ನು ಪ್ರತಿಬಿಂಬಿಸುತ್ತದೆ. ಇದು ಪ್ರತಿ ಒಡಿಯಾ ಹೃದಯವು ಸಹಜವಾಗಿಯೇ ಸಂಪರ್ಕಗೊಳ್ಳುವ ವಿಶಿಷ್ಟ ಶಕ್ತಿ, ಕಾಲಾತೀತ ವೈಬ್ ಅನ್ನು ಹೊಂದಿದೆ" ಎಂದು ನಿರ್ದೇಶಕ ಅಭಿಷೇಕ್ ಸ್ವೈನ್ 56ನೇ ಐಎಫ್‌ಎಫ್‌ಐನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇತರ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಮಾಧ್ಯಮಗಳನ್ನು ಭೇಟಿಯಾದಾಗ ಚರ್ಚೆಯನ್ನು ಆರಂಭಿಸಿದರು.

ಅವರು ತಮ್ಮ ನಿರ್ಮಾಪಕರ ದೃಷ್ಟಿಕೋನದ ಪ್ರತಿಬಿಂಬವನ್ನು ಮುಂದುವರೆಸಿದರು: ಒಡಿಯಾ ಪ್ರೇಕ್ಷಕರಿಗೆ ನಿಜವಾದ ಒಡಿಯಾ ಚಲನಚಿತ್ರವನ್ನು ನಿರ್ಮಿಸುವುದನ್ನು ವಿವರಿಸಿದರು. ನಿರ್ಮಾಪಕ ಶಿಲಾದಿತ್ಯ ಬೋರಾ ಅವರು 'ಬಿಂದುಸಾಗರ್' ಎಂಬ ಪರಿಕಲ್ಪನೆ ಮತ್ತು ಶೀರ್ಷಿಕೆಯೊಂದಿಗೆ ತಕ್ಷಣ ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿಕೊಂಡರು. ಆ ಕಥೆಯನ್ನು ಆಕರ್ಷಕವಾಗಿ, ವಾಣಿಜ್ಯಿಕವಾಗಿ ಮತ್ತು ಹೃತ್ಪೂರ್ವಕವಾಗಿ ತೆರೆಗೆ ತಂದಿದ್ದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು - ಒಡಿಶಾದ ಕಲೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯನ್ನು ಬಿಂಬಿಸುತ್ತದೆ.
ಅವರ ಮಾತಿನಿಂದ ಪ್ರೇರಣೆ ಪಡೆದ ನಿರ್ಮಾಪಕ ಬೋರಾ, "ನಾವು ಐಎಫ್ ಎಫ್ಐ ಯೊಂದಿಗೆ ನಮ್ಮ ಪಯಣವನ್ನು ಆರಂಭಿಸುತ್ತಿದ್ದೇವೆ ಮತ್ತು ಬಿಂದುಸಾಗರ್‌ಗೆ ಅಂತಹ ಉತ್ತಮ ಆರಂಭವನ್ನು ನೀಡಿದ ಐಎಫ್ ಎಫ್ಐ ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ" ಎಂದು ಹೇಳಿದರು

ಇದೀಗ ಬಿಂದುಸಾಗರ್ ಹೇಗ ನಿರ್ಮಾಣವಾಯಿತು ಎಂಬುದಕ್ಕೆ ಬರೋಣ - ಅಭಿಷೇಕ್ ಆರಂಭದಲ್ಲಿ ಹಿಂದಿ ಚಿತ್ರ ಮಾಡಲು ನನ್ನನ್ನು ಸಂಪರ್ಕಿಸಿದರು. ನಾನು ಅವರನ್ನು ಕೇಳಿದ್ದೆ “ನೀವು ಒಡಿಶಾದವರು, ಅಲ್ಲಿನ ಜನರು ನಿಮ್ಮನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ನೀವು ಒಡಿಶಾ ಚಿತ್ರ ಏಕೆ ಮಾಡಬಾರದು?' ಪ್ರತಿಯೊಬ್ಬ ಒಡಿಶಾದವರೊಂದಿಗೆ ಸಂಪರ್ಕ ಸಾಧಿಸಬಹುದಾದ ಚಿತ್ರವನ್ನು ನಿರ್ಮಿಸಲು ನಾನು ಸದಾ ಬಯಸಿದ್ದೆ; ಅದು ಒಡಿಶಾದ ಕಾರ್ಮಿಕ ವರ್ಗದ ವ್ಯಕ್ತಿಯಾಗಿರಲಿ ಅಥವಾ ನಾಸಾದಲ್ಲಿ ಕೆಲಸ ಮಾಡುವ ಒಡಿಶಾ ವೃತ್ತಿಪರರಾಗಿರಲಿ’’ ಎಂದು ಹೇಳಿದ್ದೆನು ಎಂದರು.
ಅಲ್ಲದೆ, ಅವರಿಗೆ ತಕ್ಷಣವೇ ಶೀರ್ಷಿಕೆ ಹೊಳೆಯಿತು ಎಂದು ಅವರು ನೆನಪಿಸಿಕೊಂಡರು. ಅದು ಅವರಿಗೆ ಜೀವನದ ವೃತ್ತವನ್ನು ಪ್ರತಿನಿಧಿಸುತ್ತದೆ. ಅವರು ಹೆಚ್ಚು ವಿವರವಾಗಿ ಹೇಳಿದರು, "ಬಿಂದುಸಾಗರ್ ನಮ್ಮ ಪ್ರೇಕ್ಷಕರ ಹೃದಯಗಳನ್ನು ಸ್ಪರ್ಶಿಸುವ ಉದ್ದೇಶದಿಂದ ಮಾಡಿದ ಎಚ್ಚರಿಕೆಯಿಂದ ನಿರ್ಮಿಸಿರುವ ಚಿತ್ರ. ಈ ಬಾರಿ, ಚಿತ್ರವು ಒಡಿಶಾದ ಪ್ರತಿಯೊಂದು ಮೂಲೆ ಮೂಲೆಯನ್ನು ತಲುಪಬೇಕೆಂದು ನಾನು ಬಯಸಿದ್ದೆ ಮತ್ತು ಸಂಗೀತವು ಆ ದೂರದೃಷ್ಟಿಯ ಅತ್ಯಗತ್ಯ ಭಾಗವಾಯಿತು. ನಮ್ಮಲ್ಲಿ ಎಂಟು ಹಾಡುಗಳಿವೆ, ಅವುಗಳಲ್ಲಿ ಯಾವುದೂ ಬಲವಂತವಾಗಿ ಅಥವಾ ಅತಿಯಾಗಿ ಹೇರಲ್ಪಟ್ಟಿಲ್ಲ. ಪ್ರತಿಯೊಂದು ಹಾಡು ನಿರೂಪಣೆಯಲ್ಲಿ ಸ್ವಾಭಾವಿಕವಾಗಿ ಬೆರೆಯುತ್ತದೆ. ಒಂದು ಅರ್ಥದಲ್ಲಿ, ಬಿಂದುಸಾಗರ್ ಕೂಡ ಒಂದು ಸಂಗೀತಮಯ ಚಿತ್ರ." ಎಂದು ಹೇಳಿದರು.
"ಒಬ್ಬ ಕಲಾವಿದೆಯಾಗಿ, ಅರ್ಥಪೂರ್ಣ ಪಾತ್ರವನ್ನು ಪಡೆಯುವುದು ಸದಾ ಅದ್ಭುತವೆನಿಸುತ್ತದೆ. ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಒಬ್ಬ ಮಹಿಳಾ ನಟಿಯಾಗಿ, ನಮ್ಮ ಕಲೆಯನ್ನು ನಿಜವಾಗಿಯೂ ಪ್ರದರ್ಶಿಸಲು ನಮಗೆ ಅವಕಾಶ ನೀಡುವ ಪಾತ್ರಗಳು ಅಪರೂಪವಾಗಿ ಸಿಗುತ್ತವೆ" ಎಂದು ನಟಿ ಪ್ರಕೃತಿ ಮಿಶ್ರಾ ಉದ್ಗರಿಸಿದರು. ಬಿಂದುಸಾಗರ್ ತನಗೆ ಆ ಅವಕಾಶ ಎಂದು ಅವರು ನಂಬಿದ್ದರು, ”ಗ್ಲಾಮರ್ ಅಥವಾ ದುಂದುಗಾರಿಕೆಯ ಅಗತ್ಯವಿಲ್ಲದೆ, ಪರದೆಯ ಮೇಲೆ ನೈಜವಾಗಿ ಮತ್ತು ಕಚ್ಚಾ ಆಗಿರುವುದು ವಿಮೋಚನೆಯ ಭಾವ ಉಂಟುಮಾಡುತ್ತದೆ’’ ಎಂದರು.
ನಟ ದೀಪನಿತ್ ದಾಸ್ಮೋಹಪತ್ರ ಸಭೆಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಅವರು “ನಾನು ನನ್ನನ್ನು ನಿರ್ದೇಶಕರ ನಟ ಎಂದು ಪರಿಗಣಿಸುತ್ತೇನೆ ಏಕೆಂದರೆ ದಿನದ ಕೊನೆಯಲ್ಲಿ, ನಾವು ನಿರ್ದೇಶಕರ ದೂರದೃಷ್ಟಿಗೆ ಜೀವ ತುಂಬುತ್ತೇವೆ ಮತ್ತು ನಾವೆಲ್ಲರೂ ಆ ದೊಡ್ಡ ಚಿತ್ರದ ಭಾಗಗಳು ಮಾತ್ರ. ಅಭಿಷೇಕ್ ಭಾಯ್ ನಿರ್ದೇಶಕರಾಗಿ ನಂಬಲಾಗದಷ್ಟು ಭಿನ್ನವಾಗಿದ್ದಾರೆ ಮತ್ತು ಸ್ಪಷ್ಟ ಮನಸ್ಸಿನವರಾಗಿದ್ದಾರೆ ಮತ್ತು ಅದು ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿತು. ಈ ಚಿತ್ರವು ಒಡಿಶಾದ ಪ್ರತಿಯೊಂದು ಅಂಶವನ್ನು ಸುಂದರವಾಗಿ ಸೆರೆಹಿಡಿಯುತ್ತದೆ; ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯಗಳು, ನಮ್ಮ ಆಹಾರ, ನಮ್ಮ ಭಾವನೆಗಳು. ನಮ್ಮ ಬೇರುಗಳನ್ನು ನಿಜವಾಗಿಯೂ ಪ್ರತಿನಿಧಿಸುವ ಚಿತ್ರದ ಭಾಗವಾಗುವುದು ನಿಜವಾಗಿಯೂ ವಿಶೇಷವಾಗಿದೆ’’ ಎಂದು ಹೇಳಿದರು.
ನಿರ್ದೇಶಕ ಸ್ವೈನ್, ”ನಮ್ಮ ಸಂಗೀತ ಮತ್ತು ನಮ್ಮ ಸ್ಥಳಗಳು ನಿಜವಾಗಿಯೂ ಒಂದು ಉದ್ಯಮವಾಗಿ ಹೊರಹೊಮ್ಮಲು ನಮಗೆ ಸಹಾಯ ಮಾಡುತ್ತದೆ ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ: ಇವು ನಮ್ಮ ಬಲವಾದ ಹೆಗ್ಗುರುತುಗಳು’’ ಎಂದು ಹೇಳಿದರು. ಒಡಿಶಾದ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾದ ಮತ್ತು ಅತ್ಯಂತ ಜನಪ್ರಿಯ ಗಾಯಕ ದಿವಂಗತ ಹ್ಯೂಮನ್ ಸಾಗರ್ ಕೇವಲ ಹತ್ತು ದಿನಗಳ ಹಿಂದೆ ನಿಧನರಾದರು ಮತ್ತು ಅವರ ಕೊನೆಯ ಹಾಡು ಚಿತ್ರದಲ್ಲಿದೆ ಎಂದು ಅವರು ಪ್ರಸ್ತಾಪಿಸಿದರು. ಆದ್ದರಿಂದ ನಿರ್ದೇಶಕರು ಚಿತ್ರವನ್ನು ಅವರ ಸ್ಮರಣಾರ್ಥ ಗೌರವ ಸಲ್ಲಿಸಿದರು

ಅವರು ಇಡೀ ಪರಿಕಲ್ಪನೆಯನ್ನು ತಮ್ಮ ಒಂದೇ ವಾಕ್ಯದಲ್ಲಿ "ಬಿಂದುಸಾಗರ್ ಎಂಬುದು ಚಲ್ತಾ ಫಿರ್ತಾ ಒರಿಸ್ಸಾ ಪ್ರವಾಸೋದ್ಯಮ ಅನುಭವ" ಎಂಬ ಸಂಕ್ಷಿಪ್ತವಾಗಿ ವಿವರಿಸಿದರು.
ಸಿನಿಮಾದ ಸಂಕ್ಷಿಪ್ತ ವಿವರ:
ಲಂಡನ್‌ನಿಂದ ಬಂದಿರುವ 22 ವರ್ಷದ ಶ್ರೀಜಾ ತನ್ನ ದಿವಂಗತ ತಾಯಿಯ ನಿಗೂಢ ಪತ್ರವನ್ನು ಹೊತ್ತುಕೊಂಡು ಭುವನೇಶ್ವರದ ಪ್ರಾಚೀನ ದೇವಾಲಯಗಳು ಮತ್ತು ಚಕ್ರವ್ಯೂಹದ ಹಾದಿಗಳ ನಡುವೆ ಬರುತ್ತಾರೆ. ಆಕರ್ಷಕ ರಾಮಲೀಲಾ ಕಲಾವಿದೆ ಸಾಗರ್, ಶ್ರೀಜಾಗೆ ಇಷ್ಟವಿಲ್ಲದ ಮಾರ್ಗದರ್ಶಕನಾಗುತ್ತಾನೆ, ಅವಳನ್ನು ಕರಾವಳಿ ಪಟ್ಟಣವಾದ ಪುರಿಯ ಕಡೆಗೆ ಕರೆದೊಯ್ಯುತ್ತಾನೆ, ಅಲ್ಲಿ, ಅವಳು ತನ್ನ ದೂರವಾದ ಅಜ್ಜ ರಘುನಾಥ್‌ನನ್ನು ಭೇಟಿಯಾಗುತ್ತಾಳೆ, ಅವರ ದುಃಖವು ಪ್ರಪಂಚ ವನ್ನೇ ಮರೆ ಮಾಚುವಷ್ಟಿರುತ್ತದೆ. ಈಮಧ್ಯೆ, ತನ್ನ ಮಗುವನ್ನು ಕಳೆದುಕೊಂಡು ಹೋರಾಡುತ್ತಿರುವ ಕಾಳಿಯಾ, ಅಸ್ತಿತ್ವವಾದದ ಪ್ರಕ್ಷುಬ್ಧತೆಯಲ್ಲಿ ಪವಿತ್ರ ಭೂದೃಶ್ಯದ ಮೂಲಕ ಅಲೆದಾಡುತ್ತಾನೆ. ಒಡಿಶಾದ ಜೀವಂತ ಪರಂಪರೆಯ ಹಿನ್ನೆಲೆಯಲ್ಲಿ, ಈ ಚಿತ್ರವು ಸ್ಥಳಾಂತರ ಮತ್ತು ಮರುಶೋಧನೆಯ ಕುರಿತಾದ ಧ್ಯಾನವಾಗಿದೆ. ಅದರ ಸುತ್ತ ಹೆಣೆದುಕೊಂಡ ಕಥೆಗಳ ಮೂಲಕ, ಬಿಂದುಸಾಗರ್ ಸೇರುವಿಕೆಯ ಕ್ಷಣಿಕ ಸ್ವರೂಪ ಮತ್ತು ಕಥೆ ಹೇಳುವಿಕೆಯ ಗುಣಪಡಿಸುವ ಶಕ್ತಿಯನ್ನು ಪರಿಶೋಧಿಸುತ್ತದೆ.
ಸುದ್ಧಿಗೋಷ್ಠಿಯ ಪೂರ್ಣ ವಿವರಗಳಿಗಾಗಿ ಈ ಲಿಂಕ್ ನೋಡಿ
For more information, click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Post Link: https://x.com/PIB_Panaji/status/1991438887512850647?s=20
X Handles: @IFFIGoa, @PIB_India, @PIB_Panaji
*****
Release ID:
2194647
| Visitor Counter:
4