ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸಂಚಾರ್ ಸಾಥಿಯು ಅಕ್ಟೋಬರ್ 2025ರಲ್ಲಿ 50,000ಕ್ಕೂ ಹೆಚ್ಚು ಫೋನ್‌ಗಳನ್ನು ಮರುಪಡೆಯಲು ಸಹಾಯ ಮಾಡಿ, ದೇಶಾದ್ಯಂತ ಡಿಜಿಟಲ್ ಭದ್ರತೆಯನ್ನು ಬಲಪಡಿಸಿದೆ


ಪೊಲೀಸ್- ದೂರಸಂಪರ್ಕ ಇಲಾಖೆಯ ಸಮನ್ವಯದಲ್ಲಿ ಒಟ್ಟಾರೆಯಾಗಿ 7 ಲಕ್ಷಕ್ಕೂ ಹೆಚ್ಚು ಹ್ಯಾಂಡ್‌ಸೆಟ್ ಗಳನ್ನು ಮರುಪಡೆಯಲಾಗಿದೆ

ತಲಾ 1 ಲಕ್ಷಕ್ಕೂ ಹೆಚ್ಚು ಮರುಪಡೆಯುವಿಕೆಗಳೊಂದಿಗೆ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಮುಂಚೂಣಿಯಲ್ಲಿವೆ

ಮಾಸಿಕ ಮರುಪಡೆಯುವಿಕೆಗಳಲ್ಲಿ ಕಂಡುಬರುವ 47% ಹೆಚ್ಚಳವು ಸಂಚಾರ್ ಸಾಥಿಯ ವೇಗವರ್ಧಿತ ಕಾರ್ಯಚಟುವಟಿಕೆಯನ್ನು ತೋರಿಸುತ್ತದೆ

ಭಾರತವು ಈಗ ಸಂಚಾರ್ ಸಾಥಿ ಮೂಲಕ ಪ್ರತಿ ನಿಮಿಷಕ್ಕೂ ಕಳೆದುಹೋದ ಫೋನ್ ಅನ್ನು ಮರುಪಡೆಯುತ್ತಿದೆ

ಸಾಧನ ಪರಿಶೀಲನೆ ಮತ್ತು ವಂಚನೆ ವರದಿಗಾಗಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಬಳಸಲು ನಾಗರಿಕರನ್ನು ಆಗ್ರಹಿಸಲಾಗಿದೆ

ಸಂಚಾರ್ ಸಾಥಿಯು ಡಿಜಿಟಲ್ ಇಂಡಿಯಾ ದೃಷ್ಟಿಯಲ್ಲಿ ನಾಗರಿಕ ರಕ್ಷಣೆಯನ್ನು ವೃದ್ದಿಪಡಿಸುತ್ತದೆ

Posted On: 25 NOV 2025 1:41PM by PIB Bengaluru

ದೂರಸಂಪರ್ಕ ಇಲಾಖೆಯು (DoT) ತನ್ನ ಡಿಜಿಟಲ್ ಸುರಕ್ಷತಾ ಉಪಕ್ರಮವಾದ ಸಂಚಾರ್ ಸಾಥಿಯು, ಅಕ್ಟೋಬರ್ 2025ರಲ್ಲಿ ಮೊದಲ ಬಾರಿಗೆ ಭಾರತದಾದ್ಯಂತ 50,000 ಕ್ಕೂ ಹೆಚ್ಚು ಕಳುವಾದ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮರುಪಡೆಯಲು ಸಹಾಯ ಮಾಡಿಕೊಟ್ಟಿದೆ ಎಂದು ಘೋಷಿಸಿದೆ. ಈ ಮೈಲಿಗಲ್ಲು ನಾಗರಿಕರ ಡಿಜಿಟಲ್ ಸ್ವತ್ತುಗಳನ್ನು ಸುರಕ್ಷಿತಗೊಳಿಸುವ ಅಚಲ ಬದ್ಧತೆ ಮತ್ತು ತಂತ್ರಜ್ಞಾನ-ಚಾಲಿತ ಆಡಳಿತದಲ್ಲಿ ಸಾರ್ವಜನಿಕ ನಂಬಿಕೆಯ ಪ್ರತೀಕವಾಗಿದೆ. ದೇಶಾದ್ಯಂತ ಒಟ್ಟಾರೆ ಮರುಪಡೆಯುವಿಕೆಯು 7 ಲಕ್ಷ ಮೈಲಿಗಲ್ಲನ್ನು ದಾಟಿದೆ.

ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಾಗಿ ಹೊರಹೊಮ್ಮಿದ್ದು, ತಲಾ 1 ಲಕ್ಷ ಮರುಪಡೆಯುವಿಕೆಗಳನ್ನು ದಾಟಿದೆ. ಮಹಾರಾಷ್ಟ್ರ 80,000 ಕ್ಕೂ ಹೆಚ್ಚು ಮರುಪಡೆಯುವಿಕೆಗಳೊಂದಿಗೆ ನಂತರದ ಎರಡನೆಯ ಸ್ಥಾನದಲ್ಲಿದೆ. ಗಮನಾರ್ಹವಾಗಿ, ಜೂನ್ ನಿಂದ ಅಕ್ಟೋಬರ್ 2025 ರವರೆಗೆ ಮಾಸಿಕ ಮರುಪಡೆಯುವಿಕೆಗಳು ಶೇಕಡಾ 47 ರಷ್ಟು ಹೆಚ್ಚಾಗಿದೆ, ಇದು ಸಂಚಾರ್ ಸಾಥಿ ವ್ಯವಸ್ಥೆಯ ಬೆಳೆಯುತ್ತಿರುವ ದಕ್ಷತೆ ಮತ್ತು ವ್ಯಾಪ್ತಿಯನ್ನು ತೋರಿಸುತ್ತದೆ. ಈ ವ್ಯವಸ್ಥೆಯ ಸಹಾಯದಿಂದ, ದೇಶಾದ್ಯಂತ ಪ್ರತಿ ನಿಮಿಷಕ್ಕೆ ಒಂದಕ್ಕಿಂತ ಹೆಚ್ಚು ಹ್ಯಾಂಡ್‌ಸೆಟ್‌ಗಳನ್ನು ಮರುಪಡೆಯಲಾಗುತ್ತಿದೆ.

ಈ ಸಾಧನೆಯ ಮೂಲತತ್ವವೆಂದರೆ ಇದು ದೃಢವಾದ, ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ವೇದಿಕೆಯಾಗಿದ್ದು, ಸ್ವಯಂಚಾಲಿತ ಕೆಲಸದ ಒಳಹರಿವುಗಳು ಮತ್ತು ನೈಜ-ಸಮಯದ ಸಾಧನ ಪತ್ತೆಹಚ್ಚುವಿಕೆಯನ್ನು ಸಂಯೋಜಿಸುತ್ತದೆ. ಸಂಚಾರ್ ಸಾಥಿಯ ಸುಧಾರಿತ ತಂತ್ರಜ್ಞಾನವು ನಿರ್ಬಂಧಿತ ಸಾಧನಗಳ ದುರುಪಯೋಗವನ್ನು ತಡೆಯುತ್ತದೆ. ವರದಿಯಾದ ಹ್ಯಾಂಡ್‌ಸೆಟ್‌ಗೆ ಸಿಮ್ ಅನ್ನು ಸೇರಿಸಿದಾಗ, ವ್ಯವಸ್ಥೆಯು ನೋಂದಾಯಿತ ನಾಗರಿಕ ಮತ್ತು ಸಂಬಂಧಿತ ಪೊಲೀಸ್ ಠಾಣೆ ಇಬ್ಬರಿಗೂ ಎಚ್ಚರಿಕೆಯ ಸೂಚನೆಯನ್ನು ಕಳುಹಿಸುತ್ತದೆ. ಈ  ವ್ಯವಸ್ಥೆಯ ವಿಧಾನವು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ವಶಪಡೆಯುವಿಕೆಗೆ ಅನುವು ಮಾಡಿಕೊಡುತ್ತದೆ.

ಈ ಯಶಸ್ಸು ಸರಾಗ ಸಹಯೋಗದ ಫಲಿತಾಂಶವಾಗಿದ್ದು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪೊಲೀಸ್ ಸಿಬ್ಬಂದಿ, ದೂರಸಂಪರ್ಕ ಇಲಾಖೆಯ ಡಿಜಿಟಲ್ ಗುಪ್ತಚರ ಘಟಕ (DIU) ಮತ್ತು ಕ್ಷೇತ್ರ ರಚನೆಗಳ (LSA ಗಳು) ಸಾಧನಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲಾಗಿದ್ದು, ಅವುಗಳ ನಿಜವಾದ ಮಾಲೀಕರಿಗೆ ಅವುಗಳನ್ನು ಹಿಂತಿರುಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿಕಟ ಸಮನ್ವಯದಲ್ಲಿ ಕಾರ್ಯಚಟುವಟಿಕೆ ಮಾಡಿವೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳೊಂದಿಗೆ ನಿಯಮಿತ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳು ತಳಮಟ್ಟದ ಪ್ರತಿಕ್ರಿಯೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಬಲಪಡಿಸುವಲ್ಲಿ ನಿರ್ಣಾಯಕವಾಗಿವೆ.

ನಾಗರಿಕರು ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಕಳೆದುಹೋದ / ಕದ್ದ ಮೊಬೈಲ್ ಸಾಧನಗಳನ್ನು ನಿರ್ಬಂಧಿಸಲು ಮಾತ್ರವಲ್ಲದೆ, ಅವರು ಖರೀದಿಸಲು ಉದ್ದೇಶಿಸಿರುವ ಹೊಸ / ಹಳೆಯ ಸಾಧನಗಳ ನೈಜತೆಯನ್ನು ಪರಿಶೀಲಿಸಲು ದೂರಸಂಪರ್ಕ ಇಲಾಖೆಯು ಒತ್ತಾಯಿಸುತ್ತದೆ. ನಾಗರಿಕರು ಈ ಅಪ್ಲಿಕೇಶನ್ ಮೂಲಕ ಶಂಕಿತ ವಂಚನೆಯ ಕರೆಗಳು / ಸಂದೇಶಗಳನ್ನು ಕೂಡಾ ವರದಿ ಮಾಡಡಿ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹ ಸಂಪರ್ಕ ವಿವರಗಳನ್ನು ಪರಿಶೀಲಿಸಬಹುದು.

ಸರ್ಕಾರದ ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಅನುಗುಣವಾಗಿ, ಸಂಚಾರ್ ಸಾಥಿಯು ನಾಗರಿಕರನ್ನು ಸಬಲೀಕರಣಗೊಳಿಸುವುದನ್ನು ಮತ್ತು ಡಿಜಿಟಲ್ ಸ್ವತ್ತುಗಳನ್ನು ರಕ್ಷಿಸುವುದನ್ನು ಮುಂದುವರೆಸಿದೆ. ಈ ಸಾಧನೆಯು ಡಿಜಿಟಲ್ ತಂತ್ರಜ್ಞಾನಗಳು, ಜಾಗರೂಕ ಪೊಲೀಸ್ ಪಡೆಗಳು ಮತ್ತು ಸಮರ್ಪಿತ ದೂರಸಂಪರ್ಕ ಇಲಾಖೆಯ ತಂಡಗಳು ಸುರಕ್ಷಿತ, ನಾಗರಿಕ-ಕೇಂದ್ರಿತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಬೀರುವ ಪರಿವರ್ತನಾತ್ಮಕ ಪರಿಣಾಮವನ್ನು ಒತ್ತಿಹೇಳುತ್ತದೆ.

ನೈಜ-ಸಮಯದ ಅಂಕಿಅಂಶಗಳು ಮತ್ತು ಹೆಚ್ಚಿನ ವಿವರಗಳಿಗಾಗಿ,  www.sancharsaathi.gov.in. ಗೆ ಭೇಟಿ ನೀಡಿ. ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ ಅನ್ನು ವಿವಿಧ ಸೇವೆಗಳನ್ನು ಪಡೆಯಲು ಈ ಕೆಳಗಿನಂತೆ ಡೌನ್‌ಲೋಡ್ ಮಾಡಬಹುದು:

For Android: https://play.google.com/store/apps/details?id=com.dot.app.sancharsaathi

For iOS: https://apps.apple.com/app/sanchar-saathi/id6739700695

Follow DoT Handles for more: -

X - https://x.com/DoT_India

Insta-https://www.instagram.com/department_of_telecom?igsh=MXUxbHFjd3llZTU0YQ==

Fb - https://www.facebook.com/DoTIndia

Youtube: https://www.youtube.com/@departmentoftelecom

 

*****


(Release ID: 2194084) Visitor Counter : 4