ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 6ನೇ ಅಂತಾರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಗ್ರೆಸ್‌ (ಐಎಸಿ -2025) ಉದ್ಘಾಟಿಸಿದರು


ಸ್ಮಾರ್ಟ್‌, ಸುಸ್ಥಿರ ಮತ್ತು ಲಾಭದಾಯಕ ಕೃಷಿಯು ವಿಕಸಿತ ಭಾರತ್‌ 2047ರ ಅಡಿಪಾಯವಾಗಲಿದೆ: ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

ಭವಿಷ್ಯದ ಬೆಳವಣಿಗೆಗಾಗಿ ರೈತರು, ಯುವಕರು ಮತ್ತು ವಿಜ್ಞಾನವನ್ನು ಸಂಯೋಜಿಸುವ ಪ್ರಮುಖ ಪಾತ್ರವನ್ನು ಬಿಂಬಿಸಿದ ಕೃಷಿ ಸಚಿವರು

ರೈತರ ಪ್ರಾಥಮಿಕ ಸವಾಲುಗಳ ಆಧಾರದ ಮೇಲೆ ಸಂಶೋಧನಾ ಆದ್ಯತೆಗಳನ್ನು ಸಹ ನಿಗದಿಪಡಿಸಬೇಕು: ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌

ಈ ಕಾರ್ಯಕ್ರಮವು ಪ್ರಪಂಚದಾದ್ಯಂತದ 1,000ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ

Posted On: 24 NOV 2025 4:00PM by PIB Bengaluru

6ನೇ ಅಂತಾರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಗ್ರೆಸ್‌ (ಐಎಸಿ-2025) ಅನ್ನು ಇಂದು ನವದೆಹಲಿಯ ಪೂಸಾ ಕ್ಯಾಂಪಸ್‌ನ ಎನ್‌ಪಿಎಲ್‌ ಸಭಾಂಗಣದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಘನ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಉದ್ಘಾಟಿಸಲಾಯಿತು. ಈ ಮೂರು ದಿನಗಳ ಜಾಗತಿಕ ಕಾರ್ಯಕ್ರಮವನ್ನು (24-26 ನವೆಂಬರ್‌ 2025) ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌), ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ), ನ್ಯಾಷನಲ್‌ ಅಕಾಡೆಮಿ ಆಫ್‌ ಅಗ್ರಿಕಲ್ಚರಲ್‌ ಸೈನ್ಸಸ್‌ (ಎನ್‌ಎಎಎಸ್‌) ಮತ್ತು ಟ್ರಸ್ಟ್‌ ಫಾರ್‌ ಅಡ್ವಾನ್ಸ್ಮೆಂಟ್‌ ಆಫ್‌ ಅಗ್ರಿಕಲ್ಚರಲ್‌ ಸೈನ್ಸಸ್‌ (ಟಿಎಎಎಸ್‌) ಸಹಯೋಗದೊಂದಿಗೆ ಆಯೋಜಿಸುತ್ತಿದೆ.

ಭಾರತ ಮತ್ತು ವಿದೇಶಗಳಿಂದ 1,000ಕ್ಕೂ ಹೆಚ್ಚು ವಿಜ್ಞಾನಿಗಳು, ನೀತಿ ನಿರೂಪಕರು, ವಿದ್ಯಾರ್ಥಿಗಳು, ಅಭಿವೃದ್ಧಿ ಪಾಲುದಾರರು ಮತ್ತು ಉದ್ಯಮ ತಜ್ಞರು ಕಾಂಗ್ರೆಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ), ಅಂತಾರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋಧಿ ಸುಧಾರಣಾ ಕೇಂದ್ರ (ಸಿಐಎಂಎಂವೈಟಿ), ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (ಐಸಿಆರ್‌ಐಎಸ್‌ಎಟಿ), ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐಆರ್‌ಆರ್‌ಐ), ಒಣ ಪ್ರದೇಶಗಳಲ್ಲಿಕೃಷಿ ಸಂಶೋಧನೆಯ ಅಂತಾರಾಷ್ಟ್ರೀಯ ಕೇಂದ್ರ (ಐಸಿಎಆರ್‌ಡಿಎ) ಮತ್ತು ಅಂತಾರಾಷ್ಟ್ರೀಯ ರಸಗೊಬ್ಬರ ಅಭಿವೃದ್ಧಿ ಕೇಂದ್ರ (ಐಎಫ್‌ಡಿಸಿ) ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳ ವಿಜ್ಞಾನಿಗಳು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ, ಗೌರವಾನ್ವಿತ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌, ವಿಕಸಿತ ಭಾರತ 2047ರ ಅಡಿಪಾಯವು ಸ್ಮಾರ್ಟ್‌, ಸುಸ್ಥಿರ ಮತ್ತು ಲಾಭದಾಯಕ ಕೃಷಿಯಲ್ಲಿಅಡಗಿದೆ ಎಂದು ಹೇಳಿದರು. ‘‘ಕೃಷಿಯು ಕಡಿಮೆ ಸಂಪನ್ಮೂಲಗಳೊಂದಿಗೆ ಹೆಚ್ಚು ಉತ್ಪಾದನೆಯತ್ತ ಸಾಗಬೇಕು ಮತ್ತು ಭವಿಷ್ಯದ ಪೀಳಿಗೆಗೆ ಹೆಚ್ಚು ಸಂರಕ್ಷಿಸಬೇಕು. ಕೃಷಿ ವಿಜ್ಞಾನವು ವೈಜ್ಞಾನಿಕ ಸಂಶೋಧನೆಯನ್ನು ರೈತನ ಹೊಲದೊಂದಿಗೆ ಸಂಪರ್ಕಿಸುವ ಸೇತುವೆಯಾಗಿದೆ,’’ ಮಣ್ಣಿನ ಆರೋಗ್ಯ, ನೀರಿನ ಬಳಕೆಯ ದಕ್ಷ ತೆ, ಜೀವವೈವಿಧ್ಯತೆ, ಪರಿಸರ ಪೋಷಣೆ ಮತ್ತು ಡಿಜಿಟಲ್‌ ಕೃಷಿಯನ್ನು ಉತ್ತಮಗೊಳಿಸುವಂತೆ ಸಚಿವರು ಒತ್ತಿ ಹೇಳಿದರು. ಕಾಂಗ್ರೆಸ್‌ ನಿಂದ ಹೊರಹೊಮ್ಮುವ ಶಿಫಾರಸುಗಳನ್ನು ರಾಷ್ಟ್ರೀಯ ನೀತಿಗಳು ಮತ್ತು ಪ್ರಾದೇಶಿಕ ಕ್ರಿಯಾ ಯೋಜನೆಗಳಲ್ಲಿ ಅಳವಡಿಸಲಾಗುವುದು ಎಂದು ಅವರು ಘೋಷಿಸಿದರು.

ಉದ್ಘಾಟನಾ ಅಧಿವೇಶನದಲ್ಲಿ, ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಐಎಸಿ-2025 ಘೋಷಣೆಯನ್ನು ಬಿಡುಗಡೆ ಮಾಡಿದರು, ಇದು ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ:

  • ಮಣ್ಣು-ಇಂಗಾಲದ ಸೀಕ್ವೆಸ್ಪ್ರೇಶನ್‌ ಮತ್ತು ಜಲ-ದಕ್ಷ  ಕೃಷಿಗೆ ಉತ್ತೇಜನ
  • ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್‌ ಕೃಷಿ ಪರಿಹಾರಗಳು ಮತ್ತು ಅಗ್ರಿ-ಸ್ಟ್ಯಾಕ್ ಚೌಕಟ್ಟನ್ನು ಹೆಚ್ಚಿಸುವುದು
  • ನೈಸರ್ಗಿಕ ಮತ್ತು ಪುನರುತ್ಪಾದಕ ಕೃಷಿ ಮಾದರಿಗಳನ್ನು ಮುಖ್ಯವಾಹಿನಿಗೆ ತರುವುದು
  • ಯುವಜನರು ಮತ್ತು ಮಹಿಳಾ ರೈತರಿಗಾಗಿ ಉದ್ದೇಶಿತ ನಾವೀನ್ಯತೆ ಕಾರ್ಯಕ್ರಮಗಳು
  •  ಶಾಲೆ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿಮುಂದಿನ ಪೀಳಿಗೆಯ ಕೃಷಿ ವಿಜ್ಞಾನ ಶಿಕ್ಷಣ
  • ಒನ್‌-ಹೆಲ್ತ್‌, ಲೈಫ್‌ ಮಿಷನ್‌ ಮತ್ತು ನಿವ್ವಳ-ಶೂನ್ಯ 2070 ಹೊಂದಾಣಿಕೆಯ ಕೃಷಿ ಕಾರ್ಯತಂತ್ರಗಳು
  •  ಭಾರತೀಯ ಹವಾಮಾನ-ಸ್ಮಾರ್ಟ್‌ ಕೃಷಿ ಮಾದರಿಗಳ ಜಾಗತಿಕ ವ್ಯಾಪ್ತಿ

ಕೃಷಿ ಖಾತೆ ರಾಜ್ಯ ಸಚಿವರಾದ ಶ್ರೀ ಭಗೀರಥ್‌ ಚೌಧರಿ ಮಾತನಾಡಿ, ಕೃಷಿ ವಿಜ್ಞಾನವು ರೈತರ ನೈಜ ಸಮಸ್ಯೆಗಳಿಗೆ ಪರಿಹಾರವಾಗಬೇಕು ಎಂದು ಹೇಳಿದರು. ರೈತರ ಆದಾಯ, ಪರಿಸರ ಭದ್ರತೆ ಮತ್ತು ಪೌಷ್ಠಿಕಾಂಶದ ಗುಣಮಟ್ಟವನ್ನು ಹೆಚ್ಚಿಸುವುದು ಕೃಷಿ ವಿಜ್ಞಾನದ ಅಂತಿಮ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ರಾಜಸ್ಥಾನದ ಒಣ ಭೂಮಿ ಅಥವಾ ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ನಾವೀನ್ಯತೆಗಳು ಪ್ರತಿಯೊಂದು ಕ್ಷೇತ್ರವನ್ನು ತಲುಪಬೇಕು ಎಂದು ಅವರು ಹೇಳಿದರು. ಮಳೆಯಾಶ್ರಿತ ಕೃಷಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಮಹಿಳೆಯರ ಭಾಗವಹಿಸುವಿಕೆ, ಯುವಕರ ನೇತೃತ್ವದ ಆವಿಷ್ಕಾರಗಳು ಮತ್ತು ಗ್ರಾಮೀಣ ಸೂಕ್ಷ್ಮ ಉದ್ಯಮಗಳನ್ನು ಬಲಪಡಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಕಾಂಗ್ರೆಸ್‌ನಲ್ಲಿ ಹತ್ತು ವಿಷಯಾಧಾರಿತ ವಿಚಾರ ಸಂಕಿರಣಗಳು ವೈಜ್ಞಾನಿಕ ಪ್ರಸ್ತುತಿಗಳನ್ನು ಒಳಗೊಂಡಿರುತ್ತವೆ:

  • ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಮತ್ತು ಇಂಗಾಲ-ತಟಸ್ಥ ಕೃಷಿ
  • ಪ್ರಕೃತಿ ಆಧಾರಿತ ಪರಿಹಾರಗಳು ಮತ್ತು ಒನ್‌-ಹೆಲ್ತ್
  • ನಿಖರ ಇನ್‌ ಪುಟ್‌ ನಿರ್ವಹಣೆ ಮತ್ತು ಸಂಪನ್ಮೂಲ ದಕ್ಷತೆ
  • ಆನುವಂಶಿಕ ಸಾಮರ್ಥ್ಯ‌ವನ್ನು ಬಳಸಿಕೊಳ್ಳುವುದು
  • ಇಂಧನ-ದಕ್ಷ ಯಂತ್ರೋಪಕರಣಗಳು, ಡಿಜಿಟಲ್‌ ಪರಿಹಾರಗಳು ಮತ್ತು ಸುಗ್ಗಿಯ ನಂತರದ ನಿರ್ವಹಣೆ
  • ಪೌಷ್ಠಿಕಾಂಶ-ಸೂಕ್ಷ್ಮ ಕೃಷಿ ಮತ್ತು ಪರಿಸರ ಪೋಷಣೆ
  • ಲಿಂಗ ಸಬಲೀಕರಣ ಮತ್ತು ಜೀವನೋಪಾಯ ವೈವಿಧ್ಯೕಕರಣ
  • ಕೃಷಿ 5.0, ಮುಂದಿನ ಪೀಳಿಗೆಯ ಶಿಕ್ಷ ಣ ಮತ್ತು ವಿಕಸಿತ ಭಾರತ 2047
  • ಯುವ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಸಮ್ಮೇಳನ

ಈ ಚರ್ಚೆಗಳು ಕೃಷಿ ವಿಜ್ಞಾನದ ಮೂಲಕ ಎಸ್‌ಡಿಜಿ-1, ಎಸ್‌ಡಿಜಿ-2, ಎಸ್‌ಡಿಜಿ-12, ಎಸ್‌ಡಿಜಿ-13 ಮತ್ತು ಎಸ್‌ಡಿಜಿ-15 ಅನ್ನು ಸಾಧಿಸಲು ಹೊಸ ಮಾರ್ಗಗಳನ್ನು ರೂಪಿಸುತ್ತವೆ.

ಕಾರ್ಯಕ್ರಮದಲ್ಲಿ, ಡಿಎಆರ್‌ಇ ಕಾರ್ಯದರ್ಶಿ ಮತ್ತು ಐಸಿಎಆರ್‌ ಮಹಾನಿರ್ದೇಶಕ ಡಾ. ಎಂ.ಎಲ್‌.ಜಾಟ್‌ ಮಾತನಾಡಿ, ಭಾರತದ ಕೃಷಿ ಸಂಶೋಧನೆಯು ಜಾಗತಿಕ ಹವಾಮಾನ-ಸ್ಮಾರ್ಟ್‌ ಕೃಷಿಯನ್ನು ಮುನ್ನಡೆಸುತ್ತಿದೆ. ಐಎಸಿ -2025 ರ ಫಲಿತಾಂಶಗಳು ಐಸಿಎಆರ್‌ ವಿಷನ್‌-2050 ಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.

ಈ ವೇದಿಕೆಯಿಂದ ಹೊರಹೊಮ್ಮುವ ಸಹಯೋಗದ ಉಪಕ್ರಮಗಳು ಜಿ-20, ಎಫ್‌ಎಒ, ಸಿಜಿಐಎಆರ್‌ ಮತ್ತು ದಕ್ಷಿಣ-ದಕ್ಷಿಣ ಸಹಕಾರದೊಂದಿಗಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತವೆ.

 

****


(Release ID: 2193773) Visitor Counter : 5