ಉಕ್ಕು ಸಚಿವಾಲಯ
azadi ka amrit mahotsav

ಭಾರತೀಯ ಉಕ್ಕು ಪ್ರಾಧಿಕಾರ ನಿಯಮಿತ (ಸೈಲ್) ಇದರ ರೂರ್ಕೆಲಾ ಉಕ್ಕು ಸ್ಥಾವರಕ್ಕೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಜುವೆಲ್ ಓರಾಮ್ ಅವರೊಂದಿಗೆ ಭೇಟಿ ನೀಡಿದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ 


ಅತ್ಯಾಧುನಿಕ "ಕ್ಯಾಸ್ಟರ್ #4 ಆಫ್ ಸ್ಟೀಲ್ ಮೆಲ್ಟಿಂಗ್ ಶಾಪ್ -2" ಅನ್ನು ಉದ್ಘಾಟಿಸಲಾಯಿತು 

प्रविष्टि तिथि: 18 NOV 2025 8:26PM by PIB Bengaluru

ಭಾರತ ಸರ್ಕಾರದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಸೈಲ್ ಇದರ ರೂರ್ಕೆಲಾ ಉಕ್ಕು ಸ್ಥಾವರಕ್ಕೆ (ಆರ್.ಎಸ್.ಪಿ.) 2 ದಿನಗಳ ಭೇಟಿಗಾಗಿ ರೂರ್ಕೆಲಾಕ್ಕೆ ನವೆಂಬರ್ 18, 2025 ರಂದು ಆಗಮಿಸಿದರು. ಭೇಟಿ ಸಂದರ್ಭದಲ್ಲಿ ಅವರೊಂದಿಗೆ ಶ್ರೀಮತಿ ಅನಿತಾ ಕುಮಾರಸ್ವಾಮಿ, ಸೈಲ್ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ (ಸಿ.ಎಂ.ಡಿ.) ಶ್ರೀ ಅಮರೇಂದು ಪ್ರಕಾಶ್ ಮತ್ತು ಕೇಂದ್ರ ಉಕ್ಕು ಸಚಿವಾಲಯದ ಇತರ ಅಧಿಕಾರಿಗಳು ಜೊತೆಗೆ ಇದ್ದರು.  ರೂರ್ಕೆಲಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಉಕ್ಕು ಸಚಿವರನ್ನು ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುವೆಲ್ ಓರಾಮ್, ಶಾಸಕ ಶ್ರೀ ದುರ್ಗಾ ಚರಣ್ ತಂತಿ, ರಘುನಾಥಪಲ್ಲಿ, ಡಿಐಸಿ, ಬೊಕಾರೊ ಉಕ್ಕು ಘಟಕದ ಹೆಚ್ಚುವರಿ ಉಸ್ತುವಾರಿ ಹೊಂದಿರುವ ಆರ್‌.ಎಸ್‌.ಪಿ.ಯ ಪ್ರಭಾರಿ ನಿರ್ದೇಶಕ (ಡಿಐಸಿ) ಶ್ರೀ ಅಲೋಕ್ ವರ್ಮಾ, ಸಿ.ಐ.ಎಸ್‌.ಎಫ್‌.ನ ಡಿಐಜಿ ಶ್ರೀ ರತನ್ ಕುಮಾರ್, ರೂರ್ಕೆಲಾ ಎಸ್‌.ಪಿ ಐಪಿಎಸ್ ಮತ್ತು ಒಡಿಶಾ ಸರ್ಕಾರದ ಮತ್ತು ಆರ್‌.ಎಸ್‌.ಪಿ.ಯ ಇತರ ಅನೇಕ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು. ವಿಮಾನ ನಿಲ್ದಾಣದಲ್ಲಿ ಸಿ.ಐ.ಎಸ್‌.ಎಫ್, ಆರ್‌.ಎಸ್‌.ಪಿ ಘಟಕದಿಂದ ಸಚಿವರಿಗೆ ಗೌರವ ರಕ್ಷೆ ಅಭಿನಂದನೆ ನೀಡಲಾಯಿತು.

ಕಾರ್ಯಕ್ರಮದ ಮೊದಲ ಭಾಗವಾಗಿ, ಸಚಿವರಾದ ಶ್ರೀ ಕುಮಾರಸ್ವಾಮಿ ಅವರು, ಸಚಿವರಾದ ಶ್ರೀ ಜುವೆಲ್ ಓರಾಮ್, ಶಾಸಕ ಶ್ರೀ ದುರ್ಗಾ ಚರಣ್ ತಂತಿ ಮತ್ತು ಇತರ ಗೌರವಾನ್ವಿತ ಗಣ್ಯರೊಂದಿಗೆ ಸ್ಥಾವರಕ್ಕೆ ತೆರಳಿದರು. ಸ್ಥಾವರ ಭೇಟಿಯು, ಘಟಕದ ಬಗ್ಗೆ ಕಲಿಕೆ ಮತ್ತು ಅಭಿವೃದ್ಧಿ ಕುರಿತು ಇಲಾಖೆಯ ಮಾದರಿ ಕೊಠಡಿಯಿಂದ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಇಡೀ ಸ್ಥಾವರದ ಕಾರ್ಯನಿರ್ವಹಣೆಯೊಂದಿಗೆ ಸಂಪೂರ್ಣ ಮೌಲ್ಯಮಾಪನ ಮಾಡಲಾಯಿತು.

A group of men looking at a model of a cityAI-generated content may be incorrect.

ಆ ನಂತರ ಸಚಿವರು "ಸ್ಟೀಲ್ ಮೆಲ್ಟಿಂಗ್ ಶಾಪ್ -2" ಗೆ ಭೇಟಿ ನೀಡಿದರು, ಅಲ್ಲಿ ಅವರು ಅತ್ಯಾಧುನಿಕ "ಕ್ಯಾಸ್ಟರ್ #4" ಅನ್ನು ಉದ್ಘಾಟಿಸಿದರು. ಸಚಿವರಾದ ಶ್ರೀ ಕುಮಾರಸ್ವಾಮಿ ಅವರು ಕ್ಯಾಸ್ಟರ್ -4ರಲ್ಲಿನ ಕಾರ್ಯಾಚರಣೆಗಳು ಮತ್ತು ಸ್ಲ್ಯಾಬ್ ಎರಕಹೊಯ್ದ ನಂತರದ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದರು ಮತ್ತು ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕಾಗಿ ಅವರು ಆರ್‌.ಎಸ್‌.ಪಿ. ತಂಡವನ್ನು ಅಭಿನಂದಿಸಿದರು. "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕ್ರಿಯಾತ್ಮಕ ನಾಯಕತ್ವದಲ್ಲಿ ಭಾರತ ಸರ್ಕಾರವು ರೂರ್ಕೆಲಾ ಉಕ್ಕಿನ ಸ್ಥಾವರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಲು ಬದ್ಧವಾಗಿದೆ" ಎಂದು ಸಚಿವರಾದ ಶ್ರೀ ಕುಮಾರಸ್ವಾಮಿ ಅವರು ಹೇಳಿದರು. ಸಚಿವರಾದ ಶ್ರೀ ಜುವೆಲ್ ಓರಾಮ್ ಅವರು ಆರ್‌.ಎಸ್‌.ಪಿ ತಂಡದ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಉಕ್ಕಿನ ಸ್ಥಾವರದ ಪ್ರಗತಿಗೆ ನಿರಂತರ ಬೆಂಬಲದ ಭರವಸೆ ನೀಡಿದರು, ಹಾಗೂ ಸ್ಥಾವರಕ್ಕೆ ಸಂಬಂಧಿಸಿದ ಅವರ ಹಳೆಯ ಪ್ರೀತಿಯ ನೆನಪುಗಳನ್ನು ನೆನಪಿಸಿಕೊಂಡರು. ಶ್ರೀ ಅಮರೇಂದು ಪ್ರಕಾಶ್ ಅವರು ಕೂಡ ಈ ಸಂದರ್ಭದಲ್ಲಿ ಮಾತನಾಡಿದರು ಮತ್ತು ಆರ್‌ಎಸ್‌ಪಿ ತಂಡದ ಸಮರ್ಪಣೆ ಮತ್ತು ಕಾರ್ಯಕ್ಷಮತೆಯನ್ನು ಅವರು ಶ್ಲಾಘಿಸಿದರು.

A group of men wearing white helmets and white hatsAI-generated content may be incorrect.

ಸಚಿವರು ಪೆಲೆಟ್ ಪ್ಲಾಂಟ್ ಮತ್ತು ಕೋಕ್ ಓವನ್ ಬ್ಯಾಟರಿ -7ರ ಯೋಜನಾ ಸ್ಥಳಗಳಿಗೆ ಭೇಟಿ ನೀಡಿದರು. ಸ್ಥಾವರ ಭೇಟಿ ಹಾಟ್ ಸ್ಟ್ರಿಪ್ ಮಿಲ್ -2ನ ಭೇಟಿಯ ಮೂಲಕ ಮುಕ್ತಾಯವಾಯಿತು. ಪ್ರತಿಯೊಂದು ಸ್ಥಳದಲ್ಲೂ ಅವರಿಗೆ ಘಟಕ, ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು ಹಾಗೂ ಮೌಲ್ಯಮಾಪನ ಮಾಡಲಾಯಿತು.

 

ಗಣ್ಯರ ಭೇಟಿಯ ಸಂದರ್ಭದಲ್ಲಿ ಶ್ರೀ ತರುಣ್ ಮಿಶ್ರಾ, ಇಡಿ (ಮಾನವ ಸಂಪನ್ಮೂಲ), ಶ್ರೀ ಬಿ ಕೆ ಗಿರಿ, ಇಡಿ (ಗಣಿ ಅಭಿವೃದ್ಧಿ-ಸಿಎಂಎಲ್ಒ), ಶ್ರೀ ಬಿಸ್ವರಂಜನ್ ಪಲೈ, ಇಡಿ (ಕೆಲಸ), ಶ್ರೀ ಅನಿಲ್ ಕುಮಾರ್, ಇಡಿ (ಎಂಎಂ), ಶ್ರೀ ಎಂ ಪಿ ಸಿಂಗ್, ಇಡಿ (ಗಣಿ-ಸಿ.ಎಂ.ಎಲ್.ಒ), ಶ್ರೀ ಸುದೀಪ್ ಪಾಲ್ ಚೌಧರಿ, ಇಡಿ (ಯೋಜನೆಗಳು) ಮುಂತಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

*****


(रिलीज़ आईडी: 2191455) आगंतुक पटल : 12
इस विज्ञप्ति को इन भाषाओं में पढ़ें: English , Urdu , हिन्दी , Odia