ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಅವರಿಂದ 44 ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಇಂದು ಎಂ.ಎಸ್.ಎಂ.ಇ, ಕೆ.ವಿ.ಐ.ಸಿ, ಸಿ.ಒ.ಐ.ಆರ್ ಮತ್ತು ಎನ್.ಎಸ್.ಎಸ್.ಹೆಚ್ ಪೆವಿಲಿಯನ್ ಗಳ ಉದ್ಘಾಟನೆ


292 ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಮಳಿಗೆಗಳು; 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಶ್ವಕರ್ಮರಿಂದ 'ಏಕ ಭಾರತ ಶ್ರೇಷ್ಠ ಭಾರತ' ಚೈತನ್ಯದ ಪ್ರದರ್ಶನ

Posted On: 17 NOV 2025 6:18PM by PIB Bengaluru

ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 44ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ (ಐ.ಐ.ಟಿ.ಎಫ್) ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ.ಎಸ್.ಎಂ.ಇ) ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಅವರು ಸಭಾಂಗಣ ಸಂಖ್ಯೆ 6ರಲ್ಲಿ ಎಂ.ಎಸ್.ಎಂ.ಇ, ಕೆ.ವಿ.ಐ.ಸಿ ಮತ್ತು ಸಿ.ಒ.ಐ.ಆರ್ ಪೆವಿಲಿಯನ್ ಗಳು ಮತ್ತು ಸಭಾಂಗಣ ಸಂಖ್ಯೆ 5ರಲ್ಲಿ ಎನ್.ಎಸ್.ಎಸ್.ಹೆಚ್ ಪೆವಿಲಿಯನ್ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆ.ವಿ.ಐ.ಸಿ) ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಉಪಸ್ಥಿತರಿದ್ದರು.

ಎಂ.ಎಸ್.ಎಂ.ಇ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್.ಸಿ.ಎಲ್. ದಾಸ್ ಪ್ರತಿನಿಧಿಗಳ ಜೊತೆಯಾದರು. ಎಂ.ಎಸ್.ಎಂ.ಇ ಸಚಿವಾಲಯ, ಎಂ.ಎಸ್.ಎಂ.ಇ ಅಭಿವೃದ್ಧಿ ಆಯುಕ್ತರ ಕಚೇರಿ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆ.ವಿ.ಐ.ಸಿ), ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ (ಎನ್.ಎಸ್.ಐ.ಸಿ) ಮತ್ತು COIR (ತೆಂಗಿನ ನಾರಿನ) ಮಂಡಳಿಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನೆ ಬಳಿಕ, ಕೇಂದ್ರ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಮತ್ತು ಎಂ.ಎಸ್.ಎಂ.ಇ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಮಂಟಪಗಳಲ್ಲಿನ ಮಳಿಗೆಗಳಿಗೆ ಭೇಟಿ ನೀಡಿದರು ಮತ್ತು ವಿವಿಧ ಸಾಂಪ್ರದಾಯಿಕ ಉತ್ಪಾದನಾ ಪ್ರಕ್ರಿಯೆಗಳ ನೇರ ಪ್ರಾತ್ಯಕ್ಷಿಕೆ ವೀಕ್ಷಿಸುತ್ತಾ ಭಾಗವಹಿಸುವವರು ಮತ್ತು ಪ್ರದರ್ಶಕರನ್ನು ಹುರಿದುಂಬಿಸಿದರು.

ಪೆವಿಲಿಯನ್ ನ ಮುಖ್ಯಾಂಶಗಳು

"ರೋಮಾಂಚಕ ಎಂ.ಎಸ್.ಎಂ.ಇಗಳು, ವಿಕಸಿತ ಭಾರತ" ಎಂಬ ಧ್ಯೇಯದ ಎಂ.ಎಸ್.ಎಂ.ಇ ಪೆವಿಲಿಯನ್, ಆತ್ಮನಿರ್ಭರ ಭಾರತದ ಮುನ್ನೋಟಕ್ಕೆ ಕೊಡುಗೆ ನೀಡುವ ಮೂಲಕ ಒಳಗೊಂಡ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಎಂ.ಎಸ್.ಎಂ.ಇಗಳ ಪಾತ್ರವನ್ನು ಸಾರಿದೆ.

29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು (ಎಂ.ಎಸ್‌.ಇಗಳು) ಹಾಗೂ ವಿಶ್ವಕರ್ಮರಿಗೆ ಒಟ್ಟು 292 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದ್ದು, ಇದು ಏಕ ಭಾರತ ಶ್ರೇಷ್ಠ ಭಾರತದ ಚೈತನ್ಯವನ್ನು ಈ ರೀತಿಯಾಗಿ ಪ್ರದರ್ಶಿಸಿದೆ:
•    ಮಹಿಳಾ ಉದ್ಯಮಿಗಳಿಗೆ ಶೇ. 67 ಕ್ಕಿಂತ ಹೆಚ್ಚು ಮಳಿಗೆಗಳನ್ನು ನೀಡಲಾಗಿದೆ.
•    ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಉದ್ಯಮಗಳಿಗೆ ಶೇ. 34% ಕ್ಕಿಂತ ಹೆಚ್ಚು ಮಳಿಗೆಗಳನ್ನು ನೀಡಲಾಗಿದೆ.
•    ಅಂಗವಿಕಲ ಉದ್ಯಮಿಗಳಿಗೆ (ಪಿ.ಡಬ್ಲ್ಯೂ.ಡಿ) 15 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.
•    43 ಮಳಿಗೆಗಳು ಭೌಗೋಳಿಕ ಗುರುತಿನ (GI) ಉತ್ಪನ್ನಗಳನ್ನು ಒಳಗೊಂಡಿವೆ.
•    ODOP (ಒಂದು ಜಿಲ್ಲೆ ಒಂದು ಉತ್ಪನ್ನ) ವಸ್ತುಗಳಿಗೆ 15 ಮಳಿಗೆಗಳನ್ನು ಮೀಸಲಿಡಲಾಗಿದೆ.
•    ಸೂಕ್ಷ್ಮ ಉದ್ಯಮಗಳನ್ನು ಪ್ರತಿನಿಧಿಸುವ 288 (98%) ಮೊದಲ ಬಾರಿಗೆ ಭಾಗವಹಿಸಿರುವವರು ಮತ್ತು ಪ್ರದರ್ಶಕರು ಭಾಗಿಯಾಗಿದ್ದಾರೆ. 
•    ವಿಶ್ವಕರ್ಮರಿಗೆ ಶೇ. 25% ಕ್ಕಿಂತ ಹೆಚ್ಚು ಮಳಿಗೆಗಳನ್ನು ನಿಗದಿಪಡಿಸಲಾಗಿದೆ.

ಪ್ರದರ್ಶನದಲ್ಲಿರುವ ಉತ್ಪನ್ನಗಳು ಜವಳಿ, ಕೈಮಗ್ಗ, ಕರಕುಶಲ ವಸ್ತುಗಳು, ಹಸಿರು ಮತ್ತು ಪರಿಸರ ಸ್ನೇಹಿ ಉತ್ಪನ್ನಗಳು, ವಿಶ್ವಕರ್ಮರು ತಯಾರಿಸಿದ ಉತ್ಪನ್ನಗಳು, ಗಾಜು ಮತ್ತು ಸೆರಾಮಿಕ್ ವಸ್ತುಗಳು, ಚರ್ಮದ ಉತ್ಪನ್ನಗಳು, ಸೌಂದರ್ಯ ಉತ್ಪನ್ನಗಳು, ಲೋಹದ ಕರಕುಶಲ ವಸ್ತುಗಳು, ಆಟಗಳು ಮತ್ತು ಆಟಿಕೆಗಳು, ಒಣ ಹಣ್ಣುಗಳು, ಆಹಾರ ಉತ್ಪನ್ನಗಳು, ತೆಂಗಿನ ನಾರಿನ ಉತ್ಪನ್ನಗಳು ಹೀಗೆ ದೇಶಾದ್ಯಂತದ ಹಲವಾರು ವಿಶಿಷ್ಟ ಉತ್ಪನ್ನಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಂಡಿವೆ. 

ವಿವಿಧ ವಿಶಿಷ್ಟ ಕರಕುಶಲ ವಸ್ತುಗಳು ಮತ್ತು ಕೈಯಿಂದ ತಯಾರಿಸಿದ ಆಟಿಕೆಗಳು, ಆಭರಣಗಳು ಇತ್ಯಾದಿಗಳನ್ನು ಉತ್ಪಾದಿಸುವಲ್ಲಿ ತೆಂಗಿನ ನಾರಿನ ಕಾರ್ಮಿಕರ ಕೌಶಲ್ಯ ಮತ್ತು ಕರಕುಶಲತೆಯನ್ನು ದೇಶದ ವಿವಿಧ ಭಾಗಗಳ 31 ಪ್ರದರ್ಶಕರು ಪ್ರದರ್ಶಿಸಿದ್ದಾರೆ ಎಂದು ಕಾಯಿರ್ ಬೋರ್ಡ್ ಪೆವಿಲಿಯನ್ ಗಮನಿಸಿದೆ. 

ಮಂಟಪದಲ್ಲಿ ಪ್ರದರ್ಶಿಸಲಾದ ವಿವಿಧ ಶ್ರೇಣಿಯ ಉತ್ಪನ್ನಗಳ ಪೈಕಿ ಕೈಮಗ್ಗದ ನಾರಿನ ಹಾಸು (ಕಾಯಿರ್ ಮ್ಯಾಟ್), ಮ್ಯಾಟಿಂಗ್ಸ್, ರಬ್ಬರಿನ ಹಾಸಿಗೆ, ಕರಕುಶಲ ನಾರಿನ ಉತ್ಪನ್ನಗಳು, ಕಾರ್ಪೆಟ್ ಗಳು, ಕಾಯಿರ್ ಪಿತ್ (ಕೊಕೋ ಪೀಟ್), ನಾರಿನ ಜೈವಿಕ ಜವಳಿ (ಕಾಯಿರ್ ಜಿಯೋ-ಟೆಕ್ಸ್ಟೈಲ್) ಗಳಂತಹ ಸಾಂಪ್ರದಾಯಿಕ ನಾರಿನ ಉತ್ಪನ್ನಗಳು ಸೇರಿವೆ. ಈ ಮೇಳವು ತೆಂಗಿನ ನಾರಿನ ವಲಯದಲ್ಲಿ ತೊಡಗಿರುವ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ವ್ಯಾಪಕ ಶ್ರೇಣಿಯ ಸಂಭಾವ್ಯ ಗ್ರಾಹಕರಿಗೆ ಪ್ರದರ್ಶಿಸಲು, ಉದ್ಯಮದಿಂದ ಉದ್ಯಮ (ಬಿ2ಬಿ) ಮತ್ತು ಉದ್ಯಮದಿಂದ ಗ್ರಾಹಕ (ಬಿ2ಸಿ) ಸಹಯೋಗಗಳನ್ನು ಪೋಷಿಸಲು ಹಾಗೂ ಬೆಳವಣಿಗೆ ಮತ್ತು ಸ್ವಾವಲಂಬನೆಗೆ ಹೊಸ ಮಾರ್ಗಗಳನ್ನು ಸೃಷ್ಟಿಸಲು ಅವಕಾಶ ನೀಡಿದೆ.

'ವಿಕಸಿತ ಭಾರತ @ 2047' ಧ್ಯೇಯವನ್ನು ಆಧರಿಸಿರುವ ಖಾದಿ ಇಂಡಿಯಾ ಪೆವಿಲಿಯನ್ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 63 ಖಾದಿ ಸಂಸ್ಥೆಗಳು, ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಕಾರ್ಯಕ್ರಮ (PMEGP) ಅಡಿಯಲ್ಲಿನ 81 ಘಟಕಗಳು ಹಾಗೂ ಸಾಂಪ್ರದಾಯಿಕ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ ನಿಧಿಯ ಯೋಜನೆಯ (SFURTI) ಅಡಿಯಲ್ಲಿನ 6 ಘಟಕಗಳನ್ನು ಒಳಗೊಂಡಿದ್ದು 150 ಪ್ರದರ್ಶಕರ ಖಾದಿ ಮತ್ತು ಗುಡಿ ಕೈಗಾರಿಕೆಗಳ ಉತ್ಪನ್ನಗಳನ್ನು ಪ್ರದರ್ಶಿಸಿದೆ. ಖಾದಿ ಇಂಡಿಯಾ ಪೆವಿಲಿಯನ್ ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) / ಇತರೆ ಹಿಂದುಳಿದ ಸಮುದಾಯ (OBC)ಗಳ 101 ಪ್ರತಿನಿಧಿಗಳು ಮತ್ತು 47 ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡಿದ್ದು, ಅವರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಾ  ಏಕ ಭಾರತ ಶ್ರೇಷ್ಠ ಭಾರತದ ಚೈತನ್ಯ ಪ್ರದರ್ಶಿಸಿದ್ದಾರೆ.

ದೇಶದ ದಕ್ಷಿಣ ರಾಜ್ಯಗಳ ರೇಷ್ಮೆ ಸೀರೆಗಳು, ಪಶ್ಚಿಮ ಬಂಗಾಳದ ಮಸ್ಲಿನ್, ಬಿಹಾರದ ಮಧುಬನಿ ಉತ್ಪನ್ನಗಳು, ಪಂಜಾಬ್ನ ಫುಲ್ಕಾರಿ, ಆಂಧ್ರಪ್ರದೇಶದ ಕಲಂಕಾರಿ, ಉತ್ತರಾಖಂಡದ ಗಿಡಮೂಲಿಕೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಮತ್ತು ಲೇಹ್ನ ಉಣ್ಣೆಯ ಉತ್ಪನ್ನಗಳು ಸೇರಿದಂತೆ ಉತ್ತಮ ಗುಣಮಟ್ಟದ ಖಾದಿ ಬಟ್ಟೆಗಳು ಮಂಟಪದಲ್ಲಿ ಮಾರಾಟಕ್ಕೆ ಲಭ್ಯವಿದೆ.

ಸಭಾಂಗಣ ಸಂಖ್ಯೆ 5 ರಲ್ಲಿನ ರಾಷ್ಟ್ರೀಯ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡ (SC-ST) ಪೆವಿಲಿಯನ್ ನಲ್ಲಿ 35 ಮಳಿಗೆಗಳಲ್ಲಿ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡಗಳ ಉದ್ಯಮಿಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿ, ಅಸ್ಸಾಂ, ಕರ್ನಾಟಕ, ಪಂಜಾಬ್, ಜಾರ್ಖಂಡ್, ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಸೇರಿದಂತೆ 10 ರಾಜ್ಯಗಳ ಪ್ರದರ್ಶಕರು ಪೆವಿಲಿಯನ್ ನಲ್ಲಿ ಭಾಗಿಯಾಗಿದ್ದಾರೆ. ಪಾದರಕ್ಷೆಗಳು, ಕ್ರೀಡಾ ಸಾಮಗ್ರಿಗಳು, ಕರಕುಶಲ ವಸ್ತುಗಳು, ಬಿದಿರಿನ ಉತ್ಪನ್ನಗಳು, ಆಹಾರ ಉತ್ಪನ್ನಗಳು, ಯಂತ್ರೋಪಕರಣಗಳ ಘಟಕಗಳು ಮತ್ತು ಚರ್ಮದ ಉತ್ಪನ್ನಗಳನ್ನು ಪೆವಿಲಿಯನ್ ನಲ್ಲಿ ಮಾರಾಟಕ್ಕೆ ಪ್ರದರ್ಶಿಸಲಾಗಿದೆ.

 

*****


(Release ID: 2191042) Visitor Counter : 7