ಪ್ರಧಾನ ಮಂತ್ರಿಯವರ ಕಛೇರಿ
ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ
Posted On:
13 NOV 2025 4:30PM by PIB Bengaluru
ಇತ್ತೀಚಿನ ಡಬ್ಲ್ಯು.ಹೆಚ್.ಒ ಜಾಗತಿಕ ಕ್ಷಯರೋಗ ವರದಿ 2025ರಲ್ಲಿ ಪ್ರತಿಫಲಿಸಿದಂತೆ ಕ್ಷಯರೋಗವನ್ನು ಎದುರಿಸುವಲ್ಲಿ ಭಾರತದ ಮಹತ್ವದ ಪ್ರಗತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಭಾರತವು 2015 ರಿಂದ ಕ್ಷಯರೋಗ ಪ್ರಕರಣಗಳಲ್ಲಿ ಶ್ಲಾಘನೀಯ ಇಳಿಕೆಯನ್ನು ದಾಖಲಿಸಿದೆ, ಇದು ಜಾಗತಿಕ ಕುಸಿತದ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಇದು ವಿಶ್ವದಲ್ಲಿ ಕಂಡುಬರುವ ತೀವ್ರ ಕುಸಿತಗಳಲ್ಲಿ ಒಂದಾಗಿದೆ.
ಈ ಸಾಧನೆಯು ದೇಶಾದ್ಯಂತ ಚಿಕಿತ್ಸಾ ವ್ಯಾಪ್ತಿಯ ವಿಸ್ತರಣೆ, 'ಕಾಣೆಯಾದ ಪ್ರಕರಣಗಳ' ಸಂಖ್ಯೆಯಲ್ಲಿ ಇಳಿಕೆ ಮತ್ತು ಚಿಕಿತ್ಸಾ ಯಶಸ್ಸಿನ ದರಗಳಲ್ಲಿ ನಿರಂತರ ಏರಿಕೆಯ ಅಷ್ಟೇ ಪ್ರೋತ್ಸಾಹದಾಯಕ ಪ್ರವೃತ್ತಿಗಳೊಂದಿಗೆ ಜತೆಗೂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ:
"ಕ್ಷಯರೋಗದ ವಿರುದ್ಧದ ಭಾರತದ ಹೋರಾಟವು ಗಮನಾರ್ಹ ವೇಗವನ್ನು ಪಡೆಯುತ್ತಿದೆ.
ಇತ್ತೀಚಿನ ಡಬ್ಲ್ಯು.ಹೆಚ್.ಒ ಜಾಗತಿಕ ಕ್ಷಯರೋಗ ವರದಿ 2025 ಭಾರತವು 2015 ರಿಂದ ಕ್ಷಯರೋಗ ಪ್ರಕರಣಗಳಲ್ಲಿ ಶ್ಲಾಘನೀಯ ಇಳಿಕೆಯನ್ನು ದಾಖಲಿಸಿದೆ ಮತ್ತು ಇದು ಜಾಗತಿಕ ಕುಸಿತದ ದರಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ಬಿಂಬಿಸುತ್ತದೆ. ಇದು ವಿಶ್ವದಲ್ಲಿ ಕಂಡುಬರುವ ತೀವ್ರ ಕುಸಿತಗಳಲ್ಲಿ ಒಂದಾಗಿದೆ. ಚಿಕಿತ್ಸಾ ವ್ಯಾಪ್ತಿಯ ವಿಸ್ತರಣೆ, 'ಕಾಣೆಯಾದ ಪ್ರಕರಣಗಳ' ಕುಸಿತ ಮತ್ತು ಚಿಕಿತ್ಸೆಯ ಯಶಸ್ಸಿನಲ್ಲಿ ನಿರಂತರ ಏರಿಕೆಯು ಅಷ್ಟೇ ಹೃದಯಸ್ಪರ್ಶಿಯಾಗಿದೆ. ಈ ಯಶಸ್ಸನ್ನು ಸಾಧಿಸಲು ಶ್ರಮಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಆರೋಗ್ಯಕರ ಮತ್ತು ಸದೃಢ ಭಾರತವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ!
https://www.pib.gov.in/PressReleasePage.aspx?PRID=2189415
@WHO”
****
(Release ID: 2190259)
Visitor Counter : 7