ಉಕ್ಕು ಸಚಿವಾಲಯ
ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವರಿಂದ ವಿಶೇಷ ಉಕ್ಕಿಗಾಗಿ ಮೂರನೇ ಸುತ್ತಿನ ಪಿಎಲ್ ಐ ಯೋಜನೆಗೆ ಚಾಲನೆ (ಪಿ.ಎಲ್.ಐ ಯೋಜನೆ 1.2)
Posted On:
04 NOV 2025 2:37PM by PIB Bengaluru
ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ವಿಶೇಷ ಉಕ್ಕಿಗಾಗಿ ಮೂರನೇ ಸುತ್ತಿನ ಪಿ.ಎಲ್.ಐ ಯೋಜನೆಗೆ ಚಾಲನೆ ನೀಡಿದರು. ಉಕ್ಕು ಸಚಿವಾಲಯದ ಪಿ.ಎಲ್.ಐ ಯೋಜನೆಯು ಈವರೆಗೆ 43,874 ಕೋಟಿ ರೂಪಾಯಿ ಹೂಡಿಕೆ, 30,760 ಜನರಿಗೆ ನೇರ ಉದ್ಯೋಗ ಮತ್ತು ಯೋಜನೆಯಲ್ಲಿ ಗುರುತಿಸಲಾದ 14.3 ಮಿಲಿಯನ್ ಟನ್ ’ಸ್ಪೆಷಾಲಿಟಿ ಸ್ಟೀಲ್’ ಉತ್ಪಾದನೆಯ ಅಂದಾಜು ಬದ್ಧತೆಯನ್ನು ಆಕರ್ಷಿಸಿದೆ. 2025ರ ಸೆಪ್ಟೆಂಬರ್ ವೇಳೆಗೆ ಮೊದಲ ಎರಡು ಸುತ್ತುಗಳಲ್ಲಿ ಭಾಗವಹಿಸಿರುವ ಕಂಪನಿಗಳು 22,973 ಕೋಟಿ ರೂಪಾಯಿ ಹೂಡಿಕೆ ಮಾಡಿ 13,284 ಉದ್ಯೋಗಗಳನ್ನು ಸೃಷ್ಟಿಸಿವೆ.

2021ರ ಜುಲೈ ನಲ್ಲಿ ಸಚಿವ ಸಂಪುಟ ಸಭೆ ಅನುಮೋದಿಸಿದ ವಿಶೇಷ ಉಕ್ಕಿಗಾಗಿ ಪಿಎಲ್ಐ ಯೋಜನೆಯು, ಭಾರತವನ್ನು ಉಕ್ಕು ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವ ಆತ್ಮನಿರ್ಭರ ಭಾರತ ದೂರದೃಷ್ಟಿಯಡಿಯಲ್ಲಿ ಕೈಗೊಂಡ ಒಂದು ಪ್ರಮುಖ ಉಪಕ್ರಮವಾಗಿದೆ. ಮೂರನೇ ಸುತ್ತಿನ (ಪಿಎಲ್ಐ 1.2) ಸೂಪರ್ ಮಿಶ್ರಲೋಹಗಳು, ಸಿಆರ್ ಜಿಒ, ಸ್ಟೇನ್‌ಲೆಸ್ ಸ್ಟೀಲ್ ನ ಉದ್ದ ಮತ್ತು ಫ್ಲಾಟ್ ಉತ್ಪನ್ನಗಳು, ಟೈಟಾನಿಯಂ ಮಿಶ್ರಲೋಹಗಳು ಮತ್ತು ಲೇಪಿತ ಉಕ್ಕುಗಳಂತಹ ಉದಯೋನ್ಮುಖ ಮತ್ತು ಮುಂದುವರಿದ ಉಕ್ಕಿನ ಉತ್ಪನ್ನಗಳಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಗುರಿ ಹೊಂದಿದೆ. ಇದು ಗಮನಾರ್ಹ ಉದ್ಯೋಗವನ್ನು ಸೃಷ್ಟಿಸುತ್ತದೆ, ಉನ್ನತ-ಮಟ್ಟದ ಉಕ್ಕಿನ ಸಾಮರ್ಥ್ಯವನ್ನು ವಿಸ್ತರಿಸುತ್ತದೆ ಮತ್ತು ವಿಶೇಷ ಉಕ್ಕುಗಳಿಗಾಗಿ ಜಾಗತಿಕ ಮೌಲ್ಯ ಸರಣಿಯಲ್ಲಿ ಭಾರತವನ್ನು ಆದ್ಯತೆಯ ಪೂರೈಕೆದಾರನನ್ನಾಗಿ ಮಾಡುತ್ತದೆಂದು ನಿರೀಕ್ಷಿಸಲಾಗಿದೆ.

ಮೂರನೇ ಸುತ್ತಿನ ಪ್ರಮುಖ ಮುಖ್ಯಾಂಶಗಳು (ಪಿ.ಎಲ್.ಐ 1.2):
- ಅರ್ಜಿ ಸಲ್ಲಿಕೆಗೆ ಅವಧಿ: ಬಿಡುಗಡೆ ದಿನಾಂಕದಿಂದ 30 ದಿನಗಳ ಅವಧಿಗೆ ಆನ್‌ಲೈನ್ ಪೋರ್ಟಲ್ https://plimos.mecon.co.in ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.
- ಅರ್ಹತೆ: ಅಧಿಸೂಚಿತ ಉತ್ಪನ್ನಗಳ ಅಂತ್ಯದಿಂದ ಕೊನೆಯವರೆಗೆ ತಯಾರಿಕೆಯಲ್ಲಿ ತೊಡಗಿರುವ ಭಾರತದಲ್ಲಿ ನೋಂದಾಯಿಸಲಾದ ಕಂಪನಿಗಳು ಅರ್ಜಿ ಸಲ್ಲಿಸಲು ಅರ್ಹವಾಗಿವೆ.
- ಉತ್ಪನ್ನ ವ್ಯಾಪ್ತಿ: ಪಿ.ಎಲ್.ಐ ಯೋಜನೆಯ ಮೂರನೇ ಸುತ್ತು ಕಾರ್ಯತಂತ್ರದ ಉಕ್ಕಿನ ಶ್ರೇಣಿಗಳು, ವಾಣಿಜ್ಯ ಶ್ರೇಣಿಗಳು (ವರ್ಗಗಳು 1 ಮತ್ತು 2), ಮತ್ತು ಲೇಪಿತ/ವೈರ್ ಉತ್ಪನ್ನಗಳು ಸೇರಿದಂತೆ ಐದು ವಿಶಾಲ ಗುರಿ ವಿಭಾಗಗಳಲ್ಲಿ 22 ಉತ್ಪನ್ನ ಉಪ-ವರ್ಗಗಳನ್ನು ಒಳಗೊಂಡಿದೆ.
- ಪ್ರೋತ್ಸಾಹಕ ದರಗಳು: ಉತ್ಪನ್ನ ಉಪ-ವರ್ಗ ಮತ್ತು ಉತ್ಪಾದನೆಯ ವರ್ಷವನ್ನು ಅವಲಂಬಿಸಿ ಪ್ರೋತ್ಸಾಹಕಗಳು ಹೆಚ್ಚುತ್ತಿರುವ ಮಾರಾಟದ ಶೇ.4 ರಿಂದ ಶೇ.15ರವರೆಗೆ ಇರುತ್ತವೆ.
- ಪ್ರೋತ್ಸಾಹಕ ಅವಧಿ: 2025–26ನೇ ಹಣಕಾಸು ವರ್ಷದಿಂದ ಆರಂಭವಾಗುವ ಗರಿಷ್ಠ ಐದು ವರ್ಷಗಳವರೆಗೆ ಪ್ರಯೋಜನಗಳು ಲಭ್ಯವಿರುತ್ತವೆ, ಪ್ರೋತ್ಸಾಹಕ ವಿತರಣೆಯು 2026–27ನೇ ಹಣಕಾಸು ವರ್ಷದಿಂದ ಆರಂಭವಾಗಲಿದೆ.
- ಇತರ ಬದಲಾವಣೆಗಳು: ಪ್ರಸ್ತುತ ಪ್ರವೃತ್ತಿಗಳನ್ನು ಪ್ರತಿಬಿಂಬಿಸಲು ಬೆಲೆಗಳ ಮೂಲ ವರ್ಷವನ್ನು 2019-20 ರಿಂದ 2024-25 ಕ್ಕೆ ಪರಿಷ್ಕರಿಸಲಾಗಿದೆ.
*****
(Release ID: 2186295)
Visitor Counter : 10