ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಭಗವಾನ್ ಬಿರ್ಸಾ ಮುಂಡಾ ಅವರ 150 ವರ್ಷದ ಜನ್ಮದಿನದ ಸಂಭ್ರಮಾಚರಣೆ ಅಂಗವಾಗಿ 2025ರ ನವೆಂಬರ್ 1 ರಿಂದ ರಾಷ್ಟ್ರವ್ಯಾಪಿ “ಜನ್ ಜಾತೀಯಾ ಗೌರವ ವರ್ಷ ಪಾಕ್ಷಿಕ” ಪ್ರಾರಂಭ
ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಬುಡಕಟ್ಟು ಪರಂಪರೆ ಮತ್ತು ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದಲ್ಲಿ ದಶಕದ ಸಬಲೀಕರಣ ಪುರಸ್ಕರಿಸುವ ಎರಡು ವಾರಗಳ ಕಾರ್ಯಕ್ರಮ
Posted On:
31 OCT 2025 5:28PM by PIB Bengaluru
ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2025ರ ನವೆಂಬರ್ 1 ರಿಂದ 15 ರವರೆಗೆ "ಜಂಜಾತಿಯ ಗೌರವ ವರ್ಷ ಪಾಕ್ಷಿಕ" ವನ್ನು ಆಯೋಜಿಸಿದ್ದು ಇದು 2025 ರ ನವೆಂಬರ್ 15 ರಂದು ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನದ ಅಂಗವಾಗಿ ನಡೆಯುವ "ಜಂಜಾತೀಯ ಗೌರವ ವರ್ಷ" ದ ಭವ್ಯ ಸಮಾರೋಪವಾಗಿದೆ.
ಬುಡಕಟ್ಟು ಸಂಶೋಧನಾ ಸಂಸ್ಥೆಗಳು (TRI ಗಳು), ಏಕಲವ್ಯ ಮಾದರಿ ವಸತಿ ಶಾಲೆಗಳು (EMRS ಗಳು), TRIFED ಮತ್ತು NSTFDC ಗಳ ಸಂಘಟಿತ ಪ್ರಯತ್ನಗಳ ಮೂಲಕ ದೇಶಾದ್ಯಂತ ಎರಡು ವಾರ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಾರತದ ಬುಡಕಟ್ಟು ಸಮುದಾಯಗಳು ಮತ್ತು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಕೊಡುಗೆಗಳ ಬಗ್ಗೆ ಕಾರ್ಯಕ್ರಮ ತಿಳಿಸಿಕೊಡಲಿದೆ.
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಕಳೆದ ದಶಕವು ಬುಡಕಟ್ಟು ಸಬಲೀಕರಣ ಮತ್ತು ಕಲ್ಯಾಣದಲ್ಲಿ ಐತಿಹಾಸಿಕ ಪ್ರಗತಿಯನ್ನು ಕಂಡಿದೆ. ಜಂಜಾತೀಯ ಗೌರವ ವರ್ಷ ಪಾಕ್ಷಿಕವು ಪ್ರಮುಖ ಉಪಕ್ರಮಗಳಾದ ಪ್ರಧಾನಮಂತ್ರಿ ಜನ್ ಮನ್, ಆದಿ ಕರ್ಮಯೋಗಿ ಅಭಿಯಾನ, ರಾಷ್ಟ್ರೀಯ ಕುಡಗೋಲು ಕೋಶ ನಿರ್ಮೂಲನಾ ಮಿಷನ್, ಧರ್ತಿ ಆಭಾ ಜಂಜಾತೀಯ ಗ್ರಾಮ ಉತ್ಕರ್ಷ ಅಭಿಯಾನ (DAJGUA) ಹಾಗೂ ವಿವಿಧ ಜೀವನೋಪಾಯ ಮತ್ತು ಉದ್ಯಮಶೀಲತಾ ಕಾರ್ಯಕ್ರಮಗಳ ಅಡಿಯಲ್ಲಿನ ಸಾಧನೆಗಳು ಮತ್ತು ಪ್ರಗತಿಯನ್ನು ಆಚರಿಸುವ ಗುರಿಯನ್ನು ಹೊಂದಿದೆ.
ಜಂಜಾತೀಯ ಗೌರವ ವರ್ಷ ಪಾಕ್ಷಿಕದ ಭಾಗವಾಗಿ 2025ರ ಜಂಜಾಟಿಯ ಗೌರವ ದಿನಾಚರಣೆಗೆ ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ರೋಮಾಂಚಕ ಸರಣಿ ಕಾರ್ಯಕ್ರಮಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯೋಜಿಸುತ್ತಿವೆ. ಮಣಿಪುರದಲ್ಲಿನ ಟ್ರೈಬಲ್ ಫ್ರೇಮ್ಸ್ ಚಲನಚಿತ್ರೋತ್ಸವ ಮತ್ತು ಛತ್ತೀಸ್ ಗಢದ ಶಾಹಿದ್ ವೀರ್ ನಾರಾಯಣ್ ಸಿಂಗ್ ಜಾನಪದ ಕಲಾ ಉತ್ಸವದಿಂದ ಹಿಡಿದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬುಡಕಟ್ಟು ಮೇಳಗಳು, ಗುಜರಾತ್ ನ ಜಂಜಾತೀಯ ಗೌರವ ಯಾತ್ರೆ, ಉತ್ತರಾಖಂಡದ ಆದಿ ಖೇಲ್ ದಿವಸ್ ಮತ್ತು ಗೋವಾದ ಮಹಾಸಮ್ಮೇಳನಗಳವರೆಗೆ – ವೈವಿಧ್ಯಮಯ ಕಾರ್ಯಕ್ರಮಗಳು ಭಗವಾನ್ ಬಿರ್ಸಾ ಮುಂಡಾ ಅವರ ಕೊಡುಗೆಯನ್ನು ಗೌರವಿಸಲು ರಾಷ್ಟ್ರವನ್ನು ಒಗ್ಗೂಡಿಸುತ್ತಾ ಜಂಜಾತೀಯ ಗೌರವ ವರ್ಷದ ಉತ್ಸಾಹವನ್ನು ಸಾಕಾರಗೊಳಿಸಲಿವೆ.
ಸಾಂಸ್ಕೃತಿಕ ಉತ್ಸವಗಳು, ಪ್ರದರ್ಶನಗಳು, ಯುವಜನರ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿ ಅಭಿಯಾನಗಳು ಪಾಕ್ಷಿಕದಲ್ಲಿ ಏರ್ಪಾಡಾಗಿದ್ದು, 2025ರ ನವೆಂಬರ್ 15 ರಂದು ಜಂಜಾತೀಯ ಗೌರವ ದಿನಾಚರಣೆಯಂದು ಸಂಪನ್ನಗೊಳ್ಳಲಿದೆ. ಭಾರತದ ಬುಡಕಟ್ಟು ಸ್ವಾತಂತ್ರ್ಯ ಚಳವಳಿಯನ್ನು ಚುರುಕುಗೊಳಿಸಿದ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುವ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ ಶೌರ್ಯ ಮತ್ತು ತ್ಯಾಗಕ್ಕೆ ಗೌರವ ಸೂಚಕವಾದ ಆಚರಣೆಗಳು ದೇಶಾದ್ಯಂತ ನಡೆಯಲಿವೆ.
ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ ಶೌರ್ಯ ಮತ್ತು ತ್ಯಾಗವು ಭಾರತದ ಬುಡಕಟ್ಟು ಸ್ವಾತಂತ್ರ್ಯ ಚಳವಳಿಗೆ ಕಿಚ್ಚು ಹಚ್ಚಿತ್ತು ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದ್ದು, ದೇಶಾದ್ಯಂತ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ನಡೆಯಲಿದ್ದು, ಜಂಜಾತೀಯ ಗೌರವ ದಿನದ ಅಂಗವಾಗಿ 2025ರ ನವೆಂಬರ್ 15 ರಂದು ಸಂಪನ್ನಗೊಳ್ಳಲಿವೆ.
ಬುಡಕಟ್ಟು ಪರಂಪರೆಯ ವೀರರಿಗೆ ದೇಶವು ಸಾಮೂಹಿಕವಾಗಿ ಗೌರವ ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ಹಾಗೂ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯೆಡೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುವ ಈ ಕಾರ್ಯಕ್ರಮದಲ್ಲಿ "ಭಗವಾನ್ ಬಿರ್ಸಾ ಮುಂಡಾ ಅವರ 150 ವರ್ಷಗಳನ್ನು ಪುರಸ್ಕರಿಸುವುದು - ಬುಡಕಟ್ಟು ಸಬಲೀಕರಣದ 11 ವರ್ಷಗಳನ್ನು ಆಚರಿಸುವುದು" ಎಂಬ ಚೈತನ್ಯವನ್ನು ಗೌರವಿಸುವಂತೆ ಎಲ್ಲಾ ನಾಗರಿಕರಿಗೆ ಸಚಿವಾಲಯ ಕರೆ ನೀಡಿದೆ.
*****
(Release ID: 2184987)
Visitor Counter : 3