ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ‘ದೂರಸಂಪರ್ಕ ಸುಂಕ (ಎಪ್ಪತ್ತೆರಡನೇ ತಿದ್ದುಪಡಿ) ಆದೇಶ, 2025’ರ ಕರಡು ಮತ್ತು ‘ಲೆಕ್ಕಪತ್ರ ವಿಭಜನೆ (ತಿದ್ದುಪಡಿ) ನಿಯಮಗಳು, 2025’ರ ಕರಡುಗಳ ಕುರಿತಾಗಿ ಕಾಮೆಂಟ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕದ ವಿಸ್ತರಣೆ
Posted On:
31 OCT 2025 12:35PM by PIB Bengaluru
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI), ಅಕ್ಟೋಬರ್ 16, 2025 ರಂದು 'ದೂರಸಂಪರ್ಕ ಸುಂಕ (ಎಪ್ಪತ್ತೆರಡನೇ ತಿದ್ದುಪಡಿ) ಆದೇಶ, 2025'ರ ಕರಡು ಮತ್ತು 'ಲೆಕ್ಕಪತ್ರ ವಿಭಜನೆ (ತಿದ್ದುಪಡಿ) ನಿಯಮಗಳ ಕುರಿತು ವರದಿ ಮಾಡುವ ವ್ಯವಸ್ಥೆ, 2025'ರ ಕರಡನ್ನು ಹೊರಡಿಸಿದ್ದು, ಅಕ್ಟೋಬರ್ 31, 2025 ರವರೆಗೆ ಪಾಲುದಾರರಿಂದ ಅಭಿಪ್ರಾಯಗಳನ್ನು ಕೋರಲಾಗಿದೆ.
ಈ ಎರಡೂ ಕರಡುಗಳ ತಿದ್ದುಪಡಿಗಳ ಕುರಿತು ಕಾಮೆಂಟ್‌ಗಳನ್ನು ಸಲ್ಲಿಸಲು ಸಮಯ ವಿಸ್ತರಣೆಗಾಗಿ ಕೈಗಾರಿಕಾ ಸಂಘ ಮತ್ತು ಪಾಲುದಾರರಿಂದ ಬಂದಿರುವ ವಿನಂತಿಗಳನ್ನು ಗಮನದಲ್ಲಿಟ್ಟುಕೊಂಡು, ಲಿಖಿತ ಕಾಮೆಂಟ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು 2025ರ ನವೆಂಬರ್ 7 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಯಾವುದಾದರೂ ಕಾಮೆಂಟ್‌ಗಳಿದ್ದರೆ, ಅವುಗಳನ್ನು fa@trai.gov.in. ಇಮೇಲ್ ಐಡಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸಬಹುದು. ಯಾವುದೇ ಸ್ಪಷ್ಟೀಕರಣ / ಮಾಹಿತಿಗಾಗಿ, ಶ್ರೀ ವಿಜಯ್ ಕುಮಾರ್, ಸಲಹೆಗಾರ (ಎಫ್ ಮತ್ತು ಇ.ಎ.), TRAI, ಅವರನ್ನು ದೂರವಾಣಿ ಸಂಖ್ಯೆ +91-11- 20907773 ಮೂಲಕ ಸಂಪರ್ಕಿಸಬಹುದು.
*****
(Release ID: 2184950)
Visitor Counter : 3