ರೈಲ್ವೇ ಸಚಿವಾಲಯ
azadi ka amrit mahotsav

ದೇಶಾದ್ಯಂತ ವಿವಿಧ ರೈಲು ನಿಲ್ದಾಣಗಳಲ್ಲಿ 76 ಪ್ರಯಾಣಿಕರ ನಿಲುಗಡೆ ತಾಣಗಳನ್ನು (ಪ್ಯಾಸೆಂಜರ್‌ ಹೋಲ್ಡಿಂಗ್‌ ಏರಿಯಾ) ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಂದ ಅನುಮೋದನೆ


2026ರ ಹಬ್ಬದ ಋತುವಿಗೆ ಮುನ್ನವೇ ಹೊಸ ಪ್ರಯಾಣಿಕರ ನಿಲುಗಡೆ ತಾಣಗಳು ಪೂರ್ಣಗೊಳ್ಳಲಿವೆ: ಅಶ್ವಿನಿ ವೈಷ್ಣವ್

ಪ್ರಯಾಣಿಕರ ನಿಲುಗಡೆ ತಾಣಗಳು ಮಾಡ್ಯುಲರ್ ವಿನ್ಯಾಸವನ್ನು ಹೊಂದಿರಲಿವೆ ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವುಗಳನ್ನು ನಿರ್ಮಿಸಲಾಗುವುದು

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ʻಯಾತ್ರಿ ಸುವಿಧ ಕೇಂದ್ರʼದ ಯಶಸ್ಸಿನ ನಂತರ ಹೊಸ ಜಮಾವಣೆ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ

Posted On: 30 OCT 2025 4:59PM by PIB Bengaluru

ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ದೇಶಾದ್ಯಂತ ವಿವಿಧ ರೈಲು ನಿಲ್ದಾಣಗಳಲ್ಲಿ 76 ಪ್ರಯಾಣಿಕರ ನಿಲುಗಡೆ ತಾಣ(ಪ್ಯಾಸೆಂಜರ್‌ ಹೋಲ್ಡಿಂಗ್‌ ಏರಿಯಾ) ಅಭಿವೃದ್ಧಿಪಡಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ. ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ನಿಲುಗಡೆ ತಾಣದ ಯಶಸ್ಸಿನ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇಶಾದ್ಯಂತ ಯೋಜಿಸಲಾದ ಹೊಸ ಪ್ರಯಾಣಿಕರ ನಿಲುಗಡೆ ತಾಣಗಳು ಮಾಡ್ಯುಲರ್ ವಿನ್ಯಾಸವನ್ನು ಹೊಂದಿರಲಿವೆ ಮತ್ತು ಸ್ಥಳೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ನಿರ್ಮಿಸಲಾಗುವುದು ಎಂದು ಹೇಳಿರುವ ಕೇಂದ್ರ ಸಚಿವರು, 2026ರ ಹಬ್ಬದ ಋತುವಿಗೆ ಮುಂಚಿತವಾಗಿ ಎಲ್ಲಾ ಪ್ರಯಾಣಿಕರ ನಿಲುಗಡೆ ತಾಣಗಳು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ನವದೆಹಲಿ ನಿಲ್ದಾಣವು ಹೊಸದಾಗಿ ಅಭಿವೃದ್ಧಿಪಡಿಸಿದ ʻಪ್ರಯಾಣಿಕ ಜಮಾವಣೆ ತಾಣʼದ ಸಹಾಯದಿಂದ ದೀಪಾವಳಿ ಮತ್ತು ಛಠ್ ಸಮಯದಲ್ಲಿ ಭಾರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಿತು. ನವದೆಹಲಿ ನಿಲ್ದಾಣದಲ್ಲಿ ಈ ಪ್ರಯಾಣಿಕರ ನಿಲುಗಡೆ ತಾಣವನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. ನವದೆಹಲಿ ರೈಲ್ವೆ ನಿಲ್ದಾಣದಲ್ಲಿರುವ ʻಯಾತ್ರಿ ಸುವಿಧಾ ಕೇಂದ್ರʼವನ್ನು (ಶಾಶ್ವತ ಜನ ಜಮಾವಣೆ ತಾಣ) ಯಾವುದೇ ಸಮಯದಲ್ಲಿ ಸುಮಾರು 7,000 ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ, ಇದು ರೈಲು ಹತ್ತುವ ಮುನ್ನ ಪ್ರಯಾಣಿಕರ ಆರಾಮದಾಯಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದಲ್ಲದೆ, ಪ್ರಯಾಣಿಕರ ಹರಿವನ್ನು ಸುಧಾರಿಸುತ್ತದೆ. ಪ್ರಯಾಣಿಕರ ಚಲನೆಯನ್ನು ಸುವ್ಯವಸ್ಥಿತಗೊಳಿಸಲು ಈ ಸೌಲಭ್ಯವನ್ನು ಟಿಕೆಟಿಂಗ್, ಪೋಸ್ಟ್-ಟಿಕೆಟಿಂಗ್ ಮತ್ತು ಪ್ರಿ-ಟಿಕೆಟಿಂಗ್ ಎಂಬ ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ನವದೆಹಲಿ ನಿಲ್ದಾಣ ಪ್ರಯಾಣಿಕ ಜಮಾವಣೆ ತಾಣವು 7,000ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಬಲ್ಲದು. ಇದು ಪುರುಷರು ಮತ್ತು ಮಹಿಳೆಯರಿಗೆ ತಲಾ 150 ಶೌಚಾಲಯಗಳು, ಟಿಕೆಟ್ ಕೌಂಟರ್‌ಗಳು, ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳು ಮತ್ತು ಉಚಿತ ಶುದ್ಧೀಕರಿಸಿದ ನೀರಿನ ಘಟಕಗಳನ್ನು ಹೊಂದಿದೆ.

76 ನಿಲ್ದಾಣಗಳ ಪಟ್ಟಿ:

ಕ್ರಮ ಸಂಖ್ಯೆ

ರೈಲ್ವೆ
ವಲಯ

ರೈಲು ನಿಲ್ದಾಣದ ಹೆಸರು

ಸಂಖ್ಯೆ

1

ಕೇಂದ್ರ

ಮುಂಬೈ ಸಿಎಸ್ಎಂಟಿ, ಲೋಕಮಾನ್ಯ ತಿಲಕ್ ಟರ್ಮಿನಸ್, ನಾಗಪುರ, ನಾಸಿಕ್ ರಸ್ತೆ, ಪುಣೆ, ದಾದರ್

6

2

ಪೂರ್ವ

ಹೌರಾ, ಸೀಲ್ಡಾ, ಅಸನ್ಸೋಲ್, ಭಾಗಲ್ಪುರ್, ಜಸಿದಿಹ್

5

3

ಪೂರ್ವ  ಮಧ್ಯ

ಪಾಟ್ನಾ, ದಾನಾಪುರ, ಮುಜಾಫರ್ ಪುರ್, ಗಯಾ, ದರ್ಭಂಗಾ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣ

6

4

ಪೂರ್ವ ಕರಾವಳಿ

ಭುವನೇಶ್ವರ, ವಿಶಾಖಪಟ್ಟಣಂ, ಪುರಿ

3

5

ಉತ್ತರ

ನವದೆಹಲಿ, ಆನಂದ್ ವಿಹಾರ್ ಟರ್ಮಿನಲ್, ಹಜರತ್ ನಿಜಾಮುದ್ದೀನ್, ದೆಹಲಿ, ಗಾಜಿಯಾಬಾದ್, ಜಮ್ಮು ತಾವಿ, ಶ್ರೀ ಮಾತಾ ವೈಷ್ಣೋದೇವಿ ಕತ್ರಾ, ಲುಧಿಯಾನ, ಲಕ್ನೋ (ಎನ್ಆರ್), ವಾರಣಾಸಿ, ಅಯೋಧ್ಯೆ ಧಾಮ್, ಹರಿದ್ವಾರ

12

6

ಉತ್ತರ ಮಧ್ಯ

ಕಾನ್ಪುರ, ವೀರಾಂಗನಾ ಲಕ್ಷ್ಮಿ ಬಾಯಿ ಝಾನ್ಸಿ, ಮಥುರಾ, ಆಗ್ರಾ ಕಂಟೋನ್ಮೆಂಟ್.

4

7

ಈಶಾನ್ಯ

ಗೋರಖ್‌ಪುರ, ಬನಾರಸ್, ಛಾಪ್ರಾ, ಲಕ್ನೋ ಜಂಕ್ಷನ್ (ನಾರ್)

4

8

ಈಶಾನ್ಯ ಗಡಿನಾಡು

ಗುವಾಹಟಿ, ಕತಿಹಾರ್

2

9

ವಾಯುವ್ಯ

ಜೈಪುರ, ಗಾಂಧಿ ನಗರ ಜೈಪುರ, ಅಜ್ಮೀರ್, ಜೋಧಪುರ, ರಿಂಗಾಸ್

5

10

ದಕ್ಷಿಣ

ಎಂ.ಜಿ.ಆರ್. ಚೆನ್ನೈ ಸೆಂಟ್ರಲ್, ಚೆನ್ನೈ ಎಗ್ಮೋರ್, ಕೊಯಮತ್ತೂರು ಜಂಕ್ಷನ್, ಎರ್ನಾಕುಲಂ ಜಂಕ್ಷನ್.

4

11

ದಕ್ಷಿಣ ಮಧ್ಯ  

ಸಿಕಂದರಾಬಾದ್, ವಿಜಯವಾಡ, ತಿರುಪತಿ, ಗುಂಟೂರು, ಕಾಚಿಗುಡ, ರಾಜಮಂಡ್ರಿ

6

12

ಆಗ್ನೇಯ

ರಾಂಚಿ, ಟಾಟಾ, ಶಾಲಿಮಾರ್

3

13

ಆಗ್ನೇಯ ಮಧ್ಯ

ರಾಯ್ ಪುರ್

1

14

ನೈಋತ್ಯ

ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ, ಮೈಸೂರು, ಕೃಷ್ಣರಾಜಪುರಂ

4

15

ಪಶ್ಚಿಮ

ಮುಂಬೈ ಸೆಂಟ್ರಲ್, ಬಾಂದ್ರಾ ಟರ್ಮಿನಸ್, ಉದ್ನಾ, ಸೂರತ್, ಅಹಮದಾಬಾದ್, ಉಜ್ಜಯಿನಿ, ವಡೋದರಾ, ಸೆಹೋರ್

8

16

ಪಶ್ಚಿಮ ಮಧ್ಯ 

ಭೋಪಾಲ್, ಜಬಲ್ಪುರ್, ಕೋಟಾ

3

 

 

*****

 


(Release ID: 2184339) Visitor Counter : 9