ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಕರ್ನಾಟಕ ಮತ್ತು ತಮಿಳುನಾಡಿನಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಜಿಐ ಟ್ಯಾಗ್ ಮಾಡಲಾದ ಇಂಡಿ ಮತ್ತು ಪುಲಿಯನ್ಕುಡಿ ನಿಂಬೆಹಣ್ಣುಗಳನ್ನು ಮೊದಲ ಬಾರಿಗೆ ವಿಮಾನ ಮೂಲಕ ಸಾಗಾಣಿಕೆ ಮಾಡುವುದನ್ನು ಸುಗಮಗೊಳಿಸಿದ ಎಪಿಇಡಿಎ
ಎಪಿಇಡಿಎ ವ್ಯವಸ್ಥೆಯ ಅಡಿಯಲ್ಲಿ ಇಂಡಿ ಮತ್ತು ಪುಲಿಯನ್ಕುಡಿ ನಿಂಬೆಹಣ್ಣುಗಳು ಯುಕೆ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡುತ್ತಿವೆ
ಯುನೈಟೆಡ್ ಕಿಂಗ್‌ಡಮ್‌ಗೆ ಇಂಡಿ ಮತ್ತು ಪುಲಿಯನ್ಕುಡಿ ನಿಂಬೆಹಣ್ಣಿನ ರವಾನೆಯು ಭಾರತದ ಜಿಐ ಜಿಐ-ಟ್ಯಾಗ್ ಮಾಡಲಾದ ತೋಟಗಾರಿಕಾ ಉತ್ಪನ್ನಗಳ ರಫ್ತನ್ನು ಉತ್ತೇಜಿಸುತ್ತದೆ
प्रविष्टि तिथि:
29 OCT 2025 6:05PM by PIB Bengaluru
ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎ.ಪಿ.ಇ.ಡಿ.ಎ.-APEDA), ಕರ್ನಾಟಕದ ವಿಜಯಪುರದಿಂದ ಭಾರತದ ಜಿಐ-ಟ್ಯಾಗ್ ಮಾಡಲಾದ 350 ಕೆಜಿ ಇಂಡಿ ನಿಂಬೆ ಹಣ್ಣು ಮತ್ತು ತಮಿಳುನಾಡಿನ ತೆಂಕಸಿಯಿಂದ 150 ಕೆಜಿ ಪುಲಿಯನ್ಕುಡಿ ನಿಂಬೆಯನ್ನು ಅಕ್ಟೋಬರ್ 28, 2025 ರಂದು ಯುನೈಟೆಡ್ ಕಿಂಗ್‌ಡಮ್‌ಗೆ ಮೊದಲ ಬಾರಿಗೆ ವಿಮಾನ ಮೂಲಕ ಸಾಗಿಸಲು ಅನುಕೂಲ ಮಾಡಿಕೊಟ್ಟಿದೆ. ಈ 500 ಕೆಜಿ ಸರಕನ್ನು ರಫ್ತು ಮಾಡಲಾಗಿದ್ದು, ಇದು ಭಾರತದ ಜಿಐ-ಟ್ಯಾಗ್ ಮಾಡಲಾದ ತೋಟಗಾರಿಕಾ ಉತ್ಪನ್ನಗಳ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ, ಕರ್ನಾಟಕ ನಿಂಬೆ ಮಂಡಳಿ, ಕೃಷಿ ಉತ್ಪಾದನಾ ಆಯುಕ್ತರು ಮತ್ತು ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಶ್ರೀ ವಿ. ದಕ್ಷಿಣಮೂರ್ತಿ, ಐಎಎಸ್ ಮತ್ತು ತಮಿಳುನಾಡು ಸರ್ಕಾರದ ತೋಟಗಾರಿಕೆ ಇಲಾಖೆ ಭಾಗವಹಿಸುವಿಕೆಯೊಂದಿಗೆ ಹಸಿರು ನಿಶಾನೆ ತೋರುವ ಸಮಾರಂಭವನ್ನು ಆಯೋಜಿಸಲಾಗಿತ್ತು. ಎಪಿಇಡಿಎ ಅಧ್ಯಕ್ಷ ಶ್ರೀ ಅಭಿಷೇಕ್ ದೇವ್ ಅವರು ಸಾಗಣೆಗೆ ಚಾಲನೆ ನೀಡಿ ಉಪಕ್ರಮವನ್ನು ಶ್ಲಾಘಿಸಿದರು, ಸ್ಥಳೀಯ ರೈತರು ಮತ್ತು ಉತ್ಪಾದಕ ಗುಂಪುಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಮೂಲಕ ಭಾರತದ ಪ್ರಾದೇಶಿಕ ಕೃಷಿ ಉತ್ಪನ್ನಗಳನ್ನು ಜಾಗತಿಕವಾಗಿ ಉತ್ತೇಜಿಸುವಲ್ಲಿಇಂತಹ ಪ್ರಯತ್ನಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು.
ಇಂಡಿ ನಿಂಬೆ ಮತ್ತು ಪುಲಿಯನ್ಕುಡಿ ನಿಂಬೆ ಸಹಿತ ಜಿಐ ಟ್ಯಾಗ್ ಮಾಡಲಾದ ಉತ್ಪನ್ನಗಳ ರಫ್ತು ಭಾರತದ ವಿಶಿಷ್ಟ ಕೃಷಿ ಪರಂಪರೆಯ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುತ್ತದೆ ಮತ್ತು ಪ್ರದೇಶ-ನಿರ್ದಿಷ್ಟ ಉತ್ಪನ್ನಗಳನ್ನು ಅಂತರರಾಷ್ಟ್ರೀಯವಾಗಿ ಉತ್ತೇಜಿಸುತ್ತದೆ ಎಂದು ಎಪಿಇಡಿಎ ಅಧ್ಯಕ್ಷರು ಹಸಿರು ನಿಶಾನೆ ತೋರುವ ಸಮಯದಲ್ಲಿ ಹೇಳಿದರು. ರೈತ-ಉತ್ಪಾದಕರ ಗುಂಪುಗಳನ್ನು ಜಾಗತಿಕ ಗ್ರಾಹಕರೊಂದಿಗೆ ಸಂಪರ್ಕಿಸುವ ಮೂಲಕ, ಇದು ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಮತ್ತು ಬೆಳೆಗಾರರು ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವೈವಿಧ್ಯೀಕರಣದ ಮೂಲಕ ಉತ್ತಮ ಆದಾಯವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ರೈತರ ಪ್ರಯೋಜನಕ್ಕಾಗಿ ಇಂತಹ ಉಪಕ್ರಮಗಳನ್ನು ಹೆಚ್ಚಿಸುವಲ್ಲಿ ರಫ್ತುದಾರರು ಮತ್ತು ಉತ್ಪಾದಕರನ್ನು ಬೆಂಬಲಿಸಲು ಎಪಿಇಡಿಎ ಬದ್ಧವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು.
ಆರಂಭದಲ್ಲಿ, ಕರ್ನಾಟಕದ ತೋಟಗಾರಿಕಾ ಶ್ರೇಷ್ಠತೆಯನ್ನು ಉತ್ತೇಜಿಸುವ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ರೈತರ ಪ್ರವೇಶವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ರಫ್ತು ಉಪಕ್ರಮವು ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ ಎಂದು ಶ್ರೀ ವಿ. ದಕ್ಷಿಣಮೂರ್ತಿ, ಐಎಎಸ್ ಹೇಳಿದರು. ಜಿಐ-ಟ್ಯಾಗ್ ಮಾಡಲಾದ ಇಂಡಿ ನಿಂಬೆಯ ಯಶಸ್ವಿ ಸಾಗಣೆಯು ರಾಜ್ಯ ಮತ್ತು ಕೇಂದ್ರ ಸಂಸ್ಥೆಗಳು, ರಫ್ತುದಾರರು ಮತ್ತು ರೈತ ಗುಂಪುಗಳ ನಡುವಿನ ಬಲವಾದ ಸಹಯೋಗವನ್ನು ಪ್ರತಿಬಿಂಬಿಸುತ್ತದೆ.
ಇಂಡಿ ನಿಂಬೆ ಬಗ್ಗೆ
ಮುಖ್ಯವಾಗಿ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುವ ಇಂಡಿ ನಿಂಬೆ, ಅದರ ಉತ್ತಮ ಗುಣಮಟ್ಟ, ಘಾಟು ಸುವಾಸನೆ, ಹೆಚ್ಚಿನ ರಸ ಇಳುವರಿ ಮತ್ತು ಸಮತೋಲಿತ ಆಮ್ಲೀಯತೆಗೆ ಹೆಸರುವಾಸಿಯಾಗಿದೆ. ಇದರ ವಿಶಿಷ್ಟ ಸುವಾಸನೆ ಮತ್ತು ಭೌಗೋಳಿಕ ಅನನ್ಯತೆಯು ಈ ಪ್ರದೇಶದ ಕೃಷಿ ಶ್ರೇಷ್ಠತೆಯ ವಿಶಿಷ್ಟ ಲಕ್ಷಣವಾಗಿದೆ. ಅದರ ಪಾಕಶಾಲೆಯ ಅನ್ವಯಿಕೆಗಳ ಜೊತೆಗೆ, ನಿಂಬೆಯನ್ನು ಸಾಂಪ್ರದಾಯಿಕ ಔಷಧ ಮತ್ತು ಸಾಂಸ್ಕೃತಿಕ ಪದ್ಧತಿಗಳಲ್ಲಿಯೂ ಬಳಸಲಾಗುತ್ತಿದೆ. ಇದು ಕರ್ನಾಟಕದ ಆಳವಾಗಿ ಬೇರೂರಿರುವ ಕೃಷಿ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
ಪುಲಿಯನ್ಕುಡಿ ನಿಂಬೆಯ ಬಗ್ಗೆ
"ತಮಿಳುನಾಡಿನ ನಿಂಬೆ ನಗರ" ಎಂದು ಕರೆಯಲ್ಪಡುವ ಪುಲಿಯನ್ಕುಡಿ ತೆಂಕಸಿ ಜಿಲ್ಲೆಯಲ್ಲಿದೆ ಮತ್ತು ವ್ಯಾಪಕವಾದ ನಿಂಬೆ ಕೃಷಿಗೆ ಹೆಸರುವಾಸಿಯಾಗಿದೆ. ಪುಲಿಯನ್ಕುಡಿ ನಿಂಬೆ, ವಿಶೇಷವಾಗಿ ಕಡಯಂ ಜಾತಿಯ ನಿಂಬೆ ಅದರ ತೆಳುವಾದ ಸಿಪ್ಪೆ, ಬಲವಾದ ಆಮ್ಲೀಯತೆ, ಹೆಚ್ಚಿನ ಆಸ್ಕೋರ್ಬಿಕ್ ಆಮ್ಲದ ಅಂಶ (34.3 ಮಿಗ್ರಾಂ/100 ಗ್ರಾಂ) ಮತ್ತು ಸುಮಾರು 55% ರಸದ ಅಂಶಗಳಿಂದ ಪ್ರಖ್ಯಾತವಾಗಿದೆ. ವಿಟಮಿನ್ ಸಿ ಮತ್ತು ಸಮೃದ್ಧ ಉತ್ಕರ್ಷಣ ನಿರೋಧಕಗಳನ್ನು (ಆಂಟಿಆಕ್ಸಿಡೆಂಟ್) ಹೊಂದಿರುವ ಇದು ಅಸಾಧಾರಣ ಸುವಾಸನೆ ಮತ್ತು ಗುಣಮಟ್ಟದ ಜೊತೆಗೆ ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ/ಬೆಂಬಲಿಸುತ್ತದೆ. ಈ ನಿಂಬೆಯು 2025 ರ ಏಪ್ರಿಲ್ ನಲ್ಲಿ ಅದರ ವಿಶಿಷ್ಟ ಪ್ರಾದೇಶಿಕ ಮತ್ತು ಪೌಷ್ಟಿಕಾಂಶದ ಗುಣಲಕ್ಷಣಗಳನ್ನು ಗುರುತಿಸಿ ಅಧಿಕೃತವಾಗಿ ತನ್ನ ಜಿಐ ಟ್ಯಾಗ್ ಪಡೆದುಕೊಂಡಿತು.
ಇಂಡಿ ಮತ್ತು ಪುಲಿಯನ್ಕುಡಿ ನಿಂಬೆಯ ಈ ಮೊದಲ ಅಂತರರಾಷ್ಟ್ರೀಯ ರವಾನೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಪ್ರಾದೇಶಿಕವಾಗಿ ವಿಶಿಷ್ಟ, ಉತ್ತಮ-ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಹೆಜ್ಜೆಯನ್ನು ಸಂಕೇತಿಸುತ್ತದೆ. ಭಾರತದ ಜಿಐ-ಟ್ಯಾಗ್ ಮಾಡಲಾದ ಉತ್ಪನ್ನಗಳ ಜಾಗತಿಕ ಮನ್ನಣೆಯನ್ನು ಹೆಚ್ಚಿಸಲು ಮತ್ತು ರೈತರು ಹಾಗು ಉತ್ಪಾದಕ ಗುಂಪುಗಳಿಗೆ ನೇರ ಆರ್ಥಿಕ ಪ್ರಯೋಜನಗಳನ್ನು ನೀಡುವ ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸಲು ಎಪಿಇಡಿಎಯ ನಿರಂತರ ಪ್ರಯತ್ನಗಳೊಂದಿಗೆ ಈ ಉಪಕ್ರಮವು ಹೊಂದಿಕೆಯಾಗುತ್ತದೆ.
*****
(रिलीज़ आईडी: 2184009)
आगंतुक पटल : 42