ರೈಲ್ವೇ ಸಚಿವಾಲಯ
ರೈಲ್ವೆ ಸಚಿವಾಲಯವು 2025ರ ಜಾಗೃತಿ ಸಪ್ತಾಹವನ್ನು (ಅಕ್ಟೋಬರ್ 27–ನವೆಂಬರ್ 2) ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿ.ಇ.ಒ ಬೋಧಿಸುವ ಸಮಗ್ರತೆಯ ಪ್ರತಿಜ್ಞೆಯೊಂದಿಗೆ ಪ್ರಾರಂಭಿಸಿದೆ
2025ರ ಜಾಗೃತಿ ಸಪ್ತಾಹದ ವಿಷಯ ಶೀರ್ಷಿಕೆ "ಜಾಗೃತಿ: ನಮ್ಮ ಹಂಚಿಕೆಯ ಜವಾಬ್ದಾರಿ"ಯು ಆಡಳಿತದಲ್ಲಿ ನೈತಿಕ ನಡವಳಿಕೆ ಮತ್ತು ಪಾರದರ್ಶಕತೆಯನ್ನು ಉಲ್ಲೇಖಿಸುತ್ತದೆ
ಪಾರದರ್ಶಕತೆಯನ್ನು ಬಲಪಡಿಸುವ ಮೂಲಕ ಮತ್ತು ದುಷ್ಕೃತ್ಯಗಳ ವ್ಯಾಪ್ತಿಯನ್ನು ಕಡಿಮೆ ಮಾಡುವ ಮೂಲಕ ಪ್ರಾಮಾಣಿಕತೆ, ದಕ್ಷತೆ ಮತ್ತು ಸಾರ್ವಜನಿಕ ಸೇವೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಎಲ್ಲಾ ಅಧಿಕಾರಿಗಳನ್ನು ಆಗ್ರಹಿಸಿದ ರೈಲ್ವೆ ಮಂಡಳಿಯ ಅಧ್ಯಕ್ಷರು
ಸಾರ್ವಜನಿಕ ಸೇವೆಯಲ್ಲಿ ಎಚ್ಚರದ ಜಾಗೃತಿ ಮತ್ತು ನೈತಿಕತೆಯನ್ನು ಉತ್ತೇಜಿಸಲು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಪೋಸ್ಟರ್ ಅಭಿಯಾನಗಳು ಮತ್ತು ಸಂವಾದಾತ್ಮಕ ಅವಧಿಗಳು ಸೇರಿದಂತೆ ವಾರಪೂರ್ತಿ ಚಟುವಟಿಕೆಗಳನ್ನು ರೈಲ್ವೆ ಮಂಡಳಿಯ ಜಾಗೃತಿ ನಿರ್ದೇಶನಾಲಯ ಯೋಜಿಸಿದೆ
Posted On:
27 OCT 2025 4:41PM by PIB Bengaluru
ಕೇಂದ್ರ ಜಾಗೃತ ಆಯೋಗ (ಸಿ.ವಿ.ಸಿ) ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಜಾಗೃತಿ ಸಪ್ತಾಹ ಆಚರಣೆಗೆ ಅನುಗುಣವಾಗಿ, ರೈಲ್ವೆ ಸಚಿವಾಲಯವು ರೈಲ್ವೆ ಮಂಡಳಿಯಲ್ಲಿ ಜಾಗೃತಿ ಸಪ್ತಾಹ 2025 ಆಚರಿಸುತ್ತಿದೆ. ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವ ಗುರಿಯನ್ನು ಈ ಆಚರಣೆ ಹೊಂದಿದೆ.
ಈ ಕಾರ್ಯಕ್ರಮವು ರೈಲ್ವೆ ಮಂಡಳಿಯ (ಸಿ.ಆರ್.ಬಿ) ಅಧ್ಯಕ್ಷರು ಮತ್ತು ಸಿ.ಇ.ಒ ಶ್ರೀ. ಸತೀಶ್ ಕುಮಾರ್ ಅವರು ರೈಲ್ವೆ ಮಂಡಳಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಸ್ಯರಿಗೆ ಸಮಗ್ರತೆಯ ಪ್ರತಿಜ್ಞೆಯನ್ನು ಬೋಧಿಸುವ ಮೂಲಕ ಪ್ರಾರಂಭವಾಯಿತು. ಪ್ರಮಾಣವಚನ ಸಮಾರಂಭದಲ್ಲಿ ಸಚಿವಾಲಯದ ವಿವಿಧ ನಿರ್ದೇಶನಾಲಯಗಳ ಹಿರಿಯ ಅಧಿಕಾರಿಗಳು ಮತ್ತು ಅಧಿಕಾರಿಗಳು ಭೌತಿಕವಾಗಿ ಮತ್ತು ವರ್ಚುವಲ್ ಆಗಿ ಭಾಗವಹಿಸಿದ್ದರು. ಈ ಆಚರಣೆಯು ಅಕ್ಟೋಬರ್ 27, 2025 ರಿಂದ ನವೆಂಬರ್ 2, 2025 ರವರೆಗೆ ನಡೆಯಲಿದೆ.
ಕೇಂದ್ರ ಜಾಗೃತ ಆಯೋಗವು ಅಧಿಸೂಚಿಸಿದಂತೆ, 2025ರ ಜಾಗೃತಿ ಸಪ್ತಾಹದ ವಿಷಯ ಶೀರ್ಷಿಕೆಯು "ಜಾಗೃತಿ: ನಮ್ಮ ಹಂಚಿಕೆಯ ಜವಾಬ್ದಾರಿ" ಎಂಬುದಾಗಿದೆ. ಈ ವಿಷಯವು ನೈತಿಕ ನಡವಳಿಕೆ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ-ಮುಕ್ತ ಸಂಸ್ಥೆಯನ್ನು ನಿರ್ಮಿಸುವ ಕಡೆಗೆ ಸಾಮೂಹಿಕ ಜವಾಬ್ದಾರಿಯ ಮಹತ್ವವನ್ನು ಒತ್ತಿಹೇಳುತ್ತದೆ.

ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿ.ಇ.ಒ ಅವರು ತಮ್ಮ ಭಾಷಣದಲ್ಲಿ, ಉತ್ತಮ ಆಡಳಿತವನ್ನು ಬೆಳೆಸುವಲ್ಲಿ ಜಾಗೃತಿಯ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು ಮತ್ತು ಎಲ್ಲಾ ಅಧಿಕಾರಿಗಳು ಪ್ರಾಮಾಣಿಕತೆ, ದಕ್ಷತೆ ಹಾಗು ಸಾರ್ವಜನಿಕ ಸೇವೆಯ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ಆಗ್ರಹಿಸಿದರು. ಪಾರದರ್ಶಕತೆಯನ್ನು ಬಲಪಡಿಸಲು ಮತ್ತು ದುಷ್ಕೃತ್ಯಗಳಿಗೆ ಅವಕಾಶವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ಕೈಗೊಂಡ ವಿವಿಧ ಡಿಜಿಟಲ್ ಮತ್ತು ವ್ಯವಸ್ಥಿತ ಸುಧಾರಣೆಗಳನ್ನು ಸಹ ಅವರು ಎತ್ತಿ ತೋರಿಸಿದರು.

ರೈಲ್ವೆ ಮಂಡಳಿಯ ಜಾಗೃತ ನಿರ್ದೇಶನಾಲಯವು ವಾರವಿಡೀ ಹಲವಾರು ಚಟುವಟಿಕೆಗಳನ್ನು ಯೋಜಿಸಿದೆ, ಇದರಲ್ಲಿ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಪೋಸ್ಟರ್ ಅಭಿಯಾನಗಳು ಮತ್ತು ಸಾರ್ವಜನಿಕ ಸೇವೆಯಲ್ಲಿ ಎಚ್ಚರದ ಜಾಗೃತಿ ಹಾಗು ನೈತಿಕತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಸಂವಾದಾತ್ಮಕ ಅವಧಿಗಳು ಸೇರಿವೆ.
****
(Release ID: 2183110)
Visitor Counter : 6