ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗು ಲಕ್ಷದ್ವೀಪಗಳಲ್ಲಿ ಕೇಂದ್ರ ಮೀನುಗಾರಿಕೆ ಇಲಾಖೆಯು ಮೀನುಗಾರರ ತರಬೇತಿಯನ್ನು ಹೆಚ್ಚಿಸಲಿದೆ; ಸಶಿಮಿ-ಗ್ರೇಡ್ ಟುನಾ ನಿರ್ವಹಣೆ ಮತ್ತು ರಫ್ತು ಕೌಶಲ್ಯಗಳ ಮೇಲೆ ಕಾರ್ಯಾಚರಣೆ ಕೇಂದ್ರೀಕರಿಸಲಿದೆ

Posted On: 27 OCT 2025 7:26PM by PIB Bengaluru

ಭಾರತೀಯ ಮೀನುಗಾರಿಕೆ ಸಮೀಕ್ಷೆ (ಎಫ್.ಎಸ್.ಐ.) ಮತ್ತು ಕೇಂದ್ರೀಯ ಮೀನುಗಾರಿಕೆ ನಾಟಿಕಲ್ ಮತ್ತು ಎಂಜಿನಿಯರಿಂಗ್ ತರಬೇತಿ ಸಂಸ್ಥೆ (ಸಿಫ್ ನೆಟ್) ಕೈಗೊಂಡಿರುವ ಔಟ್ರೀಚ್ ಮತ್ತು ಸಾಮರ್ಥ್ಯವರ್ಧನೆ ಚಟುವಟಿಕೆಗಳನ್ನು ನಿರ್ಣಯಿಸಲು ಇಂದು (27.10.2025) ಮುಂಬೈನಲ್ಲಿ ನಡೆದ ಸಮ್ಮಿಶ್ರ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮೀನುಗಾರಿಕೆ ಇಲಾಖೆ (ಡಿ.ಒ.ಎಫ್ ) ಕೇಂದ್ರ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ವಹಿಸಿದ್ದರು.

ಡಾ. ಲಿಖಿ ಅವರು ತಮ್ಮ ಭಾಷಣದಲ್ಲಿ, ಪರಿಣಾಮಕಾರಿ ಮತ್ತು ಒಗ್ಗಟ್ಟಿನ ಫಲಿತಾಂಶಗಳನ್ನು ನೀಡಲು ಅಧೀನ ಕಚೇರಿಗಳ ನಡುವೆ ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳು ಮತ್ತು ಸಿನರ್ಜಿಯ ಸಹಯೋಗದ ಯೋಜನೆಯ ಮಹತ್ವವನ್ನು ಒತ್ತಿ ಹೇಳಿದರು. ಭಾರತದ ಸಮುದ್ರ ಮೀನುಗಾರಿಕೆ ಅಭಿವೃದ್ಧಿಯಲ್ಲಿ, ವಿಶೇಷವಾಗಿ ಟ್ಯೂನ ಮೀನುಗಾರಿಕೆ ವಲಯದಲ್ಲಿ ಲಕ್ಷದ್ವೀಪ ಹಾಗು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕಾರ್ಯತಂತ್ರದ ಮಹತ್ವವನ್ನು ಡಾ. ಲಿಖಿ ಹೇಳಿದರು. ಸ್ಥಳೀಯ ಮೀನುಗಾರರ ಸಾಮರ್ಥ್ಯ ವೃದ್ಧಿ, ಕೌಶಲ್ಯ ವರ್ಧನೆ ಮತ್ತು ಸಬಲೀಕರಣದಲ್ಲಿ ಉದ್ದೇಶಿತ ಮಧ್ಯಸ್ಥಿಕೆಗಳ ಅಗತ್ಯವನ್ನು ತಿಳಿಸಿದರು, ಇದು ಆಧುನಿಕ ಮೀನುಗಾರಿಕೆ ತಂತ್ರಗಳು ಮತ್ತು ಕೊಯ್ಲಿನ ನಂತರದ ನಿರ್ವಹಣೆ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಪ್ರದೇಶಗಳ ಹೆಚ್ಚು ಪ್ರೇರಿತ ಮತ್ತು ಕೌಶಲ್ಯಪೂರ್ಣ ಮೀನುಗಾರರಿಗೆ ಸಶಿಮಿ-ದರ್ಜೆಯ ಟುನಾ ದ ನಿರ್ವಹಣೆ, ಸಂಸ್ಕರಣೆ ಮತ್ತು ಕೋಲ್ಡ್ ಚೈನ್ ಸಂರಕ್ಷಣಾ ತಂತ್ರಗಳಲ್ಲಿ ಮುಂದುವರಿದ ಸಾಗರೋತ್ತರ ತರಬೇತಿಗೆ ಅವಕಾಶಗಳನ್ನು ಒದಗಿಸಬೇಕೆಂದು ಡಾ. ಲಿಖಿ ಅವರು ಮತ್ತಷ್ಟು ಸಲಹೆಗಳನ್ನು ನೀಡಿದರು. ಅಂತಹ ಉಪಕ್ರಮಗಳು, ಕೊಯ್ಲಿನ ನಂತರದ ನಷ್ಟಗಳನ್ನು ಕಡಿಮೆ ಮಾಡಲು ಮತ್ತು ಭಾರತೀಯ ಸಮುದ್ರ ಉತ್ಪನ್ನಗಳ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ದೂರದ ದ್ವೀಪ ಪ್ರದೇಶಗಳಲ್ಲಿ ಸಮುದ್ರ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಎಫ್.ಎಸ್.ಐ. ಮತ್ತು ಸಿಫ್ ನೆಟ್ ನ ಕಾರ್ಯತಂತ್ರದ ಪಾತ್ರವನ್ನು ಕೂಡ ಅವರು ವಿವರಿಸಿದರು.

ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳು ಮತ್ತು ಸಂಪರ್ಕ ಉಪಕ್ರಮಗಳ ಕುರಿತು ಎಫ್.ಎಸ್.ಐ. ಮತ್ತು ಸಿಫ್ ನೆಟ್  ನಿಂದ ವಿವರವಾದ ಪ್ರಸ್ತುತಿಗಳನ್ನು ಸಹ ಪರಿಶೀಲನಾ ಸಭೆಯಲ್ಲಿ ಪ್ರದರ್ಶನ ನೀಡಲಾಯಿತು. ವಿಶೇಷ ಕೋರ್ಸ್‌ಗಳು, ಪ್ರಾಯೋಗಿಕ ತರಬೇತಿ, ಕ್ಷೇತ್ರ ಮಟ್ಟದ ಪ್ರದರ್ಶನಗಳು, ಸ್ಥಳೀಯ ಮೀನುಗಾರಿಕಾ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ತಂತ್ರಜ್ಞಾನ ಪ್ರಸರಣ ಚಟುವಟಿಕೆಗಳು ಇತ್ಯಾದಿಗಳ ಮೂಲಕ ಮೀನುಗಾರರು ಮತ್ತು ಮೀನುಗಾರಿಕಾ ಸಿಬ್ಬಂದಿಯ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸುವ ಕುರಿತು ಚರ್ಚೆಗಳನ್ನು ಸಹ ವಿಮರ್ಶೆಯ ಸಮಯದಲ್ಲಿ ನಡೆಸಲಾಯಿತು. ಪರಿಶೀಲನಾ ಸಭೆಯಲ್ಲಿ ಎನ್.ಎಫ್.ಡಿ.ಬಿ, ಐ.ಸಿ.ಎ.ಆರ್, ಎಂ.ಪಿ.ಇ.ಡಿ.ಎ, ನಬಾರ್ಡ್, ಎನ್.ಸಿ.ಡಿ.ಸಿ. ಸಂಸ್ಥೆಗಳ ಅಧಿಕಾರಿಗಳು ಮತ್ತು ಮಹಾರಾಷ್ಟ್ರ ಸರ್ಕಾರದ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು, ದ್ವೀಪ ಆಡಳಿತ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಪಾಲುದಾರರು  ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

 

****


(Release ID: 2183106) Visitor Counter : 11