ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನವೆಂಬರ್ 24ರಿಂದ ಡಿಸೆಂಬರ್ 05 ರವರೆಗೆ ರಾಜಸ್ಥಾನದಲ್ಲಿ ನಡೆಯಲಿದೆ. ಕೆಐಯುಜಿ ‘ವೈಭವದತ್ತ ಮೆಟ್ಟಿಲು’ ಎಂದು ಕ್ರೀಡಾ ಸಚಿವಸಚಿವರಾದ ಡಾ. ಮನಸುಖ್ ಮಾಂಡವಿಯಾ ಹೇಳಿದ್ದಾರೆ
5ನೇ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಬೀಚ್ ವಾಲಿಬಾಲ್, ಕೆನೋಯಿಂಗ್ ಮತ್ತು ಕಯಾಕಿಂಗ್, ಸೈಕ್ಲಿಂಗ್ ಮತ್ತು ಖೋ-ಖೋ ಪ್ರದರ್ಶನ
प्रविष्टि तिथि:
16 OCT 2025 5:34PM by PIB Bengaluru
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ (ಕೆಐಯುಜಿ) ನ ಐದನೇ ಆವೃತ್ತಿಯು 2025ರ ನವೆಂಬರ್ 24ರಿಂದ ಡಿಸೆಂಬರ್ 5ರವರೆಗೆ ರಾಜಸ್ಥಾನದ ಏಳು ನಗರಗಳಲ್ಲಿ ನಡೆಯಲಿದೆ. 23 ಪದಕ ಕ್ರೀಡೆಗಳು ಮತ್ತು ಒಂದು ಪ್ರದರ್ಶನ ಕ್ರೀಡೆಯಲ್ಲಿ(ಖೋ-ಖೋ) ಸ್ಪರ್ಧೆ ನಡೆಯಲಿದೆ.
ಈ ವರ್ಷದ ಆರಂಭದಲ್ಲಿ ಬಿಹಾರದಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಂತೆಯೇ, ವಿಶ್ವವಿದ್ಯಾಲಯ ಕ್ರೀಡಾಕೂಟವು ಜೈಪುರ, ಅಜ್ಮೀರ್, ಉದಯಪುರ, ಜೋಧ್‌ಪುರ, ಬಿಕಾನೇರ್, ಕೋಟಾ ಮತ್ತು ಭರತ್‌ಪುರ ಎಂಬ ಏಳು ನಗರಗಳಲ್ಲಿ ವ್ಯಾಪಿಸಲಿದೆ. 12 ದಿನಗಳ ವಿಶ್ವವಿದ್ಯಾಲಯ ಸಭೆಯಲ್ಲಿ 5,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನಸುಖ್ ಮಾಂಡವಿಯಾ ಮಾತನಾಡಿ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಭಾರತದ ಕ್ರೀಡಾ ಹಾದಿಯಲ್ಲಿ ನಿರ್ಣಾಯಕ ಕೊಂಡಿಯಾಗಿದೆ. ಪ್ರಪಂಚದಾದ್ಯಂತ, ಚಾಂಪಿಯನ್‌ಗಳನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಕೆಐಯುಜಿ ನಮ್ಮ ಯುವ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ರಾಜಸ್ಥಾನ ಆವೃತ್ತಿಯು ಭಾರತದ ವಿಸ್ತರಿಸುತ್ತಿರುವ ಕ್ರೀಡಾ ಭೂದೃಶ್ಯವನ್ನು ಬಿಂಬಿಸುತ್ತದೆ ಮತ್ತು ಜಾಗತಿಕವಾಗಿ ರಾಷ್ಟ್ರವನ್ನು ಪ್ರತಿನಿಧಿಸಲು ಬಯಸುವ ಅನೇಕರಿಗೆ ವೈಭವದ ಮೆಟ್ಟಿಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಡಿಯಲ್ಲಿ, ಖೇಲೋ ಇಂಡಿಯಾ ಉಪಕ್ರಮವು ಭಾಗವಹಿಸುವಿಕೆ, ಪ್ರತಿಭೆ ಅಭಿವೃದ್ಧಿ ಮತ್ತು ಉತ್ಕೃಷ್ಟತೆಯನ್ನು ಉತ್ತೇಜಿಸುವ ದೃಢವಾದ ಪರಿಸರ ವ್ಯವಸ್ಥೆಯನ್ನು ರಚಿಸಿದೆ. ರಾಜಸ್ಥಾನದಲ್ಲಿ ನಡೆಯುವ ವಿಶ್ವವಿದ್ಯಾಲಯ ಕ್ರೀಡಾಕೂಟವು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಮುಂದುವರಿಸಲು ಪ್ರೇರೇಪಿಸುತ್ತದೆ ಮತ್ತು ಸ್ಪರ್ಧೆ ಮತ್ತು ಸೌಹಾರ್ದತೆಯ ಮೂಲಕ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಮನೋಭಾವವನ್ನು ಬಲಪಡಿಸುತ್ತದೆ.
ಕೆಐಯುಜಿ 2025ರಲ್ಲಿ, 23 ಪದಕ ಕ್ರೀಡೆಗಳು ಮತ್ತು ಒಂದು ಪ್ರದರ್ಶನ ವಿಭಾಗ ಇರುತ್ತದೆ. ಪದಕ ಕ್ರೀಡೆಗಳಲ್ಲಿ ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಫೆನ್ಸಿಂಗ್, ಫುಟ್ಬಾಲ್, ಹಾಕಿ, ಜೂಡೋ, ಕಬಡ್ಡಿ, ಮಲ್ಲಕಂಬ, ರಗ್ಬಿ, ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೆನಿಸ್, ವಾಲಿಬಾಲ್, ವೇಟ್‌ಲಿಫ್ಟಿಂಗ್, ಕುಸ್ತಿ, ಯೋಗಾಸನ, ಸೈಕ್ಲಿಂಗ್, ಬೀಚ್ ವಾಲಿಬಾಲ್, ಕೆನೋಯಿಂಗ್ ಮತ್ತು ಕಯಾಕಿಂಗ್ ಸೇರಿವೆ.
ಖೋ-ಖೋ ಒಂದು ಪ್ರಾತ್ಯಕ್ಷಿಕೆ (ಪ್ರದರ್ಶನ) ಕಾರ್ಯಕ್ರಮವಾಗಿರುತ್ತದೆ. ಮೊದಲ ಬಾರಿಗೆ, ಕೆಐಯುಜಿ ಕಾರ್ಯಕ್ರಮದಲ್ಲಿ ಬೀಚ್ ವಾಲಿಬಾಲ್, ಕೆನೋಯಿಂಗ್ ಮತ್ತು ಕಯಾಕಿಂಗ್ ಮತ್ತು ಸೈಕ್ಲಿಂಗ್ ಅನ್ನು ಪರಿಚಯಿಸಲಾಗುತ್ತಿದೆ.
ಈಶಾನ್ಯ ಭಾರತದಲ್ಲಿ ನಡೆದ ಕಳೆದ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಚಂಡೀಗಢ ವಿಶ್ವವಿದ್ಯಾಲಯವು ಚಾಂಪಿಯನ್ ಆಗಿ ಹೊರಹೊಮ್ಮಿತು. ಲವ್ಲಿಪ್ರೊಫೆಷನಲ್ ಯೂನಿವರ್ಸಿಟಿ ಮತ್ತು ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ.
ಖೇಲೋ ಇಂಡಿಯಾ ಬಗ್ಗೆ
ಖೇಲೋ ಇಂಡಿಯಾ ಯೋಜನೆಯು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಮುಖ ಕೇಂದ್ರ ವಲಯದ ಯೋಜನೆಯಾಗಿದೆ. ಖೇಲೋ ಇಂಡಿಯಾ ಗೇಮ್ಸ್ ಕ್ರೀಡಾ ಕೌಶಲ್ಯಗಳನ್ನು ಪ್ರದರ್ಶಿಸಲು ಮೂಲ ವೇದಿಕೆಯಾಗಿದೆ ಮತ್ತು ಅದಕ್ಕೆ ಅನುಗುಣವಾಗಿ, ಪ್ರತಿಭಾನ್ವಿತ ಮತ್ತು ಪ್ರತಿಭಾವಂತ ಮಕ್ಕಳಿಗೆ ಉತ್ಕೃಷ್ಟತೆಯನ್ನು ಸಾಧಿಸಲು ಅಭಿವೃದ್ಧಿ ಮಾರ್ಗಗಳನ್ನು ಒದಗಿಸಲು ಮತ್ತು ಪ್ರತಿಭಾನ್ವಿತ ಪತ್ತೆಹಚ್ಚುವಿಕೆಗೆ ವೇದಿಕೆಯಾಗಿದೆ. ಸಂಬಂಧಪಟ್ಟ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು, ಭಾರತೀಯ ಶಾಲಾ ಕ್ರೀಡಾಕೂಟಗಳ ಒಕ್ಕೂಟ, ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮುಂತಾದ ವಿವಿಧ ಮಧ್ಯಸ್ಥಗಾರರನ್ನು ಸಂಯೋಜಿಸುವ ಮೂಲಕ ಈ ರಾಷ್ಟ್ರಮಟ್ಟದ ಸ್ಪರ್ಧೆಗಳನ್ನು ಒಲಿಂಪಿಕ್ ಚಳವಳಿಯ ನೈಜ ಸ್ಫೂರ್ತಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಖೇಲೋ ಇಂಡಿಯಾ ಯೂತ್ ಗೇಮ್ಸ್ (ಕೆಐವೈಜಿ) ನ ಏಳು ಆವೃತ್ತಿಗಳು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನ ನಾಲ್ಕು ಆವೃತ್ತಿಗಳು, ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ಐದು ಆವೃತ್ತಿಗಳು ಮತ್ತು ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ನ ಎರಡು ಆವೃತ್ತಿಗಳು, ಖೇಲೋ ಇಂಡಿಯಾ ಬೀಚ್ ಗೇಮ್ಸ್ ನ ಒಂದು ಆವೃತ್ತಿ ಮತ್ತು ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವದ ಒಂದು ಆವೃತ್ತಿಯೊಂದಿಗೆ ದೇಶಾದ್ಯಂತ 20 ಆವೃತ್ತಿಗಳನ್ನು ನಡೆಸಲಾಗಿದೆ.
*****
(रिलीज़ आईडी: 2180148)
आगंतुक पटल : 28