ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಸೌರಶಕ್ತಿ ಕ್ರಾಂತಿಗೆ ನಾಂದಿ ಹಾಡಿದೆ; 21ನೇ ಶತಮಾನ ಭಾರತಕ್ಕೆ ಸೇರಿದ್ದು: ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ


ಗುಜರಾತ್‌ ತನ್ನ ಸ್ಥಾಪಿತ ವಿದ್ಯುತ್‌ ಸಾಮರ್ಥ್ಯ‌ದ ಶೇ.60ರಷ್ಟನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತದೆ: ಶ್ರೀ ಪ್ರಲ್ಹಾದ್‌ ಜೋಶಿ

ಭಾರತದ ಸೌರ ವಿದ್ಯುತ್‌ ಸಾಮರ್ಥ್ಯ‌ 2014ರಲ್ಲಿದ್ದ 2.8 ಗಿಗಾವ್ಯಾಟ್‌ನಿಂದ ಇಂದು 125 ಗಿಗಾವ್ಯಾಟ್‌ಗೆ ಏರಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ

ಮೆಹ್ಸಾನಾದ ಗಣಪತ್‌ ವಿಶ್ವವಿದ್ಯಾಲಯದಲ್ಲಿ‘ವೈಬ್ರೆಂಟ್‌ ಗುಜರಾತ್‌’ ಪ್ರಾದೇಶಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ

Posted On: 09 OCT 2025 5:27PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ ಅವರು ಇಂದು ಮೆಹ್ಸಾನಾದ ಗಣಪತ್‌ ವಿಶ್ವವಿದ್ಯಾಲಯದಲ್ಲಿಆಯೋಜಿಸಿದ್ದ ‘ವೈಬ್ರೆಂಟ್‌ ಗುಜರಾತ್‌’ ಪ್ರಾದೇಶಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು. ಶುದ್ಧ ಇಂಧನ ಕ್ಷೇತ್ರದಲ್ಲಿ ಗುಜರಾತ್‌ನ ಸಾಧನೆಗಳನ್ನು ಶ್ಲಾಘಿಸಿದ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಾಷ್ಟ್ರವನ್ನು ವ್ಯಾಪಿಸಿರುವ ನವೀಕರಿಸಬಹುದಾದ ಇಂಧನ ಕ್ರಾಂತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಮತ್ತು ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್‌ ಅವರ ಪ್ರಯತ್ನದಲ್ಲಿ ಗುಜರಾತ್‌ ಇಂಧನವನ್ನು, ಈಗ ತನ್ನ ಸ್ಥಾಪಿತ ಸಾಮರ್ಥ್ಯ‌ದ ಶೇ.60ರಷ್ಟು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 25 ವರ್ಷಗಳ ಹಿಂದೆ ಮೊದಲ ಬಾರಿಗೆ ಸೌರಶಕ್ತಿ ಪ್ರಯತ್ನವನ್ನು ಪ್ರಾರಂಭಿಸಿದಾಗ, ಪ್ರತಿ ಯೂನಿಟ್‌ಗೆ ವೆಚ್ಚ 18 ರೂಪಾಯಿಂದ 20 ರೂಪಾಯಿ ಆಗಿತ್ತು. 20-25 ವರ್ಷಗಳ ನಂತರ ಏನಾಗುತ್ತದೆ ಎಂಬುದನ್ನು ಊಹಿಸುವವನು ದಾರ್ಶನಿಕ ಎಂದು ಅವರು ಹೇಳಿದರು. ಆ ಸಮಯದಲ್ಲಿ ಪ್ರಧಾನಮಂತ್ರಿ ಅವರು ಅದನ್ನು ಕಲ್ಪಿಸಿದ್ದರು. ಇಂದು, ಈ ದೃಷ್ಟಿಕೋನವು ಒಂದು ಕ್ರಾಂತಿಯಾಗಿ ಮಾರ್ಪಟ್ಟಿದೆ. ಇತ್ತೀಚೆಗೆ, ಮಧ್ಯಪ್ರದೇಶದಲ್ಲಿ ಸೌರ ಘಟಕದ ಬೆಲೆ ಪ್ರತಿ ಯೂನಿಟ್‌ಗೆ ಕೇವಲ 2.15 ರೂ.ಗೆ ಇಳಿದಿದೆ. ಬ್ಯಾಟರಿ ಸ್ಟೋರೇಜ್‌ ಇದ್ದರೂ ಸಹ, ಪ್ರತಿ ಯೂನಿಟ್‌ ಬೆಲೆ 2.70 ರೂಪಾಯಿ ಎಂದು ದಾಖಲಾಗಿದೆ. ಅನೇಕರು ಅನುಮಾನಿಸಿದ ಈ ಉಪಕ್ರಮವು ಇಂದು ಜಾಗತಿಕ ಸೌರ ಕ್ರಾಂತಿಯಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಿದೆ ಎಂದು ಅವರು ಹೇಳಿದರು.

2014 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡಾಗ ದೇಶದ ಒಟ್ಟು ಸೌರ ವಿದ್ಯುತ್‌ ಉತ್ಪಾದನೆ ಕೇವಲ 2.8 ಗಿಗಾವ್ಯಾಟ್‌ (ಗಿಗಾವ್ಯಾಟ್‌) ಆಗಿತ್ತು ಎಂದು ಸಚಿವರು ಉಲ್ಲೇಖಿಸಿದರು. ಇಂದು, ದೇಶವು ಕೇವಲ ಸೌರಶಕ್ತಿಯಿಂದಲೇ 125 ಗಿಗಾವ್ಯಾಟ್‌ ವಿದ್ಯುತ್‌ ಪಡೆಯುತ್ತಿದೆ.

ಮೆಹ್ಸಾನಾವನ್ನು ಶ್ಲಾಘಿಸಿದ ಶ್ರೀ ಪ್ರಲ್ಹಾದ್‌ ಜೋಶಿ, ‘‘ಮೆಹ್ಸಾನಾ ಬಹಳ ಕ್ರಿಯಾತ್ಮಕ ಸ್ಥಳವಾಗಿದೆ. ಇದನ್ನು ಶುದ್ಧ ಇಂಧನದ ದಾರಿದೀಪವೆಂದು ಪರಿಗಣಿಸಲಾಗಿದೆ,’’ ಎಂದು ಹೇಳಿದರು. ಜಿಲ್ಲೆಯ ಮೊಧೇರಾ ಬಹುಶಃ ದಿನದ 34 ಗಂಟೆಯೂ ಶುದ್ಧ ವಿದ್ಯುತ್‌ ಉತ್ಪಾದಿಸುವ ವಿಶ್ವದ ಏಕೈಕ ಗ್ರಾಮವಾಗಿದೆ. ಇದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಒತ್ತಿ ಹೇಳಿದರು.

ಹವಾಮಾನ ಬದಲಾವಣೆಯ ಗಂಭೀರ ಸವಾಲಿನ ಬಗ್ಗೆ ಗಮನ ಸೆಳೆದ ಕೇಂದ್ರ ಸಚಿವರು, ‘‘ನಮ್ಮ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ನಾವು ಸಮರ್ಥನೀಯವಾಗಿಲ್ಲ. ನಾವು ಪ್ರಕೃತಿ ಮತ್ತು ಜೀವವೈವಿಧ್ಯತೆಯನ್ನು ನಾಶಪಡಿಸುತ್ತಿದ್ದೇವೆ,’’ ಕೈಗಾರಿಕಾ ಕ್ರಾಂತಿಯ ನಂತರ ಭೂಮಿಯ ತಾಪಮಾನವು 1.1 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿದೆ, ಇದು ಹಿಮಕರಡಿ ಮತ್ತು ಹಿಮನರಿಯಂತಹ ಜೀವಿಗಳ ಅಳಿವಿಗೆ ಕಾರಣವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ತಾಪಮಾನವು 1.5 ಡಿಗ್ರಿಗಳಷ್ಟು ಹೆಚ್ಚಾಗಲು ನಮಗೆ ಗರಿಷ್ಠ 7 ವರ್ಷಗಳಿವೆ. ನಾವು ಇದನ್ನು ದಾಟಿದರೆ, ಪರಿಸ್ಥಿತಿ ತುಂಬಾ ಗಂಭೀರವಾಗುತ್ತದೆ ಎಂದು ಹೇಳಿದರು.

ದೇಶದ ಯುವಕರು ಮತ್ತು ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿದ ಅವರು, ಇದು ಸಮಯ, ನಾವು ಭೂಮಿಯನ್ನು ರಕ್ಷಿಸಬೇಕು ಎಂದು ಹೇಳಿದರು. ನಾವು ಜೀವವೈವಿಧ್ಯತೆಯನ್ನು ರಕ್ಷಿಸಬೇಕು. ಗುಜರಾತ್‌ನ ಸೌರ ಉಪಕ್ರಮವನ್ನು ಶ್ಲಾಘಿಸಿದ ಅವರು, ಸೌರ ಇಂಧನ ಮತ್ತು ಶುದ್ಧ ಇಂಧನವನ್ನು ಉತ್ತೇಜಿಸುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿದರು.

 

****


(Release ID: 2177030) Visitor Counter : 23