ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಎಂಟನೇ ಐ.ಎಸ್.ಎ ಅಸೆಂಬ್ಲಿ ಉದ್ಘಾಟನಾ ಪೂರ್ವ ಸಮಾರಂಭಕ್ಕೆ ಕೇಂದ್ರ ಸಚಿವರಾದ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು
ಅಕ್ಟೋಬರ್ 27-30, 2025ರಂದು ನವದೆಹಲಿಯ ಭಾರತ ಮಂಟಪದಲ್ಲಿ ಸೌರಶಕ್ತಿ ಚಾಲಿತ ಜಗತ್ತನ್ನು ರೂಪಿಸಲು ಜಾಗತಿಕ ಪಾಲುದಾರರನ್ನು ಕೇಂದ್ರ ಸಚಿವರು ಆಹ್ವಾನಿಸಿದರು
ಪಿಎಂ ಎಸ್.ಜಿ.ಎಂ.ಬಿ.ವೈ ಮತ್ತು ಪಿಎಂ - ಕುಸುಮ್ ನಂತಹ ಗೃಹ ಮತ್ತು ಕೃಷಿ ಮಟ್ಟದ ಉಪಕ್ರಮಗಳ ಮೂಲಕ ಉಪಯುಕ್ತತೆ ಮತ್ತು ವಿತರಣಾ ಹಂತಗಳಲ್ಲಿ ಸೌರಶಕ್ತಿಯನ್ನು ನಿಯೋಜಿಸುವಲ್ಲಿ ಭಾರತದ ಯಶಸ್ಸನ್ನು ಗಮನಿಸಿದರೆ, ಇದೇ ರೀತಿಯ ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಇತರ ದೇಶಗಳೊಂದಿಗೆ ಪಾಲುದಾರಿಕೆ ಹೊಂದಲು ಭಾರತ ಸಿದ್ಧವಾಗಿದೆ: ಶ್ರೀ ಸಂತೋಷ್ ಕುಮಾರ್ ಸಾರಂಗಿ, ಕಾರ್ಯದರ್ಶಿ, ಎಂ.ಎನ್.ಆರ್.ಇ.
ದೊಡ್ಡ ಪ್ರಮಾಣದ ಸೌರ ನಿಯೋಜನೆಗೆ ಚಾಲನೆ ನೀಡಲು ಮತ್ತು ಸೌರಶಕ್ತಿ ನಿಜವಾಗಿಯೂ ಸುಸ್ಥಿರ ಮತ್ತು ಸಮಗ್ರ ಭವಿಷ್ಯದ ಅಡಿಪಾಯವಾಗುವುದನ್ನು ಖಚಿತಪಡಿಸಿಕೊಳ್ಳಲು ಐ.ಎಸ್.ಎ. ಬಹಳಷ್ಟು ಉಪಯುಕ್ತವಾಗಿದೆ: ಶ್ರೀ ಆಶಿಶ್ ಖನ್ನಾ, ಐ.ಎಸ್.ಎ ಮಹಾನಿರ್ದೇಶಕರು
प्रविष्टि तिथि:
08 OCT 2025 8:15PM by PIB Bengaluru
ಸೂರ್ಯ, ಒಂದು ದೃಷ್ಟಿಕೋನ, ಮತ್ತು ಸೌರಶಕ್ತಿಗೆ ಒಂದು ಹಂಚಿಕೆಯ ಬದ್ಧತೆ ಎಂಬ ಪರಿಕಲ್ಪನೆಯಲ್ಲಿ 2025 ರ ಅಕ್ಟೋಬರ್ 27 ರಿಂದ 30 ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐ.ಎಸ್.ಎ) ಅಸೆಂಬ್ಲಿಯ ಎಂಟನೇ ಅಧಿವೇಶನವು ಸಂಪೂರ್ಣ ಜಗತ್ತನ್ನು ಒಂದೇ ಅಡಿಯಲ್ಲಿ ತರುತ್ತದೆ
ಪ್ಯಾರಿಸ್‌ನಲ್ಲಿ ನಡೆದ ಕೊಪ್21 ಕಾರ್ಯಕ್ರಮದಲ್ಲಿ ಭಾರತ ಮತ್ತು ಫ್ರಾನ್ಸ್ ನಿಂದ ಪ್ರಾರಂಭಿಸಲಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐ.ಎಸ್.ಎ), 124 ಸದಸ್ಯ ಮತ್ತು ಸಹಿ ಮಾಡಿದ ದೇಶಗಳನ್ನು ಒಟ್ಟುಗೂಡಿಸುವ ಜಾಗತಿಕ ದಕ್ಷಿಣದ ಅತಿದೊಡ್ಡ ಒಪ್ಪಂದ ಆಧಾರಿತ ಅಂತರಸರ್ಕಾರಿ ಸಂಸ್ಥೆಯಾಗಿದೆ. ಸೌರಶಕ್ತಿಯನ್ನು ಅಳೆಯುವ ಆದ್ಯತೆಗಳನ್ನು ರೂಪಿಸುವುದು, ಪರಿವರ್ತನಾತ್ಮಕ ಹಣಕಾಸು ಅನ್‌ಲಾಕ್ ಮಾಡುವುದು, ತಂತ್ರಜ್ಞಾನ ಮತ್ತು ನೀತಿ ಮಾರ್ಗಸೂಚಿಗಳನ್ನು ಪಟ್ಟಿ ಮಾಡುವುದು ಮತ್ತು ನ್ಯಾಯಯುತ ಮತ್ತು ಅಂತರ್ಗತ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ಕೌಶಲ್ಯ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವುದು ಮುಂತಾದ ವಿಷಯಗಳ ಕುರಿತು ಉನ್ನತ ಮಟ್ಟದ ಮಂತ್ರಿ ಸಭೆಯು ಬ್ರೆಜಿಲ್ ನಲ್ಲಿ ಕೊಪ್30 ಗಿಂತ ವಾರಗಳ ಮೊದಲು ನಡೆಯುತ್ತದೆ.
ಇಂದು ನಡೆದ ಪ್ರಧಾನ ಸಮಾರಂಭ ಪೂರ್ವ ಕಾರ್ಯಕ್ರಮದಲ್ಲಿ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಮತ್ತು ಐ.ಎಸ್.ಎ ಅಸೆಂಬ್ಲಿಯ ಅಧ್ಯಕ್ಷರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, "ತನ್ನ ಸ್ಪಷ್ಟ ದೃಷ್ಟಿ ಮತ್ತು ಸ್ಥಿರ ನೀತಿಗಳಿಂದಾಗಿ, ಭಾರತವು ತನ್ನ ನವೀಕರಿಸಬಹುದಾದ ಇಂಧನ ಗುರಿಗಳನ್ನು ಐದು ವರ್ಷಗಳ ಮೊದಲೇ ಸಾಧಿಸಿದೆ, ಪಳೆಯುಳಿಕೆಯೇತರ ಸಂಪನ್ಮೂಲಗಳಿಂದ ಒಟ್ಟಾರೆ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ 50% ಅಂಕವನ್ನು ದಾಟಿದೆ. ಇಂದು ಸರಿಸುಮಾರು 125 ಜಿ.ಡಬ್ಲ್ಯೂ. ಸೌರಶಕ್ತಿ ಸಾಮರ್ಥ್ಯದೊಂದಿಗೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಸೌರ ಉತ್ಪಾದಕ ರಾಷ್ಟ್ರವಾಗಿದೆ. ಈ ಪ್ರಗತಿಯು ರಾಷ್ಟ್ರೀಯ ಮಹತ್ವಾಕಾಂಕ್ಷೆಯು ಸ್ಥಳೀಯ ಮಟ್ಟದಲ್ಲಿ ಅರ್ಥಪೂರ್ಣ ಬದಲಾವಣೆಗೆ ಹೇಗೆ ಅನುವಾದಿಸಬಹುದು ಎಂಬುದನ್ನು ತೋರಿಸುತ್ತದೆ. ಏಕೆಂದರೆ ನಮ್ಮ ಯಶಸ್ಸಿನ ಕಥೆ ಕೇವಲ ಸಂಖ್ಯೆಗಳಿಗಿಂತ ಹೆಚ್ಚಿನದಾಗಿದೆ; ಅದು ಜನರ ದೈನಂದಿನ ಜೀವನದಲ್ಲಿ ಬಗ್ಗೆ ಮಹತ್ವದ ಪ್ರಭಾವ ಬೀರುತ್ತದೆ. ವಿಕೇಂದ್ರೀಕೃತ ಸೌರಶಕ್ತಿಯು ಜೀವನವನ್ನು ಹೇಗೆ ಪರಿವರ್ತಿಸುತ್ತದೆ, ಗ್ರಾಮೀಣ ಮನೆಗಳಿಗೆ ಬೆಳಕನ್ನು ತರುತ್ತದೆ, ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಶಕ್ತಿ ನೀಡುತ್ತದೆ ಮತ್ತು ನಮ್ಮ ರೈತರಿಗೆ ಹೊಸ ಸಾಧನಗಳನ್ನು ನೀಡುತ್ತದೆ ಎಂಬುದನ್ನು ನಾವು ನೇರವಾಗಿ ನೋಡಿದ್ದೇವೆ. ಪಿಎಂ ಸೂರ್ಯ ಘರ್ - ಮುಫ್ತ್ ಬಿಜ್ಲಿ ಯೋಜನೆಯೊಂದಿಗೆ, 20 ಲಕ್ಷಕ್ಕೂ ಹೆಚ್ಚು ಮನೆಗಳು ಸೌರಶಕ್ತಿಯಿಂದ ಪ್ರಯೋಜನ ಪಡೆಯುತ್ತಿವೆ." ಎಂದು ಹೇಳಿದರು
"ಪಿಎಂ-ಕುಸುಮ್ ಯೋಜನೆಯಡಿಯಲ್ಲಿ, ನಾವು ಈ ರೂಪಾಂತರವನ್ನು ಭಾರತದ ಹೃದಯಭಾಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ಯೋಜನೆಯ ಮೂರು ಘಟಕಗಳು 10 ಗಿಗಾವ್ಯಾಟ್‌ಗಳ ಸಣ್ಣ ಸೌರ ಸ್ಥಾವರಗಳ ಸ್ಥಾಪನೆಯನ್ನು ಗುರಿಯಾಗಿರಿಸಿಕೊಂಡಿವೆ; 1.4 ಮಿಲಿಯನ್ ಆಫ್-ಗ್ರಿಡ್ ಸೌರ ಪಂಪ್‌ಗಳನ್ನು ಬೆಂಬಲಿಸುತ್ತವೆ; ಮತ್ತು 3.5 ಮಿಲಿಯನ್ ಗ್ರಿಡ್-ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೌರೀಕರಣಗೊಳಿಸುತ್ತವೆ. ಒಟ್ಟಾಗಿ, ಈ ಪ್ರಯತ್ನಗಳು ಶುದ್ಧ ಶಕ್ತಿಯು ಕೊನೆಯ ಮೈಲಿಯನ್ನು ತಲುಪುವುದನ್ನು ಖಚಿತಪಡಿಸುತ್ತಿವೆ. ಭಾರತದ ಇಂಧನ ಪರಿವರ್ತನೆಯನ್ನು ವ್ಯಾಖ್ಯಾನಿಸುವುದು ಈ ಪ್ರಮಾಣದ ಮತ್ತು ಒಳಗೊಳ್ಳುವಿಕೆಯ ಸಂಯೋಜನೆಯಾಗಿದೆ." ಎಂದು ಕೇಂದ್ರ ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಅವರು ಮಾತನಾಡಿ, "ಇಂದು ನಾವು ಸೌರಶಕ್ತಿಯಲ್ಲಿ ಮೂರನೇ ಅತಿದೊಡ್ಡ, ಪವನ ವಿದ್ಯುತ್‌ನಲ್ಲಿ ನಾಲ್ಕನೇ ಅತಿದೊಡ್ಡ ಮತ್ತು ಒಟ್ಟಾರೆಯಾಗಿ, ನಾವು ಈಗ ವಿಶ್ವದ ಮೂರನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸ್ಥಾಪನೆಯಾಗಿದ್ದೇವೆ. ಹೆಚ್ಚುವರಿಯಾಗಿ, ಸೌರ ಮಾಡ್ಯೂಲ್‌ಗಳ ತಯಾರಿಕೆಯಲ್ಲಿ ನಾವು ಚೀನಾದ ನಂತರ ಎರಡನೇ ಅತಿದೊಡ್ಡವರಾಗಿದ್ದೇವೆ. ನಮ್ಮ ಉತ್ಪಾದನೆಯು ಸೌರ ಮಾಡ್ಯೂಲ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ ಆದರೆ ನಮ್ಮ ಇಂಧನ ಭದ್ರತೆಯ ಪ್ರಮುಖ ಭಾಗವಾಗಿರುವ ಹಸಿರು ಹೈಡ್ರೋಜನ್‌ನಂತಹ ಪ್ರದೇಶಗಳಿಗೂ ವಿಸ್ತರಿಸುತ್ತದೆ - ಮತ್ತು 2031 ರ ವೇಳೆಗೆ ಸುಮಾರು 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ನಮ್ಮ ಗುರಿಯ ಪ್ರಕಾರ ಮುಂದುವರಿಯುತ್ತಿದೆ" ಎಂದು ಹೇಳಿದರು.
"ಅನುಭವ ಹಂಚಿಕೆ, ಕ್ರಾಸ್-ಲರ್ನಿಂಗ್ ಮತ್ತು ಪ್ರಮಾಣದಲ್ಲಿ ಮತ್ತು ವಿತರಣಾ ಮಟ್ಟದಲ್ಲಿ ಸೌರಶಕ್ತಿಯನ್ನು ನಿಯೋಜಿಸುವಲ್ಲಿ ಐ.ಎಸ್.ಎ. ಪಾತ್ರವು ಶ್ಲಾಘನೀಯವಾಗಿದೆ ಮತ್ತು ಆಯಾ ದೇಶಗಳಲ್ಲಿ ಸೌರಶಕ್ತಿಯ ವಿಸ್ತರಣೆಗಾಗಿ ಐಎಸ್ಎ ಚೌಕಟ್ಟಿನೊಳಗೆ ಸಹಕರಿಸಿದ ಪಾಲುದಾರ ರಾಷ್ಟ್ರಗಳನ್ನು ನಾನು ಅಭಿನಂದಿಸುತ್ತೇನೆ. ಭವಿಷ್ಯದಲ್ಲಿ ಮತ್ತು ಐ.ಎಸ್.ಎ.ಗೆ ನಾವು ವಿಸ್ತರಿಸುತ್ತಿರುವ ಆರ್ಥಿಕ ಬೆಂಬಲ ಮತ್ತು ತಾಂತ್ರಿಕ ಬೆಂಬಲದ ಮೂಲಕ ವಿವಿಧ ರೀತಿಯಲ್ಲಿ ಈ ಸಹಯೋಗವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಇತರ ದೇಶಗಳಲ್ಲಿ ಇದನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ನಾವು ನೋಡಲು ಬಯಸುತ್ತೇವೆ. ಆಫ್ರಿಕಾದಲ್ಲಿನ ಕೆಲವು ನಿಯೋಜನೆ ಪ್ರಯೋಗಗಳು ಉತ್ತೇಜಕ ಫಲಿತಾಂಶಗಳನ್ನು ತೋರಿಸಿವೆ. 10 ಮಿಲಿಯನ್ ಮನೆಗಳನ್ನು ಸೌರೀಕರಣಗೊಳಿಸುವ ಗುರಿಯನ್ನು ಹೊಂದಿರುವ ಪಿಎಂ ಸೂರ್ಯ ಘರ್ - ಮುಫ್ತ್ ಬಿಜ್ಲಿ ಯೋಜನೆ ಮತ್ತು ಕೃಷಿ ಮಟ್ಟದ ಸೌರೀಕರಣಕ್ಕಾಗಿ ಪಿಎಂ-ಕುಸುಮ್ ಯೋಜನೆಯಂತಹ ಗೃಹ ಮತ್ತು ಕೃಷಿ ಮಟ್ಟದ ಉಪಕ್ರಮಗಳ ಮೂಲಕ ಉಪಯುಕ್ತತೆ ಮತ್ತು ವಿತರಣಾ ಹಂತಗಳಲ್ಲಿ ಸೌರಶಕ್ತಿಯನ್ನು ನಿಯೋಜಿಸುವಲ್ಲಿ ಭಾರತದ ಯಶಸ್ಸನ್ನು ಗಮನಿಸಿದರೆ, ಭಾರತವು ಇದೇ ರೀತಿಯ ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಇತರ ದೇಶಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಸಿದ್ಧವಾಗಿದೆ" ಎಂದು ಅವರು ಹೇಳಿದರು.
"ಜಾಗತಿಕ ನವೀಕರಿಸಬಹುದಾದ ಇಂಧನವು ಒಂದು ಬದಲಾವಣೆಯ ಹಂತದಲ್ಲಿದೆ. ತೈಲವು 1,000 ಜಿ.ಡಬ್ಲ್ಯೂ ತಲುಪಲು 25 ವರ್ಷಗಳನ್ನು ತೆಗೆದುಕೊಂಡಿತು - ನವೀಕರಿಸಬಹುದಾದ ಇಂಧನವು ಕೇವಲ ಎರಡು ವರ್ಷಗಳಲ್ಲಿ ಅದನ್ನು ದ್ವಿಗುಣಗೊಳಿಸಿತು. ಮೊದಲ ಬಾರಿಗೆ, ನವೀಕರಿಸಬಹುದಾದ ಉತ್ಪಾದನೆಯು ಪಳೆಯುಳಿಕೆ ಉತ್ಪಾದನೆಯನ್ನು ಮೀರಿಸಿದೆ. ಜಾಗತಿಕ ದಕ್ಷಿಣವು ಮುನ್ನಡೆಸಲು ಇದು ನಿರ್ಣಾಯಕ ಕ್ಷಣವಾಗಿದೆ. ಮುಂಬರುವ ದಶಕವನ್ನು ಮಹತ್ವಾಕಾಂಕ್ಷೆಯಿಂದ ಮಾತ್ರವಲ್ಲದೆ ಸ್ಪಷ್ಟವಾದ ಕ್ರಿಯೆಯಿಂದಲೂ ವ್ಯಾಖ್ಯಾನಿಸಬೇಕು. ಈ ಹೊಸ ಇಂಧನ ಭೂದೃಶ್ಯದಲ್ಲಿ, ಐ.ಎಸ್.ಎ. ಒಟ್ಟುಗೂಡಿಸುವಿಕೆಯ ವೇದಿಕೆಯಾಗಿ ಹೊರಹೊಮ್ಮುತ್ತಿದೆ - ದೊಡ್ಡ ಪ್ರಮಾಣದ ಸೌರ ನಿಯೋಜನೆಯನ್ನು ಹೆಚ್ಚಿಸಲು ಸಾಮೂಹಿಕ ಕ್ರಮಕ್ಕಾಗಿ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ. ಬದ್ಧತೆಗಳಿಂದ ಕಾಂಕ್ರೀಟ್ ಯೋಜನೆಗಳಿಗೆ, ಸಂವಾದದಿಂದ ವಿತರಣೆಗೆ ಮತ್ತು ಸಂಭಾವ್ಯತೆಯಿಂದ ಅಳೆಯಬಹುದಾದ ಪರಿಣಾಮಕ್ಕೆ ಚಲಿಸುವ ಮೂಲಕ ಈ ಆವೇಗವನ್ನು ವೇಗಗೊಳಿಸುವುದು ನಮ್ಮ ದೃಷ್ಟಿಯಾಗಿದೆ - ಸೌರಶಕ್ತಿ ನಿಜವಾಗಿಯೂ ಸುಸ್ಥಿರ ಮತ್ತು ಅಂತರ್ಗತ ಭವಿಷ್ಯದ ಅಡಿಪಾಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಲಕ್ಷ್ಯವಾಗಿದೆ." ಎಂದು ತಮ್ಮ ಭಾಷಣದಲ್ಲಿ ಅವರು ಹೇಳಿದರು
2018ರಲ್ಲಿ ನಡೆದ ಮೊದಲ ಐ.ಎಸ್.ಎ. ಅಸೆಂಬ್ಲಿಯಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ ದೃಷ್ಟಿಕೋನವನ್ನು ನೆನಪಿಸಿಕೊಂಡ ಶ್ರೀ ಖನ್ನಾ ಅವರು, ಒಟ್ಟುಗೂಡಿಸುವಿಕೆ, ತಂತ್ರಜ್ಞಾನ ಮಾನದಂಡಗಳನ್ನು ಸಮನ್ವಯಗೊಳಿಸುವುದು, ಡೇಟಾ-ಚಾಲಿತ ಇಂಧನ ಯೋಜನೆಯನ್ನು ಸಕ್ರಿಯಗೊಳಿಸುವುದು, ಸಂಶೋಧನೆ ಮತ್ತು ನಾವೀನ್ಯತೆಯನ್ನು ಬೆಂಬಲಿಸುವುದು ಮತ್ತು ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್ ಅನ್ನು ಮುನ್ನಡೆಸುವ ಮೂಲಕ ಸೌರ ನಿಯೋಜನೆಯನ್ನು ಹೆಚ್ಚಿಸುವಲ್ಲಿ ಐ.ಎಸ್.ಎ. ಪಾತ್ರವನ್ನು ವಿವರವಾಗಿ ಹೇಳಿದರು. ತಾಂತ್ರಿಕ ಬೆಂಬಲ, ಡಿಜಿಟಲ್ ಪರಿಕರಗಳು ಮತ್ತು ತರಬೇತಿಗಾಗಿ ವಿಶ್ವಾದ್ಯಂತ ಸ್ಟಾರ್-ಸಿ ಹಬ್‌ಗಳೊಂದಿಗೆ ಸಂಪರ್ಕ ಹೊಂದಿದ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಸ್ಥಾಪನೆಯೊಂದಿಗೆ "ಸೌರಕ್ಕಾಗಿ ಸಿಲಿಕಾನ್ ವ್ಯಾಲಿ" ಆಗುವ ಭಾರತದ ಸಾಮರ್ಥ್ಯವನ್ನು ಅವರು ವಿವರಿಸಿ ತೋರಿಸಿದರು.
ಐ.ಎಸ್.ಎ. ಅಸೆಂಬ್ಲಿಯ ಎಂಟನೇ ಅಧಿವೇಶನವು ನಾಲ್ಕು ಕಾರ್ಯತಂತ್ರದ ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ, ಅವುಗಳೆಂದರೆ: ವೇಗವರ್ಧಕ ಹಣಕಾಸು ಕೇಂದ್ರ; ಜಾಗತಿಕ ಸಾಮರ್ಥ್ಯ ಕೇಂದ್ರ ಮತ್ತು ಡಿಜಿಟಲೀಕರಣ; ಪ್ರಾದೇಶಿಕ ಮತ್ತು ದೇಶ ಮಟ್ಟದ ತೊಡಗಿಸಿಕೊಳ್ಳುವಿಕೆ; ಮತ್ತು ತಂತ್ರಜ್ಞಾನ ಮಾರ್ಗಸೂಚಿ ಮತ್ತು ನೀತಿ. ಮಂತ್ರಿಮಂಡಲ ಮತ್ತು ತಾಂತ್ರಿಕ ಅಧಿವೇಶನಗಳು ಆಫ್ರಿಕಾ ಸೌರ ಸೌಲಭ್ಯದ ಮೂಲಕ ವೇಗವರ್ಧಕ ಹಣಕಾಸು ಮುನ್ನಡೆಸುವುದು, ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳ (ಸಿಡ್ಸ್) ವೇದಿಕೆಯ ಮೂಲಕ ದೇಶದ ಪಾಲುದಾರಿಕೆಗಳನ್ನು ಬಲಪಡಿಸುವುದು ಸೇರಿದಂತೆ ಕಾರ್ಯಸಾಧ್ಯ ಆದ್ಯತೆಗಳನ್ನು ಇವು ಅನ್ವೇಷಿಸುತ್ತವೆ, ಇದು ಹಣಕಾಸು, ತಂತ್ರಜ್ಞಾನ ಮತ್ತು ಸಾಮರ್ಥ್ಯ-ನಿರ್ಮಾಣ ಪಾಲುದಾರಿಕೆಗಳ ಮೂಲಕ ಸೌರಶಕ್ತಿ ನಿಯೋಜನೆಯನ್ನು ವೇಗಗೊಳಿಸುವಲ್ಲಿ ಸಿಡ್ಸ್ ಅನ್ನು ಬೆಂಬಲಿಸಲು ಮೀಸಲಾದ ಉಪಕ್ರಮವಾಗಿದೆ. ಮತ್ತು ತೇಲುವ ಸೌರಶಕ್ತಿ, ಎಐ ಮತ್ತು ಡಿಜಿಟಲೀಕರಣ, ಹಸಿರು ಹೈಡ್ರೋಜನ್ ಮತ್ತು ಮಾನದಂಡಗಳ ಮೂಲಕ ನಾವೀನ್ಯತೆಯನ್ನು ಹೆಚ್ಚಿಸುವುದು ಮತ್ತು ಕೃಷಿಗಾಗಿ ಪರೀಕ್ಷೆ ಮತ್ತು ಸೌರಶಕ್ತಿ, ಐ.ಎಸ್.ಎ. ಯ ಮಹತ್ವಾಕಾಂಕ್ಷೆಯಿಂದ ಮೂಲ ಪ್ರಕ್ರಿಯೆಗೆ ಬದಲಾವಣೆಯನ್ನು ಇವು ಒತ್ತಿಹೇಳುತ್ತದೆ.
ಅಸೆಂಬ್ಲಿಯು ಐ.ಎಸ್.ಎ. ಯ ಪ್ರಮುಖ ವರದಿಗಳಾದ - ಈಸ್ ಆಫ್ ಡೂಯಿಂಗ್ ಸೌರಶಕ್ತಿ 2025 ಮತ್ತು ಸೌರ ಪ್ರವೃತ್ತಿಗಳು 2025 - ಜಾಗತಿಕ ಪ್ರಗತಿ ಮತ್ತು ಸೌರ ನಿಯೋಜನೆಯನ್ನು ಅಳೆಯುವ ಮಾರ್ಗಗಳನ್ನು ವಿವರಿಸುವ ಬಿಡುಗಡೆಯನ್ನು ಸಹ ಮಾಡಲಿದೆ.
ಅಸೆಂಬ್ಲಿಗೆ ಮುಂಚಿತವಾಗಿ, ಐ.ಎಸ್.ಎ. ತನ್ನ ನಾಲ್ಕು ಪ್ರದೇಶಗಳಲ್ಲಿ ಪ್ರಾದೇಶಿಕ ಸಮಿತಿ ಸಭೆಗಳನ್ನು ಕರೆದಿದೆ: ಬ್ರಸೆಲ್ಸ್‌ನಲ್ಲಿ ಯುರೋಪ್ ಮತ್ತು ಇತರರು (ಜೂನ್ 10–12), ಕೊಲಂಬೊದಲ್ಲಿ ಏಷ್ಯಾ-ಪೆಸಿಫಿಕ್ (ಜುಲೈ 15–17), ಸ್ಯಾಂಟಿಯಾಗೊದಲ್ಲಿ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ (ಆಗಸ್ಟ್ 4–6), ಮತ್ತು ಅಕ್ರಾದಲ್ಲಿ ಆಫ್ರಿಕಾ (ಸೆಪ್ಟೆಂಬರ್ 2–4). 100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಗಳು ಪ್ರಗತಿಯನ್ನು ಪರಿಶೀಲಿಸಿದವು, ಸವಾಲುಗಳನ್ನು ಪರಿಹರಿಸಿದವು ಮತ್ತು ಐ.ಎಸ್.ಎ. ಯ ಜಾಗತಿಕ ಆದ್ಯತೆಗಳೊಂದಿಗೆ ಪ್ರಾದೇಶಿಕ ಉಪಕ್ರಮಗಳನ್ನು ಜೋಡಿಸಿದವು. ಇಂಧನ ಪ್ರವೇಶಕ್ಕಾಗಿ ವೇಗವರ್ಧಕ ಹಣಕಾಸು, ನಾವೀನ್ಯತೆ ಪಾಲುದಾರಿಕೆಗಳು ಮತ್ತು ಸೌರೀಕರಣದ ಕುರಿತು ಶಿಫಾರಸುಗಳು ಅಸೆಂಬ್ಲಿಯ ಚರ್ಚೆಗಳು ಮತ್ತು ಫಲಿತಾಂಶಗಳಿಗೆ ಪೂರಕವಾಗಿರುತ್ತವೆ.
ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಬಗ್ಗೆ
ಅಂತಾರಾಷ್ಟ್ರೀಯ ಸೌರ ಒಕ್ಕೂಟವು 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಕಪ್21 ನಲ್ಲಿ ಭಾರತ ಮತ್ತು ಫ್ರಾನ್ಸ್ ಪ್ರಾರಂಭಿಸಿದ ಜಾಗತಿಕ ಉಪಕ್ರಮವಾಗಿದೆ. ಇದು 124 ಸದಸ್ಯ ಮತ್ತು ಸಹಿ ಮಾಡಿದ ದೇಶಗಳನ್ನು ಹೊಂದಿದೆ. ವಿಶ್ವಾದ್ಯಂತ ಇಂಧನ ಪ್ರವೇಶ ಮತ್ತು ಸುರಕ್ಷತೆಯನ್ನು ಸುಧಾರಿಸಲು ಈ ಒಕ್ಕೂಟವು ಸರ್ಕಾರಗಳೊಂದಿಗೆ ಕೆಲಸ ಮಾಡುತ್ತದೆ ಮತ್ತು ಶುದ್ಧ ಇಂಧನ ಭವಿಷ್ಯಕ್ಕೆ ಸುಸ್ಥಿರ ಪರಿವರ್ತನೆಯಾಗಿ ಸೌರಶಕ್ತಿಯನ್ನು ಉತ್ತೇಜಿಸುತ್ತದೆ. 2030ರ ವೇಳೆಗೆ ತಂತ್ರಜ್ಞಾನದ ವೆಚ್ಚ ಮತ್ತು ಅದರ ಹಣಕಾಸಿನ ವೆಚ್ಚವನ್ನು ಕಡಿಮೆ ಮಾಡುವಾಗ ಸೌರಶಕ್ತಿಯಲ್ಲಿ ಹೂಡಿಕೆಗಳನ್ನು ಅನ್ಲಾಕ್ ಮಾಡುವುದು ಐ.ಎಸ್.ಎ. ಯ ಧ್ಯೇಯವಾಗಿದೆ. ಇದು ಕೃಷಿ, ಆರೋಗ್ಯ, ಸಾರಿಗೆ ಮತ್ತು ವಿದ್ಯುತ್ ಉತ್ಪಾದನಾ ಕ್ಷೇತ್ರಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುತ್ತದೆ. ಐ.ಎಸ್.ಎ. ಇದರ ಸದಸ್ಯ ರಾಷ್ಟ್ರಗಳು ನೀತಿಗಳು ಮತ್ತು ನಿಯಮಗಳನ್ನು ಜಾರಿಗೆ ತರುವ ಮೂಲಕ, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ, ಸಾಮಾನ್ಯ ಮಾನದಂಡಗಳನ್ನು ಒಪ್ಪಿಕೊಳ್ಳುವ ಮೂಲಕ ಮತ್ತು ಹೂಡಿಕೆಗಳನ್ನು ಸಜ್ಜುಗೊಳಿಸುವ ಮೂಲಕ ಬದಲಾವಣೆಗೆ ಚಾಲನೆ ನೀಡುತ್ತಿವೆ.
ಈ ಕೆಲಸದ ಮೂಲಕ, ಐ.ಎಸ್.ಎ. ಸೌರ ಯೋಜನೆಗಳಿಗಾಗಿ ಹೊಸ ವ್ಯವಹಾರ ಮಾದರಿಗಳನ್ನು ಗುರುತಿಸಿದೆ, ವಿನ್ಯಾಸಗೊಳಿಸಿದೆ ಮತ್ತು ಪರೀಕ್ಷಿಸಿದೆ; ಸರ್ಕಾರಗಳು ತಮ್ಮ ಇಂಧನ ಶಾಸನ ಮತ್ತು ನೀತಿಗಳನ್ನು ಸೌರ ಸ್ನೇಹಿಯಾಗಿ ಮಾಡಲು ಬೆಂಬಲ ನೀಡಿತು ಸೌರ ವಿಶ್ಲೇಷಣೆ ಮತ್ತು ಸಲಹಾವನ್ನು ಸುಲಭಗೊಳಿಸುವ ಮೂಲಕ; ವಿವಿಧ ದೇಶಗಳಿಂದ ಸೌರ ತಂತ್ರಜ್ಞಾನಕ್ಕಾಗಿ ಬೇಡಿಕೆಯನ್ನು ಒಟ್ಟುಗೂಡಿಸಿತು; ಮತ್ತು ವೆಚ್ಚಗಳನ್ನು ಕಡಿಮೆ ಮಾಡಿತು; ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ವಲಯವನ್ನು ಖಾಸಗಿ ಹೂಡಿಕೆಗೆ ಹೆಚ್ಚು ಆಕರ್ಷಕವಾಗಿಸುವ ಮೂಲಕ ಹಣಕಾಸಿನ ಪ್ರವೇಶವನ್ನು ಸುಧಾರಿಸಿತು; ಸೌರ ಎಂಜಿನಿಯರ್‌ಗಳು ಮತ್ತು ಇಂಧನ ನೀತಿ ನಿರೂಪಕರಿಗೆ ಸೌರ ತರಬೇತಿ, ಡೇಟಾ ಮತ್ತು ಒಳನೋಟಗಳಿಗೆ ಪ್ರವೇಶವನ್ನು ಹೆಚ್ಚಿಸಿತು. ಸೌರಶಕ್ತಿ ಚಾಲಿತ ಪರಿಹಾರಗಳಿಗಾಗಿ ತನ್ನ ವಕಾಲತ್ತು ವಹಿಸುವುದರೊಂದಿಗೆ, ಜೀವನವನ್ನು ಪರಿವರ್ತಿಸುವುದು, ವಿಶ್ವಾದ್ಯಂತ ಸಮುದಾಯಗಳಿಗೆ ಶುದ್ಧ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ಶಕ್ತಿಯನ್ನು ತರುವುದು, ಸುಸ್ಥಿರ ಬೆಳವಣಿಗೆಗೆ ಇಂಧನ ನೀಡುವುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಐ.ಎಸ್.ಎ. ಹೊಂದಿದೆ.
ಡಿಸೆಂಬರ್ 6, 2017 ರಂದು, 15 ದೇಶಗಳು ಐ.ಎಸ್.ಎ. ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿ ಅಂಗೀಕರಿಸಿದವು, ಐ.ಎಸ್.ಎ. ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೊದಲ ಅಂತಾರಾಷ್ಟ್ರೀಯ ಅಂತರಸರ್ಕಾರಿ ಸಂಸ್ಥೆಯಾಗಿದೆ. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು (ಎಂ.ಡಿ.ಬಿ ಗಳು), ಅಭಿವೃದ್ಧಿ ಹಣಕಾಸು ಸಂಸ್ಥೆಗಳು (ಡಿ.ಎಫ್.ಐ ಗಳು), ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಐ.ಎಸ್.ಎ. ಪಾಲುದಾರಿಕೆ ಹೊಂದಿದ್ದು, ವಿಶೇಷವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು (ಎಲ್.ಡಿ.ಸಿ ಗಳು) ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳಲ್ಲಿ (ಸಿಡ್ಸ್) ಸೌರಶಕ್ತಿಯ ಮೂಲಕ ವೆಚ್ಚ-ಪರಿಣಾಮಕಾರಿ ಮತ್ತು ಪರಿವರ್ತನೆಯ ಪರಿಹಾರಗಳನ್ನು ಐ.ಎಸ್.ಎ. ನಿಯೋಜಿಸುತ್ತದೆ.
*****
(रिलीज़ आईडी: 2176594)
आगंतुक पटल : 28