ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ವಿದ್ಯಾರ್ಥಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಲು ಭಾರತ ಸರ್ಕಾರವು "ತಂಬಾಕು ಮುಕ್ತ ಯುವ ಅಭಿಯಾನ 3.0" ಅನ್ನು ಪ್ರಾರಂಭಿಸಿದೆ
ತಂಬಾಕು ಮುಕ್ತ ಪೀಳಿಗೆಯ ನಿರ್ಮಾಣದ ದೃಷ್ಟಿಕೋನದತ್ತ ಹೆಜ್ಜೆಗಳನ್ನು ಬಲಪಡಿಸುವ ಗುರಿಯನ್ನು ರಾಷ್ಟ್ರೀಯ ಅಭಿಯಾನ ಹೊಂದಿದೆ
Posted On:
08 OCT 2025 4:26PM by PIB Bengaluru
ಶಿಕ್ಷಣ ಸಚಿವಾಲಯವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಸಹಯೋಗದೊಂದಿಗೆ, 2025ರ ಅಕ್ಟೋಬರ್ 9 ರಂದು "ತಂಬಾಕು ಮುಕ್ತ ಯುವ ಅಭಿಯಾನ 3.0 (ಟಿ.ಎಫ್.ವೈ.ಸಿ. 3.0)" ವನ್ನು ಪ್ರಾರಂಭಿಸಲಿದೆ, ಇದು ತಂಬಾಕು ಮುಕ್ತ ಕಲಿಕಾ ವಾತಾವರಣವನ್ನು ಸೃಷ್ಟಿಸುವ ಮತ್ತು ಭಾರತದಾದ್ಯಂತ ಯುವ ನಾಗರಿಕರ ಆರೋಗ್ಯವನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ರಾಷ್ಟ್ರೀಯ ಅಭಿಯಾನವು ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಾಣ ಮಾಡುವ ಸರ್ಕಾರದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಮಹತ್ವದ ಹೆಜ್ಜೆಯನ್ನು ಸಂಕೇತಿಸುತ್ತದೆ.
ತಂಬಾಕು ಬಳಕೆಯು ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲಾಗಿ ಮುಂದುವರೆದಿದ್ದು, ಭಾರತದಲ್ಲಿ ವಾರ್ಷಿಕವಾಗಿ 13 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆಯುತ್ತಿದೆ. ಜಾಗತಿಕ ಯುವ ತಂಬಾಕು ಸಮೀಕ್ಷೆ (ಜಿ.ವೈ.ಟಿ.ಎಸ್. 2019) ವರದಿ ಪ್ರಕಾರ, 13–15 ವರ್ಷ ವಯಸ್ಸಿನ ವಿದ್ಯಾರ್ಥಿಗಳಲ್ಲಿ 8.4% ವಿದ್ಯಾರ್ಥಿಗಳು ಪ್ರಸ್ತುತ ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ, ಇದರ ಸರಾಸರಿ ಪರಿಗಣಿಸಿದರೆ, ತಂಬಾಕು ಬಳಸಲು ಪ್ರಾರಂಭ ಮಾಡುವ ವಯಸ್ಸು ಕೇವಲ 10 ವರ್ಷಗಳು. ಯುವಜನರು ಈ ಅಪಾಯಕ್ಕೀಡಾಗುವ ಸಂಭಾವ್ಯತೆಯನ್ನು ಗುರುತಿಸಿ, ಸರ್ಕಾರವು ನಿರಂತರ ಜಾಗೃತಿ, ತಡೆಗಟ್ಟುವಿಕೆ ಮತ್ತು ಜಾರಿ ಕ್ರಮಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಸಂಪೂರ್ಣ ಸರ್ಕಾರಿ ವಿಧಾನವನ್ನು ಅಳವಡಿಸಿಕೊಂಡಿದೆ.
ಈ 60 ದಿನಗಳ ರಾಷ್ಟ್ರೀಯ ಅಭಿಯಾನ (ಟಿ.ಎಫ್.ವೈ.ಸಿ. 3.0) ಮಕ್ಕಳು ಮತ್ತು ಯುವಜನರಿಗೆ ತಂಬಾಕು ಬಳಕೆಯ ಪ್ರಾರಂಭವನ್ನು ತಡೆಗಟ್ಟಲು ಶಿಕ್ಷಣ ನೀಡಲು ಮತ್ತು ಸಬಲೀಕರಣಗೊಳಿಸಲು, ಧೂಮಪಾನ ತ್ಯಜಿಸಲು ಬಯಸುವವರಿಗೆ ಬೆಂಬಲ ನೀಡಲು ಮತ್ತು ಶಾಲೆಗಳು ಹಾಗು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯದ ಬಲವಾದ ಸಂಸ್ಕೃತಿಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಟಿ.ಎಫ್.ವೈ.ಸಿ.- 3.0 ಅಡಿಯಲ್ಲಿ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳ ಮಾರ್ಗಸೂಚಿಗಳನ್ನು (ಟಿ.ಒ.ಎಫ್.ಇ.ಐ.-ToFEI) ಜಾರಿಗೆ ತರುವ ಬದ್ಧತೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪುನರುಚ್ಚರಿಸಬೇಕು ಮತ್ತು ತಂಬಾಕು ಹಾಗು ಇತರ ರೀತಿಯ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಸೂಕ್ಷ್ಮತೆ/ ಸಂವೇದನೆಯನ್ನು ಮೂಡಿಸಲು ಪೂರ್ವಭಾವಿ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಪ್ರಮುಖ ಚಟುವಟಿಕೆಗಳಲ್ಲಿ ಇವು ಸೇರಿವೆ :
· ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಾಯ್ದೆ ಜಾರಿ ಅಭಿಯಾನಗಳು.
· ತಂಬಾಕು ಮತ್ತು ಇತರ ರೀತಿಯ ಮಾದಕ ವಸ್ತುಗಳ ದುರುಪಯೋಗದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಮುಖ್ಯಸ್ಥರು, ಎನ್.ಎಸ್.ಎಸ್/ಎನ್.ಸಿ.ಸಿ. ಸ್ವಯಂಸೇವಕರು ಮತ್ತು ಶಿಕ್ಷಕರಿಗೆ ಸಾಮರ್ಥ್ಯವರ್ಧನೆ ಕಾರ್ಯಾಗಾರಗಳು.
· ತಂಬಾಕು ಮತ್ತು ಇತರ ರೀತಿಯ ಮಾದಕ ವಸ್ತುಗಳ ದುರುಪಯೋಗವನ್ನು ತ್ಯಜಿಸಲು ವಿದ್ಯಾರ್ಥಿಗಳಿಗೆ ಸಮಾಲೋಚನೆ ಮತ್ತು ಬೆಂಬಲ ಅವಧಿಗಳು.
· ಶಾಲೆಗಳು/ಕಾಲೇಜುಗಳು/ವಿಶ್ವವಿದ್ಯಾಲಯಗಳು/ವೃತ್ತಿಪರ ತರಬೇತಿ ಸಂಸ್ಥೆಗಳ ಸುತ್ತಲಿನ 100-ಗಜ ತಂಬಾಕು ಮುಕ್ತ ವಲಯಗಳನ್ನು ಗುರುತಿಸಲು ಸಮುದಾಯ ಅಭಿಯಾನಗಳ ಪ್ರಾರಂಭ.
· ಟಿ.ಒ.ಎಫ್.ಇ.ಐ -ಅನುಸರಣೆಯ ಶಾಲೆಗಳು/ಕಾಲೇಜುಗಳು/ವಿಶ್ವವಿದ್ಯಾಲಯಗಳು/ವೃತ್ತಿಪರ ತರಬೇತಿ ಸಂಸ್ಥೆಗಳ ಗುರುತಿಸುವಿಕೆ ಮತ್ತು ನವೀನ ಜಾಗೃತಿ ಅಭಿಯಾನಗಳಿಗಾಗಿ ಸ್ಪರ್ಧೆಗಳು.
· MyGov ವೇದಿಕೆಯಲ್ಲಿ ಶೈಕ್ಷಣಿಕ ವೀಡಿಯೊಗಳ ಪ್ರಸರಣ ಮತ್ತು ವಿಶ್ವ ತಂಬಾಕು ರಹಿತ ದಿನದ ರಸಪ್ರಶ್ನೆ ಹಾಗು 'ಶಾಲಾ ಸವಾಲು: ತಂಬಾಕು ಮುಕ್ತ ಪೀಳಿಗೆಯತ್ತ' ದಂತಹ ಉಪಕ್ರಮಗಳಲ್ಲಿ ಭಾಗವಹಿಸುವಿಕೆ.
ಯುವಜನರಲ್ಲಿ ತಂಬಾಕು ಮುಕ್ತ ಜೀವನಶೈಲಿಯನ್ನು ಉತ್ತೇಜಿಸುವುದು ಸರ್ಕಾರದ 'ವಿಕಸಿತ ಭಾರತ್@2047' ಎಂಬ ಚಿಂತನಾ ದೃಷ್ಟಿಕೋನಕ್ಕೆ ಅನುಗುಣವಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ರಾಷ್ಟ್ರೀಯ ಗುರಿಯನ್ನು ಸಾಧಿಸಲು ಆರೋಗ್ಯಕರ, ಉತ್ತಮ ಮಾಹಿತಿಯುಕ್ತ ಮತ್ತು ಸಬಲೀಕೃತ ಯುವ ಜನಸಂಖ್ಯೆ ಅತ್ಯಗತ್ಯ. ಈ ಅಭಿಯಾನದ ಮೂಲಕ, ಸರ್ಕಾರವು ಶೈಕ್ಷಣಿಕವಾಗಿ ಮಾತ್ರವಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಬಲಿಷ್ಠರಾಗಿರುವ ಯುವಜನರನ್ನು ಪೋಷಿಸಲು ಪ್ರಯತ್ನಿಸುತ್ತದೆ, ಅವರು ಭಾರತದ ಸಾಮೂಹಿಕ ಸಮೃದ್ಧಿ ಮತ್ತು ಪ್ರಗತಿಯತ್ತ ಸಾಗಲು ಸಹಾಯ ಮಾಡುತ್ತದೆ.
*****
(Release ID: 2176557)
Visitor Counter : 4