ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಬಾಕಿ ಇರುವ ವಸ್ತುಗಳ ವಿಲೇವಾರಿಗಾಗಿ ವಿಶೇಷ ಅಭಿಯಾನ (ಎಸ್.ಸಿ.ಡಿ.ಪಿ.ಎಂ.) 5.0 ಇದರ ಅಡಿಯಲ್ಲಿ ಭಾರತದಾದ್ಯಂತ 11,100 ಜನೌಷಧಿ ಕೇಂದ್ರಗಳನ್ನು ಬಾಹ್ಯ(ಹೊರಾಂಗಣ) ಪ್ರದೇಶಗಳನ್ನು  ಶುಚಿಗೊಳಿಸುವ ವಿಶೇಷ ತಾಣಗಳಾಗಿ ಗುರುತಿಸಲಾಗಿದೆ


ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿ.ಎಂ.ಬಿ.ಜೆ.ಪಿ) ಇದರ ಅಡಿಯಲ್ಲಿ ಸ್ವಚ್ಛತಾ ಮತ್ತು ನಾಗರಿಕ ಕೇಂದ್ರಿತ ಆಡಳಿತವನ್ನು ಉತ್ತೇಜಿಸಲು ಪಿಎಂಬಿಐ ನೇತೃತ್ವ ವಹಿಸಿದೆ

ಉದ್ದೇಶಿತ ಕ್ರಮಗಳಲ್ಲಿ ಬಾಕಿ ಇರುವ ವಸ್ತುಗಳ ತೆರವು, ಇ-ತ್ಯಾಜ್ಯ ವಿಲೇವಾರಿ ಮತ್ತು ಉತ್ಪಾದಕ ಬಳಕೆಗಾಗಿ ನಿಷ್ಕ್ರಿಯ ಕಚೇರಿ ಸ್ಥಳಗಳನ್ನು ಪರಿವರ್ತಿಸುವುದು ಈ ಪ್ರಕ್ರಿಯೆಯಲ್ಲಿ ಸೇರಿವೆ

Posted On: 06 OCT 2025 5:06PM by PIB Bengaluru

ಬಾಕಿ ಇರುವ ವಸ್ತುಗಳ ವಿಲೇವಾರಿಗಾಗಿ ವಿಶೇಷ ಅಭಿಯಾನ (ಎಸ್.ಸಿ.ಡಿ.ಪಿ.ಎಂ.) 5.0 ಇದರ ಭಾಗವಾಗಿ, ಔಷಧ ಇಲಾಖೆ (ಡಿಒಪಿ) ಗುರಿ ಗುರುತಿಸುವಿಕೆಯ ಪೂರ್ವಸಿದ್ಧತಾ ಹಂತದಲ್ಲಿ ದೇಶಾದ್ಯಂತ 11,100 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಹೊರಾಂಗಣ ಶುಚಿಗೊಳಿಸುವ ತಾಣಗಳಾಗಿ ಗುರುತಿಸಿದೆ, ಇದು ಸೆಪ್ಟೆಂಬರ್ 30, 2025 ರಂದು ಮುಕ್ತಾಯಗೊಳ್ಳುತ್ತದೆ.

ಇಲಾಖೆಯ ಮಾರ್ಗದರ್ಶನದಲ್ಲಿ, ಅದರ ವ್ಯಾಪ್ತಿಯಲ್ಲಿರುವ ಎಲ್ಲಾ ಸಂಸ್ಥೆಗಳು ಸ್ವಚ್ಛತೆಯ ಮೇಲೆ ಕೇಂದ್ರೀಕರಿಸುವ ನಿರ್ದಿಷ್ಟ ಗುರಿಗಳನ್ನು ಅಳವಡಿಸಿಕೊಂಡಿವೆ, ಇದು ಅಭಿಯಾನದ ಪ್ರಮುಖ ನಿಯತಾಂಕವಾಗಿ ಉಳಿದಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿ.ಎಂ.ಬಿ.ಜೆ.ಪಿ) ಅನ್ನು ಕಾರ್ಯಗತಗೊಳಿಸುವ ಭಾರತೀಯ ಔಷಧ ಮತ್ತು ವೈದ್ಯಕೀಯ ಸಾಧನಗಳ ಬ್ಯೂರೋ (ಪಿ.ಎಂ.ಬಿ.ಜೆ.ಪಿ), ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಡಿ.ಎ.ಆರ್.ಪಿ.ಜಿ) ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪ್ರಮುಖ ಸ್ವಚ್ಛತಾ ಉಪಕ್ರಮವನ್ನು ಯೋಜಿಸಿದೆ ಮತ್ತು ಈ ಅಭಿಯಾನದ ಅಡಿಯಲ್ಲಿ 11,000 ಜನೌಷಧಿ ಕೇಂದ್ರಗಳು ಒಳಗೊಳ್ಳುತ್ತವೆ.

ಸ್ವಚ್ಛತಾ ಅಭಿಯಾನದ ಜೊತೆಗೆ, ಇಲಾಖೆ ಮತ್ತು ಅದರ ಸಂಸ್ಥೆಗಳು ಸಂಸದ ಮತ್ತು ಪ್ರಧಾನಮಂತ್ರಿ ಕಚೇರಿ ಉಲ್ಲೇಖಗಳು, ರಾಜ್ಯ ಸರ್ಕಾರದ ಸಂವಹನಗಳು, ಸಂಸದೀಯ ಭರವಸೆಗಳು, ಅಂತರ-ಸಚಿವಾಲಯ ಉಲ್ಲೇಖಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು ಮತ್ತು ಮೇಲ್ಮನವಿಗಳು ಸೇರಿದಂತೆ ವಿವಿಧ ವರ್ಗಗಳ ಬಾಕಿ ಇರುವ ವಿಷಯಗಳ ವಿಲೇವಾರಿಗೆ ಕೇಂದ್ರೀಕೃತ ಪ್ರಯತ್ನಗಳನ್ನು ಕೈಗೊಳ್ಳುತ್ತಿವೆ.

ಭೌತಿಕ ವಸ್ತು , ಕಡತ ಮತ್ತು ಎಲೆಕ್ಟ್ರಾನಿಕ್ ಕಡತಗಳನ್ನು ಪರಿಶೀಲಿಸಲು ಮತ್ತು ಮುಚ್ಚಲು , ತೆಗೆದು ಹಾಕಲು ಮತ್ತು ಆ ಮೂಲಕ ಲಭ್ಯವಾಗುವ ಹೆಚ್ಚುವರಿ ನಿಷ್ಕ್ರಿಯ ಪ್ರದೇಶಗಳನ್ನು ಕ್ಯಾಂಟೀನ್ಗಳು, ಒಳಾಂಗಣ ಮನರಂಜನಾ ವಲಯಗಳು ಮತ್ತು ಕ್ರೆಚ್ ಗಳಂತಹ ಉತ್ಪಾದಕ ಸೌಲಭ್ಯಗಳಾಗಿ ಪರಿವರ್ತಿಸುವ ಮೂಲಕ ಕೆಲಸದ ಸ್ಥಳವನ್ನು ಅತ್ಯುತ್ತಮವಾಗಿಸಲು ಇಲಾಖೆಯ ಸಂಸ್ಥೆಗಳು ಪ್ರಯತ್ನಗಳನ್ನು ಮಾಡುತ್ತಿವೆ - ಇದು ಸುಧಾರಿತ ಕೆಲಸದ ದಕ್ಷತೆ ಮತ್ತು ಉದ್ಯೋಗಿ ಕಲ್ಯಾಣಕ್ಕೆ ಕೊಡುಗೆ ನೀಡುತ್ತದೆ. ಗಮನಾರ್ಹವಾಗಿ, ಎಸ್.ಸಿ.ಡಿ.ಪಿ.ಎಂ. 5.0 ಅಡಿಯಲ್ಲಿ 15,000 ಚದರ ಅಡಿ ಕಚೇರಿ ಸ್ಥಳವನ್ನು ಮರುಪಡೆಯಲು ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್) ಯೋಜನೆಯನ್ನು ಅಭಿವೃದ್ಧಿಪಡಿಸಿದೆ.

ಇದಲ್ಲದೆ, ಇ-ತ್ಯಾಜ್ಯ ಮತ್ತು ಸ್ಕ್ರ್ಯಾಪ್ ವಸ್ತುಗಳ ಗುರುತಿಸುವಿಕೆ ಮತ್ತು ವಿಲೇವಾರಿ ಪ್ರಗತಿಯಲ್ಲಿದ್ದು, ಈ ವ್ಯಾಯಾಮದ ಮೂಲಕ ಅಂದಾಜು ₹16 ಲಕ್ಷ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ.

ತನ್ನ ಉಪ ಸಂಸ್ಥೆಗಳಾದ್ಯಂತ, ವ್ಯವಹಾರವನ್ನು ಸುಲಭಗೊಳಿಸುವುದು, ನಾಗರಿಕ-ಕೇಂದ್ರಿತ ಆಡಳಿತ ಮತ್ತು ಪರಿಸರ ಸುಸ್ಥಿರ ಮತ್ತು ಪರಿಸರ ಸ್ನೇಹಿ ಉಪಕ್ರಮಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ವಿವಿಧ ವರ್ಗಗಳ ಅಡಿಯಲ್ಲಿ ಇಲಾಖೆಯು 12 ಅತ್ಯುತ್ತಮ ಶಿಷ್ಟಾಚಾರ - ಅಭ್ಯಾಸಗಳನ್ನು ಅಳವಡಿಸಿಗೊಂಡಿದೆ.

****


(Release ID: 2175529) Visitor Counter : 6
Read this release in: English , Urdu , Hindi