ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಜಾಗತಿಕ ಆಹಾರ ಭಾರತ 2025 ಸಮ್ಮೇಳನವು ₹1.02 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಬದ್ಧತೆಗಳನ್ನು ಪಡೆದುಕೊಂಡಿದೆ


ಭಾರತದ ಆಹಾರ ಸಂಸ್ಕರಣಾ ಚೌಕಟ್ಟನ್ನು ಸಂಪೂರ್ಣ ಪರಿವರ್ತಿಸಲು ಪ್ರಮುಖ ಜಾಗತಿಕ ಮತ್ತು ದೇಶೀಯ ಸಂಸ್ಥೆಗಳೊಂದಿಗೆ ತಿಳುವಳಿಕೆ ಒಡಂಬಡಿಕೆ ಏರ್ಪಡಿಸಲಾಗಿದೆ

Posted On: 28 SEP 2025 4:00PM by PIB Bengaluru

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಆಯೋಜಿಸಿದ ಜಾಗತಿಕ ಆಹಾರ ಭಾರತ(ವರ್ಲ್ಡ್ ಫುಡ್ ಇಂಡಿಯಾ) 2025, ಅಭೂತಪೂರ್ವ ಪ್ರಮಾಣದ ಹೂಡಿಕೆ ಬದ್ಧತೆಗಳೊಂದಿಗೆ ಐತಿಹಾಸಿಕವಾಗಿ ಮುಕ್ತಾಯಗೊಂಡಿತು. ನಾಲ್ಕು ದಿನಗಳ ಈ ಕಾರ್ಯಕ್ರಮದ ಅವಧಿಯಲ್ಲಿ, 26 ಪ್ರಮುಖ ದೇಶೀಯ ಮತ್ತು ಜಾಗತಿಕ ಕಂಪನಿಗಳು ಒಟ್ಟು ₹1,02,046.89 ಕೋಟಿ ಮೌಲ್ಯದ ತಿಳುವಳಿಕೆ ಒಡಂಬಡಿಕೆ ಪತ್ರಗಳಿಗೆ (ಎಂ.ಒ.ಯು.ಗಳು) ಸಹಿ ಹಾಕಿದವು, ಇದು ಭಾರತದ ಆಹಾರ ಸಂಸ್ಕರಣಾ ವಲಯದಲ್ಲಿ ಅತಿದೊಡ್ಡ ಹೂಡಿಕೆ ಘೋಷಣೆಗಳಲ್ಲಿ ಒಂದಾಗಿದೆ. ಈ ಒಪ್ಪಂದಗಳು 64,000 ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗವನ್ನು ಸೃಷ್ಟಿಸುವ ಮತ್ತು 10 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಪರೋಕ್ಷ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಇದು ಭಾರತವನ್ನು ಆಹಾರ ಸಂಸ್ಕರಣೆಯ ಜಾಗತಿಕ ಕೇಂದ್ರವಾಗಿಸುವ ಕೇಂದ್ರ ಸರ್ಕಾರದ ದೃಷ್ಟಿಕೋನವನ್ನು ಇನ್ನಷ್ಟು ಬಲಪಡಿಸುತ್ತದೆ.

ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ದಿ ಕೋಕಾ-ಕೋಲಾ ಸಿಸ್ಟಮ್ ಇನ್ ಇಂಡಿಯಾ, ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಅಮುಲ್), ಫೇರ್ ಎಕ್ಸ್‌ಪೋರ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಲುಲು ಗ್ರೂಪ್), ನೆಸ್ಲೆ ಇಂಡಿಯಾ ಲಿಮಿಟೆಡ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ಕಾರ್ಲ್ಸ್‌ಬರ್ಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬಿ.ಎಲ್. ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್, ಎಬಿಐಎಸ್ ಫುಡ್ಸ್ & ಪ್ರೋಟೀನ್ಸ್ ಪ್ರೈವೇಟ್ ಲಿಮಿಟೆಡ್, ಎಸಿಇ ಇಂಟರ್ನ್ಯಾಷನಲ್ ಲಿಮಿಟೆಡ್, ಪತಂಜಲಿ ಫುಡ್ಸ್ ಲಿಮಿಟೆಡ್, ಗೋದ್ರೇಜ್ ಆಗ್ರೋವೆಟ್ ಲಿಮಿಟೆಡ್, ಅಗ್ರಿಸ್ಟೋ ಮಾಸಾ ಪ್ರೈವೇಟ್ ಲಿಮಿಟೆಡ್, ತಿವಾನಾ ನ್ಯೂಟ್ರಿಷನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್, ಹಲ್ದಿರಾಮ್ ಸ್ನ್ಯಾಕ್ಸ್ ಫುಡ್ ಪ್ರೈವೇಟ್ ಲಿಮಿಟೆಡ್, ಇಂಡಿಯನ್ ಪೌಲ್ಟ್ರಿ ಅಲೈಯನ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀಮತಿ ಬೆಕ್ಟರ್ಸ್ ಫುಡ್ ಸ್ಪೆಷಾಲಿಟೀಸ್ ಲಿಮಿಟೆಡ್, ಡಾಬರ್ ಇಂಡಿಯಾ ಲಿಮಿಟೆಡ್, ಅಲ್ಲಾನಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ಓಲಮ್ ಫುಡ್ ಇನ್‌ಗ್ರಿಡಿಯೇಂಟ್ಸ್, ಎಬಿ ಇನ್‌ಬೆವ್, ಕ್ರೆಮಿಕಾ ಫುಡ್ ಪಾರ್ಕ್ ಪ್ರೈವೇಟ್ ಲಿಮಿಟೆಡ್, ಡೈರಿ ಕ್ರಾಫ್ಟ್, ಸಂಡೆಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್, ನಾಸೊ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬ್ಲೂಪೈನ್ ಫುಡ್ಸ್ ಸೇರಿದಂತೆ ಈ ವಲಯದ ಕೆಲವು ಪ್ರಮುಖ ಸಂಸ್ಥೆಗಳು ಈ ಒಪ್ಪಂದಗಳಿಗೆ ಸಹಿ ಹಾಕಿದವು.  ಈ ವ್ಯವಹಾರ ಒಪ್ಪಂದ ಬದ್ಧತೆಗಳು ಡೈರಿ, ಮಾಂಸ ಮತ್ತು ಕೋಳಿ, ಪ್ಯಾಕ್ ಮಾಡಿದ ಆಹಾರಗಳು, ಆಲ್ಕೋಹಾಲ್ ಮತ್ತು ಆಲ್ಕೋಹಾಲ್ ರಹಿತ ಪಾನೀಯಗಳು, ಮಸಾಲೆಗಳು ಮತ್ತು ಕಾಂಡಿಮೆಂಟ್ಸ್, ಮಿಠಾಯಿ, ಖಾದ್ಯ ಎಣ್ಣೆಗಳು, ಹಣ್ಣುಗಳು ಮತ್ತು ತರಕಾರಿಗಳು ಮತ್ತು ತಿನ್ನಲು ಸಿದ್ಧ ಉತ್ಪನ್ನಗಳಂತಹ ವೈವಿಧ್ಯಮಯ ವಿಭಾಗಗಳಲ್ಲಿ ವ್ಯಾಪಿಸಿವೆ.

ಈ ಪಾಲುದಾರಿಕೆಗಳ ಗಮನಾರ್ಹ ಅಂಶವೆಂದರೆ ಅವುಗಳ ಅಖಿಲ ಭಾರತ ಮಟ್ಟದ ವ್ಯಾಪ್ತಿ ಗುರುತು ಹೊಂದಿದೆ ಹಾಗೂ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಂಜಾಬ್, ಬಿಹಾರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್‌ ಗಢ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೂಡಿಕೆಗಳು ಹರಡಿವೆ. ಈ ವಿಶಾಲ ಭೌಗೋಳಿಕ ವಿತರಣೆಯು ಈ ಹೂಡಿಕೆಗಳ ಪ್ರಯೋಜನಗಳನ್ನು ಸಮಾನವಾಗಿ ಹಂಚಿಕೊಳ್ಳುವುದನ್ನು ಖಚಿತಪಡಿಸುತ್ತದೆ, ಇದು ದೇಶದ ವಿವಿಧ ಪ್ರದೇಶಗಳಲ್ಲಿ ರೈತರು, ಉದ್ಯಮಿಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಅವಕಾಶಗಳನ್ನು ತರುತ್ತದೆ.

ರಾಷ್ಟ್ರೀಯ ಹೂಡಿಕೆ ಪ್ರಚಾರ ಮತ್ತು ಸೌಲಭ್ಯ ಪಾಲುದಾರರಾದ ಇನ್ವೆಸ್ಟ್ ಇಂಡಿಯಾ, ಈ ಒಪ್ಪಂದಗಳಿಗೆ ಸಹಿ ಹಾಕುವಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯಕ್ಕೆ ಸಹಾಯ ಮಾಡಿತು.

ವರ್ಲ್ಡ್ ಫುಡ್ ಇಂಡಿಯಾ 2025 ದಾಖಲೆಯ ಹೂಡಿಕೆ ಬದ್ಧತೆಗಳನ್ನು ಆಕರ್ಷಿಸಿದೆ ಮಾತ್ರವಲ್ಲದೆ ಆಹಾರ ಸಂಸ್ಕರಣೆಗೆ ವಿಶ್ವಾಸಾರ್ಹ ಜಾಗತಿಕ ತಾಣವಾಗಿ ಭಾರತದ ಸ್ಥಾನವನ್ನು ಪುನರುಚ್ಚರಿಸಿದೆ. ಈ ಕಾರ್ಯಕ್ರಮವು ಸುಸ್ಥಿರ ಬೆಳವಣಿಗೆ, ನಾವೀನ್ಯತೆ ಮತ್ತು ಅಂತಾರಾಷ್ಟ್ರೀಯ ಸಹಯೋಗಕ್ಕೆ ಬಲವಾದ ಅಡಿಪಾಯವನ್ನು ಹಾಕಿದೆ, ಜಾಗತಿಕ ಆಹಾರ ವ್ಯವಸ್ಥೆಗಳ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ. ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು , ಇನ್ವೆಸ್ಟ್ ಇಂಡಿಯಾ ಉಪಕ್ರಮ ಜೊತೆಗಿನ ಪಾಲುದಾರಿಕೆಯಲ್ಲಿ, ಈ ಹೂಡಿಕೆಗಳನ್ನು ಸುಗಮಗೊಳಿಸಲು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಉದ್ಯಮದ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ.


(Release ID: 2172474) Visitor Counter : 16