ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 25 SEP 2025 8:30AM by PIB Bengaluru

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತದ ಸೈದ್ಧಾಂತಿಕ ಮತ್ತು ಅಭಿವೃದ್ಧಿಯ ಪ್ರಯಾಣಕ್ಕೆ ಅವರ ಆಳವಾದ ಕೊಡುಗೆಗಳನ್ನು ಸ್ಮರಿಸಿ ಅವರಿಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದರು.

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯ - ಸರದಿಯಲ್ಲಿರುವ ಕೆಳಸ್ತರದ ವ್ಯಕ್ತಿಯನ್ನು ಕೂಡಾ ಮೇಲಕ್ಕೆತ್ತುವ - ಅವರ ದೃಷ್ಟಿಕೋನವು ಭಾರತದ ಅಭಿವೃದ್ಧಿ ಮಾದರಿಗೆ ಪ್ರೇರೇಪಣೆಯಾಗಿದೆ ಎಂದು ಪ್ರಧಾನಿಯವರು ಒತ್ತಿ ಹೇಳಿದರು. ಈ ತತ್ವಗಳು ಸರ್ಕಾರದ ಸಮಗ್ರ ಬೆಳವಣಿಗೆ ಮತ್ತು ರಾಷ್ಟ್ರ ನಿರ್ಮಾಣದ ವಿಧಾನದಲ್ಲಿ ಆಳವಾಗಿ ಬೇರೂರಿವೆ ಎಂದು ಅವರು ಹೇಳಿದರು.

Xನ ಪೋಸ್ಟ್‌ ನಲ್ಲಿ ಶ್ರೀ ಮೋದಿಯವರು:

"ಭಾರತ ಮಾತೆಯ ಮಹಾನ್ ಪುತ್ರ ಮತ್ತು ಸಮಗ್ರ ಮಾನವತಾವಾದದ ಪ್ರವರ್ತಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ನನ್ನ ಹೃತ್ಪೂರ್ವಕ ನಮನಗಳು. ದೇಶಕ್ಕೆ ಸಮೃದ್ಧಿಯ ಹಾದಿಯನ್ನು ತೋರಿಸಿದ ಅವರ ರಾಷ್ಟ್ರೀಯತಾವಾದಿ ವಿಚಾರಗಳು ಮತ್ತು ಅಂತ್ಯೋದಯದ ತತ್ವಗಳು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಅಪಾರ ಪ್ರಯೋಜನಕಾರಿಯಾಗಿವೆ" ಎಂದು ಹೇಳಿದ್ದಾರೆ.

 

 

*****


(Release ID: 2171052) Visitor Counter : 5