ರೈಲ್ವೇ ಸಚಿವಾಲಯ
ರೈಲ್ವೆ ಸಿಬ್ಬಂದಿಗೆ 78 ದಿನಗಳ ಉತ್ಪಾದಕತೆ ಸಂಯೋಜಿತ ಬೋನಸ್‌ಗೆ ಕೇಂದ್ರ ಸಂಪುಟ ಅನುಮೋದನೆ
प्रविष्टि तिथि:
24 SEP 2025 3:11PM by PIB Bengaluru
ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 10,91,146 ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಉತ್ಪಾದಕತೆ ಸಂಯೋಜಿತ ಬೋನಸ್ (ಪಿಎಲ್‌ಬಿ) 1865.68 ಕೋಟಿ ರೂಪಾಯಿ ಪಾವತಿಗೆ ಅನುಮೋದನೆ ನೀಡಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ದುರ್ಗಾ ಪೂಜೆ ಅಥವಾ ದಸರಾ ರಜಾದಿನಗಳಿಗೆ ಮುನ್ನ ಅರ್ಹ ರೈಲ್ವೆ ಸಿಬ್ಬಂದಿಗೆ ಪಿಎಲ್‌ಬಿ ಪಾವತಿಯನ್ನು ಮಾಡಲಾಗುವುದು. ಈ ವರ್ಷವೂ ಸಹ ಸುಮಾರು 10.91 ಲಕ್ಷ ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನವಾದ ಪಿಎಲ್‌ಬಿ ಮೊತ್ತವನ್ನು ಪಾವತಿಸಲಾಗುತ್ತಿದೆ. ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ರೈಲ್ವೆ ನೌಕರರು ಮತ್ತಷ್ಟು ಉತ್ತೇಜಿತರಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಪಿಎಲ್‌ಬಿ ಪಾವತಿಯು ಪ್ರೋತ್ಸಾಹಕ ಧನವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರತಿ ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳ ವೇತನಕ್ಕೆ ಸಮಾನವಾದ ಪಿಎಲ್‌ಬಿಯ ಗರಿಷ್ಠ ಪಾವತಿಸಬೇಕಾದ ಮೊತ್ತ 17,951/- ರೂಪಾಯಿ ಆಗಿದೆ. ಈ ಮೊತ್ತವನ್ನು ರೈಲ್ವೆ ಸಿಬ್ಬಂದಿಗಳಾದ ಹಳಿ ನಿರ್ವಹಣಾಕಾರರು, ಲೋಕೋ ಪೈಲಟ್‌ಗಳು, ರೈಲು ವ್ಯವಸ್ಥಾಪಕರು (ಗಾರ್ಡ್), ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ಪಾಯಿಂಟ್‌ಮನ್, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಗ್ರೂಪ್ 'ಸಿ' ಸಿಬ್ಬಂದಿಯ ವಿವಿಧ ವರ್ಗಗಳಿಗೆ ಪಾವತಿಸಲಾಗುವುದು.
2024-25ನೇ ವರ್ಷದಲ್ಲಿ ರೈಲ್ವೆಯ ಸಾಧನೆ ತುಂಬಾ ಅತ್ಯುತ್ತಮವಾಗಿದೆ. ರೈಲ್ವೆಗಳು 1614.90 ಮಿಲಿಯನ್ ಟನ್‌ಗಳ ದಾಖಲೆಯ ಸರಕುಗಳನ್ನು ತುಂಬಿರುವುದಲ್ಲದೆ ಸುಮಾರು 7.3 ಬಿಲಿಯನ್ ಪ್ರಯಾಣಿಕರನ್ನು ಸಾಗಾಣೆ ಮಾಡಿದೆ.
*****
(रिलीज़ आईडी: 2170725)
आगंतुक पटल : 58