ಕೃಷಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್


ಪ್ರಧಾನಮಂತ್ರಿ ಅವರ 75ನೇ ಹುಟ್ಟುಹಬ್ಬದಂದು, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೊಸದಿಲ್ಲಿಯ ಪುಸಾ ಕ್ಯಾಂಪಸ್‌ನಲ್ಲಿ 75 ಸಸಿಗಳನ್ನು ನೆಟ್ಟರು

ಪ್ರಧಾನಮಂತ್ರಿ ನರೇಂದ್ರ ಮೋದಿ ಆಧುನಿಕ ಭಾರತದ ಶಿಲ್ಪಿ, ನಿರಂತರ ಕ್ರಮ ಅವರ ಮಾರ್ಗದರ್ಶಿ ತತ್ವ ಎಂದು ಕೇಂದ್ರ ಸಚಿವರು

ಪ್ರಧಾನಮಂತ್ರಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಭಾರತದ ಜಾಗತಿಕ ಪ್ರತಿಷ್ಠೆ ಏರಿದೆ ಮತ್ತು ವಿಶ್ವದ ಗ್ರಹಿಕೆ ಬದಲಾಗಿದೆ ಎಂದು ಶ್ರೀ ಚೌಹಾಣ್

Posted On: 17 SEP 2025 5:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹೊಸದಿಲ್ಲಿಯ ಪುಸಾ ಕ್ಯಾಂಪಸ್‌ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ಪುಸಾ ಕ್ಯಾಂಪಸ್ಸಿನಲ್ಲಿ 75 ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಶ್ರೀ ಚೌಹಾಣ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿಯಾಗಿ ಶ್ರೀ ನರೇಂದ್ರ ಮೋದಿ ಅವರು ಸಮೃದ್ಧ, ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ರೀ ಚೌಹಾಣ್ ಹೇಳಿದರು. ಅವರ ನಾಯಕತ್ವದಲ್ಲಿ, ಭಾರತದ ಪ್ರತಿಷ್ಠೆಯು ಜಗತ್ತಿನಾದ್ಯಂತ ಹಲವು ಪಟ್ಟು ಹೆಚ್ಚಾಗಿದೆ ಮತ್ತು ದೇಶದ ಬಗ್ಗೆ ಪ್ರಪಂಚದ ದೃಷ್ಟಿಕೋನವು ಪರಿವರ್ತನಾತ್ಮಕ ಬದಲಾವಣೆಗೆ ಒಳಗಾಗಿದೆ. ಶ್ರೀ ನರೇಂದ್ರ ಮೋದಿ ಅವರು ತಮ್ಮ ನಿರಂತರ ಕ್ರಮವನ್ನು ಮಾರ್ಗದರ್ಶಿ ತತ್ವವಾಗಿಟ್ಟುಕೊಂಡ ಆಧುನಿಕ ಭಾರತದ ಶಿಲ್ಪಿ ಎಂದೂ ಚೌಹಾಣ್ ಬಣ್ಣಿಸಿದರು.

ಪ್ರಧಾನಮಂತ್ರಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಅನೇಕ ಸ್ಥಳಗಳಲ್ಲಿ ರಕ್ತದಾನ ಶಿಬಿರಗಳು ನಡೆಯುತ್ತಿವೆ, ಆಸ್ಪತ್ರೆಗಳಲ್ಲಿ ಸ್ವಚ್ಛತಾ ಅಭಿಯಾನಗಳು ನಡೆಯುತ್ತಿವೆ ಜೊತೆಗೆ ಸಾಮೂಹಿಕ ಗಿಡ ನೆಡುವ ಅಭಿಯಾನಗಳು ಸಹ ನಡೆಯುತ್ತಿವೆ ಎಂದರು.

ಪರಿಸರವು ಸದಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಹೃದಯಕ್ಕೆ ಹತ್ತಿರವಾದ ವಿಷಯವಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಪುನರುಚ್ಚರಿಸಿದರು. “ಏಕ್ ಪೆಡ್ ಮಾ ಕೆ ನಾಮ್” ಅಭಿಯಾನದ ಮೂಲಕ, ಪ್ರಧಾನ ಮಂತ್ರಿಗಳು ದೇಶಾದ್ಯಂತ ಕೋಟ್ಯಂತರ ಗಿಡಗಳನ್ನು ನೆಡಲು ಸ್ಫೂರ್ತಿ ನೀಡಿದರು. ಅದೇ ಉತ್ಸಾಹದಲ್ಲಿ, ಅವರ ಜನ್ಮದಿನದಂದು, ಭಾರತೀಯ ಕೃಷಿಯ ಬೆಳವಣಿಗೆಗೆ ಯಾವಾಗಲೂ ಪ್ರಮುಖ ಕೇಂದ್ರವಾಗಿರುವ ಹೊಸದಿಲ್ಲಿಯ ಪುಸಾದ ಐಸಿಎಆರ್‌ನಲ್ಲಿ ಸಸಿಗಳನ್ನು ನೆಡಲು ನಿರ್ಧರಿಸಲಾಯಿತು. ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಐಸಿಎಆರ್ ಮಹಾನಿರ್ದೇಶಕರು ಇಲ್ಲಿ ಗಿಡ ನೆಡುವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದೂ ಅವರು ಹೇಳಿದರು.

ಪುಸಾದ ಐಸಿಎಆರ್ ನಿಂದ ಗಿಡ ನೆಡುವ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ತರುವಾಯ, ಐಸಿಎಆರ್ ಸಂಸ್ಥೆಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ಸೇರಿದಂತೆ ಎಲ್ಲಾ 113 ಸ್ಥಳಗಳಲ್ಲಿ ಗಿಡಗಳನ್ನು ನೆಡಲಾಗುವುದು. ಇದರ ಜೊತೆಗೆ, ದೇಶದ ಇತರ ಭಾಗಗಳಲ್ಲಿರುವ ಜನರು ಅಭಿಯಾನದಲ್ಲಿ ಭಾಗವಹಿಸಲು ಪ್ರೇರೇಪಿಸುವ ಪ್ರಯತ್ನಗಳನ್ನು ಮಾಡಲಾಗುವುದು  ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ  ದೇಶವನ್ನು ಮುನ್ನಡೆಸಲು ದೀರ್ಘಾಯುಷ್ಯವಿರಲಿ ಎಂದೂ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಹಾರೈಸಿದರು. ಪ್ರಧಾನಮಂತ್ರಿ ಅವರು ಭಾರತವನ್ನು ಜಾಗತಿಕ ಸಹೋದರತ್ವದ ಸಂಕೇತವಾಗಿ ಇರಿಸಿದ್ದಾರೆ ಮತ್ತು ವಸುಧೈವ ಕುಟುಂಬಕಂ - ಜಗತ್ತು ಒಂದು ಕುಟುಂಬ - ಎಂಬ ಪ್ರಾಚೀನ ಭಾರತೀಯ ಆದರ್ಶಕ್ಕೆ ಆಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

 

*****


(Release ID: 2167886) Visitor Counter : 2