ನೀತಿ ಆಯೋಗ
ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಶ್ರೀ ಅಶ್ವಿನಿ ವೈಷ್ಣವ್ ಅವರು ನೀತಿ ಆಯೋಗದ ' ವಿಕಸಿತ ಭಾರತ ಮಾರ್ಗಸೂಚಿಗಾಗಿ ಕೃತಕ ಬುದ್ಧಿಮತ್ತೆ (ಎ.ಐ.) ' ಮತ್ತು 'ಫ್ರಾಂಟಿಯರ್ ಟೆಕ್ ರೆಪೊಸಿಟರಿ'ಯನ್ನು ಉದ್ಘಾಟಿಸಿದರು
2047ರ ವೇಳೆಗೆ ಭಾರತದ ವಿಕಸಿತ ಭಾರತ ಪರಿವರ್ತನೆಯನ್ನು ವೇಗಗೊಳಿಸಲು ಫ್ರಾಂಟಿಯರ್ ಟೆಕ್ ಹಬ್ ಅಡಿಯಲ್ಲಿ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ
Posted On:
15 SEP 2025 6:26PM by PIB Bengaluru
ನೀತಿ ಆಯೋಗ ಇಂದು ಎರಡು ಪರಿವರ್ತನಾ ಉಪಕ್ರಮಗಳನ್ನು ಪ್ರಾರಂಭಿಸಿತು, ಅವು ವಿಕಸಿತ ಭಾರತಮಾರ್ಗಸೂಚಿಗಾಗಿ ಕೃತಕ ಬುದ್ಧಿಮತೆ (AI): ವೇಗವರ್ಧಿತ ಆರ್ಥಿಕ ಬೆಳವಣಿಗೆಗೆ ಅವಕಾಶ ಮತ್ತು ಅದರ ಫ್ರಾಂಟಿಯರ್ ಟೆಕ್ ಹಬ್ ಅಡಿಯಲ್ಲಿ ನೀತಿ ಫ್ರಾಂಟಿಯರ್ ಟೆಕ್ ರೆಪೊಸಿಟರಿಗಳು ಕಾರ್ಯಾರಂಭಗೊಂಡವು. ಈ ಮಾರ್ಗಸೂಚಿಯನ್ನು ಹಣಕಾಸು ಮತ್ತು ಸಾಂಸ್ಥಿಕ (ಕಾರ್ಪೊರೇಟ್) ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಸುಮನ್ ಬೆರಿ, ನೀತಿ ಆಯೋಗದ ಸಿಇಒ ಶ್ರೀ ಬಿ.ವಿ.ಆರ್. ಸುಬ್ರಹ್ಮಣ್ಯಂ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಅವರು ಬಿಡುಗಡೆ ಮಾಡಿದರು.
ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಅಭಿವೃದ್ಧಿಯನ್ನು ತರಲು ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಕೃತಕ ಬುದ್ಧಿಮತ್ತೆ (ಎ.ಐ.-AI) ನೆರವಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರಲ್ಲದೆ ತಂತ್ರಜ್ಞಾನ ನಾವೀನ್ಯತೆಯಲ್ಲಿ ಸಹಯೋಗದ ಪರಿಸರ ವ್ಯವಸ್ಥೆಗಳ ಮಹತ್ವವನ್ನು ಎತ್ತಿ ತೋರಿಸಿದರು. ನೀತಿ ಆಯೋಗದ ಮುಂಚೂಣಿ ಟೆಕ್ ಹಬ್ ಜೇನುಗೂಡಿನಂತಿದ್ದು, ಸರ್ಕಾರ, ಕೈಗಾರಿಕೆ ಮತ್ತು ನಾವೀನ್ಯಕಾರರನ್ನು ಒಂದೇ ಪರಿಸರ ವ್ಯವಸ್ಥೆಗೆ ತರುತ್ತದೆ, ಆಲೋಚನೆಗಳನ್ನು ಪರಿಣಾಮದತ್ತ ಕೊಂಡೊಯ್ಯಲು ವೇಗವರ್ಧಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಮುಂಚೂಣಿ ತಂತ್ರಜ್ಞಾನಗಳ ರಂಗದಲ್ಲಿ ಭಾರತ ಹಿಂದೆ ಇರಲು ಸಾಧ್ಯವಿಲ್ಲ; ಭಾರತವು ತನ್ನ ನಾಯಕತ್ವವನ್ನು ಗುರಿಯಾಗಿಸಿಕೊಂಡು ಮುಂದುವರಿಯಬೇಕು ಎಂದರು.
ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಕೃತಕ ಬುದ್ಧಿಮತ್ತೆಯು ನಾವು ಕೆಲಸ ಮಾಡುವ ಮತ್ತು ಬದುಕುವ ವಿಧಾನವನ್ನು ಮೂಲಭೂತವಾಗಿ ಬದಲಾಯಿಸಲಿದೆ ಎಂದು ಹೇಳಿದರು. ಇಂದಿನ ದೊಡ್ಡ ಬದಲಾವಣೆಯೆಂದರೆ, ನಮ್ಮ ಯುವಜನರಲ್ಲಿ ನಾವು ವಿಕ್ಷಿತ್ ಭಾರತದ ಕನಸು ಕಾಣಬಹುದು ಎಂಬ ವಿಶ್ವಾಸ ಮೂಡಿರುವುದು ಎಂಬುದರತ್ತ ಅವರು ಬೆಟ್ಟು ಮಾಡಿದರು. ಇಂದಿನ ಬೆಳವಣಿಗೆಯು ದೃಢವಾಗಿದೆ, ಎಲ್ಲರನ್ನೂ ಒಳಗೊಳ್ಳುತ್ತದೆ ಮತ್ತು ತಂತ್ರಜ್ಞಾನದಿಂದ ಚಾಲಿತವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಈ ಮಾರ್ಗಸೂಚಿಯು ಎ.ಐ. (AI) ನ ಭರವಸೆಯನ್ನು ಫಲಿತಾಂಶಗಳಾಗಿ ಪರಿವರ್ತಿಸಲು ಪ್ರಾಯೋಗಿಕ ಕ್ರಿಯಾ ಯೋಜನೆಯನ್ನು ರೂಪಿಸುತ್ತದೆ, ಇದು ಎರಡು ಪ್ರಮುಖ ಸನ್ನೆಕೋಲುಗಳನ್ನು ಎತ್ತಿ ತೋರಿಸುತ್ತದೆ: ಅವುಗಳೆಂದರೆ (i) ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಕೈಗಾರಿಕೆಗಳಲ್ಲಿ ಎ.ಐ. ಅಳವಡಿಕೆಯನ್ನು ವೇಗಗೊಳಿಸುವುದು; (ii) ಭಾರತವು ನಾವೀನ್ಯತೆ-ಚಾಲಿತ ಅವಕಾಶಗಳತ್ತ ಜಿಗಿಯಲು ಸಹಾಯ ಮಾಡುವುದಕ್ಕಾಗಿ ಉತ್ಪಾದಕತ್ವದ (ಜನರೇಟಿವ್) ಎ.ಐ. ಯೊಂದಿಗೆ ಆರ್.ಆಂಡ್ ಡಿ.ಯನ್ನು ಜೋಡಿಸುವುದು. ಈ ಕುರಿತ ಮಾರ್ಗಸೂಚಿಯನ್ನು ಇಲ್ಲಿ ಪ್ರವೇಶಿಸಬಹುದು: https://niti.gov.in/sites/default/files/2025-09/AI-for-Viksit-Bharat-the-opportunity-for-accelerated-economic-growth.pdf
ಮಾರ್ಗಸೂಚಿಗೆ ಪೂರಕವಾಗಿ, ಫ್ರಾಂಟಿಯರ್ ಟೆಕ್ ರೆಪೊಸಿಟರಿಯು ಭಾರತದಾದ್ಯಂತ ಕೃಷಿ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಾಷ್ಟ್ರೀಯ ಭದ್ರತೆ ಎಂಬ ನಾಲ್ಕು ವಲಯಗಳಲ್ಲಿ 200+ ಪರಿಣಾಮಾತ್ಮಕ ಕಥನಗಳನ್ನು ಪ್ರದರ್ಶಿಸುತ್ತದೆ. ಜೀವನೋಪಾಯವನ್ನು ಪರಿವರ್ತಿಸುವ ಉದ್ದೇಶದಿಂದ ರಾಜ್ಯಗಳು ಮತ್ತು ನವೋದ್ಯಮಗಳು ತಂತ್ರಜ್ಞಾನವನ್ನು ಹೇಗೆ ನಿಯೋಜಿಸುತ್ತಿವೆ ಎಂಬುದನ್ನು ಇದು ಜೀವಂತಿಕೆಯಿಂದ ತಿಳಿಸುತ್ತದೆ. ಇದನ್ನು https://frontiertech.niti.gov.in/ ನಲ್ಲಿ ಪ್ರವೇಶಿಸಬಹುದು
ಭಾರತದ 8% ಬೆಳವಣಿಗೆಯ ಮಹತ್ವಾಕಾಂಕ್ಷೆಯು ಉತ್ಪಾದಕತೆ ಮತ್ತು ನಾವೀನ್ಯತೆಯಲ್ಲಿ ಭಾರೀ ಬದಲಾವಣೆಯನ್ನು ಬಯಸುತ್ತದೆ ಎಂದು ನೀತಿ ಆಯೋಗದ ಸಿಇಒ ಶ್ರೀ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದರು. ಈ ಸಾಮರ್ಥ್ಯವನ್ನು ಅನಾವರಣ ಮಾಡಲು ಎ.ಐ. ಪ್ರಮುಖ ಅಸ್ತ್ರವಾಗಿದೆ. ವಿಕಸಿತ ಭಾರತಮಾರ್ಗಸೂಚಿಗಾಗಿ ಎ.ಐ. ಸ್ಪಷ್ಟವಾದ, ವಲಯ-ನಿರ್ದಿಷ್ಟ ಕ್ರಿಯಾ ಯೋಜನೆಯನ್ನು ನೀಡುತ್ತದೆ, ಆದರೆ ಫ್ರಾಂಟಿಯರ್ ಟೆಕ್ ರೆಪೊಸಿಟರಿಯು ರಾಜ್ಯಗಳು ಮತ್ತು ಜಿಲ್ಲೆಗಳನ್ನು ನೈಜ-ಪ್ರಪಂಚದ ಪ್ರಭಾವಕ್ಕಾಗಿ ತಂತ್ರಜ್ಞಾನವನ್ನು ಬಳಸಲು ಪ್ರೇರೇಪಿಸುತ್ತದೆ. ಎಂದರು. ತಂತ್ರಜ್ಞಾನದ ತಳಮಟ್ಟದ ಅಳವಡಿಕೆ ಮತ್ತು ಪರಿಣಾಮವನ್ನು ಗಮನಿಸಲು ಅವರು ಎರಡು ಉಪಕ್ರಮಗಳನ್ನು ಕೂಡಾ ಘೋಷಿಸಿದರು. ಅವುಗಳೆಂದರೆ:
- ನೀತಿ ಆಯೋಗದ ಮೂಲಕ 50 ಮಹತ್ವಾಕಾಂಕ್ಷೆಯ ಜಿಲ್ಲೆಗಳು / ಬ್ಲಾಕ್ಗಳನ್ನು ಬೆಂಬಲಿಸುವ ಫ್ರಾಂಟಿಯರ್ 50 ಉಪಕ್ರಮ, ಇದರಲ್ಲಿ ಸಂಗ್ರಹಾಲಯದಿಂದ ಬಳಕೆಯ ಪ್ರಕರಣಗಳನ್ನು ಆಯ್ಕೆ ಮಾಡಲು ಮತ್ತು ಎ.ಡಿ.ಪಿ./ಎ.ಬಿ.ಪಿ. ಶೀರ್ಷಿಕೆಗಳಲ್ಲಿ ಸೇವೆಗಳನ್ನು ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಮುಂಚೂಣಿ ತಂತ್ರಜ್ಞಾನಗಳನ್ನು ನಿಯೋಜಿಸಲು ಸಹಾಯ ಮಾಡುತ್ತದೆ.
- ರಾಜ್ಯಗಳಿಗೆ ನೀತಿ ಮುಂಚೂಣಿ ಟೆಕ್ ಇಂಪ್ಯಾಕ್ಟ್ ಪ್ರಶಸ್ತಿಗಳು. ಆಡಳಿತ, ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಇತ್ಯಾದಿಗಳನ್ನು ಸುಧಾರಿಸಲು ತಂತ್ರಜ್ಞಾನದ ಬಳಕೆಯಲ್ಲಿ ಶ್ರೇಷ್ಠತೆಯನ್ನು ಹೊಂದಿರುವ ಮೂರು ರಾಜ್ಯಗಳನ್ನು ಗುರುತಿಸುವ ಮತ್ತು ಅಳೆಯಬಹುದಾದ, ಪರಿವರ್ತನಾಶೀಲ ಫಲಿತಾಂಶಗಳನ್ನು ಗುರುತಿಸಲು ಅವುಗಳನ್ನು ಬೆಂಬಲಿಸುವ ರಾಜ್ಯಗಳಿಗೆ ನೀತಿ ಮುಂಚೂಣಿ ಟೆಕ್ ಇಂಪ್ಯಾಕ್ಟ್ ಪ್ರಶಸ್ತಿಗಳು.
ನೀತಿ ಆಯೋಗದ ಡಿಸ್ಟಿಂಗ್ವಿಶ್ಡ್ ಫೆಲೋ ಮತ್ತು ಫ್ರಾಂಟಿಯರ್ ಟೆಕ್ ಹಬ್‌ನ ಮುಖ್ಯ ವಾಸ್ತುಶಿಲ್ಪಿ ಶ್ರೀಮತಿ ದೇಬ್ಜಾನಿ ಘೋಷ್, ಮುಂದಿನ ಮೆಗಾ ಟೆಕ್ ಬದಲಾವಣೆಗಳು ಎ.ಐ.ಗಿಂತ ಹೆಚ್ಚು ವಿಘಟನೀಯವಾಗಿರುತ್ತದೆ, ಅಸ್ತವ್ಯಸ್ತಗೊಳಿಸುವಂತಿರುತ್ತವೆ ಎಂಬುದರತ್ತ ಗಮನ ಸೆಳೆದರು. ಭಾರತವನ್ನು ಮುನ್ನಡೆಸಲು, ಪ್ರವೃತ್ತಿಗಳನ್ನು ಮೊದಲೇ ನಿರೀಕ್ಷಿಸುವುದು ಮತ್ತು ಪೂರೈಕೆ ಸರಪಳಿಗಳನ್ನು ಬಲಪಡಿಸಲು, ಜಾಗತಿಕ ಮಾನದಂಡಗಳನ್ನು ವ್ಯಾಖ್ಯಾನಿಸಲು ಮತ್ತು ಬಲವಾದ ಮೈತ್ರಿಗಳನ್ನು ರೂಪಿಸಲು ಗಟ್ಟಿಮುಟ್ಟಾದ ಮಾರ್ಗಸೂಚಿಗಳನ್ನು ರಚಿಸುವುದು ಅವಶ್ಯಕವಾಗಿದೆ ಎಂದವರು ಪ್ರತಿಪಾದಿಸಿದರು.
ಈ ಕಾರ್ಯಕ್ರಮದಲ್ಲಿ ತಳಮಟ್ಟದಲ್ಲಿ ಮುಂಚೂಣಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ರಾಂತಿಯನ್ನು ತಂದ ನವೋದ್ಯಮ (ಸ್ಟಾರ್ಟ್-ಅಪ್) ಸಂಸ್ಥಾಪಕರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ಜಿಲ್ಲಾ ಕಾರ್ಯಕಾರಿಗಳು, ಉದ್ಯಮದ ನಾಯಕರು ಮತ್ತು ಭಾರತದಾದ್ಯಂತ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.
*****
(Release ID: 2167036)
Visitor Counter : 2