ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಇಂಜಿನಿಯರ್ ಗಳ ದಿನದಂದು ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ
                    
                    
                        
                    
                
                
                    Posted On:
                15 SEP 2025 8:44AM by PIB Bengaluru
                
                
                
                
                
                
                ಇಂಜಿನಯರ್ ಗಳ ದಿನದ ನಿಮಿತ್ತ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಆಧುನಿಕ ಇಂಜಿನಿಯರಿಂಗ್ ಕ್ಷೇತ್ರದ ಅಡಿಪಾಯಕ್ಕೆ ಆರಂಭಿಕ ಕೊಡುಗೆ ನೀಡಿದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಹೃದಯಪೂರ್ವಕ ಗೌರವ ಸಲ್ಲಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೇಳಿದ್ದಾರೆ:
“ಇಂದು ಇಂಜಿನಿಯರ್ ಗಳ ದಿನ, ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ, ಭಾರತದ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರ ಪ್ರತಿಭೆ ಅಚ್ಚಳಿಯದ ಗುರುತಾಗಿದೆ. ವಿವಿಧ ವಲಯಗಳಲ್ಲಿ ಸೃಜನಶೀಲತೆ ಮತ್ತು ಸಂಕಲ್ಪದ ಮೂಲಕ ನಾವೀನ್ಯತೆಯನ್ನು ಸೃಜಿಸುತ್ತಿರುವ ಹಾಗೂ ಕಠಿಣ ಸವಾಲುಗಳನ್ನು ನಿಭಾಯಿಸುತ್ತಿರುವ ಎಲ್ಲ ಇಂಜಿನಿಯರ್ ಗಳಿಗೆ ನಾನು ಶುಭ ಹಾರೈಸುತ್ತೇನೆ. ವಿಕಸಿತ ಭಾರತ ನಿರ್ಮಾಣದ ಸಂಘಟಿತ ಪ್ರಯತ್ನಗಳ ಮೂಲಕ ನಮ್ಮ ಇಂಜಿನಿಯರ್ ಗಳು ಮಹತ್ವದ ಪಾತ್ರ ನಿರ್ವಹಿಸುವುದನ್ನು ಮುಂದುವರೆಸಲಿದ್ದಾರೆ.”
 
 
*****
 
                
                
                
                
                
                (Release ID: 2166702)
                Visitor Counter : 12
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Manipuri 
                    
                        ,
                    
                        
                        
                            Bengali 
                    
                        ,
                    
                        
                        
                            Bengali-TR 
                    
                        ,
                    
                        
                        
                            Assamese 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam