ಚುನಾವಣಾ ಆಯೋಗ
azadi ka amrit mahotsav

ಭಾರತೀಯ ಚುನಾವಣಾ ಆಯೋಗ (ಇ.ಸಿ.ಐ) ಕಚೇರಿಗಳ ಮಾಧ್ಯಮ ಮತ್ತು ಸಂವಹನ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದೆ


ಸತ್ಯಗಳನ್ನು ಹೇಳುವುದು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಪ್ರತಿರೋಧಿಸಿ ಸಷ್ಫಲಗೊಳಿಸುವುದಕ್ಕೆ ಮಹತ್ವ ನೀಡಲು ಸೂಚನೆ

Posted On: 12 SEP 2025 4:48PM by PIB Bengaluru

1. ಭಾರತೀಯ ಚುನಾವಣಾ ಆಯೋಗ (ಇ.ಸಿ.ಐ) ಇಂದು ನವದೆಹಲಿಯ ಭಾರತ ಮಂಟಪದಲ್ಲಿ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ (ಸಿ.ಇ.ಒ) ಕಚೇರಿಗಳ ಮಾಧ್ಯಮ ಮತ್ತು ಸಂವಹನ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತ್ತು.

 

2. 51 ಮಾಧ್ಯಮ ನೋಡಲ್ ಅಧಿಕಾರಿಗಳು (ಎಂ.ಎನ್.ಒ.ಗಳು) ಮತ್ತು ಸಾಮಾಜಿಕ ಮಾಧ್ಯಮ ನೋಡಲ್ ಅಧಿಕಾರಿಗಳು (ಎಸ್.ಎಂ.ಎನ್.ಒ.ಗಳು) ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 

3. ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸುವವರನ್ನು ಉದ್ದೇಶಿಸಿ ಮುಖ್ಯ ಚುನಾವಣಾ ಆಯುಕ್ತ ಶ್ರೀ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಡಾ. ಸುಖ್ಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರು ಮಾತನಾಡಿದರು.

 

4. ತಪ್ಪು ಮಾಹಿತಿಯ ಹೆಚ್ಚುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ, ಭಾರತದಲ್ಲಿ ಚುನಾವಣೆಗಳನ್ನು ಸಂವಿಧಾನದ ಪ್ರಕಾರ ಕಟ್ಟುನಿಟ್ಟಾಗಿ ನಡೆಸಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸುವುದು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಸತ್ಯಗಳೊಂದಿಗೆ ಎದುರಿಸುವುದು ಕಡ್ಡಾಯವಾಗಿದೆ ಎಂದು ಒತ್ತಿ ಹೇಳಲಾಯಿತು.

 

5. ಸಿ.ಇ.ಒ ಕಚೇರಿಗಳ ಸಂವಹನ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮಾಧ್ಯಮ ಮತ್ತು ಇತರ ಪಾಲುದಾರರೊಂದಿಗೆ ಸಕಾಲಿಕ ವಾಸ್ತವಿಕ ಮಾಹಿತಿಯನ್ನು ಪ್ರಸಾರ ಮಾಡಲು ಅಧಿವೇಶನಗಳನ್ನು ನಡೆಸಲಾಯಿತು.

 

6. ಕಾರ್ಯಾಗಾರವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದ ದೃಷ್ಟಿಕೋನದಿಂದ ವಿಶೇಷ ಅಧಿವೇಶನಗಳಿಗಾಗಿ ಮೀಸಲಿಟ್ಟಿತ್ತು.

 

7. ತಪ್ಪು ಮಾಹಿತಿಯನ್ನು ಎದುರಿಸಲು ವಿವಿಧ ಸಾಧನಗಳು, ತಂತ್ರಗಳು ಮತ್ತು ಕಾರ್ಯವ್ಯೂಹಗಳ ಕುರಿತು ತಜ್ಞರ ಅಧಿವೇಶನವನ್ನು ಸಹ ಜೊತೆಯಲ್ಲಿ ಆಯೋಜಿಸಲಾಗಿತ್ತು.

 

8. ಕಾರ್ಯಾಗಾರವು ಇಂತಹ ಮೂರನೇ ಸಂವಾದವನ್ನು ಕೂಡಾ ಜೊತೆಯಲ್ಲಿ ಆಯೋಜಿಸಿತು. ಈ ಹಿಂದೆ, ಐ.ಐ.ಐ.ಡಿ.ಇ.ಎಂ ನಲ್ಲಿರುವ ಸಿ.ಇ.ಒ ಕಚೇರಿಗಳ ಮಾಧ್ಯಮ ಮತ್ತು ಸಂವಹನ ಅಧಿಕಾರಿಗಳಿಗಾಗಿ ವಿಶೇಷ ಓರಿಯಂಟೇಶನ್ ಕಾರ್ಯಕ್ರಮಗಳನ್ನು ಏಪ್ರಿಲ್ 9, 2025 ಮತ್ತು ಜೂನ್ 5, 2025 ರಂದು ನವದೆಹಲಿಯಲ್ಲಿ ನಡೆಸಲಾಗಿತ್ತು.

 

*****


(Release ID: 2166083) Visitor Counter : 2