ರೈಲ್ವೇ ಸಚಿವಾಲಯ
azadi ka amrit mahotsav

ಕಾಶ್ಮೀರದ ಸೇಬು ಬೆಳೆಗಾರರಿಗೆ ಶುಭ ಸುದ್ದಿ: ದೆಹಲಿ ಮಾರುಕಟ್ಟೆಗೆ ಸೇಬುಗಳನ್ನು ತರಲು ಇಂದು ಎಂಟು ವ್ಯಾಗನ್‌ಗಳನ್ನು ಒಳಗೊಂಡಿರುವ ಎರಡು ಪಾರ್ಸೆಲ್ ವ್ಯಾನ್‌ಗಳಲ್ಲಿ ತಾಜಾ ಸೇಬುಗಳನ್ನು ಭರ್ತಿ ಮಾಡಲು ಆರಂಭಿಸಿದ ಭಾರತೀಯ ರೈಲ್ವೆ


ಬೇಡಿಕೆ ಹೆಚ್ಚಾದರೆ ಹೆಚ್ಚಿನ ವ್ಯಾಗನ್‌ಗಳನ್ನು ಸೇರ್ಪಡೆ ಮಾಡಲಾಗುವುದೆಂದು ಭಾರತೀಯ ರೈಲ್ವೆ ಹೇಳಿಕೆ; ಸೆಪ್ಟೆಂಬರ್ 13 ರಿಂದ ಕಾಶ್ಮೀರದ ಬದ್ಗಾಮ್ ಮತ್ತು ದೆಹಲಿಯ ಆದರ್ಶ ನಗರ ನಡುವೆ ದೈನಂದಿನ ಪಾರ್ಸೆಲ್ ರೈಲು ಆರಂಭ

प्रविष्टि तिथि: 11 SEP 2025 1:43PM by PIB Bengaluru

ತಮ್ಮಸೇಬು ಮತ್ತಿತರ ಉತ್ಪನ್ನಗಳನ್ನು ದೆಹಲಿಯ ಪ್ರಮುಖ ಮಾರುಕಟ್ಟೆಗಳಿಗೆ ಕಳುಹಿಸಬೇಕೆನ್ನುವ ಕಾಶ್ಮೀರ ಕಣಿವೆಯ ಹಣ್ಣು ಬೆಳೆಗಾರರ ಅಗತ್ಯತೆಯನ್ನು ಪರಿಗಣಿಸಿ, ಭಾರತೀಯ ರೈಲ್ವೆ (ಐಆರ್) ಸಕ್ರೀಯ ಕ್ರಮವನ್ನು ಕೈಗೊಂಡಿದೆ.

ಸೇಬು ಸಾಗಾನೆಗೆ ಭಾರತೀಯ ರೈಲ್ವೆ ಎರಡು ಪಾರ್ಸೆಲ್ ವ್ಯಾನ್ (ಎಲ್ ವಿಪಿಎಚ್ ಕೋಚ್‌) ಗಳನ್ನು ಒದಗಿಸಿದೆ. ಈ ಪಾರ್ಸೆಲ್ ವ್ಯಾನ್‌ಗಳಿಗೆ ಇಂದು ಸೇಬುಗಳನ್ನು ತುಂಬಲಾಗುತ್ತಿದೆ (ಲೋಡ್ ಮಾಡಲಾಗುತ್ತಿದೆ) ಮತ್ತು ಪ್ರತಿಯೊಂದು ವ್ಯಾನ್ 23 ಮೆಟ್ರಿಕ್ ಟನ್ (ಎಂಟಿ) ಸೇಬುಗಳನ್ನು ಸಾಗಿಸಲಿವೆ. ಬೇಡಿಕೆ ಬಂದರೆ ಮತ್ತಷ್ಟು ಹೆಚ್ಚುವರಿ ಪಾರ್ಸೆಲ್ ವ್ಯಾನ್‌ಗಳನ್ನು ಒದಗಿಸಲು ಭಾರತೀಯ ರೈಲ್ವೆ ಸಿದ್ಧವಾಗಿದೆ.

ಉತ್ತರ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಜಮ್ಮು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ರಾಜ್ಯ ಅಧಿಕಾರಿಗಳು, ತೋಟಗಾರಿಕೆ ಇಲಾಖೆ, ಹಣ್ಣು ಬೆಳೆಗಾರರ ​​ಸಂಘಗಳು ಮತ್ತು ವ್ಯಾಪಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಪ್ರಮುಖ ಸೇಬು ಋತುಮಾನ ಆರಂಭವಾಗುತ್ತಿದ್ದಂತೆಯೇ ಭಾರತೀಯ ರೈಲ್ವೆ ಸೆಪ್ಟೆಂಬರ್ 13 ರಿಂದ ಬದ್ಗಾಮ್ ಮತ್ತು ಆದರ್ಶ ನಗರ ನಡುವೆ ದೈನಂದಿನ ವೇಳಾಪಟ್ಟಿಯ ಪಾರ್ಸೆಲ್ ರೈಲು ಸಂಚಾರವನ್ನು ಆರಂಭಿಸಲಿದೆ. ಈ ರೈಲು ವೈಯಕ್ತಿಕ ವ್ಯಾಪಾರಿಗಳು ಮತ್ತು ಹಣ್ಣು ಬೆಳೆಗಾರರಿಗೆ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಒಂದು ಪಾರ್ಸೆಲ್ ವ್ಯಾನ್ ಅನ್ನು ಬುಕ್ ಮಾಡಲು ಅವಕಾಶವನ್ನು ಒದಗಿಸುತ್ತದೆ.

ಈಗಾಗಲೇ 8 ಪಾರ್ಸೆಲ್ ವ್ಯಾನ್ (ವಿಪಿ) ದೈನಂದಿನ ವೇಳಾಪಟ್ಟಿಯ ಜಂಟಿ ಪಾರ್ಸೆಲ್ ಉತ್ಪನ್ನ- ಕ್ಷಿಪ್ರ ಸರಕು ಸೇವಾ ಪಾರ್ಸೆಲ್ ರೈಲು Ex ANDI - BBMN – BDGM ಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ 8 ವಿಪಿ ರೈಲು ಬೆಳಿಗ್ಗೆ 6:15ಕ್ಕೆ ಬದ್ಗಾಮ್ ರೈಲ್ವೆ ನಿಲ್ದಾಣದಿಂದ (ಬಿಡಿಜಿಎಂ) ಹೊರಟು ಮರುದಿನ ಬೆಳಿಗ್ಗೆ 5:00 ಕ್ಕೆ ಆದರ್ಶ ನಗರ ರೈಲ್ವೆ ನಿಲ್ದಾಣ (ಎಎನ್ ಡಿಐ) ತಲುಪಲಿದುದ್ದು, ಇದರಿಂದ ಬೆಳಿಗ್ಗೆ ಬೇಗ ದೆಹಲಿ ಮಾರುಕಟ್ಟೆಗೆ ಸೇಬುಗಳು ಪೂರೃಸಲು ಅತ್ಯಂತ ಸೂಕ್ತ ಸಮಯವಾಗಿದೆ.

ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ವಿಪಿಗಳನ್ನು ಜೋಡಿಸುವ ಸೌಲಭ್ಯವನ್ನು ಭಾರತೀಯ ರೈಲ್ವೆ ಒದಗಿಸುತ್ತಿದೆ. ಹೆಚ್ಚಿನ ಬೇಡಿಕೆ ಬಂದರೆ ಅಂತಹ ಮತ್ತಷ್ಟು ಹೆಚ್ಚಿನ ರೈಲುಗಳನ್ನು ಓಡಿಸಲು ರೈಲ್ವೆ ಸಿದ್ಧವಾಗಿದೆ.

ಕಳೆದ ಆಗಸ್ಟ್ 9 ರಂದು ಸಿಮೆಂಟ್  ಹೊತ್ತ 21 ವ್ಯಾಗನ್‌ಗಳ ಮೊದಲ ಸರಕು ರೈಲು ಪಂಜಾಬ್‌ನಿಂದ ಕಾಶ್ಮೀರ ಕಣಿವೆಯ ಅನಂತನಾಗ್ ಸರಕು ಸಾಗಾಣೆ ಗೋದಾಮಿಗೆ ಯಶಸ್ವಿಯಾಗಿ ತಲುಪಿದ್ದು, ಇದು ಆ ಪ್ರದೇಶವನ್ನು ರಾಷ್ಟ್ರೀಯ ಸರಕು ಜಾಲಕ್ಕೆ ಸಂಪರ್ಕಿಸುವಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗುತ್ತಿದೆ. ಈ ಅಭಿವೃದ್ಧಿಯು ಕಾಶ್ಮೀರದಾದ್ಯಂತ ಮೂಲಸೌಕರ್ಯ ಯೋಜನೆಗಳನ್ನು ವೇಗಗೊಳಿಸುತ್ತದೆ ಮತ್ತು ಕಾಶ್ಮೀರ ಕಣಿವೆಯಲ್ಲಿ ವಾಸಿಸುವ ನಾಗರಿಕರಿಗೆ ವೆಚ್ಚ ತಗ್ಗಿಸುತ್ತದೆ. ಅಲ್ಲದೆ, ಇದು ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ.

ಈ ವರ್ಷದ ಜೂನ್‌ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗದಲ್ಲಿ ಇದೀಗ ಸರಕು ಸಾಗಣೆ ಸೇವೆ ಕಾರ್ಯಚಾರಣೆ ನಡೆಸಲಾಗುತ್ತಿದೆ. ಈ ರೈಲು ಸಂಪರ್ಕವು ಕತ್ರಾ ಮತ್ತು ಶ್ರೀನಗರ ನಡುವೆ ಎರಡು ವಂದೇ ಭಾರತ್ ರೈಲುಗಳನ್ನು ಸಹ ನಿರ್ವಹಿಸುತ್ತದೆ, ಎರಡೂ ರೈಲುಗಳಲ್ಲೂ ಶೇ.100ಕ್ಕೂ ಅಧಿಕ ಪ್ರಮಾಣದಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಸಂಚರಿಸುತ್ತಿವೆ. ಈ ರೈಲುಗಳು ಪ್ರಯಾಣಿಕರಿಗೆ ಸುಲಭ, ಕೈಗೆಟುಕುವ ಮತ್ತು ಆರಾಮದಾಯಕ ಪ್ರಯಾಣ ಒದಗಿಸುತ್ತಿವೆ ಮತ್ತು ರೈಲ್ವೆ ಸಾರಿಗೆಯನ್ನು ಸಂಪೂರ್ಣ ಹೊಸ ಎತ್ತರಕ್ಕೆ ಏರಿಸುತ್ತಿವೆ.

 

*****


(रिलीज़ आईडी: 2165651) आगंतुक पटल : 25
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi