ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರೀಯ ವಿದ್ಯಾಲಯಗಳಿಗಾಗಿ 2024-25ನೇ ಸಾಲಿನಲ್ಲಿ ನಡೆಸಿದ ರಾಷ್ಟ್ರೀಯ ಯುವ ಸಂಸತ್‌ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಾಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Posted On: 28 AUG 2025 2:47PM by PIB Bengaluru

ಕೇಂದ್ರೀಯ ವಿದ್ಯಾಲಯಗಳಿಗೆ ನಡೆಸಿದ 2024-25ನೇ ಸಾಲಿನ 35ನೇ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯ ಬಹುಮಾನ ಪ್ರದಾನ ಕಾರ್ಯಕ್ರಮವು ನಾಳೆ (ಶುಕ್ರವಾರ 2025ರ ಆಗಸ್ಟ್ 29) ನವದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿರುವ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆಯಲಿದೆ.

ಸಂಸದೆ (ಲೋಕಸಭಾ) ಸದಸ್ಯೆ ಶ್ರೀಮತಿ ಬನ್ಸುರಿ ಸ್ವರಾಜ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆಗಳಿಗೆ ಬಹುಮಾನ ವಿತರಿಸುವರು. ಈ ಸಂದರ್ಭದಲ್ಲಿ, 2024-25ರ 35ನೇ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯ ರಾಷ್ಟ್ರೀಯ ವಿಜೇತರಾದ ಅಸ್ಸಾಂನ ಶ್ರೀಕೋಣ (ಸಿಲ್ಚಾರ್ ಪ್ರದೇಶ, ಪೂರ್ವ ವಲಯ)ದ ಕೇಂದ್ರೀಯ ವಿದ್ಯಾಲಯ, ಒಎನ್‌ಜಿಸಿ ವಿದ್ಯಾರ್ಥಿಗಳು ಬಹುಮಾನ ವಿತರಣಾ ಸಮಾರಂಭದ ಸಮಯದಲ್ಲಿ ತಮ್ಮ ಯುವ ಸಂಸತ್ ಕಲಾಪದ ಪ್ರದರ್ಶನವನ್ನು ಪುನರಾವರ್ತಿಸಲಿದ್ದಾರೆ.

ಕಳೆದ 37 ವರ್ಷಗಳಿಂದ ಸಂಸದೀಯ ವ್ಯವಹಾರಗಳ ಸಚಿವಾಲಯವು ಕೇಂದ್ರೀಯ ವಿದ್ಯಾಲಯಗಳಿಗಾಗಿ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಕೇಂದ್ರೀಯ ವಿದ್ಯಾಲಯಗಳಿಗಾಗಿ ಯುವ ಸಂಸತ್ ಸ್ಪರ್ಧೆಯ ಕಾರ್ಯಕ್ರಮದಡಿಯಲ್ಲಿ, ಈ ಸರಣಿಯ 35 ನೇ ಸ್ಪರ್ಧೆಯನ್ನು 2024-25 ರಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆಯ 25 ಪ್ರದೇಶಗಳಲ್ಲಿ ಹರಡಿರುವ 175 ಕೇಂದ್ರೀಯ ವಿದ್ಯಾಲಯಗಳಲ್ಲಿ ಆಯೋಜಿಸಲಾಗಿತ್ತು.

ಯುವ ಸಂಸತ್ ಕಾರ್ಯಕ್ರಮವು ಯುವ ಪೀಳಿಗೆಯಲ್ಲಿ ಸ್ವಯಂ ಶಿಸ್ತು, ವೈವಿಧ್ಯಮಯ ಅಭಿಪ್ರಾಯ ಸಹಿಷ್ಣುತೆ, ದೂರದೃಷ್ಟಿಗಳ ನ್ಯಾಯಯುತ ಅಭಿವ್ಯಕ್ತಿ ಮತ್ತು ಪ್ರಜಾಪ್ರಭುತ್ವ ಜೀವನ ವಿಧಾನದ ಇತರೆ ಉತ್ತಮ ಗುಣಗಳನ್ನು ಬೆಳೆಸುವ ಗುರಿ ಹೊಂದಿದೆ. ಅಲ್ಲದೆ, ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಂಸತ್ತಿನ ನಿಯಮಾವಳಿಗಳು ಮತ್ತು ಕಾರ್ಯವಿಧಾನಗಳು, ಚರ್ಚೆ ಮತ್ತು ಚರ್ಚೆಯ ತಂತ್ರಗಳನ್ನು ಪರಿಚಯಿಸುತ್ತದೆ ಮತ್ತು ಅವರಲ್ಲಿ ಆತ್ಮ ವಿಶ್ವಾಸ, ನಾಯಕತ್ವದ ಗುಣಮಟ್ಟ ಮತ್ತು ಪರಿಣಾಮಕಾರಿ ಭಾಷಣದ ಕಲೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ರನ್ನಿಂಗ್ ಪಾರ್ಲಿಮೆಂಟರಿ ಪಾರಿತೋಷಕ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಟ್ರೋಫಿಯನ್ನು ಅಸ್ಸಾಂ  ಶ್ರೀಕೋಣ (ಸಿಲ್ಚಾರ್ ಪ್ರದೇಶ, ಪೂರ್ವ ವಲಯ)ದ ಒಎನ್‌ಜಿಸಿ ಕೇಂದ್ರೀಯ ವಿದ್ಯಾಲಯಕ್ಕೆ  ನೀಡಲಾಗುವುದು. ಅಲ್ಲದೆ ಸ್ಪರ್ಧೆಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಈ ಕೆಳಗಿನ 4 ಕೇಂದ್ರೀಯ ವಿದ್ಯಾಲಯಗಳಿಗೆ ವಲಯ ಟ್ರೋಫಿಗಳನ್ನು ಸಂಸತ್ ಸದಸ್ಯೆ (ಲೋಕಸಭೆ) ಶ್ರೀಮತಿ ಬನ್ಸುರಿ ಸ್ವರಾಜ್ ಅವರು ಪ್ರದಾನ ಮಾಡಲಿದ್ದಾರೆ:

ಕ್ರ. ಸಂ.

ಕೇಂದ್ರೀಯ ವಿದ್ಯಾಲಯದ ಹೆಸರು

ವಲಯ

  1.  

ಕೆಂದ್ರೀಯ ವಿದ್ಯಾಲಯ, ಕಥುವಾ (ಜಮ್ಮು ಪ್ರದೇಶ)

ಉತ್ತರ

  1.  

ಪಿಎಂ ಕೇಂದ್ರೀಯ ವಿದ್ಯಾಲಯ, ಸಂಖ್ಯೆ-.1, ಎಎಫ್ ಎಸ್, ಚಕೇರಿ, ಖಾನ್ಪುರ್‌ (ಲಖನೌ ಪ್ರದೇಶ)

ಕೇಂದ್ರ

  1.  

ಕೇಂದ್ರೀಯ ವಿದ್ಯಾಲಯ, ಮಥುರಾ ಕಂಟ್ನೋಮೆಂಟ್‌, (ಆಗ್ರಾ ಪ್ರದೇಶ )

ಪಶ್ಚಿಮ

  1.  

ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ, ಸಂಖ್ಯೆ- 1, ಸಾಗರ್ (ಜಬಲ್ ಪುರ ಪ್ರದೇಶ)

ದಕ್ಷಿಣ

ಅಲ್ಲದೆ, ಸ್ಪರ್ಧೆಯಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಈ ಕೆಳಗಿನ 20 ವಿದ್ಯಾಲಯಗಳಿಗೆ ಸಂಸತ್ ಸದಸ್ಯರು ಪ್ರಾದೇಶಿಕವಾರು ವಿಜೇತ ತಂಡಗಳಿಗೆ ಟ್ರೋಫಿಗಳನ್ನು ನೀಡುತ್ತಾರೆ:

ಕ್ರ.ಸಂ.

ಕೆಂದ್ರೀಯ ವಿದ್ಯಾಲಯದ ಹೆಸರು

ಪ್ರದೇಶ

  1.  

ಪಿಎಂಶ್ರೀ ಕೆವಿ, ಸಂಖ್ಯೆ- 1, ಶಾಹಿಬಾಗ್

ಅಹಮದಾಬಾದ್

  1.  

ಪಿಎಂಶ್ರೀ ಕೆವಿ, ಸಂಖ್ಯೆ- 2, ಬೆಳಗಾವಿ ಕಂಟೋನ್ಮೆಂಟ್‌

ಬೆಂಗಳೂರು

  1.  

ಪಿಎಂಶ್ರೀ ಕೆವಿ, ಇಂದೋರ್

ಭೂಪಾಲ್

  1.  

ಪಿಎಂಶ್ರೀ ಕೆವಿ, ಸಂಖ್ಯೆ 1, ಭುವನೇಶ್ವರ್‌ (1ನೇ ಪಾಳಿ)

ಭುವನೇಶ್ವರ್‌

  1.  

ಕೆವಿ, ಸಂಖ್ಯೆ 2, ಡಿಎಂಡಬ್ಲೂ, ಪಾಟಿಯಾಲ

ಚಂಡೀಗಢ

  1.  

ಪಿಎಂಶ್ರೀ ಕೆವಿ, ಕೊಯಮತ್ತೂರ್‌

ಚೆನ್ನೈ

  1.  

ಪಿಎಂಶ್ರೀ ಕೆವಿ, ಐಟಿಬಿಪಿ

ಡೆಹ್ರಾಡೂನ್

  1.  

ಡಾ.ರಾಜೇಂದ್ರ ಪ್ರಸಾದ್ ಕೆವಿ

ದೆಹಲಿ ಪ್ರದೇಶ

  1.  

ಪಿಎಂಶ್ರೀ ಕೆವಿ, ಐಎನ್ ಎಸ್, ದ್ರೋಣಾಚಾರ್ಯ

ಎರ್ನಾಕುಲಂ

  1.  

ಪಿಎಂಶ್ರೀ ಕೆವಿ, ಹಮಿರ್ ಪುರ್

ಗುರುಗ್ರಾಮ

  1.  

ಪಿಎಂಶ್ರೀ ಕೆವಿ, ಮಿಸಾ, ಕಂಟೋನ್ಮೆಂಟ್

ಗುವಾಹಟಿ

  1.  

ಪಿಎಂಶ್ರೀ ಕೆವಿ, ಸಂಖ್ಯೆ.2, ಶ್ರೀವಿಜಯನಗರ್

ಹೈದ್ರಾಬಾದ್

  1.  

ಪಿಎಂಶ್ರೀ ಕೆವಿ, ಸಂಖ್ಯೆ- 1, ಉದಯ್ ಪುರ್

ಜೈಪುರ

  1.  

ಪಿಎಂಶ್ರೀ ಕೆವಿ, ಸಂಖ್ಯೆ - 1,ಐಐಟಿ, ಖರಗ್‌ ಪುರ್

ಕೋಲ್ಕತ್ತಾ

  1.  

ಕೆವಿ ಸಂಖ್ಯೆ 1, ದೇಹು ರಸ್ತೆ

ಮುಂಬೈ

  1.  

ಪಿಎಂಶ್ರೀ ಕೆವಿ, ಜಮಲ್ ಪುರ್

ಪಾಟ್ನಾ

  1.  

ಪಿಎಂಶ್ರೀ ಕೆವಿ, ಬಿಎಂವೈ, ಭಿಲ್ಲಾಯ್

ರಾಯ್ಪುರ್‌

  1.  

ಪಿಎಂಶ್ರೀ ಕೆವಿ, ಸಿಆರ್ ಪಿಎಫ್, ರಾಂಚಿ

ರಾಂಚಿ

  1.  

ಪಿಎಂಶ್ರೀ ಕೆವಿ, ಸಂಖ್ಯೆ-  2, ಇಟಾನಗರ

ತೀನ್‌ ಸುಖಿಯಾ

  1.  

ಪಿಎಂಶ್ರೀ ಕೆವಿ, ಎಎಫ್ ಎಸ್, ಮನೌರಿ, ಪ್ರಯಾಗ್ ರಾಜ್

ವಾರಾಣಸಿ

 

 

*****


(Release ID: 2161629) Visitor Counter : 15
Read this release in: English , Urdu , Hindi , Tamil