ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಕುದುರೆಯ ಗ್ರಂಥಿಯ ರೋಗಗಳನ್ನು (ಗ್ಲಾಂಡರ್ ಗಳ) ನಿರ್ಮೂಲನೆ ಮಾಡಲು ಪರಿಷ್ಕೃತ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ; ಕೇಂದ್ರ ಸರ್ಕಾರವು ಕುದುರೆ ವಂಶಗಳ ರೋಗ ನಿಯಂತ್ರಣ ಕ್ರಮಗಳನ್ನು ಚುರುಕುಗೊಳಿಸಿದೆ
Posted On:
27 AUG 2025 6:43PM by PIB Bengaluru
ದೇಶಾದ್ಯಂತ ರೋಗವನ್ನು ಪತ್ತೆಹಚ್ಚುವ, ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ಮೂಲನೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಗ್ಲಾಂಡರ್ ಗಳ (ಕುದುರೆಗಳ ಸಾಂಕ್ರಾಮಿಕ ಮತ್ತು ಹೆಚ್ಚಾಗಿ ಮಾರಕ ರೋಗ) ಕುರಿತ ಪರಿಷ್ಕೃತ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಬಿಡುಗಡೆ ಮಾಡಿದೆ.
ಪರಿಷ್ಕೃತ ಕ್ರಿಯಾ ಯೋಜನೆಯ ಪ್ರಮುಖ ಗುಣಲಕ್ಷಣಗಳು ಹೀಗಿವೆ:
- ಪ್ರಮುಖ ಪರಿಷ್ಕರಣೆಗಳಲ್ಲಿ ಸೋಂಕಿತ ವಲಯವನ್ನು 5 ಕಿ.ಮೀ ನಿಂದ 2 ಕಿ.ಮೀ ಗೆ ಇಳಿಸುವುದು, ಕಣ್ಗಾವಲು ಪ್ರದೇಶವನ್ನು 5-25 ಕಿ.ಮೀ ಬದಲಿಗೆ 2-10 ಕಿ.ಮೀ ಎಂದು ಮರು ವ್ಯಾಖ್ಯಾನಿಸುವುದು ಮತ್ತು ನಿರ್ಬಂಧಗಳನ್ನು ಅದಕ್ಕೆ ಅನುಗುಣವಾಗಿ ಜೋಡಿಸುವುದು ಸೇರಿವೆ, ಇದು ಈಗ ಪ್ರಸ್ತುತ 10 ಕಿ.ಮೀ ವರೆಗೆ ಮಾತ್ರ ಅನ್ವಯಿಸುತ್ತದೆ.
- ವರ್ಧಿತ ಕಣ್ಗಾವಲು ಮತ್ತು ವರದಿ ಮಾಡುವಿಕೆ: ಸುಧಾರಿತ ಪ್ರಯೋಗಾಲಯ ರೋಗನಿರ್ಣಯ ಮತ್ತು ನಿಯಮಿತ ಕ್ಷೇತ್ರ ತಪಾಸಣೆಗಳಿಂದ ಬೆಂಬಲಿತವಾದ ಸ್ಥಳೀಯ ಮತ್ತು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಕುದುರೆಗಳ ಕಡ್ಡಾಯ ಪರೀಕ್ಷೆ ನಡೆಸುವುದು.
- ಬಲಪಡಿಸಿದ ದಗ್ಭಂಧನ (ಕ್ವಾರಂಟೈನ್) ಮತ್ತು ಚಲನೆ ನಿಯಂತ್ರಣ: ಕಠಿಣ ದಗ್ಭಂಧನ (ಕ್ವಾರಂಟೈನ್) ಕ್ರಮಗಳು, ಪೀಡಿತ ಪ್ರದೇಶಗಳಿಂದ ಪ್ರಾಣಿಗಳ ಚಲನೆಯ ಮೇಲಿನ ನಿರ್ಬಂಧಗಳು ಮತ್ತು ಕುದುರೆ ಮೇಳಗಳು, ಯಾತ್ರೆಗಳು ಮತ್ತು ಅಂತರರಾಜ್ಯ ಸಾರಿಗೆಗಾಗಿ ಪ್ರಮಾಣೀಕರಣ ಶಿಷ್ಟಾಚಾರ ವ್ಯವಸ್ಥೆಗಳು.
- ಕ್ಷಿಪ್ರ ಪ್ರತಿಕ್ರಿಯೆ ಕಾರ್ಯವಿಧಾನ: ರಾಜ್ಯ ಸರ್ಕಾರದ ಪಶುಸಂಗೋಪನಾ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ತ್ವರಿತ ನಿಯಂತ್ರಣ, ಪ್ರತ್ಯೇಕತೆ ಮತ್ತು ಸಕಾರಾತ್ಮಕ ಪ್ರಕರಣಗಳ ಮಾನವೀಯ ನಿರ್ವಹಣೆಗಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು (ಎಸ್.ಒ.ಪಿ. ಗಳು).
- ಸಾಮರ್ಥ್ಯ ವೃದ್ಧಿ ಮತ್ತು ತರಬೇತಿ: ಪಶುವೈದ್ಯರು, ಅರೆ ಪಶುವೈದ್ಯ ಮತ್ತು ಕ್ಷೇತ್ರ ಸಿಬ್ಬಂದಿಗೆ ಗ್ಲ್ಯಾಂಡರ್ ಗಳ ಗುರುತಿಸುವಿಕೆ, ವರದಿ ಮಾಡುವಿಕೆ ಮತ್ತು ಜೈವಿಕ ಸುರಕ್ಷತಾ ಅಭ್ಯಾಸಗಳ ಕುರಿತು ತರಬೇತಿ ಕಾರ್ಯಕ್ರಮಗಳು.
- ಸಾರ್ವಜನಿಕ ಜಾಗೃತಿ ಮತ್ತು ಪಾಲುದಾರರ ತೊಡಗಿಸಿಕೊಳ್ಳುವಿಕೆ: ಕಣ್ಗಾವಲು ಮತ್ತು ರೋಗ ವರದಿಯಲ್ಲಿ ಸಹಕಾರವನ್ನು ಖಚಿತಪಡಿಸಿಕೊಳ್ಳಲು ಕುದುರೆ ಮಾಲೀಕರು, ತಳಿಗಾರರು ಮತ್ತು ಇತರ ಪಾಲುದಾರರಿಗೆ ಸಂಪರ್ಕ (ಔಟ್ರೀಚ್) ಕಾರ್ಯಕ್ರಮಗಳು.
- ಸಂಶೋಧನೆ ಮತ್ತು ಪ್ರಯೋಗಾಲಯ ಬೆಂಬಲ: ಸುಧಾರಿತ ರೋಗನಿರ್ಣಯ, ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳಿಗಾಗಿ ಹಿಸಾರ್ ನ ಐಸಿಎಆರ್–ರಾಷ್ಟ್ರೀಯ ಕುದುರೆ ಸಂಶೋಧನಾ ಕೇಂದ್ರದೊಂದಿಗೆ (ಎನ್ ಆರ್ ಸಿ ಇ) ಸಕ್ರಿಯ ಸಹಯೋಗ.
ಪರಿಷ್ಕೃತ ಕ್ರಿಯಾ ಯೋಜನೆಯನ್ನು ರಾಜ್ಯ ಸರ್ಕಾರಗಳು, ಪಶುವೈದ್ಯಕೀಯ ವಿಶ್ವವಿದ್ಯಾಲಯಗಳು ಮತ್ತು ಐಸಿಎಆರ್ ಸಂಸ್ಥೆಗಳು ಮತ್ತು ಡಿ.ಎ.ಹೆಚ್.ಡಿ.ಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯಗತಗೊಳಿಸಲಾಗುತ್ತದೆ, ಕ್ಷೇತ್ರ ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯನ್ನು ಒದಗಿಸುತ್ತದೆ. ಈ ಪರಿಷ್ಕೃತ ಯೋಜನೆಯು ಪ್ರಾಣಿಗಳ ಆರೋಗ್ಯ ಭದ್ರತೆ, ಒಂದು ಆರೋಗ್ಯ ಸನ್ನದ್ಧತೆ ಮತ್ತು ದೇಶದಲ್ಲಿ ಕುದುರೆಗಳ ಮೇಲೆ ಅವಲಂಬಿತವಾಗಿರುವ ಜೀವನೋಪಾಯವನ್ನು ರಕ್ಷಿಸುವ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಗ್ಲಾಂಡರ್ ಗಳ ಬಗ್ಗೆ
ಬರ್ಖೋಲ್ಡೆರಿಯಾ ಮಲ್ಲೈ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಗ್ಲಾಂಡರ್ ಗಳು ಪ್ರಾಥಮಿಕವಾಗಿ ಕುದುರೆಗಳು, ಹೇಸರಗತ್ತೆಗಳು ಮತ್ತು ಕತ್ತೆಗಳಂತಹ ಕುದುರೆ ವಂಶಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಇತರ ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೆ ಅಪಾಯವನ್ನುಂಟುಮಾಡುತ್ತವೆ. ಪ್ರಾಣಿಗಳಲ್ಲಿನ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 2009ರ ಅಡಿಯಲ್ಲಿ ಈ ರೋಗವನ್ನು ಸೂಚಿಸಬಹುದಾಗಿದೆ.
ಆಗಾಗ ಕೇಳುವ ಪ್ರಶ್ನೆಗಳಿಗಾಗಿ: ಇಲ್ಲಿ ಕ್ಲಿಕ್ ಮಾಡಿ
*****
(Release ID: 2161356)