ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
5 ರಿಂದ 15 ವರ್ಷ ವಯಸ್ಸಿನ ಮಕ್ಕಳ ಆಧಾರ್ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್‌ಗಳನ್ನು (MBU) ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ದೇಶಾದ್ಯಂತ ಶಾಲೆಗಳಿಗೆ UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಸೂಚನೆ ನೀಡಿದೆ
ಬಾಕಿ ಉಳಿದಿರುವ MBUಗಳನ್ನು ಪೂರ್ಣಗೊಳಿಸಲು ಶಾಲೆಗಳಲ್ಲಿ ಶಿಬಿರಗಳನ್ನು ಆಯೋಜಿಸುವಂತೆ ಕೋರಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ UIDAI ಸಿಇಒ ಪತ್ರ
ಸುಮಾರು 17 ಕೋಟಿ ಮಕ್ಕಳ ಆಧಾರ್ ನಲ್ಲಿ ಬಾಕಿ ಇರುವ MBUಗಳನ್ನು ಸುಲಭಗೊಳಿಸಲು ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್ (UDISE+) ವೇದಿಕೆಯ ಮೂಲಕ UIDAI ಮತ್ತು ಶಿಕ್ಷಣ ಸಚಿವಾಲಯವು ಕೈ ಜೋಡಿಸಿವೆ
Posted On:
27 AUG 2025 5:29PM by PIB Bengaluru
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಯು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ಕೈಜೋಡಿಸಿದ್ದು, ಶಾಲಾ ಮಕ್ಕಳ ಆಧಾರ್‌ಗೆ ಸಂಬಂಧಿಸಿದ ಕಡ್ಡಾಯ ಬಯೋಮೆಟ್ರಿಕ್ ಅಪ್ ಡೇಟ್ (MBU) ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜುಕೇಷನ್ ಪ್ಲಸ್ (UDISE+) ಅಪ್ಲಿಕೇಶನ್ ನಲ್ಲಿ ಲಭ್ಯವಾಗುವಂತೆ ಮಾಡಿದೆ. ಈ ಕ್ರಮವು ಕೋಟಿಗಟ್ಟಲೆ ವಿದ್ಯಾರ್ಥಿಗಳ ಆಧಾರ್ ಗೆ ಕಡ್ಡಾಯ ಬಯೋಮೆಟ್ರಿಕ್ ಅಪ್ ಡೇಟ್ ಅನ್ನು ಸುಗಮಗೊಳಿಸುತ್ತದೆ.
ಮಕ್ಕಳಿಗೆ ಐದು ವರ್ಷ ತುಂಬಿದಾಗ ಮತ್ತು ಹದಿನೈದು ವರ್ಷವಾದಾಗ ಕಡ್ಡಾಯ ಬಯೋಮೆಟ್ರಿಕ್ ಅಪ್ ಡೇಟ್ ಅನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಒಂದು ಅವಶ್ಯಕತೆಯಾಗಿದೆ. ಇದು ಮಕ್ಕಳ ಆಧಾರ್ ನಲ್ಲಿರುವ ಬಯೋಮೆಟ್ರಿಕ್ ದತ್ತಾಂಶದ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಸುಮಾರು 17 ಕೋಟಿ ಆಧಾರ್ ಸಂಖ್ಯೆಗಳಲ್ಲಿ ಕಡ್ಡಾಯ ಬಯೋಮೆಟ್ರಿಕ್ ಅಪ್ ಡೇಟ್ ಬಾಕಿ ಇದೆ.
ಮಕ್ಕಳಿಗೆ ಆಧಾರ್ ನಲ್ಲಿ ಬಯೋಮೆಟ್ರಿಕ್ಸ್ ಅನ್ನು ನವೀಕರಿಸುವುದು ಮುಖ್ಯವಾಗಿದೆ, ಇಲ್ಲದಿದ್ದರೆ ನಂತರ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವಾಗ, ನೀಟ್ (NEET), ಜೆಇಇ (JEE), ಸಿಯುಇಟಿ (CUET) ಮುಂತಾದ ಸ್ಪರ್ಧಾತ್ಮಕ ಮತ್ತು ವಿಶ್ವವಿದ್ಯಾಲಯ ಪರೀಕ್ಷೆಗಳಿಗೆ ನೋಂದಾಯಿಸುವಾಗ ತೊಂದರೆಗಳಿಗೆ ಕಾರಣವಾಗಬಹುದು. ಹಲವು ಬಾರಿ ವಿದ್ಯಾರ್ಥಿಗಳು ಮತ್ತು ಪೋಷಕರು ಕೊನೆಯ ಕ್ಷಣದಲ್ಲಿ ಆಧಾರ್ ಅಪ್‌ಡೇಟ್ ಗಾಗಿ ಧಾವಿಸುವುದು ಆತಂಕಗಳಿಗೆ ಕಾರಣವಾಗುತ್ತದೆ ಎಂದು ಗಮನಿಸಲಾಗಿದೆ. ಸಮಯಕ್ಕೆ ಸರಿಯಾಗಿ ಬಯೋಮೆಟ್ರಿಕ್ ಅಪ್ ಡೇಟ್ ಮಾಡುವುದರಿಂದ ಇದನ್ನು ತಪ್ಪಿಸಬಹುದು.
UIDAI ನ ಸಿಇಒ ಶ್ರೀ ಭುವನೇಶ್ ಕುಮಾರ್ ಅವರು ಈ ಉಪಕ್ರಮದ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಉದ್ದೇಶಿತ ಕಡ್ಡಾಯ ಬಯೋಮೆಟ್ರಿಕ್ ಅಪ್ ಡೇಟ್ (MBU) ಶಿಬಿರಗಳನ್ನು ನಡೆಸಲು ಬೆಂಬಲವನ್ನು ಕೋರಿದ್ದಾರೆ.
“ಶಾಲಾ ಆಧಾರಿತ ಶಿಬಿರಗಳ ಮೂಲಕ ಬಾಕಿ ಇರುವ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ ಅನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಎಂದು ಯೋಚಿಸಲಾಗಿತ್ತು. ಆದರೆ, ಯಾವ ವಿದ್ಯಾರ್ಥಿಗಳು ಬಯೋಮೆಟ್ರಿಕ್ ನವೀಕರಣ ಮಾಡಿಲ್ಲ ಎಂದು ಶಾಲೆಗಳಿಗೆ ಹೇಗೆ ತಿಳಿಯುತ್ತದೆ ಎಂಬುದು ಮುಖ್ಯ ಪ್ರಶ್ನೆಯಾಗಿತ್ತು. UIDAI ಮತ್ತು ಭಾರತ ಸರ್ಕಾರದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ತಂತ್ರಜ್ಞಾನ ತಂಡಗಳು ಒಟ್ಟಾಗಿ ಕೆಲಸ ಮಾಡಿ, UDISE+ ಅಪ್ಲಿಕೇಶನ್ ಮೂಲಕ ಪರಿಹಾರವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿವೆ. ಈಗ ಎಲ್ಲಾ ಶಾಲೆಗಳು ಬಾಕಿ ಇರುವ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ ವಿವರಗಳನ್ನು ನೋಡಬಹುದು” ಎಂದು UIDAI ಸಿಇಒ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
UDISE+ ಬಗ್ಗೆ
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಅಂಕಿಅಂಶಗಳನ್ನು ಸಂಗ್ರಹಿಸುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಬರುವ ಒಂದು ಶೈಕ್ಷಣಿಕ ನಿರ್ವಹಣಾ ಮಾಹಿತಿ ವ್ಯವಸ್ಥೆಯೇ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ ಪ್ಲಸ್ (UDISE+).
UIDAI ಮತ್ತು ಶಾಲಾ ಶಿಕ್ಷಣ ಇಲಾಖೆಯ ಈ ಜಂಟಿ ಉಪಕ್ರಮವು, ಮಕ್ಕಳ ಬಯೋಮೆಟ್ರಿಕ್ ಗಳನ್ನು ಸುಲಭವಾಗಿ ನವೀಕರಿಸಲು ಬಹಳಷ್ಟು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
*****
(Release ID: 2161337)