ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕೇಂದ್ರ ಸರ್ಕಾರವು ಮಾರ್ಚ್ 31, 2026 ರವರೆಗೆ ಅನ್ವಯವಾಗುವಂತೆ ಗೋಧಿ ದಾಸ್ತಾನು ಮಿತಿಯನ್ನು ಪರಿಷ್ಕರಿಸಿದೆ


ಕೃತಕ ಕೊರತೆಯನ್ನು ತಡೆಗಟ್ಟಲು ಭಾರತ ಸರ್ಕಾರವು ಗೋಧಿ ದಾಸ್ತಾನು ಪರಿಶೀಲನೆಗಳನ್ನು ಬಿಗಿಗೊಳಿಸಲಿದೆ

ದೇಶದಲ್ಲಿ ಗೋಧಿಯ ಸಾಕಷ್ಟು ಲಭ್ಯತೆ ಇದೆ: ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ

Posted On: 26 AUG 2025 4:39PM by PIB Bengaluru

ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಮತ್ತು ಅಕ್ರಮ ದಾಸ್ತಾನು ಮತ್ತು ಊಹಾಪೋಹಗಳನ್ನು ತಡೆಗಟ್ಟಲು, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಾರಿಗಳು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು ಮತ್ತು ಸಂಸ್ಕರಣಾ ಘಟಕಗಳಿಗೆ ಅನ್ವಯವಾಗುವಂತೆ ಗೋಧಿಯ ದಾಸ್ತಾನು ಮಿತಿಗಳನ್ನು ವಿಧಿಸಿದೆ. ನಿರ್ದಿಷ್ಟ ಆಹಾರ ಪದಾರ್ಥಗಳ ಮೇಲಿನ ಪರವಾನಗಿ ಅವಶ್ಯಕತೆಗಳು, ದಾಸ್ತಾನು ಮಿತಿಗಳು ಮತ್ತು ಸಾಗಣೆ ನಿರ್ಬಂಧಗಳನ್ನು ತೆಗೆದುಹಾಕುವ (ತಿದ್ದುಪಡಿ) ಆದೇಶ, 2025 ಅನ್ನು 27 ಮೇ 2025 ರಂದು ಹೊರಡಿಸಲಾಯಿತು ಮತ್ತು ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ.

ಮುಂಬರುವ ಹಬ್ಬದ ಋತುವಿಗೆ ಮುಂಚಿತವಾಗಿ ಗೋಧಿ ಬೆಲೆಗಳನ್ನು ನಿಯಂತ್ರಿಸುವ ನಿರಂತರ ಪ್ರಯತ್ನಗಳಲ್ಲಿ, ಕೇಂದ್ರ ಸರ್ಕಾರವು ಮಾರ್ಚ್ 31, 2026 ರವರೆಗೆ ಅನ್ವಯವಾಗುವಂತೆ ಗೋಧಿ ದಾಸ್ತಾನು ಮಿತಿಗಳನ್ನು ಈ ಕೆಳಗಿನಂತೆ ಪರಿಷ್ಕರಿಸಲು ನಿರ್ಧರಿಸಿದೆ:

ಘಟಕಗಳು

ಪ್ರಸ್ತುತ ಗೋಧಿ ದಾಸ್ತಾನು ಮಿತಿ

ಪರಿಷ್ಕೃತ ಗೋಧಿ ದಾಸ್ತಾನು ಮಿತಿ

ವ್ಯಾಪಾರಿ/ಸಗಟು ವ್ಯಾಪಾರಿ

3000 ಮೆಟ್ರಿಕ್‌ ಟನ್

2000 ಮೆಟ್ರಿಕ್ ಟನ್

ಚಿಲ್ಲರೆ ವ್ಯಾಪಾರಿ

ಪ್ರತಿ ಚಿಲ್ಲರೆ ಮಾರಾಟ ಮಳಿಗೆಗೆ 10 ಮೆಟ್ರಿಕ್ ಟನ್

ಪ್ರತಿ ಚಿಲ್ಲರೆ ಮಾರಾಟ ಮಳಿಗೆಗೆ 8 ಮೆಟ್ರಿಕ್ ಟನ್

ದೊಡ್ಡ ಸರಪಳಿ ಚಿಲ್ಲರೆ ವ್ಯಾಪರಿ

ಪ್ರತಿ ಚಿಲ್ಲರೆ ಮಾರಾಟ ಮಳಿಗೆಗೆ 10 ಮೆಟ್ರಿಕ್ ಟನ್ ವರೆಗೆ ಗರಿಷ್ಠ ಪ್ರಮಾಣ (10 ಒಟ್ಟು ಮಳಿಗೆಗಳ ಸಂಖ್ಯೆಯಿಂದ ಗುಣಿಸಿದಾಗ) ಮೆಟ್ರಿಕ್ ಟನ್ ಗೆ ಒಳಪಟ್ಟಿರುತ್ತದೆ. ಇದು ಅವರ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಡಿಪೋಗಳಲ್ಲಿ ಒಟ್ಟಾಗಿ ಇರಿಸಬಹುದಾದ ಗರಿಷ್ಠ ದಾಸ್ತಾನು ಆಗಿರುತ್ತದೆ.

ಪ್ರತಿ ಚಿಲ್ಲರೆ ಮಾರಾಟ ಮಳಿಗೆಗೆ 8 ಮೆಟ್ರಿಕ್ ಟನ್ ವರೆಗೆ ಗರಿಷ್ಠ ಪ್ರಮಾಣ (8 ಅನ್ನು ಒಟ್ಟು ಮಳಿಗೆಗಳ ಸಂಖ್ಯೆಯಿಂದ ಗುಣಿಸಿದಾಗ) ಮೆಟ್ರಿಕ್ ಟನ್ ಗೆ ಒಳಪಟ್ಟಿರುತ್ತದೆ. ಇದು ಅವರ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಡಿಪೋಗಳಲ್ಲಿ ಒಟ್ಟಾಗಿ ಇರಿಸಬಹುದಾದ ಗರಿಷ್ಠ ದಾಸ್ತಾನು ಆಗಿರುತ್ತದೆ.

ಸಂಸ್ಕರಣಾ ಘಟಕ

ಮಾಸಿಕ ಸ್ಥಾಪಿತ ಸಾಮರ್ಥ್ಯದ (ಎಂ.ಐ.ಸಿ) ಶೇ.70 ರಷ್ಟನ್ನು 2025-26ನೇ ಹಣಕಾಸು ವರ್ಷದ ಉಳಿದ ತಿಂಗಳುಗಳಿಂದ ಗುಣಿಸಿದಾಗ ಸಿಗುವ ಗುಣಲಬ್ಧ

ಮಾಸಿಕ ಸ್ಥಾಪಿತ ಸಾಮರ್ಥ್ಯದ (ಎಂ.ಐ.ಸಿ) ಶೇ.60 ರಷ್ಟನ್ನು 2025-26ನೇ ಹಣಕಾಸು ವರ್ಷದ ಉಳಿದ ತಿಂಗಳುಗಳಿಂದ ಗುಣಿಸಿದಾಗ ಸಿಗುವ ಗುಣಲಬ್ಧ

ಎಲ್ಲಾ ಗೋಧಿ ದಾಸ್ತಾನು ಘಟಕಗಳು ಪ್ರತಿ ಶುಕ್ರವಾರ ಗೋಧಿ ದಾಸ್ತಾನು ಪೋರ್ಟಲ್‌ ನಲ್ಲಿ (https://foodstock.dfpd.gov.in) ದಾಸ್ತಾನು ಸ್ಥಿತಿಯನ್ನು ಘೋಷಿಸಬೇಕು/ನವೀಕರಿಸಬೇಕು. ಪೋರ್ಟಲ್‌ ನಲ್ಲಿ ನೋಂದಾಯಿಸದ ಅಥವಾ ದಾಸ್ತಾನು ಮಿತಿಗಳನ್ನು ಉಲ್ಲಂಘಿಸುವ ಯಾವುದೇ ಘಟಕವು 1955ರ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 6 ಮತ್ತು 7ರ ಅಡಿಯಲ್ಲಿ ಸೂಕ್ತ ದಂಡನಾತ್ಮಕ ಕ್ರಮಕ್ಕೆ ಒಳಪಡುತ್ತದೆ.

ಮೇಲೆ ತಿಳಿಸಿದ ಘಟಕಗಳು ಹೊಂದಿರುವ ದಾಸ್ತಾನು ನಿಗದಿತ ಮಿತಿಗಿಂತ ಹೆಚ್ಚಿದ್ದರೆ, ಅಧಿಸೂಚನೆ ಹೊರಡಿಸಿದ 15 ದಿನಗಳಲ್ಲಿ ಅವುಗಳನ್ನು ನಿಗದಿತ ದಾಸ್ತಾನು ಮಿತಿಗೆ ತರಬೇಕಾಗುತ್ತದೆ. ದೇಶದಲ್ಲಿ ಗೋಧಿಯ ಕೃತಕ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಈ ದಾಸ್ತಾನು ಮಿತಿಗಳ ಜಾರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.

2024-25ನೇ ಬೆಳೆ ವರ್ಷದಲ್ಲಿ ಒಟ್ಟು 1175.07 ಲಕ್ಷ ಮೆಟ್ರಿಕ್ ಟನ್ ಗೋಧಿ ಉತ್ಪಾದನೆ ದಾಖಲಾಗಿದ್ದು, ದೇಶದಲ್ಲಿ ಸಾಕಷ್ಟು ಗೋಧಿ ಲಭ್ಯತೆ ಇದೆ. ಕೇಂದ್ರ ಸರ್ಕಾರವು 2025-26ನೇ ಸಾಲಿನ ಆರ್‌.ಎಂ.ಎಸ್‌ ನಲ್ಲಿ ರಾಜ್ಯ ಏಜೆನ್ಸಿಗಳು/ಎಫ್‌.ಸಿ.ಐ ಮೂಲಕ 300.35 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿದೆ, ಇದು ಪಿ.ಡಿ.ಎಸ್, ಒ.ಡಬ್ಲ್ಯೂ.ಎಸ್ ಮತ್ತು ಇತರ ಮಾರುಕಟ್ಟೆ ಮಧ್ಯಸ್ಥಿಕೆಗಳ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ. ಬೆಲೆಗಳನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಸುಲಭ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಗೋಧಿಯ ದಾಸ್ತಾನು ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

 

*****


(Release ID: 2160944)