ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸರ್ಕಾರವು ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಡಿ.ಎಲ್.ಐ) ಯೋಜನೆಯೊಂದಿಗೆ ಸೆಮಿಕಂಡಕ್ಟರ್ ವಿನ್ಯಾಸದ ನಾವೀನ್ಯತೆಗೆ ಉತ್ತೇಜನ ನೀಡುತ್ತಿದೆ


ವರ್ವೆಸೆಮಿ ಮೈಕ್ರೋ ಎಲೆಕ್ಟ್ರಾನಿಕ್ಸ್, ಭಾರತದ ಸೆಮಿಕಂಡಕ್ಟರ್ ಸ್ವಾವಲಂಬನೆಯ ಬಲವರ್ಧನೆಗಾಗಿ ರೋಡ ಮ್ಯಾಪ್ ಐಸಿಗಳನ್ನು ಬಿಡುಗಡೆ ಮಾಡಿದೆ

Posted On: 22 AUG 2025 2:29PM by PIB Bengaluru

ದೇಶದ ಸೆಮಿಕಂಡಕ್ಟರ್ ವಿನ್ಯಾಸದ ಸಾಮರ್ಥ್ಯ ವೃದ್ಧಿಯ ಪ್ರಯತ್ನದ ಅಂಗವಾಗಿ ಭಾರತ ಸರ್ಕಾರ ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಡಿ.ಎಲ್.ಐ) ಯೋಜನೆಯಡಿಯಲ್ಲಿ 23 ಚಿಪ್-ಡಿಸೈನ್ ಯೋಜನೆಗಳನ್ನು ಮಂಜೂರು ಮಾಡಿದೆ. ಸ್ವದೇಶಿ ಸ್ಟಾರ್ಟ್‌ಅಪ್‌ಗಳು ಮತ್ತು ಎಂ.ಎಸ್.ಎಂ.ಇ ಗಳ ನೇತೃತ್ವದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವ ಈ ಯೋಜನೆಗಳಿಗೆ, ಗಸ್ತು ಕ್ಯಾಮೆರಾಗಳು, ಎನರ್ಜಿ ಮೀಟರ್‌ಗಳು, ಮೈಕ್ರೋಪ್ರೊಸೆಸರ್ ಐ.ಪಿ. ಗಳು ಮತ್ತು ನೆಟ್‌ವರ್ಕಿಂಗ್ ಅಪ್ಲಿಕೇಶನ್‌ಗಳಂತಹ ಕ್ಷೇತ್ರಗಳಿಗೆ ಸ್ಥಳೀಯವಾಗಿ ನಿರ್ಮಿಸಿದ ಚಿಪ್‌ಗಳು ಮತ್ತು ಸಿಸ್ಟಮ್-ಆನ್-ಚಿಪ್ (ಎಸ್.ಒ.ಸಿ) ಪರಿಹಾರಗಳನ್ನು ಅಭಿವೃದ್ಧಿಪಡಿಸಲು  ಪ್ರೋತ್ಸಾಹ ಲಭಿಸುತ್ತಿದೆ. 72 ಕಂಪನಿಗಳು ತಮ್ಮ ಚಿಪ್ ವಿನ್ಯಾಸ ಯೋಜನೆಗಳಿಗಾಗಿ ಉದ್ಯಮ-ಪ್ರಮಾಣಿತ ಎಲೆಕ್ಟ್ರಾನಿಕ್ ಡಿಸೈನ್ ಆಟೊಮೇಷನ್ (ಇ.ಡಿ.ಎ) ಪರಿಕರಗಳನ್ನು ಅಳವಡಿಸಿಕೊಂಡಿವೆ.

ಇವುಗಳಲ್ಲಿ - ಒಂದು ಸ್ವಂತ ವಿನ್ಯಾಸ ಘಟಕವಿಲ್ಲದ ಸೆಮಿಕಂಡಕ್ಟರ್ ಕಂಪನಿಯಾದ ವರ್ವೆಸೆಮಿ ಇಂದು ತನ್ನ ಹೊಸ ಉತ್ಪನ್ನಗಳ ಕುರಿತು ಘೋಷಿಸಿದೆ. ಇವು ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳುವ ಆಧುನಿಕ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು (ಐ.ಸಿ.) ಗಲು ಆಗಿವೆ, ಈ ಉತ್ಪನ್ನಗಳು ಭಾರತದ ಸೆಮಿಕಂಡಕ್ಟರ್ ಸ್ವಾವಲಂಬನೆಗೆ ವೇಗವನ್ನು ನೀಡಲಿದ್ದು, ಜಾಗತಿಕ ಮಟ್ಟದಲ್ಲಿ ಹೊಸ ಆವಿಷ್ಕಾರಗಳನ್ನು ಮುನ್ನಡೆಸುವ ಉದ್ದೇಶವನ್ನು ಹೊಂದಿವೆ.

2017ರಲ್ಲಿ ಸ್ಥಾಪನೆಗೊಂಡ ವರ್ವೆಸೆಮಿ, ಜಾಗತಿಕವಾಗಿ ಸೆಮಿಕಂಡಕ್ಟರ್ ಬೌದ್ಧಿಕ ಆಸ್ತಿ (ಐಪಿ) ಯನ್ನು ರಫ್ತು ಮಾಡುವ ಮೊದಲ ಭಾರತೀಯ ಕಂಪನಿಗಳಲ್ಲಿ ಒಂದಾಗಿದೆ. ಅದರ ಸ್ವಾಮ್ಯದ ಯಂತ್ರ ಕಲಿಕೆ-ಚಾಲಿತ ಅನಲಾಗ್ ಚೈನ್ ಐಪಿಗಳು ಪ್ರಮುಖ ಅಂತರರಾಷ್ಟ್ರೀಯ ತಯಾರಕರ ಉತ್ಪನ್ನಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. 110 ಕ್ಕೂ ಹೆಚ್ಚು ಐಪಿಗಳು, 25 ಐಸಿ ಎಸ್‌ಕೆಯುಗಳು, 10 ಪೇಟೆಂಟ್‌ಗಳು ಮತ್ತು 5 ವ್ಯಾಪಾರ ರಹಸ್ಯಗಳ ಪೋರ್ಟ್‌ಫೋಲಿಯೊವುಳ್ಳ, ಕಂಪನಿಯು ಬಾಹ್ಯಾಕಾಶ, ರಕ್ಷಣೆ, ಕೈಗಾರಿಕೆ ಮತ್ತು ಸ್ಮಾರ್ಟ್ ಎನರ್ಜಿ ಅಪ್ಲಿಕೇಶನ್‌ಗಳಿಗೆ ಸೇವೆ ಒದಗಿಸುತ್ತಿದೆ.  ಈ ಕಂಪನಿ ತಯಾರಿಸಿದ ಬಹಳಷ್ಟು ಐಸಿಗಳು ಪ್ರಸ್ತುತ ವಿಶ್ವಾದ್ಯಂತ ಗ್ರಾಹಕರಿಂದ ಮೌಲ್ಯಮಾಪನಕ್ಕೊಳಗಾಗುತ್ತಿವೆ.

ಭಾರತ ಸರ್ಕಾರದ ಡಿ.ಎಲ್.ಐ ಯೋಜನೆ ಹಾಗೂ ಚಿಪ್ಸ್ 2 ಸ್ಟಾರ್ಟ್ಅಪ್ (C2S) ಕಾರ್ಯಕ್ರಮ ಅಡಿಯಲ್ಲಿ ಅನುಮೋದನೆ ಪಡೆದ ಮೊದಲ ಕಂಪನಿಗಳಲ್ಲಿ ಒಂದಾದ ವರ್ವ್‌ಸೆಮಿ, ಭಾರತದಲ್ಲೇ ವಿನ್ಯಾಸಗೊಳಿಸಿದ ಚಿಪ್‌ಗಳನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ಈ ಚಿಪ್‌ಗಳು ಸ್ವಾವಲಂಬನೆಯನ್ನು ಹ್ರಚಿಸುವುದರ ಜೊತೆಗೆ, ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುತ್ತವೆ.

ವರ್ವೆಸೆಮಿಯಿಂದ ಚಿಪ್ಸ್/ಎಸ್.ಒ.ಸಿ ಗಳ ಮಾರ್ಗಸೂಚಿ: 2026 ರ ಅಂತ್ಯ / 2027 ರ ಆರಂಭದಲ್ಲಿ ನಿಗದಿಪಡಿಸಲಾದ ಉತ್ಪಾದನಾ ಪರಿಮಾಣ 

ನಿರ್ಣಾಯಕ ಅನ್ವಯಿಕೆಗಳಿಗೆ ಪರಿಹಾರ ಒದಗಿಸಲು ವಿನ್ಯಾಸಗೊಳಿಸಲಾದ ಹಲವಾರು ಗಮನಾರ್ಹ ಐಸಿಗಳು ವೆರ್ವೆಸೆಮಿಯ ಮಾರ್ಗಸೂಚಿಯಲ್ಲಿವೆ.

MeitY-ಬೆಂಬಲಿತ C2S ಕಾರ್ಯಕ್ರಮದ ಅಡಿಯಲ್ಲಿ ಬಿ.ಎಲ್.ಡಿ.ಸಿ ನಿಯಂತ್ರಕ ಅಪ್ಲಿಕೇಶನ್ ಸ್ಪೆಸಿಫಿಕ್ ಇಂಟಿಗ್ರೇಟೆಡ್ ಚಿಪ್ (ಎ.ಎಸ್.ಐ.ಸಿ) ಅನ್ನು ವೆರ್ವೆಸೆಮಿ ವಿನ್ಯಾಸಗೊಳಿಸುತ್ತಿದೆ. ಇದು ಸಣ್ಣ ಮೋಟಾರ್ ಅಪ್ಲಿಕೇಶನ್‌ಗಳು ಅಂದರೆ ಫ್ಯಾನ್‌ಗಳು ಮತ್ತು ಇತರ ಉಪಕರಣಗಳಂತಹವುಗಳಲ್ಲಿ ಬಳಸಲ್ಪಡುವ ಗುರಿಯನ್ನು ಹೊಂದಲಾಗಿದೆ. 2026 ರಲ್ಲಿ ನಿರೀಕ್ಷಿತ ಮಾದರಿಗಳೊಂದಿಗೆ ಆಮದು ಅವಲಂಬನೆಯನ್ನು ಇದು ಮತ್ತಷ್ಟು ಕಡಿಮೆ ಮಾಡಲಿದೆ. 

ನಿಖರ ಮೋಟರ್ ನಿಯಂತ್ರಣ ಪರಿಹಾರಗಳಿಗಾಗಿ ಎ.ಎಸ್.ಐ.ಸಿ, ಡಿ.ಎಲ್.ಐ-ಅನುಮೋದಿತ ಯೋಜನೆಯಾಗಿ ಗುರುತಿಸಲ್ಪಟ್ಟಿದೆ. ಪ್ರಮುಖವಾಗಿ ವಿದ್ಯುತ್ ವಾಹನಗಳು (ಇ.ವಿ.) ಗಲು, ಡ್ರೋನ್‌ಗಳು, ಹಾಗೂ ಕೈಗಾರಿಕಾ ಸ್ವಯಂಚಾಲನೆಗಾಗಿ ಅಗತ್ಯವಿರುವ ಸಿಲಿಕಾನ್ ಚಿಪ್‌ಗಳ ಅಭಿವೃದ್ಧಿ ಮೇಲೆ ಈ ಯೋಜನೆ ಕೇಂದ್ರೀಕರಿಸಿದೆ. ಇವುಗಳ ಸ್ಯಾಂಪ್ಲಿಂಗ್ 2026ರಲ್ಲಿ ಪ್ರಾರಂಭಗೊಳ್ಳಲಿದೆ.

ಇತರ ಮಹತ್ವದ ಉತ್ಪನ್ನಗಳ ಮಾರ್ಗಸೂಚಿಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ -–

ಅಂತರಿಕ್ಷ ಮತ್ತು ವಿಮಾನಯಾನ ಕ್ಷೇತ್ರಗಳಿಗೆ ಬಳಸುವ ಮಲ್ಟಿಫಂಕ್ಷನ್ ಡೇಟಾ ಅಕ್ವಿಜಿಷನ್ ಸಿಸ್ಟಮ್‌ಗಾಗಿ ಎ.ಎಸ್.ಐ.ಸಿ ಅಭಿವೃದ್ಧಿಯಲ್ಲಿದೆ. ಇದು ಅಧುನಿಕ ಯಂತ್ರ ಕಲಿಕೆ  ತಂತ್ರಜ್ಞಾನದಿಂದ ಚಾಲಿತವಾಗಿದ್ದು, ಅತಿ ಮಹತ್ವದ ಏರೋಸ್ಪೇಸ್ ಕಾರ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಎಂಜಿನಿಯರಿಂಗ್ ಸ್ಯಾಂಪಲ್‌ಗಳು 2026ರಲ್ಲಿ ಲಭ್ಯವಾಗಲಿವೆ.

ತೂಕದ ಮಾಪಕ ಮತ್ತು ಸೇತುವೆ ಸಂವೇದಕ ಅನ್ವಯಿಕೆಗಳಿಗಾಗಿ ಎ.ಎಸ್.ಐ.ಸಿ ಸುಧಾರಿತ  ತೂಕ ವ್ಯವಸ್ಥೆಗಳು ಮತ್ತು ಫೋರ್ಸ್ ಟಚ್ ಸಾಧನಗಳನ್ನು ಅತ್ಯಂತ ಹೆಚ್ಚಿನ ನಿಖರತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಸಿದ್ಧಪಡಿಸುತ್ತಿದೆ. ಈ ಐ.ಸಿ ಅನ್ನು ಏಷ್ಯಾದಾದ್ಯಂತ ಪ್ರಮುಖ ಪಾಲುದಾರರೊಂದಿಗೆ ಮಾದರಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರ ಎಂಜಿನಿಯರಿಂಗ್ ಮಾದರಿಗಳು 2025ರ ಅಂತ್ಯದಲ್ಲಿ ಲಭ್ಯವಿರುತ್ತವೆ. 

ಅತ್ಯಂತ ನಿಖರ, ಹೆಚ್ಚಿನ ವೇಗದ ಶಕ್ತಿ ಮಾಪನ ಮತ್ತು ಮುನ್ಸೂಚಕ ನಿರ್ವಹಣಾ ಸಾಮರ್ಥ್ಯಗಳನ್ನು ಒದಗಿಸಲು ಭಾರತದಲ್ಲಿ ಸ್ಮಾರ್ಟ್ ಎನರ್ಜಿ ಮೀಟರಿಂಗ್ ಅಪ್ಲಿಕೇಶನ್‌ಗಳಿಗಾಗಿ ಎ.ಎಸ್.ಐ.ಸಿ ಅನ್ನು ವಿನ್ಯಾಸಗೊಳಿಸಲಾಗುತ್ತಿದೆ. ವರ್ಗ 0.2S ನಿಖರತೆಯ ಮಾನದಂಡಗಳಿಗೆ ಅನುಗುಣವಾಗಿ ಬಹು-ಚಾನೆಲ್ ಸೆನ್ಸಿಂಗ್ ಅನ್ನು ಹೊಂದಿರುವ ಈ ಐ.ಸಿ, 2025ರ ಅಂತ್ಯದಲ್ಲಿ ಲಭ್ಯವಿರುವ ಮಾದರಿಗಳೊಂದಿಗೆ ಮುಂಬರುವ ಪೀಳಿಗೆಯ ಸ್ಮಾರ್ಟ್ ಎನರ್ಜಿ ಸಿಸ್ಟಮ್‌ಗಳಿಗೆ ದೃಢವಾದ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. 

ಪ್ರತಿ ಚಿಪ್‌ನಲ್ಲಿಯೂ ಅತ್ಯುನ್ನತ ಬುದ್ಧಿವಂತಿಕೆ 

ವರ್ವ್‌ಸೆಮಿ ನಿರ್ಮಿಸಿದ ಐಸಿಗಳು, ಅಂತರ್ನಿಹಿತ ಮಷೀನ್ ಲರ್ನಿಂಗ್‌ ಶಕ್ತಿಯಿಂದ ಕಾರ್ಯನಿರ್ವಹಿಸುತ್ತವೆ. ಇವು ಸ್ವತಃ ಮರಮ್ಮತ್ತು ಮಾಡಿಕೊಳ್ಳುವ ವ್ಯವಸ್ಥೆಗಳನ್ನು (self-healing systems) ಹೊಂದಿರುತ್ತವೆ, ಹೆಚ್ಚಿನ ಭದ್ರತೆ (fail-safe reliability) ಒದಗಿಸುತ್ತವೆ ಮತ್ತು ಉತ್ಪಾದನಾ ಫಲಿತಾಂಶಗಳನ್ನು (fabrication yields) ಹೆಚ್ಚಿಸುತ್ತವೆ. ಈ ಮಹತ್ವದ ಆವಿಷ್ಕಾರವು ಸಾಂಪ್ರದಾಯಿಕ ಮಿತಿಗಳನ್ನು ಮೀರಿ ಕಾರ್ಯಕ್ಷಮತೆ, ವಿದ್ಯುತ್ ಬಳಕೆಯಲ್ಲಿ ಕಾರ್ಯದಕ್ಷತೆ ಹಾಗೂ ನಿಖರತೆಗಳನ್ನು ಹೆಚ್ಚಿಸುತ್ತದೆ. ಇದರ ಫಲ ಸ್ವರೂಪ, ವರ್ವ್‌ಸೆಮಿ ಚಿಪ್‌ಗಳು ಇನ್ನಷ್ಟು ಬುದ್ಧಿವಂತ, ಸುರಕ್ಷಿತ ಮತ್ತು ಕಾರ್ಯಕ್ಷಮತೇ ಹೊಂದಿದವುಗಳಾಗುತ್ತವೆ. 

"ಈ ನಾವೀನ್ಯತೆಗಳು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಒಂದು ಮಹತ್ವದ ತಿರುವು" ಎಂದು ವೆರ್ವೆಸೆಮಿಯ ಸಂಸ್ಥಾಪಕ ಮತ್ತು ಸಿಇಒ ರಾಕೇಶ್ ಮಲಿಕ್ ಹೇಳಿದ್ದಾರೆ. "ಕಾರ್ಯತಂತ್ರದ ಮತ್ತು ಗ್ರಾಹಕ ಮಾರುಕಟ್ಟೆಗಳಿಗಾಗಿ ಉನ್ನತ-ಕಾರ್ಯಕ್ಷಮತೆಯ, ಮೇಡ್-ಇನ್-ಇಂಡಿಯಾ ಐಸಿಗಳನ್ನು ನಿರ್ಮಿಸುವ ಮೂಲಕ, ನಾವು ಆಮದು ಪರ್ಯಾಯಕ್ಕೆ ಚಾಲನೆ ನೀಡುವುದಲ್ಲದೆ, ಜಾಗತಿಕ ಸೆಮಿಕಂಡಕ್ಟರ್ ಹಂತದಲ್ಲಿ ಭಾರತದ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದೇವೆ." 

ವರ್ವ್‌ಸೆಮಿಯಲ್ಲಿ ನಾವು ಅಧುನಿಕ ಸಿಗ್ನಲ್-ಚೈನ್ ವಿನ್ಯಾಸವನ್ನು ಮಷೀನ್ ಲರ್ನಿಂಗ್‌ನೊಂದಿಗೆ ಸಂಯೋಜಿಸುವ ಮೂಲಕ, ಫಾಲ್ಟ್ ಟೋಲೆರನ್ಸ್ , ಹೊಂದಾಣಿಕೆ ಸಾಮರ್ಥ್ಯ ಹಾಗೂ ಮುಂಜಾಗೃತಾ ದೋಷ ನಿರ್ಣಯಗಳ ಅಂಶಗಳನ್ನು ಒದಗಿಸುತ್ತೇವೆ. ನಮ್ಮ ಬಹು -ಚಾನೆಲ್ ದತ್ತಾಂಶ ಸ್ವಾಧೀನತೆ ಮತ್ತು ಕೈಗಾರಿಕಾ ಅನ್ವಯಿಕ ಐ.ಸಿ ಗಳು, ಏರೋಸ್ಪೇಸ್, ಕೈಗಾರಿಕೆ ಮತ್ತು ಗ್ರಾಹಕ ಮಾರುಕಟ್ಟೆಗಳಲ್ಲಿ ನಿಖರತೆ, ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿವೆ,” ಎಂದು ವರ್ವ್‌ಸೆಮಿ ಮೈಕ್ರೊಎಲೆಕ್ಟ್ರಾನಿಕ್ಸ್‌ನ ಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಪ್ರತಾಪ್ ನಾರಾಯಣ್ ಸಿಂಗ್ ಹೇಳಿದ್ದಾರೆ. 

"ಭಾರತವು ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ವಿಶ್ವ ನಾಯಕನಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ, ಜಗತ್ತಿನ ಪ್ರತಿಯೊಂದು ಸಾಧನವು ಭಾರತದಲ್ಲಿಯೇ ಚಿಪ್ ಅನ್ನು ವಿನ್ಯಾಸಗೊಳಿಸುವ ಭವಿಷ್ಯವನ್ನು ಕಲ್ಪಿಸಿಕೊಳ್ಳುತ್ತಿದೆ" ಎಂದು MeitY ನ ತಂಡದ ಸಂಯೋಜಕಿ (ಆರ್ & ಡಿ) ಶ್ರೀಮತಿ ಸುನೀತಾ ವರ್ಮಾ ಹೇಳಿದರು.

ವರ್ವೆಸೆಮಿ ಕುರಿತು

ವರ್ವೆಸೆಮಿ ಮೈಕ್ರೋಎಲೆಕ್ಟ್ರಾನಿಕ್ಸ್ ಒಂದು ಅದ್ಭುತ ಸೆಮಿಕಂಡಕ್ಟರ್ ಕಂಪನಿಯಾಗಿದ್ದು, ಇದು ಹೆಚ್ಚಿನ ಕಾರ್ಯಕ್ಷಮತೆಯುಳ್ಳ ಅನಲಾಗ್ ಐಪಿಗಳು ಮತ್ತು ಎಎಸ್ಐಸಿಗಳಲ್ಲಿ ಪರಿಣತಿ ಹೊಂದಿದೆ. ಐದು ವಿಭಿನ್ನ ಫೌಂಡರಿಗಳು ಮತ್ತು 20 ಕ್ಕೂ ಹೆಚ್ಚು ತಂತ್ರಜ್ಞಾನ ನೋಡ್‌ಗಳಲ್ಲಿ ತನ್ನ ಆವಿಷ್ಕಾರಗಳನ್ನು ವಿಸ್ತರಿಸಿರುವ ವರ್ವ್‌ಸೆಮಿ, ಕಾರ್ಯಕ್ಷಮತೆ, ಇಂಧನ ಮತ್ತು ವಿಸ್ತೀರ್ಣದಲ್ಲಿ 10 ಪಟ್ಟು ಹೆಚ್ಚಿನ ಸುಧಾರಣೆಗಳನ್ನುಒದಗಿಸುತ್ತದೆ. 5G, ವೈ-ಫೈ 6/7, ಎನರ್ಜಿ, ಮೋಟಾರ್ ನಿಯಂತ್ರಣ ಮತ್ತು ಏರೋಸ್ಪೇಸ್‌ನಲ್ಲಿ ಜಾಗತಿಕ ತಯಾರಕರಿಂದ ವಿಶ್ವಾಸಾರ್ಹತೆ ಗಳಿಸಿರುವ ವರ್ವೆಸೆಮಿ, ಭಾರತದಲ್ಲೇ ವಿನ್ಯಾಸಗೊಂಡ ಸೆಮಿಕಂಡಕ್ಟರ್ ಪರಿಹಾರಗಳನ್ನು ವಿಶ್ವ ಮಟ್ಟಕ್ಕೆ ತಲುಪಿಸುವಲ್ಲಿ ಮುಂಚೂಣಿಯಲ್ಲಿದೆ.

 

*****
 


(Release ID: 2159856)