ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಎಥೆನಾಲ್ ಮಿಶ್ರಣವು ರೈತರ ಆದಾಯ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ: ಪೆಟ್ರೋಲಿಯಂ ಸಚಿವರಾದ ಹರ್ ದೀಪ್ ಎಸ್. ಪುರಿ

Posted On: 21 AUG 2025 7:19PM by PIB Bengaluru

ಪೆಟ್ರೋಲಿಯಂ ಉತ್ಪನ್ನಗಳಿಗೆ ಸುಸ್ಥಿರ ಪರ್ಯಾಯವಾಗಿ ಜೈವಿಕ ಇಂಧನಗಳನ್ನು ಉತ್ತೇಜಿಸುವಲ್ಲಿ ಸರ್ಕಾರವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಇಂದು ಲೋಕಸಭೆಯಲ್ಲಿ ನಕ್ಷತ್ರ ಹಾಕಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು. 

ರಾಷ್ಟ್ರೀಯ ಜೈವಿಕ ಇಂಧನ ನೀತಿಯ ಮೂಲಕ ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸಲಾಗಿದೆ. ಸರ್ಕಾರವು ವಿವಿಧ ಉದ್ದೇಶಗಳೊಂದಿಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇ.ಬಿ.ಪಿ) ಕಾರ್ಯಕ್ರಮದ ಅಡಿಯಲ್ಲಿ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ. ಹಸಿರು ಇಂಧನವಾಗಿ, ಎಥೆನಾಲ್ ಸರ್ಕಾರದ ಪರಿಸರ ಸುಸ್ಥಿರತೆಯ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಇದು ವಿದೇಶಿ ವಿನಿಮಯವನ್ನು ಉಳಿಸುವುದರ ಜೊತೆಗೆ ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಶೀಯ ಕೃಷಿ ವಲಯವನ್ನು ಉತ್ತೇಜಿಸುತ್ತದೆ.

ಇ.ಬಿ.ಪಿ ಕಾರ್ಯಕ್ರಮವು 2014-15ನೇ ಸಾಲಿನ ಎಥೆನಾಲ್ ಸರಬರಾಜು ವರ್ಷ (ಇ.ಎಸ್.ವೈ.) ದಿಂದ ಜುಲೈ 2025 ರವರೆಗೆ ರೈತರಿಗೆ ರೂ.1,25,000 ಕೋಟಿಗೂ ಹೆಚ್ಚಿನ ಹಣವನ್ನು ತ್ವರಿತವಾಗಿ ಪಾವತಿಸಲು ಕಾರಣವಾಗಿದೆ, ಅಲ್ಲದೆ,  ರೂ.1,44,000 ಕೋಟಿಗೂ ಹೆಚ್ಚು ವಿದೇಶಿ ವಿನಿಮಯವನ್ನು ಉಳಿತಾಯ ಮಾಡಲಾಗಿದ್ದು, ಸುಮಾರು 736 ಲಕ್ಷ ಮೆಟ್ರಿಕ್ ಟನ್ ಗಳ ನಿವ್ವಳ ಇಂಗಾಲದ ಡೈಆಕ್ಸೈಡ್ (CO2) ಕಡಿತ ಮತ್ತು 244 ಲಕ್ಷ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ಕಚ್ಚಾ ತೈಲದ ಬದಲಿಗೆ ಬಳಕೆಯಾಗಿದೆ.

ಇ.ಬಿ.ಪಿ. ಕಾರ್ಯಕ್ರಮದಡಿಯಲ್ಲಿ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಜೂನ್ 2022 ರಲ್ಲಿ ಪೆಟ್ರೋಲ್ನಲ್ಲಿ 10% ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸಿವೆ, ಅಂದರೆ 2021-22 ರ ಇಎಸ್ವೈ ಅವಧಿಯಲ್ಲಿ ಗುರಿಗಿಂತ ಐದು ತಿಂಗಳು ಮುಂಚಿತವಾಗಿ. ಇಎಸ್ವೈ 2022-23 ರಲ್ಲಿ ಇಎಸ್ವೈ 2022-23 ರಲ್ಲಿ 12.06%, ಇಎಸ್ವೈ 2023-24 ರಲ್ಲಿ 14.60% ಮತ್ತು ನಡೆಯುತ್ತಿರುವ ಇಎಸ್ವೈ 2024-25 ರ ಅವಧಿಯಲ್ಲಿ ಜುಲೈ 31, 2025 ರಂದು 19.05% ಕ್ಕೆ ಮಿಶ್ರಣ ಮಟ್ಟಗಳು ಮತ್ತಷ್ಟು ಹೆಚ್ಚಾದವು. ಜುಲೈ 2025 ರಲ್ಲಿಯೇ  19.93% ಎಥೆನಾಲ್ ಮಿಶ್ರಣವನ್ನು ಈಗಾಗಲೇ ಸಾಧಿಸಲಾಗಿದೆ.

ದೇಶಾದ್ಯಂತ ಎಥೆನಾಲ್ ಉತ್ಪಾದನೆಯನ್ನು ಬೆಂಬಲಿಸಲು, ಸರ್ಕಾರವು ಎಥೆನಾಲ್ ಉತ್ಪಾದನೆಗೆ ಫೀಡ್ ಸ್ಟಾಕ್ ವಿಸ್ತರಣೆ, ಎಥೆನಾಲ್ ಸಂಗ್ರಹಣೆಗೆ ಆಡಳಿತಾತ್ಮಕ ಬೆಲೆ ಕಾರ್ಯವಿಧಾನ, ಇ.ಬಿ.ಪಿ. ಕಾರ್ಯಕ್ರಮದಲ್ಲಿ ಬಳಸುವ ಎಥೆನಾಲ್ಗೆ ಜಿ.ಎಸ್.ಟಿ.  ದರವನ್ನು 5% ಕ್ಕೆ ಇಳಿಸುವುದು, 2018-22 ರ ಅವಧಿಯಲ್ಲಿ ವಿವಿಧ ಎಥೆನಾಲ್ ಬಡ್ಡಿ ಸಬ್ಸಿಡಿ ಯೋಜನೆಗಳನ್ನು (ಇ.ಐ.ಎಸ್.ಎಸ್.)  ಪರಿಚಯಿಸುವುದು ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅಸ್ತಿತ್ವದಲ್ಲಿರುವ ಕಬ್ಬು ಆಧಾರಿತ ಡಿಸ್ಟಿಲರಿಗಳನ್ನು ಮೊಲಾಸಸ್ ಮತ್ತು ಧಾನ್ಯಗಳಿಂದ ಎಥೆನಾಲ್ ಉತ್ಪಾದನೆಗಾಗಿ ಬಹು-ಫೀಡ್ಸ್ಟಾಕ್ ಸ್ಥಾವರಗಳಾಗಿ ಪರಿವರ್ತಿಸಲು ಮೀಸಲಾದ ಬಡ್ಡಿ ಸಬ್ಸಿಡಿ ಯೋಜನೆ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಹೆಚ್ಚುವರಿಯಾಗಿ, ಒಎಂಸಿ ಗಳು ಮತ್ತು ಮೀಸಲಾದ ಎಥೆನಾಲ್ ಸ್ಥಾವರಗಳ ನಡುವೆ ದೀರ್ಘಾವಧಿಯ ಖರೀದಿಸುವ   ಒಪ್ಪಂದಗಳು (ಎಲ್.ಟಿ.ಒ.ಎ ಗಳು), ಲಭ್ಯತೆಯನ್ನು ಹೆಚ್ಚಿಸಲು ಎಥೆನಾಲ್ನ ಬಹುಮಾದರಿ ಸಾಗಣೆ ಮತ್ತು ಸಂಬಂಧಿತ ಮೂಲಸೌಕರ್ಯಗಳೊಂದಿಗೆ ಎಥೆನಾಲ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದನ್ನು ಜಾರಿಗೆ ತರಲಾಗಿದೆ.

ಇದಲ್ಲದೆ, ಮುಂದುವರಿದ ಜೈವಿಕ ಇಂಧನ ಉತ್ಪಾದನೆಯನ್ನು ಸುಗಮಗೊಳಿಸಲು, ಸರ್ಕಾರವು 2019 ರಲ್ಲಿ 'ಪ್ರಧಾನ ಮಂತ್ರಿ ಜಿ-ವನ್  (ಜೈವ್ ಇಂಧನ್- ವಾತಾವರಣ್ ಅನುಕೂಲ್ ಫಸಲ್ ಅವಶೇಷ ನಿವಾರಣ್) ಯೋಜನೆ'ಯನ್ನು ಸೂಚಿಸಿದೆ, ಇದನ್ನು 2024 ರಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಶ್ರೀ ಪುರಿ ಮಾಹಿತಿ ನೀಡಿದರು. ಈ ಯೋಜನೆಯು ಲಿಗ್ನೋಸೆಲ್ಯುಲೋಸಿಕ್ ಬಯೋಮಾಸ್ ಮತ್ತು ಬೆಳೆ ಅವಶೇಷಗಳು ಸೇರಿದಂತೆ ಇತರ ನವೀಕರಿಸಬಹುದಾದ ಫೀಡ್ಸ್ಟಾಕ್ಗಳನ್ನು ಬಳಸಿಕೊಂಡು ದೇಶದಲ್ಲಿ ಸುಧಾರಿತ ಜೈವಿಕ ಇಂಧನ ಯೋಜನೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದು ರೈತರಿಗೆ ಅವರ ವ್ಯರ್ಥವಾಗುವ ಕೃಷಿ ಅವಶೇಷಗಳಿಗೆ ಲಾಭದಾಯಕ ಆದಾಯವನ್ನು ಒದಗಿಸುತ್ತದೆ, ಗ್ರಾಮೀಣ ಮತ್ತು ನಗರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಬಯೋಮಾಸ್ ದಹನದಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಪರಿಹರಿಸುತ್ತದೆ ಮತ್ತು ಸ್ವಚ್ಛ ಭಾರತ ಮಿಷನ್ಗೆ ಕೊಡುಗೆ ನೀಡುತ್ತದೆ. ಈ ಯೋಜನೆಯು ಒಟ್ಟು 1,969.50 ಕೋಟಿ ರೂ. ಆರ್ಥಿಕ ವೆಚ್ಚವನ್ನು ಹೊಂದಿದೆ, ಇದರಲ್ಲಿ 1,800 ಕೋಟಿ ರೂ. ವಾಣಿಜ್ಯ-ಪ್ರಮಾಣದ ಮುಂದುವರಿದ ಜೈವಿಕ ಇಂಧನ ಯೋಜನೆಗಳಿಗೆ ಮತ್ತು 150 ಕೋಟಿ ರೂ ಪ್ರದರ್ಶನ-ಪ್ರಮಾಣದ ಯೋಜನೆಗಳಿಗೆ ವಿತರಸಲಾಗಿದೆ.

ಸರ್ಕಾರವು ಬಯೋಡೀಸೆಲ್ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇವುಗಳಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿಯಡಿಯಲ್ಲಿ ಡೀಸೆಲ್ನಲ್ಲಿ ಬಯೋಡೀಸೆಲ್ ಮಿಶ್ರಣ/ಬಯೋಡೀಸೆಲ್ನ ನೇರ ಮಾರಾಟದ ಸೂಚಕ ಗುರಿಯನ್ನು ನಿಗದಿಪಡಿಸುವುದು, 'ಸಾರಿಗೆ ಉದ್ದೇಶಗಳಿಗಾಗಿ ಹೈ ಸ್ಪೀಡ್ ಡೀಸೆಲ್ನೊಂದಿಗೆ ಮಿಶ್ರಣಕ್ಕಾಗಿ ಬಯೋಡೀಸೆಲ್ ಮಾರಾಟಕ್ಕಾಗಿ ಮಾರ್ಗಸೂಚಿಗಳು-2019' ಅನ್ನು ಪ್ರಕಟಿಸುವುದು ಮತ್ತು ಮಿಶ್ರಣ ಕಾರ್ಯಕ್ರಮಕ್ಕಾಗಿ ಬಯೋಡೀಸೆಲ್ ಖರೀದಿಗಾಗಿ ಜಿಎಸ್ಟಿ ದರವನ್ನು 12% ರಿಂದ 5% ಕ್ಕೆ ಇಳಿಸುವುದು ಸೇರಿವೆ.

ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಕಚ್ಚಾ ತೈಲ ಆಮದುಗಳನ್ನು ಕಡಿಮೆ ಮಾಡಲು, ರೈತರನ್ನು ಬೆಂಬಲಿಸಲು ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಲು ದೇಶದಲ್ಲಿ ಜೈವಿಕ ಇಂಧನ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಶ್ರೀ ಪುರಿಯವರು ಪುನರುಚ್ಚರಿಸಿದರು.

 

*****
 


(Release ID: 2159704)
Read this release in: English , Urdu , Hindi , Gujarati