ಪ್ರಧಾನ ಮಂತ್ರಿಯವರ ಕಛೇರಿ
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
Posted On:
27 JUL 2025 9:43AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಪ್ರೇರಣೆಯ ದಾರ್ಶನಿಕ, ಮಹೋನ್ನತ ವಿಜ್ಞಾನಿ, ಮಾರ್ಗದರ್ಶಕ ಹಾಗೂ ಮಹಾನ್ ದೇಶಭಕ್ತರನ್ನಾಗಿ ಸ್ಮರಿಸಲಾಗುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ನಮ್ಮ ಪ್ರೀತಿಯ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸುತ್ತಿದ್ದೇವೆ. ಅವರನ್ನು ಪ್ರೇರಣೆಯ ದಾರ್ಶನಿಕ, ಮಹೋನ್ನತ ವಿಜ್ಞಾನಿ, ಮಾರ್ಗದರ್ಶಕ ಹಾಗೂ ಮಹಾನ್ ದೇಶಭಕ್ತರನ್ನಾಗಿ ಸ್ಮರಿಸಲಾಗುತ್ತದೆ. ನಮ್ಮ ದೇಶಕ್ಕೆ ಅವರು ಮಾಡಿದ ಸಮರ್ಪಣೆ ಆದರ್ಶಪ್ರಾಯವಾಗಿದೆ. ಅವರ ವಿಚಾರಗಳು ಭಾರತದ ಯುವಜನರನ್ನು ಅಭಿವೃದ್ಧಿ ಹೊಂದಿದ ಹಾಗೂ ಬಲಿಷ್ಠ ಭಾರತದ ನಿರ್ಮಾಣದೆಡೆಗೆ ಕೊಡುಗೆ ನೀಡುವಂತೆ ಪ್ರೇರೆಪಿಸುತ್ತದೆ".
*****
(Release ID: 2148989)
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam