ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆದಂಪುರ ವಾಯುನೆಲೆಯಲ್ಲಿ ವೀರ ವಾಯುಪಡೆ ಯೋಧರು ಮತ್ತು ಸಮರ ವೀರರೊಂದಿಗೆ ಪ್ರಧಾನಮಂತ್ರಿ ಸಂವಾದ

Posted On: 13 MAY 2025 5:38PM by PIB Bengaluru

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಈ ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗವಷ್ಟೇ ನೋಡಿದೆ. ಭಾರತ್ ಮಾತಾ ಕಿ ಜೈ ಎಂಬುದು ಕೇವಲ ಘೋಷಣೆಯಲ್ಲ, ಭಾರತ ಮಾತೆಯ ಗೌರವ ಮತ್ತು ಘನತೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ದೇಶದ ಪ್ರತಿಯೊಬ್ಬ ಸೈನಿಕನ ಪ್ರಮಾಣವಚನ ಇದಾಗಿದೆ. ದೇಶಕ್ಕಾಗಿ ಬದುಕಲು ಬಯಸುವ, ಏನನ್ನಾದರೂ ಸಾಧಿಸಲು ಬಯಸುವ ದೇಶದ ಪ್ರತಿಯೊಬ್ಬ ನಾಗರಿಕನ ಧ್ವನಿ ಇದಾಗಿದೆ. ಭಾರತ್ ಮಾತಾ ಕಿ ಜೈ ಎಂಬುದು ಯುದ್ಧಭೂಮಿಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಪ್ರತಿಧ್ವನಿಸುತ್ತದೆ. ಭಾರತದ ಸೈನಿಕರು ಭಾರತ್ ಮಾತಾ ಕಿ ಜೈ ಎಂದು ಜಪಿಸಿದಾಗ, ಶತ್ರುಗಳ ಹೃದಯ ನಡುಗುತ್ತದೆ. ನಮ್ಮ ಡ್ರೋನ್‌ಗಳು ಶತ್ರುಗಳ ಕೋಟೆಯ ಗೋಡೆಗಳನ್ನು ಉರುಳಿಸಿದಾಗ, ನಮ್ಮ ಕ್ಷಿಪಣಿಗಳು ಭಾರಿ ಶಬ್ದದೊಂದಿಗೆ ಗುರಿ ತಲುಪಿದಾಗ, ಶತ್ರು ಕೇಳುತ್ತಾನೆ - ಭಾರತ್ ಮಾತಾ ಕಿ ಜೈ! ಘೋಷಣೆಯನ್ನ. ರಾತ್ರಿಯ ಕಗ್ಗತ್ತಲೆಯಲ್ಲೂ ನಾವು ಸೂರ್ಯನನ್ನು ಬೆಳಗಿದಾಗ, ಶತ್ರು ನೋಡುತ್ತಾನೆ - ಭಾರತ್ ಮಾತಾ ಕಿ ಜೈ! ನಮ್ಮ ಪಡೆಗಳು ಪರಮಾಣು ಬೆದರಿಕೆಯನ್ನು ಹುಸಿಗೊಳಿಸಿದಾಗ, ಆಕಾಶದಿಂದ ಭೂಗತ ಲೋಕಕ್ಕೆ ಒಂದೇ ಒಂದು ವಿಷಯ ಪ್ರತಿಧ್ವನಿಸುತ್ತದೆ, ಅದೇ - ಭಾರತ್ ಮಾತಾ ಕಿ ಜೈ!

ಸ್ನೇಹಿತರೆ,

ವಾಸ್ತವವಾಗಿಯೂ, ನೀವೆಲ್ಲರೂ ಕೋಟ್ಯಂತರ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ, ಪ್ರತಿಯೊಬ್ಬ ಭಾರತೀಯನನ್ನು ಬೀಗುವಂತೆ ಮಾಡಿದ್ದೀರಿ. ನೀವು ಇತಿಹಾಸವನ್ನು ಸೃಷ್ಟಿಸಿದ್ದೀರಿ. ನಿಮ್ಮನ್ನು ಕಾಣಲು ನಾನು ಬೆಳಗ್ಗೆ ಬೇಗನೆ ನಿಮ್ಮಲ್ಲಿಗೆ ಬಂದಿದ್ದೇನೆ. ಅಪ್ರತಿಮೆ ಧೈರ್ಯಶಾಲಿಗಳ ಪಾದಗಳು ಭೂಮಿಯ ಮೇಲೆ ಬಿದ್ದಾಗ, ಭೂಮಿ ತಾಯಿ ಆಶೀರ್ವದಿಸುತ್ತಾಳೆ. ಧೈರ್ಯಶಾಲಿಗಳನ್ನು ನೋಡುವ ಅವಕಾಶ ಸಿಕ್ಕಾಗ, ಜೀವನವೂ ಆಶೀರ್ವದಿಸಲ್ಪಡುತ್ತದೆ. ಅದಕ್ಕಾಗಿಯೇ ನಾನು ನಿಮ್ಮನ್ನು ನೋಡಲು ಬೆಳಗ್ಗೆಯೇ ಬೇಗನೆ ಇಲ್ಲಿಗೆ ಬಂದಿದ್ದೇನೆ. ಇಂದಿನಿಂದ ಹಲವು ದಶಕಗಳ ನಂತರವೂ, ಭಾರತದ ಈ ಶೌರ್ಯದ ಬಗ್ಗೆ ಚರ್ಚಿಸುವಾಗ, ಅದರ ಪ್ರಮುಖ ಅಧ್ಯಾಯವು ನೀವು ಮತ್ತು ನಿಮ್ಮ ಸಹೋದ್ಯೋಗಿಗಳೇ ಆಗಿದ್ದೀರಿ. ನೀವೆಲ್ಲರೂ ದೇಶದ ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗೆ ಹೊಸ ಸ್ಫೂರ್ತಿಯಾಗಿದ್ದೀರಿ. ಈ ವೀರರ ಪುಣ್ಯ ಭೂಮಿಯಿಂದ, ಇಂದು ನಾನು ವಾಯುಪಡೆ, ನೌಕಾಪಡೆ ಮತ್ತು ಸೇನೆಯ ಎಲ್ಲಾ ಧೈರ್ಯಶಾಲಿ ಸೈನಿಕರಿಗೆ, ಬಿಎಸ್‌ಎಫ್‌ನ ನಮ್ಮ ಧೈರ್ಯಶಾಲಿ ಸೈನಿಕರಿಗೆ ವಂದಿಸುತ್ತೇನೆ. ನಿಮ್ಮ ಶೌರ್ಯದಿಂದಾಗಿ, ಆಪರೇಷನ್ ಸಿಂದೂರ್‌ನ ಪ್ರತಿಧ್ವನಿ ಪ್ರತಿಯೊಂದು ಮೂಲೆಯಲ್ಲೂ ಕೇಳಿಬರುತ್ತಿದೆ. ಈ ಸಂಪೂರ್ಣ ಕಾರ್ಯಾಚರಣೆಯ ಸಮಯದಲ್ಲಿ, ಪ್ರತಿಯೊಬ್ಬ ಭಾರತೀಯನು ನಿಮ್ಮೊಂದಿಗೆ ನಿಂತಿದ್ದ, ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆ ನಿಮಗಾಗಿ ಇತ್ತು. ಇಂದು ದೇಶದ ಪ್ರತಿಯೊಬ್ಬ ನಾಗರಿಕನು ತನ್ನ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಕೃತಜ್ಞನಾಗಿದ್ದಾನೆ ಮತ್ತು ನಿಮ್ಮೆಲ್ಲರಿಗೆ ಋಣಿಯಾಗಿದ್ದಾನೆ.

ಸ್ನೇಹಿತರೆ,

ಆಪರೇಷನ್ ಸಿಂದೂರ್ ಸಾಮಾನ್ಯ ಸೇನಾ ಕಾರ್ಯಾಚರಣೆಯಲ್ಲ, ಇದು ಭಾರತದ ನೀತಿ, ಉದ್ದೇಶಗಳು ಮತ್ತು ನಿರ್ಣಾಯಕತೆಯ ಸಂಗಮವಾಗಿದೆ. ಭಾರತವು ಬುದ್ಧನ ಭೂಮಿ ಹಾಗೂ ಗುರು ಗೋವಿಂದ ಸಿಂಗ್ ಜಿ ಅವರ ಪುಣ್ಯ ಭೂಮಿ. ಗುರು ಗೋವಿಂದ ಸಿಂಗ್ ಜಿ ಹೇಳಿದ್ದರು. -सवा लाख सेएक लड़ाऊं , चि ड़ि यन तेमबाज़ तड़ुाऊं , तबैगु गोबि दं सि हं नाम कहाऊं ।”.  ದುಷ್ಟತನ ನಾಶ ಮಾಡಲು ಮತ್ತು ಧರ್ಮವನ್ನು ಸ್ಥಾಪಿಸಲು ಶಸ್ತ್ರಾಸ್ತ್ರಗಳನ್ನು ಹಿಡಿಯುವುದು ನಮ್ಮ ಸಂಪ್ರದಾಯ. ಅದಕ್ಕಾಗಿಯೇ ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಸಿಂದೂರ ಅಳಿಸಿದಾಗ, ನಾವು ಭಯೋತ್ಪಾದಕರ ಮನೆಗಳಿಗೆ ನುಗ್ಗಿ ಅವರ ಕೋರೆ ಹಲ್ಲುಗಳನ್ನು ಪುಡಿ ಮಾಡಿದೆವು. ಅವರು ಹೇಡಿಗಳಂತೆ ಅಡಗಿಕೊಂಡು ಬಂದಿದ್ದರು, ಆದರೆ ಅವರು ಸವಾಲು ಹಾಕಿದ್ದು ಭಾರತೀಯ ಬಲಿಷ್ಠ ಸೈನ್ಯ ಎಂಬುದನ್ನು ಅವರು ಮರೆತರು. ನೀವು ಅವರ ಮೇಲೆ ಎದುರಿನಿಂದ ದಾಳಿ ಮಾಡಿ ಕೊಂದಿದ್ದೀರಿ, ನೀವು ಭಯೋತ್ಪಾದನೆಯ ಎಲ್ಲಾ ಬೃಹತ್ ಅಡಗುತಾಣಗಳನ್ನು ನಾಶಪಡಿಸಿದ್ದೀರಿ, 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ್ದೀರಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿದ್ದೀರಿ. ಭಯೋತ್ಪಾದನೆಯ ಸೂತ್ರದಾರರು ಈಗ ಭಾರತದ ಕಡೆಗೆ ಚಿತ್ತ ನೆಟ್ಟಿರುವುದರಿಂದ ಒಂದೇ ಒಂದು ಫಲಿತಾಂಶ ಹೊರಬೀಳುತ್ತದೆ ಎಂದು ಅರ್ಥ ಮಾಡಿಕೊಂಡಿದ್ದಾರೆ - ವಿನಾಶ! ಭಾರತದಲ್ಲಿ ಮುಗ್ಧ ಜನರ ರಕ್ತವನ್ನು ಚೆಲ್ಲುವುದರಿಂದ ಒಂದೇ ಒಂದು ಫಲಿತಾಂಶ ಇರುತ್ತದೆ - ವಿನಾಶ ಮತ್ತು ದೊಡ್ಡ ವಿನಾಶ! ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಈ ಭಯೋತ್ಪಾದಕರು ಅವಲಂಬಿಸಿರುವ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿವೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರು ಕುಳಿತು ಶಾಂತಿಯಿಂದ ಉಸಿರಾಡಲು ಅಂತಹ ಸ್ಥಳವಿಲ್ಲ ಎಂದು ನೀವು ಪಾಕಿಸ್ತಾನಿ ಸೈನ್ಯಕ್ಕೆ ಹೇಳಿದ್ದೀರಿ. ನಾವು ಅವರ ನೆಲೆಗಳಿಗೆ ಪ್ರವೇಶಿಸಿ ಅವರನ್ನು ಕೊಲ್ಲುತ್ತೇವೆ ಮತ್ತು ಅವರಿಗೆ ತಪ್ಪಿಸಿಕೊಳ್ಳಲು ಒಂದು ಅವಕಾಶವನ್ನೂ ನೀಡುವುದಿಲ್ಲ. ನಮ್ಮ ಡ್ರೋನ್‌ಗಳು, ನಮ್ಮ ಕ್ಷಿಪಣಿಗಳು, ಪಾಕಿಸ್ತಾನವು ಅವರ ಬಗ್ಗೆ ಯೋಚಿಸುತ್ತಾ ಹಲವು ದಿನಗಳವರೆಗೆ ನಿದ್ರೆ ಮಾಡುವುದಿಲ್ಲ. कौशल दि खलाया चाल म, उड़ गया भयानक भाल म। नि र्भी क गया वह ढाल म, सरपट दौड़ा करवाल म।. ಈ ಸಾಲುಗಳನ್ನು ಮಹಾರಾಣಾ ಪ್ರತಾಪ್‌ನ ಪ್ರಸಿದ್ಧ ಕುದುರೆ ಚೇತಕ್ ಮೇಲೆ ಬರೆಯಲಾಗಿದೆ, ಆದರೆ ಈ ಸಾಲುಗಳು ಇಂದಿನ ಆಧುನಿಕ ಭಾರತೀಯ ಶಸ್ತ್ರಾಸ್ತ್ರಗಳಿಗೂ ಹೊಂದಿಕೆಯಾಗುತ್ತವೆ.

ನನ್ನ ಧೈರ್ಯಶಾಲಿ ಸ್ನೇಹಿತರೆ,

ಆಪರೇಷನ್ ಸಿಂದೂರ್ ಮೂಲಕ, ನೀವು ದೇಶದ ಆತ್ಮವಿಶ್ವಾಸ ಹೆಚ್ಚಿಸಿದ್ದೀರಿ, ದೇಶವನ್ನು ಏಕತೆಯ ದಾರದಲ್ಲಿ ಕಟ್ಟಿಹಾಕಿದ್ದೀರಿ ಮತ್ತು ಭಾರತದ ಗಡಿಗಳನ್ನು ರಕ್ಷಿಸಿದ್ದೀರಿ, ಭಾರತದ ಸ್ವಾಭಿಮಾನಕ್ಕೆ ಹೊಸ ಎತ್ತರ ನೀಡಿದ್ದೀರಿ.

ಸ್ನೇಹಿತರೆ,

ನೀವು ಹಿಂದೆಂದೂ ಕಾಣದ, ಊಹಿಸಲಾಗದ, ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ. ನಮ್ಮ ವಾಯುಪಡೆಯು ಪಾಕಿಸ್ತಾನದ ಆಳದಲ್ಲಿರುವ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿತು, ಆಧುನಿಕ ತಂತ್ರಜ್ಞಾನ ಹೊಂದಿದ ವೃತ್ತಿಪರ ಪಡೆ ಮಾತ್ರ ಇದನ್ನು ಮಾಡಬಹುದು, ಗಡಿಯುದ್ದಕ್ಕೂ ಗುರಿಗಳನ್ನು ಭೇದಿಸಿ, ಕೇವಲ 20-25 ನಿಮಿಷಗಳಲ್ಲಿ ನಿಖರವಾದ ಗುರಿಗಳನ್ನು ಹೊಡೆದಿದ್ದೀರಿ. ನಿಮ್ಮ ವೇಗ ಮತ್ತು ನಿಖರತೆಯು ಎಷ್ಟರ ಮಟ್ಟಿಗೆ ಇತ್ತು ಎಂದರೆ ಶತ್ರುಗಳು ದಿಗ್ಭ್ರಮೆಗೊಂಡರು. ಅವರ ಹೃದಯ ಯಾವಾಗ ಛಿದ್ರವಾಯಿತು ಎಂಬುದು ಅವರಿಗೇ ತಿಳಿದಿರಲಿಲ್ಲ.

ಸ್ನೇಹಿತರೆ,

ನಮ್ಮ ಗುರಿ ಪಾಕಿಸ್ತಾನದೊಳಗಿನ ಭಯೋತ್ಪಾದಕ ಪ್ರಧಾನ ಕಚೇರಿಯನ್ನು ಹೊಡೆಯುವುದು, ಭಯೋತ್ಪಾದಕರನ್ನು ಹೊಡೆಯುವುದು. ಆದರೆ ಪಾಕಿಸ್ತಾನವು ತನ್ನ ಪ್ರಯಾಣಿಕ ವಿಮಾನಗಳನ್ನು ಬಳಸಿಕೊಂಡು ರೂಪಿಸಿದ ಪಿತೂರಿ, ನಾಗರಿಕ ವಿಮಾನಗಳು ಗೋಚರಿಸುವ ಆ ಕ್ಷಣ ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ನಾನು ಊಹಿಸಬಲ್ಲೆ. ಆದರೆ ನೀವು ಬಹಳ ಎಚ್ಚರಿಕೆಯಿಂದ, ನಾಗರಿಕ ವಿಮಾನಗಳಿಗೆ ಹಾನಿಯಾಗದಂತೆ ಗುರಿಗಳನ್ನು ನಾಶಪಡಿಸಿದ್ದೀರಿ ಎಂಬ ಹೆಮ್ಮೆ ನನಗಿದೆ. ನೀವು ಅದಕ್ಕೆ ಸೂಕ್ತ ಉತ್ತರವನ್ನು ಸಹ ನೀಡಿದ್ದೀರಿ. ನೀವೆಲ್ಲರೂ ನಿಮ್ಮ ಗುರಿಗಳನ್ನು ಸಾಧಿಸಿದ್ದೀರಿ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಡಗುತಾಣಗಳು ಮತ್ತು ಅವರ ವಾಯುನೆಲೆಗಳು ನಾಶವಾದವು ಮಾತ್ರವಲ್ಲ, ಅವರ ದುಷ್ಟ ಉದ್ದೇಶಗಳು ಮತ್ತು ಅವರ ಧೈರ್ಯ ಎರಡನ್ನೂ ಸೋಲಿಸಲಾಗಿದೆ.

ಸ್ನೇಹಿತರೆ,

ಆಪರೇಷನ್ ಸಿಂದೂರ್ ನಿಂದ ನಿರಾಶೆಗೊಂಡ ಶತ್ರುಗಳು, ಈ ವಾಯುನೆಲೆಯ ಮೇಲೆ ಮತ್ತು ನಮ್ಮ ಅನೇಕ ವಾಯುನೆಲೆಗಳ ಮೇಲೆ ದಾಳಿ ಮಾಡಲು ಹಲವಾರು ಬಾರಿ ಪ್ರಯತ್ನಿಸಿದರು. ಅದು ನಮ್ಮನ್ನು ಮತ್ತೆ ಮತ್ತೆ ಗುರಿಯಾಗಿಸಿತು, ಆದರೆ ಪಾಕಿಸ್ತಾನದ ದುಷ್ಟ ಉದ್ದೇಶಗಳು ಪ್ರತಿ ಬಾರಿಯೂ ವಿಫಲವಾದವು. ಪಾಕಿಸ್ತಾನದ ಡ್ರೋನ್‌ಗಳು, ಅದರ ಯುಎವಿಗಳು, ಪಾಕಿಸ್ತಾನದ ವಿಮಾನಗಳು ಮತ್ತು ಅದರ ಕ್ಷಿಪಣಿಗಳು, ಎಲ್ಲವೂ ನಮ್ಮ ಬಲವಾದ ವಾಯು ರಕ್ಷಣೆಯ ಮುಂದೆ ನಾಶವಾದವು. ದೇಶದ ಎಲ್ಲಾ ವಾಯುನೆಲೆಗಳೊಂದಿಗೆ ಸಂಬಂಧಿಸಿದ ನಾಯಕತ್ವವನ್ನು, ಭಾರತೀಯ ವಾಯುಪಡೆಯ ಪ್ರತಿಯೊಬ್ಬ ವಾಯುಪಡೆ ಯೋಧರನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ, ನೀವು ನಿಜವಾಗಿಯೂ ಉತ್ತಮ ಕೆಲಸ ಮಾಡಿದ್ದೀರಿ.

ಸ್ನೇಹಿತರೆ,

ಭಯೋತ್ಪಾದನೆಯ ವಿರುದ್ಧ ಭಾರತದ ಲಕ್ಷ್ಮಣ ರೇಖೆ ಈಗ ತುಂಬಾ ಸ್ಪಷ್ಟವಾಗಿದೆ. ಈಗ ಮತ್ತೆ ಯಾವುದೇ ಭಯೋತ್ಪಾದಕ ದಾಳಿ ನಡೆದರೆ, ಭಾರತವು ತಕ್ಕ ಉತ್ತರ ನೀಡುತ್ತದೆ. ಸರ್ಜಿಕಲ್ ದಾಳಿ ಸಮಯದಲ್ಲಿ, ವಾಯುದಾಳಿಯ ಸಮಯದಲ್ಲಿ ನಾವು ಇದನ್ನು ನೋಡಿದ್ದೇವೆ, ಈಗ ಆಪರೇಷನ್ ಸಿಂದೂರ್ ಭಾರತದ ಹೊಸ ಸಾಮಾನ್ಯ ವಿಷಯವಾಗಿದೆ. ನಾನು ನಿನ್ನೆ ಹೇಳಿದಂತೆ, ಭಾರತವು ಈಗ 3 ತತ್ವಗಳನ್ನು ಅಳವಡಿಸಿಕೊಂಡಿದೆ, ಮೊದಲನೆಯದಾಗಿ - ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ, ನಾವು ನಮ್ಮದೇ ಆದ ರೀತಿಯಲ್ಲಿ, ನಮ್ಮದೇ ಆದ ನಿಯಮಗಳ ಮೇಲೆ, ನಮ್ಮದೇ ಸಮಯದಲ್ಲಿ ಉತ್ತರಿಸುತ್ತೇವೆ. ಎರಡನೆಯದಾಗಿ, ಭಾರತ ಯಾವುದೇ ಪರಮಾಣು ಬ್ಲ್ಯಾಕ್‌ಮೇಲ್ ಸಹಿಸುವುದಿಲ್ಲ. ಮೂರನೆಯದಾಗಿ, ಭಯೋತ್ಪಾದನೆ ಪೋಷಿಸುವ ಸರ್ಕಾರ ಮತ್ತು ಭಯೋತ್ಪಾದನೆಯ ಸೂತ್ರದಾರರನ್ನು ನಾವು ಪ್ರತ್ಯೇಕವಾಗಿ ನೋಡುವುದಿಲ್ಲ. ಭಾರತದ ಈ ಹೊಸ ರೂಪ, ಈ ಹೊಸ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಜಗತ್ತು ಸಹ ಮುಂದುವರಿಯುತ್ತಿದೆ.

ಸ್ನೇಹಿತರೆ,

ಆಪರೇಷನ್ ಸಿಂದೂರ್‌ನ ಪ್ರತಿಯೊಂದು ಕ್ಷಣವೂ ಭಾರತೀಯ ಸಶಸ್ತ್ರಪಡೆಗಳ ಬಲಕ್ಕೆ ಸಾಕ್ಷಿಯಾಗಿದೆ. ಈ ಸಮಯದಲ್ಲಿ, ನಮ್ಮ ಪಡೆಗಳ ಸಮನ್ವಯವು ಅತ್ಯುತ್ತಮವಾಗಿತ್ತು ಎಂದು ನಾನು ನಿಜವಾಗಿಯೂ ಹೇಳುತ್ತೇನೆ. ಅದು ಭೂಸೇನೆ, ನೌಕಾಪಡೆ ಅಥವಾ ವಾಯುಪಡೆಯಾಗಿರಲಿ, ಎಲ್ಲರ ಸಮನ್ವಯವು ಅಗಾಧವಾಗಿತ್ತು. ನೌಕಾಪಡೆಯು ಸಮುದ್ರದ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು. ಭೂಸೇನೆಯು ಗಡಿಯನ್ನು ಬಲಪಡಿಸಿತು. ಮತ್ತು ಭಾರತೀಯ ವಾಯುಪಡೆಯು ದಾಳಿ ಮಾಡಿ, ರಕ್ಷಿಸಿತು. ಬಿಎಸ್‌ಎಫ್ ಮತ್ತು ಇತರೆ ಪಡೆಗಳು ಸಹ ಅದ್ಭುತ ಸಾಮರ್ಥ್ಯಗಳನ್ನು ಪ್ರದರ್ಶಿಸಿವೆ. ಸಂಯೋಜಿತ ವಾಯು ಮತ್ತು ಭೂ ಯುದ್ಧ ವ್ಯವಸ್ಥೆಗಳು ಉತ್ತಮ ಕೆಲಸ ಮಾಡಿವೆ. ಏಕತೆ ಎಂದರೆ ಇದೇ, ಅದು ಈಗ ಭಾರತೀಯ ಪಡೆಗಳ ಬಲದ ಬಲವಾದ ಗುರುತಾಗಿದೆ.

ಸ್ನೇಹಿತರೆ,

ಆಪರೇಷನ್ ಸಿಂದೂರ್‌ನಲ್ಲಿ, ಮಾನವಶಕ್ತಿಯ ಜತೆಗೆ, ಯಂತ್ರೋಪರಣಗಳ  ಸಮನ್ವಯವೂ ಅದ್ಭುತವಾಗಿತ್ತು. ಅನೇಕ ಯುದ್ಧಗಳನ್ನು ಕಂಡಿರುವ ಭಾರತದ ಸಾಂಪ್ರದಾಯಿಕ ವಾಯು ರಕ್ಷಣಾ ವ್ಯವಸ್ಥೆಗಳಾಗಲಿ ಅಥವಾ ಆಕಾಶ್‌ನಂತಹ ನಮ್ಮ ಮೇಡ್ ಇನ್ ಇಂಡಿಯಾ ವೇದಿಕೆಗಳಾಗಲಿ, ಎಸ್-400ನಂತಹ ಆಧುನಿಕ ಮತ್ತು ಬಲವಾದ ರಕ್ಷಣಾ ವ್ಯವಸ್ಥೆಗಳು ಅವುಗಳಿಗೆ ಅಭೂತಪೂರ್ವ ಶಕ್ತಿ ನೀಡಿವೆ. ಬಲವಾದ ಭದ್ರತಾ ಗುರಾಣಿ ಭಾರತದ ಗುರುತಾಗಿದೆ. ಪಾಕಿಸ್ತಾನದ ಅನೇಕ ಪ್ರಯತ್ನಗಳ ಹೊರತಾಗಿಯೂ, ನಮ್ಮ ವಾಯುನೆಲೆಗಳು ಅಥವಾ ನಮ್ಮ ಇತರೆ ರಕ್ಷಣಾ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ. ಇದರ ಸಂಪೂರ್ಣ ಶ್ರೇಯಸ್ಸು ನಿಮ್ಮೆಲ್ಲರಿಗೂ ಸಲ್ಲುತ್ತದೆ, ನಾನು ನಿಮ್ಮೆಲ್ಲರ ಬಗ್ಗೆ ಹೆಮ್ಮೆಪಡುತ್ತೇನೆ, ಗಡಿಯಲ್ಲಿ ನಿಯೋಜಿಸಲಾದ ಪ್ರತಿಯೊಬ್ಬ ಸೈನಿಕ, ಈ ಕಾರ್ಯಾಚರಣೆಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಇದರ ಶ್ರೇಯಸ್ಸಿಗೆ ಅರ್ಹರಾಗಿದ್ದಾರೆ.

ಸ್ನೇಹಿತರೆ,

ಇಂದು ಪಾಕಿಸ್ತಾನವು ಸ್ಪರ್ಧಿಸಲು ಸಾಧ್ಯವಾಗದ ಹೊಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಕಳೆದ ದಶಕದಲ್ಲಿ, ವಾಯುಪಡೆ ಸೇರಿದಂತೆ ನಮ್ಮ ಎಲ್ಲಾ ಪಡೆಗಳು ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ಪಡೆದಿವೆ. ಆದರೆ ಹೊಸ ತಂತ್ರಜ್ಞಾನದೊಂದಿಗೆ, ಸವಾಲುಗಳು ಅಷ್ಟೇ ದೊಡ್ಡದಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸಂಕೀರ್ಣ ಮತ್ತು ಅತ್ಯಾಧುನಿಕ ವ್ಯವಸ್ಥೆಗಳನ್ನು ನಿರ್ವಹಿಸುವುದು, ಅವುಗಳನ್ನು ದಕ್ಷತೆಯಿಂದ ನಿರ್ವಹಿಸುವುದು ಉತ್ತಮ ಕೌಶಲ್ಯ. ತಂತ್ರಜ್ಞಾನವನ್ನು ಕಾರ್ಯತಂತ್ರಗಳೊಂದಿಗೆ ಸಂಪರ್ಕಿಸುವ ಮೂಲಕ ನೀವು ತೋರಿಸಿದ್ದೀರಿ. ನೀವು ಈ ಹೋರಾಟದಲ್ಲಿ, ವಿಶ್ವದಲ್ಲೇ ಅತ್ಯುತ್ತಮರು ಎಂದು ಸಾಬೀತುಪಡಿಸಿದ್ದೀರಿ. ಭಾರತೀಯ ವಾಯುಪಡೆಯು ಈಗ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲದೆ, ದತ್ತಾಂಶ ಮತ್ತು ಡ್ರೋನ್‌ಗಳಿಂದಲೂ ಶತ್ರುಗಳನ್ನು ಸೋಲಿಸುವಲ್ಲಿ ಪರಿಣಿತರಾಗಿದ್ದೀರಿ.

ಸ್ನೇಹಿತರೆ,

ಪಾಕಿಸ್ತಾನದ ಕೋರಿಕೆಯ ಮೇರೆಗೆ ಭಾರತ ತನ್ನ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಪಾಕಿಸ್ತಾನ ಮತ್ತೆ ಭಯೋತ್ಪಾದಕ ಚಟುವಟಿಕೆ ಅಥವಾ ಮಿಲಿಟರಿ ತಾಕತ್ತು ತೋರಿಸಿದರೆ, ನಾವು ಅದಕ್ಕೆ ತಕ್ಕ ಉತ್ತರ  ನೀಡುತ್ತೇವೆ. ನಾವು ನಮ್ಮದೇ ಆದ ರೀತಿಯಲ್ಲಿ, ಈ ಉತ್ತರ ನೀಡುತ್ತೇವೆ. ಈ ನಿರ್ಧಾರದ ಹಿಂದಿನ ಅಡಿಪಾಯ, ಅದರ ಹಿಂದೆ ಅಡಗಿರುವ ನಂಬಿಕೆ, ನಿಮ್ಮೆಲ್ಲರ ತಾಳ್ಮೆ, ಶೌರ್ಯ, ಧೈರ್ಯ ಮತ್ತು ಜಾಗರೂಕತೆಯಾಗಿದೆ. ನೀವು ಈ ಧೈರ್ಯ, ಈ ಉತ್ಸಾಹ, ಈ ಮನೋಭಾವವನ್ನು ಕಾಪಾಡಿಕೊಳ್ಳಬೇಕು. ನಾವು ನಿರಂತರವಾಗಿ ಎಚ್ಚರವಾಗಿರಬೇಕು, ನಾವು ಸಿದ್ಧರಾಗಿರಬೇಕು. ಇದು ಹೊಸ ಭಾರತ ಎಂದು ನಾವು ಶತ್ರುಗಳಿಗೆ ನೆನಪಿಸುತ್ತಲೇ ಇರಬೇಕು. ಈ ನವ ಭಾರತವು ಶಾಂತಿಯನ್ನು ಬಯಸುತ್ತದೆ, ಆದರೆ, ಮಾನವತೆಯ ಮೇಲೆ ದಾಳಿಯಾದರೆ, ಯುದ್ಧರಂಗದಲ್ಲಿ ಶತ್ರುವನ್ನು ಹೇಗೆ ನಾಶ ಮಾಡಬೇಕೆಂದು ಈ ಭಾರತಕ್ಕೆ ಚೆನ್ನಾಗಿ ತಿಳಿದಿದೆ. ಈ ದೃಢಸಂಕಲ್ಪದೊಂದಿಗೆ, ಮತ್ತೊಮ್ಮೆ ಹೇಳೋಣ

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ವಂದೇ ಮಾತರಂ. ವಂದೇ ಮಾತರಂ.

ವಂದೇ ಮಾತರಂ. ವಂದೇ ಮಾತರಂ.

ವಂದೇ ಮಾತರಂ. ವಂದೇ ಮಾತರಂ.

ವಂದೇ ಮಾತರಂ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 


(Release ID: 2129034)